Sunday, December 23, 2012

ತಿಂಗಳು ಮರೆಯಾದರೇನಂತೆ ತನ್ವಂಗಿ….



ಅಬ್ಬಾ..ಸುಮಾರು ೧೫ ದಿನದಿಂದ ಪರೀಕ್ಷೆಯ ನೆಪದಲ್ಲಿ ಬ್ಲಾಗ್ ಲೋಕದಿಂದ ದೂರವಿದ್ದೆ... ಅಂತೂ ಇಂತೂ ನಾಲ್ಕು ಪರೀಕ್ಷೆಗಳು ಮುಗಿದವು ..ಇನ್ನೆರಡು ಮುಂದಿನ ವರುಷಕ್ಕೆ (ಜನವರಿ ೩,೫ಕ್ಕೆ ಹಾ ಹಾ)...ಹಾಗಾಗಿ ಸಿಕ್ಕಾಪಟ್ಟೆ ಅಂತರವಿರುವುದರಿಂದ ಕೆಲಸ ಕಾಣದೇ ಮಾಡಿದ ಕೆಲಸವಿದು..ಒಂದು ಪುಟ್ಟ ಕವಿತೆ ಬರೆಯುವ ಪ್ರಯತ್ನ..ಸಂದರ್ಭ ಅಂತೇನೂ ಅಂದುಕೊಂಡು ಬರೆದಿದ್ದಲ್ಲ,ಬರೆಯುತ್ತಾ ಹೋದಂತೆ ಮನಸ್ಸಿಗೆ  ಬಂದ ಸನ್ನಿವೇಶ..ಗೆಳತಿಯ ಮದುವೆಯ ಹಿಂದಿನ ದಿನ ಆಕೆಯ ಗಂಡನಾಗುವವನು ಮನೆಬಿಟ್ಟು ಹೋದಾಗ ,ಆಕೆಯನ್ನು ಸಂತೈಸುವ ಭಾವ ಹೊತ್ತು ಬರೆದದ್ದು...ಎಷ್ಟರಮಟ್ಟಿಗೆ ಬರೆದೆನೋ ಕಾಣೆ..ನೀವೇ ತಿದ್ದಿ ಆಶೀರ್ವದಿಸಬೇಕು..

ತಿಂಗಳು ಮರೆಯಾದರೇನಂತೆ ತನ್ವಂಗಿ,
ಕಂಗಳಾ ಕನಸೆಲ್ಲಾ ಇಂಗೀತೇ?
ಮದರಂಗಿ ಮಸುಕಾದರೇನಂತೆ ಮುಂಗೈಲಿ,
ಅಂಗೈಯ್ಯ ಗೆರೆಯಂದ ಅಳಿಸೀತೆ?

ಮಲಾರದಲ್ಲಿಪ್ಪ ಚಿಕ್ಕಿಬಳೆಯೀಗ
ಒಡೆಯಲು,ನೀ ಹೀಗೆ ತೀಡದಿರು.
ಹಜಾರ ಬಳೆಯುಂಟು ಇನ್ನೂ ಆ ಮಾಲೆಯಲಿ
ಹೊನ್ನಿನ ಕಡಗವ ಹುಡುಕುತಿರು

ಬೇಸರದ ಸಬರವ ಮೇಲ್ಮೆತ್ತಿಗಿಟ್ಟಿರು,
ಅಂಗಳದಿ ಗೊಂದಲದಾ ಕಲ್ಲು-ಕ್ವಾಳೆಯ ಗುಡಿಸಿರು.
ಹಂಗಿಸುವ ನೆಂಟರ ಸಗಣಿಯಲಿ ತೊಡೆದಿರು,
ನಾಳಿನಾಸೆಯಾ  ಬಣ್ಣದಲಿ, ರಂಗೋಲಿ ಬಿಡಿಸಿರು.

ಚಂದಿರ  ಮರೆಯಾದರೇನಂತೆ ??

ಶಬ್ಧಾರ್ಥ: ತಿಂಗಳು:ಚಂದಿರ,ತನ್ವಂಗಿ:ಕೋಮಲವಾದ ಶರೀರವುಳ್ಳವಳು,ಮಲಾರ:ಬಳೆಗಾರನ ಬಳೆ ಸಂಚಿ,ಚಿಕ್ಕಿಬಳೆ:ಬಳೆಯ ಒಂದು ಪ್ರಕಾರ,
( ಇನ್ನು ನಮ್ಮ ಕಡೆ ಬಳಸುವ ಶಬ್ಧಗಳನ್ನು ಬಳಸುವ ಒಂದು ಪುಟ್ಟ ಯತ್ನ…ಪಕ್ಕಾ ಇದೇ ಅರ್ಥವೋ ಗೊತ್ತಿಲ್ಲ,ನನಗೆ ತಿಳಿದಂತೆ ಬರೆದಿದ್ದೇನೆ… 
ತೀಡು:ಅಳು,ಸಬರ:ಗುಂಪು,ಚಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು,ಮೇಲ್ಮೆತ್ತಿ:ಮೆತ್ತಿಯ ಮೇಲ್ಭಾಗ,ಮನೆಯ ಕೊನೆಯ ಹಂತ,ಕ್ವಾಳೆ-ಕತ್ತರಿಸಿದ ಗಿಡಗಂಟಿಯ ಉಳಿದ ಭಾಗ,ಕೋಳೆ..)

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮೂದಿಸಿ..
ತಪ್ಪು ತಿದ್ದಿಕೊಂಡು ಬೆಳೆಯಲು ಸಹಕರಿಸಿ :)
ನಮಸ್ತೆ.
-ಚಿನ್ಮಯ ಭಟ್ಟ

48 comments:

Shishir hegde said...

ಚೊಲೋ ಇದ್ದೋ ಅಣ್ಣ.. ಕೊನೆಯ ಪ್ಯಾರ ರಾಶೀ ಇಷ್ಟ ಆತು..

ಈಶ್ವರ said...

ಚೆನ್ನಾಗಿದೆ ಶಬ್ಧಗಳು. ಗೇಯತೆಯನ್ನು ಸ್ವಲ್ಪ ಗಮನಿಸಿ.

Shruthi B S said...

ತು೦ಬಾ ಚನಾಗಿದ್ದು ಚಿನ್ಮಯ್... ನಿನ್ನ ಈ ಸಾ೦ತ್ವಾನ ಕವಿತೆ ಕೇಳಿ ನಿನ್ನ ಗೆಳತಿಗೆ ಬಹಳಷ್ಟು ಸಮಧಾನ ಆಗಿಕ್ಕು... ಈ ಕಹಿಯನ್ನು ಒಪ್ಪಿಕೊ೦ಡು ಮು೦ದುವರೆಯುವ ಶಕ್ತಿ ಅವಳಿಗೆ ಸಿಗಲಿ ಅ೦ತ ಹಾರೈಸ್ತಿ.....

suhas said...

Its good Chinmay.. Practice more so that you get more and more fluency in this :)

Imran said...

