ಹಾದಿ ಬದಿಯ ಹೂವಾಗದಿರಿ
ಗೆಳೆಯರೆ
ಪಾದವ ಮುತ್ತಿಕ್ಕುವ
ಗರಿಕೆಯಾಗಿ
ನಗುವ ಮನಕೆ ದಾಣಿಯಾಗಬೇಕಿಲ್ಲ
ನೀವು
ಬದಲಿಗೆ,ಅಳುವ ಮನಕೆ
ಸಾಂತ್ವನದ ಹರಕೆಯಾಗಿ
ಎದೆಯ ಮಂದಿರದೊಳಿಟ್ಟು
ಪೂಜಿಸುವ ಹೂವಾಗಬೇಕಿಲ್ಲ ನೀವು
ಆಗಿರಿ ನೋವು ತಿಂದ
ಹ್ರದಯಗಳಿಗೆ ಹಿತತರುವ ಕಾವು
ಮಿನುಗುತಾರೆಯಾಗಿ
ಕಟ್ಟಬೇಕಿಲ್ಲ ನಿತ್ಯವೂ ಹೊಸ ಕನಸಿನ ಮಂದಿರ,
ಆಗಿರಿ ಸಾಕು ಅಳುವ
ಸ್ನೇಹ ಶಿಶುವನ್ನು ಖುಷಿ ಪಡಿಸುವ ಚಂದಿರ
ಸ್ನೇಹವೆಂದರೆ ಹೊಸ
ಕಟ್ಟು ಪಾಡುಗಳಲ್ಲ ಗೆಳೆಯರೇ
ಅದು,ನಿಮ್ಮೊಳಗಿನ
ನಿಮ್ಮತನದ ಹಾಡು
ಗೆಳೆತನಕೆಂದು ಬದಲಾಗದಿರಿ,ಗೆಳೆತನಕೆಂದೇ
ಬದಲಾಯಿಸದಿರಿ,
ಬದಲಾಯಿಸಿರಿ ನಿಮ್ಮ
ದ್ರಷ್ಟಿಕೋನವನ್ನು,ನಿಮ್ಮ ಕಲ್ಪನೆಗಳನ್ನು..
(ಇದು ಗೆಳೆಯರ ದಿನದಂದು
ಬರೆದ ಕವನ…. ಬರಿಯ ತೋರಿಕೆಯ ಸ್ನೇಹಕ್ಕಿಂತ ಪರಸ್ಪರ
ಸಹಾಯ,ಸಾಂತ್ವನಗಳೇ ಸ್ನೇಹದ ಆಧಾರಗಳು ಎಂಬ ಆಶಯವನ್ನಿಟ್ಟುಕೊಂಡು ನಾಲ್ಕು ಸಾಲುಗಳನ್ನು ಗೀಚಿದ್ದೇನೆ…ದಯವಿಟ್ಟು
ಓದಿ ಪ್ರತಿಕ್ರೀಯಿಸಿ)
ವಂದನೆಗಳೊಂದಿಗೆ,
ನಿಮ್ಮನೆ ಹುಡುಗ,
ಚಿನ್ಮಯ ಭಟ್
6 comments:
chennaagide chinmay....
innashTu bareyiri....
bereyavara blog ge hogi....
innashTu parichaya aagatte ellarigU...
ಧನ್ಯವಾದ ದಿನಕರಣ್ಣಾ.....ಖಂಡಿತ ಬರಿತಾ ಇರ್ತಿನಿ,ಓದ್ತಾನೂ ಇರ್ತೀನಿ...
channaagide chinmay...
Uttama Prayatna Chinmay...Chennagide...Keep writing...All the best...
ಧನ್ಯವಾದ ಶ್ರುತಿ...
cool :)
Post a Comment