Wednesday, August 4, 2010

ತುಂತುರು ಅಲ್ಲಿ ನೀರ ಹಾಡು ......ಇದಕೆ ಇಂದು ಹೊಸ ಪದದ ಗೂಡು

ಒಲವೆ ನೀ ಒಂದು ಗೂಡು
ಇನಿಯ ನೀ ಬಾ ಒಂದು ಗೂಡು

ಮನದೊಳಗೆ ಜೇನುಣಿಸಿ
ಎದೆಯೊಳಗೆ ಮದತರಿಸಿ
ಕಣಕಣವೂ ನೀನೆ
ನೀ ನನ್ನ ಕಂಕಣವು
ಮನದನ್ಕಣದ ಗಿಣಿ ನೀನೆ
ನಿನ್ನ ಒಲವಿನಾ ಗಣಿ ನಾನೇ


ಯಾತ್ರಿಯೇ ನೀ ನನ್ನ ಮನಸೇರು
ಖಾತ್ರಿಯು ಅಲ್ಲಿ ಹರಿ ತೇರು
ಜಾತ್ರೆ ಅಂದೇ ಪ್ರೇಮಕೆಂದು
ಯಾತ್ರೆಯು ವಿಜಯದಿ ಪ್ರೀತಿಗೊಂದು
ಇಲ್ಲಿಯರೂ ಒಬ್ಬರೇ ಇಲ್ಲ, ನೀನೆ ನನಗೆ ಎಲ್ಲ
ನೀನೆ ಸಾಕು ಮತ್ತೇನಿಲ್ಲ ,ನಮ್ಮ ಬಾಳೆ ಬೆಲ್ಲ
ನನ್ನ ಒಮ್ಮೆ ನೋಡಿ ,ನೀ ತೋಡಿಸು ಪ್ರೇಮದಬೇಡಿ
ಕಾದಿರುವೆ ದೇವರ ಬೇಡಿ
ನನ್ನ ರೋಧಿಸಲು ಬಿಡ ಬೇಡಿ

1 comment:

venkat.bhats said...

ಚಿನ್ಮಯ್, ನೀನು ಪದಗಳೊಂದಿಗೆ ಗುಣಿಸುವ ಅರ್ಥ ಹೊರಹಿಸುವುದು ಚೆನ್ನಾಗಿದೆ.
"ಯಾತ್ರಿಯೇ ನೀ ನನ್ನ ಮನಸೇರು
ಖಾತ್ರಿಯು ಅಲ್ಲಿ ಹರಿ ತೇರು"
ಎನ್ನುವ ಈ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಶುಭಾಶಯಗಳು