Sunday, May 5, 2013

ಮರುಕಳಿಸಿತೇ???


ಇವತ್ತು ಮತದಾನದ ದಿನ….
ಓಟು ಹಾಕುತ್ತಾರೆ ಎಲ್ಲರೂ…
ನಾನೂ ಹಾಕಬೇಕು ಅಲ್ವಾ??..


ಬೆಳಬೆಳಿಗ್ಗೆಯೇ ಎದ್ದು ಕೊಟ್ಟಿಗೆ ಕೆಲಸ ಮುಗಿಸಿ,ಮಡಿ ಉಟ್ಟುಕೊಂಡು,ಗಂಗೆ ತಂದು ಭಸ್ಮ ಹಚ್ಚಿ ಜಪಕ್ಕೆ ಕುಳಿತಿದ್ದೇನೆ…
ಎಂದಿನಂತಿಲ್ಲ ಜಪ…
ಬರೀ ಅವಳದೇ ನೆನಪು…
ಕಣ್ಣ ಮುಚ್ಚಿ ಕುಳಿತುಕೊಂಡಿದ್ದಷ್ಟೇ ಗೊತ್ತು….
ಗೊತ್ತಿಲ್ಲ ಅದೆಷ್ಟು ಬಾರಿ ಅವಳನ್ನು ನೆನೆದೆನೋ,ಅದೆಷ್ಟು ಬಾರಿ ದೇವರನ್ನು ಜಪಿಸಿದೆನೋ…
ಕಣ್ಣ ಮುಚ್ಚಿದರೆ ಅವಳದೇ ನೆನಪು,ಅದೇ ಅವಳದೇ ಆಕಾರ…

ಅಹಾ ಅದೆಂಥಹಾ ಹಾಲಿನಂತಾ ಬಿಳುಪು…
ಪೌಡರು ,ಲಿಪ್ಟಿಕ್ಕುಗಳಿಲ್ಲದಿದ್ದರೂ ಮತ್ತೆ ಮತ್ತೆ ನೋಡಬೇಕೆನ್ನಿಸುವ ಮೊಗದ ಸೊಗಸು..
ಚಿಕ್ಕವನಿದ್ದಾಗ ಹಿಡಿದು ಮಲಗುತ್ತಿದ್ದ ಅಮ್ಮನ ಆ ಜಡೆಯನ್ನು ನೆನಪಿಸುವ  ಉದ್ದನೆಯ ಕೂದಲು…
ಕನಸಿನಲ್ಲೂ ಕಾಡುವ ಆ ಛಂದದ ನಗು..
ಅಹ್..ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ…
ನನ್ನ ರಕ್ತವೆಲ್ಲಾ ಹೃದಯಕ್ಕೇ ನುಗ್ಗುತ್ತಿದೆಯೋ ಏನೋ!
ಎದೆಯು ಬಡಿವ  ಸದ್ದು,ಎಳೆದು ಬಿಡುವ  ಉಸಿರ ಬಿಸಿ ನನಗೇ ಕೇಳಿಸುತ್ತಿದೆ ಸ್ಪಷ್ಟವಾಗಿ…
ಅದೆಷ್ಟು ಬಾರಿ ಹಾಗೇ ಸುಮ್ಮನೆ ಎಂಜಲು ನುಂಗಿದೆನೋ…ಲೆಕ್ಕವಿಲ್ಲ..


ಅದೇಕೆ ಹೀಗೆ ಇವತ್ತು ????
ಅವಳ ನೋಡಲಿಕ್ಕೆಂದೇ ಹೀಗಾ???ಗೊತ್ತಿಲ್ಲ…
ಅವಳು ಬಂದೇ ಬರುವಳಾ??? ಅದೂ ಗೊತ್ತಿಲ್ಲ…

ನಿಜ …..ಇವತ್ತು ಮತದಾನದ ದಿನ…ಊರಿನವರೆಲ್ಲಾ ಸಾಲೇಮನೆಗೆ ಓಟು ಹಾಕಲು ಬಂದೇ ಬರುತ್ತಾರೆ…
ಊರಿನವರಷ್ಟೇ ಏನು ಇದೇ ಆಟದ ಬೈಲಿನಲ್ಲಿ ಕುಂಟಾಟ,ಕ್ರಿಕೆಟ್ಟು ಆಡಿ ಇಂದು ಬೆಂಗ್ಳೂರು,ಬೊಂಬಯ್ಯಿಯಲ್ಲಿರುವವರೂ ಬಂದೇ ಬರುತ್ತಾರೆ..ಮನೆಯವನ್ನು ನೋಡವುದೂ ಆಯಿತೆಂದು ಬಹುತೇಕ ಎಲ್ಲರೂ ಬರುತ್ತಾರೆ… ಜೊತೆಗೆ ಅವಳೂ????

ಹಮ್..ಗೊತ್ತಿಲ್ಲ…ಹಳೆಯ ನೆನಪು ಬಂದೇ ಬರುತ್ತಾಳೆ ಎಂದು ಬಿಸ್ಕೀಟು ಹಾಕುತ್ತಿದೆ..
ಮಧ್ಯದಲ್ಲಿನ ಸುಂಗು ಮಾತ್ರ ,ಅವಳ್ಯಾಕೆ ಬರುತ್ತಾಳೆ ??
ಬರುವುದೇ ಅನುಮಾನ,ಬಂದರೂ ಈಗ ಅವಳ್ಯಾರು ನಿನಗೆ??
ಎಂದೆಂಬ ಪ್ರಶ್ನೆಗಳ ಬಾರುಕೋಲು ಹಿಡಿದು ನಿಂತಿದೆ..
ನಾನು….??

