Wednesday, February 13, 2013

ಹಿಂಗೊಂದು ಪ್ರೇಮ ಪತ್ರ.


ಗೆ,
ಬರಿ ಹೆಸರಲ್ಲಿ ಬಣ್ಣಿಸಲಾಗದ ನನ್ನ ಹುಡುಗಿಗೆ.

ಇಂದ,
ಶಬ್ಧಗಳೆಲ್ಲಾ ಬತ್ತಿ ಬರಿದಾದ ನಿನ್ನ ಹುಡುಗನಿಂದ.

ಎಯ್,
                   ವಿಷಯ:ವಿಷಯವಿಲ್ಲದೇ ದಿನವಿಡೀ ಹರಟಬಹುದು ಕಣೆ,ವಿಷಯವಿದ್ದರೇ ತುಸು ಕಷ್ಟ.
 ಗೊತ್ತು ಕಣೆ ನಾ ನಿನಗೆ,ನೀ ನನಗೆ.ಆದರೇನೋ ಹೇಳಬೇಕೆನಿಸಿದೆ
ನಿನಗೆ ಗೊತ್ತಿರುವುದನ್ನೇ ನಾ ,ಪದಗಳಲ್ಲಿ ಬರೆಯಬೇಕೆನಿಸಿದೆ…..
ದಿನಾ ತಡರಾತ್ರಿಯವರೆಗೂ ಮಾಡುತ್ತಿದ್ದ ಮೆಸ್ಸೇಜಿನಲ್ಲೇ ನಾ ಹೇಳಬಹುದಿತ್ತೇನೋ ನಾನು,
“hmm…..” ,
“then…”,
 “wassup????? “ ಗಳ ಬದಲು..
ಆದರೇಕೋ ಬರೆವ ಅಕ್ಷರ ನನ್ನದಲ್ಲವೆನಿಸಿದೆ
ನಗುವಾಗಲೂ,ಅಳುವಾಗಲೂ ಒಂದೇ ಥರ ಇರುವ ಅಕ್ಷರ ಬೇಡವೆನಿಸಿದೆ
ಇನ್ನು ಫೇಸ್ಬುಕ್ಕು,ಜೀಮೇಲುಗಳಿವೆಯೇನೋ ನಿಜಆದರೆ ಅವೂ ನನ್ನದಲ್ಲವೆನಿಸಿದೆಯಾರೋ ಕದ್ದು ಕೇಳುವ ಭೀತಿ ನನ್ನ ಕಾಡಿದೆ
ನೋಡು ಹುಡುಗಿ ಇದು ನಿನಗಾಗಿನಿನ್ನೊಬ್ಬಳಿಗಾಗಿ….
ಅದೇನೋ ಗೊತ್ತಿಲ್ಲ ಕಣೆ..
ನನ್ನ ಕೈಯ್ಯಾರೆ, ನನ್ನಕ್ಷರದಲೆ ಮೊದಲ ಪ್ರೇಮಪತ್ರವ ಬರೆಯಬೇಕೆನಿಸಿದೆ..
ನೂರಾರು ಬಾರಿ ಗೀಚಿ,ಹತ್ತಾರು ಬಾರಿ ಹರಿದು,ಮತ್ತೆ ಮತ್ತೆ ಬರೆಯಬೇಕೆನಿಸಿದೆ
ಕೈ ನಡುಗಬಹುದು...ಅಕ್ಷರವು ಕಾಗೆ ಕಾಲು ಗುಬ್ಬಿ ಕಾಲಾಗಬಹುದು,ನಿನ್ನೊಲವ ಕಂಪನದಿಂದ..
ಅರ್ಥವಾಗುವುದು ಆದರೂ ಅಲ್ಲವೆ ನಿನಗೆ????
ಛೇ,ಬಿಡೆ….ಒಂದೆರಡು ಬಾರಿ ಭೂಮಿ ಆಕಾಶ ನೋಡಿ,ತಲೆಕೆರೆದುಕೊಂಡಾಗಲೇ, “ಯಾಕೋ??Take it Easy “ ಅಂದವಳಲ್ಲವೇ ನೀನು??… J
ನಿನಗೆಲ್ಲವೂ ಗೊತ್ತು,ಆದರೂ ನಾನೇ ಹೇಳಬೇಕು ಅಲ್ವಾ??
ಸರಿಗಂಡು ಹುಳುವಾಗಿ ನಾನೇ ಹೇಳುತ್ತಿದ್ದೇನೆ ಕೇಳು
           ಪೀಯು. ಹುಡುಗಿಯರ ಗ್ವಾಲೆಯಲಿ,ಕಣ್ಣು ಕುಕ್ಕಿದವಳು ನೀನು
                ಕುಡಿಮೀಸೆ ಮೂಡುವಾಗಲೇ ,ನನ್ನವಳೆನಿಸಿದವಳು ನೀನು
                ಹೂ-ದುಂಬಿಯ ಕವನದಲಿ,ಹೂವಾಗಿ ಕಂಡವಳು ನೀನು
                ಮನದುಂಬಿ ಬಂದ ಮಾತೆಲ್ಲ,ಕೇಳಿಸಿಕೊಂಡವಳು ನೀನು

ಛೇ,ಇವಷ್ಟೇ ಹೇಳಿದರೆ ಯಾವುದೋ ಹಳೆಯ ಕಥೆಯಂತಿದೆ ಅಲ್ವಾ???
ಚೆನ್ನಾಗಿ ಕಂಡ ಐಸ್ ಕ್ರೀಮೆಲ್ಲಾ ತಿನ್ನಲು ಬೇಕೆನಿಸುವ ವಯಸ್ಸಿನಲ್ಲಿ ಹಿಮವಾಗಿ ಸೇರಿ ಒಂದೆರಡು ತಿಂಗಳಿಗೆ ಕರಗಿ ಹೋದ ಕಥೆಯಲ್ಲ ಕಣೆ ಇದುಆ ನಿನ್ನ ಸೆಳೆತ ಧ್ರುವ ಪರ್ವ ಬಿಂದು..ಕಾಲವೆಷ್ಟೇ ಆದರೂ ನೀರೊಡೆಯದು ಕಣೆ ಅದು,ನೀರೊಡೆಯದು
ಚಾಕಲೇಟಿನ ಕನಸು ಮುಗಿದು ಹೊಸ ಹೊಸ ಬಣ್ಣ ಬಣ್ಣದ ಕನಸು ಬೀಳುವ ಹೊತ್ತಲ್ಲವಾ ಅದು???
ಅದೆಷ್ಟು ಬಾರಿ ಹೇಳಿದ್ದೆ,ನೀನಗೆ ಆ ನೀಳಕೂದಲ ಬಿಳಿಗೆಂಪು ಹುಡುಗನಾ ಕನಸನ್ನ
ಆ ಕನಸ ಕಥೆ ಕೇಳಿ ಅಲ್ಲವೇ ನಾನೂ ಉದ್ದ ಕೂದಲು ಬಿಟ್ಟಿದ್ದು
ರಜೆಯಲ್ಲಿ ಮನೆಗೆ ಹೋದಾಗ ಅಪ್ಪನ ಹತ್ತಿರ ಬೈಸಿಕೊಂಡಿದ್ದು
ಮರುದಿನ ಮಿಲಿಟರಿ ಕಟ್ಟು ಮಾಡಿಸಿಕೊಂಡು ಬಂದಾಗ ಅದೆಷ್ಟು ನಕ್ಕಿದ್ದೆ..”ಯಾರೋ ನೀನು?” ಅಂತೆಲ್ಲಾ ಕೇಳಿ ಅದೆಷ್ಟು ರೇಗಿಸಿದ್ದೆ.
ಮುಂದೆ ನಾ ವಿಜ್ನಾನಕೆ ಸಲಾಮು ಹೊಡೆದು ಕಲೆಯ ಹಾದಿ ಹಿಡಿದೆನಲ್ಲವೇ???
ಡಿಗ್ರಿಯ ಆ ದಿನಗಳುಏನೆಂದು ಹೇಳಲಿ ನಾ

