ನನ್ನೊಳಗಿನ ಔಟ್ ಪುಟ್ಟು!!!
ಮನದೊಳಗಿನ ಭಾವ ಎದೆಯೊಳಗೆ ಹೊಕ್ಕಿ ನಿಮ್ಮೆದುರು ಹರಿದಾಗ .....
Sunday, November 21, 2010
ಎರಡು ನೊಟ್ ಬುಕ್ಕು ಹಿಡಿದು, ಜೀನ್ಸ್ ಪ್ಯಾಂಟು ಹಾಕಿ ,ಕ್ಯಾಂಟೀನ್ ನಲ್ಲ್ಲಿ ಕೂತವರ ಮಾತು!!!!
ಮಾಡಬೇಕೇನೋ ಹೊಸದು
ಎಂಬ ಆಸೆ ಹೊತ್ತಿಹ ಬಿಸಿ ದೇಹ
ಪಡೆಯಬೇಕು ಬೇಕಾಗಿದೆಲ್ಲವ
ಎಂದು ಹಪಹಪಿಸುವ ಹಸಿದಾಹ
ಬಣ್ಣ ಬಣ್ಣದ ಭಾವನೆಗಳೇ
ನಿಜವೆಂದು ತಿಳಿದ ,ಕುರುಡು ಮೋಹ
ಇದೆಲ್ಲದರ ಮಧ್ಯದಲ್ಲಿ ರಜೆ ಬಂದರೆ
ಮಸ್ತ್ ಮಜಾ, ಅದೇನು ಸುಖ ಆಹಾ!!
ಇದೇ ಕಣ್ರೀ ನಮ್ ಸ್ಟುಡೆಂಟ್ ಲೈಫು
ಕಳ್ದೋದ್ಮೇಲ್
ಟಾಪು,
ಇದ್ದಾಗ್
ತೋಪು
Saturday, November 13, 2010
ಅರಾಮಾ? ಅಯ್ಯೋ ರಾಮಾ!!!! !ಇಲ್ಲೂನಾ?
ನಾ ಹೋದೆ ಅಂದು ವೈದ್ಯರಲ್ಲಿಗೆ
ಸ್ವೆಟರ್ ತೋಪಿ ಹಾಕಿ,
ಇಲ್ಲ ಅರಾಮು ಎಂದು
ಅಲ್ಲೇ ಸ್ವೆಟರ್ ಹಾಕಿ ಕುಳಿತ
ಗೆಳೆಯ ಕೇಳಿದ
ಅರಾಮಾ ಎಂದು!!!
!!
Tuesday, November 2, 2010
ಕಣ್ಣು ಬೇನೆ ಕಳಿದ ಮೇಲೆ , ಕನ್ನಡಕದ ಹಂಗ್ಯಾಕೆ?
ರಾತ್ರಿ ಕಾಲೇಜು ಛಾವಣಿ ಮೇಲೆ ಹತ್ತಿ,
ಕುಣಿದು ಸುಸ್ತಾಗಿ ಮಲಗಿದೆ,ಕೊಳೆಬಟ್ಟೆಯನ್ನೂ
ತೆಗೆಯದೇ.
ಮರುದಿನ ಬೆಳಿಗ್ಗೆ ಎದ್ದಾಗ ಗಾಬರಿ,
ಎಷ್ಟು ಮಾಡಿದರೂ ನನ್ನ ಎಡಗಣ್ಣೇ
ತೆಗೆಯದೇ!!!
!
ಬರಬರುತ್ತಾ
"ಕೆಂಪಾದವೋ ಎಲ್ಲ ಕೆಂಪಾದವೋ"
ತೆಗೆದುಕೊಂಡೆ ಕಪ್ಪು ಕನ್ನಡಕ,
ಅಬ್ಬಾ ಆಗ ಅದೇನು ಸಮಾಧಾನವೋ!!!
ಕಡಿಮೆಯಾಗಿದೆ ಇಂದು,
ಅನಿಸುತಿದೆ ಈಗ ,
ಇನ್ನು ಅದರ
ಹಂಗ್ಯಾಕೆ
?
ಮೂರು-ನಾಕು ದಿನ ನನ್ನ ಕೆಂಗಣ್ಣಿನಿಂದ
ಅಡಗಿಸಿಟ್ಟ ಅದನೇ ಮರೆಯುವೆ,
ಹೇ ಮನಸೇ ನೀ
ಹಿಂಗ್ಯಾಕೆ
?
Newer Posts
Older Posts
Home
Subscribe to:
Posts (Atom)