Sunday, November 21, 2010

ಎರಡು ನೊಟ್ ಬುಕ್ಕು ಹಿಡಿದು, ಜೀನ್ಸ್ ಪ್ಯಾಂಟು ಹಾಕಿ ,ಕ್ಯಾಂಟೀನ್ ನಲ್ಲ್ಲಿ ಕೂತವರ ಮಾತು!!!!

ಮಾಡಬೇಕೇನೋ ಹೊಸದು
ಎಂಬ ಆಸೆ ಹೊತ್ತಿಹ ಬಿಸಿ ದೇಹ
ಪಡೆಯಬೇಕು ಬೇಕಾಗಿದೆಲ್ಲವ
ಎಂದು ಹಪಹಪಿಸುವ ಹಸಿದಾಹ

ಬಣ್ಣ ಬಣ್ಣದ ಭಾವನೆಗಳೇ
ನಿಜವೆಂದು ತಿಳಿದ ,ಕುರುಡು ಮೋಹ
ಇದೆಲ್ಲದರ ಮಧ್ಯದಲ್ಲಿ ರಜೆ ಬಂದರೆ
ಮಸ್ತ್ ಮಜಾ, ಅದೇನು ಸುಖ ಆಹಾ!!

ಇದೇ ಕಣ್ರೀ ನಮ್ ಸ್ಟುಡೆಂಟ್ ಲೈಫು
ಕಳ್ದೋದ್ಮೇಲ್ ಟಾಪು,ಇದ್ದಾಗ್ ತೋಪು

Saturday, November 13, 2010

ಅರಾಮಾ? ಅಯ್ಯೋ ರಾಮಾ!!!! !ಇಲ್ಲೂನಾ?

ನಾ ಹೋದೆ ಅಂದು ವೈದ್ಯರಲ್ಲಿಗೆ
ಸ್ವೆಟರ್ ತೋಪಿ ಹಾಕಿ,
ಇಲ್ಲ ಅರಾಮು ಎಂದು

ಅಲ್ಲೇ ಸ್ವೆಟರ್ ಹಾಕಿ ಕುಳಿತ
ಗೆಳೆಯ ಕೇಳಿದ
ಅರಾಮಾ ಎಂದು!!!!!

Tuesday, November 2, 2010

ಕಣ್ಣು ಬೇನೆ ಕಳಿದ ಮೇಲೆ , ಕನ್ನಡಕದ ಹಂಗ್ಯಾಕೆ?

ರಾತ್ರಿ ಕಾಲೇಜು ಛಾವಣಿ ಮೇಲೆ ಹತ್ತಿ,
ಕುಣಿದು ಸುಸ್ತಾಗಿ ಮಲಗಿದೆ,ಕೊಳೆಬಟ್ಟೆಯನ್ನೂ ತೆಗೆಯದೇ.
ಮರುದಿನ ಬೆಳಿಗ್ಗೆ ಎದ್ದಾಗ ಗಾಬರಿ,
ಎಷ್ಟು ಮಾಡಿದರೂ ನನ್ನ ಎಡಗಣ್ಣೇ ತೆಗೆಯದೇ!!!!

ಬರಬರುತ್ತಾ
"ಕೆಂಪಾದವೋ ಎಲ್ಲ ಕೆಂಪಾದವೋ"
ತೆಗೆದುಕೊಂಡೆ ಕಪ್ಪು ಕನ್ನಡಕ,
ಅಬ್ಬಾ ಆಗ ಅದೇನು ಸಮಾಧಾನವೋ!!!

ಕಡಿಮೆಯಾಗಿದೆ ಇಂದು,
ಅನಿಸುತಿದೆ ಈಗ ,
ಇನ್ನು ಅದರ ಹಂಗ್ಯಾಕೆ ?

ಮೂರು-ನಾಕು ದಿನ ನನ್ನ ಕೆಂಗಣ್ಣಿನಿಂದ
ಅಡಗಿಸಿಟ್ಟ ಅದನೇ ಮರೆಯುವೆ,
ಹೇ ಮನಸೇ ನೀ ಹಿಂಗ್ಯಾಕೆ?

Saturday, October 9, 2010

ನಮ್ಮಲ್ಲೇ ಒಮ್ಮೆ .....

