Monday, September 3, 2012

ಭಾವ ದೀಪ




ಮನೆಯ ಹೊಗೆಯೆಲ್ಲ ಸೇರಿ,
ಮನದಿಂದ ದೂರ ಹಾರಿ
ಹೋಗಬಾರದೇ ಕರಿಮೋಡದ ಒಳಗೆ
ಬೀಳಬಾರದೇ ಸವಿಮುತ್ತಾಗಿ ಕೆಳಗೆ

ಭೇದ-ದ್ವೇಷವ ಕೂಡಿ,
ಎದೆಯ ಕಹಿಯನು ದೂಡಿ,
ಹದಮಾಡಬಾರದೇ ಸ್ನೇಹದೆರಕವನ್ನು
ಅಚ್ಚಿಡಬಾರದೇ ಒಮ್ಮತದ ಮೂರುತಿಯನ್ನು

ರೋಷ-ಮತ್ಸರದ ಜ್ವಾಲೆಗಳು ಜೊತೆಯಾಗಿ
ಸುಡಬಾರದೇ ಜಡತನವ ಚಿತೆಯಾಗಿ
ಬಾಳಿನೊಳಗೊಂದು ಭಾವದ ಬೆಳಕಾಗಿ,
ದಾರಿದೋರಬಾರದೇ ಬರಿದಾಗದ ಹಣತೆಯಾಗಿ

-ನಿಮ್ಮನೆ ಹುಡುಗ

16 comments:

ಚುಕ್ಕಿಚಿತ್ತಾರ said...

chanda..!

[Please prove you're not a robot , ಇದನ್ನು ತೆಗಿಯಪ್ಪ ಬರೀ ರಗಳೆ]

MPPRUTHVIRAJ KASHYAP said...

ಕೊನೆಯ 4 ಸಾಲುಗಳಲ್ಲಿರುವ ಸಂಬಂಧವನ್ನು ಹೇಳ್ತ್ಯಾ

ಪುಷ್ಪರಾಜ್ ಚೌಟ said...

ಎಂದೂ ಬೆಳಗುತಿರಲಿ ಹೀಗೆ ಭಾವದ ಹಣತೆ, ಕುಂದದಿರಲಿ ಒಲವ ಮಮತೆ! ಭಾವಸ್ಪುರಣ. ಚೆನ್ನಾಗಿದೆ ಕವಿತೆ.

Ashok.V.Shetty, Kodlady said...

ಉತ್ತಮ ಸಂದೇಶದೊಂದಿಗೆ ಸುಂದರ ಕವನ....ಧನ್ಯವಾದಗಳು...

Dileep Hegde said...

ದಾರಿತೋರಬಾರದೆ ಬರಿದಾಗದ ಹಣತೆಯಾಗಿ..! ಚೆಂದದ ಕವನ...

ಮೌನರಾಗ said...

ಚಂದದ ಕವನ ಚಿನ್ಮಯ್..
ಭಾವದ ಹಣತೆ ಎಂದೂ ಬರಿದಾಗದೆ ಬೆಳಗುತ್ತಿರಲಿ, ದಾರಿ ತೋರುತಿರಲಿ...

ಚಿನ್ಮಯ ಭಟ್ said...

@ಚುಕ್ಕಿ ಚಿತ್ತಾರ:ಹಾಂ ಅಕ್ಕಾ...ತೆಗಿಯಕ್ ಪ್ರಯತ್ನ ಮಾಡ್ತಿ...ಧನ್ಯವಾದ ನಮ್ಮನೆಗ್ ಬಂದಿದ್ದಕ್ಕೆ..

ಚಿನ್ಮಯ ಭಟ್ said...

@ಪುಷ್ಫರಾಜ್:ಸ್ವಾಗತ ನಮ್ಮನೆಗೆ...ಧನ್ಯವಾದ ನಿಮ್ಮ ಆಶೀರ್ವಾದಕ್ಕಾಗಿ..ಬರುತ್ತಿರಿ.

ಚಿನ್ಮಯ ಭಟ್ said...

@ಅಶೋಕಜೀ:ಸ್ವಾಗತ ನಮ್ಮನೆಗೆ...ಧನ್ಯವಾದಗಳು ತಮ್ಮ ಆಶೀರ್ವಾದಕ್ಕಾಗಿ..ನಮ

ಚಿನ್ಮಯ ಭಟ್ said...

@ದಿಲೀಪ:ಮಾತಾಡ್ಸ್ದಿ...ಸ್ವಾಗತ ನಮ್ಮನೆಗೆ..ಬರ್ತಾ ಇರಿ

ಚಿನ್ಮಯ ಭಟ್ said...

@ಮೌನರಾಗ:ಧನ್ಯವಾದಗಳು....ಬರ್ತಾ ಇರಿ..ಖುಷಿಯಾಯ್ತು...

ushodaya said...

ಚ೦ದ ಇದ್ದು ಕವಿತೆ....ಒಳ್ಳೆ ಸ೦ದೆಶನೂ ಇದ್ದು....ನಿಮ್ಮ ಬರವಣಿಗೆ ಹೀಗೇ ಸಾಗಲಿ....

Shruthi B S said...

ಚನ್ನಾಗಿದ್ದು ಚಿನ್ಮಯ್.....:)

ಚಿನ್ಮಯ ಭಟ್ said...

@ಉಶೋದಯ: ಧನ್ಯವಾದ...ಬರ್ತಾ ಇರಿ...

ಚಿನ್ಮಯ ಭಟ್ said...

@ಶ್ರುತಿ: ಧನ್ಯವಾದ ..ಬರ್ತಾ ಇರಿ...

ಚಿನ್ಮಯ ಭಟ್ said...

@ಪ್ರಥ್ವಿರಾಜ್:
ರೋಷ ಹಾಗೂ ಮತ್ಸರಗಳು ಎಂತಹದೇ ವ್ಯಕ್ತಿಯನ್ನಾದರೂ ಬದಲಾಯಿಸುತ್ತವೆ..ಇವು ಆತನಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ದರೂ ಅದನ್ನು ಸುಟ್ಟು ತಮ್ಮ ಪ್ರಭುತ್ವವನ್ನು ಸಾಧಿಸಲು ಹೊರಡುತ್ತದೆ..ಹೀಗಾಗಿ ಇಂತಹ ತೀಕ್ಷ್ಣವಾದ ಭಾವನೆಗಳನ್ನು ನಮ್ಮ ಜಡತೆಯನ್ನು,ಆಲಸ್ಯವನ್ನು ಹೋಗಲಾಡಿಸಲು ಬಳಸಿಕೊಳ್ಳೋಣ ಎನ್ನುವ ಆಶಯ ಹೊತ್ತ್ತು ಮೊದಲೆರಡು ಸಾಲು ಬರೆದೆ.
ಇನ್ನು ಭಾವನೆಗಳು ಬರುವುದು ಸಹಜ,ಅವನ್ನು ಯಾವ ಮಾರ್ಗದಲ್ಲಿ ,ಯಾವರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದು ನಮಗೆ ಬಿಟ್ಟದ್ದು..ಅವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳೋಣ,ಆ ಮೂಲಕ ಅವನ್ನು ಬದುಕಿನ ಸಾಧನೆಯ ಹಾದಿಗೆ ಪೂರಕವಾಗಿಸೋಣ,ದಾರಿದೀಪವಾಗಿರಿಸೋಣ ಎನ್ನುವ ಭಾವನೆ ಹೊತ್ತು ಕೊನೆಯ ಎರಡು ಸಾಲುಗಳನ್ನು ಬರೆದೆ.......


ಪ್ರತಿಕ್ರಿಯೆಗಾಗಿ ಧನ್ಯವಾದ...ಬರ್ತಾ ಇರಿ...