Well ,well ,well ... ನಿನ್ನ ಹೊಸಹೊಸ ಪದಪುಂಜಗಳನ್ನ ನೋಡಿದ ಕೂಡಲೇ ನಮ್ಮೊಳಗಿನ ಓದುಗ, ವಿಮರ್ಶಕ{ಒಂದ್ ವೇಳೆ ಇದ್ರೆ} completely ಕೋಮಾ ಸ್ಟೇಜ್ ಗೆ, ಹೋಗ್ತಾನೆ. ಇಂಥಹ ವಯಸ್ಸಿಗೇ ಮೀರಿದ ಕವನಗಳನ್ನ ಕೊಟ್ಟು, "ತಪ್ಪಿದರೆ ತೀಡಿ, ತಪ್ಪಿದ್ರೆ ತೀಡಿ " ಅಂತಾ ಪ್ರೀತಿಯಿಂದ ಪೀಡಿಸಿ, ನಮ್ಮನ್ನೇ "ತೀರಾ ಚಿಕ್ಕವರನ್ನಾಗಿಸುವ" ನಿನಗೆ "ವಾಮನ ಮೂರ್ತಿ" ಅಂತ ಕರೆಯುವ ಆಸೆ ಆಗಿದೆ :P Sooooooooperb .

ನಾನು ಕನ್ನಡದಲ್ಲಿ ತುಂಬಾನೇ ವೀಕೂ :( ನನ್ನ ಸಹಿಸಿಕೋ

ಧನ್ಯವಾದಗಳು :D

balasubramanya said...

ಗೆಳತಿಯನ್ನು ಸಂತೈಸಲು ಇಷ್ಟು ಸಾಕು, ಈ ಕವಿತೆಯನ್ನು ಓದಿದರೆ ಯಾವ ಗೆಳತಿತಾನೆ ಸಂತಸ ಪಡದೆ ಇರುತ್ತಾಳೆ . ನಿಮ್ಮ ಕವಿತೆಯಲ್ಲಿ ನಮಗೆ ಬಹಳಷ್ಟು ಹೊಸ ಪದಗಳ ಪರಿಚಯ ಆಗುತ್ತಿದೆ, ಅದಕ್ಕೆ ಕಿರೀಟವಿಟ್ಟಂತೆ ಹೊಸ ಪದಗಳಿಗೆ ಅರ್ಥ ಸಹಿತ ಕೊಟ್ಟು ಕವಿತೆ ಅರ್ತವಾಗುವಂತೆ ಮಾಡುವ ನಿಮ್ಮ ಜಾಣ್ಮೆಗೆ ಅಭಿನಂದನೆಗಳು ಚಿನ್ಮೈ .ನಿಮ್ಮ ಪಯಣ ನಿರಂತರ ಹೀಗೆ ಸಾಗಲಿ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

ಜಲನಯನ said...

ಚಿನ್ಮಯ್
ಬಹಳ ಸುಂದರ ಭಾವ ಮತ್ತೆ ಪದಬಳಕೆ. ಗ್ರಾಮೀಣ ಹಿನ್ನೆಲೆಯ ಪದಗಳ
ಬಳಕೆ ನನಗೆ ಬಹಳ ಇಷ್ಟ ಆಯ್ತು.

ಸುಬ್ರಮಣ್ಯ said...

:-)

Dr.D.T.Krishna Murthy. said...

ಕವಿತೆ ಚೆನ್ನಾಗಿ ಮೂಡಿಬಂದಿದೆ ಚಿನ್ಮಯ್.ನಿಮ್ಮ ಸಾಧನೆ ಮುಂದುವರಿಯಲಿ.

ಮೌನರಾಗ said...

ಚಿನ್ಮಯ್...ಸಾಂತ್ವನದ ರೀತಿ ಬಂದಿರೋ ಕವಿತೆ ಬಾಳ ಇಷ್ಟ ಆಯಿತು...
ಚೆನ್ನಾಗಿದೆ..

ಪದ್ಮಾ ಭಟ್ said...

ತುಂಬಾ ಚೆನ್ನಾಗಿ ಬರೀದೆ.. ನೋವಿನಿಂದ ಬಳಲಿದ ಜೀವಕ್ಕೆ ಈ ಸಾಂತ್ವನ ಹೇಳದು ತುಂಬಾನೇ ಪ್ರಮುಖ ಪಾತ್ರ ವಹಿಸ್ತು.. ಜೀವನಾನೇ ಬೇಡ ಅಂತ ಹೊರಟವ್ರನ್ನೂ ಬದುಕಿಸುವ ಅದ್ಭುತ ಶಕ್ತಿ ಇದ್ದು ಸಾಂತ್ವನಕ್ಕೆ.."ಮದರಂಗಿ ಮಸುಕಾದರೇನಂತೆ ಮುಂಗೈಲಿ ಅಂಗೈಯ್ಯ ಗೆರೆಯಂದ ಅಳಿಸೀತೇ"...ತುಂಬಾ ಚಂದದ ಸಾಲು..

Anushanth said...

ಚೆನ್ನಾಗಿದೆ ಚಿನ್ಮಯ್...ನಿಮ್ಮ ಕವಿತೆಯೂ ಇಷ್ಟ ಆಗುತ್ತದೆ, ನನಗಿಂತ ಕಿರಿಯರಿಲ್ಲ ಅಂತ ದಾಸರಂಥ ಮಹಾನುಭಾವರು ಪರಿಪಾಲಿಸಿದ ವಿನಯದ ಭಾವ ತುಂಬಾ ಆಪ್ತ ಅನ್ನಿಸ್ತ್ತದೆ... ಕೊರತೆಯ ನೆರಳಾಗಿರುವ ವಿನಯ ಸಮೃದ್ಧಿಯಲ್ಲೂ ಜೊತೆಗಿರಲಿ...ಒಳ್ಳೆಯದಾಗಲಿ....

ಗಿರೀಶ್.ಎಸ್ said...

ನಾಳಿನಾಸೆಯನು ಬಣ್ಣದ ರಂಗೋಲಿಯಾಗಿರಿಸು... ಇಂಥ ಆಶಾಭಾವನೆಯ ಸಾಂತ್ವಾನ ಎಂಥವರನ್ನು ಪುಟಿದೇಳಿಸುತ್ತದೆ..ಚೆನ್ನಾಗಿದೆ ಚಿನ್ಮಯ್...

ಅಂದ ಹಾಗೆ ಮುಂದಿನ ಪರೀಕ್ಷೆಗಳನ್ನು ಚೆನ್ನಾಗಿ ಬರೆ ಎಂದು ಆಶಿಸುತ್ತೇನೆ ...

Ashok.V.Shetty, Kodlady said...

ಸುಂದರ ಕವನ....ನಿಮ್ಮ ಪದಗಳ ಬಳಕೆಯಲ್ಲಿ ವಿಶಿಷ್ಟತೆ ಇರುತ್ತೆ.....ಇಷ್ಟ ಆಯಿತು ಕಣ್ರೀ.....

All the best for your Exams......

Badarinath Palavalli said...

