Friday, October 5, 2012

ಮೂಡುತಿದೆ ಮಿರಿಮಿಂಚು…..

ನಿನ್ನೆ ನಿಸಾರ್ ಅಹ್ಮದರ "ನಿತ್ಯೋತ್ಸವ 'ತಂದು ಓದುತ್ತಾ ಕೂತೆ.. ಅವರು ಶಬ್ದಗಳನ್ನು ಬಳಸುವ ರೀತಿ ಹಾಗೂ ಭಾವವನ್ನು ಅಭಿವ್ಯಕ್ತಪಡಿಸುವ ರೀತಿ ತುಂಬಾ ಇಷ್ಟವಾಯ್ತು.. .ಹಾಗೇಯೆ ಮಡಚಿಟ್ಟವನಿಗೆ ,ನನಗೂ ಏನಾದರೂ ಬರಿಯಬೇಕು ಎಂದೆನಿಸಿತು...ಆಗಷ್ಟೇ ಮಳೆ ಬಿಟ್ಟಿತ್ತು...ನನ್ನ ಮನಸ್ಸಿನಲ್ಲಿ ಹಲವಾರು ದಿನದಿಂದ ಹೊಯ್ದಾಡುತ್ತಿದ್ದ ಗೊಂದಲಗಳ  ಪರಿಹಾರಕ್ಕೊಂದು ದಾರಿ ಹೊಳೆದಿತ್ತು.ಅವೆರಡನ್ನೂ ಸೇರಿಸಿ ಬರೆಯುವ ಪ್ರಯತ್ನ ಇದು...ಇದನ್ನು  ಮಳೆ ನಿಂತು ಹೋದ ಮೇಲಿನ ವಾತವರಣವೆಂದಾದರೂ ತಿಳಿದುಕೊಳ್ಳಿ ಅಥವಾ ಮನದ ಗೊಂದಲಗಳು ಕಳೆದು,ಹೊಸ ದಾರಿ ಸಿಕ್ಕ ಸ್ಥಿತಿಯ ಸಾಲುಗಳು ಎಂದಾದರು ತಿಳಿದುಕೊಳ್ಳಿ....


ಮೂಡುತಿದೆ ಮಿರಿಮಿಂಚು ಬಾಂದಣದ ಅಂಚಿನಲಿ
ತಾಡಿಸುತಿದೆ ಹೊಸಕನಸು ಮಳೆಬಿಲ್ಲ ಕುಂಚದಲಿ||

ಕೊಚ್ಚಿಹೋಯಿತು ಕೊಳೆಯು ಜಡಿದಿದ್ದ ಸುರಿಮಳೆಗೆ,
ಚೊಕ್ಕವಾಯಿತು ಇಳೆಯು ನೆಗಸಿನಾ ಸುಳಿಗಳಿಗೆ.
ಬಿರುಕೆಲ್ಲಾ ಸೇರುತಿದೆ,ನನಕಾರ ಕರಗುತಿದೆ,
ಸಮತೆಯಾ ಬಯಲೀಗ ಕೈಬೀಸಿ ಕರೆಯುತಿದೆ.

ಚಾಮರವಾ ಬೀಸುತಿದೆ ಮಿಂದೆದ್ದ ಹಳೆಮರವು,
ಹಾನವನು ಸುಳಿದಿರಲು ಕೆನ್ನೀರ ಹೊಸಹರಿವು.
ಮೊಳೆಯುತಿದೆ ಚಿಗುರೊಂದು ಮಲಗಿದ್ದ ಮಣ್ಣಿನಲಿ,
ಕಾಣುತಿದೆ ಕೋಲ್ಮಿಂಚು ಕಂದಿದಾ ಕಣ್ಣಿನಲಿ.

(ಇದರಲ್ಲಿ ನಮ್ಮ ಮನೆಯ ಕಡೆ ಬಳಸುವ ಶಬ್ದವನ್ನು ಬಳಸುವ ಪ್ರಯತ್ನ ಮಾಡಿದ್ದೇನೆ,ನೋಡಿ..
ನೆಗಸು=ಜೋರಾದ ಮಳೆಯಿಂದ ಹೊಳೆಯ ನೀರಿನಲ್ಲಿ ಉಂಟಾಗುವ ಉಬ್ಬರ
ಹಾನ=ದ್ರಷ್ಟಿ ತೆಗೆಯುವ ಒಂದು ಬಗೆ  )
,ದಯವಿಟ್ಟು ಓದಿ ,,,ತಪ್ಪು ಒಪ್ಪುಗಳನ್ನು ತಿಳಿಸಿ, ನನ್ನನ್ನು ಬೆಳೆಸಿ
-ನಿಮ್ಮನೆ ಹುಡುಗ

23 comments:

Unknown said...

superb...:)

ಸುಬ್ರಮಣ್ಯ said...

:-)

ಚಿನ್ಮಯ ಭಟ್ said...

