Monday, December 5, 2011

ಒಂದು ಪ್ರಾಬ್ಲಮ್ಮು... ನಿಮ್ಗೂ ಹೀಗೇ ಆಗತ್ತಾ?

ಏ ಮನವೇ ನೀನೇಕಿಷ್ಟು ವಿಚಿತ್ರ ?

ನೂರಾರು ಬಾರಿ ಗೀಚಿದರೂ
ಬಾರದಲ್ಲ ನಿನ್ನ ಪೂರ್ತಿ ಚಿತ್ರ.

ಗೆಳೆಯರಿಗೆ ಬೇಜಾರಾದಾಗ
ನೀ ಬೇಜಾರಾಗುವೆ,
ಗೆಳೆಯರು ಖುಷಿ ಪಡುವಾಗ
ಅವರೊಡನೆಯೇ ಕೇಕೆ ಹಾಕುವೆ.

ಅದೇಕೆ ಆ ಕೊಂಕು?
ಗೆಳೆಯರಿಗೆ ಬೇಜಾರಾದಾಗ ಒಳಗೊಳಗೇ ಖುಷಿ ತರುವಂತದ್ದು?
ಗೆಳೆಯರು ಖುಷಿ ಪಡುತ್ತಿರುವಾಗ ,ನಗುಮುಖದಲ್ಲೇ ಬೇಜಾರಾಗುವಂತದ್ದು?

ಒಂಟಿ ಮನಕೊಂದು ಗೆಳತಿ
ಬೇಕೆಂದು ಹಂಬಲಿಸುವಂತದ್ದು
ಗೆಳತಿ ಸಿಕ್ಕಾಗ ," ಈ ವಯಸ್ಸಿಗೆ ಒಂಟಿಯಾಗಿದ್ದರೇ
ಬದುಕು ಚೆನ್ನ" ಎಂದು ಬಿಂಬಿಸುವಂತದ್ದು,


ಜಾತ್ರೆಯಲಿ ,ಖಾಲಿ ರಸ್ತೆಯಾದರೂ
ಇದ್ದರೆ ಹಾಯಾಗಿ ತಿರುಗಬಹುದುತ್ತು ಎನ್ನುವೆ..
ಮರುದಿನ ಖಾಲಿ ರಸ್ತೆಯ ಕಂಡು,
ಛೇ! ಬಿಕೋ ಎನ್ನುವ ಬದಲು
ಜಾತ್ರೆ ಪೇಟೆಯಾದರೂ ಇರಬಾರದಿತ್ತೇ ? ಎನ್ನುವೆ.

ಮದುವೆ ಮನೆ ಊಟದಲಿ ,ತನ್ನ ಬಾಳೆಯ ಬಿಟ್ಟು
ಬಾಕಿ ಏನೇನಿದೆ ಎಂದು ಹುಡುಕುವೆ.
ನೋಡಿ ನೋಡಿ ,ಎಲ್ಲಾ ಹಾಕಿಸಿಕೊಂದು
ಎಲ್ಲದನ್ನೂ ಎಂಜಲು ಮಾಡಿ ,
ಎಲ್ಲ ಬಾಳೆಯಲ್ಲೇ ಬಾಕಿ ಉಳಿಸಿ ಬರುವೆ


ಸೆಲ್ಲು,ಕಂಪ್ಯೂಟರಿನ ಮುಂದೆ ಕೆಂಪು ಕಣ್ಣಲಿ ಕುಳಿತಾಗ,
ಛೇ,"ಯಾಕಾದರೂ ಈ ರೀತಿ ಅಂಟಿರುವೆನೊ ಇದಕೆ "ಎನ್ನುವೆ.
ಅವರಿವರು ಬೈದು ಕಣ್ಣು ಕೆಂಪಗಾದಾಗ,ಮೆಸ್ಸೇಜುಗಳಿಗಾದೇ
ಹಪಹಪಿಸುವೆ,ನೆಟ್ಟಿನಲ್ಲೇ ಹೊಸ ಭಾವಲೋಕಕೆ ತೆರೆದುಕೊಳ್ಳುವೆ


ಹೇಳು ಓ ಮನವೇ ನೀ ಏಕೆ ಹೀಗೆ?

ನಿಜ ಹೇಳಿ,
ನಿಮಗೆಲ್ಲರಿಗೂ ಹೀಗಾಗುತ್ತದೆಯೋ,
ಅಥವಾ ನನಗೊಂದೆಯೋ ಹೇಗೆ???

20 comments:

Dr.D.T.Krishna Murthy. said...

ಚಿನ್ಮಯ್ ಭಟ್;ಇದು ನಿಮ್ಮೊಬ್ಬರದೇ ಪ್ರಾಬ್ಲಮ್ಮಲ್ಲ,ಇದು ಎಲ್ಲರ ಪ್ರಾಬ್ಲಮ್ಮು.ಮನಸ್ಸೆಂದರೇ ಹಾಗಲ್ಲವೇ?