ವಾವ್ ಕವಿಯೇ ನಿನ್ನ ಆಶಯಕ್ಕೆ ನನ್ನ ಶರಣು.

"ಹಜಾರ ಬಳೆಯುಂಟು ಇನ್ನೂ ಆ ಮಾಲೆಯಲಿ" ಎಂತಹ ಮಾತು!

ಕವನದ ಹುಟ್ಟಿಗೆ ಕಾರಣ, ಆನಂತರ ಕವನ ಮತ್ತು ಅಡಿಗೆ ಪದಾರ್ಥ ನಿಮ್ಮ ಶೈಲಿ ನನಗೂ ಮಾದರಿಯಾಗಲಿ.

ಚಿನ್ಮಯ ಭಟ್ said...

ಶಿಶಿರಾ,
ಸ್ವಾಗತ ನಮ್ಮನೆಗೆ :)..
ಮೊದಲ ಕಮೆಂಟು..ನಂಗೂ ತುಂಬಾ ಇಷ್ಟ ಆಯ್ತು ನಿಮ್ಮ ಅನಿಸಿಕೆ ನೋಡಿ :)..
ಹಾಂ.. ಇದರ ಕೊನೆ ಪ್ಯಾರಾ ಅಂದ್ರೆ ನನಗೆ ಒಂಥರಾ ಇಷ್ಟ ..ಒಂಥರಾ ಬೇಜಾರು...ಇಷ್ಟ ಯಾಕಂದ್ರೆ ಅಲ್ಲಿ ನನಗೆ ಕೆಲವು ನಮ್ಮ ಕಡೆ ಬಳಸುವ ಪದಗಳನ್ನು ಬಳಸುವ ಸವಲತ್ತು ಸಿಕ್ಕಿದ್ದಕ್ಕೆ...ಬೇಜಾರು ಯಾಕಂದ್ರೆ ಪದಗಳನ್ನಾ ಬಳಸೋ ಭರದಲ್ಲಿ ಹಾದಿ ತಪ್ಪಿದೇನಾ ಅನ್ನೋ ಗೊಂದಲ..
ಯಾಕೋ ಒಂಥರಾ ಒಂದಡಿ ಮೇಲೆ ಹೋಗಿ ಬರೆದ ಸಾಲುಗಳವು...
ಧನ್ಯವಾದನಪಾ...
ಬರ್ತಾ ಇರು...
ಖುಷಿ ಆತು...
ನಮಸ್ತೆ :)

ಚಿನ್ಮಯ ಭಟ್ said...

ಈಶ್ವರ ಭಟ್ರೇ,
ಮೊದಲು ಧನ್ಯವಾದ ನಿಮ್ಮ ಪ್ರೀತಿಪೂರ್ವಕ ಸಲಹೆಗಳಿಗೆ,ಮಾರ್ಗದರ್ಶನಕ್ಕೆ..
ಖಂಡಿತ ಇದರಲ್ಲಿ ಗೇಯತೆಯನ್ನು ನಾನು ಗಮನಿಸಲೇ ಇಲ್ಲಾ :(..
ನೀವು ಹೇಳಿದ ಮೇಲೆ ನಂಗೂ ನಿಜ ಅನಿಸಿತು..
ನಿಮ್ಮ ಮಾತು ನಿಜ..
ಯಾವುದೇ ಕವಿತೆಗೂ ಗೇಯತೆ ಇದ್ದರೇ ಚೆನ್ನ..
ಅದಕ್ಕೊಂದು ಚೆಂದದ ನಿರೂಪಣೆ,ಚೌಕಟ್ಟು ಇದ್ದರೆ ಓದಲು ಬಲು ಚೆನ್ನ...
ಇನ್ನು ಮುಂದೆ ಖಂಡಿತ ಆ ಕಡೆ ಗಮನ ಕೊಡುತ್ತೇನೆ...
ತುಂಬಾ ಖುಷಿಯಾಯ್ತು ನಿಮ್ಮ ಮಾತು ಕೇಳಿ...
ಇದೇ ತರಹ ನನ್ನನ್ನು ತಿದ್ದುತ್ತಿರಿ..
ಮುಂದೇಯೂ ಕೂಡಾ ಇದೇ ತರಹ ನನ್ನ ತಪ್ಪುಗಳನ್ನು ಹೇಳಿ ನನಗೆ ಬೆಳೆಯಲು ಮಾರ್ಗದರ್ಶನ ಮಾಡುವಿರೆಂಬ ನಂಬಿಕೆಯಲ್ಲಿದ್ದೇನೆ..
ಬರ್ತಾ ಇರಿ ಅಣ್ಣಾ :)
ನಮಸ್ತೆ :)

Sudeepa ಸುದೀಪ said...

ಚಿನ್ಮಯ್ , ಹೊಸ ಹೊಸ ಪದಗಳ ಜೊತೆ ಸಾಲುಗಳು ಚೆನ್ನಾಗಿ ಮೂಡಿಬಂಡಿದೆ...

ಚಿನ್ಮಯ ಭಟ್ said...

ಶೃತಿ,
ಖಂಡಿತ ..ಇದರ ಹಿಂದಿನ ಕಥೆ ಒಂಥರಾ ಮಜಾ ಇದೆ..
ಮೊನ್ನೆ ಗೆಳೆಯ ಪ್ರಥ್ವಿ ರೂಮಿಗೆ ಬಂದು, ಹೊರಡುವಾಗ
"ಚಂದಿರ ಮೊದಲು ಚೆನಾಗಿ ಕಾಣ್ಸ್ತಾ ಇದ್ನಲ್ಲೋ ..ಈಗ ಎಲ್ಲೋ ಹೋದ "ಎಂದ..
ಅವನನ್ನ ಕಳಿಸಿ ಬಂದವನಿಗೆ ಯಾಕೋ ಚಂದಿರ ಮರೆಯಾದ ಎನ್ನುವ ಶಬ್ಧ ಬಹಳ ಇಷ್ಟವಾಯ್ತು,ಅಲ್ಲೇ ಪಟ್ಟಿಯ ತುದಿಯಲ್ಲಿ ಬರೆದಿಟ್ಟೆ..ಹಂಗೆ ಮರುದಿನ ಇನ್ನೊಂದೆರಡು ಸಾಲು ಹೊಳೆದು ಏನನ್ನೋ ಕಳೆದುಕೊಂಡವರ ಬಗ್ಗೆ ,ಅವರಿಗೆ ಸ್ಪೂರ್ತಿ ಕೊಡೋ ಅಂಥದ್ದು ಏನಾದ್ರೂ ಬರೆಯೋಣ ಅನಿಸಿತು..ಮೊದಲೇ ಬರೆದಿದ್ದ ಸಾಲು ಇತ್ತಲ್ಲಾ ಅದ್ನೇ ಮುಂದುವರೆಸಿದೆ..ಜೊತೆಗೆ ಈಗೀಗ ಯಾಕೋ ಹುಡುಗಿಯನ್ನು ಕವಿತೆಯಲ್ಲಿ ಬಳಸೋಕೆ ತುಂಬಾ ಇಷ್ಟ ಆಗ್ತಿದೆ !!! ಅದ್ಕೇ ಅಲ್ಲಿ ಗೆಳತಿ ಬಂದಳು..ಭಾವ ಸ್ಪಷ್ಟವಾಯ್ತು..
ಕೊನೆಗೆ ಒಂದು ಪ್ಯಾರಾ ಸೇರಿಸಿ ಬರೆದು ಬ್ಲಾಗಿಸಿದೆ ಅಷ್ಟೆ..
ಧನ್ಯವಾದ ನಿನ್ನ ಪ್ರೋತ್ಸಾಹಕ್ಕೆ...
ಭಾಳ ಖುಷಿ ಆತು...
ಬರ್ತಾ ಇರು..
ನಮಸ್ತೆ

ಚಿನ್ಮಯ ಭಟ್ said...

