Thursday, December 6, 2012

ಶೀತ ಗೀತೆ..



ಹಮ್..ಇವತ್ತು ಬೆಳಿಗ್ಗೆ ಯಾಕೋ ತೀರಾ ಛಳಿಯೆನಿಸತೊಡಗಿತ್ತು...ಯಾಕೋ ಬೆಚ್ಚನೆಯ ಕಂಬಳಿ ಹೊದ್ದಿದ್ದ ಹಾಸಿಗೆ ಬಿಟ್ಟೇಳಲು ಮನಸೇ ಬಾರದಾಗಿತ್ತು...ಈ ಛಳಿಯ ಯಾಕಾದರೂ ಬರುತ್ತದೆಯೋ ಅಂದುಕೊಂಡೆ..ಮತ್ತೆ ಇನ್ನೊಂದು ಕ್ಷಣದಲ್ಲಿ ಈ ಛಳಿಯಲ್ಲಿಯೂ ಏನೋ ಒಂದು ಸುಖವಿದೆ ,ಈ ಚಳಿಗಾಲವೂ ಸುಂದರವೇ ಎನಿಸಿತು...ಅದನ್ನೇ ಒಂದು ಹೆಣ್ಣಾಗಿಸಿ ಒಂದೆರಡು ಸಾಲು ಬರೆದೆ...ನೋಡಿ ಈ ಸಂಜೆ ಅದನ್ನು ಪೂರ್ತಿಗೊಳಿಸಿ ನಿಮ್ಮ ಮುಂದಿಟ್ಟಿದ್ದೇನೆ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ...ಆಶೀರ್ವದಿಸಿ  ...


ಮರಳಿ ಬಂದಳು ಛಳಿಯಾ ಗೆಳತಿ
ಹಸಿ-ಬಿಸಿ ಕನಸಿನ ಜೊತೆಗೆ.
ಗುಬುರನು ಹಾಕಿ,ಮಲಗಿದ್ದಾ ಮನವನು
ತಂದಳು ಚವಿಯಾ ಸ್ಥಿತಿಗೆ.

ಹವಳದಾ ಇಬ್ಬನಿಯು ಹೂವಿನಾ ಪಕಳೆಗೆ,
ಕಾವಳದ ಮಂದಲಿಗೆ,ಗರಿಕೆಗೆ.
ನೇವಳದ ಈ ಒಲವು,ಪ್ರಾಲೇಯದಾ ಚೆಲುವು
ಚಿಚ್ಛಕ್ತಿ ಚಿಮ್ಮಿಸಿದೆ ಎದೆಯೊಳಗೆ.

ಛಾನಸವಾ ಹೆದರಿಸಿ,ಜಡತೆಯಾ ನಡುಗಿಸಿ
ಎಬ್ಬಿಸಿದೆ ಎನ್ನಾ ನಿನ ಶೀತ.
ಕನಸಿನ ಕಸ್ತ್ರವ ಕಂಡಿಹೆನು ನಿನ್ನಲ್ಲೇ,
ಇದುವೇ ಸಂಕ್ರಮಣ ಗೀತ.
(ಶಬ್ದಾರ್ಥ:ಗುಬುರು:ಮುಸುಕು,ಚವಿ:ಕಾಂತಿ,ಹೊಳಪು,ಕಾವಳ:ಮಂಜು(ಕತ್ತಲೆ ಎನ್ನುವ ಅರ್ಥವೂ ಇದೆಯಂತೆ),ನೇವಳ:ಉಡಿದಾರ,ಕಂಠೀಹಾರ,ಮಂದಲಿಗೆ:ಚಾಪೆ,ಪ್ರಾಲೇಯ:ಹಿಮ,ಚಿಚ್ಛಕ್ತಿ:ಚೈತನ್ಯ,ಆತ್ಮಶಕ್ತಿ,ಛಾನಸ:ಸೋಮಾರಿತನ,ಕಸ್ತ್ರ:ನಮ್ಮ ಕಡೆ ಮಾವಿನ ಹೂವಿಗೆ “ಮಾವಿನ ಕಸ್ತ್ರ” ಎಂದು ಬಳಸುತ್ತಾರೆ ಅದನ್ನು ಬರೆದೆ ಆಷ್ಟೆ…)


ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ನಮೂದಿಸಿ..
ನಿಮ್ಮ ಸಲಹೆಗಳೆ ನಮ್ಮಂತಹ ಎಡಬಿಡಂಗಿ ಬರಹಗಾರರಿಗೆ ಶಕ್ತಿ,ಅದೇ ನಮಗೆ ಸ್ಪೂರ್ತಿ :)
ವಂದನೆಗಳೊಂದಿಗೆ
-ಚಿನ್ಮಯ ಭಟ್ಟ

50 comments:

ಸಂಧ್ಯಾ ಶ್ರೀಧರ್ ಭಟ್ said...

ಚೊಲೋ ಇದ್ದು ಚಿನ್ನು ...
ಶಬ್ದಗಳನ್ನು ಮಾತ್ರ ಎಲ್ಲಿಂದ ತರ್ತೆ ಮಾರಾಯ ...
ಜೊತೆ ಗೆ ಅರ್ಥಗಳನ್ನು ಹೇಳಿ ಉಪಕಾರ ಮಾಡ್ತಿದ್ದೆ ..

very nice ....

ಮನಸು said...

ಚಳಿಯಲ್ಲಿ ಗುಬುರಾಕಿ ಮಲಗಿದ್ದರೂ ಆ ಸೊಗಸಾದ ನಿದ್ರೆಗೆ ಚವಿಯನಿತ್ತ ಈ ಚಳಿ ಕನ್ಯೆ ಚೆಂದವೇ ಬಿಡಿ.. ಏನೇ ಇರಲಿ ಚಳಿ, ಮಳೆ, ಗಾಳಿ, ಬಿಸಿಲೋ ಅದನ್ನೂ ಅನುಭವಿಸುವ ಕಲೆ ಇದೆ ನಿಮ್ಮಲ್ಲಿ. ಚೆನ್ನಾಗಿದೆ ಕವಿತೆ...

samanvaya bhat said...

soooperrr.........brother

Srikanth Manjunath said...

ಮೈ ಚಳಿ ಬಿಡಿಸುವ ಪದಗಳು ಈ ಶರಧ್ರುತುವಿನಲ್ಲಿ ಮೂಡಿರುವುದು ತಲೆಯೊಳಗೆ ಒಮ್ಮೆ ಓಡಾಡಿಬಂದು ಅಲುಗಾಡಿಸುತ್ತವೆ..ಸೊಗಸಾಗಿದೆ...

balasubramanya said...