    ತನ್ನ ಹೆಸರಲ್ಲಿ ಪುಸ್ತಕವ ತಂದು ಓದೆಂದು ಕೊಟ್ಟವಳು ನೀನು
                ನನ್ನಯಾ ಯೋಚನೆಗಳಿಗೆ ಸ್ಪೂರ್ತಿಯ ಸರಕಾಗಿ ನಿಂತವಳು ನೀನು
                ನನ್ನೆಲ್ಲ ಪುಟಗೋಸಿ ಬರಹವಾ ಓದಿ, “ ನಾ ನಿನ್ನ ಅಭಿಮಾನಿಎಂದವಳು ನೀನು
                ನಾ ಎಲ್ಲ ಬಲ್ಲವನೆಂದು ಕೊಚ್ಚಿಕೊಂಡಾಗ,ಬಾಯ್ತುಂಬ ಬೈದವಳು ನೀನು
ಅದ್ಯಾಕೋ ಗೊತ್ತಿಲ್ಲ ಕಣೆ..
ಎಲ್ಲ ಹೇಳುವಂತೆ ಕಾಲೇಜಿನಲ್ಲಿಕ್ರಷ್”,”ಲವ್ ಅಟ್ ಫಸ್ಟ್ ಸೈಟ್ಅನ್ನುವುದೆಲ್ಲ ಆಗಲೇ ಇಲ್ಲ ನನಗೆ….
ಮೊದಲೇ ಆಗಿ ಬಿಟ್ಟಿತ್ತೇನೋ ಬಿಡು,ನನಗೇ ಗೊತ್ತಿಲ್ಲದಂತೆ
ನಿನಗಿಂತ ಚೆನಾಗಿರುವವರು ಕಾಣಲಿಲ್ಲವಂತೇನಲ್ಲಆದರೇಕೋ ನಿನ್ನಷ್ಟು ಕಾಡಿಸಲಿಲ್ಲ ಕಣೆ ಹುಡುಗಿ ಅವರ್ಯಾರೂ..ಬಂದು ಹೋಗಿ ಬಿಟ್ಟರು ಅಷ್ಟೇ
ಹಮ್..ನನಗೂ ಗೊತ್ತು ,ನಿನಗೂ ಗೊತ್ತು ಆದೇಕೆ ಅವಾಗ ಒಂದು ವಾರ ಮಾತು ಬಿಟ್ಟಿದ್ದೆವೆಂದು
ಬಿಟ್ಟಿರಲಾರದೇ ಮತ್ತೆ ಜೊತೆಯಾದೆವೆಂದು
ಅದೆಷ್ಟು ಚೆನ್ನ ಹುಡುಗಿ ಗೆಳತಿಯ ಗುಂಪೊಡನೆ ನೀ ಸಿಕ್ಕರೆ ,ಸುಮ್ಮನೆ ಪರಿಚಯದ ನಗೆಯಾಡಿ ನಾ ಹೋಗುವಂತದ್ದು
ಸ್ಟೇಡಿಯಮ್ಮಿನ ಮೇಲುಗಡೆ ಇಬ್ಬರೇ ಇರುವಾಗ ಗಂಟೆಗಟ್ಟಲೇ ಊರ ಮೇಲಿನ  ಸುದ್ದಿಯೆಲ್ಲಾ ಹಲುಬುವಂತದ್ದು
ಬೇಲಿಯ ರಾಕ್ಷಸ ಪರಂಗಿ ಎಲೆಯ ಮೇಲೆ ಇಬ್ಬರ ಹೆಸರನ್ನೂ ಗೀರುವಂತದ್ದು….
ಬೇರೆಯವರಿಗೆ ಕಾಣಿಸುವುದೆಂದು ಅಲ್ಲೇ ಸಿಗಿದು ಹಾಕುವಂತದ್ದು
ಅದೆಷ್ಟು ನೆನಪುಗಳೋ ಹೀಗೇ ಹೇಳುತ್ತಾ ಹೋದರೆ

                          ಕಣ್ಣಲ್ಲೇ ಕೂತಿದ್ದ ಕಣ್ಣೀರ ಗುರುತಿಸಿ,ಅದನೊರೆಸಿದವಳು ನೀನು
                                ದಾರಿತಪ್ಪಿದವನೆಂದು ಮಂಕಾಗಿ ಕುಳಿತಾಗ,ಹಾದಿ ನೆನಪಿಸಿದವಳು ನೀನು
                                ಆ ಮೂರು ವರುಷವನು,ಮೂರು ಮರೆಯದ ಕನಸಾಗಿಸಿದವಳು ನೀನು
                                ಕೊನೆಯ ದಿನ ಉಟ್ಟ ಸೀರೆಯಲಿ ,ನನ್ನ ಮದುವೆಕೂಸಾಗಿ ಕಂಡವಳು ನೀನು