ಸುಹಾಸ್ ಜೀ...
ಸ್ವಾಗತ ಮತ್ತೊಮ್ಮೆ ನಮ್ಮನೆಗೆ..
ನಿಮ್ಮ ಮಾತು ನಿಜ..
ಇನ್ನೂ ಅನುಭವ ಬೇಕೇ ಬೇಕು...ಅದು ಜೀವನದ ಅನುಭವ+ ಬರವಣಿಗೆಯ ಅನುಭವ..
ಜೀವನದ ಕಥೆ ಗೊತ್ತಿಲ್ಲ,ಬರವಣಿಯಲ್ಲಿ ಒಂದಿಷ್ಟು ಹುಚ್ಚು ಪ್ರಯತ್ನಗಳು ಆಷ್ಟೇ..
ಬರೆದರೆ ಏನೋ ಒಂದು ಖುಷಿ ಅಷ್ಟೇ!!!
ಮುಂದೇನೋ ಗೊತ್ತಿಲ್ಲ...ಪ್ರಯತ್ನವಂತೂ ಮಾಡುತ್ತೇನೆ :) :)
ಧನ್ಯವಾದ ನಿಮ್ಮ ಪ್ರತಿಕ್ರಿಯೆಗಾಗಿ :)
ಬರ್ತಾ ಇರಿ..
ನಮಸ್ತೆ..

ಚಿನ್ಮಯ ಭಟ್ said...

ರಾಘವ ಅವ್ರೆ..
ಈ ಸಹಿಸಿಕೋ ಅನ್ನುವ ಮಾತುಗಳೆಲ್ಲಾ ಅಜೀರ್ಣವಾಗಬಹುದು ನೋಡಿ ಸಾರ್..ಜೀರ್ಣಿಸಿಕೊಳ್ಳುವುದು ತುಸು ಕಷ್ಟ..ನನಗಂತೂ ನಿಮ್ಮ ಮಾತುಗಳೆಂದರೆ ತುಂಬಾ ಇಷ್ಟ..ನಿಮ್ಮ ಅನಿಸಿಕೆಗಳನ್ನು ಓದೊದ್ರಲ್ಲೇನೋ ಒಂದು ಚುಂಬಕ ಶಕ್ತಿಯಿದೆ,ಅದು ಬಹುಷಃ ನೀವು ಬಳಸುವ ಬಿಂದಾಸ್ ಮಾತುಗಳಿಂದಿರಬಹುದೇನೋ!!!
ಧನ್ಯವಾದ ಗುರುಗಳೇ...
ನಿಮ್ಮ ಅನಿಸಿಕೆಗಳನ್ನ ನೋಡೋದೇ ಒಂದು ಹಬ್ಬ..
ನನ್ ಕೇಳೋದಾದ್ರೆ ಪ್ರತಿಯೊಬ್ಬನಲ್ಲೂ ಒಬ್ಬ ವಿಮರ್ಶಕ ಇದ್ದೇ ಇರ್ತಾನೆ..
ಅದು "ಥೂ ಚೆನಾಗಿಲ್ಲ" ,"ಪರ್ವಾಗಿಲ್ಲ" ,"ಚೆನಾಗಿದೆ", ಅಧ್ಭುತ" ಎನ್ನುವುದರಿಂದ ಹಿಡಿದು,ಅದರ ಬಗ್ಗೆ ಯೆ ಪುಟಗಟ್ಟಳೇ ಬರೆಯುವವರೆಗೂ ಇರಬಹುದು...ಹಾಗಾಗಿ ನಿಮ್ಮ ಮೇಲಂತೂ ನನಗೆ ನಂಬಿಕೆಯಿದೆ(ಕೋಮಾಕ್ಕೆ ಹೋಗಲ್ಲಾ ಅಂತಾ!!ಹಾ ಹಾ )
ಎಲ್ಲರೂ ವೀಕು,ಎಲ್ಲರೂ ಸ್ಟ್ರಾಂಗೇ...
ಧನ್ಯವಾದ ನಿಮ್ಮ ಅಭಿಪ್ರಾಯಗಳನ್ನು ಹೇಳಿ ನನ್ನನ್ನು ಉತ್ತೇಜಿಸಿದ್ದಕ್ಕೆ...
ತುಂಬಾ ಖುಷಿಯಾಯ್ತು ...
ಬರ್ತಿರಿ...ಈ ಬ್ಲಾಗಿಗೆ ನಿಮ್ಮ ಅಮೂಲ್ಯವಾದ ಅನಿಸಿಕೆಗಳಿಂದ ಬಣ್ಣ ತುಂಬುತ್ತಿರಿ...
ನಮಸ್ತೆ :)

Srikanth Manjunath said...

ಸಾಂತ್ವನ ಹೇಳುವ ಕಣ್ಣಲ್ಲಿ ಪದಗಳಲ್ಲಿ ಆಂತರಿಕ ತುಮುಲಗಳು ಕಳಕಳಿಯ ರೂಪದ ಪದಗಳಾಗಿ ಹರಡಿದರೆ ಹಪ್ಪಳದಷ್ಟೇ ತೆಳ್ಳಗಿದ್ದರೂ ಕರಿದಾಗ ಅರಳುವಂತೆ ರುಚಿ ನೀಡುತ್ತದೆ...ಅಂತಹ ಪದಗಳು ಮನಕ್ಕೆ ಧೈರ್ಯ ಹೇಳುತ್ತಲೇ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವ, ಉತ್ತೇಜಿಸುವ ಕೆಲಸವನ್ನು ಮಾಡುತ್ತಿವೆ..ಅಭಿನಂದನೆಗಳು...

ಚಿನ್ಮಯ ಭಟ್ said...

