Monday, October 15, 2012

ಗಿರಿ-ಬಾಲೆಯ ದರ್ಶನ

"ಆಕಸ್ಮಿಕ","ಅದೃಷ್ಟ" ಅಂತೆಲ್ಲಾ ಹೇಳ್ತೀವಲ್ವಾ???ಅದ್ಕೆ ಒಂದು ಒಳ್ಳೆ ಉದಾಹರಣೆ ನಿನ್ನೆ ಸಿಕ್ತು. ..ಬೆಳಗಿಂದ ಪುಸ್ತಕ ಹಿಡಿದುಕೊಂಡು ಕೂತವನಿಗೆ ಸುಮನಕ್ಕ ದೇವಸ್ಥಾನಕ್ಕೆ ಹೋಗ್ತಿದೀನಿ ಅಂದಾಗ ನನಗೂ ದೇವರ ನೆನಪಾಯ್ತು..ಹಂಗೇ ಇಲ್ಲಿಯೇ ಪಿ.ಜಿಯ ಬದಿಯ ಹಿರೇಮಗಳೂರು ಕೋದಂಡರಾಮ ದೇವಸ್ಥಾನಕ್ಕೆ ಹೋದವನಿಗೆ ಗಿರೀಶ(ಗಿರಿ ಶಿಖರ ಬ್ಲಾಗ್) ಹಾಗೂ ಬಾಲು ಸರ್(ನಿಮ್ಮೊಳಗೊಬ್ಬ ಬಾಲು) ಸಿಕ್ಕಿದ್ರು..ಕೇವಲ ಬ್ಲಾಗಿನಲ್ಲಿ ಅವರ ಲೇಖನಗಳನ್ನು ಓದಿ ಅಭಿಮಾನಿಯಾಗಿದ್ದ ನನಗೆ ಅವರೊಂದಿಗೆ ಮುಖತಃ ಭೇಟಿಯಾಗಿ ಮಾತನಾಡುವ ಅದೃಷ್ಟ ಸಿಕ್ತು..ಹಂಗೆ ದೇವಸ್ಥಾನ ನೋಡಿಕೊಂಡು ಹೊರಡುವ ಮುನ್ನ ಬಾಲು ಸರ್ ಆತ್ಮೀಯತೆಯಿಂದ ಗಿರಿ ಪ್ರವಾಸಕ್ಕೆ ಕರೆದರು,ನಾನೂ ಗೋಣಲ್ಲಾಡಿಸಿ ಹೊರಟೆ..ಜೊತೆಗೆ ನಮ್ಮದೇ ಕಾಲೇಜಿನ ದರ್ಶನ್ ಕೂಡ ಸೇರಿದರು.. ಹೀಗೆ ಆಕಸ್ಮಿಕವಾಗಿ ಹೊರಟ ಪ್ರವಾಸ ನನ್ನ ಪಾಲಿಗೆ ಮರೆಯಲಾದದ್ದು...ಅಲ್ಲಿಯ ಗಿರಿ ಪರ್ವತಗಳನ್ನು ನೋಡಿ ಮನಸ್ಸಿಗನಿಸಿದ್ದಷ್ಟನ್ನು ಗೀಚಿದ್ದೇನೆ..ದಯವಿಟ್ಟು ಓದಿ ,ತಪ್ಪು-ಒಪ್ಪುಗಳನ್ನು ತಿಳಿಸಿ ಆಶೀರ್ವದಿಸಿ...ಕರಿಹಸಿರು ಕೇಶರಾಶಿಯ ಬಿಟ್ಟು,
ಗಿಳಿಹಸಿರು ಕುಪ್ಪಸವ ತೊಟ್ಟು
ಬಿಳಿಮೋಡದ ಸೆರಗನು ಹೊದೆದು
ನಿಂತಿದ್ದಳಾಕೆ ನಮಗಾಗಿ ಕಾದು