ಚಿನ್ಮೈ ಛಳಿಯ ಬಗ್ಗೆ ಬರೆದ ಕವಿತೆ ಚಳಿ ಚಳಿಯಾಗಿ ಮುದ ನೀಡಿತು. ಕವಿತೆಯಲ್ಲಿ ಹೊಸ ಹೊಸ ಪದಗಳ ಬಳಕೆ ಒಪ್ಪುವಂತಿದೆ. ಹರೆಯದ ಹುಡುಗನ ತುಡಿತ ಈ ಕವಿತೆಯಲ್ಲಿದೆ. ಮುಂದುವರೆಯಲಿ ನಿಮ್ಮ ಕವಿತೆಗಳ ಮೆರವಣಿಗೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

ಗಿರೀಶ್.ಎಸ್ said...

Chennagide Chinmay.halige innashtu kanasugalu,kavanagalu barali.....C

ಚಿನ್ಮಯ ಭಟ್ said...

ಸಂಧ್ಯಕ್ಕಾ,
ಧನ್ಯವಾದ ಬೋಣಿಗೆ ಮಾಡಿದ್ದಕ್ಕೆ :)
ಹಾಂ ಪದಗಳು....ಅದೊಂದು ಹುಚ್ಚು ಬಿಡು ಹೊಸ ಹೊಸ ಪದ ಕಲಿಬೇಕು ಎನ್ನುವುದು..ಆ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನಗಳು...ಅದರಲ್ಲಿ ಇಷ್ಟವಾದದನ್ನು ಬಳಸದು ಅಷ್ಟೇ...
ಖುಷಿ ಆಯ್ತಕಾ..ಬರ್ತಾ ಇರು :)

ಚಿನ್ಮಯ ಭಟ್ said...

ಧನ್ಯವಾದ ಮೇಡಮ್...ನಿಜ ಪ್ರತಿಯೊಂದು ಕಾಲವೂ ಛಂದವೇ...ಆದರೇನ್ ಮಾಡಣಾ?? ನಮಗೆ ಮಳೆಗಾಲದಲ್ಲಿ ಛಳಿಗಾಲ ಇಷ್ಟ..ಛಳಿಯಲ್ಲಿ ಬೇಸಿಗೆ ಇಷ್ಟ..ಬೇಸಿಗೆಯಲ್ಲಿ "ಅಯ್ಯಪ್ಪಾ ಮಳೆ ಬಂದ್ರೆ ಸಾಕು" ..ಏಲ್ಲವೂ ನಮ್ಮ ಕೈಲೇ ಇರದೇನೋ...ಹಮ್..ಮತ್ತೆ ಮತ್ತೆ ಯಾಕೋ ಆ ಬಸ್ಸಿನ ಮೇಲಿದ್ದ ಸಾಲುಗಳು ನೆನಪಾಗ್ತಾ ಇವೆ..

"ಇರುವ ಭಾಗ್ಯವ ನೆನೆದು
ಬಾರನೆಂಬುದ ಬಿಡು
ಹರುಷಕ್ಕಿದೆ ದಾರಿ "ಅಂತ.....ತುಂಬಾ ನಿಜವಾದ ಮಾತುಗಳವು....ಪ್ರತಿಯೊಂದು ಕ್ಷಣವನ್ನೂ ಆನಂದದಿಂದ ಆಸ್ವಾದಿಸುವ ಗುಣವಿರಬೇಕು ಅಂದುಕೊಂಡವ ನಾನು...
ವಂದನೆಗಳು ಆತ್ಮೀಯವಾದ ಪ್ರತಿಕ್ರಿಯೆಗೆ...
ಬರ್ತಾ ಇರಿ :)..
ನಮಸ್ತೆ..

Sudeepa ಸುದೀಪ said...

ಸುಂದರವಾಗಿದೆ...ಚಿನ್ಮಯ್... :)

ಚಿನ್ಮಯ ಭಟ್ said...

ಸಮನ್ವಯಕ್ಕಾ,
ಸ್ವಾಗತ ನಮ್ಮನೆಗೆ...
ಬಹುಷಃ ಮೊದಲ ಬಾರಿ ಬಂದಿರಿ ಅನ್ಸತ್ತೆ...
ಖುಷಿಯಾಯ್ತು ಬಂದಿದ್ದು...
ಬರ್ತಾ ಇರಿ :)
ನಮಸ್ತೆ

ಪೂರ್ಣಿಮಾ( ಭೂಮಿ ) said...

yadabidangi andkondu bharaedaru odidavaru... esta paduvanthae edae... osa padagala prayoga chanda edae

ಚಿನ್ಮಯ ಭಟ್ said...

ಶ್ರೀ...
ಮೈ ಛಳಿ ಬಿಡಿಸುವ ಪದಗಳು...
ಆಹಾ...ಸುಂದರ ಶ್ರೀ....
ಯಾರದೇ ಯಾವುದೇ ಬ್ಲಾಗಿರಲಿ ನಿಮ್ಮ ಪ್ರತಿಕ್ರಿಯೆ ಓದುವುದೇ ಒಂದು ಹಬ್ಬ...
ಧನ್ಯವಾದ ..
ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ...
ನಮಸ್ತೆ...

ಸುಬ್ರಮಣ್ಯ said...

:-)

Subrahmanya said...

ಚೊಲೋ ಇದ್ದು ಚಿನ್ಮಯ್ , ಕನ್ನಡ ನುಡಿಗಂಟಿನ ಅವಶ್ಯಕತೆಯನ್ನು ಉಂಟುಮಾಡುತ್ತವೆ ನಿನ್ನ ಕವನಗಳು. ಶಬ್ದಪ್ರಯೋಗ ಚೆನ್ನಾಗಿದೆ.ಇಷ್ಟ ಆಯ್ತು.

umesh desai said...

ಇನ್ನೂ ಕೆಲವು ಶಬ್ಡ ಅರ್ಥಆಗಲಿಲ್ರಿ
ಭಾವ, ಭಾವನೆ ಎರಡೂ ಛಂದ..
ಅಂದಂಗ ಅಂಥಾಪರಿ ಠಂಡಿ ಎಲ್ಲಿ ಸಿಕ್ಕಿತು ನಿಮಗೆ?

ಮೌನರಾಗ said...

ಚಂದ ಬರ್ದಿದ್ದಿ ಚಿನ್ಮಯ್..
ಇಷ್ಟ ಆತು...

ಚಿನ್ಮಯ ಭಟ್ said...

