ಆಗಷ್ಟೇ ಪಿ.ಯು ಮುಗಿಸಿ ಬಿ.ಇ ಗೆ ಸೇರಿದ್ದೇನೆಂಬ ಖುಷಿಯ ಜೊತೆಗೆ ,ಉಳಿದ ಮಗಾ-ಮಚ್ಚಿಗಳಿಗಿಂತ ತಾನು ಸ್ಟಾಂಡರ್ಡ್ ಕೋರ್ಸ್ ಆದ ಇಂಜಿನೀರಿಂಗ್ ಮಾಡುತ್ತಿದ್ದೇನೆ ಎಂಬ ಗರ್ವ ಅವನನ್ನು ಪುಟಿಯುವ ಚೆಂಡಿನಂತಾಗಿಸಿತ್ತು. ಚಿಕ್ಕ ವಿಷಯಕ್ಕೂ ಒಮ್ಮೆ ಆ ಕಡೆ ,ಒಮ್ಮೆ ಈ ಕಡೆ ಬೇಕಾಬಿಟ್ಟಿಯಾಗಿ ಕುಣಿದಾಡ ಹತ್ತಿತು.ಇದರ ಜೊತೆಗಾಗಲೇ ಹಾಸ್ಟೇಲಿನಲ್ಲಿ ಮಂಗಾಟಗಳೂ ಆಗಷ್ಟೇ ರಂಗೇರತೊಡಗಿದ್ದವು . ಅಲ್ಲಿಯ ತನಕ ಅಮ್ಮನ ಕಾಫಿಯನ್ನಷ್ಟೇ ಕುಡಿಯುತ್ತಿದ್ದ ಅವನ ಕೈ,"ಅವನಮ್ಮನ್ ......" ಎಂದೆನ್ನುತ್ತಾ ತೀರ್ಥದ ಬಾಟಲಿಯನ್ನೇರಿಸತೊಡಗಿತ್ತು. ಬರಬರುತ್ತಾ ತುಂಬಿರುತ್ತಿದ್ದ ಪಾಕೀಟೂ ಖಾಲಿಯಾಗತೊಡಗಿತ್ತು,ಖಾಲಿಯಿದ್ದ ಸಾಲದ ಲೀಸ್ಟು ತುಂಬತೊಡಗಿತ್ತು.
ಅಷ್ತೊತ್ತಿಗಾಗಲೇ ಹಾಸ್ಟೇಲಿಗೆ ಹೊರಗಿನಿಂದ ಬಂದ ಕೆಲವು ಹಿರಿತಲೆಗಳ ಆಶೀರ್ವಚನ ಕಿವಿಗೆ ಬಿತ್ತು ," ಬಿಡೋ ಮಚ್ಚಾ ,ಜಗತ್ ನಲ್ಲಿ ಇಲ್ಲಿ ತನ್ಕಾ ಯಾವ್ ಅಪ್ಪಾನೂ ಎಣ್ಣೆ ಹೊಡಿಬೇಕು ಅಂದ್ರೆ ದುಡ್ ಕೊಡಲ್ಲ.ಅದ್ಕೆಲ್ಲಾ ನಾವೇ ಅಡ್ಜಸ್ಟ್ ಮಾಡ್ಕೋಬೇಕು ,ಒಂದ್ ಕೆಲ್ಸಾ ಮಾಡೋ..... ನಮ್ ರೂಮ್ ಕಡೆನೇ ಬಂದ್ ಬಿಡು.ಅಲ್ಲಿ ಜಸ್ಟ್ ಒಂದ್ ಸಾವ್ರಕ್ಕೆ ಊಟಾ- ತಿಂಡೀ ಖರ್ಚು ಮುಗ್ಯತ್ತೆ . ಇಲ್ಲಿ ಕೊಡೋ ಎರಡು ವರೆ ಸಾವಿರದಲ್ಲಿ ,ಒಂದುವರೆ ಉಳಿಯತ್ತೆ,ಅಷ್ಟರಲ್ಲಿ ಜಿಂದಗೀ ಜಿಂಗಾಲಾಲ್ ಮಾಡ್ ಬೋದು, ಬಾ.. ವಿ ಆರ್ ಇಂಜಿನಿಯರಿಂಗ್ ಸ್ಟುಡೆಂಟ್ಸ್ ಮ್ಯಾನ್ ,ತಲೆ ಓಡ್ಸ್ ಬೇಕು " ಎಂದ.
