Saturday, November 24, 2012

ನಾ ನೋಡಿದ ಡ್ರಾಮಾ .....ಈಗಷ್ಟೇ ಡ್ರಾಮಾ ಚಿತ್ರ ನೋಡಿ ಮಸಾಲೆ ದೋಸೆ ತಿಂದು ರೂಮಿಗೆ ಬಂದೆ .....ಬೆಳಿಗ್ಗೆ ಪರೀಕ್ಷೇಯಲ್ಲಿ ಔಟ್  ಪುಟ್ಟು ಬಂದ ಖುಷಿ ಒಂದು ಕಡೆಗಾದರೆ ಅಂತೂ ಇಂತೂ ಮೊದಲ ಪ್ರದರ್ಶನವನ್ನು ನೋಡಲಾಗದಿದ್ದರೂ ಎರಡನೇ ದಿನವೇ ನೋಡಿದ ಖುಷಿ..ನಾಳೆ ಬೆಳಿಗ್ಗೆ ಮನೆಗೆ...ಅದಕ್ಕೆ ರಾತ್ರಿ ಕಣ್ಣು ಕೆಂಪಗೆ ಮಾಡಿಕೊಂಡು ಬೆರಳಚ್ಚಿಸುತ್ತಿದ್ದೇನೆ...ಬೇರೆ ಎನೂ ಅರ್ಜಂಟ್ ಕೆಲಸವಿಲ್ಲದಿದ್ದರೆ ಹಂಗೇ ಒಂದ್ ಸಲ ಓದಿ....

ಚಿತ್ರದ ಬಗ್ಗೆ  ವಿಮರ್ಶಿಸುವಷ್ಟೆಲ್ಲಾ ದೊಡ್ಡವನು ನಾನಲ್ಲ..ಒಂದಿಷ್ಟು ಅನಿಸಿಕೆಗಳು ಅಷ್ಟೇ..
ಚಿತ್ರದಲ್ಲಿ ಮೊದಲಿಗೆ ಇಷ್ಟವಾಗಿದ್ದು ಮಂಡ್ಯದ ಭಾಷೆಯ ಸೊಗಡು...ಒಂದಿಷ್ಟು ಗ್ರಾಮ್ಯತೆಯ ಚಿತ್ರಣ...ಎಂದಿನಂತೆ ಭಟ್ಟರ ಚಿತ್ರದ  ಮೊದಲ ಅರ್ಧಗಂಟೆ ನಾಯಕನ ವ್ಯಕ್ತಿತ್ವವನ್ನು ಹೇಳಲು ಮೀಸಲು..ಅಲ್ಲಿಂದ ಇನ್ನೊಂದೆಡೆಗೆ ಪ್ರಯಾಣ...ಇಲ್ಲಿ ,ಬೇರೆಡೆ ಹೋದಾಗ ಪ್ರೀತಿ ಹುಟ್ಟಿದುವರ ಬದಲು ಪ್ರೀತಿಗಾಗಿಯೇ ಬೇರೆಡೆ ಹೋಗುತ್ತಾರೆ ನಾಯಕ ಯಂಕಟೇಸ ಹಾಗೂ ಸತೀಸ...ಅಲ್ಲಿ ಏನೇನೋ ನಡೆಯುತ್ತದೆ...ಜೊತೆಗೆ ಅಂಡರ್ ವರ್ಡನ ಥಳಕೂ ಚಿತ್ರಕ್ಕಿದೆ...ಒಟ್ಟಿನಲ್ಲಿ ಒಂದು ನಕ್ಕು ಹಗುರಾಗುವ ಚಿತ್ರ...ಮನಸ್ಸಿನಲ್ಲಿ ಭವಿಷ್ಯದ ಬಗೆಗಿನ ಗೊಂದಲಗಳನ್ನು ಮರೆತು ಇಂದಿನದನ್ನು ಆನಂದದಿಂದ ಕಳೆಯಿರಿ..ಉಳಿದದ್ದೆಲ್ಲಾ ಭಗವಂತನ ಮೇಲೆ ಬಿಡಿ ಎನ್ನುವ ಸಂದೇಶ ಇದೇಯೇನೋ ಅಂತ ನನಗನಿಸಿದ್ದು...

