ಮನೆಯೆದುರು ಮೂವರ್ಸ್& ಪ್ಯಾಕರ್ಸ್ ಗಾಡಿ ಬಂದು ನಿಂತಿತ್ತು
ಅಪಾರ್ಟ್‍ಮೆಂಟಿನ ಹೊಸ ಮನೆ ಬಣ್ಣ ಬಳಿದುಕೊಂಡು ಕಾದು ಕುಳಿತಿತ್ತು
ಇಬ್ಬರೂ ಜತನದಿಂದ ಕೂಡಿಟ್ಟ ವಸ್ತುಗಳೆಲ್ಲ ಬಾಕ್ಸಿನಲ್ಲಿ ಬಂಧಿಯಾಗಿದ್ದವು
ಕೊನೆಯ ಬಾರಿ ಕದ ಹಾಕುವ ಮುನ್ನ ಇಬ್ಬರ ಕಣ್ಣುಗಳು ಒದ್ದೆಯಾಗಿದ್ದವು
ನಿಜ, ಅಪ್‍ಗ್ರೇಡ್ ಆಗಿತ್ತು ಬದುಕು 1 ಬಿ.ಹೆಚ್.ಕೆ ಇಂದ 2 ಬಿ.ಹೆಚ್.ಕೆಗೆ
ಹೆಚ್ಚಾಗುತ್ತಿತ್ತು ಸಂಬಳ ಮುಂದಿನ ಡಿಸೆಂಬರ್ ಪ್ರಮೋಷನ್‍ಗೆ
ಆದರೆ, ರಿಮೋಟಿಗಾಗಿನ ಜಗಳ, ಬಾತ್‍ರೂಮಿಗಾಗಿನ ಅವಸರ
ಬಜೆಟ್ಟಿನಲ್ಲಿಲ್ಲ ಎಂಬ ಬೇಸರ, ಬಹುಷಃ ಇಂದಿಗೆ ಕೊನೆಗಾಣುತ್ತಿತ್ತು
ಮಾಡ್ಯುಲರ್ ಕಿಚನ್, ಹೊಗೆಹೋಗುವ ಚಿಮಣಿ, ಎರಡೆರಡು ಬಾಲ್ಕನಿ
ಕದತೆರೆದರೆ ಕಾಣುವ ಲಿಫ್ಟು, ಬದಲಾವಣೆ ಬಯಸಿದ್ದೇ ಆದಂತಿತ್ತು
ರುಚಿಯಾಗದ ಮೊದಲ ಅಡುಗೆ, ಮುಗಿಯದ ಟೆರೇಸ್ ಮೇಲಣ ಮಾತು
ಕಾಯುವಿಕೆಗೆ ಸಾಥ್ ಕೊಟ್ಟ ಮನೆ ಮೆಟ್ಟಿಲುಗಳು, ಮತ್ತೆ ಇವೆಲ್ಲ ಸಿಗಲಾರದೆನಿಸುತ್ತಿತ್ತು
ಬಾರದ ನೀರು, ಕೈಕೊಟ್ಟ ಪಂಪು, ಅವರಿವರ ಕಿರಿಕಿರಿ
ಜೇಬು ಹಿರಿದಾದಂತೆ ಸಮಸ್ಯೆಗಳೂ ತೆರೆದುಕೊಂಡಿದ್ದವು
ಸೆಕ್ಯೂರಿಟಿಯ ಸಮವಸ್ತ್ರ, ಸಿ.ಸಿ.ಟಿ.ವಿಯ ಕೆಂಪುದೀಪ
ಮೆಂಟೆನೆನ್ಸ್ ಎಂಬ ಕಿಟಕಿ ತೆರೆದು ನೆಮ್ಮದಿಯ ಆಸೆ ಹುಟ್ಟಿಸಿದ್ದವು
ಹೋಗಲೇಬೇಕಲ್ಲ ಒಂದಲ್ಲ ಒಂದು ದಿನ ಬಾಡಿಗೆ ಮನೆಯ ಬಿಟ್ಟು, ಹೊರಟಿದ್ದಾಯ್ತು
ಆದರೆ ಮನೆ ಬಿಟ್ಟರೂ ಅಗ್ರೀಮೆಂಟು ಮುಗಿದಿರೂ ನೆನಪುಗಳು ಬಿಟ್ಟು ಹೋಗುವುದಿಲ್ಲ
ಹಳೆಮನೆಯ ಸಾಮಾನುಗಳ ಜೊತೆ ಹೊಸ ಕನಸುಗಳ ಬಿಚ್ಚುತ್ತಾ
ಹೊಸಮನೆಯ ಸಿಂಗರಿಸುವ ಹುಮ್ಮಸ್ಸು, ಬದುಕನ್ನು ಬೋರಾಗಿಸುವುದಿಲ್ಲ

-ಚಿನ್ಮಯ
09/11/2019