ಹಿಂಗಾಡಿ ಹಂಗಾಡುವುದರೊಳಗೆ ಕಾಲೇಜೇ ಮುಗಿಯಿತಲ್ಲೆ
ನೀ ಮುಂದೆ ನಿನ್ನಿಷ್ಟದ ಮಾಯಾನಗರಿಯ ಸೇರಿದೆಯಲ್ಲೆ
ನಾ ಉಳಿದೆ ಇಲ್ಲೆ
ನೋಡೆದೆ ಕಣೆ ನಾ ಡಿಗ್ರಿ ಬಳಿಕ ಜಗತ್ತನ್ನ ಮತ್ತೆಅದೆಷ್ಟು ಬದಲಾವಣೆಗಳು ಅಬ್ಬಾ
ಅದಾವ ಗೆರೆಯು ಕೈಗೂಡಿತೋ,ಬರೆಯುವುದೊಂದು ನನ್ನದಾಯಿತು..
ಬರೆದು ಹರಿದು,ಹರಿದು ಬರೆದ ಬರಹಗಳು ದೊಡ್ಡವರಿಗಿಷ್ಟವಾಯ್ತು
ಮತ್ತೆ ಅಲೆದೆ,ಬರೆದೆ..ಓದಿದೆ,ಬರೆದೆ..ಅಲೆದೆ..
ಓದೇ ಅನ್ನವಾಯ್ತುಪುಸ್ತಕಗಳೇ ಉಸಿರಾಯ್ತುಅನುಭವವೇ ಆಸ್ತಿಯಾಯ್ತುಬರವಣಿಗೆ ವ್ರತವಾಯ್ತು
ಕೊನೆಗೊಂದು ದಿನ ಕೈ ಹಿಡಿಯಿತು ಅದೂ ನಿನ್ನಂತೆ
ಈಗೇನೋ ಒಂದಿಷ್ಟು ಪ್ರಶಸ್ತಿ ಅವು ಇವು ಕಪಾಟಿನಲ್ಲಿದೆ
ಮನೆಗೆ ಸಾಕಾಗುವಷ್ಟು ದುಡಿವ ಕೆಲಸ ಕೈಯ್ಯಲ್ಲಿದೆ
ನಾಳೆಗೊಂದಿಷ್ಟು ದುಡ್ಡು ಬ್ಯಾಂಕಿನಲ್ಲಿದೆ
ಆದರೆ……..ನೀನು????
ಬರಿಗಣ್ಣಿನಿಂದ ನಿನ್ನ ನೋಡದೇ ಎಷ್ಟು ತಿಂಗಳಾಯ್ತೇ??ಇಪ್ಪತ್ತಿರಬೇಕು ಅಲ್ವಾ??..
ಏನು ಮಾಡಲಿ ಹೇಳು..ನಾನಿರುವುದು ಇದೇ ಕೊಂಪೆಯಲ್ಲಿ
ನೀ ಇರುವೆ ಆ ಮಾಯಾನಗರಿಯಲಿ..
ಇರಲಿ ಹುಡುಗಿ ರಾತ್ರಿ ಫೋನಿನಲ್ಲಾದರೂ ಸಿಗುವೆಯಲ್ಲಾ ಅದೇ ಸಂತೋಷ ನನಗೆ
ಶನಿವಾರ,ರವಿವಾರ ನೆಟ್ಟಿನಲ್ಲಿ ಸಿಕ್ಕು,ವಾರದ ಸುದ್ದಿಯಲ್ಲಾ ಖರ್ಚು ಮಾಡುವೆವಲ್ಲಾ ಅದೇ ಖುಷಿ ಎನಗೆ..
ಆದರೂ ಯಾಕೋ ನೀನು ಬೇಕೆನಿಸಿದೆ
ನೀನಿಲ್ಲದೇ ಈ ಜೀವ ಅಪೂರ್ಣವೆನಿಸಿದೆ
ಬಾ ಹುಡುಗಿ……
ಸುಮ್ಮನೆ ಎಲ್ಲರಂತೆ ನಾಳೆಯ ಬಗ್ಗೆ ನಾ ಕನಸ ಕಟ್ಟಿ ಹೇಳಲಾರೆ ಇಲ್ಲಿ..ಅದು ನನ್ನೊಬ್ಬನ ಕನಸಾದೀತು ನಿನ್ನ ಕೇಳದೇ..
ಜೊತೆಗೂಡೆ ಕನಸ ಕಟ್ಟುವಾ ಬಾ
ಜೊತೆಗೂಡೆ ಅದನು ನನಸಾಗಿಸುವಾ ಬಾ..
ಕನಸ ನನಸಾಗಿಸಲು ದುಡಿದು,ದುಡಿದು ಜೀವ ತೈಯ್ಯುವಾ ಬಾ
ಒಟ್ಟಿಗೇ ದೇವರಿಗಿಡುವ ಗಂಧ,ಚಂದನವಾಗುವಾ ಬಾ

ಏಯ್ ನೋಡೆನೀ ನನಗೆ ಪರಿಚಯವಾಗಿ ಹತ್ತು ವರುಷವಾಯ್ತು..
ನನ್ನವಳೆಂದು ನಾ ತಿಳಿದೂ ಹತ್ತು ವರುಷವಾಯ್ತು..
ಆದರೇಕೋ ಎಂದೂ ಪ್ರೇಮಪತ್ರವ ಬರೆಯಬೇಕೆನಿಸಿರಲಿಲ್ಲ..
ಇಂದೇಕೆ ಬರೆಯ ಹೊರಟೆ?? ಅದೂ ಗೊತ್ತಿಲ್ಲ
ಗೊತ್ತಿದ್ದು ನಾ ಮಾಡಿದ ಕೆಲಸ ಯಾವುದಿದೆ ಬಿಡು!!!
                                     
          ನನ್ನೆಲ್ಲ ಎಡಬಲವ ಬಲ್ಲವಳು ನೀನು.
                                                ನನ್ನೊಲವ ಕಲರವದ ಸಂಗೀತ ನೀನು.
                                                ನನ್ನದೆಯ  ಬಡಿತವಾಗಿಹೆ ನೀನು,
                                                ಹೇಳಲಿ ಇನ್ನೇನು???
                                                ಒಂದಾಗಿ ನಡೆಯೋಣ ಬಾ ಇನ್ನು
ಇದುವೆ ಎನ್ನ ಪ್ರೇಮ ನಿವೇದನೆ
ಅಲ್ಲಲ್ಲ ಆತ್ಮ ನಿವೇದನೆ

ಸ್ಥಳ: ಒಂದಿಷ್ಟು ಹೃದಯದಿಂದ,ಒಂದ್ಚೂರು ನೆನಪಿನಿಂದ                                          ಇತಿ ನಿನ್ನ ನಿನ್ನವ,
ದಿನಾಂಕ: ನೀ ಕನಸಲ್ಲಿ ಬಂದ ಅನುದಿನ                                                            ---------


=============================================================================================
*********************************************************************************************
ಶಬ್ಧಾರ್ಥ:ಗ್ವಾಲೆ=ಗುಂಪು,ಕಾಗೆ ಕಾಲು ಗುಬ್ಬಿ ಕಾಲು ಅಕ್ಷರ =ಸ್ಪುಟವಾಗಿಲ್ಲದ ಕೈಬರಹ,ಹಲುಬು,=ಮಾತನಾಡು
********************************************************************************************