ನಮಗಾಗಿ ನಾವೇ ,
ಬಾರರು ಯಾರೂ ಎಂದೂ
ಅದಕೆ ಇರಬೇಕು ಹೇಳುತಿರುವುದು
ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂದು

ಬರೇ ನಮ್ಮ ಕಾಲ ಮೇಲೆ
ನಿಂತರಾಗದು ನಾವೂ ಎಲ್ಲರಂತೆ,
ಮಾಡಬೇಕೇನೊ ಹೊಸದು
ಜಗವೆಲ್ಲ ನಮ್ಮತ್ತ ನೋಡುವಂತೆ

Wednesday, October 6, 2010

ರಾಜಕೀಯಕ್ಕೂ ಡಿಗ್ರಿ ಬೇಕಲ್ಲವೇ ?

"ರಾಜಕೀಯ "..ಇಂದಿನ ೮೬೪೦೦ ಸೆಕೆಂಡುಗಳಲ್ಲಿ ಒಮ್ಮೆಯಾದರೂ ನಮ್ಮ ಬಾಯಿಂದ ಬರದಿದ್ದರೆ ಅದರ (ದು)ಸ್ಥಿತಿಗೇ ಅವಮಾನ.
ವೋಟಾಕಲು ಬಾರದ ಕೆರ್ಯನಿಂದ ಹಿಡಿದು ,ಎಲ್ಲ ಇದ್ದು ಸುಮ್ಮನೇ ವೋಟಾಕಲು ಟೈಮಿಲ್ಲದ ಮಿಸ್ಟರ್ ಕರಿಯಪ್ಪ ರವರೆಗೂ ,ಸುಮ್ಮನೇ ಮೊದಲು ಕಂಡಿದ್ದನು ಒತ್ತಿ ಬರುವ ಮಂಜಿಯಿಂದ ಹಿಡಿದು ,ಏನೂ ಕೆಲಸವಿಲ್ಲದೇ ಸುಮ್ಮನೇ ಬ್ಯುಸಿಯಾಗಿರುವ ಮಿಸ್ಸೆಸ್ ಮಂಜುಳಾತನಕವೂ ಎಲ್ಲರಿಗೂ ಬೇಕು ರಾಜಕೀಯ .........ಮದುವೆ ಸಮಾರಂಭಗಳಲ್ಲಿ ,ಸಂಜೆ ಗಲ್ಲಿ -ಕಟ್ಟೆಗಳಲ್ಲಿ ,ಈಗೀಗ ಟೈ ಹಾಕಿ ಶುಗರಿದ್ದರೂ ,ಹೆಂಡತಿ ಇಲ್ಲವೆಂದು ದಿನಕ್ಕೈದು ಬಾರಿ ಕಾಫಿ-ಟೀ ಕುಡಿಯುವಲ್ಲಿ , ಸುಮ್ಮನೇ ಸಿಕ್ಕಿ ಏನೂ ಮಾತಾಡಲು ಸಿಗದಿದ್ದಾಗ ಮಾತಾಡಲೆಂದು ,ಪಕ್ಕದ ಮನೆಯವಳ ಕೆಟ್ಟಬುದ್ದಿಯನ್ನು ಉದಾಹರಿಸಲೆಂದು ಹೀಗೆ ಬೇಡವಾದದಲ್ಲಿ .ಒಮ್ಮೊಮ್ಮೆ ಅಪರೂಪಕ್ಕೆ ಬೇಕಾದಲ್ಲೂ ಉಪಯೋಗವಾಗುತ್ತಿದೆ " ರಾಜಕೀಯ ".
ಇನ್ನು ಜಾಸ್ತಿ ಯಾರೂ ಓದದ ಪುಸ್ತಕದ ಭಾಷೆಯಲ್ಲಿ ಹೇಳುವುದಾದರೆ "ರಾಜಕೀಯವು ನಮ್ಮನ್ನು ನಾವೇ ನಿರ್ಭಂದಿಸಿಕೊಳ್ಳಲು ,ಮಾನವತೆಯನ್ನು ಹರಡಿ ವಿಶ್ವಶಾಂತಿಯನ್ನು ಕಾಪಾಡಲು ಹುಟ್ಟಿಕೊಂಡ ವ್ಯವಸ್ತೆ "(ಇದ್ಯಾರೂ ಮಹಾನುಭಾವರು ಹೇಳಿದ ಮುತ್ತಲ್ಲ ,ಇದೇತರ ಹಿಂದೆಯಾರಾದರೂ ಹೇಳಿದ್ದರೆ ನಿಮ್ಮವ ಜವಾಬ್ದಾರನಲ್ಲ!!!! ) ಇಂತಹ ಪವಿತ್ರವಾದ (?) ರಾಜಕೀಯ ವ್ಯವಸ್ಥೆ ಇಂದು ಎಲ್ಲಿಗೆ ಬಂದು ನಿಂತಿದೆ ? ಅಲ್ಲಲ್ಲ ....ಎಲ್ಲಿಗೆ ಬಂದು ಮಲಗಿದೆ?
ಇತ್ತ ನಮ್ಮ ಹೆಮ್ಮೆಯ ಕರುನಾಡಲ್ಲಿ ದಿನಕ್ಕೊಂದು ಗವರ್ನಮೆಂಟು ,ದಿನವಿಡೀ ಜಗಳವಾಗುವ ಪಾರ್ಲಿಮೆಂಟು ,ಇದರ ಮಧ್ಯೆ ಏನೇನೋ ಕೆಲಸಕ್ಕೆ ಬಾರದ ಕಮೆಂಟು ,ಒಳಗೊಂದು ಹೊರಗೊಂದು ಕಮಿಟ್ಮೆಂಟು !!!!!!ಇದರ ಮಧ್ಯೆ ಆಗಾಗ ಹಗರಣಗಳ ನಂಟು .ಒಮ್ಮೊಮ್ಮೆ ತಾವು ಮಾಡಿದ್ದಕ್ಕೆಲ್ಲ ಕ್ಷಮೆ ಕೇಳಿ ಕೈ ತೊಳೆದುಕೊಳ್ಳುವುದೂ ಉಂಟು .