ಬಾಲು ಸರ್..
ವಂದನೆಗಳು :)..
ಹಾಂ ಅದೇಕೋ ಗೊತ್ತಿಲ್ಲ ಮೊದಲು ಆ ಛಳಿಗಾಲದ ಬಗ್ಗೆ ಅಷ್ಟೇಯೇ ಬರೆದಿದ್ದೆ..."ಮರಳಿ ಬಂದೆಯಾ ಛಳಿ ಯೇ " ಎಂದು ಯೋಚಿಸಿದ್ದೆ..ಆಮೇಲೇಕೋ ಅದಕ್ಕೊಂದು ಹೆಣ್ಣಿನ ರೂಪಕೊಟ್ಟರೆ ಸುಂದರವೇನೋ ಅನಿಸಿತು..ಅದರ ಫಲ ಇದು ಅಷ್ಟೆ...
ಬಿಡಿಪಾ ಈ ವಯಸ್ಸಿನಲ್ಲಿ ಹೆಣ್ಣನಿ ರೂಪದಲ್ಲಿದ್ರೆ ಎಲ್ಲದೂ ಛಂದ ಅಂತೀರಾ...ಹಾ ಹಾ!!!!!
ಬರ್ತಾ ಇರಿ :)
ನಮಸ್ತೆ :)

ಚಿನ್ಮಯ ಭಟ್ said...

ಗಿರೀಶ್...
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಹಾಂ ಛಳಿಗಾಲದಲ್ಲೇ ಕನಸುಗಳು ಬೀಳುವುದು ಜಾಸ್ತಿ ಯಾಕೆ ಹೇಳಿ????
ತುಂಬಾ ಹೊತ್ತು ಮಲಗಿರುತ್ತೇವಲ್ಲಾ ಛಳಿ ಅಂತಾ ಅದ್ಕೆ!!!!!!

ಖುಷಿಯಾಯ್ತು...ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು..
ಬರ್ತಾ ಇರಿ..
ನಮಸ್ತೆ

ಚಿನ್ಮಯ ಭಟ್ said...

ಸುಮತಿ ಅಕ್ಕಾ..
ಧನ್ಯವಾದ ಇಷ್ಟಪಟ್ಟಿದ್ದಕ್ಕೆ..
ಖುಷಿಯಾಯ್ತು...
ಬರ್ತಾ ಇರಿ :)

ಚಿನ್ಮಯ ಭಟ್ said...

ಪೂರ್ಣಿಮಾ...
ಸ್ವಾಗತ ನಮ್ಮನೆಗೆ :)
ಎಡಬಿಡಂಗಿ ಎಂದಿದ್ದು ಏಕೆಂದರೆ ನಾನೇನು ತೀರಾ ತಲೆಕೆಡಿಸಿಕೊಂಡು ಬರೆದವನಲ್ಲ..ಅದು ಕರೆದುಕೊಂಡು ಹೋದಲ್ಲಿಗೆ ಹೋಗಿ ನಿಲ್ಲುವವ...ಹೊಳೆಯಲ್ಲಿ ಬಿದಿರಂಡೆ ತೇಲಿ ಬಿಟ್ಟ ಹಾಗೆ ಅನ್ನುತ್ತಾರಲ್ಲಾ ಅದರಂತೆ...ಧನ್ಯವಾದ ಇಷ್ಟಪಟ್ಟಿದ್ದಕ್ಕೆ..ನಿಮ್ಮ ಪ್ರೊತ್ಸಾಹ ಸದಾ ಹೀಗೇ ಇರ್ಲಿ...
ಬರ್ತಿರಿ..

ಚಿನ್ಮಯ ಭಟ್ said...

ಧನ್ಯವಾದ ಸುಬ್ರಹ್ಮಣ್ಯ ಮಾಚಿಕೊಪ್ಪ ಜೀ

ಚಿನ್ಮಯ ಭಟ್ said...

ಸುಬ್ರಹ್ಮಣ್ಯ ಹೆಗಡೆ...
ಧನ್ಯವಾದನ...ನಿಮ್ಮ ಸಲಹೆಗಳಿಗೆ ನಾನು ಆಭಾರಿ...ನುಡಿಗಂಟು ಹಮ್ ಆ ಶಬ್ಧ ಮರೆತುಹೋಗಿತ್ತು ನೋಡಿ ನೆನಪಿಸಿದಿರಿ...ವಂದನೆಗಳು...
ಬರುತ್ತಿರಿ :)
ನಮಸ್ಕಾರ

Swarna said...

ನಿಮ್ಮ ಕವಿತೆ ಚೆನ್ನಾಗಿದೆ ಹೊಸ ಪದಗಳನ್ನ ಪರಿಚಯಿಸಿದ್ದಕ್ಕೆ ಧನ್ಯವಾದಗಳು

Shruthi B S said...

ಈ ಕವನ ಓದಿ ನನಗೆ "ಇಕ್ಕಳ" ಪದ್ಯ ನೆನಪಾಯಿತು. ಆ ಪದ್ಯಕ್ಕೆ ವ್ಯತಿರಿಕ್ತ ಎನ್ನುವ೦ತೆ ಇದನ್ನು ಬರದ್ದೆ. ನಾನು ಚಳಿಗಾಲ,ಹಾಗೂ ಮಳೆಗಾಲ ಎರಡನ್ನೂ ಬಹಳ ಪ್ರೀತಿಸುತ್ತೇನೆ. ಇಲ್ಲಿ ನೀನು ಚಳಿಯನ್ನು ಹೆಣ್ಣಿಗೆ ಹೋಲಿಸಿ ಬರೆದಿದ್ದು ಬಹಳ ಇಷ್ಟ ಆತು. ಚನ್ನಾಗಿ ಮೂಡಿ ಬೈ೦ದು.....:)

Unknown said...

ಪ್ರತಿಯ ದಿನಕ್ಕೊಂದು ಸಂಜೆ.. ಸಂಜೆಯ ನಂತರ ಕತ್ತಲು.. ಕೆಲವೊಮ್ಮೆ ಕರಾಳ ರಾತ್ರಿ.. :-) ಪರೀಕ್ಷೆಯ ಸನಿಹ ಬೇರೆ. ಅದರಲ್ಲೂ ಈ ಚಿಕ್ಕಮಗಳೂರು ಚಳಿಗೆ ಕನಸುಗಳೂ ಹೆಪ್ಪುಗಟ್ಟುತ್ತಿವೆ. ಚೆನ್ನಾಗಿದೆ ನಿಮ್ಮ ಚಳಿಯ ಗೆಳತಿಯೊಂದಿಗೆ ಮಾತನಾಡಿದ್ದು.

ಈಶ್ವರ said...

ಕವನ ಓದಿ ಮುದ್ದಣನ ಗದ್ಯಂ ಹೃದ್ಯಂ ಪದ್ಯಂ ವರ್ಜ್ಯಂ ಎನ್ನುವಂತಾಯ್ತು. ಕವನ ಚೆನ್ನಾಗಿದೆ, ಕಷ್ಟವಾಗಿದೆ.

ದಿನಕರ ಮೊಗೇರ said...

ಪದಗಳ ಜೊತೆ ಆಟ ಎನಿಸಿತು.... ಹೀಗೆ ಚಳಿ ಆಗುತ್ತಿರಲಿ ನಿಮಗೆ.... ಹೊಸ ಹೊಸ ಪ್ರಯೋಗ ಆಗುತ್ತಿರಲಿ....