ಯೋಚಿಸುತ್ತಾ ಇದ್ದೇನೆ ಬೆಳಗಿನಿಂದ…
ಆಸರಿಗೆ ಕುಡಿದೆನೋ ಇಲ್ಲವೋ ಗೊತ್ತಾಗಲಿಲ್ಲ..ಅವಲಕ್ಕಿ ಮಜ್ಜಿಗೆಗೆ ಬೆಲ್ಲ ಕಡಿಮೆ ಇದ್ದ ಹಾಗಿತ್ತು…
ಬಿಡಿ,ನಾಲಿಗೆಯ ರುಚಿಯೆಲ್ಲಿ ತಿಳಿದೀತು,ನೆನಪಿನ ಪಾಕದ ಮುಂದೆ ಅಲ್ವಾ???

ಹಮ್..ಏನೋ ..ಮೆದುಳು ಹೇಳದಿದ್ದರೂ ಕಾಲು ತನ್ನ ಕೆಲಸ ಮಾಡಿ ಮುಗಿಸಿದೆ..
 ಆಚೀಚೆ ನೋಡುತ್ತಾ ತಲೆಕೆರೆದುಕೊಳ್ಳುವುದರೊಳಗಾಗಿ ಸಾಲೆಮನೆಯ ಸರಗೋಲು ಕಾಣಿಸುತ್ತಿದೆ..
ಜನರೆಲ್ಲಾ ಆ ಕಡೆ ಈ ಕಡೆ ಓಡಾಡುತ್ತಿದ್ದಾರೆ…ಒಂದಿಷ್ಟು ಮೋಟರು ಸೈಕಲ್ಲು,ಓಮಿನಿಗಳೂ ನಿಂತಿವೆ..

ಏನು ಮಾಡಲಿ ನಾನು??
ಹೋಗಿ ಓಟೋತ್ತಿ ಬಂದು ಬಿಡಲಾ???
ಬೇಡ ಬೇಡ..ಅವಳು ಬಂದರೂ ಬರಬಹುದು ಕಾಯಲಾ???
ಬಂದರೂ ಎಷ್ಟೋತ್ತಿಗೆ ಬರಬಹುದು???
ಒಬ್ಬಳೇ ಬರುವಳಾ???ಛೇ ಸಾಧ್ಯವಿಲ್ಲ..ಅವರಪ್ಪನ ಜೊತೆಗೇ ಬರುವದು…
ನಡೆದುಕೊಂಡಾ???ಹಮ್..ಅವರಪ್ಪ ದೊಡ್ಡಮನೆಯ ಶೀಪಾದನ ಲಟೂರೀ ಬೈಕು ಫೋರ್ತು ಹ್ಯಾಂಡಿಗೆ ತಗಂಡ ಎಂದು ಕೇಳಿದಂಗೆ ಇದೆ,,ಗೊತ್ತಿಲ್ಲ…ಏನು ಮಾಡಲಿ???.....
……
ಕಾಯುವಾ…..
ಏನಾದರಾಗಲಿ ಕಾಯಲೇ ಬೇಕು….
ಎಲ್ಲಿರಲಿ??????ಇಲ್ಲೇ ಇದ್ದರೆ ಪೋಲೀಸರು ಅನುಮಾನಿಸಬಹುದು…
ಸಾಲೆಯಲ್ಲೇ ಯಾವುದೋ ಪಕ್ಷದವರ ಜೊತೆ ಕೂರಲಾ??ಶೇ …ಅಲ್ಲಿ ಕೆಟ್ಟ ಗೌಜು…
ಎಲ್ಲಿರಲಿ??ಅವಳ್ಯಾವಾಗ ಬರುವದು ಬಂದರೆ???೯ಕ್ಕಾ , ೧೨ಕ್ಕಾ ಅಥವಾ ಸಂಜೆಗಾ??


ಅಗಾ…
ಅಲ್ಲಿ ಸಿಕ್ತು…
ಏನು?.
ಜಾಗ…
ನನ್ನ ಫೇವರೇಟ್ ಜಾಗ…
ನಾನು ನನ್ನೊಳಗಿನ ನನ್ನನ್ನು ನೋಡಿಕೊಳ್ಳೋ ಜಾಗ…ಕಷ್ಟ ಸುಖ ಹಂಚಿಕೊಂಡ ಜಾಗ…


ಇದೇ ರಸ್ತೆಯ ಬಲಬದಿಗೆ ಸ್ವಲ್ಪ ಕೆಳಗೆ ರಾಕ್ಷಸ ಪರಂಗಿ ಬೇಲಿ ಹಾರಿ,ಸಣ್ಣ ಧರೆಯ ದಾಟಿದರೆ ನಮ್ಮನೆಯದೇ ಬೆಟ್ಟ..
ಅಲ್ಲೊಂದು ಜೋಡಿ ಮತ್ತಿಯ ಮರ..ಅದರ ಪಕ್ಕದಲ್ಲೊಂದು ಹೊಸದಾಗಿ ಬೆಳೆದ ನುರುಕಲು ಗಿಡ..
ಮತ್ತಿಯ ಮರದಲ್ಲಿ ಕೊಟ್ಟೆಯ ಕಟ್ಟಿದಂತೆ ಇರುವ ಎಲೆಗಳು..
ತೊಟ್ಟಿಲಂತೆ ಹರಡಿಕೊಂಡ ಹೆಣೆಗಳು…
ಅಲ್ಲಿ ಕೂತು ನಾನು ಬರೆದದ್ದೆಷ್ಟೋ..ಓದಿದ್ದೆಷ್ಟೋ..ಕಾದಿದ್ದೆಷ್ಟೋ..ಅತ್ತಿದ್ದೆಷ್ಟೋ,ಕುಣಿದದ್ದೆಷ್ಟೋ..

