ಕುಣಿದು ಸುಸ್ತಾಗಿ ಮಲಗಿದೆ,ಕೊಳೆಬಟ್ಟೆಯನ್ನೂ ತೆಗೆಯದೇ.
ಮರುದಿನ ಬೆಳಿಗ್ಗೆ ಎದ್ದಾಗ ಗಾಬರಿ,
ಎಷ್ಟು ಮಾಡಿದರೂ ನನ್ನ ಎಡಗಣ್ಣೇ ತೆಗೆಯದೇ!!!!
ಬರಬರುತ್ತಾ
"ಕೆಂಪಾದವೋ ಎಲ್ಲ ಕೆಂಪಾದವೋ"
ತೆಗೆದುಕೊಂಡೆ ಕಪ್ಪು ಕನ್ನಡಕ,
ಅಬ್ಬಾ ಆಗ ಅದೇನು ಸಮಾಧಾನವೋ!!!
ಕಡಿಮೆಯಾಗಿದೆ ಇಂದು,
ಅನಿಸುತಿದೆ ಈಗ ,
ಇನ್ನು ಅದರ ಹಂಗ್ಯಾಕೆ ?
ಮೂರು-ನಾಕು ದಿನ ನನ್ನ ಕೆಂಗಣ್ಣಿನಿಂದ
ಅಡಗಿಸಿಟ್ಟ ಅದನೇ ಮರೆಯುವೆ,
ಹೇ ಮನಸೇ ನೀ ಹಿಂಗ್ಯಾಕೆ?
2 comments:
:-)
ಕಣ್ಣುಬೇನೆಯನ್ನು ಕಾವ್ಯ ಪ್ರಹಸನದ ಮೂಲಕ ಹೇಳಿದಿರಿ, ಚೆನ್ನಾಗಿದೆ!
Post a Comment