ತುಂಬಾ ಚೆನ್ನಾಗಿದೆ ಚಿನ್ಮಯ್..

ಚಿನ್ಮಯ ಭಟ್ said...

ದೇಸಾಯಿ ಸರ...
ನಿಮ್ ಕಮೆಂಟ್ ನೋಡೂದ್ ಒಂದ್ ಮಜಾ ಬಿಡ್ರಿಪಾ..ಭಾಳ ಖುಷಿ ಕೊಡ್ತದ ಅದು...
ಹಾಂ ಶಬ್ದದ್ ಬಗ್ಗಿ ನಾ ಏನೂ ಹೇಳುದಿಲ್ರಪಾ..ಕನ್ನಡದಾಗ ಇನ್ನೂ ಭಾಳ ಏನೇನೋ ಶಬ್ದ ಅದಾವ್ರಿ ಸರ...ಅವ್ನೆಲ್ಲಾ ಕಲಿಯೂಣಂತ..ಆ ಹಾದ್ಯಾಗ ಒಂದ್ ಕಲ್ ಹೊಡ್ದೀನಿ ಅಷ್ಟ..
ಹಾಂ ಚಿಕ್ಕಮಗಳೂರಿಗ್ ಬರ್ರಲ್ಲಾ ಥಂಡಿ ಆಟ ತೋರ್ಸ್ತಿನಿ ನಿಮಗ..
ಬೆಳ್ ಬೆಳಿಗ್ಗಿ ೬.೩೦ ಗ ಮುಳ್ಳಯ್ಯನಗಿರಿಗ್ ಹೋಗ್ ನಿಂತ್ರ ಶ್ವಾಸ ಒಂದ್ ಓಡಾಡ್ತವ್ ನೋಡ್ರಿ ಇನ್ನೇನು ಗೊತ್ತಾಗಂಗಿಲ್ಲಾ....
ಬರ್ತಿರ್ರಿ ಬ್ಲಾಗಿಗೂ..
ನಮಸ್ತೆ :)

ಚಿನ್ಮಯ ಭಟ್ said...

ಸುಷ್ಮಾ,
ಧನ್ಯವಾದ ಕಣೆ ..
ಬರ್ತಾ ಇರು..ಏನಾದ್ರೂ ತಪ್ಪುಗಳಾದ್ರೂ ಹೇಳ್ತಾ ಇರು...

ಚಿನ್ಮಯ ಭಟ್ said...

ಮೇಡಮ್...
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ..
ಈ ತರಹದ ಪ್ರಯೋಗಗಳು ಸರಿಯೋ ತಪ್ಪೋ ಗೊತ್ತಿಲ್ಲ...ತಪ್ಫಾಗಿದ್ದರೆ ಮರೆಯದೇ ತಿಳಿಸಿ..
ನಮಸ್ತೆ

ಚಿನ್ಮಯ ಭಟ್ said...

ಶೃತಿ,
ಇಕ್ಕಳ ಮರೆತು ಹೋಗಿತ್ತು..ಅಂತರ್ಜಾಲದಲ್ಲಿ ಹುಡುಕಿದೆ ಸಿಕ್ಕಿತು...ಧನ್ಯವಾದ http://www.kannadalyrics.com ಗೆ...

ರಚನೆ: ಕೆ.ಎಸ್. ನರಸಿಂಹಸ್ವಾಮಿ

ಚಳಿಗಾಲ ಬಂದಾಗ 'ಏಷ್ಟು ಚಳಿ?' ಎಂದರು
ಬಂತಲ್ಲ ಬೇಸಿಗೆ, 'ಕೆಟ್ಟಬಿಸಿಲ್' ಎಂದರು
ಮಳೆ ಬಿತ್ತೊ, 'ಬಿಡದಲ್ಲ ಶನಿ!' ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
'ಹಣ್ಣಿನ ಗಾತ್ರ ಪೀಚು' ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ!
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

------------------------------------------------------

ಹಮ್..ನಂಗೂ ಎಲ್ಲ ಕಾಲವೂ ಇಷ್ಟ ಆದರೆ ಎಲ್ಲ ಹೊತ್ತಲ್ಲೂ ಅಲ್ಲಾ ಹಾ ಹಾ..ಮಳೆಗಾಲದ ಸಂಜೆ ಇಷ್ಟ,ಚಳಿಗಾಲದ ಮಧ್ಯಾನ್ಹ ಇಷ್ಟ..ಬೇಸಿಗೆಯ ರಾತ್ರಿ ಇಷ್ಟ..ಹಿಂಗೆ.....
ಧನ್ಯವಾದನೇ ಬಂದಿದ್ದದ್ದೆ...ಛಂದದ ಅಂದದ ಅನಿಸಿಕೆ ಬರೆದಿದ್ದಕ್ಕೆ..
ಬರ್ತಾ ಇರು....

ಚಿನ್ಮಯ ಭಟ್ said...

ಭಾಗ್ಯಾ,
ನಿನಗೆ ಚಿಕ್ಕಮಗಳೂರಿನಲ್ಲಿ ಮೊದಲ ಛಳಿಗಾಲ ಅಲ್ವಾ???ಸರಿ ಸರಿ..ನನಗಂತೂ ಮೊದಲ ಬಾರಿ ಅದೊಂದು ರೋಮಾಂಚಕ ಅನುಭವ..ಒಂದು ಸಲ ಅಂತೂ ಬೆಳಿಗ್ಗೆ ೧೧ ಘಂಟೆಯವರೆಗೂ ಛಳಿ ಎಂದು ಮಲಗೇ ಇದ್ದೆ...
" ಚಳಿಗೆ ಕನಸುಗಳೂ ಹೆಪ್ಪುಗಟ್ಟುತ್ತಿವೆ."
ಎಂಥಾ ಮಾತು ಮಾರಾಯ್ತಿ...
ತುಂಬಾ ಇಷ್ಟವಾಯ್ತು ಸಾಲುಗಳು...
ಧನ್ಯವಾದ ಆತ್ಮೀಯವಾದ ಪ್ರತಿಕ್ರಿಯೆಗೆ...

ಬರ್ತಾ ಇರು :)

ಚಿನ್ಮಯ ಭಟ್ said...

ಈಶ್ವರ ಭಟ್ರೇ..
ಸ್ವಾಗತ ನಮ್ಮನೆಗೆ..
ಮುದ್ದಣನ ಮಾತು ..ಹಾಂ ಎಲ್ಲೋ ಹೈಸ್ಕೂಲಿನಲ್ಲು ಕೇಳಿದ ನೆನಪು...
ಧನ್ಯವಾದ ನಿಮ್ಮ ಅನಿಸಿಕೆಗೆ..
ಬರ್ತಾ ಇರಿ...ಇದೇ ತರಹ ತಿದ್ದುತ್ತಾ ಇರಿ :)
ನಮಸ್ಕಾರ :)

ಚಿನ್ಮಯ ಭಟ್ said...