ಇನ್ನೇನು ,ಮೈ ತುಂಬಾ ಐ.ಪಿ.ಎಲ್ ಮ್ಯಾಚುಗಳಿಂದ ಆದ ಸಾಲ ತೀರಿಸಲಾದರೂ ಬಿಡಿಗಾಸು ಬೇಕಿತ್ತು,ಅದ್ ಹೆಂಗೋ ಹಾಸ್ಟೇಲಿನವರನ್ನು ಸೆಟ್ಲ್ ಮಾಡಿ,ಯಾವುದೋ ರೂಮಿಗೆ ಹೋದ.ಅಂತೂ ಇಂತೂ ರಾತ್ರಿ ೩ ಗಂಟೆಗೆ ಮಲಗಿ ,ಬೆಳಿಗ್ಗೆ ೧೧ ಕ್ಕೆ ಎದ್ದು ಜೀವನ ಸಾಗುತ್ತಿದ್ದಾಗ ಅಮ್ಮನಿಗೆ ವಿಷಯ ಗೊತ್ತಾಗಿತ್ತು.
" ಅಮ್ಮಾ ,ಆ ಹಾಸ್ಟೇಲಿನಲ್ಲಿ ನನ್ನ ರೂಮಿನಲ್ಲಿ ನಾನ್ ಒಬ್ನೇ ಜೂನಿಯರ್ ,ರ್ಯಾಗಿಂಗ್ ತಡಿಯಕ್ ಆಗ್ತಿಲ್ಲಾ ,ಯಾರೋ ಸಿನಿಯರ್ ನನ್ನ ಈ ರೂಮ್ ಗೆ ತಂದ್ ಬಿಟ್ರು,ಎನ್ ಮಾಡ್ಲಿ?? ಅಮ್ಮಾ... ಆದ್ರೆ ಇನ್ನೂ ಐನೂರು ರೂಪಾಯಿ ಕಳ್ಸು ,ಕರೆಂಟ್ ಬಿಲ್ಲು ,ವಾಟರ್ ಬಿಲ್ಲು ಕಟ್ಬೇಕು, ಅದ್ರೆ ಅಪ್ಪಂಗೆ ಮಾತ್ರ ಹೇಳ್ಬೇಡಾ..." ಎಂದು ಹಸಿ ಸುಳ್ಳು ಹೇಳಿದ್ದ.
ಹೇಳಿದವನೇ ಜೋಗಿ ಬಿಟ್ರೆ ಇವನದೇ ಮದರ್ ಸೆಂಟಿಮೆಂಟೇನೋ ಎಂಬಂತೆ ಎರಡು ಪೆಗ್ ಜಾಸ್ತಿ ಹಾಕಿದ್ದ.ಅದೇ ಮತ್ತಿನಲ್ಲಿ ತಪ್ಪಿಗೆ ಪ್ರಾಯಾಶ್ಚಿತ ಎಂದು ಬ್ಲೇಡಿನಿಂದ ಕೈ ಕೆರೆದು ಕೊಂಡಿದ್ದ.ನಂತರ ಎಂದಿನಂತೆ ಜೀವನ ಸಾಗಿತ್ತು.
ಮುಂದೇನು ... ತಿಂದಿದ್ದು ಕೆಳಗೆ ಮೇಲಾಗಿ ಹೊಟ್ಟೇನೋವು ಬಂದಿತ್ತು. ಅದಕ್ಕೆ ಜ್ವರವೂ ಸೇರಿ ಕೊಂಡಿತ್ತು... ಕೊನೆಗೆ ಮನೆಗೆ ರೂಮ್ ಪಾರ್ಟ್ನ್ ನರ್ ನಿಂದ ಕರೆ ಹೋಗಿತ್ತು.ಆಗಲೇ ಅಪ್ಪ ಬಂದಿದ್ದು....ಅಲ್ಲಿಯ ತನಕ ಇರದ ಆತಂಕ ,ತಳಮಳ ಆಗಶುರುವಾಗಿತ್ತು.ಅಮ್ಮನ ಹತ್ತಿರ ಸುಳ್ಳು ಹೇಳಿದಷ್ಟು ಧೈರ್ಯ ಸಾಕಾಗದಾಗಿತ್ತು.ಅಪ್ಪ ಏನೆಂದಾರೋ ಏನೋ ಎಂಬ ಆತಂಕ ಮನಸ್ಸಿನಲ್ಲಿ ಆಗ ರೂಮ್ ಮಾಡಿತ್ತು.ಮುಂದೇನು ಕಥೆಯೋ? ಎನು ಹೇಳಲೋ?ಎಂದು ಯೋಚಿಸುತ್ತಿರುವಾಗಲೇ ಅಪ್ಪ ಚಿಕಿತ್ಸೆ ಕೊಡಿಸಿ ಹೊರಟಿದ್ದರು. ಅವರು ರೂಮಿನ ಬಗ್ಗೆ ಒಂದು ಮಾತೂ ಕೇಳಲಿಲ್ಲ,ಇವನಿಗೆ ಹೇಳಲು ಧೈರ್ಯ ಸಾಲಲಿಲ್ಲ..ಹೋಗುವಾಗ ಮುಖ ನೋಡಿ ,ಸಾವಿರದ ನೋಟನ್ನು ಕೈಗಿತ್ತು "ಜೋಪಾನ" ಎಂದಷ್ಟೇ ಹೇಳಿ ಬಸ್ಸು ಹತ್ತಿದರು.....