ಹತ್ತಿದ್ದೇನೆ ಇಂದೂ ಆ ಮರವನ್ನು…
ಹತ್ತುವಾಗ  ಒಣಗಿದ ಕೊಂಬೆಯ ಮೇಲೆ ಕಾಲಿಟ್ಟಿದ್ದರಿಂದ ಜಾರಿತು ಒಂದೆರಡು ಬಾರಿ ಅಷ್ಟೇ…ಮತ್ತೇನೂ ಆಗಿಲ್ಲ..
ಬರುವಾಗ ಪಕ್ಕದ ನುರುಕಲು ಮರದ ಕೊಣಜು ಹತ್ತಿಕೊಂಡಿದೆ …ಸೊಂಟದಲ್ಲಿದ್ದ ಎರಡನ್ನು ಒರೆದು ಎಸೆದೆ..
ಗಲ್ಲದ ಮೇಲೆ ಹತ್ತಿಕೊಂಡದ್ದನ್ನು ಹಾಗೆಯೇ ಕೆಳಕ್ಕೆ ಉದುರಿಸಿದೆ…
ಮತ್ತೆಲ್ಲಿ ಕೊಣಜಿದೆಯೋ…ಅದೆಲ್ಲಿ ಸವಳಿಯಿದೆಯೋ…!!

ಇರಲಿ..ಇಲ್ಲಿಂದ ದಾರಿ ಚೆನ್ನಾಗೇ ಕಾಣುತ್ತಿದೆ..ಅಲ್ಲಿ ಓಡಾಡುವವರೂ ಕಾಣುತ್ತಿದ್ದಾರೆ….
ಅವರಿಗೆ ಮಾತ್ರ ನಾನು ಕಾಣಲಾರೆ…ನನಗಾದರೂ ನಾನು ಕಾಣುತ್ತೀನಾ????
ಗೊತ್ತಿಲ್ಲ….ತೀರ ತಲೆಬಿಸಿಯಾಯಿತೆಂದು ಎಂದಿನಂತೆ ಒಂದು ಗುಟಕಾ ಪ್ಯಾಕೆಟ್ಟು ಒಡೆದು ಬಾಯಿಗೆ ಹಾಕಿದೆ…
ಮನಸ್ಸೇ ಕಹಿಯಿತ್ತೋ ಅಥವಾ ಹಳೆಯ ಪ್ಯಾಕೇಟಿನಲ್ಲಿದ್ದ ಗುಟಕಾ ಕೆಂಪಾಗಿ ಕಹಿ ಎನಿಸಿತೋ ಏನೋ ಗೊತ್ತಿಲ್ಲ…
ಎಂದಿನ ಖುಷಿ ಸಿಗುತ್ತಿಲ್ಲ…
ಮತ್ತೊಂದು ಪ್ಯಾಕೆಟ್ಟು ಒಡೆದು,ಕೈಯ್ಯಲ್ಲಿ ತಿಕ್ಕಿ,ಹುಡಿಯನ್ನು ಉಬಿಸಿ ಬಾಯಿಗೆ ಹಾಕಿದೆ…
ನಿಧಾನವಾಗಿ ಒಳಸೇರುತ್ತಿದೆ…
ತಲೆ ಗುಯ್ಯ್ ಎನ್ನುತ್ತಿದೆ,ಕಣ್ಣು ಮಂಜಾಗುತ್ತಿದೆ..
ಮತ್ತೆ ಹಾಕಿದ ತಂಬಾಕು ಜಾಸ್ತಿ ಆಯ್ತೋ ಅಥವಾ ಅವಳ ನೆನಪಿನ ಮತ್ತು ಕಿಕ್ಕೇರಿತೋ ಗೊತ್ತಿಲ್ಲ…
ಹಾಗೆಯೇ ಕೈಗೆ ತಲೆಯಿಟ್ಟೆ…ಕಣ್ಣು ಮುಚ್ಚಿದೆ…





ಕತ್ತಲು...
 ಕತ್ತಲು ....
ಬರೀ ಕತ್ತಲು……
(ನಮಸ್ತೆ..ಇದೊಂದು ಹೊಸ ಪ್ರಯೋಗ ನನ್ನ ಪಾಲಿಗೆ...ಒಂದು ಎಳೆಯನ್ನು ಇಟ್ಟುಕೊಂಡು ಬರೆಯುವ ಪ್ರಯತ್ನ...ಇದನ್ನು ಇಲ್ಲಿಗೇ ಮುಗಿಸಬೇಕೋ ಅಥವಾ ಇನ್ನೂ ಬೆಳೆಸಬೇಕೋ ಅನ್ನೋ ಗೊಂದಲದಲ್ಲಿದೀನಿ... ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಮರೆಯದೇ ದಾಖಲಿಸಿ... ನಿಮಗೆ ಅನಿಸಿದ್ದನ್ನು ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿ...ಅದೇ ನನಗೆ ಸ್ಪೂರ್ತಿ...ಕಾಯ್ತಿರ್ತೀನಿ...ನಮಸ್ತೆ )

22 comments:

RAMADAS BHAT said...

very nice ...keep it up :)

Unknown said...

estakkae nillisidarae kathae apurna anistidae....... starting chanda edae... kathae munduvaraesi chanagirutthae

sunaath said...