ಧನ್ಯವಾದ ಭರತ್..ಬರ್ತಾ ಇರು

ಚಿನ್ಮಯ ಭಟ್ said...

ಧನ್ಯವಾದ ಸುಬ್ರಹ್ಮಣ್ಯ ಸರ್..

Srikanth Manjunath said...

ಇಳೆಯ ಕೊಳೆಯನು ತೊಳೆವ ಮಳೆ..ಮನದ ಕಳೆಯನ್ನ ತಿಳಿ ತಿಳಿ ಮಾಡುತ್ತ ಮಾಡುತ್ತಾ ಕಪ್ಪಾದ "ಕಳೆ" ಹೋಗಿ ತಿಳಿಯಾದ "ಕಳೆ" ಕೊಡುತ್ತದೆ ಜೀವ ಚೇತನಕ್ಕೆ...ನಿಮ್ಮ ಬರಹವು ಹಾಗೆ..ಮಳೆಯಿಂದ ತೊಯ್ದ ಇಳೆ..ಮನವನ್ನು ಭಾವುಕಗೊಳೀಸುತ್ತಾ ಹೋಗಿದೆ.. ಸುಂದರ..ಸುಲಲಿತ ಮಧುರ ಮಧುರ ಮಧುರಾ....!!!

Ittigecement said...

ನಿಮ್ಮ ಪ್ರಯತ್ನ ತುಂಬಾ ಚೆನ್ನಗಿದೆ..
ಮುಂದುವರೆಸಿ ...........

Shruthi B S said...

ತು೦ಬಾ ಚನ್ನಾಗಿದೆ ಚಿನ್ಮಯ್... ಮಳೆಯ೦ತೂ ಎ೦ದಿಗೂ ಸು೦ದರವೇ.. ಮಳೆ ಬ೦ದು ನಿ೦ತ ನ೦ತರದ ಪರಿಸರವೂ ಆಷ್ಟೇ ಸು೦ದರ ಹಾಗೂ ಆಹ್ಲಾದಕರ....:)

ಚಿನ್ಮಯ ಭಟ್ said...

ನಿಜ ಶ್ರೀಕಾಂತ್...ಮಳೆಯ ಆರ್ಭಟ ನಿಂತು ,ನೀರೆಲ್ಲ ಹರಿದು ಹೋಗುವಾಗ ಏನೋ ಒಂದು ಸುಪ್ತವಾದ ಖುಷಿ ನಮ್ಮ ಮನಸ್ಸನ್ನು ಆವರಿಸಿ ಬಿಡುತ್ತದೆ. ಏನೋ ಹೊಸದನ್ನು ಮಾಡಲು ಹೊರಡುವ ಚೈತನ್ಯ ಮೂಡುತ್ತದೆ.. ಅದೇ ತರಹ ಮನಸ್ಸೂ ಕೂಡ ...ಏನೋನೋ ಸಮಸ್ಯೆಗಳ ಮಳೆಯಲ್ಲಿ ಸಿಕ್ಕಿ,ಅವೆಲ್ಲಾ ಮುಗಿದ ಮೇಲೆ,ಮತ್ತೆ ಮೂಡುವ ಚೈತನ್ಯ,ಲವಲವಿಕೆ,ಪ್ರಶಾಂತವಾದ ಮನಸ್ಸುಗಳಿವೆಯಲ್ಲಾ ಅವುಗಳು ಅಧ್ಬುತ ಅಷ್ಟೇ...

ಚಿನ್ಮಯ ಭಟ್ said...

ಧನ್ಯವಾದ ಪ್ರಕಾಶಣ್ಣಾ...ನಿಮ್ಮಲ್ಲೆರ ಆಶೀರ್ವಾದ ಸದಾ ಇದೇ ತರಾ ಇರ್ಲಿ :)

ಚಿನ್ಮಯ ಭಟ್ said...

ಹಾಂ..ಧನ್ಯವಾದ ಚೆಂದದ ಪ್ರತಿಕ್ರೀಯೆ ನೀಡಿದ್ದಕ್ಕೆ..ಬರ್ತಾ ಇರಿ :)

ಚಿನ್ಮಯ ಭಟ್ said...

ಧನ್ಯವಾದ ಶ್ರುತಿ..ಹೊಸತನದ ಹುರುಪಿನಲ್ಲಿ,ತಂಗಾಳಿಯು ಮೈಗೆ ಸೋಂಕುತ್ತಿದ್ದರೆ,ಅದೇನೋ ಒಂದು ಭಾವನೆ ಮೂಡುತ್ತದೆ..ಅದಕ್ಕೆ "ಆಹ್ಲಾದಕರ" ಎನ್ನುವ ಶಬ್ದವೇ ಸರಿಯೇನೋ..ಪ್ರತಿಕ್ರಿಯೆ ಇಷ್ಟವಾಯ್ತು...ಬರ್ತಾ ಇರಿ..