ಹಮ್... ಇದು ಪಕ್ಕಾ ದಾರಿ ತಪ್ಪಿ ಬಂದ ಪ್ರೇಮ ಪತ್ರ!!!!
ಗಾಬರಿ ಆಗ್ಬೇಡಿ...
ಆಗಿದ್ದಿಷ್ಟೇ...
ಪ್ರಜಾವಾಣಿಯಲ್ಲೊಂದು ಪ್ರೇಮ ಪತ್ರ ಬರೆಯುವ ಸ್ಪರ್ಧೆ ಇದೆ ಅಂತಾ ಬ್ಲಾಗಿಗ ಮಿತ್ರ ಶ್ರೀ ವತ್ಸ ಕಂಚೀಮನೆಯವರು ತಿಳಿಸಿದ್ದರು ಡಿಸೆಂಬರಿನಲ್ಲಿ..."ಹುಂ" ಎಂದವನಿಗೆ ಮತ್ತೆ ನೆನಪಾಗಲಿಲ್ಲ ಅದು...ಮತ್ತೆ ಜನವರಿ ಮಧ್ಯದಲ್ಲೆಲ್ಲೋ ಸುಮನಕ್ಕ ಮೆಸ್ಸೆಜು ಮಾಡಿ "ಹಿಂಗಿದೆ ಕಣೊ,ಬರ್ಯದಾದ್ರೆ ಬರಿ" ಎಂದು ಅಡ್ರೆಸ್ಸನ್ನೂ ಕಳಿಸಿದ್ಲು...
ಇಲ್ಲಪ್ಪಾ ಮನೆಯಲ್ಲಿ ಏನನ್ನೂ ಬರೆಯಲು ಮನಸ್ಸೇ ಬರಲಿಲ್ಲ..ಅದೇಕೋ ಗೊತ್ತಿಲ್ಲ...ತೀರಾ ಅರಾಮವಾಗಿದ್ದೇನೆನಿಸಿದಾಗ ಬರೆಯಬೇಕೆನಿಸುವುದೇ ಇಲ್ಲ...ಮತ್ತೆ ವಾಪಸ್ಸು ಬಂದೆ ನೋಡಿ ಪ್ರಾಜೆಕ್ಟು,ಸೆಮಿನಾರು ಅಂತಾ ಚೂರು ತಲೆ ಬಿಸಿ ಶುರುವಾಯ್ತು..ಅದರ ಮಧ್ಯೆ ಒಂದು ಅಲ್ಪ ವಿರಾಮ ಈ ಬರಹ...ಅದಾವತ್ತೋ ಒಂದು ದಿನ ಮನೆಯಲ್ಲಿ ಕಷ್ಟಪಟ್ಟು ಒಂದು ಪುಟ ಬರೆದಿದ್ದೆ...ಅದನ್ನು ನಿನ್ನೆ ಪೂರ್ತಿಗೊಳಿಸಿ ಇವತ್ತು ನಿಮ್ಮೆದುರು ಇಟ್ಟಿದ್ದೇನೆ ಅಷ್ಟೇ...
ನನಗೆ ಈ ಪ್ರೇಮ ಪತ್ರ ಬರೆಯುವುದು ಓದುವುದೆಲ್ಲಾ ಹೊಸದು...
ಬರೆಯುವುದು ಕಡೆಗಾಯ್ತು,ಹಣೆಬರಕ್ಕೆ ಬರೆದ ಪತ್ರವನ್ನು ಓದಿದವನೂ ಅಲ್ಲ ನಾನು...
ಒಂದು ಪ್ರಯತ್ನ..
ಎಂದಿನಂತೆ ಒಂದಿಷ್ಟು ಕಲ್ಪನೆ..
ಬೇಡ ಬೇಡಾ ಅಂದರೂ ನುಸಿದು ಬರುವ ಕೆಲ ಶಬ್ಧಗಳು...
ಎಂದಿನಂತೆ ನೋಡಿ,ಹೆಂಗಿದೆ ಅಂತಾ ಹೇಳ್ತೀರಲ್ವಾ???
ಹಾಂ ನಿಮ್ಮ ಪ್ರೇಮ ಪತ್ರದ ಪ್ರಸಂಗಗಳೇನಾದ್ರೂ ಇದ್ರೂ ಬರಿರಿ ಒಂದಿಷ್ಟು ದಯವಿಟ್ಟು,....
ಕಾಯ್ತಿರ್ತೀನಿ ನಿಮ್ಮ ಕಮೆಂಟ್ ಗಳಿಗೆ...

49 comments:

Ittigecement said...

ಚಿನ್ಮಯ..

ತುಂಬಾ ಸೊಗಸಾಗಿದೆ...

ನನ್ನ ಕಾಲೇಜಿನ ದಿನಗಳು ನೆನಪಾದವು....

ಅಭಿನಂದನೆಗಳು ಚಂದದ..
ಸಕಾಲಿಕ ಪತ್ರಕ್ಕೆ....

ಸುಬ್ರಮಣ್ಯ said...

ಚನ್ನಾಗಿದೆ

Badarinath Palavalli said...

ಪ್ರೇಮ ಪತ್ರಗಳ ಪುಳಕ ಅನುಭವಿಸಿದವರಿಗೇ ಗೊತ್ತು ಚಿನ್ಮಯೀ. ಕೂಡಲೇ ಒಂದು ಪ್ರೇಮ ಪತ್ರ ಆಕೆಗೂ ರವಾನಿಸಿ ಬಿಡಿ.

ಒಟ್ಟಾರೆಯಾಗಿ ಈ ಬರಹ ನನಗೆ ಫ್ಲ್ಯಾಷ್ ಬ್ಯಾಕಿಗೆ ಕರೆದೊಯ್ತು.

ಅಂದಹಾಗೇ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆಯೇ?

ಸಂಧ್ಯಾ ಶ್ರೀಧರ್ ಭಟ್ said...

wow.. nice puttaa.. chennagiddu..

Unknown said...

Really nice ,i jus loved the way it flows..

Shruthi B S said...

ಚಿನ್ಮಯ್... ನಿನ್ನ ಪ್ರೇಮ ನಿವೇದನೆಯ ಅರ್ಜಿ ಬಹಳ ಚನ್ನಾಗಿದೆ.. ಮೊದಲಿನಿ೦ದ ಕೊನೆಯ ಸಾಲಿನವರೆಗೂ ಎಲ್ಲಾ ಸಾಲುಗಳು ಬಹಳ ಹಿಡಿಸಿತು..

balasubramanya said...

ಹ ಹ ಹ ಒಳ್ಳೆಯ ಪ್ರೇಮ ನಿವೇದನೆ, ಇದನ್ನು ಓದಿ ಯಾವ ಮಹಾರಾಣಿ ಚಿನ್ಮೈ ಗೆ ಒಲಿಯುತ್ತಾಲೋ ಕಾಣೆ . ಓದಿದರೆ ಹಳೆಯ ದಿನಗಳ ನೆನಪಾಗುತ್ತೆ , ರಸಿಕ ಚಿನ್ಮೈ ಗೆ ಜೈ ಹೊ ಅನ್ನೋಣ

ಚಿನ್ಮಯ ಭಟ್ said...

ಪ್ರಕಾಶಣ್ಣಾ,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)..
ಖುಷಿಯಾಯ್ತು...

ಚಿನ್ಮಯ ಭಟ್ said...

ವಂದನೆಗಳು ಸುಬ್ರಹ್ಮಣ್ಯ ಸರ್..

ಚಿನ್ಮಯ ಭಟ್ said...