ಮೊದಲಿಗೆ ಒಂದಿಷ್ಟು ತರಲೆ ಮಾತುಗಳು...ಮಂಗಾಟಗಳು....ಆಮೇಲಾಮೇಲೆ  ಗಂಭೀರವಾಗುವಂತಹ ಪಾತ್ರದಲ್ಲಿ ಯಶ್ ಅಭಿನಯ ಇಷ್ಟವಾಯ್ತು....ಹೊಡೆದಾಟದ ದೃಶ್ಯಗಳಲ್ಲಿ ಯಶ್ ಡಿಚ್ಚಿ ಒಂದು ಸಲ ನೆನಪಿರತ್ತೆ...ಪ್ರೀತಿ ಮಾಡುವ ಹುಡುಗನ ಪಾತ್ರ ಅವರಿಗೇನು ಹೊಸದೇನಲ್ಲ...ಹಾಂ ಯಾಕೋ ಕೊನೆಯಲ್ಲಿ ,ಕುಡಿದು ಮಾಡಿದ ತಪ್ಪುಗಳಿಗೆ ಫಾದರ ಹತ್ತಿರ ಕ್ಷಮೆ ಯಾಚಿಸುವಾಗ ನಟನೆ ಇನ್ನೂ ಚೆನ್ನಾಗಿರಬಹುದ್ದೇನೋ ಅನಿಸಿದರೆ,ಗುಂಡು ಬಿದ್ದು ನರಳುವ  ಸಂದರ್ಭದಲ್ಲಿಯೂ ಕೂಡ "ಪ್ರಿಯತಮೆಯನ್ನು ಚೆನ್ನಾಗಿ ನೋಡಿಕೋ" ಎಂದು ಅವರಪ್ಪನ ಹತ್ತಿರ ಭಾಷೆ ತೆಗೆದುಕೊಳ್ಳುವಾಗ ವ್ಹಾರ ವ್ಹಾ ಎನ್ನಿಸದೇ ಇರದು....

ಇನ್ನು ನೀನಾಸಂ  ಸತೀಶರದ್ದು ಕೂಡ ನಗೆಬುಗ್ಗೆ ಚಿಮ್ಮಿಸುವ ಪಾತ್ರ....ನಾಯಕನ ಜೊತೆಗೂಡಿ ಆಡುವ ಮಂಗಾಟಗಳಿಗೆಲ್ಲಾ ಸೋ ಎನ್ನುವ ಪಾತ್ರವದು....ಜೊತೆಯಿಷ್ಟು ಮುಗ್ಧತೆ ಕೂಡ ಆ ಪಾತ್ರಕ್ಕಿದ್ದು ,ಆ ಸಮಯದಲ್ಲಿ ಸತೀಶರ ಆಂಗಿಕ ಅಭಿನಯ ಮನಸೂರೆಗೊಳ್ಳುತ್ತದೆ.... ಕೊನೆಯಲ್ಲ್ಲಿ ಸಮುದ್ರದ ಹತ್ತಿರ ನಿಂತು ಅಳುವ ಸಂಧರ್ಭದ ಅಭಿನಯ ಇಷ್ಟವಾಯ್ತು.....

ಇನ್ನು ನಾಯಕಿ ರಾಧಿಕಾ ಪಾತ್ರಕ್ಕೆ ಎಂದಿನಂತೆ  ನ್ಯಾಯ ಒದಗಿಸಿದ್ದಾರೆ...ಮೊದಲಿಗೆ ಶ್ರೀಮಂತನ ಮಗಳಾಗಿ ಅವರು ತೋರಿಸುವ ಅಭಿನಯ ಯಾಕೋ ಅಷ್ಟೇನೂ ಇಷ್ಟವಾಗಲಿಲ್ಲ...ಜೊತೆಗೆ ಮೊದಲಾರ್ಧದ ತನಕ ಮುಖ ಯಾಕೋ ಪ್ರೆಶ್ ಅನಿಸಲಿಲ್ಲ....ಆದರೆ ದ್ವಿತೀಯಾರ್ಧದಲ್ಲಿ ಅವರ ನಟನೆ ನಮ್ಮನ್ನು ಪಾತ್ರದೊಳಗೆ ಕೊಂಡೊಯ್ಯುತ್ತದೆ...ಸುಚೇಂದ್ರ ಪ್ರಸಾದ್ ಅವರ ಕೈಯ್ಯಲ್ಲಿ ಮಗಳಂತೆ ಅವರ ಡ್ರಾಮಾ ಆಡುತ್ತಾ  ಕೈತುತ್ತು ತಿನ್ನುವ ದೃಶ್ಯದಲ್ಲಿ ನಿಜಕ್ಕೂ ಕಣ್ಣೀರು ತರಿಸುತ್ತಾರೆ ರಾಧಿಕಾ..ಅದನ್ನು ನೋಡುತ್ತಾ ಯಾಕೋ ನಾನು ನನ್ನ ಕನಸು ನೆನಪಾಯ್ತು.....ದ್ವಿತೀಯಾರ್ಧದಲ್ಲಿ ಮುದ್ದಾಗಿ ಕಾಣಿಸುವ ರಾಧಿಕಾ ಪಂಡಿತ್ ಅಭಿನಯದಲ್ಲಿ ಹಿನ್ನೆಲೆಯಲ್ಲಿ ತೇಲಿಬರುವ "ಹಂಬಲದ ಹೂವಂತೆ ...."ಮನಸ್ಸಿನಲ್ಲಿ ಉಳಿದಿರುತ್ತದೆ...