ಹೇಳಿ ಒಮ್ಮೆ ಸರಕಾರ ,ಆಡಳಿತಕ್ಕೂ ನಮಗೂ ಇಂದು ಏನಾದರೂ ಸಂಬಂಧ ಉಳಿದಿದೆಯೇ ?ಚುನಾವಣೆಯ ಹೊತ್ತನ್ನು ಬಿಟ್ಟು .
ಅಯ್ಯೋ ಈಗಂತೂ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ,ಯಾವುದೋ ತಪ್ಪಿಗೆ ಚುನಾವಣೆಗಳೂ ಹ್ಯಾಪಿ ಹಾಲಿಡೆಯ್ಸ್ ಗಳಾಗುತ್ತಿವೆ!!!!
ಅವರ ಪಾಡಿಗೆ ಅವರು ಅವರಲ್ಲೇ ಬೈದಾಡಿಕೊಳ್ಳುತ್ತ,ಬೆಳೆಯುತ್ತಿದ್ದರೆ ,ನಾವು ಅವರನ್ನೆಲ್ಲ ಒಮ್ಮೆಲೇ ಹಳಿಯುತ್ತ ಕಾಲ ಕಳೆಯುತ್ತಿದ್ದೇವೆ . ಅಲ್ಲವೇ?


ಸರಿ ಇದಕ್ಕೆಲ್ಲ ಕಾರಣಗಳನ್ನು ಬಿಟ್ಟು ,ಮುಂದೇನು ಮಾಡೋಣ ಅಂತ ನೋಡೋಣ (ನೋಡ್ತಾನೆ ಇದೀವಿ ಅಂತಿರಾ?).
ಹೀಗೆ ತರಕಾರಿ ಮಾರುಕಟ್ಟೆಗೆ ಹೋಗಿ ..ಅಲ್ಲಿ ನಿಮಗೆ ಎರಡು ನಿಂಬೆ ಹಣ್ಣಿನ ರಾಶಿ ಸಿಗುತ್ತದೆ ..ಒಂದು ದೊಡ್ದರಾಶಿ .ಇನ್ನೊಂದು ಮಾಧ್ಯಮದ್ದು . ದೊಡ್ದರಾಶಿಯಲ್ಲಿ ಎಲ್ಲ ತರದ ಹಣ್ಣಿದೆ.ಇನ್ನೊಂದರಲ್ಲಿ ಅರೆ ಮಾಗಿದ ಒಂದೇ ತರದ ಹಣ್ಣಿದೆ .ಯಾವುದನ್ನು ಆಯ್ದುಕೊಳ್ಳುವಿರಿ? ಎರಡನೆಯದನ್ನೇ ತಾನೆ ?ಏಕೆಂದರೆ ಅದನ್ನು ವರ್ಗೀಕರಿಸಲಾಗಿದೆ .ಒಂದನೇ ರಾಶಿಯಲ್ಲಿ ಎಷ್ಟೇ ಒಳ್ಳೆಯ ಹಣ್ಣಿದ್ದರೂ ಅದನ್ನು ನೀವು ಕಾಣಲಾರಿರಿ ಅಲ್ಲವೇ ?
ನನಗನಿಸಿದಂತೆ ಇಲ್ಲೂ ಹಾಗೆ ..ಎಸ್ಟೋ ಜನ ನೇತಾರರು ಕೊಳಚೆಯಲ್ಲಿ ಸುಗಂಧವನ್ನು ಸೇರಿಸಿದನ್ತಾಗಿದ್ದಾರೆ .ಎಷ್ಟು ಒಳ್ಳೆಯ ಗುಣಗಳಿದ್ದರೂ,ಸಾಮರ್ಥ್ಯಗಳಿದ್ದರೂ ಅವು ಕಾಣವು .....ಪರಿಹಾರ ?
ಇದೇ ವರ್ಗೀಕರಣ ...