ಬಾಲು ಸರ್,
ಮೊದಲು ವಂದನೆಗಳು ಅಕ್ಕರೆಯ ಅನಿಸಿಕೆಯನ್ನು ಬರೆದಿದ್ದಕ್ಕೆ :)..
ಇನ್ನು ಪದಗಳ ಬಗ್ಗೆ ನಂಗೇನೂ ಜಾಸ್ತಿ ಗೊತ್ತಿಲ್ಲ..ಏನೋ ನಮ್ಮ ಕಡೆ ಬಳಕೆಯಲ್ಲಿರುವ ಪದಗಳನ್ನು ಬರಹದಲ್ಲಿ ಬಳಸುವ ಪ್ರಯತ್ನವಷ್ಟೇ..ಈ ಭರದಲ್ಲಿ ಕವಿತೆಯ ಭಾವ,ಆಕಾರಕ್ಕೆಲ್ಲಿ ಭಂಗ ಬರುತ್ತಿದೆಯೋ ಗೊತ್ತಿಲ್ಲ..ಏನೋ ಎಂದು ಪ್ರಯೋಗ..ಆದರೆ ಅದರ ಬಳಕೆಯಂತೂ ಭಾಳ ಖುಷಿಕೊಡುತ್ತಿದೆ...ಬರಿಯ ಮಾತಿನಲ್ಲಿದ್ದ ಶಬ್ಧಗಳನ್ನು,ಓದುವಾಗ ಏನೋ ಒಂದು ಆನಂದ ನೋಡಿ..
ಇನ್ನು ಆಶಯ..
ಆ ಸಂದರ್ಭದಲ್ಲಿ ಇದ್ದರೆ ನಾನೇನು ಮಾಡ್ತೀನೋ ಗೊತ್ತಿಲ್ಲ,ಆದರೆ ಬೇಜಾರಲ್ಲಿರುವವರಿಗೆ ಒಂದಿಷ್ಟು ಭರವಸೆ ತರಿಸುತ್ತದೆಯೇನೋ ನನ್ನ ಬರಹ ಎನ್ನುವ ಆಸೆ...

ಏನೋ ಕಳೆದುಕೊಂಡೆನೆಂದು ತಲೆ ಮೇಲೆ ಕೈ ಹೊತ್ತು ಕೂತವರಿಗೆ ನನ್ನ ಒಂದೆರಡು ಚಿಲ್ಲರೆ ಮಾತುಗಳು ಸ್ಪೂರ್ತಿಯಾದರೆ ನಾನು ಧನ್ಯ........

ಧನ್ಯವಾದ ಸಾರ್..
ಎಂದಿನಂತೆ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ.,
ನಮಸ್ತೆ :)

ಚಿನ್ಮಯ ಭಟ್ said...

ಆಜಾದ್ ಸಾ,
ಧನ್ಯವಾದ ಸಾ ನಿಮ್ಮ ಪ್ರೋತ್ಸಾಹಕ್ಕೆ..
ಅದೇನೋ ಗೊತ್ತಿಲ್ಲ ಕೆಲವೊಂದು ಗ್ರಾಮೀಣ ಪದಗಳ ಸೊಗಡೇ ಬೇರೆ..
ಒಂದೊಂದು ಪದವೂ ಅದೆಷ್ಟು ನೆನಪನ್ನು ಹೇಳುತ್ತದೆಯೋ..
ನಾನು ಆ ಥರಹದ ಪದಗಳನ್ನು ಹುಡುಕುತ್ತಾ ಹೋದಾಗ ದಾರಿ ಮಧ್ಯದಲ್ಲಿ ಸಿಕ್ಕ ಕೆಲಪದಗಳಿವು.. ಅವುಗಳನ್ನು ಬಳಸಿದ್ದೇನಷ್ಟೇ..ನಮಗೋ ಅರ್ಜಂಟು ನೋಡಿ..
ಪೂರ್ತಿ ದಾರಿ ಸವೆಸುವ ಜಾಯಮಾನವೇ ಅಲ್ಲಾ..ಎಷ್ಟು ಸರಿಯೋ ತಪ್ಪೋ ಗೊತ್ತಿಲ್ಲ,ನಿಮ್ಮ ಮುಂದಿಟ್ಟಿದ್ದೇನೆ..ಮುಂದಿನದನ್ನೂ ನೀವೇ ಹೇಳಬೇಕು..
ಧನ್ಯವಾದ ಸಾ ಬಂದಿದ್ದಕ್ಕೆ..
ಬರ್ತಾ ಇರಿ :)
ನಮಸ್ತೆ :)

ಚಿನ್ಮಯ ಭಟ್ said...

ವಂದನೆಗಳು ಸುಬ್ರಹ್ಮಣ್ಯ ಮಾಚಿಕೊಪ್ಪಜೀ...ಬರ್ತಿರಿ :)

ಚಿನ್ಮಯ ಭಟ್ said...

ಡಾಕ್ಟ್ರೇ..
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ..
ಖಂಡಿತ ನನ್ನ ಕೈಲಾದ ಪ್ರಯತ್ನವನ್ನಂತೂ ಮಾಡುತ್ತಾ ಇರುತ್ತೇನೆ..
ಧನ್ಯವಾದ ಬರ್ತಿರಿ..
ನಮಸ್ತೆ ..

ಚಿನ್ಮಯ ಭಟ್ said...

ಸುಷ್ಮಾ,
ಧನ್ಯವಾದ ಕಣೆ ಬಂದಿದ್ದಕ್ಕೆ...
ಸಾಂತ್ವನದ ರೀತಿ ಬಂದಿದೆ ಅಂದ್ಯಲ್ಲಾ..ಗೊತ್ತಿಲ್ಲ ಕಣೆ..ಏನೋ ಬರ್ದಿರದು ಅಷ್ಟೇ..
ಖುಷಿಯಾಯ್ತು ಬಂದಿದ್ದು..
ಬರ್ತಾ ಇರು..
ನಮಸ್ತೆ..

ಚಿನ್ಮಯ ಭಟ್ said...