ಮೋಡದಡಿಯಲಿ ನಮ್ಮನು ನೂಕಿ,
ಆಡಿಸಿದಳು ಹರುಷದುಯ್ಯಾಲೆಯನು ಜೀಕಿ,
ಬೀಳಿಸಿದಳು ಕ್ಯಾಮರವ ಹಳೆಹೋಳಿಯಲಿ
ಬೀಸಿದಳು ಚಾಮರವ ತಂಗಾಳಿಯಲಿ

ಅಲ್ಲಿತ್ತು ಹಸಿರು ಮೆತ್ತಿದ ಕಲ್ಲಿನ ಕೇಕು
ಜೊತೆಗಿತ್ತು ಹಸಿರಿನ ಹೂಗಳ ತಳಕು
ಕಂಡಿರಲು ಸುತ್ತಲೂ ಹಸಿರಿನ ಸಾಲುಗಳು
ಮೂಡಿತು ಮೆತ್ತಗೆ ಶಬ್ಧವಿರದ ಸಾಲುಗಳು.

( ಇಲ್ಲಿ ಜೀಕುವುದು ಎಂದರೆ ತೂಗುವುದು ಎಂದರ್ಥ,
ಹೋಳಿ ಎಂದರೆ ನಮ್ಮ ಕಡೆ ತುಂಟತನಕ್ಕೆ ಬಳಸುವ ಪದ)

ಧನ್ಯವಾದ ಗಿರೀಶ್,ಬಾಲು ಸರ್ ಹಾಗೂ ದರ್ಶನ್.......

-ನಿಮ್ಮನೆ ಹುಡುಗ

26 comments:

Ittigecement said...

ತುಂಬಾ ಚಂದದ ಸಾಲುಗಳು ಚಿನ್ಮಯ್....

ಬಾಲಣ್ಣ ನನಗೂ ಕರೆದಿದ್ದರು...

ಈಗ ಹೊಟ್ಟೆಕಿಚ್ಚು ಆಗ್ತ ಇದೆ...

ಇನ್ನಷ್ಟು ಬರೆಯಿರಿ.....

Unknown said...

ahha ,,,agasakke kai chaachi modavannu sparshisi bandiruviri endaayitu ,,,nimma pravasa geete tumbane chennagide chinmayanna ,,,ishtavaadavu saalugalu ,,,dhanyavadagalu

ದಿನಕರ ಮೊಗೇರ said...

tumbaa sogasaagide chinmay.....
munduvarisi...

Srikanth Manjunath said...

ಹಸಿರಿನೊಡನಾಟ..ಮುಗಿಲು ಚುಂಬಿಸುವ ಮೋಡಗಳು, ಮುತ್ತು ಕೊಡಲು ಹೊಂಚು ಹಾಕುವ ತಂಗಾಳಿಯ ಮೋಹಕ ಬಲೆ..ಇವೆ ಅಲ್ಲವೇ ಒಳಗೆ ಗುಟ್ಟು ಮಾಡುತ್ತಾ ಅವಿತು ಕೊಂಡಿದ್ದ ಪದಗಳು ಹೊರಗೆ ಬರಲು ಸ್ಪೂರ್ತಿ..ಸುಂದರವಾಗಿದೆ ಚಿನ್ಮಯ್...

Badarinath Palavalli said...

ಕಣ್ಣಿಗೆ ಕಟ್ಟಿಕೊಡುವ ಶೈಲಿ. ಶಭಾಷ್ ಗೆಳೆಯ.

shivu.k said...

ಪ್ರವಾಸದ ಕಥನದ ಕವನದಲ್ಲಿ ಪ್ರಕೃತಿಯ ವರ್ಣನೆ ಚೆನ್ನಾಗಿದೆ...ಚಿನ್ಮಯ್ ಭಟ್

ಗಿರೀಶ್.ಎಸ್ said...