ಇನ್ನು ಚಿತ್ರಕ್ಕೆ ಹೊಸ ಛಾಪು ಕೊಟ್ಟ ಎರಡು ಪಾತ್ರಗಳ ಬಗ್ಗೆ ಹೇಳಲೇಬೇಕು.."ಏಯ್ ಹುಡುಗ್ರಾ..."ಎಂದು ಗಡಸು ದನಿಯೇರಿಸಿ ಚಿತ್ರದೊಳಗಿಳಿಯುವ ಬುಲ್ ಬುಲ್ (ಅಂಬರೀಷ ಅವರಿಗೆ ನಾಯಕ ಕರೆಯುವ ಹೆಸರು )..."ಅವನು ಆಡಿಸ್ತಾನೆ ಆಡ್ಭೇಕು "ಎಂದು ಕೈಯೆತ್ತಿ ಬೊಂಬೆ ತಿರುಗಿಸುತ್ತಾರೆ...ಪ್ರತಿಯೊಂದು ತಿರುವಿನಲ್ಲು ಕಾಣಿಸಿಕೊಂಡು ಕಣ್ಣಲ್ಲೇ ಎಲ್ಲಾ ಹೇಳುವ ಅಭಿನಯ ಕನ್ನಡದ ಕರ್ಣರದ್ದು.....ಆ ಟೋಪಿ,ಆ ಬೊಂಬೆ ಅದರ ಹಿಂದಿನ ಅರ್ಥ ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಇನ್ನಷ್ಟು ಇಷ್ಟವಾಗಬಹುದು......

ಜೊತೆಗೆ ಸುಚೇಂದ್ರ ಪ್ರಸಾದ್ ಅವರ ಅಭಿನಯವನ್ನು ಮರೆಯಲು ಅಸಾಧ್ಯ...ಕಾಲೇಜಿನ ಪ್ರಾಂಶುಪಾಲರಾಗಿ "ಕನ್ನಡದಲ್ಲೇ ವ್ಯವಹರಿಸೋಣ" ಎಂದು ಬೋರ್‍ಡು ಹಾಕಿಕೊಂಡು ಅಚ್ಚ ಕನ್ನಡ ಮಾತನಾಡುವ ಅವರು,ಮನೆಯಲ್ಲಿ ಯೆಂಕ್ಟೇಶ್,ಸತೀಶ ಬಂದಾಗ ಕಾಣದ  ಮಗಳ ಬಗೆಗಿನ ಮೋಹದಲ್ಲಿ ,ಅವಳ ಮುದ್ದಾಡುವ  ಆಸೆಯಲ್ಲಿ ಭಾವಾವೇಶಕ್ಕೊಳಗಾಗುವ ಸನ್ನಿವೇಶ ಅವಿಸ್ಮರಣೀಯ, ಅನನ್ಯ ,ಅದ್ಭುತ...ಕೋಪದಲ್ಲೂ ಅಷ್ಟೇ,ಮಮತೆಯಲ್ಲೂ ಅಷ್ಟೇ,ಹತಾಶೆಯಲ್ಲೂ ಅಷ್ಟೇ,ಪ್ರೀತಿಯಲ್ಲೂ ಅಷ್ಟೇ ಸುಚೇಂದ್ರ ಪ್ರಸಾದ ಇಡೀ ತೆರೆಯನ್ನು ಆವರಿಸಿಕೊಂಡಿರುತ್ತಾರೆ ... ಅವರ  ಸ್ಪಷ್ಟವಾದ ಉಚ್ಚಾರ,ಸಂದರ್ಭಕ್ಕೆ ತಕ್ಕಂತೆ ಬದಲಾಗುವ  ಮುಖಭಾವ ನೆನಪಿನಲ್ಲುಳಿಯುತ್ತದೆ....