ವಿಜ್ಞಾನದ ಮಾಸ್ತರಿಗೆ ಸಮಾಜ ಪತ್ರಿಕೆ ತೆಗೆಯಲು ಹೇಳಿದಂತೆ (ಮೆಸ್ಸೇಜು ನೆನಪಾಯ್ತ ? ),ಕುಮ್ಬಾರನಿಗೆ ಗುಂಬಜ ಕಟ್ಟಲು ಹೇಳಿದಂತೆ ಇದೆ ನಮ್ಮ ಸ್ಥಿತಿ .ಅವನ ಬಗ್ಗೆಯೇ ಅವನಿಗೆ ಗೊತ್ತಿಲ್ಲದ ವ್ಯಕ್ತಿಯ ಹತ್ತಿರ ಹೋಗಿ ,ಇನ್ನೊಬ್ಬ ಹೇಗೆ ಎಂದರೆ ಆತ ತಾನೇ ಏನೆಂದು ಹೇಳಿಯಾನು ? ಸಾಫ್ಟ್ ವೇರ್ ಇಂಜಿನಿಯರನ ಬಳಿ ಹೋಗಿ ಈ ಸಲ ಯಾವ ಬತ್ತ ಬಿತ್ತಲಿ ಅಂದಂತೆ ಆಯ್ತು ನಮ್ಮ ಕತೆ...ನನ್ನ ಮಾತಿನ ಉದ್ದೇಶ ಇಷ್ಟೇ .ನಮ್ಮನ್ನು ಆಳುವವರು ನಮಗಿಂತ ಉತ್ತಮರಾಗಿರಬೇಕು,ಎಲ್ಲದರಲ್ಲಿ ಅಲ್ಲದಿದ್ದರೂ ಆಡಳಿತದಲ್ಲದಾರೂ ಆತ ಒಂದು ಮಟ್ಟವನ್ನು ಹೊಂದಿರಬೇಕು.ಅವರಿಗೆ ನಾವು ಏನು ಮಾಡಬೇಕೆಂಬುದರ ಅರಿವಿರಬೇಕು ...ಅಂತಹ ವ್ಯಕ್ತಿಗಳಲ್ಲಿ ನಾವು ಉತ್ತಮರನ್ನು ಆರಾಮಾಗಿ ಆರಿಸಬಹುದು,ಅಲ್ಲವೇ? ನಮ್ಮ ಕೆಲಸಗಳಲ್ಲೇ ನಾವು ಕಳೆದುಹೊಗಿರುವಾಗ ,ಇನ್ನು ಅವರನ್ನೆಲ್ಲ ಅಳೆದುತೂಗಿ ಆರಿಸಲು ಸಮಯವೂ ,ತಾಳ್ಮೆಯೂ ,ಸಾಮರ್ಥ್ಯವೂ ನಮಗೆಲ್ಲಿದೆ ?
ಅದಕ್ಕೆ ಮುಂದಾದರೂ ರಾಜಕೀಯ ರಂಗಕ್ಕೆ ಬರುವವರೆಲ್ಲರಿಗೂ ಎಂದು ನಿರ್ದಿಷ್ಟ ಅರ್ಹತಾ ಪರಿಕ್ಷೇಯನ್ನೋ ,ಕಾರ್ಯವನ್ನೋ ಇರಿಸಿ(ಅವು ಯಾವುದೆನ್ದೆಲ್ಲ ಯೋಚಿಸುವಷ್ಟು ದೊಡ್ದವನಲ್ಲಾ ನಾನು ಕ್ಷಮಿಸಿ) .ಅಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲಿ .ಆ ಕಾರ್ಯಗಳೇ ಅವರ ಪ್ರಚಾರಕರು..ಸ್ವಲ್ಪ ನಿಗದಿತ ಸಮಯದ ನಂತರ ಅವರಿಗೆ ಮತ್ತೊಂದು ಜವಾಬ್ದಾರಿ ವಹಿಸಿ ..ಅದೇ ಅವರ ಗುರುತಾಗಲಿ .ಆಮೇಲೆ ಚುನಾವಣೆಗೆ ಕಳಿಸಿ.