ದಿನಕರಣ್ಣಾ,
ಪದಗಳು...ಹಮ್ ಅದೇನೋ ಗೊತ್ತಿಲ್ಲ..ಏನು ಓದಿದರೂ ಅದರಲ್ಲಿನ ಭಾವವನ್ನು ಪೂರ್ತಿಯಾಗಿ ತಿಳಿಯುತ್ತೇನೋ ಇಲ್ಲವೋ ಬೇರೆ ಪ್ರಶ್ನೆ,ಆದರೆ ಒಂದೆರಡು ಹೊಸ ಶಬ್ದ ಕಲಿಯುವ ಪ್ರಯತ್ನ ಮಾಡುತ್ತಿರುತ್ತೇನೆ...ಹೀಗೆ ಕಲಿತ ಪದಗಳನ್ನು ಎಲ್ಲಾದರೂ ಅವಕಾಶ ಸಿಕ್ಕರೆ ಉಪಯೋಗಿಸುವುದು ಅಷ್ಟೇ ...ಹೀಗೆ ಏನೇನೋ ಪ್ರಯತ್ನಗಳು ಆಗುತ್ತಲಿದೆ...ಧನ್ಯವಾದ ನಿಮ್ಮೆಲ್ಲರ ಪ್ರೀತಿಗೆ ಹಾಗೂ ಸಹಕಾರಕ್ಕೆ... ಖುಷಿಯಾಯ್ತು...ಬರುತ್ತಿರಿ :)

ಹಾಂ ಛಳಿ ಆಗುತ್ತಲೆ ಇದೆ ಅಣ್ಣಾ..ಏನು ಮಾಡಣಾ???
ಈ ಛಳಿಯಲ್ಲ,ಪರೀಕ್ಷೆಯ ಛಳಿ,ಸಿಲೆಬಸ್ಸು ನೋಡಿದರೆ ನಡುಕ!!!!
ಹಾ ಹಾ,,
ನಮಸ್ತೆ :)

ಪುಷ್ಪರಾಜ್ ಚೌಟ said...

ಭಾವ ಚಳಿಯದ್ದಾಗಿದ್ದರೂ ಪದಗಳ ಬಿಸಿ ಮುದಕೊಡಲಿಲ್ಲ.

ನಿಘಂಟು ಜೊತೆಗಿಟ್ಟುಕೊಂಡು ರಚನೆ ಓದುವಂತಾದರೆ ಸ್ವಲ್ಪ ಕಷ್ಟ! ಪ್ರತಿಶತ ಎಪ್ಪತ್ತರಷ್ಟು ಪದಗಳು ನನಗೆ ಹೊಸದೆನಿಸಿದುವು. ಕಾಲಮಾನಕ್ಕೆ ತಕ್ಕಂಥ ಬದಲಾವಣೆ ಬರಹಗಳಲ್ಲಿದ್ದರೆ ಚೆಂದ. ಅಂಥಹ ಪದಗಳನ್ನು ಬಳಸಲೇಬೇಕಾದ ಸಂದರ್ಭಗಳಿದ್ದರೆ, ಅನಿವಾರ್ಯವಾಗಿದ್ದರೆ ಅಭ್ಯಂತರವಿಲ್ಲ.

ಚವಿ=ಛವಿ?
ಛಳಿ=ಚಳಿ?

Imran said...

ನಿಮ್ಮ ಕವನಗಳಲ್ಲಿನ ವಿಭಿನ್ನ ಪದಗಳ ಅರ್ಥ ಹುಡುಕುವ ಭರದಲ್ಲಿ

ನನ್ನ ಕೈ ಬೆರಳುಗಳು ನನಗರಿಯದಂತೆ ನನ್ನ ತಲೆಯೇರಿ,

ಕೂದಲೆರಡನ್ನು ಕಿತ್ತು ಸಂಭ್ರಮಿಸಿರಲು............

.

ಅಯ್ಯೋ.....!!! ಮುಂದೇನಂತ ಕಮೆಂಟಿಸುವುದು.....?

ನನ್ನ ತಲೆಯೀಗ ಖಾಲಿ ಬಯಲು..!! :D

ಹಹಹಹಹ .....

Nice one bro. ನಿಮ್ಮ ಬರವಣಿಗೆಯ ರೀತಿಯೇ ವಿಭಿನ್ನ.

ಕನ್ನಡದ ಹೊಸ-ಹೊಸ ಪದಗಳನ್ನ ಪರಿಚಯಿಸುತ್ತಿರುವ ನಿಮ್ಮ ಬರವಣಿಗೆಗೆ ನಾನು ಅಭಿಮಾನಿಯಾದೆ :-)

ಹ್ಞಾ ..!! ಈ ವಯಸ್ಸಿನಲ್ಲಿ ಶೀತಗೀತೆಗಳು ಹುಟ್ಟೋದು ಸಹಜ.

ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ.

Badarinath Palavalli said...

ಶಬ್ಧಾರ್ಥ ಚಿಂತಾಮಣಿ ಚನ್ಮಯ ಸೂಪರ್ ಕಣಪ್ಪಾ...

ಈ ಚಳಿಯ ಮುಂಜಾವಿನಲಿ ಇಂತಹ ಕವಿತೆ ಕಟ್ಟಿಕೊಟ್ಟ ನಿನಗೆ ಶರಣು.

ಅಂದ ಹಾಗೆ, ಈಗ ನನ್ನ ಪಾಡೂ:
"ಎಬ್ಬಿಸಿದೆ ಎನ್ನಾ ನಿನ ಶೀತ" ಹಹ್ಹಹಾ..

ಚಿನ್ಮಯ ಭಟ್ said...

ಚೌಟರೇ,
ಸ್ಪಷ್ಟವಾದ ಅನಿಸಿಕೆಗಳನ್ನು ಹೇಳಿದ್ದಕ್ಕೆ " ಮೊದಲು ವಂದಿಪೆ ನಿಮಗೆ...".....