ಚಿನ್ಮಯ್,ನಿಮ್ಮ ಸಾಲುಗಳು ತುಂಬ ಚೆನ್ನಾಗಿವೆ....ಅಂದು ನಿಮ್ಮ ಅನಿರೀಕ್ಷಿತ ಭೇಟಿ ನಿಜಕ್ಕೂ ಸಂತೋಷವಾಯಿತು.... ನಮ್ಮ ಪ್ರವಾಸಕ್ಕೆ ನೀವು ಕೂಡ ಸಾಥ್ ನೀಡಿದ್ದಕ್ಕೆ ಧನ್ಯವಾದಗಳು...ಅದು ನಿಜಕ್ಕೂ ಮರೆಯಲಾಗದ ದಿನ,ಕಣ್ಣನ್ ಮಾಮನನ್ನು ಭೇಟಿ ಮಾಡಿದ್ದು ತುಂಬ ಸಂತೋಷವಾಯಿತು...

ಮೌನರಾಗ said...

ವರ್ಣನೆಯ ಬಗೆ ತುಂಬಾ ಇಷ್ಟ ಆಯಿತು ಚಿನ್ಮಯ್...
ಸೂಪರ್..

ಮನಮುಕ್ತಾ said...

ನಿಸರ್ಗದ ಚೆ೦ದದ ನೋಟವನ್ನು ಕವನದಲ್ಲಿ ತೋರಿಸಿದ್ದೀರಿ.. ಚೆನ್ನಾಗಿದೆ.

ಚಿನ್ಮಯ ಭಟ್ said...

ಧನ್ಯವಾದ ಪ್ರಕಾಶಣ್ಣಾ...ನನಗಂತೂ ಸಖತ್ ಖುಷಿಯಾಯ್ತು ಬಾಲು ಸರ್ ಮತ್ತೆ ಗಿರೀಶ್ ಜೊತೆ ಇದ್ದಿದ್ದು..ನೀವೂ ಬಂದಿದ್ರೆ ಚೆನಾಗಿರ್ತಿತ್ತು..ಇರ್ಲಿ ಮುಂದಿನ ಸಲ ಆದ್ರೂ ಸಿಗುವಾ..
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕಾಗಿ..ಖುಷಿಯಾಯ್ತು..

ನಮಸ್ತೆ..

ಚಿನ್ಮಯ ಭಟ್ said...

ಧನ್ಯವಾದ ದಿನಕರಣ್ಣಾ..ಬರ್ತಾ ಇರಿ ..

ಚಿನ್ಮಯ ಭಟ್ said...

ಖಂಡಿತ ಶ್ರೀ...ಆ ವಾತಾವರಣ ನಿಜವಾಗಲೂ ಹೊಸ ಲೋಕವನ್ನೇ ಸೃಷ್ಟಿಸಿತ್ತು..."ನನ್ನಲಿ ನಾನಿಲ್ಲ" ಆಗಿದ್ದೆ,ತುಸು ಹೊತ್ತು !!

ಧನ್ಯವಾದ ಸುಂದರವಾದ ಅನಿಸಿಕೆಗಳನ್ನು ಬರೆದಿದ್ದುದಕ್ಕೆ...ಬರ್ತಾ ಇರಿ ..
ನಮಸ್ತೆ ...

ಚಿನ್ಮಯ ಭಟ್ said...

ಪುನೀತನಾದೆ ಬದರಿಜೀ...ನಿಮ್ಮ ಆಶೀರ್ವಾದ ಹೀಗೇ ಇರಲಿ...
ತಪ್ಪುಗಳನ್ನು,ಬದಲಾವಣೆಗಳನ್ನೂ ದಯವಿಟ್ಟು ತಿಳಿಸಿ,ಮಾರ್ಗದರ್ಶನ ಮಾಡಿ..
ಸಖತ್ ಖುಷಿಯಾಯ್ತು...ಬರ್ತಾ ಇರಿ..
ನಮಸ್ತೆ..

ಚಿನ್ಮಯ ಭಟ್ said...

ಧನ್ಯವಾದ ಶಿವು ಸರ್...ಬರ್ತಾ ಇರಿ

ಚಿನ್ಮಯ ಭಟ್ said...