ಇದೊಂದು ಮನ ಸೆಳೆಯುವ ಭಾವಲಹರಿ. ನಿಮ್ಮ ಪ್ರಯತ್ನವನ್ನು ಹೀಗೇ ಮುಂದುವರೆಸಿ.

Badarinath Palavalli said...

ಗ್ರಾಮೀಣ ಪರಿಸರವನ್ನು ಕಟ್ಟಿಕೊಡುವುದು ಸಲೀಸಾದ ಮಾತಲ್ಲ. ನೀವು ಗೆದ್ದಿರುವುದು ಇಲ್ಲೇ. ಓದುತ್ತಾ ಹೋದಂತೆ ಸಾದೃಶ್ಯ ಹಳ್ಳಿ ಪರಿಸರ.

ಬಳಸಿದ ಪದಗಳಲ್ಲಿ ಆ ಭಾಗದ ಸೊಗಡು ಮತ್ತು ಅಲ್ಲಿನ ಭೌಗೋಳಿಕ ಲಕ್ಷಣವೂ ಚಿತ್ರತವಾಗಿದೆ.

ಫೋರ್ತು ಹ್ಯಾಂಡಿಗೆ ಬೈಕು, ಇದು ನಮ್ಮ ಹಳ್ಳಿಗಳಲ್ಲೂ ಮಾಮೂಲು.

ಈ ಪ್ರಯತ್ನದಲ್ಲೂ ನಿಮಗೇ ಗೆಲುವು.

ಚಿನ್ಮಯ ಭಟ್ said...

ರಾಮದಾಸ್...
ಸ್ವಾಗತ ನಮ್ಮನೆಗೆ :)...
ಧನ್ಯವಾದ :)...
ಬರ್ತಾ ಇರು ...
ನಮಸ್ತೆ :)

ಚಿನ್ಮಯ ಭಟ್ said...

ಪೂರ್ಣಿಮಾ ಅವರೇ...
ಸ್ವಾಗತ ಮತ್ತೊಮ್ಮೆ ನಮ್ಮ ಮನೆಗೆ :)...
ನಿಮ್ಮ ಮಾತು ನನ್ನ ಮಾತೂ ಹೌದು..
ಅದೇ ಗೊಂದಲದಲ್ಲಿ ನಾನಿದ್ದೇನೆ...
ಧನ್ಯವಾದ ನಿಮ್ಮ ಸಲಹೆಗೆ ...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ...
ನಮಸ್ತೆ :)..

ಚಿನ್ಮಯ ಭಟ್ said...

ಸುನಾಥ ಸರ್...
ಸ್ವಾಗತ ಸರ್ ಮತ್ತೊಮ್ಮೆ ಈ ಪುಟಕ್ಕೆ...
ಧನ್ಯವಾದ ನಿಮ್ಮ ಆಶೀರ್ವಾದಕ್ಕಾಗಿ...
ಕೈಲಾದ ಪ್ರಯತ್ನ ಮಾಡುತ್ತೇನೆ...
ಬರ್ತಾ ಇರಿ ಸರ್..
ನಿಮ್ಮ ಸಲಹೆ ಸೂಚನೆಗಳೇ ನಮಗೆ ಮಾರ್ಗದರ್ಶಿ...
ನಮಸ್ತೆ..

ಚಿನ್ಮಯ ಭಟ್ said...

ಬದರಿ ಸರ್...
ಅದು ಹೇಗೆ ಬರೆದರು ಮತ್ತಷ್ಟು ಬರೆಯಿರಿ ಎಂದು ಬೆನ್ನು ತಟ್ಟುವ ನಿಮ್ಮ ಆತ್ಮೀಯತೆಗೊಂದು ಸಲಾಮ್...
ಖಂಡಿತ ಈ ಬರಹದಲ್ಲಿ ಹಳ್ಳಿ ಕಡೆಯ ವಾತಾವರಣವನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ...
ಗೊತ್ತಿಲ್ಲ...ಇವೆಲ್ಲವೂ ಬಹುತೇಕವಾಗಿ ನಾನು ಅನುಭವಿಸಿರುವಂತಹವು..(ಪೂರ್ತು ಹ್ಯಾಂಡಿನ ಬೈಕೊಂದ್ ಬಿಟ್ಟು :)P)..
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ...
ನಮಸ್ತೆ :)

Imran said...

{ಜೋರು ನಗುವಿನೊಂದಿಗೆ} ಏನಪ್ಪಾ ಪ್ರಾರಬ್ಧಾ ಇದು...? :d

ನಿಂಗೆ ಮತದಾನದ ಹಕ್ಕನ್ನ ಕೊಟ್ಟಿರೋದು, ವೋಟ್ ಹಾಕೋವಷ್ಟು ದೊಡ್ದೊನಾಗಿದಿಯಾ ಅಂತಾ.....