ಸುಮ್ಮನೆ ಆಶ್ವಾಸನೆಗಳು ,ಆಮಿಷಗಳು,ಇನ್ನೇನೋ ಮಾಡಿ ಆಯ್ಕೆಯಾಗುವದಕ್ಕಿಂತ ,ಆತ ಮಾಡಿದ ಒಳ್ಳೆಕೆಲಸ ನೋಡಿ ಜನರೇ ಆತ ಬೇಡ ಎಂದರೂ ಚುನಾವಣೆಗೆ ನಿಲ್ಲಿಸಿ , ಗೆಲ್ಲಿಸುವನ್ತಾಗಲಿ.
ಒಮ್ಮೆ ಗೆದ್ದಾದಮೇಲೆ ಆತನಿಗೆ ಅಧಿಕಾರದ ಮದ ಬಾರದಂತೆ ನೋಡಿಕೊಳ್ಳುವುದೂ ನಮ್ಮದೇ ಕರ್ತವ್ಯ .ಕೆಲವರು ರಾಜಕಾರಣಿಗಳನ್ನು ಭ್ರಷ್ಟರು ಎಂದು ತರ್ಕಿಸಿತ್ತಾರೆ ,ಒಮ್ಮೆ ಯೋಚಿಸಿ !!!!ಅದರಲ್ಲಿ ನಮ್ಮ ಪಾಲೂ ಇದೆ .
ಚುನಾವಣೆಗೆ ಆತ ೫೦ ಕೋಟಿ ಖರ್ಚು ಮಾಡಿದ್ದರೆ ಆತನಿಗೆ ಅದರ ಎರಡುಪಟ್ಟು ಬರುವುದು ಬೇಡವೇ ? ಆತ ಅದನ್ನು ಒಂದು ದಂಧೆಯಾಗಿ ಸ್ವೀಕರಿಸುತ್ತಾನೆ ,ಹಣ ಮಾಡಿಕೊಳ್ಳುತ್ತಾನೆ ,ಈಗ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ನಮಗಿಲ್ಲ .
ಒಮ್ಮೆ ಆತ ಚುನಾವಣೆಗೆ ಏನೂ ಖರ್ಚು ಮಾಡದೇ ಆರಿಸಿ ಬಂದು ,ಆಮೇಲೆ ದಾರಿ ತಪ್ಪಿದರೆ ನಾವು ಅದನ್ನು ಪ್ರಶ್ನಿಸಬಹುದು ತಾನೇ ?????
ಮತ್ತೊಮ್ಮೆ ನಾನು ಹೇಳುತ್ತಿರುವುದು ಇಷ್ಟೇ ,ರಾಜಕೀಯಕ್ಕೂ ಒಂದು ಮಾಪನ ಬೇಕು .ಅದನ್ನು ನಿಗದಿಪಡಿಸುವ ಹೊಣೆ ನಮ್ಮ ಬುದ್ಧಿಜೀವಿಗಳ ಮೇಲಿದೆ .ಆ ಮೇಲೆ ಆ ಪಟ್ಟಿಯಲ್ಲಿ ಉತ್ತಮರನ್ನು ಆಯ್ಕೆಮಾಡುವ ಸ್ವಾತಂತ್ರ್ಯ ಪ್ರಜೆಗಳಿಗಿದೆ.
ಆಗ ಮಾತ್ರ ನಾವು ರಾಜಕೀಯವನ್ನು ಸೇವೆ ಎಂದು ಪರಿಗಣಿಸಬಹುದೀನೋ!!!!