ಹಾಡುಗಳ ಬಗ್ಗೆಯಂತೂ ಹೇಳುವದೇ ಬೇಡ...ಒಂದಕ್ಕಿಂತ ಒಂದು ಸುಂದರ...ಚೆಂದುಟಿಯ ಪಕ್ಕದಲಿ ಯ ನೃತ್ಯ ಸಂಯೋಜನೆ,ಬೆಳಕಿನ ಸಂಯೋಜನೆಯ ಬಹಳ ಹಿಡಿಸಿತು...ಬಂಗಾರದಂತೆ ಹೊಳೆಯುವ ಬೆಳಕಿನಲ್ಲಿ ಪ್ರೇಮ ನಿವೇದನೆ ಮಾಡುತ್ತಿರುವ ಯಶ್ ಹಾಗೂ ಅಂದದ ರಾಧಿಕಾ ಇನ್ನೂ ಕಣ್ಣಿಗೆ ಕಟ್ಟಿದಂತಿದ್ದಾರೆ....
ತುಂಡ್ ಹೈಕಳ ಸಾವಾಸ ದಲ್ಲಿ ಯಶ್ ಹಾಗೂ ಸತೀಶ ಒಂದಿಷ್ಟು ನಗಿಸ್ತಾರೆ....."ಡ್ರಾಮಾ ತನಿನಾನನ " ಹಾಡುನಲ್ಲಿ ಹಚ್ಚಿಕೊಂಡಿರುವ ಮೀಸೆ,ಕಲ್ಲಂಗಡಿ,ಸೇಬು,ಏಣಿ ಮೇಲೆ ಸೈಕಲ್ಲು  ಹಿಂಗೆ ಏನೋನೋ ಹೊಸತರದ್ದು ಎನಿಸಿ ಮುಂದೇನು ವ್ಯಾಶವೋ ಎಂದು ಕಣ್ಣು ಹುಡುಕುವಂತೆ ಮಾಡುತ್ತದೆ....ಕೃಷ್ಣ ಅವರ ಕ್ಯಾಮರಾದಲ್ಲಿ ತೆಗೆದ  ಬ್ರಿಡ್ಜಿನ ಕೆಳಗಿನ ದೃಶ್ಯಗಳು,ಸಮುದ್ರದ ತೀರ ಮತ್ತೆ ಮತ್ತೆ ನೋಡಬೇಕು ಎನಿಸುವಂತೆ ಮಾಡುತ್ತದೆ...

ಇವಿಷ್ಟು ನಮ್ಮ ಡ್ರಾಮಾಕಥೆ ಪುರಾಣಗಳು....ಈ ನನ್ ಮಗಾ ಎನ್ ಸಿನಿಮಾ ಪಂಟರಾ ಅಂತ ಬೈಕೋಬೇಡಿ...ಅನಿಸಿದ್ದನ್ನು ಬರೆಯುವ ಚಟ ನೋಡಿ...ಬೆರಳಚ್ಚಿಸಿದ್ದೇನೆ ಆಷ್ಟೇ...ಇದು ನಾ ಕಂಡ ಡ್ರಾಮಾ...

ಪುರಸೊತ್ತು ಆದ್ರೆ ನೀವೂ ಒಂದು ಸಲ ಹೋಗಿ ಬನ್ನಿ.......

ಒಟ್ಟಿನಲ್ಲಿ ಎಲ್ಲರನ್ನೂ ನಗಿಸಿ,ನಾಳೆಯ ಬಗೆಗಿನ ಚಿಂತೆ ಹೊಡೆದೊಡಿಸಿ,ಎಲ್ಲ ನಿನ್ನ ಆಟ ಕಣೋ ಎಂಬತೆ ಹಾಯಾಗಿರಿ,ಇಂದಿನದನ್ನು ಆಸ್ವಾದಿಸಿ ಎನ್ನುವ ಡ್ರಾಮಾ ನಂಗಂತೂ ಇಷ್ಟವಾಯ್ತು...