ಪದ್ಮಾ ಭಟ್,
ಸ್ವಾಗತ ನಮ್ಮನೆಗೆ ಮತ್ತೊಮ್ಮೆ...
ನಿಜವಾಗಿಯೂ ನಿಮ್ಮ ಮಾತು ಸತ್ಯ..
ಎಷ್ಟೇ ತಿಳಿದಿದ್ದರೂ,ಎಷ್ಟೇ ಅನುಭವವವಿದ್ದರೂ ಕೆಲವೊಮ್ಮೆ ಮನಸ್ಸು ಓಡದೇ ಸುಮ್ಮನಿದ್ದಾಗ ಯಾರೋ ಹೇಳಿದ ಮಾತು,ಯಾವುದೋ ಒಂದು ವಾಕ್ಯ ಅವರಿಗೆ ಹೊಸ ದಾರಿ ತೋರಬಲ್ಲದು ಎಂಬುದನ್ನು ಕೇಳಿದ್ದೇನೆ..ಗೊತ್ತಿಲ್ಲ...
ಇನ್ನು ಆ ಸಾಲು...
ಅದರಲ್ಲಿ ಮೊದಲು ಹೊಳೆದದ್ದು ಅಂಗೈ ಅನ್ನುವುದು..ಬಹುಷಃ ನಮ್ಮ ಅಂಗೈಯ್ಯೇ ನಮಗೆ ಎಲ್ಲ ಕೆಲಸಗಳಿಗೆ ಸ್ಪೂರ್ತಿ..ಹಾಗಾಗಿ ಸ್ಪೂರ್ತಿಯ ಚಿನ್ಹೆಯಾಗಿ ಅಂಗೈ ಬಳಸಬಹುದು ಎಂದುಕೊಂಡೆ..ಮುಂದೆ ಮುಂಗೈ ಅಂದರೆ ಹೊರಜಗತ್ತಿಗೆ ನಾವು ಹೇಗೆ ತೋರುತ್ತೇವೆ ಎಂಬುದು..ಹಾಗಾಗಿ ಮುಂಗೈಯನ್ನು ಸೇರಿಸಿದೆ.ಅದೆರಡ ಮಧ್ಯೆ ಒಂದು ಕೊಂಡಿ ಬೇಕಿತ್ತು..ಹೊರಜಗತ್ತಿಗೆ ಏನೆನಿಸಿದರೇನು,ಮೊದಲು ನಮ್ಮಲ್ಲಿ ಆ ಹೊಸ ಚೈತನ್ಯ,ಚಿಚ್ಛಕ್ತಿ ಬರಬೇಕು ಅನಿಸಿತು..ಹಾಗಾಗಿ ಮದರಂಗಿ ಅಂದರೆ ಹೊರಜಗತ್ತು,ಅಂಗೈಗೆರೆ ಅಂದರೆ ನಮ್ಮ ವ್ಯಕ್ತಿತ್ವ..ನಮ್ಮತನ..ಅವುಗಳನ್ನು ಸೇರಿಸಿದೆ..ಅದನ್ನು ಪೂರ್ತಿ ಮಾಡಿದ ಮೇಲೆ ಮದರಂಗಿ ಮಸುಕಾದರೆ ಎನ್ನುವದು ಮದುವೆ ಮುರಿದದನ್ನು ಹೇಳುತ್ತದೆ ಎಂದೆನಿಸಿತು...ಹಾಗಾಗಿ ಆ ಸಾಲುಗಳು ಆಷ್ಟೇ..
ಧನ್ಯವಾದಗಳು ಚಂದರ ಅನಿಸಿಕೆಯನ್ನು ಬರೆದಿದ್ದಕ್ಕೆ...
ಬರುತ್ತಿರಿ..ಬಂದು ಈ ಪುಟವನ್ನು ಅಂದಗೊಳಿಸುತ್ತಿರಿ :)
ನಮಸ್ತೆ..

ಚಿನ್ಮಯ ಭಟ್ said...

ಮೇಡಮ್,
ಧನ್ಯವಾದ ನಿಮ್ಮ ಆಶೀರ್ವಾದಕ್ಕೆ :)
" ಕೊರತೆಯ ನೆರಳಾಗಿರುವ ವಿನಯ ಸಮೃದ್ಧಿಯಲ್ಲೂ ಜೊತೆಗಿರಲಿ."
ಇಷ್ಟವಾಯಿತು ಈ ಸಾಲುಗಳು...
ಖಂಡಿತ ಪ್ರಯತ್ನವನ್ನಂತೂ ಮಾಡುವೆ..
ಬರುತ್ತಿರಿ..
ನಮಸ್ತೆ ...

ಚಿನ್ಮಯ ಭಟ್ said...

ಗಿರೀಶ್,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)...
ಹಾಂ ಅದು ರಂಗವಲ್ಲಿಯನ್ನಿಟ್ಟು ಎಂಬುದು ಕೊನೆಯ ಸಾಲಾಗಬೇಲು ಅಂದುಕೊಂಡಿದ್ದೆ,ಅದಕ್ಕೆ ಕನಸುಗಳನ್ನು ಸೇರಿಸಿದರೆ ಹೇಗೆ ಎಂದೆನಿಸಿತು..ಆಮೇಲೆ ಯಾಕೋ ಮತ್ತೆ ಬೇಡವೆನೆಸಿ,ಆಸೆಯನ್ನು ಸೇರಿಸಿದೆ..ಬಹುಷಃ ಜೀವನವೂ ಹಂಗೆ ಅಲ್ವಾ..ಕನಸುಗಳಿಲ್ಲದಿದ್ದರೆ,ಏನು ಛಂದ????
ಅವುಗಳೇ ನಮಗೆ ನಾಳೆಗೆ ಬಣ್ಣ ತರುವವವು..
ವಂದನೆಗಳು ಗಿರೀಶ್..
ಬರ್ತಿರಿ.,.
ಖುಷಿಯಾಯ್ತು :)
ನಮಸ್ತೆ ..

ಚಿನ್ಮಯ ಭಟ್ said...

ಅಶೋಕ ಸರ್,
ಸ್ವಾಗತ ಮತ್ತೊಮ್ಮೆ ಈ ಪುಟಕ್ಕೆ...
ಧನ್ಯವಾದಗಳು ಸಾರ್..
ನಾನೇನೋ ಗೀಚಿದ್ದನ್ನು ಇಷ್ಟಪಟ್ಟೆ ಎಂದಿದ್ದಕ್ಕೆ,
ಆ ಮೂಲಕ ನನ್ನನ್ನು ಪ್ರೋತ್ಸಾಹಿಸಿದ್ದಕ್ಕೆ :)..
ಹಾಂ ಒಂದು ಮಾತು..ನಾನಿನ್ನೂ ಬರವಣಿಗೆಗೆ ಹೊಸಬ(ಅನುಭವದಲ್ಲೂ)..
ಹಾಗಾಗಿ ಒಂದಿಷ್ಟು ರಾಶಿ ತಪ್ಪುಗಳನ್ನು ಮಾಡಿರುತ್ತೇನೇನೋ..ಎಲ್ಲಾದರೂ ತಪ್ಪುಗಳು-ಸುಧಾರಿಸಬೇಕಾದ ಅಂಶಗಳು ಕಂಡರೆ ದಯವಿಟ್ಟು ಹೇಳಿ ಆಯ್ತಾ??
ತಿದ್ದಿಕೊಳ್ತೀನಿ :)...
ಧನ್ಯವಾದ
ಬರ್ತಿರಿ..
ಹಾಂ ಪರೀಕ್ಷೆನೂ ಚೆನಾಗ್ ಬರ್ಯೋ ಪ್ರಯತ್ನ ಮಾಡ್ತೀನಿ..ಯಾವ್ದಕ್ಕೂ ಪ್ರಶ್ನೆ ಪತ್ರಿಕೆ ತೆಗೆಯವರಿಗೆ ದೇವರು ಒಳ್ಳೆ ಮನಸ್ಸು ಕೊಟ್ಟಿರ್ಲಪ್ಪಾ ಅಂತಾ ಕೇಳ್ಕೊತಿನಿ...ಹಾಹಾ

ನಮಸ್ತೆ :)

ಚಿನ್ಮಯ ಭಟ್ said...

ಬದರಿ ಸರ್..
ನಮಸ್ತೆ..
ಧನ್ಯವಾದ ನಿಮ್ಮ ಶಬ್ಬಾಸ್ ಗಿರಿಗೆ..
ಅದನ್ನು ಒಪ್ಪಿಕೊಳ್ಳುವಷ್ಟು ದೊಡ್ಡವ ನಾನು ಹೌದೋ ಅಲ್ಲವೂ ಗೊತ್ತಿಲ್ಲ..ಬಹುಷಃ ಅಷ್ಟು ದೊಡ್ಡ ಮಾತುಗಳಿಗೆ ಯೋಗ್ಯನಲ್ಲವೇನೋ ನಾನು..
ಇರ್ಲಿ,ದೊಡ್ಡವರ ಆಶೀರ್ವಾದ :) :)..