ಬದರಿ ಸರ್...
ವಂದನೆಗಳು :)...
ಹಾಂ ಇದನ್ನಾ ಬರ್ದಿದ್ದೆ ೧೩ಕ್ಕೆ...
ಹಂಗಾಗಿ ಪತ್ರಿಕೆಗೆ ಕಳಿಸಲೇ ಇಲ್ಲ...
ಬರ್ತಾ ಇರಿ..
ನಮಸ್ತೆ :)

ಸತೀಶ್ ನಾಯ್ಕ್ said...

ಕವಿತೆಗಳಿಂದ ಪತ್ರದ ಕಡೆ ಹೊರಳಿರುವ ಚಿನ್ಮಯ್.. ಇಂದಿನ ದಿನ ಅಂದ್ರೆ ಫೆಬ್ರವರಿ ಹದಿನಾಲ್ಕನೇ ತಾರೀಕಿಗೆ ಸರಿಯಾಗಿ ಇದನ್ನ ಇಲ್ಲಿ ಭಿತ್ತರಿಸಿರೋದು ನೋಡಿದ್ರೆ ಒಂದು ಅನುಮಾನ.. ಇದನ್ನ ಸುಮ್ನೆ ಬರೆದದ್ದಾ.. ಅಥವಾ ಬೇಕು ಅಂತಲೇ ಬರೆದದ್ದಾ ಅಂತ..!! :D :D ಪತ್ರ ಗೀಚುವಲ್ಲಿ ಅವರ ವೃತ್ತಿಪರತೆ ಅಷ್ಟು ಡಾಳಾಗಿ ಕಾಣಿಸ್ತಾ ಇದೆ.

ಪತ್ರ ತುಂಬಾ ಚೆನ್ನಾಗಿದೆ ಚಿನ್ಮಯ್. ಮೊದಲ ಪ್ರೇಮ ಪತ್ರವೇ.. ಇಷ್ಟು ಭರ್ಜರಿಯಾಗಿ ಮೂಡಿ ಬಂದಿದೆ ಅಂದ್ರೆ.. ಅದೆಷ್ಟು ದಿನ ಇದರ ಕುರಿತು ಸಂಶೋದನೆ ಮಾಡಿರಲಿಕ್ಕಿಲ್ಲ ನೀವು..?? ಇನ್ಮೇಲೆ ನಿಮ್ ಬಳಿ ಪ್ರೇಮ ಪತ್ರಗಳ ಬರೆಸಿಕೊಳ್ಳುವ ಸಲುವಾಗಿ ಗಿರಾಕಿಗಳು ಜಾಸ್ತಿ ಆದರೂ ಆಗಬಹುದು. ಯಾವ್ದಕ್ಕೂ ಸ್ವಲ್ಪ ಹುಷಾರಾಗಿರಿ ಅಷ್ಟೇಯ. ತುಂಬಾ ಇಷ್ಟ ಆಯ್ತು ಚಿನ್ಮಯ್. I loved it.. :)

ಪರಿ said...

ತುಂಬ ಚೆನ್ನಾಗಿದೆ. ಮಲೆನಾಡಿನ ಪಯಣದಂತೆ ಮನಸ್ಶು ಹಸಿಮಾಡಿತು.

ಪರಿ said...

ತುಂಬ ಚೆನ್ನಾಗಿದೆ. ಮಲೆನಾಡಿನ ಪಯಣದಂತೆ ಮನಸ್ಶು ಹಸಿಮಾಡಿತು.

Srikanth Manjunath said...

ಪ್ರೇಮದ ಪತ್ರ ಹೇಗಿದ್ದರೂ ಚೆನ್ನ...ತಿದ್ದಿ ತೀಡಿ ಪುಟಕಿಟ್ಟ ಚಿನ್ನವಾದರೂ ಸರಿ...ಬಡಿದು ಬಡಿದು ಕಾಯಿಸಿ ಮತ್ತೆ ಬಡಿದು..ನಮಗೆ ಬೇಕಾದ ಆಕಾರಕ್ಕೆ ತಿರುಗಿಸಿಕೊಳ್ಳುವ ಕಬ್ಬಿಣದ ಕಂಬಿಯಾದರು ಸರಿ..ಎರಡರಲ್ಲೂ ಭಾವ ಪರವಶವಾಗಿರುತ್ತದೆ..ಹೃದಯದ ಭಾವನೆಗಳನ್ನ ಮೇಜಿನ ಮೇಲೆ ಹರಡಿ.ಬೇಕಾದ ಕ್ಷಣಗಳನ್ನು ಪದಗಳನ್ನಾಗಿ ಮೂಡಿಸುವ ಚತುರತೆ ನಿಮ್ಮ ಬರವಣಿಗೆಯಲ್ಲಿದೆ ಅಭಿನಂದನೆಗಳು ಚಿನ್ಮಯ್!

shridhar said...

Le Kudi Meese Huduga .. agdi iddo ..

Kiran Kumar said...

chennagide :)

ಶ್ರೀವತ್ಸ ಕಂಚೀಮನೆ. said...

ಇಷ್ಟವಾಯಿತು...

Sudeepa ಸುದೀಪ said...

ಚಿನ್ಮಯ್, ಚಂದದ ಪ್ರೇಮಪತ್ರ... :))

ಚಿನ್ಮಯ ಭಟ್ said...

ಧನ್ಯವಾದ ಸಂಧ್ಯಕ್ಕಾ :)

ಚಿನ್ಮಯ ಭಟ್ said...

ಅಲೋಕಜೀ,
ಸ್ವಾಗತ ನಮ್ಮನೆಗೆ :)
ಬರ್ತಿರಿ :)
ಧನ್ಯವಾದ :)

ಚಿನ್ಮಯ ಭಟ್ said...

ಶೃತಿ,
ಧನ್ಯವಾದನೇ :)

ಚಿನ್ಮಯ ಭಟ್ said...

ಬಾಲು ಸರ್ ...
ಆಹಾ ಧನ್ಯವಾದ ನಿಮ್ಮ ಆಶೀರ್ವಾದಕ್ಕಾಗಿ :)...

ಚಿನ್ಮಯ ಭಟ್ said...

ಸತೀಶ್,
ಯಪ್ಪಾ..ಅಂತೂ ಇಂತೂ ಲವ್ ಗುರು ಮಾಡಿಬಿಟ್ರಿ ನನ್ನಾ!!!!
ಹಂಗೆನಿಲ್ಲಾ ಸತೀಶ್ ಏನೋ ಎಂದು ಪ್ರಯತ್ನ ಅಷ್ಟೇ :)...
ಕವನಗಳು..
ಹಮ್..ಏನ್ ಹೇಳ್ಳಿ ಗೊತ್ತಾಗ್ತಿಲ್ಲಾ...ಅದ್ನಾ ಬರಿಲೇ ಬೇಕು :)D..
ಧನ್ಯವಾದ ಬಂದಿದ್ದಕ್ಕೆ...
ಚಂದದ ಕಮೆಂಟನ್ನು ಬರ್ದಿದ್ದಕ್ಕೆ :)..
ನಮಸ್ತೆ :)

ಚಿನ್ಮಯ ಭಟ್ said...