ಖಂಡಿತ ಕಾಲಕ್ಕೆ ತಕ್ಕ ಹಾಗೆ ಬರಹದಲ್ಲಿ ಬದಲಾವಣೆಗಳಿರಲೇ ಬೇಕು...
ಆದರೆ ಇದೊಂದು ಪ್ರಯೋಗ ಅಷ್ಟೆ..
ಕನ್ನಡದಲ್ಲಿ ಸಧ್ಯ ನಾನು ಬ್ಲಾಗು,ಅಂರ್ಜಾಲ ಪತ್ರಿಕೆಗಳಲ್ಲಿ ಓದುತ್ತಿರುವಂತೆ ಹೊಸ ಹೊಸ ಶಬ್ಧಗಳ ಪ್ರಯೋಗ ಸಾಕಷ್ಟು ನಡೆಯುತ್ತಿಲ್ಲವೇನೋ ಅನಿಸಿತು...
ನಮ್ಮ ಹಲವಾರು ಬರಹಗಳು ಅರ್ಜಂಟಿನ ಓದುಗರನ್ನು ಗಮನದಲ್ಲಿಟ್ಟುಕೊಂಡೋ ಅಥವಾ ಗಹನವಾದ ಚಿಂತನೆಗಳಿಲ್ಲದೆಯೋ ಶಬ್ಧಗಳಲ್ಲಿ ಸೊರಗುತ್ತಿವೆಯೇನೋ ಅನಿಸಿತು,ಹಂಗಂತ ಭಾವಕ್ಕೇನು ಕೊರತೆಯಿಲ್ಲ..

ಹೊಸ ಹೊಸ ಶಬ್ಧಗಳು,
ಮರೆತು ಹೋದ ಶಬ್ಧಗಳು ಕಣ್ಣಿಗೆ ಕಂಡರೆ ಅದೇನೋ ಒಂದು ಛಂದ ಅಲ್ಲವೇ..
ಬಹುಷಃ ಇವು ಭಾಷೆಯನ್ನು ಬೆಳೆಸಲೂ ಸಹಕಾರಿಯಾಗಬಹುದು...
ಹಾಗಾಗಿ ಒಂದಿಷ್ಟು ಜಾಸ್ತಿ ಬಳಕೆಯಲ್ಲಿಲ್ಲದ ಶಬ್ಧಗಳನ್ನು ಬಳಸುವ ಯತ್ನ...
ಹಂಗಂತಾ ಅದನ್ನು ಬಲವಂತದಿಂದ ತುರುಕುವುದೂ ಸಹ ನೀವು ಹೇಳಿದಂತೆ ತಪ್ಪೆನಿಸುತ್ತದೆ..ಆದರೆ ಮುಂದೊಂದು ದಿನ "ಇದೂ ಕನ್ನಡದ ಶಬ್ಧವೇ?" ಎಂದೆಣೆಸುವ ಸಮಯ ಬರಬಾರದಲ್ಲವೇ??? ಹಾಗಾಗಿ ಒಂದು ಹುಚ್ಚು ಪ್ರಯತ್ನ ಅಷ್ಟೆ..ನನ್ನ ಅನಿಸಿಕೆಯೇ ತಪ್ಪಿರಬಹುದು ಅಥವಾ ಅದನ್ನು ನಿರೂಪಿಸಿದ ರೀತಿಯೂ ತಪ್ಪಿರಬಹುದು...ಗೊತ್ತಿಲ್ಲ..ನೀವೇ ಹೇಳಬೇಕು...

ಹಾಂ ನಿಮ್ಮ ಮಾತೂ ನಿಜ,
ಆದರೆ ಇವೆನ್ನೆಲ್ಲಾ ಗಮನದಲ್ಲಿಟ್ಟುಕೊಂಡು,
"ಬಳಸಲೇಬೇಕಾದ" ಸಂದರ್ಭದ ಬದಲು,
"ಬಳಸಬಹುದು" ಎನ್ನುವ ಕಡೆಯಲ್ಲಿ ಆ ಶಬ್ದಗಳನ್ನು ಬಳಸುವ ಯತ್ನ..

ಈ ನಿಟ್ಟಿನಲ್ಲಿ ಎಷ್ಟು ಯಶಸ್ವಿಯಾದೆನೋ ನಾ ಕಾಣೆ....
ನಿಮ್ಮೆಲ್ಲರ ಸಲಹೆ,ಮಾರ್ಗರ್ಶನಗಳಿದ್ದರೆ ಇನ್ನಷ್ಟು ಬಲ ನನಗೆ..
ಅದು ಖಂಡಿತ ಸಿಗುವುದೆಂಬ ಭರವಸೆಯಲ್ಲಿದ್ದೇನೆ...
ಬರ್ತಾ ಇರಿ..ನನ್ನನ್ನು ತಿದ್ದುತ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ರಾಘವ ಅವ್ರು,
ಹಮ್ ಸ್ವಾಗತ ಗುರುಗಳೇ ನಮ್ಮ ಮನೆಗೆ...
ಓದಿದ್ದೆ ನಿಮ್ಮ ರಗಲೆಗಳ ಬಗ್ಗೆ ಬ್ಲಾಗಿನಲ್ಲಿ ಕಮೆಂಟಿನಲ್ಲೂ ಹಂಗೆ ಇದೆ...
ಧನ್ಯವಾದ
ಧನ್ಯವಾದ
ಧನ್ಯವಾದ...
ನಿಮ್ಮ ತರಲೆಭರಿತ ಪ್ರೋತ್ಸಾಹ ಹಿಂಗೇ ಸಾಗಲಿ...
ಯರ್ರಾಬಿರ್ರಿ ಖುಷಿಯಾಯ್ತು...
ಬರ್ತಿರಿ...

ನಮಸ್ತೆ :)

ಚಿನ್ಮಯ ಭಟ್ said...

ಬದರಿ ಸರ್....
ಚಳಿಯ ಮುಂಜಾವು..ಸುಂದರ ಶಬ್ಧಗಳು ಅಲ್ಲೂ ಕೂಡಾ..
ಹಮ್ ಕವನಗಳ ಸೂಪರ್ ಹಿಟ್ ಸರಣಿಕೊಡುತ್ತಿರುವವರು ನೀವು ...
ನಿಮ್ಮನ್ನು ನೋಡಿ ಅಲ್ಪ ಸ್ವಲ್ಪ ಕಲಿತಿದ್ದೇನೆ ಅಷ್ಟೆ...
ಧನ್ಯವಾದ ಸಾರ್..
ಬರ್ತಾ ಇರಿ..
ಸಂತಸವಾಯ್ತು.. :)
ನಮಸ್ತೆ :)

ಸತೀಶ್ ನಾಯ್ಕ್ said...

ಚಳಿಯನ್ನ ಗೆಳತಿಗೆ ಹೊಲ್ಸೀದ್ದೀರಲ್ರೀ..

ಬಹಳ ಗಟ್ಟಿ ನಿಮ್ಮ್ ದಿಲ್ಲು.. :) :)

ಯಾಕಂದ್ರೆ ಜಾಸ್ತಿ ಶೀತ ಆದರೂ ಕಷ್ಟ.. ಉಷ್ಣ ಆದರೂ ಕಷ್ಟ.. :D :D

ಪದ್ಯ ಓದಲು ಕೂತರೆ ಮಧ್ಯ ಮಧ್ಯ ಪಡೆ ಪಡೆ ಬ್ರೇಕ್ ಹಾಕಿ.. ಅದರರ್ಥ ಏನು ಇದರರ್ಥ ಏನು ಅಂತ ತಿರುವು ಮುರುವುಗಳನ್ನ ತಗೊಂಡದ್ದು ಉಪಯೋಗವೇ ಆಯ್ತು..