Unknown said...

manada gondala tiliyaagide anni !,,badukalli heegeye moodutirali hosa hosa belaku(minchu)

male ninta melina vaatavaranada mannina parimala chennagide chinmayanna ,,,
ishtavaayitu

ಚಿನ್ಮಯ ಭಟ್ said...

ಧನ್ಯವಾದ ಭಾಗ್ಯಾ....ಬರ್ತಾ ಇರು...ಖುಷಿ ಆತು ಬಂದಿದ್ದು....

balasubramanya said...

ಕವಿತೆ ಚೆನ್ನಾಗಿ ಬಂದಿದೆ.ಪದ ಬಳಕೆ ತುಂಬಾ ಇಷ್ಟವಾಯ್ತು.


ಚಾಮರವಾ ಬೀಸುತಿದೆ ಮಿಂದೆದ್ದ ಹಳೆಮರವು,
ಹಾನವನು ಸುಳಿದಿರಲು ಕೆನ್ನೀರ ಹೊಸಹರಿವು.
ಮೊಳೆಯುತಿದೆ ಚಿಗುರೊಂದು ಮಲಗಿದ್ದ ಮಣ್ಣಿನಲಿ,
ಕಾಣುತಿದೆ ಕೋಲ್ಮಿಂಚು ಕಂದಿದಾ ಕಣ್ಣಿನಲಿ.


ಕವಿತೆಯಲ್ಲಿ ಇಷ್ಟವಾದ ಪದಗಳ ಸಾಲುಗಳು ಇವು.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

ಚಿನ್ಮಯ ಭಟ್ said...

ಧನ್ಯವಾದ ಬಾಲಣ್ಣಾ...ನಿಮ್ಮ ಪ್ರೋತ್ಸಾಹ ಇದೇ ತರ ಮುಂದುವರೆಲಿ....

Unknown said...

cholo idda...

ಚಿನ್ಮಯ ಭಟ್ said...

ಧನ್ಯವಾದ ಪ್ರದೀಪ್

prabhamani nagaraja said...

ಉತ್ತಮ ಪ್ರಯತ್ನ ಚಿನ್ಮಯ್, ಕವನ ಸು೦ದರವಾಗಿ ಮೂಡಿದೆ, ಅಭಿನ೦ದನೆಗಳು. ಪದಗಳ ಅರ್ಥ ತಿಳಿಸಿ ಓದಲು ಸಹಕರಿಸಿದ್ದೀರಿ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.


ಉತ್ತಮ ಪ್ರಯತ್ನ ಚಿನ್ಮಯ್, ಕವನ ಸು೦ದರವಾಗಿ ಮೂಡಿದೆ, ಅಭಿನ೦ದನೆಗಳು. ಪದಗಳ ಅರ್ಥ ತಿಳಿಸಿ ಓದಲು ಸಹಕರಿಸಿದ್ದೀರಿ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.ಉತ್ತಮ ಪ್ರಯತ್ನ ಚಿನ್ಮಯ್, ಕವನ ಸು೦ದರವಾಗಿ ಮೂಡಿದೆ, ಅಭಿನ೦ದನೆಗಳು. ಪದಗಳ ಅರ್ಥ ತಿಳಿಸಿ ಓದಲು ಸಹಕರಿಸಿದ್ದೀರಿ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.


ಮೌನರಾಗ said...

ಚಂದದ ಕವನ...
ಮಳೆ, ಮಳೆ ನಿಂತು ಹೋದ ಮೇಲಿನ ವಾತಾವರಣ, ಆಗ ಎದೆಯೊಳಗಿನ ಖುಷಿ...
ಸೂಪೆರ್ಬ್......

ಚಿನ್ಮಯ ಭಟ್ said...

ಧನ್ಯವಾದ ಪ್ರಭಾಮಣಿಜೀ..ನಿಮ್ಮ ಬ್ಲಾಗನ್ನೂ ಸಹ ನೋಡಿದ್ದೆ...ಖುಷಿಯಾಯ್ತು..ನೀವು ಸಾಹಿತ್ಯದಲ್ಲೆಲ್ಲಾ ಅನುಭವ ಉಳ್ಳವರು,ದಯವಿಟ್ಟು ನಾನು ಇನ್ನೂ ಸುಧಾರಿಸಬೇಕಾದ ಅಂಶಗಳನ್ನು ತಿಳಿಸಿ,ಬೆಳೆಯಲು ಸಹಕರಿಸಿ....
ನಮಸ್ತೆ...

ಚಿನ್ಮಯ ಭಟ್ said...

ಧನ್ಯವಾದ ಸುಷ್ಮಾ...ಬರ್ತಾ ಇರಿ ...
ನಮಸ್ತೆ...

ಸೀತಾರಾಮ. ಕೆ. / SITARAM.K said...

dchendada kavana!

ಚಿನ್ಮಯ ಭಟ್ said...

ಧನ್ಯವಾದಗಳು ಸೀತಾರಾಮ ಅವರೇ..ಬರ್ತಾ ಇರಿ