ಪರಿ ,
ಸ್ವಾಗತ ನಮ್ಮನೆಗೆ :)..
ಖುಷಿಯಾಯ್ತು ನಿಮ್ಮ ಮಾತು ನೋಡಿ :)..
ಬರ್ತಿರಿ :)..
ನಮಸ್ತೆ :)

ಚಿನ್ಮಯ ಭಟ್ said...

ಶ್ರೀ,
ಅದೇನೋ ಗೊತ್ತಿಲ್ಲ...
ನಿಮ್ಮ ಕಮೆಂಟ್ ಓದುವುದೇ ಚೆನ್ನ...
ನಾವು ಯಾವುದೋ ಭಾವ ಇಟ್ಟುಕೊಂಡು ಬರೆದರೆ ,ನೀವು ಅದಕ್ಕೊಂದಿಷ್ಟು ಅಂದದ ಉಪಮೆಗಳು ಕೊಟ್ಟುಬಿಡುತ್ತೀರಿ..
ಬರುತ್ತಿರಿ :)
ಧನ್ಯವಾದ :)

ಚಿನ್ಮಯ ಭಟ್ said...

ಶ್ರೀಧರಣ್ಣಾ...
ಧನ್ಯವಾದನೋ :)...
ಖುಷಿ ಆತು ..

ಚಿನ್ಮಯ ಭಟ್ said...

ಕಿರಣ್ ಜೀ,
ಸ್ವಾಗತ ನಮ್ಮನೆಗೆ..
ತುಂಬಾ ದಿನಗಳ ನಂತರ ಬಂದ್ರಿ ಅನ್ಸತ್ತೆ..
ಖುಷಿ ಆಯ್ತು :)..
ಬರ್ತಿರಿ :)
ನಮಸ್ತೆ :)

ಚಿನ್ಮಯ ಭಟ್ said...

ವಂದನೆಗಳು ಶ್ರೀವತ್ಸ :)

ಚಿನ್ಮಯ ಭಟ್ said...

ಸುಮತಿ ಅಕ್ಕಾ ಧನ್ಯವಾದ :)

Imran said...

ಹಾಯ್, ಗುಬ್ಬಚ್ಚಿ..!! ಹೆಂಗಿದ್ಯೇ ಮಾರಾಯ್ತಿ..? ಎಂತಾ ಮಾಡ್ತ್ಯಾ..?
Hmm... ಅನ್ಯಾಯವಾಗಿ,ನನ್ ಎಡಗೈಗೂ ನನ್ ಪಾರ್ಕರ್ ಪೆನ್ ಗೂ ಯದ್ವಾ-ತದ್ವಾ ಕೆಲ್ಸಾ ಕೊಟ್ಟು ನೀನ್ ಮಾತ್ರ ಅಂಕೆಗೇ ಸಿಗದ ಆ ನಿನ್ ಮುಂಗುರುಳನ್ನ ಸರಿ ಮಾಡ್ತಾ ಸುಮ್ನೆ ನಿಂತ್ಕೊಂಡಿರೋದು ಸರೀನಾ..?

Well,ಮೊದಲನೇ ಸಾರಿ ನನ್ನ ನೋಡಿ,ಪೂನಂ ಮುಂದೆ "yeh ladka paagal hain kya.?" ಅಂತಾ ಕೇಳಿದ್ದ ನೀನು, ಇವಾಗ "ನಮಗೆ ಲೆಕ್ಕಾ ತಪ್ಪೋವಷ್ಟು ಮೊಮ್ಮಕ್ಕಳು ಆದ್ರೂ ಕೂಡಾ ನಾನ್ ನಿನ್ನ ಜಾನೂ ಅಂತಾನೆ ಕರೀತೀನಿ ಕಣೋ" ಅನ್ನೋ ಲೆವಲ್ ಗೇ ಬಂದೀದೀಯಾ ಅಂದ್ರೆ,
ನಾನೊಬ್ಬ ಅಸಾಮಾನ್ಯ,"ಒಸಾಮಾ"ನ್ಯ ಲವ್ವೊತ್ಪಾದಕನೆ ಸರಿ..!! {ಲೈಟಾಗ್ ಚಪ್ಪಾಳೆ}


ಫಸ್ಟ್ ಮೀಟಿಂಗ್ ನಲ್ಲಿ ಆ ನಿನ್ ಹಾರಾಡೋ ಕೂದಲನ್ನ ನೋಡಿ ಅರ್ಧಾ ಹಾಳಾಗಿದ್ದೆ,
ಅದನ್ನ ನೀನು ನಿನ್ ಬಾಯಿಂದ "ಉಫ್" ಅಂತಾ ಗಾಳಿ ಊದಿ ಸ್ಟೈಲಿಶ್ ಆಗಿ,ಸರಿ ಮಾಡ್ಕೋಳೋದನ್ನ ನೋಡಿ ಪೂರ್ತಿ ಹಾಳಾಗ್ ಹೋದೆ..!!
ಬರೀ ನಾನಲ್ಲ,"ನನ್ ಪೆನ್ನು","ನನ್ ಸೆಲ್ಲು",ಅದರಿಂದ ಬರ್ತಾ ಇದ್ದ "pehala nasha" ಸಾಂಗು,"ನನ್ mouth organ player","ಅರ್ಧಂಬರ್ಧಾ ಬೆಂದಿರೋ ಆ ಸಮೋಸಾ","ಗೋಡೆ ಮೇಲೆ ವಿನಾಕಾರಣ ಲೊಚಗುಡತಾ ಇದ್ದ ಆ ಹಲ್ಲಿ.....ಎಲ್ಲವೂ ನಾಚಿ ತಲೆ ಬಾಗಿ ಹೋದ್ವು...!!
ಇನ್ನು ನನ್ chemistry note-bookನಲ್ಲಂತೂ ಹೊಸಾ chemical {reaction}equation ಬಂತು..!!
.
When the Belagavi huduga is treated {heated, reacted, whatever} with Havyaka hudugi in the presence of my "Stupid Parker Pen" it gives huge amount of "LOVE", & ವಿನಾಕಾರಣ ನಗು being By-Product..!!! {chemistry ನಲ್ಲಿ ಇದನ್ನ ppt ಅಂತಾ ಹೇಳಬಹುದು..!!}
.
i.e,
ಬೆಳಗಾವಿ BOY+ಹವ್ಯಕ GIRL ------> LOVE+ವಿನಾಕಾರಣ ನಗು {ppt}
.{ಒಮ್ಮೊಮ್ಮೆ ಹೀಗೂ ಆಗುವುದು..!!!}

.
well, ನೀವ್ ಹೆಣ್ಣ-ಮಕ್ಕಳು ಮಾಡ್ಸೋ ಕೆಲ್ಸಾ ಅಷ್ಟಿಷ್ಟಲ್ಲಾ ಬಿಡು..!!
.