ಅದನ್ನ ನೀನು ಈ ಥರಾ ದುರುಪಯೋಗ ಪಡಿಸ್ಕೋಬಹುದಾ...? :O :/ :p

"ಹಳೇ ನೆನಪುಗಳಿಗೆ ಕೈ ಹಾಕೊಂಡು, ಪರಾ-ಪರಾ ಅಂತಾ ಕೆರ್ಕೊಂಡ್ ಭಾಗ ಚೆನ್ನಾಗಿತ್ತು, but ಅದನ್ನ ನೀವು ಇನ್ನಷ್ಟು ಕೆರೆದು ಹುಣ್ಣು ಆಗೋ ಹಾಗ್ ಮಾಡಿದ್ರೆ, ಬರಹ "ಹಣ್ಣಾಗಿರ್ತಿತ್ತು" ....... ಹೆಣ್ಣಾಗಿರ್ತಿತ್ತು ;-) :D [ರಾಘವನ ಮೊಗದಲ್ಲಿ ತುಂಟ-ನಗು]

ನಿರೂಪಣೆ ಚಂದ ಇತ್ತು [ಹವ್ಯಕ accent ], ಸುತ್ತಮುತ್ತಲಿನ ಸೂಕ್ಷ್ಮಗಳ ನಿರೂಪಣೆ ಇಷ್ಟ ಆಯ್ತು.

ಮಂಜು ಮಂಜಾದ ಚಿನ್ಮಯ ಕಂಡ... ರೆಗ್ಯುಲರ್ ಚಿನ್ಮಯ್ ಮಿಸ್ ಆದ್ನಾ ...? :o :d ಗೊತ್ತಿಲ್ಲಾ [ಕನ್ಫ್ಯೂಷನ್ ತುಂಬಿದ ನಗು]

"ಬರಹದ ಅಂತ್ಯದಲ್ಲಿ ಅಪೂರ್ಣತೆ ಕಾಡುತ್ತಾ .....?" ಅನ್ನೋ ಅಂಶ ನನ್ನ ಕಾಡ್ತಾ ಇದೆ :/ :p

between ಒಂದು ಕೊನೆ ಸಾಲು ಅಂತ "ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ" ಅಂತಾ mention ಮಾಡಿದ್ರೆ ಒಂದ್ ಕಿಕ್ ಇದ್ದಿರೋದು :D ;) [ತಂಬಾಕಿನಷ್ಟೇ ಕಿಕ್ಕು ]

. .

ಕೈ ಕೈಯ ಕಚ್ಹ ಅಸಡಾ ... ಬಸಡಾ .....

ತಲೆ ಕೆಟ್ಟ "ಭಟ್ಟ" ಎಬಡಾ..... ತಬಡಾ .....

Oooopssss ......!! :D

ನಮಸ್ತೆ :p

Swarna said...

ಖಂಡಿತಾ ಮುಂದುವರಿಸಿ, ಕಡೆಗೆ ವೋಟ್ ಮಾಡಿದ್ರಾ ಇಲ್ವಾ ಹೇಳೋದ್ದಕ್ಕಾದ್ರೂ...
ಬೆರಳ ಮೇಲಿನ ಕಪ್ಪು ಶಾಯಿ ಇಷ್ಟೊಂದು ಸ್ಪೂರ್ತಿ ಕೊಡತ್ತೆ ಅಂತ ಗೊತ್ತಾಗಿದ್ದು ಇವತ್ತೇ :)


Shruthi B S said...

ಚಿನ್ಮಯ್ ಕಥೆ ತು೦ಬಾ ಚನ್ನಾಗಿದೆ.... ನಿರೂಪಣೆಯೂ ಚನ್ನಾಗಿದೆ. ಅವಳ ನೆನಪಿನ ಗು೦ಗನ್ನು ವಿವರಿಸಿದ ಪರಿ ಬಹಳ ಇಷ್ಟ ಆಯ್ತು.. ನಿಜವಾಗಿ ಅನುಭವಿಸಿ ಬರೆದ೦ತಿತ್ತು... ಕೊನೆ ಇನ್ನೂ ಚನ್ನಾಗಿ ಆಗಬಹುದಿತ್ತೇನೋ ಎನಿಸಿತು... ಮೊದಲ ಪ್ರಯತ್ನ ಬಹಳ ಚನ್ನಾಗಿದೆ... ಹೀಗೆ ಮು೦ದುವರೆಸು....

Srikanth Manjunath said...

ಬಯಲು ದಾರಿ ಚಿತ್ರದ "ಎಲ್ಲಿರುವೆ ಮನವ ಕಾಡುವ ರೂಪಸಿಯೇ" ನೆನಪಿಗೆ ಬಂತು.. ಒಮ್ಮೆ ಮನದಾಳದಲ್ಲಿದ್ದ ಪ್ರೇಯಸಿಯ ನೆನಪು ಗಿರಗಿಟ್ಟಲೆ ಆಡಿಸುತ್ತಿದ್ದಾರೆ ... ಇನ್ನೊಂದು ಕಡೆ ಹೆಲಿಕಾಪ್ಟರ್ ಬ್ಲೇಡ್ ನಂತೆ ಸುತ್ತಿಸುತ್ತಿರುವ ಪ್ಯಾಕೆಟ್ ಮತ್ತು!

