Sunday, September 21, 2014

ಪಲ್ಲಟ(ಕಥೆ)

ಗೆಳೆಯರೇ,ಹೆಂಗಿದೀರಿ ?? ಅರಾಮಲ್ವಾ ...
ಕಥೆ ಹೇಳುವ ಇನ್ನೊಂದು ಪ್ರಯತ್ನ...."ಪಲ್ಲಟ" ಎನ್ನುವ ಕಥೆಯನ್ನು ಬರೆದು ಅದನ್ನು ಧ್ವನಿ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ...
ದಯಮಾಡಿ ಕೇಳಿ..ಅನಿಸಿಕೆ,ತಪ್ಪು-ಒಪ್ಪು ಹೇಳಿ,ತಿದ್ದಿ  ನನ್ನನ್ನು ಬೆಳೆಸಿ,ತೀರಾ ಇಷ್ಟವಾದರೆ  ಅನಿಸಿಕೆಗಳನ್ನು,ಲಿಂಕ ಅನ್ನು ನಿಮ್ಮ ಫೇಸ್ ಬುಕ್ಕು,ಬ್ಲಾಗಿನ ಅಂಕಣಗಳಲ್ಲೂ ಹಂಚಿಕೊಂಡು ಪ್ರೋತ್ಸಾಹಿಸಿ :)...
ವಂದನೆಗಳು...
ನಮಸ್ತೆ :)

ಇಲ್ಲಿದೆ ಲಿಂಕು : ಸೌಂಡ ಕ್ಲೌಡ್ ನ ಕೊಂಡಿ

https://soundcloud.com/chinmay-bhat-3/mlg635uhs5hr

6 comments:

Badarinath Palavalli said...

ನನ್ನ ಮೊಬೈಲಿನಲ್ಲಿ ದ್ವನಿಯನ್ನು ಆಲಿಸುವುದು nearly impossible. ಆದ್ದರಿಂದ office systemನಲ್ಲಿ ಕೇಳಿ ಮತ್ತೆ comment ಬರೆಯುತ್ಫ್ತೇನೆ.

Sudeepa ಸುದೀಪ said...

super.. tumba ishta aaytu... :-)

shivu.k said...

ಫ್ರೀತಿಯ ಚಿನ್ಮಯ್ ಭಟ್,

ನಿಮ್ಮ ಪಲ್ಲಟ ಕತೆಯನ್ನು ಕೇಳಿದೆ. ಮೊದಲಿಗೆ ನಿಮ್ಮ ಕತೆ ಹೇಳುವ ಶೈಲಿ ತುಂಬಾ ಇಷ್ಟವಾಯ್ತು. ನಿಮ್ಮ ದ್ವನಿ ಚೆನ್ನಾಗಿದೆ. ಹೇಳುವ ಶೈಲಿಯಲ್ಲಿ ಭಾವನಾತ್ಮಕ, ಏರಿಳಿತ, ತಾಳ್ಮೆ ಇವೆಲ್ಲವೂ ಕೇಳುಗನನ್ನು ಹಿಡಿದಿಟ್ಟುಕೊಳ್ಳುತ್ತವೆ.. ಮತ್ತೆ ಕತೆಯ ವಿಚಾರಕ್ಕೆ ಬಂದರೆ, ನೀವು ಹೇಳಿದ ಕತೆ ಕೇಳುವುದಕ್ಕಿಂತ ಓದುವುದಕ್ಕೆ ಚೆಂದವೆನಿಸಬಹುದು. ಏಕೆಂದರೆ ಕಾವ್ಯಾತ್ಮಕವಾಗಿರುವುದರಿಂದ ಅದನ್ನು ಓದುವಾಗ ಆಲ್ಲಲ್ಲಿ ನಿಲ್ಲಿಸಿ ಅದರ ಭಾವವನ್ನು feel ಮಾಡಿ ಮುಂದಕ್ಕೆ ಓದಲು ಅವಕಾಶವಿರುತ್ತದೆ. ಆದರೆ ಕತೆ ಕೇಳುವಾಗ ಅಂತ ಭಾವಗಳನ್ನು feel ಮಾಡುವುದಕ್ಕೆ ಮೊದಲೇ ಮುಂದಿನ ಸಾಲು ಕೇಳಬೇಕಾದ ಸ್ಥಿತಿಯಿಂದಾಗ ಅವುಗಳ ಅವಕಾಶ ಕಡಿಮೆಯಾಗುತ್ತದೆ. ಹಾಗಾಗಿ ಆಡುಭಾಷೆಯಲ್ಲಿ ಕೇಳುಗನಿಗೆ ಸರಳವಾಗಿದ್ದರೆ ಹೆಚ್ಚು ಸೂಕ್ತ ಮತ್ತು ಇದೇ ಕಾರಣಕ್ಕೆ ಕತೆ ಪ್ರಾರಂಭಿಕ ಹಂತದಲ್ಲಿ ಸ್ವಲ್ಪ ಬೋರ್ ಹೊಡೆಸಲಾರಂಭಿಸುತ್ತದೆ. ಕತೆ ಕುತೂಹಲ ಕೆರಳಿಸುವುದು ಕೊನೆಯಲ್ಲಿ ಈಶನ ಮಾತುಗಳು ಪ್ರಾರಂಭವಾದಾಗ ಮಾತ್ರ. ಹಾಗಾಗಿ ಕತೆಗೆ ಇನ್ನಷ್ಟು ಗಟ್ಟಿತನ ಬೇಕಿತ್ತೇನೋ ಅನ್ನಿಸಿತು. ಇದೆಲ್ಲ ನನ್ನ ವೈಯಕ್ತಿಕ ಅನಿಸಿಕೆಗಳು ಮಾತ್ರ.

