Thursday, October 13, 2011

ಕೊನೆಯ ಪುಟದಿಂದ.......

ಇದಕ್ಕೆ ಸೌಮ್ಯಕ್ಕನ ಲೇಖನವೇ ಸ್ಪೂರ್ತಿ..



ಓದಿ ಓದಿ ಹೀಗೆ ಟೈ ಹಾಕಿ
ಕುಳಿತಾಗ ಸುಮ್ಮನೆ ಹಳೆಯದ್ದನ್ನೆಲ್ಲಾ ನೆನೆದರೆ
ನೆನೆಯುವುದು ಕಣ್ಣು, ಆ ಲೆಕ್ಕದಿಂದಲ್ಲ
ಈಗಲೂ ಅರ್ಥವಾಗದ ಸಿದ್ಧಾಂತಗಳಿಂದಲ್ಲ
ಬದಲಿಗೆ ತುದಿ ಹರಿದ ಕೊನೆ ಪುಟಗಳಿಂದ
ಬಾಳ ಬಂಗಾರದ ಪುಟಗಳಿಂದ


ಏನೆಂದೂ ಅರ್ಥವಾಗದ,ಆದರೂ ನಗು ತರಿಸುವ
ನೀಲಿ-ಕಪ್ಪು ಬಣ್ಣದ ಚಿತ್ರಗಳು
ಅದರ ಕೆಳಗೆ ಸುಂದರವಾದ
ಆದರೆ ಓದಲು ಬಾರದ ಲಿಪಿಗಳು
ಇನ್ನೇನೋ ವಿಚಿತ್ರಗಳು.


ಇನ್ನು ಮೇಲುಗಡೆ ಒಂಬತ್ತೇ
ಇರುವ ಮೊಬೈಲ್ ನಂಬರ್ರು
ಇನ್ನೊಂದಕ್ಕಾಗಿ ಹುಡುಕಿ
ಐವತ್ತು ರೂಪಾಯಿ ಕಳೆದಿದ್ದೆ
ಎಂದರೆ ಯಾರೂ ನಂಬರು.

ಇನ್ನೂ ಸ್ವಲ್ಪ ಕಣ್ಣಿಟ್ಟು ನೋಡಿದರೆ
ಕಾಣುವುದು ಯಾರದೋ ಹೆಸರು
ಆ ಹೆಸರೇ ಆಗ ಉಸಿರಾಗಿತ್ತೆಂದು
ಹೇಳಲು ಈಗಿಲ್ಲ ಉಸಿರು

ಕವಿಯಾಗಿಸಿದ್ದ ಆ ತುಂಟ ಸಾಲುಗಳು
ಇಂದೇಕೆ ಬರಲಾರವು???
ಅಂದು ಹಾರುತ್ತಿದ್ದ ಬಣ್ಣದಾಸೆ ಹಕ್ಕಿಗಳು
ಇಂದೇಕೆ ಹಾರಲಾರವು???



20 comments:

Dr.D.T.Krishna Murthy. said...

ಚಿನ್ಮಯ್;ಚಂದದ ಕವನ.ಅಭಿನಂದನೆಗಳು.

ವಾಣಿಶ್ರೀ ಭಟ್ said...

chandiddu :)

ಮೌನರಾಗ said...

ಚಿನ್ಮಯ್..
ನೋಟ್ ಬುಕ್ಕಿನ ಕೊನೆಯ ಪೇಜಿನ ಕಲರವ ನಿಮ್ಮ ಕವಿತೆಯ ಸಾಲುಗಳಲ್ಲಿ..ಬೊಂಬಾಟ್...

Soumya. Bhagwat said...

ಚಂದ ಬರದ್ದೆ ತಮ್ಮಾ :)) ಪ್ರಾಸಗಳ ಜೋಡಣೆ ಸುಂದರ. ಹಾಗೆ ಮುಕ್ತಾಯವೂ ಮನ ತಟ್ಟುವಂತಿದೆ :) ಧನ್ಯವಾದಗಳು :))

Sahana Rao said...

Channaagide Chinmay!

ಚುಕ್ಕಿಚಿತ್ತಾರ said...

ಚ೦ದ ಬರದ್ದೆ ತಮ್ಮಯ್ಯ.. ಪದಗಳ ಜೊತೆಗೆ ಚೊಲೊ ಆಡ್ತೆ...!!

Shilpa Hegde said...

Wa Wa cholo idalo tamma :)

Shruthi B S said...

tumbaa chanaagiddu............:)

ಚಿನ್ಮಯ ಭಟ್ said...

ಧನ್ಯವಾದ ಡಾಕ್ಟೇ..

ಚಿನ್ಮಯ ಭಟ್ said...

ವಾಣಿಶ್ರೀ ಭಟ್:ಧನ್ಯವಾದ

ಚಿನ್ಮಯ ಭಟ್ said...

ಮೌನರಾಗ:
ಸ್ವಾಗತ ನಮ್ಮನೆಗೆ.... ಧನ್ಯವಾದ.. ಬರುತ್ತಿರಿ

ಚಿನ್ಮಯ ಭಟ್ said...

ಸೌಮ್ಯಕ್ಕಾ: ಧನ್ಯನಾದೆ... ಬರುತ್ತಿರಿ

ಚಿನ್ಮಯ ಭಟ್ said...

ಸಹನಾ ರಾವ್: ಧನ್ಯವಾದಗಳು..ಬರುತ್ತಿರಿ

ಚಿನ್ಮಯ ಭಟ್ said...

ಚುಕ್ಕಿ ಚಿತ್ತಾರ:ಹಾ ಹಾ... ಧನ್ಯವಾದ ಈ ಮಂಗಾಟವನ್ನು ಓದಿದ್ದಕ್ಕೆ... ಬರ್ತಾ ಇರಿ..ಖುಷಿ ಆತು

ಚಿನ್ಮಯ ಭಟ್ said...

ಶಿಲ್ಪಕ್ಕಾ: ಎಯ್... ಖುಷಿ ಅತು.. ಬರ್ತಾ ಇರು

ಚಿನ್ಮಯ ಭಟ್ said...

ಶ್ರುತಿ: ಬರ್ತಾ ಇರಿ..ಧನ್ಯವಾದ

ಚಿನ್ಮಯ ಭಟ್ said...

@ಎಲ್ರಿಗೂ: ನಮ್ಮನೆಗೆ ಬಂದಿದ್ದಕ್ಕೆ ಸಿಕ್ಕಾಪಟ್ಟೇ ಧನ್ಯವಾದ.. ನನ್ನ ತಪ್ಪುಗಳನ್ನು ಹೇಳಿ ತಿದ್ದಿಕೊಳ್ಳಲು ಸಹಕರಿಸಿ

ಹಳ್ಳಿ ಹುಡುಗ ತರುಣ್ said...

tumba chenagide chinmayi..

late agi bandadakke kshame irali..

ಚಿನ್ಮಯ ಭಟ್ said...

ಧನ್ಯವಾದಗಳು ತರುಣ್...

mounayaana said...

Sundara nenapu haagu adara jothege besediruva vedaneyannu Tumba sarala haagu sahajavaagi, ashte parinaamakaariyagi chitrisiddera. Abhinandanegalu...:-)