ಗೆಳೆತನಕೆ ಒಂದು ದಿನ
ಪ್ರೇಮಕೆಂದೊಂದು ದಿನ
ಅದಕೊಂದು ಇದಕೊಂದು ಎಂದು
ಹುಚ್ಚೆಬ್ಬಿಸಿ ಕುಣಿಯುವೆವು
ತಣ್ಣಗಾಗುವವರೆಗೂ ನಮ್ಮ ಮೈ-ಮನ
ಆದರೆ ವರುಷಕ್ಕೊಂಡೆ ದಿನ
ಅದು ಅತಿಹರುಷದ ದಿನ
ಇಂದು ಸ್ವಾತಂತ್ರ್ಯೋತ್ಸವ ಎಂದು
ಆಚರಿಸಿ ,ಆಧರಿಸಿ
ತಿರುಗಿ ನೋಡಿಕೊಳ್ಳಲಾರೆವೇ ನಾವು ನಮ್ಮನ ?
ಆದಿನ ಈ ದಿನದಂದು ಬೆಳ್ಳಂಬೆಳಿಗ್ಗೆ
ಹರಿದಾಡುವದು ಶುಭಕಾಮನೆ ,ಬಹುಮಾನ
ಆದರೆ ಇಂದು ಬಿದ್ದಿರುವೆವು ಹಾಸಿಗೆ ಮೇಲೇ
ಇಂದು ರಜೆಯೆಂದು ,ಇದಲ್ಲವೇ ದೇಶಕೆ ಅವಮಾನ ?
ಏಳಿ ಎದ್ದೇಳಿ ,ಮನದ ಜಡವ ಬಿಟ್ಟು
ಹೊರಡಿ ,ಹಾರಿಸಲು ಧ್ವಜವ ಶುಭ್ರ ವಸ್ತ್ರ ತೊಟ್ಟು
ಹಾರುತಿರಲಿ ನಮ್ಮ ಹೆಮ್ಮೆಯ ಬಾವುಟ ,
ಉಳಿಸಿ ,ಬೆಳೆಸೋಣ ಅದನ್ನು ಇರುವವರೆಗೂ ರಕ್ತದ ಕೊನೆ ತೊಟ್ಟು .....
No comments:
Post a Comment