ಅದಾಗಿ ರೂಮಿನ ಮೆಟ್ಟಿಲು ಹತ್ತುತ್ತಿರುವಾಗ ಕೆಳಗಿನ ಮಾಲಿಕರ ಮನೆಯಲ್ಲಿ ನಡೆದ ಮಾತುಕತೆ ಹುಡುಗನ ಕಿವಿಗೆ ಬಿತ್ತು. "ಅಲ್ಲಾ ಕಣೇ... ನಮ್ ಮನೆ ಮೆಲ್ ಇರೋ ಹುಡುಗ ಹಾಸ್ಟೇಲಿನಲ್ಲಿ ಇದಿನಿ ಅಂತಾ ಅಪ್ಪಂಗೆ ಹೇಳೀದ್ನಂತೆ ,ಆಮೇಲೆ ಅಮ್ಮಂಗೆ ...ರ್ಯಾಗಿಂಗ್ ಅಂತಾ ಬೇರೆ ಹೇಳೀದಾನೆ..ಆದ್ರೆ ಜ್ಯೂನಿಯರ್ಸ್ ಗೆ ಬೇರೆ ಹಾಸ್ಟೇಲ್ ಇರೋ ವಿಷಯ ಅಪ್ಪಂಗೆ ನಾನ್ ಹೇಳೀದ್ ಮೇಲೇ ಗೊತ್ತಾಗಿದ್ದು. ಮಗ ಸುಮ್ನೆ ಸುಳ್ ಹೆಳ್ ಬಿಟ್ನಲಾ ....... ಅಂತ ತುಂಬಾ ಬೇಜಾರು ಮಾಡ್ಕಂಡ್ರು ,ಅವ್ನಿಗೆ ಹೊರ್ಗಡೆ ಊಟ ಸೆಟ್ ಆಗಲ್ಲಾ ಅಂತ ಹೇಳ್ದ್ರು ,ಜೊತೆಗೆ ನೀವೇ ಊಟ ಹಾಕಿ ತಿಂಗಳಿಗೆ ಐದು ಸಾವಿರ ಬೇಕಾದ್ರು ಕೊಡ್ತೀವಿ ಅಂದ್ರು...ನಾನು ಅಯ್ತು
ಅಂದೆ,ಆದ್ರೆ ಎನ್ ಹುಡ್ಗುರೋ.....ಥೂ..ಅಪ್ಪಾ ಅಮ್ಮಂಗೇ ಮೋಸ ಮಾಡೋ ಜೀವನಾ ಯಾಕ್ ಬೇಕೋ " ......
ಕೇಳುತ್ತಿದ್ದಂತೆ ಹತ್ತುತ್ತಿದ್ದ ಮೆಟ್ಟಿಲುಗಳು ಪರ್ವತದಂತೆ ಅನಿಸಹತ್ತಿದ್ದವು.... ಅಂತೂ ರೂಮಿಗೆ ಬಂದು,ಕಬೋರ್ಡ್ ನಲ್ಲಿ ಮುಚ್ಚಿಟ್ಟಿದ್ದ ಸಿಗರೇಟು ಹಚ್ಚಿದ್ದ....ಸಿಗರೇಟಿನಂತೆ ಅವನ ಮನಸ್ಸೂ ಸುಡುತ್ತಿತ್ತು...
(" ತನ್ನನ್ನು ತಾನೇ ಬುದ್ದಿವಂತ ,ಪಾಲಕರೆಲ್ಲಾ ಬಕ್ರಾ ಗಳು ಎಂದು ತಿಳಿಯುವ ಮಕ್ಕಳು, ನಮ್ಮ ಮಕ್ಕಳು ಎನೂ ತಿಳಿಯದ ಮುಗ್ಧರು ಎಂದು ತಿಳಿಯುವ ಪಾಲಕರು")
ಮುಂದೇನು????