ಮತದಾನದ ಹೊತ್ತಿನಲ್ಲಿ ಮನದ "ತಮ"ಹೊರಗೆ ಬಂದು ಬೆಳಕಲ್ಲಿ ತಿಮಿರದ ಮತ್ತು ಮೂಡಿಸಿರುವ ಬರಹ ಸೊಗಸಾಗಿದೆ. ಮುಂದುವರೆಯಲಿ ಇನ್ನಷ್ಟು ರೋಚಕ/ಕುತೂಹಲ ಮೂಡಿಸಿ ಚಿನ್ಮಯ್.

ಒಂದು ಹಂತಕ್ಕೆ ಓದು ಮುಗಿದ ಉತ್ಸಾಹದ ಬೆಳಕು ಇನ್ನಷ್ಟು ಸುಂದರವಾಗಿ ಬರವಣಿಗೆಯಲ್ಲಿ ಕಾಣುತ್ತಿದೆ.

ಜಲನಯನ said...

ಚಿನ್ನು, ಮುದ ನೀಡೋ ನೆನಪುಗಳು ಮುದಿ ಆದರೂ ಬರ್ತವಂತೆ...ದಿಟ ನಿನ್ನ ಮಾತು. ಎಳೆ ಎಳೆ ಮನಸಿನ ಭಾವ ಬಿಡಿಸಿಕೊಂಡು ತಂತಾನೆ ಹೊರಬಂದಂತಿದೆ ಬರೆದ ಶೈಲಿ... ಯಾವುದೋ ಎಳೆ ಹಿಡಿದು ಮೊದಲೇ ಯೋಜಿಸಿದಂತೆ ಅನಿಸುತ್ತಿಲ್ಲ... ಬಹಳ ಚನ್ನಾಗಿದೆ... ಮುಂದೆ ಏನು...?? ಬರೀ ಮಾರಾಯನೇ... ನೋಡುವ ಹೇಗಾಗುತ್ತೋ ಅಂತ್ಯ...!!!!

ಚಿನ್ಮಯ ಭಟ್ said...

ಗುರುಗಳಿಗೆ ನಮಸ್ಕಾರಗಳು...
ಎಂದಿನಂತೆ ಈ ಪುಟಕ್ಕೆ "ಕಳೆ" ತುಂಬಿದ್ದಕ್ಕಾಗಿ ಧನ್ಯವಾದಗಳು :)
ಮುಖದಲ್ಲಿ ಒಂದಿಷ್ಟು ಮಂದಹಾಸ ಇದೀಗ ;)..
ಮತ್ತೆ ಈ ಸಲ ಒಂದಿಷ್ಟು "ಕಂಸದಲ್ಲಿ...." ಬಂದಿದೆ!!(ಯಾವುದಾದರೂ ನಾಟಕ ಮಾಡಿದ್ರಾ?? ಹಾ ಹಾ)
ಹಮ್...ಖಂಡಿತ ಅಂತ್ಯ ಕಿಕ್ ಕೊಡಲಿಲ್ಲ ಅಲ್ವಾ???
ಸರಿ ಸರಿ...ನೋಡುವೆ ಅದನ್ನೊಂದು...
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್..
ಹಾ ಹಾ...
ಧನ್ಯವಾದ ನಿಮ್ಮ ಅಂದದ ಅನಿಸಿಕೆ,ಪ್ರೋತ್ಸಾಹಕ್ಕಾಗಿ...
ಖಂಡಿತವಾಗಿಯೂ ಈ ಚುನಾವಣೆಯ ದಿನವೇ ನನಗೆ ಇದನ್ನು ಬರೆಯಲು ಸ್ಪೂರ್ತಿ ಬಂದದ್ದು...
ಕಥೆ ಸುಮಾರು ೬ ತಿಂಗಳಿನಿಂದ ತಲೆಯಲ್ಲಿದ್ದದ್ದು...
ಅದೂ ಸಹ ಪೂರ್ತಿ ನನ್ನದಲ್ಲ...
ಇದಕ್ಕೆ ತರಕಾಯಿ,ಕಾಳುಬೇಳೆ ಕೊಟ್ಟು ಗೆಳತಿಯೊಬ್ಬಳು ಇದನ್ನೇನಾದರೂ ಪದಾರ್ಥ ಮಾಡು ನಿನ್ನ ಶೈಲಿಯಲ್ಲಿ ಕಥೆನೋ ಕವನಾನೋ ಅಂದಳು :)D...
ಆರಂಭ ಹೇಗೆ ಮಾಡಲಿ ಗೊತ್ತಾಗಿರಲಿಲ್ಲ...
ಮೊನ್ನೆ ಹೊಳೆಯಿತು ಶುರು ಮಾಡಿದೆ...ಬರೆದೆ..ಅಷ್ಟೇ..
ಧನ್ಯವಾದಗಳು :)

ಸಂಧ್ಯಾ ಶ್ರೀಧರ್ ಭಟ್ said...

ಚಿನ್ನು ನಿನ್ನ ಶೈಲಿಯ ಕಥೆ ಇಷ್ಟ ಆತು. ಅಂತ್ಯದಲ್ಲಿ ಗೊಂದಲಕ್ಕೆ ತಂದು ನಿಲ್ಲಿಸಿದ್ದು ಇಷ್ಟ ಆಯಿತು. ಆದಷ್ಟು ಬೇಗ ಮುಂದಿನ ಭಾಗ ಬರಿ ಮಾರಾಯ. ಸ್ಥಿರ ಸರ್ಕಾರದ ಮುಖ್ಯ ಮಂತ್ರಿ ಅಧಿಕಾರಕ್ಕೂ ಮುನ್ನ .