ಹಮ್ ಇನ್ನು ಆ ಸಾಲು..
ಬದರಿ ಸರ್..ಏಷ್ಟೋಂದು ವಿಚಿತ್ರ ಅಲ್ವಾ ನಮ್ಮ ಮನಸ್ಸು ??
ನಮ್ಮ ಕಣ್ಣ ಮುಂದೆಯೇ ಇನ್ನೂ ಸಾಲು ಸಾಲು ಅವಕಾಶಗಳಿರುತ್ತವೆ..
ಆದರೆ ನಾವು ಎಲ್ಲೋ ಕಳೆದು ಹೋದ ಒಂದು ಅವಕಾಶಕ್ಕಾಗಿ ,ಒಂದು ಸೋಲು,ನಿರಾಶೆಗಾಗಿ ದುಃಖಪಡುತ್ತಾ ಕೂತಿರ್ತಿವಿ...ಅದನ್ನು ಬಿಟ್ಟು ಮುಂದಿನದನ್ನು ಯೋಚನೆಯೇ ಮಾಡವುದಿಲ್ಲ..
ಹಾಗಾಗಿ ಆ ಸಾಲು..
ಮೊದಲು ನೂರಾರು ಅಂತಾ ಬಳಸಣಾ ಅಂದ್ಕೊಂಡೆ..ಆಮೇಲೆ ಯಾಕೋ ಹಜಾರ್ ಶಬ್ಧ ನೆನಪಾಯ್ತು..ಜೊತೆಗೆ ಮಲಾರದ ಕೆಳಗೆ ಹಜಾರವಿದ್ದರೆ ನೋಡಲು ಚೆನ್ನ ಅನಿಸಿತು..ಹಾಗಾಗಿ ಬಳಸಿದೆ...
ಧನ್ಯವಾದ ಸಾರ್..
ನಿಮ್ಮ ಪ್ರೋತ್ಸಾಹ ಯಾವತ್ತಿಗೂ ಹಂಗೇ ಇರಲಿ...ಸಖತ್ ಖುಷಿಯಾಯ್ತು..
ನಮಸ್ತೆ :)

ಚಿನ್ಮಯ ಭಟ್ said...

ಸುಮತಿ ಅಕ್ಕಾ,
ಧನ್ಯವಾದ ಅಕ್ಕಾ ನಿಮ್ಮ ಪ್ರೋತ್ಸಾಹಕ್ಕೆ :)..
ಅದೇನೋ ಹುಚ್ಚು ಬರಿ ಮಾತಿನಲ್ಲಿ ಬಳಕೆಯಲ್ಲಿರುವ ಪದವನ್ನು ಬರಹಕ್ಕಿಳಿಸುವುದು..
ಖುಷಿಯಾಯ್ತು..
ಬರ್ತಾ ಇರಿ..
ತಪ್ಪುಗಳೇನಾದರೂ ಇದ್ರೆ ಮರೆಯದೇ ತಿಳಿಸಿ..
ನಮಸ್ತೆ :)

ಚಿನ್ಮಯ ಭಟ್ said...

ಶ್ರೀಕಾಂತ ಅವ್ರೇ ,
ತುಮುಲ ಆಹಾ..ಈ ಶಬ್ದವೇ ಒಂಥರಾ ಇಷ್ಟ.,..ಅದೆಷ್ಟೋ ಭಾವನೆಯನ್ನು ಹೇಳುವ ಪದವದು..
ಇನ್ನು ನಿಮ್ಮ ಉಪಮೆಯಂಥೂ ಜಿಲೇಬಿ..
ಅಲ್ಲಾ ಸಾರ್..ಹಪ್ಪಳವೆಲ್ಲಿ,ಎಣ್ಣೆಯಲ್ಲಿ..ಯಪ್ಪಾ...ಧನ್ಯೋಸ್ಮಿ...
ಖಂಡಿತ ನಿಮ್ಮ ಮಾತು ಸತ್ಯ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಬೇಕು ಎನ್ನುವುದು..
ಧನ್ಯವಾದ ಶ್ರೀ..
ಎಂದಿನಂತೆ ಅಂದದ,ಚಂದದ ಕಮೆಂಟಿಗಾಗಿ...
ಬರುತ್ತಿರಿ..
ಪ್ರೀತಿಯಿಂದ ಪ್ರತಿಕ್ರೀಯಿಸಿದ ಎಲ್ಲರಿಗೂ ಮತ್ತೊಮ್ಮೆ ವಿನಯಪೂರ್ವಕ ಧನ್ಯವಾದಗಳು..
ನಮಸ್ತೆ :)

ಸಂಧ್ಯಾ ಶ್ರೀಧರ್ ಭಟ್ said...

ಪಕ್ಕದಲ್ಲೇ ಕುಳಿತು ಸಾಂತ್ವನ ಹೇಳುವಂತ ಗೀತೆ .. ಚೆನ್ನಾಗಿದೆ... ಜಾನಪದ ದ ಶೈಲಿಗೆ ಒಗ್ಗುವಂತಿದೆ ಎನಿಸುತ್ತಿದೆ

ಚಿನ್ಮಯ ಭಟ್ said...

ಸಂಧ್ಯಕ್ಕಾ,
ಧನ್ಯವಾದ ನಮ್ಮನೆಗೆ ಬಂದಿದ್ದಕ್ಕೆ,,,,
ಖುಷಿ ಆಯ್ತು...ನಿಮ್ಮ ಪ್ರೋತ್ಸಾಹ ಹಿಂಗೇ ಇರ್ಲಿ...
ಬರ್ತಾ ಇರಿ..
ನಮಸ್ತೆ :)

Swarna said...

ಹಜಾರ ಬಳೆಯುಂಟು ಮಲಾರದಲಿ
ಸೊಗಸಾದ ಕಲ್ಪನೆ. ಆ ಮನಕ್ಕೆ ಶಾಂತಿ ಸಿಗಲಿ
ಬರೆಯುತ್ತಿರಿ. ನಿಮ್ಮ ಕವನಗಳಿಗೆ ತಮ್ಮದೇ ಆದ ಒಂದು ವೈಶಿಷ್ಟ್ಯವಿದೆ

ಚಿನ್ಮಯ ಭಟ್ said...

ಮೇಡಮ್,,
ಧನ್ಯವಾದ ನಿಮ್ಮ ಆಶೀರ್ವಾದಕ್ಕೆ :)...
ಬರೆಯುವ ಪ್ರಯತ್ನ ಖಂಡಿತ ಮಾಡುತ್ತೇನೆ..
ಬರ್ತಾ ಇರಿ..
ನಮಸ್ತೆ...

Anonymous said...