(ನಿಮ್ಮ ಕಲ್ಪನೆಗೆ ಬಿಟ್ಟಿದ್ದು)
25 comments:
No comments!!! Real Fact ashte!
ಚಿನ್ಮಯ್;ಇದು ಎಷ್ಟೋ ಹುಡುಗರ ಜೀವನದಲ್ಲಿ ನಿಜವಾಗಿ ನಡೆಯೋ ಕಥೆ.ನಾನೂ ಒಬ್ಬ ವಿದ್ಯಾರ್ಥಿಯಾಗಿ ಮತ್ತು ಒಬ್ಬ ತಂದೆಯಾಗಿ ಈ ಎರಡೂ ರೀತಿಯ ಆತಂಕ ಗಳನ್ನೂ ಅನುಭವಿಸಿದ್ದೇನೆ.ಜೀವನ ದೊಡ್ಡ ಗುರುವಿದ್ದಂತೆ.ಅದು ಕಲಿಸುವ ಪಾಠ ಗಳು ಅವಿಸ್ಮರಣೀಯ!
anubhavave vyaktiyannu kadeyuva shilpi.
Chinmay...itz quite a relasitic incident which can happen in student's life !!! Even i have seen so many guys with this kind of situation.nice written...
chinmay simply superb....
tumbaa chennagi prastuta ghatanegala bagge belaku chellidira
tumbaa sundara shaili
@ವಾಣಿಶ್ರೀ ಅಕ್ಕಾ :
ಧನ್ಯವಾದ ,ಬರ್ತಾ ಇರಿ
@ ಡಾ.ಕೃಷ್ಣ ಮೂರ್ತಿ .ಡಿ.ಟಿ. :
ನಾನು ಬರೆದಿದ್ದಕ್ಕೊಂದು ಪೂರ್ಣ ವಿರಾಮ ಹಾಕಿ, ಲೇಖನವನ್ನು ಪೂರ್ಣಗೊಳಿಸಿದಿರಿ..
ತಮ್ಮ ಮಾರ್ಗದರ್ಶನಕ್ಕೆ ಧನ್ಯವಾದಗಳು...
ನನ್ನನ್ನು ಇದೆ ರೀತಿ ತಿದ್ದುವಿರೆಂಬ ವಿಶ್ವಾಸದೊಂದಿಗೆ,....
@ ಕಲರವ : ಧನ್ಯವಾದ ,ಬರುತ್ತಿರಿ.
@ಗಿರೀಶ್.ಎಸ್ : ತುಂಬಾ ಸಂತೋಷ ನಮ್ಮನೆಗೆ ಬಂದಿದ್ದಕ್ಕೆ... ತಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು....ಬರುತ್ತಿರಿ, ನೀವೂ ಬರೆಯುತ್ತಿರಿ..
@ಸುಷ್ಮಾ : ಧನ್ಯವಾದ ,ಬರುತ್ತಿರಿ...ಖುಷಿಯಾಯ್ತು
@ಸಾಗರದಾಚೆಯ ಇಂಚರ : ನಮಸ್ತೆ... ನಮ್ಮನೆಗೆ ಸ್ವಾಗತ..ಧನ್ಯವಾದ ತಮ್ಮ ಪ್ರೊತ್ಸಾಹಕ್ಕಾಗಿ... ಬರುತ್ತಿರಿ.
ನನ್ನ ತಪ್ಪುಗಳನ್ನು ದಯವಿಟ್ಟು ಹೇಳಿ,ನನ್ನನ್ನು ಬೆಳೆಸಿ..
ನಿಮ್ಮನೆ ಹುಡುಗ
@ ಎಲ್ರಿಗೂ:
ಈ ಅಂಕಣಕ್ಕೆ ಬಂದ ಎಲ್ಲರಿಗೂ ಧನ್ಯವಾದ...
ತಮ್ಮ ಅಭಿಪ್ರಾಯಗಳನ್ನು ತಿಳಿಸಿ,ದಯವಿಟ್ಟು ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕರಿಸಿ.....
ತಮ್ಮ ಪ್ರೋತ್ಸಾಹದ ಆಸೆ ಹೊತ್ತು ,
ನಿಮ್ಮನೆ ಹುಡುಗ,
ಚಿನ್ಮಯ ಭಟ್
ಚಿನ್ಮಯ್,
ಕಥೆ ಚೆನ್ನಾಗಿದೆ..... ಬರೆದ ರೀತಿ ಚೆನ್ನಾಗಿದೆ.....
