Wednesday, August 17, 2011

ಬ್ರಷ್ಟತೆಯೆದುರು ಬಾಪು ,ಬನ್ನಿ ಮತ್ತೆ!!

ಬನ್ನಿ ,ಬಾಪು-ನೇತಾಜಿ ಎದ್ದಿರುವೆವು ನಾವು
ಬ್ರಷ್ಟ ನಿಯತ್ತಿಗೆದುರಾಗಲು ದಾರಿದೀಪ ನೀವು

ಕ್ವಿಟ್ ಇಂಡಿಯಾ ಎಂದಂತೆ
ಕ್ಲೀನ್ ಇಂಡಿಯಾ ಎನ್ನುವೆವು
ಉಪ್ಪಿನ ಕರದಂತೆ ನಾವು ,
ಕಪ್ಪು ಕರದೆದುರು ಹೋರಾಡುವೆವು

ಬನ್ನ್ನಿ ತಿಲಕರೇ ಮುಟ್ಟೋಣ,ಜನರನ್ನು ಹೊಸ ರೂಪದಲ್ಲಿ
ಇಂಟರ್ ನೆಟ್ಟು,ಟೀವಿ,ಪೇಪರುಗಳಲ್ಲಿ
ಹೇಳಬನ್ನಿ ಸಾವರ್ಕರರೇ ,ಹೊಸ ಸಂಗ್ರಾಮದ ಕಥೆಯನ್ನು
ಸ್ವತಂತ್ರ ಭಾರತ ,ಸ್ವಚ್ಛವಾದ ಬಗೆಯನ್ನು

ನಾಡಹಿರಿಯರೇ ಸಾಕ್ಷಿಯಾಗಲು ಬನ್ನಿ
ನಮ್ಮ ನಾಡನ್ನು ಸಿಂಗರಿಸಲಿದ್ದೇವೆ.
ಬ್ರಷ್ಟತೆಯನ್ನು ಗುಡಿಸಿ ಬುಟ್ಟಿಯಲ್ಲಿಟ್ಟು,
ಮನದಂಗಳಕೆ ಪಾರದರ್ಶಕತೆಯ ರಂಗವಲ್ಲಿಯನ್ನಿಟ್ಟು..


( ಇದು ಕವಿತೆ ಎಂದೆನಿಸಿಕೊಳ್ಳಲು ಮಾರ್ಗದರ್ಶನ ನೀಡಿದ ವಿವೇಕಾನಂದ ಸರ್ ಅನ್ನು ನೆನೆಪಿಸಿಕೊಳ್ಳುತ್ತಾ )
ಸಮ್ರದ್ಧ ಭಾರತದ ಸಿಹಿಕನಸ ಹೊತ್ತು,

ನಿಮ್ಮನೆ ಹುಡುಗ
ಚಿನ್ಮಯ್

9 comments:

ಚುಕ್ಕಿಚಿತ್ತಾರ said...

ಗೋಡೆ ಮೇಲೆ ಸು೦ದರವಾಗಿ ಗೀಚಿದ್ದೀರಿ. ಕನಸು ನನಸಾಗುವ ಹೊತ್ತು ಬೇಗ ಬರಲಿ..

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ ಕವನ. ಆಶಯ ದೊಡ್ಡದು.

ಮನಸಿನಮನೆಯವನು said...

ನಮ್ಮ ಕನಸೂ ಅದೇ..
ಭಾರತವು ಕ್ಲೀನ್ ಆಗಲಿ.. ಭಾರತಾಂಬೆ ಕ್ವೀನ್ ಆಗಲಿ.


_ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟ

ಗಿರೀಶ್.ಎಸ್ said...

Yes Chinmay...we have to fight against corruption....have to made India corruption free nation..

ಸುಷ್ಮಾ ಮೂಡುಬಿದಿರೆ said...

ur right chinmay....chennagide....

sush said...

superlikes

Badarinath Palavalli said...

ಆಹಾ ಸಾಮಾಜಿಕ ಭ್ರಷ್ಟತೆಯ ವಿರುದ್ಧ ವಿಡಂಬನಾತ್ಮಕವಾಗಿ ಛಾಟಿ ಬೀಸಿದ್ದೀರಿ ಭಟ್ಟರೇ. ಭಾಷಾ ಬಳಕೆ ಮತ್ತು ಭಾವನೆಗಳು ಎರಡೂ ಸೂಪರ್...


ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ಚಿನ್ಮಯ ಭಟ್ said...

ಧನ್ಯವಾದಗಳು ಎಲ್ರಿಗೂ

sush said...

d very essense f d poem wakes a patriot inside d reader..nice as all ur posts are...Finding d last line...m feelin proud 2 b 1 f ur lecturers:))