ಸಮ್ರದ್ಧ ಭಾರತದ ಸಿಹಿ ಕನಸ ಹೊತ್ತು .......

Sunday, October 3, 2010

ಹೊರಟರು ಎಲ್ಲರೂ ಅಂದು
ಈ ದಿನ ಗಾಂಧಿ ಜಯಂತಿ ಎಂದು
ವ್ರದ್ಧಾಶ್ರಮಕೆ,ಆಂಧ ಮಕ್ಕಳ ಶಾಲೆಗೆ
ತೊಟ್ಟು ಬಿಳಿ ವಸ್ತ್ರ

ಹೇಳಿದರು ಉದ್ದುದ್ದದ ಮಾತನು
ತಮಗೇ ಅರ್ಥವಾಗದಿದ್ದನು...
ಕೊಟ್ಟರು ಪೋಸು ,ಈ ಜಗದ ಕಣ್ಣಿಗೆ
ಕೊಡುವಾಗ ತಾವು ತಂದಿದ್ದನು ...

ಎಲ್ಲರೂ ಹೋದವರೇ ಅಲ್ಲಿ
ಮರುದಿನ ಪತ್ರಿಕೆಯಲಿ ಬರಲೆಂದೋ,
ಹೆಸರು ಜನರ ಬಾಯಿಗೆ ಬರಲೆಂದೋ
ಇಲ್ಲವೇ ತನ್ನವಳು ಬರುವಳೆಂದೋ

ಹೋದವರು ಬಹಳ ಕಡಿಮೆ
ಮಕ್ಕಳ ಸಿಂಬಳ ವರೆಸಲೆಂದೋ
ಹಿರಿಯರ ಕಣ್ಣೀರ ವರೆಸಲೆಂದೋ
ಅಲ್ಲವೇ ?


ಗೊತ್ತವರಿಗೆ ಹೋಗಲಲ್ಲಿಗೆ
ಗಾಂಧಿ ಜಯನ್ತಿಯೇ ಬೇಕಿಲ್ಲ ಎಂದು
ಮನವಿದ್ದೆಡೆ ಮಾರ್ಗ
ಗಾಂಧಿಜಯನ್ತಿಯು ಎಂದೆಂದೂ ...

ತೋರಿಕೆಗೆ ಮಾಡದಿರಿ ಏನನ್ನೂ
ಮೋಸಗೊಳಿಸದಿರಿ ನೀವೇ ನಿಮ್ಮನ್ನು !!!!!

Thursday, August 12, 2010

ಇದೇ ಹದಿನೈದರಂದು!!!!

ಗೆಳೆತನಕೆ ಒಂದು ದಿನ
ಪ್ರೇಮಕೆಂದೊಂದು ದಿನ
ಅದಕೊಂದು ಇದಕೊಂದು ಎಂದು
ಹುಚ್ಚೆಬ್ಬಿಸಿ ಕುಣಿಯುವೆವು
ತಣ್ಣಗಾಗುವವರೆಗೂ ನಮ್ಮ ಮೈ-ಮನ

ಆದರೆ ವರುಷಕ್ಕೊಂಡೆ ದಿನ
ಅದು ಅತಿಹರುಷದ ದಿನ
ಇಂದು ಸ್ವಾತಂತ್ರ್ಯೋತ್ಸವ ಎಂದು
ಆಚರಿಸಿ ,ಆಧರಿಸಿ
ತಿರುಗಿ ನೋಡಿಕೊಳ್ಳಲಾರೆವೇ ನಾವು ನಮ್ಮನ ?

ಆದಿನ ಈ ದಿನದಂದು ಬೆಳ್ಳಂಬೆಳಿಗ್ಗೆ
ಹರಿದಾಡುವದು ಶುಭಕಾಮನೆ ,ಬಹುಮಾನ
ಆದರೆ ಇಂದು ಬಿದ್ದಿರುವೆವು ಹಾಸಿಗೆ ಮೇಲೇ
ಇಂದು ರಜೆಯೆಂದು ,ಇದಲ್ಲವೇ ದೇಶಕೆ ಅವಮಾನ ?

ಏಳಿ ಎದ್ದೇಳಿ ,ಮನದ ಜಡವ ಬಿಟ್ಟು
ಹೊರಡಿ ,ಹಾರಿಸಲು ಧ್ವಜವ ಶುಭ್ರ ವಸ್ತ್ರ ತೊಟ್ಟು
ಹಾರುತಿರಲಿ ನಮ್ಮ ಹೆಮ್ಮೆಯ ಬಾವುಟ ,
ಉಳಿಸಿ ,ಬೆಳೆಸೋಣ ಅದನ್ನು ಇರುವವರೆಗೂ ರಕ್ತದ ಕೊನೆ ತೊಟ್ಟು .....