ಅವಳ ಗುಂಗು ... ಗುಟಕಾದ ಗುಂಗು... ಅವನನನ್ನು ನಿಲ್ಲಿಸಿದ್ದೆಲ್ಲಿಗೆ ಹೇಳು ಮಾರಾಯಾ ..:)

ಅಂತೂ ಮೊದಲ ಮತದಾನ ಸಾರ್ಥಕ ಅನಿಸ್ತಿದ್ದು ನಿಜಾನ ??? :) :)

ಚಿನ್ಮಯ ಭಟ್ said...

ಶೃತಿ ...
ಧನ್ಯವಾದನೇ...
ಬಹುತೇಕ ಎಲ್ಲವೂ ಅನುಭವಿಸಿದ್ದೇ...ಗುಟಕಾ ಹಾಕುವುದೊಂದನ್ನು ಬಿಟ್ಟು ;)...ಹಾ ಹಾ...
ಹಾಂ ಅಂತ್ಯದ ಬಗ್ಗೆ ನಂಗೂ ಗೊಂದಲ ಇದೆ...
ನೋಡುವೆ...
ಮುಂದಿನ ಭಾಗದಲ್ಲಿ ಅದರ ಬಗ್ಗೆ...
ಬರ್ತಾ ಇರೆ..
ನಮಸ್ತೆ :)

ಚಿನ್ಮಯ ಭಟ್ said...

ಶ್ರೀ...
ಖಂಡಿತವಾಗಿಯೂ..
ಒಂದು ಹಂತಕ್ಕೆ ಬಂದಿದ್ದೇನೆ ಓದಿನಲ್ಲಿ...
ಬರಹದಲ್ಲಿ ಗೊತ್ತಿಲ್ಲ...
ಹಂತ ಹಂತವಾಗಿ ಮೇಲೇರುವ ಪ್ರಯತ್ನ ಅಷ್ಟೇ...
ಧನ್ಯವಾದಗಳು ನಿಮ್ಮ ಚಂದದ ಸಲಹೆಗೆ..
ಗೊತ್ತಿಲ್ಲ..ಕಥೆಯನ್ನು ದಾರಿತಪ್ಪದಂತೆ ಮುನ್ನೆಡುಸುವುದೊಂದೇ ಸಧ್ಯಕ್ಕೆ ಕಣ್ಣ ಮುಂದಿರುವುದು...ಕುತೂಹಲ ಮೂಡಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ...
ಖಂಡಿತ ಆ ಬಗ್ಗೆ ಆಲೋಚನೆ ಮಾಡುತ್ತೇನೆ...
ವಂದನೆಗಳು..
ನಮಸ್ತೆ :)

ಚಿನ್ಮಯ ಭಟ್ said...

ಆಜಾದ್ ಸರ್...
ಖಂಡಿತವಾಗಿಯೂ ಇದು ಈಗಲೇ ಹೊರಬರುತ್ತಿರುವ ಭಾವವೇ...
ಇಷ್ಟವಾಯ್ತು ನಿಮ್ಮ ಕಮೆಂಟು ನೋಡಿ..
ಬರೆಯಲೇ ಬೇಕು ಮುಂದೆ ..
ಬರೆಯುತ್ತೇನೆ ಕೂಡಾ...
ಧನ್ಯವಾದ ಸಾ...
ನಮಸ್ತೆ :)

ಚಿನ್ಮಯ ಭಟ್ said...

ಸಂಧ್ಯಕ್ಕಾ,
ಧನ್ಯವಾದಗಳು..
ನಿಮ್ಮ ಕಮೆಂಟು ಓದಿ,ನಂಗೆ ಪರಮಾತ್ಮ ಚಿತ್ರದ "ಕನ್ಫೂಶನ್ ಈಸ್ ಹ್ಯಾಪಿನೆಸ್ " ಹೇಳೋ ಡೈಲಾಗ್ ನೆನ್ಪಾತು...ಹಮ್..ಅದಿನ್ನೂ ಗೊಂದಲದಲ್ಲೇ ಇದ್ದಿ..ಅವನನ್ನ ನಿಲ್ಲಿಸಿದ್ದೂ ಯಾವ್ದು ಹೇಳಿ ನಂಗೂ ಗೊತ್ತಿಲ್ಲೆ..ಹಾ ಹಾ....
ಬರಿತಿ ಬೇಗ..
ಮುಂದಿನ ಭಾಗ..
ಅಲ್ಲಿ ತನ್ಕಾ,ಟಾಟಾ..
ನಮಸ್ತೆ :)

ಸತೀಶ್ ನಾಯ್ಕ್ said...

ಈ ಕಥೆಯನ್ನ ನೀವು ಫೇಸ್ಬುಕ್ ನಲ್ಲಿ ನನಗೆ ಇನ್ ಬಾಕ್ಸ್ ಮಾಡಿದಾಗಲೇ ಓದಿದ್ದೆ ಮೊಬೈಲ್ ಇಂದ.. ಆದರೆ ಮೊಬೈಲ್ ನಿಂದ ಅದೆಷ್ಟು ಪ್ರಯತ್ನ ಮಾಡಿದ್ರು ಕಾಮೆಂಟ್ ಮಾಡೋಕೆ ಆಗ್ತಿರ್ಲಿಲ್ಲ..