ನಿಜ್ವಾಗ್ಲೂ ಗಿರೀಶ್...ನನಗಂತೂ ನಿಮ್ಮೊಟ್ಟಿಗೆ ಕಳೆದ ಕ್ಷಣಗಳು ಮರೆಯಲಾರವು...ಒಂದು ದಿನವನ್ನು ಸಾರ್ಥಕವಾಗಿ ಕಳೆದ ಸಂತೋಷ ನನ್ನಲ್ಲಿದೆ..

ಕಣ್ಣನ್ ಮಾಮನ ಮಾತು ಕೇಳುವವರಿಗೆ ಹಬ್ಬ...ಅವರು ತೋರುವ ಆತ್ಮೀಯತೆ ನಿಜವಾಗಿಯೂ ಅದ್ಭುತ...

ವಂದನೆಗಳು ಗಿರೀಶ್... ಮತ್ತೆ ಸಿಗಣಾ..

ನಮಸ್ತೆ..

ಚಿನ್ಮಯ ಭಟ್ said...

ಧನ್ಯವಾದ ಸುಷ್ಮಾ...ಬರ್ತಾ ಇರಿ...ಖುಷಿಯಾಯ್ತು :)

ಚಿನ್ಮಯ ಭಟ್ said...

ಧನ್ಯವಾದ ಮನಮುಕ್ತಾ....ಬರ್ತಾ ಇರಿ....ಇಷ್ಟಪಟ್ಟಿದ್ದಕ್ಕಾಗಿ ವಂದನೆಗಳು...

ಚಿನ್ಮಯ ಭಟ್ said...

ನಾನು ಗೀಚಿದ ಸಾಲುಗಳನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದ ಭಾಗ್ಯಾ...ಹಾಂ ಅದು ನಿಜ್ವಾಗ್ಲೂ "ಮೋಡವ ಮುತ್ತಿಕ್ಕಿದೆನು" ಹೇಳೋ ಹಂಗೇ ಇತ್ತು...

ಭಾಗ್ಯಾ ಬರ್ತಾ ಇರು...

ಟಾಟಾ

ಸಂಧ್ಯಾ ಶ್ರೀಧರ್ ಭಟ್ said...

ಚಿನ್ನು ಪುಟ್ಟು ತುಂಬಾ ಚೆನ್ನಾಗಿದ್ದು ...

ನಿನ್ನ ಸಂಧ್ಯಕ್ಕ

ಸೀತಾರಾಮ. ಕೆ. / SITARAM.K said...

Nice!!

ಚಿನ್ಮಯ ಭಟ್ said...

ಧನ್ಯವಾದ ಸಂಧ್ಯಕ್ಕಾ...ನಮ್ಮನೆಗ್ ಬಂದಿದ್ ನೋಡಿ ಖುಷಿ ಆತು..ಬರ್ತಾ ಇರು ...

ಚಿನ್ಮಯ ಭಟ್ said...

ಧನ್ಯವಾದಗಳು ಸೀತಾರಾಮಅವರೆ..ಬರ್ತಾ ಇರಿ

ಚುಕ್ಕಿಚಿತ್ತಾರ said...

ತುಂಬಾ ಚೆನ್ನಾಗಿದ್ದು ..:)

ಚಿನ್ಮಯ ಭಟ್ said...

ಧನ್ಯವಾದ ವಿಜಯಕ್ಕಾ....

Shruthi B S said...

ಕ೦ಡಿರಲು ಸುತ್ತಲೂ ಹಸಿರಿನ ಸಾಲುಗಳು
ಮೂಡಿತು ಮೆತ್ತಗೆ ಶಬ್ದವಿರದ ಸಾಲುಗಳು
ಈ ಸಾಲುಗಳು ಬಹಳ ಇಷ್ಟವಾಯಿತು ಚಿನ್ಮಯ್... ಬರವಣಿಗೆಯನ್ನು ಹೀಗೆ ಮು೦ದುವರೆಸುತ್ತಿರು...:)

ಚಿನ್ಮಯ ಭಟ್ said...

ಧನ್ಯವಾದಗಳು ಶೃತಿ..ಬರ್ತಾ ಇರು :)