ಒಟ್ಟಾರೆ ನಿಮ್ಮ ಪ್ರಯತ್ನ ಮೆಚ್ಚುವಂತದ್ದು. ಹಾಗೆ ನಾನು ಇಂಥವು ಮಾಡಬೇಕು ಎನ್ನುವ ಸ್ಪೂರ್ತಿ ನೀಡುತ್ತಿವೆ...

ಧನ್ಯವಾದಗಳೊಂದಿಗೆ...

ಶಿವು.ಕೆ

ಚಿನ್ಮಯ ಭಟ್ said...

ಬದರಿ ಸರ್,ತೊಂದರೆ ಇಲ್ಲಾ,ಅರಾಮಾಗಿ ಕೇಳಿ,ಅನಿಸಿಕೆ ಹೇಳಿ :)
ವಂದನೆಗಳು

ಚಿನ್ಮಯ ಭಟ್ said...

ಸುಮತಿ ಅಕ್ಕಾ,
ಧನ್ಯವಾದ ...ಬರ್ತಿರಿ :)

ಚಿನ್ಮಯ ಭಟ್ said...

ಶಿವು ಸರ್,
ಧನ್ಯವಾದಗಳು ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗೆ :)
ಖಂಡಿತವಾಗಿ ಇವುಗಳ ಬಗ್ಗೆ ಗಮನಹರಿಸ್ತೀನಿ..
ಮೊದಲ ಪ್ರಯತ್ನ ಇದು..ನಿಮ್ಮೆಲ್ಲರ ಪ್ರೀತಿಪೂರ್ವಕ ಸಲಹೆಗಳನ್ನು ನೋಡಿ ಖುಷಿ ಅಯ್ತು..

ಮತ್ತೆ ಕಥೆಯ ಬಗ್ಗೆ ಬರೋದಾದ್ರೆ ,.
ನಿಜ ಸರ್.ಶುರುವಿನ ಸ್ವಗತಗಳನ್ನು ನಾನು ಇನ್ನೂ ಚೆನಾಗಿ ಹೇಳಬಹುದಿತ್ತೇನೋ ಅನ್ನಿಸ್ತಾ ಇದೆ..ನೋಡ್ತಿನಿ ಸರ್..ಧನ್ಯವಾದ ಮುಕ್ತವಾದ ಅನಿಸಿಕೆಗೆ :) :) ಇದು ಹೇಳಕ್ಕೇ ಅಂತಾ ಬರೆದ ಕಥೆ ಅಲ್ಲ,ಬರೆದದ್ದನ್ನು ಹೇಳಲು ಹೋಗಿದ್ದು..ಖ಼ಂಡಿತ ಈ ಬಗ್ಗೆ ಮುಂದೆ ಗಮನ ಹರಿಸ್ತೀನಿ...

ಧನ್ಯವಾದ ಸರ್..ಖುಷಿ ಆಯ್ತು... ಹೀಗೇ ತಪ್ಪು-ಒಪ್ಪುಗಳನ್ನು ಮುಕ್ತವಾಗಿ ಹಂಚಿಕೊಂಡು,ಬೆಳೆಯಲು ಸಹಕರಿಸಿ...
ವಂದನೆಗಳು..
ನಮಸ್ತೆ :)