ಅದು ಸರಿ, ನಮ್ ಲವ್ ಸ್ಟಾರ್ಟ್ ಆಗಿ ಇಷ್ಟ ದಿದಾ ಆದ್ರೂ ಕೂಡಾ ನಾನ್ ನಿಂಗೆ ಸೆಲ್ ನಂಬರ್ ಯಾಕ್ ಕೊಟ್ಟಿಲ್ಲ ಗೊತ್ತಾ?
ಪ್ರೀತೀನಾ orthodox ಆಗಿ ಈ ರೀತಿ ಪತ್ರದಿಂದ ಹಂಚಿಕೋಲ್ಳೋದ್ರಲ್ಲಿರೋ ಸುಖಾ, cell,mbl-chatting,sms blah,blah,blah... ನಲ್ಲಿ ಸಿಗಲ್ಲಾ ಕಣೇ..!! {dats wt i feel}
Cos,ಈ ಥರ ಓಲೆ ಬರೆಯೋವಾಗ, waste ಆಗೋ ನನ್ papers, ಹಾಗೂ ನನ್ ಓಲೆ
ನ ಓದೋವಾಗ ನೀನ್ ಮಲ್ಕೊಂಡಿರೋ ಆ ಭಂಗೀನಾ ನಮ್ room-mates ಗಳಾದ clock,posters,ದಿಂಬು...ಗಳೆಲ್ಲಾ ಬಾಯ್ ಬಿಟ್ಕೊಂಡು ನೋಡ್ತಾ, ನಮ್ಮನ್ನ loose ಗಳು ಅಂತಾ ಹೀಯಾಳ್ಸ್ತಾ ಇದ್ರೆ ಅದರಲ್ಲಿ ಸಿಗೋ ಮಜಾನೆ ಬೇರೆ ಕಣೇ..!!
ನೋಡು... ನೀನ್ ಕಳ್ಸಿರೋ "I Miss U ಕಣೋ ದೂದ್-ಪೇಡಾ" greeting ಕೂಡಾ "ಅಹುದಹುದು" ಅಂತಾ ತಲೆ ಆಡಿಸ್ತಾ ಇದೆ..!!

mobi"ಲಲ್ಲೆ" ಹೊಡೆಯೋ ಪ್ರೇಮಿಗಳೇ pls note down dis pt..!! {mobile+ಲಲ್ಲೆ = ಮೋಬೈ"ಲಲ್ಲೆ" [one of d funniest term in "RAGHAV"ism..!!]

}
.तू ही तू , तू ही तू , सतरंगी रे ....

Ooooopss M.T.V.ನಲ್ಲಿ A.R.Rehman song ಬರ್ತಾ ಇದೆ.
ರೆಹಮಾನ್ ಅಂದ್ ತಕ್ಷಣ ನೆನಪಾಯ್ತು..!!
ನಂಗೆ ಅವನ fans ನ ನೋಡಿದ್ರೆ ನಗು ಬರುತ್ತೆ ಕಣೇ, ಯಾಕ್ ಗೊತ್ತ..?
ನೀನ್ ನನ್ ಕೆನ್ನೆಗೆ ಕೊಡ್ತಿಯಲ್ಲಾ,ಆ ಮುತ್ತು.. ಆ sound, ಆ ಸಂಗೀತದ ಮುಂದೆ ರೆಹಮಾನ್ music ಯಾವ್ ಲೆಕ್ಕಾ..?
Well,Well,Well...ನೀ ಕೊಡೋ ಆ ಮುತ್ತಿನ ನಾದವನ್ನ ಯಾವ್ ಅಕ್ಷರಗಳಿಂದ ಬರೀಬೇಕು ಅಂತಾನೂ ಗೊತ್ತಾಗ್ತಾ ಇಲ್ಲಾ..!! ನನ್ ಬಾಯ್ಗಿಷ್ಟು ಮಣ್ಣ ಹಾಕಾ..!!
ಬರೀ ಪದಗಳಿಗಲ್ಲಾ, Even ಅಕ್ಷರಗಳಿಗೂ ಸಿಗ್ತಿಲ್ಲಾ ಅಂದ್ರೆ ಇದಕ್ಕಿಂತ ಬೇರೆ ಸಂಗೀತ ಬೇಕಾ...?

"ಏ ಸುಮ್ನಿರೋಲೋ"....
well ನಿನ್ "ಸವತಿ " {ನನ್ mouth-organ player} ಈ ಸಂಗೀತವೇ ಪ್ರತಿದಿನ ನಿಂಗೆ ಸುಪ್ರಭಾತ ಆದ್ರೆ ಹೇಗೆ..? ಅಂತಾ ಕೇಳ್ತಿದಾಳೆ..!!
ಅವಳು ನಿನ್ ಸವತಿ ಹೇಗ್ ಗೊತ್ತಾ..? "ದಿನಾಲೂ ಅವಳೇ ತಾನೇ ನನ್ ಉಸಿರನ್ನ ಹಂಚಿಕೊಳ್ತಾ ಇರೋದು..?
ಅಂತಾ ನಿನ್ ಸವತಿನೇ {mth-organ player} ನೀನು ಹಿಡ್ಕೊಂಡು ಮುದ್ದಾಡ್ತಿಯಾ ಅಂದ್ರೆ, ನಿನ್ ಮುಂದೆ ಸತಿ ಸಾವಿತ್ರಿ ಕೂಡಾ ಏನೂ ಅಲ್ಲಾ ಬಿಡು..!
but ನೀನು ಅದನ್ನ play ಮಾಡೋವಾಗ,ನಿನ್ lip-stick ಅದಕ್ಕೆ ತಾಕಿ,ಅಲ್ಲಿಂದ ಅದು ನನ್ ತುಟಿಗೆ transfer ಆಗಿ,ನನ್ lips ಕೆಂಪಾಗಿ ಹೋಯ್ತು ಕಣೇ..!!
ಕೆಂಪಾದವೋ... ಎಲ್ಲಾ ತಂಪಾದವೋ.....!!!
.
ತಿರುಗಾ ಅದನ್ನ {lip-stick ಕಲೆ} ನಿನ್ ತುಟಿಗೆ ನಾನ್ ಯಾಕ್ transfer ಮಾಡ್ಲಿಲ್ಲಾ ಗೊತ್ತಾ..?
ನಾನ್ ಹಾಗೂ ಮಾಡಿದ್ರೆ, "OXYGEN CYCLE, NITROGEN CYCLE, CARBON CYCLE", blah,blah,blah..... ಥರ ಅನ್ಯಾಯವಾಗಿ "LIP-STICK CYCLE" ಅಂತಾ ಹೊಸಾ CYCLE ಬೇರೆ ಹಾಕಿರೋರು ನಮ್ B.Sc. syllabus ನಲ್ಲಿ...!!
ಮೊದಲೇ B.Sc. syllabus ತುಂಬಾ lengthy ಅಂತಾ ನಾನೇ ನಮ್ Botany Madam ಹತ್ರ ತುಂಬಾ ಸರಿ ಹೊಯ್ಕೊಂಡಿದಿನಿ. ಈ gapಅಲ್ಲಿ ಇದ್ ಬೇರೆ ಬೇಕಾ..?