ಇನ್ನೊಮ್ಮೆ ಹೋಗಬೇಕು ಅಪ್ಪ ಬೈದೇ ಇದ್ರೆ,
ಜೇಬಲ್ಲಿ ದುಡ್ಡು ಉಳಿದಿದ್ರೆ!!!!!!
-ಚಿನ್ಮಯ.

 

20 comments:

ಜಲನಯನ said...

ಚಿತ್ರದ ತಿರುಳನ್ನು ಅರ್ಥಮಾಡಿಕೊಂಡು ಪ್ರತಿ ನಡೆಯ ಆಗು-ಹೋಗುಗಳನ್ನು ವಿಮರ್ಶಿಸಿದ್ದೀರಾ ಚಿನ್ಮಯ್...ಚನ್ನಾಗಿದೆ..ವಿಮರ್ಶೆ...ಶುಭವಾಗಲಿ ಈ ಹಾದಿಯಲ್ಲೂ...

umesh desai said...

ನಾ ಅಂತೂ ಇನ್ನೂ ನೋಡಿಲ್ಲ
ಚಿನ್ಮಯ್ ಭಟ್ರು ಯೋಗರಾಜ್ ಭಟ್ಟರ ಅಭಿಮಾನಿ ಅನ್ಸಿತು
ಹೌದೆ? ನಿಜಕ್ಕೂ ಚೆನ್ನಾಗಿದೆಯೇ

balasubramanya said...

ಚಿನ್ಮಯ್ ಡ್ರಾಮಾ ಚಿತ್ರದ ಬಗ್ಗೆ ನಿಮ್ಮ ವಿಮರ್ಶೆ ಓದಿದೆ , ಒಬ್ಬ ಪ್ರೇಕ್ಷಕನಾಗಿ ತನಗೆ ಅನ್ನಿಸಿದ್ದನ್ನು ಸ್ಪಷ್ಟವಾಗಿ ಹೇಳಿದ್ದೀರಾ. ನನಗೂ ಈ ಸಿನಿಮಾ ನೋಡುವ ಆಸೆ ಇದೆ. ಮಂಡ್ಯ ಜಿಲ್ಲೆಯ ಶ್ರೀ ರಂಗ ಪಟ್ಟಣ, ತಾಲೂಕಿನ ಕೆಲ ಹಳ್ಳಿಗಳು, ಪಾಂಡವಪುರ ತಾಲೂಕಿನ ಕೆಲ ಹಳ್ಳಿಗಳು, ಮೇಲುಕೋಟೆ ಹಲವು ಜಾಗಗಳಲ್ಲಿ ಈ ಚಿತ್ರ ಚಿತ್ರಣಗೊಂಡಿದೆ. ಅದರಲ್ಲಿ ಕೆಲವು ಮೊದಲ ಸಾರಿ ಚಲನ ಚಿತ್ರಗಳಲ್ಲಿ ಕಾಣಿಸಿಕೊಂಡಿವೆ. ಇನ್ನು ಭಾಷೆಯ ಸೊಗಡು ಪೂರ್ಣವಾಗಿ ಮಂಡ್ಯ ಜಿಲ್ಲೆಯ ಶ್ರೀ ರಂಗ ಪಟ್ಟಣ, ತಾಲೂಕಿನ ಕೆಲ ಹಳ್ಳಿಗಳು, ಪಾಂಡವಪುರ ತಾಲೂಕಿನ ಕೆಲ ಹಳ್ಳಿಗಳು, ಮೇಲುಕೋಟೆ ಕಡೆಯ ಮಾತಿನ ಹೋಲಿಕೆ ಇಲ್ಲದಿದ್ದರೂ ಶೇಕಡಾ 80 ನ್ಯಾಯ ಸಿಕ್ಕಿದೆ. ಒಳ್ಳೆಯ ವಿಮರ್ಶೆ ನಿಮ್ಮದು , ಆದರೂ ತುಂದೈಕ್ಳ ಸಾವಾಸ ಕಷ್ಟಾ ಆಲ್ವಾ ..........!!
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

ಮಂಜಿನ ಹನಿ said...

