Saturday, March 24, 2012

ಕಾಣದೇ ಕಾಡುವ ಒಲವೆ..........

ಕಾಣದೆ ಕಾಡುವ ಚೆಲುವೆ
ನೀ ಕಾಡುತ ಒಡುವ ಮನವೆ
ಆಣೆಯ ಪಡೆವ ನಲಿಮೆ
ನೀ ಎದೆಯ ಸುಡುವ ಕುಲುಮೆ

ಕಣ್ಣ ಮುಚ್ಚಿ ತೆರೆಸುವ ನಿನ್ನಯ ತುಟಿಗಳೆ ಸುಂದರ
ಮಣ್ಣು ಮೆತ್ತಿ ಕೊಂಡರೆ ಕೆನ್ನೆಯ ಒರೆಸುವ ಚಂದಿರ
ಮೋಹಕ-ಸಮ್ಮೋಹಕ ಕಣ್ಣಿನಾ ಸೆಳೆತವು
ಜಾರ್ಜಿಯಾ-ಕೆಲಿಫೋರ್ನಿಯಾ ನಿನ್ನದೇ ಎಲ್ಲವೂ
ಹಲ್ಲಲೇ ಹಾಲ,ಚೆಲ್ಲುವಾ ಚೆಲುವೆ

ಕನಸಲಿ ನನ್ನ ಕಾಡುವ ಈಗಿನ ಕಾಲದ ಮೋಹಿನಿ
ನನಸಲಿ ಸಿಗದೆ ಓಡುವ ಪ್ರೀತಿಯ ಲೋಕದ ವಾಹಿನಿ
ದಿಟವೋ ಇದು,ಹುಡುಗಾಟವೋ ನಿನ್ನದೇ ಎಲ್ಲವೂ
ಆಟದಿ ಹುಡುಕಾಟತಿ ಸಿಗುವುದೇ ಗೆಲುವು
ಬದುಕುವೆ ನಿನ ನೆನಪಲೇ ಬಂದರೂ ಸಾವು

4 comments:

Sushma said...

Good one chinmay...

idu namma blog said...

nic one... adre chinmay na aaa kanasina cheluve yaru????

ಚಿನ್ಮಯ ಭಟ್ said...

ಧನ್ಯವಾದಗಳು ಸುಶ್ಮಾ...ಬರ್ತಾ ಇರಿ

ಚಿನ್ಮಯ ಭಟ್ said...

ಹಾ ಹಾ ..ಇಲ್ಲಾರೀ ಇನ್ನೂ ಸಿಕ್ಕಿಲ್ಲಾ...ನಿಜಾ ಹೇಳ್ಬೇಕು ಅಂದ್ರೆ ಹುಡ್ಕಕೂ ಹೋಗಿಲ್ಲಾ:)...
ಸ್ವಾಗತ ನಮ್ಮೆನೆಗೆ, ಖುಷಿ ಆಯ್ತು ಬಂದಿದ್ದಕ್ಕೆ....ಬರುತ್ತಿರಿ..ಧನ್ಯವಾದ