ಕಥೆ ಓದಿದ ದಿನವೇ ಬಹಳ ಇಷ್ಟ ಆಯಿತು ಚಿನ್ಮಯ್.. ಒಳ್ಳೆಯ ಪ್ರಯತ್ನ.. ಮುಂದು ವರೆಸಿದ್ರೆ ಬಹುಷಃ ನಾವ್ಯಾರು ಊಹಿಸಲಾಗದ ತಿರುವು ಕೊಟ್ಟು ಕೂಡಾ ಮುಗಿಸ ಬಹುದಿತ್ತೇನೋ.. ಈ ಕಥೆಯ ಮುಂದುವರೆದ ಎರಡು ಮೂರು ಮಾದರಿಯ ಭಾಗಗಳು ನನ್ ತಲೆಯಲ್ಲಿ ಗಿರಿಗಿಟ್ಲೆ ಹೊಡೆಯುತ್ತಿದೆ.. ಉತ್ತಮ ಕತೆಯೊಂದು ತಲೆಯೊಳಗೆ ಕೂತದರ ಪ್ರಭಾವ ಅದು. ಆದರು ಮೂಲ ಕರ್ತೃವಿನ ಪರಿಕಲ್ಪನೆಯಲ್ಲ್ಲಿ ಕಥೆ ತನ್ನ ತನವನ್ನ ಇನ್ನು ಗಟ್ಟಿಯಾಗಿಸಿ ಕೊಳ್ಳುವುದರಲ್ಲಿ ಸಂದೇಹವಿಲ್ಲ. ನೀವೇ ಇದಕ್ಕೊಂದು ಗತಿ ಕಾಣಿಸಿ.. ನಮ್ ಕೈಲಿ ಸಿಕ್ಕು ಇದು ಅಧೋಗತಿ ಕಾಣೋದು ಬೇಡ.

ಪ್ರತಿಯೊಂದು ಭಾವುಕತೆಯನ್ನ ನೀವು ವಿವರಿಸ್ತಾ ಹೋದಾಗಲೂ ಇದು ಚಿನ್ಮಯ್ ದೇ ಕಥೇನಾ..?? ಚಿನ್ಮಯ್ ಗುಟಖಾ ಹಾಕ್ತಾರಾ..?? ಚಿನ್ಮಯ್ ಗೆ ಹುಡುಗೀನ ಅದು ಎಲೆಕ್ಷನ್ ಗೆ ವೋಟು ಹಾಕೋಕೆ ಬರೋ ಹುಡುಗೀನ ನೋಡೋಷ್ಟು ಧೈರ್ಯ ಉಂಟಾ ಅಂತೆಲ್ಲ ಅಂದ್ಕೊಂಡು ನಗು ಬಂತು. ಅಷ್ಟರ ಮಟ್ಟಿಗೆ ನಿಮ್ಮ ತಲ್ಲೀನತೆಯನ್ನ ಅದರೊಳಗೆ ಹದವಾಗಿ ಬೇರೆಸಿದ್ದೀರ. ರಾಘಾ ಹೇಳಿದ ಹಾಗೆ ಅಲ್ಲಲ್ಲಿ ಸುಧಾರಿಸಬೇಕು.. ಬರಿತಾ ಬರಿತಾ ಸರಿ ಹೋಗತ್ತೆ ಬಿಡಿ.. ಅದ್ಕೆ ಮೊದ್ಲು ಹೆಚ್ಚೆಚ್ಚು ಬರೆಯೋದು ಶುರು ಮಾಡಿ ಅಷ್ಟೇ..

ಕಥೆ ಇಷ್ಟ ಆಯ್ತು ಚಿನ್ಮಯ್.. ದಯವಿಟ್ಟು ಇದರ ಮುಂದುವರೆದ ಭಾಗವನ್ನ ಮುಂದುವರೆಸಿ. :)

ಚಿನ್ಮಯ ಭಟ್ said...

ಸತೀಶ್...
ಅಯ್ಯಪ್ಪಾ...ನಿಮ್ಮ ಕಮೆಂಟು ನೋಡಿ ನಾನಂತು ಪುಲ್ ಖುಷ್...
ಏನೋ ಗೊತ್ತಿಲ್ಲ...ಅದೊಂದು ಬರೆಯಲೇ ಬೇಕು ಅಂದುಕೊಂಡಿದ್ದ ಕಥೆಗಳಲ್ಲಿ ಒಂದು ಅಷ್ಟೇ....ಸುಮಾರು ದಿನಗಳಿಂದ ಬಾಕಿ ಇದ್ದದ್ದಕ್ಕೆ ಅವತ್ತು ಮುಹೂರ್ತ ಬಂದು ಶುರುಮಾಡಿದೆ...
ಗೊತ್ತಿಲ್ಲ..
ಸಧ್ಯಕ್ಕೆ ಬರೆಯುವ ಮೂಡಿಲ್ಲ...:(..

ಹಾಂ..ಮತ್ತೆ ಧನ್ಯವಾದಗಳು ನಿಮ್ಮ ಸಲಹೆಗಳಿಗೆ..
ಬರ್ತಾ ಇರಿ..
ನಮಸ್ತೆ :)