ನಮಸ್ಕಾರಾ...
ಚೆನಾಗಿದೀರಾ ಅಲ್ವಾ???.
ಹಮ್..ಅದೇನೋ ಗೊತ್ತಿಲ್ಲಾರೀ ಚಿತ್ರಗೀತೆಗಳು ಅಂದ್ರೆ ಒಂಥರಾ ಇಷ್ಟ..ಚಂದದ ಗೀತೆಗಳಲ್ಲಿನ ಸಾಹಿತ್ಯ ಇಷ್ಟ,ಅದಕ್ಕೆ ಪೋಣಿಸಿದ ಸಂಗೀತ ಇಷ್ಟ..ಅದರ ದನಿಯಾದ ಗಾಯಕರ ಅಭಿವ್ಯಕ್ತಿಗಳು ಇಷ್ಟ..ಚಿತ್ರಗೀತೆಗಳ ಥರದ್ದು ಎನಾದ್ರೂ ಬರಿಬೇಕು ಅನ್ನೋ ಕನಸು ಕನವರಿಕೆ ನನ್ನನ್ನು ಚಿಕ್ಕಂದಿನಿಂದಲೂ ಕಾಡ್ತಾನೇ ಇದೆ...ಇಂತಹ ಹುಚ್ಚುತನಗಳ ಒಂದು ರೂಪ ನಿಮ್ಮ ಮುಂದಿದೆ..
ಸುಮ್ಮನೆ ಬರೆದಿದ್ದ ಒಂದು ಪ್ಯಾರಾಕ್ಕೆ ದಾಟಿ ಹಾಕಿ,ಪಲ್ಲವಿ-ಚರಣ ಎಲ್ಲಾ ಹೇಳಿಕೊಟ್ಟು ಅದಕ್ಕೆ ಪದ ಹೆಕ್ಕಿಸಿದ್ದು ಗೆಳೆಯ ರಾಘವೇಂದ್ರ.. ಒಂದು ಪುಟ್ಟ ಪ್ರಯತ್ನ ನಮ್ಮಿಬ್ಬರದು..ಓದಿ,ಕೇಳಿ,ತಪ್ಪು ಒಪ್ಪು ಹೇಳಿ ಪ್ರೋತ್ಸಾಹಿಸಿ..
ಹೇಳ್ತೀರಾ ಅಲ್ಲಾ ???
ಭಾವದಾ ಬರ ಬಂದಿದೆ ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ ಬೇಸರಾ ತಾಳದೇ
ಸಾವಿರಾ ಸಾಲು ಕೋಶದಲೂ
ಸಿಗದ ದೇಸಿ ಪದ ನೀನು,
ಕಳೆದು ಹೋದರೆ ಕನಸಿಂದ ಹೇಗೇ ಹುಡುಕಲಿ?
ಹಿಡಿದು ಖಾಲಿ ಕೈಪಿಡಿ.
ಹಾಳು ಸುರಿದಿದೆ ಎನ್ನ ಪ್ರೀತಿ ಜೋಪಡಿ.
ಮುದ್ದಿನಾ ಮೂರು ಮಾತಿಂದಾ
ಮೂಡುತಿದ್ದಾ ನಗೆಬಿಂಬ,
ವಲಸೆ ಹೋದರೆ ಮುನಿಸಿಂದ ಹೇಗೇ ಸಹಿಸಲಿ ?
ಮನಸು ಒಡೆದಾ ಕನ್ನಡಿ.
ಬರಿದು ಎನಿಸಿದೆ ತಲೆ ಹರಟೆಯಂಗಡಿ.
ಭಾವದಾ ಬರ ಬಂದಿದೆ ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ ಬೇಸರಾ ತಾಳದೇ
ಈಗ ಹಾಡು ಕೇಳಣ್ವಾ ?? :)...
ಹೆಂಗಿದೆ ಹೇಳಿ...ದಯವಿಟ್ಟು.. ಕಾಯ್ತಿದೀನಿ...
ಧನ್ಯವಾದಗಳು...
ನಮಸ್ತೆ :)