Wednesday, August 4, 2010

ತುಂತುರು ಅಲ್ಲಿ ನೀರ ಹಾಡು ......ಇದಕೆ ಇಂದು ಹೊಸ ಪದದ ಗೂಡು

ಒಲವೆ ನೀ ಒಂದು ಗೂಡು
ಇನಿಯ ನೀ ಬಾ ಒಂದು ಗೂಡು

ಮನದೊಳಗೆ ಜೇನುಣಿಸಿ
ಎದೆಯೊಳಗೆ ಮದತರಿಸಿ
ಕಣಕಣವೂ ನೀನೆ
ನೀ ನನ್ನ ಕಂಕಣವು
ಮನದನ್ಕಣದ ಗಿಣಿ ನೀನೆ
ನಿನ್ನ ಒಲವಿನಾ ಗಣಿ ನಾನೇ


ಯಾತ್ರಿಯೇ ನೀ ನನ್ನ ಮನಸೇರು
ಖಾತ್ರಿಯು ಅಲ್ಲಿ ಹರಿ ತೇರು
ಜಾತ್ರೆ ಅಂದೇ ಪ್ರೇಮಕೆಂದು
ಯಾತ್ರೆಯು ವಿಜಯದಿ ಪ್ರೀತಿಗೊಂದು
ಇಲ್ಲಿಯರೂ ಒಬ್ಬರೇ ಇಲ್ಲ, ನೀನೆ ನನಗೆ ಎಲ್ಲ
ನೀನೆ ಸಾಕು ಮತ್ತೇನಿಲ್ಲ ,ನಮ್ಮ ಬಾಳೆ ಬೆಲ್ಲ
ನನ್ನ ಒಮ್ಮೆ ನೋಡಿ ,ನೀ ತೋಡಿಸು ಪ್ರೇಮದಬೇಡಿ
ಕಾದಿರುವೆ ದೇವರ ಬೇಡಿ
ನನ್ನ ರೋಧಿಸಲು ಬಿಡ ಬೇಡಿ

ಸುಮ್ನೆ,,,,

ಅವಳೆಂದಳು ,ಜಗವೆಲ್ಲ ಶೂನ್ಯ
ನೀನನ್ನ ಜೊತೆಗಿರು ಸಾಕು
ಈಜೋಣ ಜಗವನ್ನೆ ,
ನೀಯೆನ್ನ ಎತ್ಡಿ ನಡಿ ಸಾಕು!!!!!!!

Tuesday, August 3, 2010

ಅದೊಂದು ದಿನ ........

ನಾ ಅಂದು ನೋಡಿದೆ
ನೋಡಬಾರದಿತ್ತೇನೋ ಎನಿಸುತಿದೆ ಇಂದು
ಅದೆಂತ ಕಣ್ಣೋಟ ,ಮನಸೆಳವ ಮೈಮಾಟ
ಮರೆತಿದ್ದೆ ನಾ ಏಣಿಯಲಿ ನಿಂತಿದ್ದೆ ಎಂದು

ಆ ನೀಳ ಕೂದಲು ಹೊಯ್ದಾಡುತ್ತಿತ್ತು
ಗಾಳಿಯ ಗಾನಕ್ಕೆ ,ಕುಣಿಯುತಿತ್ತು ಮಿಂಚುಬಳ್ಳಿಯಂತೆ
ಕಾಯುತ್ತಿತ್ತು ನನ್ನ ಮನ ,ಹ್ರದಯ ಸಾಗರದಲ್ಲಿ
ಪ್ರೀತಿ ಮೀನು ಹುಡುಕಿ ಮಿಂಚುಳ್ಳಿಯಂತೆ

ನಾ ನೋಡಿದನು ನೋಡಿದ ಅವಳ
ತೆರಗಣ್ಣು,ಹೇಳಿತು ಓ ತುಟಿಯೇ ತುಸು ನಗು
ನಾ ಅಂದುಕೊಂಡೆ ಅಂದು ,
ಅಷ್ಟು ನಗು ,ಸಾಕೆನಗು

ಅದೇನು ಆಟವೋ ಹೋದಳು ,ಬಂದಳು
ಮತ್ತೆ ಹೋದಳು ,ತಿರುಗಿ ಬಂದಳು
ಆ ಕಡೆ ನೋಡಿ ,ಈ ಕಡೆ ನೋಡಿ
ಬಾಡಿ ಬಸವಲಿದವು ಈ ನನ್ನ ಕಂಗಳು !!!


ಮತ್ತೆ ಬಂದು ಹಸಿನಕ್ಕು,ಒಳ ಹೋಗೇ ಬಿಟ್ಟಳು
ನಾ ಬಗ್ಗಿ ,ತಗ್ಗಿ ನೋಡಿದ್ದೊಂದೇ ಬಂತು
ಕೈ ಮುರಿದು ,ಕಾಲು ತರಚಿ ಆಸ್ಪತ್ರೆಯಲ್ಲಿದ್ದಾಗ
ಏಣಿ ಮೇಲಿದ್ದುದು ನೆನಪಿಗೆ ಬಂತು !!!!!!!!!!

Sunday, June 20, 2010

ಇದು ನನ್ನ ಕಾಲುಗಂಟೆ ?

