ನಾ ಅಂದು ನೋಡಿದೆ
ನೋಡಬಾರದಿತ್ತೇನೋ ಎನಿಸುತಿದೆ ಇಂದು
ಅದೆಂತ ಕಣ್ಣೋಟ ,ಮನಸೆಳವ ಮೈಮಾಟ
ಮರೆತಿದ್ದೆ ನಾ ಏಣಿಯಲಿ ನಿಂತಿದ್ದೆ ಎಂದು
ಆ ನೀಳ ಕೂದಲು ಹೊಯ್ದಾಡುತ್ತಿತ್ತು
ಗಾಳಿಯ ಗಾನಕ್ಕೆ ,ಕುಣಿಯುತಿತ್ತು ಮಿಂಚುಬಳ್ಳಿಯಂತೆ
ಕಾಯುತ್ತಿತ್ತು ನನ್ನ ಮನ ,ಹ್ರದಯ ಸಾಗರದಲ್ಲಿ
ಪ್ರೀತಿ ಮೀನು ಹುಡುಕಿ ಮಿಂಚುಳ್ಳಿಯಂತೆ
ನಾ ನೋಡಿದನು ನೋಡಿದ ಅವಳ
ತೆರಗಣ್ಣು,ಹೇಳಿತು ಓ ತುಟಿಯೇ ತುಸು ನಗು
ನಾ ಅಂದುಕೊಂಡೆ ಅಂದು ,
ಅಷ್ಟು ನಗು ,ಸಾಕೆನಗು
ಅದೇನು ಆಟವೋ ಹೋದಳು ,ಬಂದಳು
ಮತ್ತೆ ಹೋದಳು ,ತಿರುಗಿ ಬಂದಳು
ಆ ಕಡೆ ನೋಡಿ ,ಈ ಕಡೆ ನೋಡಿ
ಬಾಡಿ ಬಸವಲಿದವು ಈ ನನ್ನ ಕಂಗಳು !!!
ಮತ್ತೆ ಬಂದು ಹಸಿನಕ್ಕು,ಒಳ ಹೋಗೇ ಬಿಟ್ಟಳು
ನಾ ಬಗ್ಗಿ ,ತಗ್ಗಿ ನೋಡಿದ್ದೊಂದೇ ಬಂತು
ಕೈ ಮುರಿದು ,ಕಾಲು ತರಚಿ ಆಸ್ಪತ್ರೆಯಲ್ಲಿದ್ದಾಗ
ಏಣಿ ಮೇಲಿದ್ದುದು ನೆನಪಿಗೆ ಬಂತು !!!!!!!!!!
1 comment:
ondu reethi anticlimax thara chennagide. mathe "husi" nakku antha irbeku alva, hasi nakku andiddeeri...
Post a Comment