ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ
ನಾಳೆ ಓದಿದ್ರಾಯ್ತು ಅನ್ನೋದ್ ಮರ್ಯೋದ್ ಯಾವಾಗ
ಇನ್ನೂ ಒಂದ್ ವಾರ ಇದೆ ಇವತ್ ರೆಸ್ಟ್ ಮಾಡಣಾ
ನಾಳೆ ಇಂದಾ ಓದಕ್ಕೆ ಪಕ್ಕಾ ಸ್ಟಾರ್ಟ್ ಮಾಡಣಾ
ಫ್ರೆಂಡ್ಸಿಗೆಲ್ಲಾ ಬೆಳ್ಗೆ ಎದ್ದು ಮೆಸ್ಸೇಜು ಮಾಡಣಾ
ಸೆಲ್ ಸ್ವಿಚ್ ಆಫ್ ಮಾಡಿ ಮಲ್ಕೊಂಡೆ ಬಿಡಣಾ
ಫೇಸ್ ಬುಕ್ ನಲ್ಲಿ ಮಾಡಿ ಫೋಟೋ ಅಪ್ ಲೋಡು
ಹೊಸಾ ಮೂವಿ ಬಂದರೆ ಬಿಡ್ದೆ ಮಾಡಿ ಡೌವ್ನ್ ಲೋಡು
ಟ್ರೈ ಮಾಡ್ರಿ ದಿನಕ್ಕೊಂದು ಹೊಸಾ ಹೊಸಾ ಸಾಫ್ಟವೇರು
ಓರಿಜ್ನಲ್ಲೋ ಡೂಪ್ಲಿಕೇಟೋ ವಿ ಡೋಂಟ್ ಕೇರು
ಕ್ಲಾಸಿಗೆಲ್ಲಾ ಚಕ್ಕರ್ ಹೊಡ್ದು ಕ್ಯಾಂಟೀನ್ ನಲ್ಲೆ ಕೂರ್ತಿದ್ವಿ
ಆಸ್ಕರಿಂದ ಶುರುಮಾಡಿ,ಬುಕ್ಕರ್ ತನ್ಕಾ ಮಾತಾಡ್ತಿದ್ವಿ
ಫಾರೆನ್ ಆಥರ್ ಟೆಕ್ಸ್ಟ್ ಬುಕ್ ಗಳು ಅರ್ಥಾ ಆಗಲ್ಲಾ
ಝೆರಾಕ್ಸಿನ ನೋಟ್ಸ್ ಬಿಟ್ಟು ಬೇರೆದೇನೂ ಓದಲ್ಲಾ
ಎಲ್ಲಿಂದ ಓದೋದಂತಾ ಅರ್ಥಾನೇ ಅಗ್ತಿಲ್ಲಾ
ಸಿಲೆಬಸ್ಸು,ಸಿಟಿಬಸ್ಸು ಒಂದೇ ಥರ ಇದ್ಯಲ್ಲಾ
ರಾತ್ರಿ ಪೂರ್ತಿ ಓದಿ ಎಕ್ಸಾಮು ಬರಿತಿವಿ
ಮೂವತ್ತೈದು ಬಂದ್ರೆ ಸಾಕು ಪಾರ್ಟಿ ಮಾಡ್ತಿವಿ
ಆದ್ರೆ,
ಮೊದ್ಲೆ ಓದ್ಬೇಕಿತ್ತು ಅನ್ನೋದ್ ಬಿಡೋದ್ ಯಾವಾಗ?
ನಾಳೆ ಓದಿದ್ರಾಯ್ತು ಅನ್ನೋದ್ ಮರೆತು ಹೋದಾಗ!
(ಪರೀಕ್ಷೆಯ ಹೊತ್ತಿನಲ್ಲಿ ಓದುವುದೊಂದು ಬಿಟ್ಟು ಉಳಿದೆದ್ದಲ್ಲ ಉಚಿತವಾಗಿಯೇ ಕಾಣುತ್ತದೆ....ಹಾಗೆ ಯಾವಾಗಲೋ ಪುಸ್ತಕ ಹಿಡಿದುಕೊಂಡಾಗ ಹುಟ್ಟಿಕೊಂಡ ಸಾಲುಗಳನ್ನೇ ಒಂದು ೪ ೪ ಸಾಲುಗಳಂತೆ ಬರೆದು ನಿಮ್ಮ ಮೊಂದಿಟ್ಟಿದ್ದೇನೆ. ನಿಮ್ಮ ಪರೀಕ್ಷೆಯ ಸಮಯದ ವಿಶೇಷ ಅನುಭವಗಳನ್ನು ಬರೆದು ಈ ಬರಹವನ್ನು ಅಂದಗಾಣಿಸಿ..ಹಾಗೆಯೇ ಇದರ ಕುರಿತು ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ)
ಪರೀಕ್ಷೆ ಮುಗಿಸಿದ ಸಂತಸದಲ್ಲಿ,
ಇತಿ ನಿಮ್ಮನೆ ಹುಡುಗ
ಚಿನ್ಮಯ ಭಟ್.