ನಾ ಕೇಳಿರುವೆ ಜೀವನದಿ ಸುಖವು ,
ನಿಮಿಷ-ನಿಮಿಷದ ಶ್ರಮ ಸೇರಿ , ಒಂದು ಗಂಟೆ
ಬೇಕು,ಆದರೆ ಈ ನಿಮಿಷಗಳ
ಎಚ್ಚರಿಸಲು ಒಂದು ಗುರಿಘಂಟೆ

ಪಡೆಯಬೇಕು ಅದನು ಜ್ಞಾನದಿಂದ ,
ದೋಚಲು ಅದೇನು ಸಿರಿ ಗಂಟೆ ?
ತಿಳಿಯಿರಿದನು,ಸಿಗುವುದು ಜಯ ಉಪಾಯದಿ ,
ಬಿಡಿಸಲಾರಲು,ಜಗವೇನು ಬ್ರಹ್ಮಗಂಟೆ?




ಇದು ತಿಳಿಯದಿದ್ದರೆ ಕ್ಷಮಿಸಿ ನನ್ನ ,
ಹಾಳು ಮಾಡಿದ್ದಕ್ಕೆ ನಿಮ್ಮ ಕಾಲು ಗಂಟೆ ! !!!!!!!!

Friday, June 11, 2010

ಇರು , ಹೋಗದಿರು !

ಜಗದಲ್ಲಿ ಖುಷಿಯೆಲ್ಲ ಸಿಕ್ಕು
ಕುಣಿಯುವಾಗ ಜೊತೆಗೆ ನೀನಿದ್ದೆ ,
ಮೊಗವೆಲ್ಲ ಸೊರಗಿದ್ದು ,ಜಗಕೆ ನಾ
ಮಣಿಯುವಾಗ ನೀ ನಿದ್ದೆ!

ಹೇಳು ನೀನೇಕೆ ಹೀಗೆ ,
ಎಂದಿಗೂ ನನ್ನ ಕೈಬಿಡುತಲೇ ಇರುವೆ
ಆದರೆ ಜಯದಿ ಮತ್ತೆ ಕೂಡುವೆ ,
ಬೆಲ್ಲವಿದ್ದಾಗ ಬಂದಂತೆ ಇರುವೆ ...

ಬಿಡಬೇಡ ಸಂತಸವೇ ನೀ ನನ್ನ
ಸೋಲಲಿ ,ಇದ್ದು ಸಮಾಧಾನ ಮಾಡು
ಬಿಸುಲಲಿ ನೆರಳಿತ್ತು ಸಾಕೆನಗೆಎಂದು
ಮಳೆಗಾಲಕೆ ಹೋಗದಲ್ಲವೇ ಮನೆ ಮಾಡು ?

Tuesday, June 8, 2010

ಒಂದ್ ನಿಮಿಷ ನೋಡಿ!!!

ನನ್ನೊಡನೆ ನೀ ನಕ್ಕು
ಮಾತಾಡಿ ಕಳೆದ ಆ ಸಮಯ
ನೆನಪಿಹುದು ಎಂದಿಗೂ
ಆ ಕಾಲ ಬಲು ಸಮಯ

ಹರಿಯುತಿಹುದು ಇಂದಿಗೂ
ಮನದೊಳಗೆ ಈ ಸ್ನೇಹದ ಹೊಳೆ
ಹೇ ಸ್ನೇಹರತ್ನವೇ ಮಸುಕದಿರು ನೀ,
ಎಂದಿಗೂ ಹೀಗೆಯೇ ಹೊಳೆ

Monday, June 7, 2010

ಹಾಗೆ ಸುಮ್ಮನೆ !

ನಾ ಹೋದೆ ಅಂದು ಅವಳ ಹಿಂದೆ
ಮೂಕ ಪ್ರೇಮಕೆ ಒಪ್ಪಿಗೆಯ ಬೇಡಿ
ಸಂಸ್ಕಾರವಂತೆ ಅವಳು ಎಂದಳು
ನನಗೆ ಇಷ್ಟು ಬೇಗಲೇ ಇದಲ್ಲ ಬೇಡಿ

ನಾ ಬಿಡಲಾರೆ ನಿನ್ನ ಎಂದಿಗೂ
ಹಾರಿಹೋದರು ನೀ ಬಾಂಗಳಕೆ
ಅದಕೆನ್ದಳು ,ಅದೇನು ಬೇಡ ಬಾ
ಸಾಕು ಅಪ್ಪ ಇರುವಾಗ ನಮ್ಮನೆ ಅಂಗಳಕೆ