Well,Well,Well... ನಾನು ಈ letter ನ ನಿನಗೆ ಕೊಡೋದಕ್ಕಿಂತ ಮುಂಚೆನೇ ನನ್ ಬ್ಲಾಗ್ ನಲ್ಲಿ ಹಾಕ್ತಿದೀನಿ, ನನ್ ಫ್ರೆಂಡ್ಸ್ ಗೆಲ್ಲಾ ಓದಿ,ಓದಿ ಅಂತಾ ಕಾಟಾ ಕೊಡ್ತಾ ಇದೀನಿ..!!

ನಂಗೊತ್ತು ಈ ಥರ ಮಾಡಿದ್ರೆ "reverse gear" ನಲ್ಲಿ ಬಂದು ನೀನು ನನ್ನ ಹಿಡ್ಕೊಂಡು ಒದಿತಿಯಾ ಅಂತಾ..!! ನನಗ್ ಬೇಕಾಗಿರೋದು ಕೂಡಾ ಅದೇನೇ..!! ನಿನ್ ಕೈಯಿಂದಾ, {i mean ಕಾಲಿಂದಾ}

ಒದೆಸ್ಕೊಂಡು ತುಂಬಾ ದಿನಾ ಆಯ್ತ್ ಕಣೇ.. plsssssssss ಒಂದ್ಸಾರಿ ಒದಿಯೇ...!!

ಒದಿತಿಯಾ ತಾನೇ..?
ನಿನ್ನ ಒದೆತದ ನಿರೀಕ್ಷೆಯಲ್ಲಿ

Imran said...

hehehehehe Chinmay, naanu tumba dinada hindene haalaagidde. :d
ivaag neen kuda nan party 8)
congrats bro :d
Mast ide nin letter,
bega, "Ondolle Jaaga" kke post maadu ;-)

ಪದ್ಮಾ ಭಟ್ said...

ಚಂದದ ಪ್ರೇಮ ಪತ್ರ.....

ಮೌನರಾಗ said...

ಚೆಂದ ಇದ್ದು ಚಿನ್ಮಯ್..

ಚಿನ್ಮಯ ಭಟ್ said...

ರಾಘವಜೀ...
ಯಪ್ಪಾ ದೇವ್ರೇ...
ಧನ್ಯವಾದ ಅಂತಾ ಅಷ್ಟೇ ಹೇಳ್ದ್ರೇ ತಪ್ಪಾಗತ್ತೆ ಅನ್ಸತ್ತೆ...
ಆದ್ರೆ ಏನ್ ಮಾಡಣಾ ಹೇಳಿ?ಅದ್ಕಿಂತಾ ಜಾಸ್ತಿ ಏನೂ ನಂಗ್ ಹೊಳಿತಾ ಇಲ್ಲಾ...
ಬರ್ತಾ ಇರಿ ಆಷ್ಟೇ !!!!
ನಮಸ್ಕಾರ ಗುರುಗಳಿಗೆ :)D

ಚಿನ್ಮಯ ಭಟ್ said...

ಪದ್ಮಾ ಭಟ್,
ಧನ್ಯವಾದ ..ಬರ್ತಿರಿ :)

ಚಿನ್ಮಯ ಭಟ್ said...

ಸುಷ್ಮಾ,
ಧನ್ಯವಾದನೆ::)

Balachandr Hegde said...

ತುಂಬಾ ಚೆನ್ನಾಗಿದೆ..ಪದ್ಯ ಮತ್ತು ಗದ್ಯವು ಪತ್ರದಲ್ಲಿ ಆಕರ್ಷಣಾ ರೀತಿಯಲ್ಲಿ ವ್ಯಕ್ತವಾಗಿದೆ.

vaishu said...

chendada patra chinam ishtavaayitu preethiya lahari hige haridu barali :-)

ಚಿನ್ಮಯ ಭಟ್ said...

ಧನ್ಯವಾದ ಬಾಲು :)..
ಬರ್ತಾ ಇರು :)...

ಚಿನ್ಮಯ ಭಟ್ said...

ವೈಶು,
ಧನ್ಯವಾದನ್ರೀ...
ಬರ್ತಿರ್ರಿ...
ಖುಷಿಯಾಯ್ತ್ರೀ...
ನಮಸ್ತೆರೀ..

ಚಿನ್ಮಯ ಭಟ್ said...

ಅನಿಲ್ ಅವರೇ..
ಸ್ವಾಗತ ನಮ್ಮನೆಗೆ :)
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಬರ್ತಾ ಇರಿ...
ನಮಸ್ತೆ :)

Unknown said...

ella prema patra chendane irtu... adre idu "specail" agiddu chinmay....:)

Unknown said...

ella prema patra chendane irtu... adre idu "specail" agiddu chinmay....:)

ಚಿನ್ಮಯ ಭಟ್ said...

ಉಲ್ಲಾಸ್ ಜೀ,
ಸ್ವಾಗತ ನಮ್ಮನೆಗೆ...
ಧನ್ಯವಾದ ನಿಮ್ಮ ಅಂದದ ಪ್ರತಿಕ್ರಿಯೆಗೆ...
ಖುಷಿ ಆತು.
ಬರ್ತಾ ಇರಿ :) :)
ನಮಸ್ತೆ

ರೋಶನಿ ಶೆಟ್ಟಿ ಕೆದೂರು said...

ಎಲ್ಲೋ ಎದೆಯೊಳಗಿನ ಬಾವನೆ ಪೋಣಿಸಿದಂತಿತ್ತು...:) !!!

ರೋಶನಿ ಶೆಟ್ಟಿ ಕೆದೂರು said...
This comment has been removed by the author.
ಚಿನ್ಮಯ ಭಟ್ said...

ರೋಶನಿ ಅವ್ರೆ...
ಸ್ವಾಗತ ನಮ್ಮನೆಗೆ...
ಧನ್ಯವಾದಗಳು ನಿಮ್ಮ ಚಂದದ ಅನಿಸಿಕೆ,ಪ್ರೋತ್ಸಾಹಕ್ಕೆ...
ಬರ್ತಾ ಇರಿ...
ನಮಸ್ತೆ :)

Banavasi Somashekhar.ಬನವಾಸಿ ಮಾತು said...

ಪತ್ರ ತುಂಬಾ ರುಚಿಕರವಾಗಿತ್ತು.ಓದಬೇಕೆನಿಸಿಕೊಂಡು ಓದಿಸಿಕೊಳ್ಳುತ್ತೆ.ನಿಮ್ಮ ಬರವಣಿಗೆ ಶೈಲಿ ತುಂಬಾ ವಿನೂತನ ಹಾಗೂ ಮಧುರ.ಶುಭವಾಗಲಿ.ಗೆಳೆತನ ನೂರ್ಕಾಲ ಉಳಿಯಲಿ.

ಚಿನ್ಮಯ ಭಟ್ said...

ಧನ್ಯವಾದ ಸರ್ :) :)...ಬರ್ತಾ ಇರಿ :)