Soumya. Bhagwat said...

good one chinmay :)

Subrahmanya said...

ಚೆನ್ನಾಗಿದೆ. :)

ಮೌನರಾಗ said...

ಚಿನ್ಮಯ್ ಎಲ್ಲರ ಮನಸ್ಥಿತಿನೂ ಇಷ್ಟೇ..
ಚೆನ್ನಾಗಿದೆ..

Shruthi B S said...

ಚಿನ್ಮಯ್ ಎಲ್ಲರ ಮನಸ್ಥಿತಿಯೂ ಹೀಗೆ.....ಇದ್ದಾಗ ಬೇಡ ಎನಿಸುವುದು, ಇಲ್ಲದಿದ್ದಾಗ ಸಿಗಲಿ ಎನಿಸುವುದು.....ಕವನ ಚನ್ನಾಗಿದೆ. ಇಷ್ಟವಾಯಿತು.

ಚಿನ್ಮಯ ಭಟ್ said...

@Dr.D.T.Krishna Murthy:
ಹೌದು ಡಾಕ್ಟ್ರೇ..ಅದರಷ್ಟು ಚಂಚಲ ಇನ್ಯಾವುದೂ ಇಲ್ಲವೇನೋ... ಧನ್ಯವಾದಗಳು

ಹಳ್ಳಿ ಹುಡುಗ ತರುಣ್ said...

very nice...

ಚಿನ್ಮಯ ಭಟ್ said...

ಧನ್ಯವಾದ ಸೌಮ್ಯಕ್ಕಾ..

ಚಿನ್ಮಯ ಭಟ್ said...

ಧನ್ಯವಾದ ಸುಬ್ರಮಣ್ಯ ಹೆಗ್ಡ್ರೇ..ಬರ್ತಾ ಇರಿ

ಚಿನ್ಮಯ ಭಟ್ said...

@ಅನುಷಾ : ಸ್ವಾಗತ ನಮ್ಮನೆಗೆ...
ಧನ್ಯವಾದ, ಬರ್ತಾ ಇರಿ...

ಚಿನ್ಮಯ ಭಟ್ said...

@ ಮೌನರಾಗ :ಹಾಂ.. ಅದು ಸರಿ.
ಧನ್ಯವಾದಗಳು.. ಬರ್ತಾ ಇರಿ

ಚಿನ್ಮಯ ಭಟ್ said...

@ ಶ್ರುತಿ : ತುಂಬಾ ಧನ್ಯವಾದ... ಬರ್ತಾ ಇರಿ,ನೀವೂ ಬರಿತಾ ಇರಿ...

ಚಿನ್ಮಯ ಭಟ್ said...

@ತರುಣ್ ಜೀ: ಧನ್ಯವಾದಗಳು..ಬರ್ತಾ ಇರಿ..

Advaitha said...

Good one:)

ಚಿನ್ಮಯ ಭಟ್ said...

ಧನ್ಯವಾದಗಳು ಹರಿಪ್ರಸಾದ್... ಸ್ವಾಗತ ನಮ್ಮನೆಗೆ... ಬರ್ತಾ ಇರಿ

V.R.BHAT said...

ಇದೇ ಈ ಜೀವನ, ಮಾನವನ ಇತಿಮಿತಿ ಇಷ್ಟೇ. ಒಂದು ಪ್ರಾಬ್ಲಮ್ಮು ಮುಗಿಯಿತು ಎಂಬಲ್ಲಿಗೆ ಮತ್ತೊಂದರ ಆರಂಭ. ಕೆಲವೊಮ್ಮೆ ಒಬ್ಬರಿಗೆ ಅನುಕೂಲವಾದದ್ದು ಇನ್ನೊಬ್ಬರಿಗೆ ಪ್ರಾಬ್ಲಮ್ಮು ಮಾಡಬಹುದು! ಬರವಣಿಗೆ ಹೀಗೇ ಸಾಗಲಿ, ಶುಭಮಸ್ತು.

ಚಿನ್ಮಯ ಭಟ್ said...

@ವಿ.ಆರ್.ಭಟ್: ಧನ್ಯವಾದಗಳು ಸಾರ್.....ಬರುತ್ತಿರಿ

shylu said...

NICE ONE :) YA I FEEL SO .. AND EVERYBODY DO :)

ಚಿನ್ಮಯ ಭಟ್ said...

@ಶೈಲು: ಸ್ವಾಗತ ನಮ್ಮನೆಗೆ...ಖುಷಿಯಾಯ್ತು...ಬರ್ತಾ ಇರಿ..ಧನ್ಯವಾದ.

PRIYASBETAGERI said...

very nice..:)