Thursday, August 12, 2010

ಇದೇ ಹದಿನೈದರಂದು!!!!

ಗೆಳೆತನಕೆ ಒಂದು ದಿನ
ಪ್ರೇಮಕೆಂದೊಂದು ದಿನ
ಅದಕೊಂದು ಇದಕೊಂದು ಎಂದು
ಹುಚ್ಚೆಬ್ಬಿಸಿ ಕುಣಿಯುವೆವು
ತಣ್ಣಗಾಗುವವರೆಗೂ ನಮ್ಮ ಮೈ-ಮನ

ಆದರೆ ವರುಷಕ್ಕೊಂಡೆ ದಿನ
ಅದು ಅತಿಹರುಷದ ದಿನ
ಇಂದು ಸ್ವಾತಂತ್ರ್ಯೋತ್ಸವ ಎಂದು
ಆಚರಿಸಿ ,ಆಧರಿಸಿ
ತಿರುಗಿ ನೋಡಿಕೊಳ್ಳಲಾರೆವೇ ನಾವು ನಮ್ಮನ ?

ಆದಿನ ಈ ದಿನದಂದು ಬೆಳ್ಳಂಬೆಳಿಗ್ಗೆ
ಹರಿದಾಡುವದು ಶುಭಕಾಮನೆ ,ಬಹುಮಾನ
ಆದರೆ ಇಂದು ಬಿದ್ದಿರುವೆವು ಹಾಸಿಗೆ ಮೇಲೇ
ಇಂದು ರಜೆಯೆಂದು ,ಇದಲ್ಲವೇ ದೇಶಕೆ ಅವಮಾನ ?

ಏಳಿ ಎದ್ದೇಳಿ ,ಮನದ ಜಡವ ಬಿಟ್ಟು
ಹೊರಡಿ ,ಹಾರಿಸಲು ಧ್ವಜವ ಶುಭ್ರ ವಸ್ತ್ರ ತೊಟ್ಟು
ಹಾರುತಿರಲಿ ನಮ್ಮ ಹೆಮ್ಮೆಯ ಬಾವುಟ ,
ಉಳಿಸಿ ,ಬೆಳೆಸೋಣ ಅದನ್ನು ಇರುವವರೆಗೂ ರಕ್ತದ ಕೊನೆ ತೊಟ್ಟು .....

Wednesday, August 4, 2010

ತುಂತುರು ಅಲ್ಲಿ ನೀರ ಹಾಡು ......ಇದಕೆ ಇಂದು ಹೊಸ ಪದದ ಗೂಡು

ಒಲವೆ ನೀ ಒಂದು ಗೂಡು
ಇನಿಯ ನೀ ಬಾ ಒಂದು ಗೂಡು

ಮನದೊಳಗೆ ಜೇನುಣಿಸಿ
ಎದೆಯೊಳಗೆ ಮದತರಿಸಿ
ಕಣಕಣವೂ ನೀನೆ
ನೀ ನನ್ನ ಕಂಕಣವು
ಮನದನ್ಕಣದ ಗಿಣಿ ನೀನೆ
ನಿನ್ನ ಒಲವಿನಾ ಗಣಿ ನಾನೇ


ಯಾತ್ರಿಯೇ ನೀ ನನ್ನ ಮನಸೇರು
ಖಾತ್ರಿಯು ಅಲ್ಲಿ ಹರಿ ತೇರು
ಜಾತ್ರೆ ಅಂದೇ ಪ್ರೇಮಕೆಂದು
ಯಾತ್ರೆಯು ವಿಜಯದಿ ಪ್ರೀತಿಗೊಂದು
ಇಲ್ಲಿಯರೂ ಒಬ್ಬರೇ ಇಲ್ಲ, ನೀನೆ ನನಗೆ ಎಲ್ಲ
ನೀನೆ ಸಾಕು ಮತ್ತೇನಿಲ್ಲ ,ನಮ್ಮ ಬಾಳೆ ಬೆಲ್ಲ
ನನ್ನ ಒಮ್ಮೆ ನೋಡಿ ,ನೀ ತೋಡಿಸು ಪ್ರೇಮದಬೇಡಿ
ಕಾದಿರುವೆ ದೇವರ ಬೇಡಿ
ನನ್ನ ರೋಧಿಸಲು ಬಿಡ ಬೇಡಿ

ಸುಮ್ನೆ,,,,

ಅವಳೆಂದಳು ,ಜಗವೆಲ್ಲ ಶೂನ್ಯ
ನೀನನ್ನ ಜೊತೆಗಿರು ಸಾಕು
ಈಜೋಣ ಜಗವನ್ನೆ ,
ನೀಯೆನ್ನ ಎತ್ಡಿ ನಡಿ ಸಾಕು!!!!!!!

Tuesday, August 3, 2010

ಅದೊಂದು ದಿನ ........

ನಾ ಅಂದು ನೋಡಿದೆ
ನೋಡಬಾರದಿತ್ತೇನೋ ಎನಿಸುತಿದೆ ಇಂದು
ಅದೆಂತ ಕಣ್ಣೋಟ ,ಮನಸೆಳವ ಮೈಮಾಟ
ಮರೆತಿದ್ದೆ ನಾ ಏಣಿಯಲಿ ನಿಂತಿದ್ದೆ ಎಂದು

ಆ ನೀಳ ಕೂದಲು ಹೊಯ್ದಾಡುತ್ತಿತ್ತು
ಗಾಳಿಯ ಗಾನಕ್ಕೆ ,ಕುಣಿಯುತಿತ್ತು ಮಿಂಚುಬಳ್ಳಿಯಂತೆ
ಕಾಯುತ್ತಿತ್ತು ನನ್ನ ಮನ ,ಹ್ರದಯ ಸಾಗರದಲ್ಲಿ
ಪ್ರೀತಿ ಮೀನು ಹುಡುಕಿ ಮಿಂಚುಳ್ಳಿಯಂತೆ

ನಾ ನೋಡಿದನು ನೋಡಿದ ಅವಳ
ತೆರಗಣ್ಣು,ಹೇಳಿತು ಓ ತುಟಿಯೇ ತುಸು ನಗು
ನಾ ಅಂದುಕೊಂಡೆ ಅಂದು ,
ಅಷ್ಟು ನಗು ,ಸಾಕೆನಗು

ಅದೇನು ಆಟವೋ ಹೋದಳು ,ಬಂದಳು
ಮತ್ತೆ ಹೋದಳು ,ತಿರುಗಿ ಬಂದಳು
ಆ ಕಡೆ ನೋಡಿ ,ಈ ಕಡೆ ನೋಡಿ
ಬಾಡಿ ಬಸವಲಿದವು ಈ ನನ್ನ ಕಂಗಳು !!!


ಮತ್ತೆ ಬಂದು ಹಸಿನಕ್ಕು,ಒಳ ಹೋಗೇ ಬಿಟ್ಟಳು
ನಾ ಬಗ್ಗಿ ,ತಗ್ಗಿ ನೋಡಿದ್ದೊಂದೇ ಬಂತು
ಕೈ ಮುರಿದು ,ಕಾಲು ತರಚಿ ಆಸ್ಪತ್ರೆಯಲ್ಲಿದ್ದಾಗ
ಏಣಿ ಮೇಲಿದ್ದುದು ನೆನಪಿಗೆ ಬಂತು !!!!!!!!!!