ಹಿಂಗೆ ವಿಮರ್ಶೆ ಕೊಟ್ರೆ ಭಟ್ರು ಕೇಸ್ ಹಾಕ್ತಾರೆ ವಿನಯ್! ಸಿನೆಮಾ ನೋಡಿದಂತಹ ಅನುಭವವಾಯ್ತು.. ಭಟ್ಟರ ಸಿನೆಮಾ ಒಂದು ಸಲ ನೋಡೇ ನೋಡ್ಬೇಕು.. ಇವತ್ತು ಹೊರಡುವವನಿದ್ದೇನೆ.. ಚೆನ್ನಾಗಿದೆ ನಿಮ್ಮ ವಿಮರ್ಶೆ.. ಸ್ವಲ್ಪ ನೋಡುವ ದೃಷ್ಟಿಯನ್ನು ಇನ್ನೂ ನಿಷ್ಟುರವಾಗಿಸಿದ್ದರೆ ಸಿನೆಮಾದಲ್ಲಿನ ಹುಳುಕುಗಳೂ ಕಾಣಿಸುತ್ತಿದ್ದವೇನೋ.. ವಿಮರ್ಶೆ ಬರೆಯಲೇ ನೀವು ಸಿನೆಮಾ ನೋಡಿಲ್ಲವಲ್ಲ, ಸೋ ಅಡ್ಡಿಯಿಲ್ಲ! ಹಿಡಿಸಿತು..

Badarinath Palavalli said...

ನನ್ನ ಮಿತ್ರ ಎಸ್. ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರದ ಒಂದು ಹಾಡಂತು ನನಗೆ ಹುಚ್ಚು ಹಿಡಿಸಿದೆ.

"ಹಂಬಲದ ಹೂವನ್ನು"
ಹಾಡಿದವರು ಸುನೀತ ಗೋಪರಾಜು

ಒಳ್ಳೆಯ ಚಿತ್ರ ನೋಡಾಲು ಪ್ರೇರೇಪಿಸುವ ನಿಮ್ಮ ಸುಂದರ ಬರಹ.

Unknown said...

ಹಿಂದಿನ ಪೋಸ್ಟ್ ನಲ್ಲೆ ನೀವು ಡ್ರಾಮಾ ಗೆ ಫಿದ ಆಗಿದ್ದು ಗೊತ್ತಿತ್ತು .
movie ನೋಡ್ದೆ ಇರೋರನ್ನು ನೋಡೋ ತರ ಮಾಡಿದೆ ನಿಮ್ಮ ಈ ವಸ್ತು ವಿಷಯ !.
analisis ಚೆನ್ನಾಗಿದೆ ..ನೋದಬೇಕೆನಿಸಿದೆ .

ಅಭಿನಂದನೆಗಳು output ಬಂದಿದ್ದಕ್ಕೆ ;)
ಬರಿತಾ ಇರಿ

ದಿನಕರ ಮೊಗೇರ said...

chennaagi vimarshe maadiddiraa....

naanu nodabeku film..

Sudeepa ಸುದೀಪ said...

ಚಿನ್ಮಯ್ ... ಅವಸರದಲ್ಲಿ ಚೆನ್ನಾಗಿ ಬರೆದಿದ್ದೀರ.... ಕೊನೆಯ ಎರಡು ಸಾಲುಗಳು ಇಷ್ಟ ಆಯ್ತು... :)

ಮೌನರಾಗ said...

ಚಿನ್ಮಯ್..ಡ್ರಾಮಾ ನೋಡಲಾಗಲಿಲ್ಲ...
ನಿಮ್ಮ ವಿಮರ್ಶಾ ಬರಹ ಓದಿದ ಮೇಲೆ ನೋಡಲೇ ಬೇಕಿನಿಸಿದೆ.
ನೈಸ್...

ಹಾ..ಔಟ್ ಪುಟ್ ಬಂದಿದ್ದಿಕ್ಕೆ ಅಭಿನಂದನೆಗಳು..

ಚಿನ್ಮಯ ಭಟ್ said...