ಒಂದಷ್ಟು ಹೊಸ ಕನ್ನಡ ನುಡಿಗಳ ಕಂಡ ಭಾಗ್ಯ ಸಿಕ್ತು..

ಅವುಗಳ ಅರ್ಥವನ್ನ ನೀವು ಹಾಕದೆ ಹೋಗಿದ್ದಿದ್ರೆ.. ಕವನ ನಮ್ಮ ತಲೆಗೆ ಕಂಬಳಿ ಹುಳು ಆಗೋ ಎಲ್ಲಾ ಲಕ್ಷಣಗಳೂ ಇತ್ತು ಅನ್ನಿ.. ;) ;)

ಕವನ ಬಹಳ ಚೆನ್ನಾಗಿದೆ.. ಚಳಿಗಾಲಕ್ಕೊಂದು ಸಕಾಲ ಕವನ.. :) :)

very nice..

ಸತೀಶ್ ನಾಯ್ಕ್ said...

ಪಡೆ ಪಡೆ ಅಲ್ಲ ಅದು ಪದೇ ಪದೇ.. ಅಯ್ಯೋ ನಮ್ ಕೈ & ಕಣ್ಣು ಇನ್ನೂ ಅದ್ಯಾವಾಗ ಸರಿ ಹೋಗತ್ತೋ..?? :( :(

ಚಿನ್ಮಯ ಭಟ್ said...

ಸತೀಶ ನಾಯ್ಕರೇ ...
ಸ್ವಾಗತ ನಮ್ಮನೆಗೆ ...
ಈ ವಯಸ್ಸಿನಲ್ಲಿ ಹುಡುಗರಿಗೆ ಲಗಾಮು(ಬ್ರೇಕು ಹೊಸಾದಲ್ವಾ???) ತುಂಬಾ ಮುಖ್ಯ ಅಂತೆ..
ಅದನ್ನು ಒಂದು ಸಲ ಉಪಯೋಗಿಸಿಬಿಟ್ಟಿರಿ ಹಂಗಂದ್ರೆ...ಇರ್ಲಿ ..
ಖುಷಿಯಾಯ್ತು ಗುರುವೇ ಬಂದಿದ್ದು..
ನಿಮ್ಮ ಬ್ಲಾಗಿನ ಲೇಖನಗಳನ್ನು ಓದಿದ್ದೆ..
ನಿಮ್ಮ ಮಾತಿನಲ್ಲಿ ಅದೇನೋ ಒಂದು ಆಕರ್ಷಕ ರೀತಿಯಿದೆ...
ಅದು ನನಗೆ ಬಹಳ ಇಷ್ಟ..
ಅದೇ ತರಹವೇ ಮುಕ್ತವಾಗಿ ಇಲ್ಲಿ ಅನಿಸಿಕೆಯನ್ನು ಹೇಳಿದ್ದೀರಿ..
ತುಂಬಾ ಸಂತೋಷ...ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ...
ಬಹಳ ಖುಷಿಯಾಯ್ತು... ಬರುತ್ತಿರಿ :)

(ಹಂಗೆ ಸುಮ್ನೆ: ಕೈ-ಕಣ್ಣು ..ಹಮ್.ಸರಿನೇ ಇದೆ ಅಂದ್ಕೊಂಡಿದೀನಿ..ಯಾವ್ದಕ್ಕೂ ಒಂದ್ಸಲ ಯಾವ್ದಾರು ಒಂದೊಳ್ಳೇ ಹುಡ್ಗೀರ್ ಹತ್ರಾ ಪ್ರೀಕ್ಷೆ ಮಾಡ್ಸಿಪಾ ಹಾ ಹಾ..)
ನಮಸ್ತೆ...

shivu.k said...

ಚಿನ್ಮಯ್,
ಮೊದಲ ಸಲ ಓದಿದಾಗ ಕೆಲವು ಪದಗಳ ಅರ್ಥ ಗೊತ್ತಾಗಲಿಲ್ಲ. ಕೆಳಗೆ ಕೊಟ್ಟ ಅರ್ಥ ಓದಿಕೊಂಡು ಓದಿದಾಗ ಮಾತ್ರ ಅರ್ಥವಾಯ್ತು. ಚಳಿಯನ್ನು ಮತ್ತು ಅದರ ಅನುಭವವನ್ನು ಚೆನ್ನಾಗಿ ಬರೆದಿದ್ದೀರಿ..ಚಳಿಯೆಂದರೆ ನನಗೆ ತುಂಬಾ ಇಷ್ಟ ಏಕೆಂದರೆ ಚೆನ್ನಾಗಿ ಫೋಟೊಗ್ರಫಿ ಮಾಡಬಹುದು ಅಂತ ಆದ್ರೆ ನಿಮಗೆ ಚಳಿ ಅಂದ್ರೆ ಕಷ್ಟ ಒದ್ದು ಮಲಗುವ ಆಸೆ...

ಚಿನ್ಮಯ ಭಟ್ said...

ಶಿವು ಸರ್,
ಚಳಿಗಾಲ ನಿಜವಾಗಿಯೂ ಸುಂದರವೇ..ಆದರೆ ಸಾವು ಸೋಂಬೇರಿಗಳು ನೋಡಿ...ಬೆಳಿಗ್ಗೆ ಏಳಲು ಆಲಸ್ಯವಷ್ಟೇ..
ಮುಂಜಾನೆಯ ಆ ಇಬ್ಬನಿಯ,ಸೂರ್ಯನ ಕಿರಣಗಳು ಬಹುಷಃ ಸೃಜನಾತ್ಮಕ ಚಿಂತನೆಗಳಿರುವ ಎಲ್ಲಾ ಕಲೆಗಳಿಗೂ ಉತ್ಸಾಹದಾಯಕವೇನೋ....
ಧನ್ಯವಾದಗಳು ಸರ್ ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗೆ :)
ಬರುತ್ತಿರಿ..
ನಮಸ್ತೆ...

ಜಲನಯನ said...

ತುಂಬಾ ಚನ್ನಾಗಿದೆ ಕವನ... ಪದ ಬಳಕೆ ಬಹಳ ಬಹಳ ಇಷ್ಟ ಆಯ್ತು...ಹೊಸ ಪದ ನನಗೆ ಕೆಲವಂತೂ ಗೊತ್ತೇ ಇಲ್ಲ... ಚಿನ್ಮಯ್ ಇವನ್ನು ಪದಾರ್ಥ ಚಿಂತಾಮಣಿಯಲ್ಲಿ ಹಂಚಿಕೊಳ್ಳಿ ಪ್ಲೀಸ್...