ಚಿನ್ಮಯ್,
ಇದು ಸುಳ್ಳಲ್ಲ ನಿಜ, ನಮ್ಮ ನಿಮ್ಮ ಕಣ್ಣ ಮುಂದೆ ನಡೆಯುವ ಘಟನೆಗಳು. ಹದಿಹರಯದ ಹೊಸ್ತಿಲಲ್ಲಿ ಮನಸ್ಸು ತನ್ನಿಷ್ಟದಂತೆ ಎಳೆದೊಯ್ಯುತ್ತದೆ. ನಾವು ತೆಗಯುಕೊಳ್ಳುವ ಬುದ್ಧಿವಂತ ನಿರ್ಧಾರ ನಮ್ಮ ಮುಂದಿನ ಭವಿಷ್ಯವನ್ನು ರೂಪಿಸುತ್ತದೆ.
ಮನಮುಟ್ಟುವ ಚಂದದ ಕತೆಗೆ ಧನ್ಯವಾದಗಳು.
--
ಚಿನ್ಮಯ ನಿಮ್ಮಲ್ಲಿಗೆ ಬಂದದ್ದೇ ಕಡಿಮೆ ..ಕಥೆ ಚನ್ನಾಗಿ ಮುನ್ನಡೆಸಿದ್ದೀರಿ,,,ಕೀಪ್ ಗೋಯಿಂಗ್...ಶುಭವಾಗಲಿ
ಧನ್ಯವಾದ ಜಲನಯನ, ದಿನಕರಣ್ಣಾ.... ಬರುತ್ತಿರಿ
ಚಿನ್ಮಯ್,
ನಾನು ಬಿಡುವಿಲ್ಲದ್ದರಿಂದ ಬೇರೆಯವರ ಬ್ಲಾಗಿಗೆ ಬರಲಾಗುತ್ತಿಲ್ಲ. ಆದರೂ ಈಗ ನಿಮ್ಮ ಬ್ಲಾಗಿನ ಕತೆ ಓದಿದೆ..ತುಂಬಾ ಚೆನ್ನಾಗಿ ವಾಸ್ತವ ಸ್ಥಿತಿಯನ್ನು ಬರೆದಿದ್ದೀರಿ..ಮುಂದುವರಿಸಿ.
ನಿಜಸ್ಥಿತಿಯನ್ನು ಚೆನ್ನಾಗಿ ಹೇಳಿದ್ದೀರಿ,ಇಂಥ ಅನುಭವಗಳು ಸಾಮಾನ್ಯವಾಗಿ ಇರಬೇಕು,ಇರ್ತವೆ.
ಸಧ್ಯಕ್ಕೆ ನಾ ತಾಯ್ತಂದೆಗೆ ಮೋಸ ಮಾಡಿದ್ದರೂ ಯಾವ ದುಶ್ಚಟಗಳಿಗೂ ಬಿದ್ದಿಲ್ಲ(ಗೆಳತಿಯೊಬ್ಬಳ ಆಜ್ಞೆಯ ಮೇರೆಗೆ)
@ಶಿವು ಸರ್: ಧನ್ಯವಾದಗಳು, ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ನಮ್ಮನೆಗೆ ಬಂದಿದ್ದಕ್ಕೆ... ಬರುತ್ತಿರಿ
@ವಿಚಲಿತ: ಧನ್ಯವಾದ ನಮ್ಮನೆಗೆ ಬಂದಿದ್ದಕ್ಕೆ....ಸಾಮಾನ್ಯವಾಗಿ ಮನೆ ಬಿಟ್ಟು ದೂರ ಇರುವ ಯುವಕರು ದುಶ್ಚಟಗಳಿಗೆ ಬೀಳುವುದು ಸಹಜವೇನೋ ಅನಿಸುತ್ತದೆ.. ತಮ್ಮ ಅಭಿಪ್ರಾಯ ಕೇಳಿ ಖುಷಿಯಾಯ್ತು.. ಬರುತ್ತಿರಿ
ಕಥೆ ಚನ್ನಾಗಿದೆ, ಅದಕ್ಕಿಂತ ಹೆಚ್ಚಾಗಿ ಬರವಣಿಗೆ ಶೈಲಿ ಚೆನ್ನಿದೆ. ಒಬ್ಬ ಇಂಜಿನಿಯರಿಂಗ್ ಸ್ಟುಡೆಂಟ್ ಆಗಿ ನಾನೂ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆ.
nice one, keep it up man :)
ಧನ್ಯವಾದ ಸುಬ್ರಹ್ಮಣ್ಯ ಅವರಿಗೆ... ಬರುತ್ತಿರಿ
Very Good...:) Keep posting...:)
ಧನ್ಯವಾದ ಕಾವ್ಯಾ :)
Post a Comment