ದೇಸಾಯಿಯವರ...ನಿಮ್ಮ ಅನಿಸಿಕೆ ಸತ್ಯ..ಅದ್ಯಾಕೋ ಗೊತ್ತಿಲ್ಲ....ಗಾಳಿಪಟ ಹಾಗೂ ಪಂಚರಂಗಿಯನ್ನು ಹುಚ್ಚರಂತೆ ನೋಡಿದ್ದೇನೆ....
ನಿಜವಾಗಿಯೂ ಚೆನ್ನಾಗಿದೆಯೇ ಎಂದಿದ್ದಕ್ಕೆ ಚೆನ್ನಾಗಿದೆ ಸಾರ್ ಎಂದಷ್ಟೇ ಹೇಳಿ ಮುಗಿಸಬಲ್ಲೆ....ನಿಮಗೆ ಅವರ ಹಿಂದಿನ ಚಿತ್ರಗಳು ಇಷ್ಟವಾಗಿದ್ದರೆ ಖಂಡಿತ ಈ ಚಿತ್ರ ಇಷ್ಟವಾಗುತ್ತದೆ...ಇಲ್ಲದಿದ್ದರೆ...
ನಂಗೊತ್ತಿಲ್ಲಾಪ್ಪಾ!!!!!!!!!!!!

ಚಿನ್ಮಯ ಭಟ್ said...

ಆಜಾದ್ ಸರ್...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ...
ವಿಮರ್ಶೆಯು ಇದು ಹೌದೋ ಅಲ್ಲವೋ ಗೊತ್ತಿಲ್ಲ...ಯಾಕೆಂದರೆ ವಿಮರ್ಶಕರು ಪೂರ್ವಾಗ್ರಹ ಪೀಡಿತರಾಗಿರಬಾರದಂತೆ....ನಾನು ಅಷ್ಟೇಲ್ಲಾ ಯೋಚಿಸಿಯೇನೂ ಬರೆದದ್ದಲ್ಲ...
ಆದರೂ ಖುಷಿಯಾಗುತ್ತಿದೆ..ಹೇಗೇ ಇದ್ದರೂ ಬರೆಯಿರಿ,ಚೆನ್ನಾಗಿರಿ ಎಂದು ಬೆನ್ನುತಟ್ಟುವ ನಿಮ್ಮ ದೊಡ್ಡತನಕ್ಕೆ...
ವಂದನೆಗಳು ಸರ್ ...

ಚಿನ್ಮಯ ಭಟ್ said...

ಬಾಲು ಸರ್...

ಮೊದಲಿಗೆ ನೀವು ತೋರುವ ಆತ್ಮೀಯತೆಗೊಂದು ಸಲಾಮ್...ಏನೇ ಬರೆದರೂ ಪ್ರೀತಿಯಿಂದ ನೋಡಿ ಪ್ರತಿಕ್ರಿಯಿಸುವ ಈ ರೀತಿ ನನಗಂತೂ ಮಾದರಿ..

ಇನ್ನು ಭಾಷೆಯ ಬಳಕೆಯ ಬಗ್ಗೆ ನನಗೇನೂ ಜಾಸ್ತಿ ಗೊತ್ತಾಗಲಿಲ್ಲ...ಬಹುಷಃ ಮೂಲಭಾಷೆಯ ಪೂರ್ತಿ ಪರಿಚಯವಿಲ್ಲದ್ದಕ್ಕೋ ಏನೋ...ಗೊತ್ತಿಲ್ಲ....


ವಂದನೆಗಳು ಅಕ್ಕರೆಯ ಪ್ರತಿಕ್ರೀಯೆಗೆ...

ಚಿನ್ಮಯ ಭಟ್ said...

ಮಂಜಿನ ಹನಿ ಸ್ವಾಗತ ನಮ್ಮನೆಗೆ :)

ನಾನೇನೂ ವಿಮರ್ಶಿಸಬೇಕು ಅಂತೇಳೇ ಬರೆದಿದ್ದಲ್ಲ ಇದು...ಅವತ್ತು ಚಿತ್ರ ನೋಡಿದ ದಿನ ರಾತ್ರಿ ಏನೋ ಬರೆಯಬೇಕು ಅನಿಸಿದ್ದನ್ನು ಬರೆದಿದ್ದಷ್ಟೇ...
ಹಾಂ ಹುಳುಕು ಹುಡುಕುವಷ್ಟು ದೊಡ್ಡವನು ನಾನಲ್ಲವೇನೋ ಎಂಬುದು ನನ್ನ ಇಂಗಿತ,ಆದರೆ ನಿಮ್ಮ ಅಭಿಪ್ರಾಯ ಸರಿಯಾದದ್ದೇ..ಯಾವಗಲೂ ಇನ್ನೊಂದು ಮುಖವನ್ನು ನೋಡುವುದು ಅತ್ಯಗತ್ಯ..ನೋಡೋಣ ಮುಂದೆ ಆ ನಿಟ್ಟಿನಲ್ಲಿ...