ನಿಮ್ಮ ಕವಿತೆಯಲ್ಲಿ ವಿಶಿಷ್ಟತೆ ಇರುತ್ತೆ .. ಅದು ಓದುಗಾರನ ಮನಸೆಳೆಯುತ್ತದೆ ... ಪದ ಪ್ರಯೋಗಕ್ಕೆ ಭೇಶ್ ಎನ್ನಲೇಬೇಕು ....
ಹುಸೇನ್

ಚಿನ್ಮಯ ಭಟ್ said...

ಹುಸೇನ್ ಜೀ,
ಸ್ವಾಗತ ನಮ್ಮನೆಗೆ :)
ಏನೋ ದೊಡ್ಡ ಮಾತು ಆಡಿದ್ರೇನೋ..ಗೊತ್ತಿಲ್ಲ..
ಧನ್ಯವಾದ..ಖುಷಿಯಾಯ್ತು ನಿಮ್ಮ ಮಾತಿನಿಂದ..
ಬರ್ತಾ ಇರಿ..
ನಿಮ್ಮ ಅನಿಸಿಕೆಗಳನ್ನಾ ಹೇಳಿ ಇದೇ ಥರಾ ಉತ್ತೇಜನ ಕೊಡ್ತಾ ಇರಿ :)..
ಹಾಂ ಮತ್ತೆ ನಿಮ್ಮ ನ್ಯಾನೋ ಕಥೆಗಳು ನನಗೆ ತುಂಬಾ ಇಷ್ಟ..ಬಹುಷಃ ಇಂದಿನ ಅರ್ಜಂಟಿನ ಯುಗದಲ್ಲಿ ಅವು ಬಹಳ ಮಹತ್ವವಾದವು ಅನಿಸುತ್ತದೆ..ಚಿಕ್ಕ ಸಮಯದಲ್ಲಿ ಓದುಗನ ತಲೆಯೊಳಗೆ ಹೋಗುವ ಶೈಲಿ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ ...
ಬರೆಯುತ್ತಿರಿ ನೀವೂ ಸಹಾ..
ನಮಸ್ತೆ..

ಮನಸು said...

ಸಾಂತ್ವಾನ ಗೀತೆ ತುಂಬಾ ಚೆನ್ನಾಗಿದೆ... ನಿಮ್ಮ ಕವಿತೆಯ ಹಾದಿ ಸರಾಗವಾಗಿ ಸಾಗಲಿ... ಶುಭವಾಗಲಿ

ಚಿನ್ಮಯ ಭಟ್ said...

ಮೇಡಮ್,
ಮತ್ತೊಮ್ಮೆ ಸ್ವಾಗತ ನಮ್ಮನೆಗೆ :)..
ಧನ್ಯವಾದ ನಿಮ್ಮ ಆತ್ಮೀಯವಾದ ಹಾರೈಕೆಗೆ...
ನಿಮ್ಮ ಆಶೀರ್ವಾದ ಹೇಗೆಯೇ ಇರಲಿ..
ಖುಷಿಯಾಯ್ತು..
ಬರ್ತಿರಿ..
ನಮಸ್ತೆ :)..

ಶ್ರೀವತ್ಸ ಕಂಚೀಮನೆ. said...

ಇಷ್ಟವಾಯಿತು...
ಹೊಸ ಹೊಸ ಶಬ್ದಗಳನ್ನು ಎಲ್ಲಿಂದ ಹುಡುಕಿ ತರ್ತೀರಿ ಚಿನ್ಮಯ್...

ಚಿನ್ಮಯ ಭಟ್ said...

ಶ್ರೀವತ್ಸಜೀ,
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ....
ಬರ್ತಾ ಇರಿ..
ಕ್ಷಮಿಸಿ..ಪರೀಕ್ಷೆ ಗಡಿಬಿಡಿಯಲ್ಲಿ ಪ್ರತಿಕ್ರಿಯಿಸಲಾಗಲಿಲ್ಲ...
ಖುಷಿಯಾಯ್ತು ಬಂದಿದ್ದು...
ನಮಸ್ತೆ

ಸತೀಶ್ ನಾಯ್ಕ್ said...

ಸುಮಾರು ಜನರ ಹಲವು ಪೋಸ್ಟ್ ಗಳ ನಡುವೆ ನಿಮ್ಮ ಕವನದ ಅಪ್ಡೇಟ್ ಮರೆಯಾಗಿತ್ತು.. ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ ಚಿನ್ಮಯ್.

ಬಹಳ ಚೆಂದದ ಕವನ. ಸಾಂಧರ್ಭಿಕ. ನಿಮ್ಮ ಭಾಷಾ ಬಳಕೆ ಮತ್ತು ಹೊಸ ಪದಗಳ ಪರಿಚಯ ಕೂಡ ಸುಂದರ. ಬರವಣಿಗೆ ಇನ್ನೂ ಹೆಚ್ಚೆಚ್ಚ್ಚು ಬರಲಿ. ಇಷ್ಟವಾಯ್ತು. :)

ಚಿನ್ಮಯ ಭಟ್ said...

ಅಯ್ಯೋ ತೊಂದ್ರೆ ಇಲ್ಲಾ ಸತೀಶ್...
ಬಂದಿರಲ್ಲಾ...ಅದೇ ಸಂತೋಷ...
ಬರ್ತಾ ಇರಿ :)...
ನಮಸ್ತೆ...

Vasanthkumar Perla said...

ಚಿನ್ಮಯ,
ನಿಮ್ಮ ಕವನಗಳ ನೋಡಿದೆ.. ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳಿಗೆ ಸೂಕ್ತವಾದ ಪದಗಳನ್ನು ಹಿಡಿದು ಅವನ್ನು ಅಭಿವ್ಯಕ್ತಿಸಿದ್ದೀರಿ. ಹೀಗೆ ನಿರಾಡಂಬರವಾಗಿ ಒಜ್ಜೆಯಿಂದ ಪ್ರಾಮಾಣಿಕವಾಗಿ ಯಾವುದೇ ಅನಿಸಿಕೆಗಳು ಬಂದರೂ ಅವು ಮನಸ್ಸನ್ನು ಆರ್ದ್ರಗೊಳಿಸುತ್ತವೆ. ಒಂದು ಕ್ಷಣ ’ಓಹೋ..! ಹೀಗೂ ಯೋಚಿಸಬಹುದಲ್ಲವೇ..’ ಅಂತ ಚಿಂತಿಸುವಂತೆ ಅವು ಒತ್ತಾಯಿಸುತ್ತವೆ. ಹೊಸ ಬರವಣಿಗೆಗಳು ಇಷ್ಟು ಮಾಡಿದರೂ ಸಾಕಲ್ಲವೇ... ?

ವಂದನೆಗಳು.

ನಿಮ್ಮವ,

(ಡಾ.ವಸಂತಕುಮಾರ ಪೆರ್ಲ)

Unknown said...

Hi anna
mast ide kavana nammora (sirsi) padagalanna (kwale , melmetti ) keli tumba khishi aytu . keep continue writing.....
waiting for ur further kavanas


Thank you