ವಂದನೆಗಳು...

ಚಿನ್ಮಯ ಭಟ್ said...

ಬದರಿ ಸರ್,

ಖಂಡಿತವಾಗಿಯೂ ಹುಚ್ಚುಹಿಡಿಸುವ ಹಾಡೇ ಅದು...ನನಗಂತೂ ಅಲ್ಲಿ ಎಲ್ಲವೂ ಇಷ್ಟ...ಸಾಹಿತ್ಯ ಸಂಗೀತ,ಮೊನ್ನೆ ನೋಡಿದ ಮೇಲಂತೂ ಆ ಸಂದರ್ಭ,ಅಭಿನಯ ಎಲ್ಲವೂ ಮತ್ತೆ ನೆನಪಾಗುತ್ತಿದೆ...

ವಂದನೆಗಳು ನಿಮ್ಮ ಪ್ರೋತ್ಸಾಕ್ಕಾಗಿ :)
ನಮಸ್ತೆ :)

ಚಿನ್ಮಯ ಭಟ್ said...

ಭಾಗ್ಯಾ..
ಖಂಡಿತವಾಗಿಯೂ ಮೊದಲೇ ಫಿದಾ ಆಗಿದ್ದೆ ಹಾಡುಗಳಿಗೆ...
ಚಿತ್ರ ನೋಡಿದ ಮೇಲೆ ಖುಷಿ ಜಾಸ್ತಿಯಾಯ್ತು...ಅದೇ ಜೋಶಿನಲ್ಲೆ ಮನಸ್ಸಿಗೆ ಬಂದಿದ್ದನ್ನೆಲ್ಲಾ ಬರೆದುಬಿಟ್ಟೆ ಅಷ್ಟೆ..
ಧನ್ಯವಾದ ಕಣೇ :)

ಚಿನ್ಮಯ ಭಟ್ said...

ದಿನಕರ ಸರ್,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.....
ಬರುತ್ತಿರಿ...

Gurudat said...

ವಿಮರ್ಶೆ ತುಂಬ ಚೆನ್ನಾಗಿಧೆ :)

ಇಂತಿ ನಿಮ್ಮ ಪ್ರೀತಿಯ,
ಭಟ್ಟರ ಅಭಿಮಾನಿ

ಚಿನ್ಮಯ ಭಟ್ said...

ಸುಮತಿ ಅಕ್ಕಾ,

ಅದು ಫೇಸಬುಕ್ಕಿನಲ್ಲಿ ಸುಮ್ಮನೆ ೪ ಸಾಲು ಸ್ಟೇಟಸ್ ಅನ್ನು ಹಾಕುವಾ ಅಂತಾ ಬರೆದದ್ದು ನನಗೆ ಗೊತ್ತಿಲ್ಲದಂತೆಯೇ ಒಂದೂವರೆ ಪುಟವಾಯಿತು...ಹಂಗೆ ಏನನನ್ನಿಸಿತೋ ಬರೆಯುತ್ತಾ ಹೋದದ್ದು...ಆಮೇಲೆ ಬ್ಲಾಗಿಗೂ ಹಾಕುವಾ ಎನಿಸಿ ಹಾಕಿದೆ....ಭಾರಿ ಅರ್ಜಂಟಿನಲ್ಲೇ ಬರೆದದ್ದು ಅದು...
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ..ಖುಷಿಯಾಯ್ತು,...
ಬರುತ್ತಿರಿ..
ನಮಸ್ತೆ

ಚಿನ್ಮಯ ಭಟ್ said...

ಸುಷ್ಮಾ,
ಧನ್ಯವಾದ ಕಣೆ...ಒಂದ್ ಸಲ ನೋಡ್ಬೋದು ಕಾಲೇಜು ಹುಡುಗ-ಹುಡುಗಿಯರೆಲ್ಲಾ..ಗುಂಪಲ್ಲಿ ಹೋಗಿ ಮಜವಾಗಿರತ್ತೆ...

ಬರ್ತಾ ಇರು...

ಚಿನ್ಮಯ ಭಟ್ said...

ಗುರುದತ್...
ಸ್ವಾಗತ ನಮ್ಮನೆಗೆ....
ಬರ್ತಾ ಇರಿ..
ನಮಸ್ತೆ