ಚಿನ್ಮಯ ಭಟ್ said...

ಆಜಾದ್ ಸರ್..
ಧನ್ಯವಾದ "ಸಾ" ನಿಮ್ಮ ಪ್ರೋತ್ಸಾಹಕ್ಕೆ ...
ಹಾಂ ಖಂಡಿತ ಇದನ್ನು ಹಂಚಿಕೊಳ್ಳುತ್ತೇನೆ ಆದರೆ ಸಧ್ಯ ಪರೀಕ್ಷೆ ನೆಡೆಯುತ್ತಿದೆ..ಹಾಗಾಗಿ ಚೂರು ವಿರಾಮ ಅಷ್ಟೇ..
ಖುಷಿಯಾಯ್ತು "ಸಾ",,
ಬರ್ತಾ ಇರಿ..
ನಮಸ್ತೆ...

Ashok.V.Shetty, Kodlady said...

ಹಾಯ್ ಚಿನ್ಮಯ್.....

ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ.....ಅದು ಹೇಗೆ ಇಷ್ಟೊಂದು ಸುಂದರವಾದ ಬ್ಲಾಗ್ ನನ್ನ ಕಣ್ಣಿಂದ ತಪ್ಪಿಸಿ ಉಳಿದುಕೊಂಡು ಬಿಡ್ತು ಅನ್ನೋದೇ ಗೊತ್ತಾಗ್ತಾ ಇಲ್ಲ.....ಕನ್ನಡಕದ ನಂಬರ್ ಬದಲಾಯಿಸೋ ಕಾಲ ಬಂತು ಅನ್ಸುತ್ತೆ.......ನಿಮ್ಮ ಬ್ಲಾಗ್ ಹೊಕ್ಕಿದ್ದು ನೀವು ಬೇರೆಯವರ ಬ್ಲಾಗ್ ಗಳಲ್ಲಿ ಪ್ರತಿಕ್ರೀಯಿಸಿದ್ದನ್ನು ನೋಡಿ.....ನಿಮ್ಮ ಸುಂದರವಾದ ಪ್ರತಿಕ್ರೀಯೆಗಳೇ ನನ್ನನ್ನು ಇಲ್ಲಿಗೆ ಕರೆತಂದದ್ದು....ಸುಂದರ ತಾಣವನ್ನು ನಿರ್ಮಿಸಿದ್ದೀರಿ.....ನಿಜವಾಗಿಯೂ ಇಷ್ಟ ಆಯಿತು....ನಿಮ್ಮಹಳೆಯ ಪೋಸ್ಟ್ ಗಳನ್ನೂ ನಿಧಾನವಾಗಿ ಓದುತಿದ್ದೇನೆ....

ಯಾಕೋ ಮುಂಬಯಿಯಲ್ಲಿ ಈ ಬಾರಿ ಚಳಿ ಅಷ್ಟೇನೂ ಇಲ್ಲದಿದ್ದರೂ ನಿಮ್ಮ ಕವನ ಚಳಿಯ ಅನುಭವವನ್ನು ಕೊಟ್ಟಿತು

ಈ ಕವನದಲ್ಲಿ ನೀವು ಬಳಸಿದ ಪದಗಳನ್ನು ನೋಡಿ ಬೆರಗಾದೆ...ನೀವು ಪದಗಳ ಅರ್ಥ ಜೊತೆಗೆ ಕೊಡದೆ ಇದ್ದಲ್ಲಿ ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಆಗುತಿತ್ತು.....ಸುಂದರ ಕವನ.....ಇಷ್ಟ ಆಯಿತು.......ಮುಂದುವರಿಸಿ......

ಚಿನ್ಮಯ ಭಟ್ said...

ಅಶೋಕ್ ಜೀ..
ಸ್ವಾಗತ ..ಸುಸ್ವಾಗತ...ಶುಭಸ್ವಾಗತ..
ಧನ್ಯವಾದಗಳು ಮೊದಲಿಗೆ ನಮ್ಮನೆಗೆ ಬಂದಿದ್ದಕ್ಕೆ...
ನಂಗಂತೂ ತುಂಬಾ ಖುಷಿಯಾಯ್ತು...
ಇನ್ನು ಬ್ಲಾಗು ಹೆಂಗೆ ತಪ್ಪಿಸಿಕೊಂಡಿತೋ ನಂಗೂ ಗೊತ್ತಿಲ್ಲ...ಅದೇನು ಅಂದ್ರೆ ನಮ್ದು ಸೀಸನಲ್ ಬ್ಲಾಗು...ಪರೀಕ್ಷೆ,ರಜೆ ಎಲ್ಲಾ ಮುಗಿದು..ಕ್ಲಾಸಿಗೆ ಚಕ್ಕರ್ ಹೊಡೆದು ಸುಮ್ಮನೆ ಕೂತಾಗ ಮಾಡುವ ಕೆಲಸವಿದು...ಹಾಗಾಗಿ ಜಾಸ್ತಿ ತೆರೆದುಕೊಳ್ಳಲಾಗುತ್ತಿಲ್ಲ...
ಆದರೂ ನೀವು ಹುಡುಕಿಕೊಂಡು ಬಂದೆ ಎಂದಿದ್ದು ನನಗಂತೂ ಖುಷಿಕೊಟ್ಟಿತು..ಧನ್ಯನಾದೆ...
ನನ್ನಿಂದ ಕಮೆಂಟುಗಳುಬರುವಂತೆ ಬರೆದ ಎಲ್ಲ ಬ್ಲಾಗಿಗರಿಗೂ ಧನ್ಯವಾದ :)..
ಮುಂಬಯಿಯಲ್ಲಿ ಛಳಿ ಅಷ್ಟೇನೋ ಗೊತ್ತಿಲ್ಲ ಸಾರ್(ಅಲ್ಲಿಯ ದೃಶ್ಯಗಳು ಮೈಛಳಿ ಬಿಡಿಸುತ್ತವೆಯೇನೋ ಹಾ ಹಾ..) ..ಪೂನಾದಲ್ಲಂತೂ ಮಸ್ತ್ ಛಳಿ...ಒಮ್ಮೆ ಬಂದಿದ್ದೆ ಆ ಕಡೆ..

ಇನ್ನು ಕವನದ ವಿಷಯಕ್ಕೆ ಬರುವುದಾದರೆ...ಗೊತ್ತಿಲ್ಲ ಅದೇನೋ ಒಂದು ಮೂಡಿನಲ್ಲಿ ಬರೆದದ್ದು ಅಷ್ಟೆ...
ಧನ್ಯವಾದಗಳು ಸಾರ್ ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕಾಗಿ..ಬರ್ತಾ ಇರಿ....
ಇದೇ ಥರಹ ನಾನು ಗೀಚಿದ್ದನ್ನು ನೋಡಿ,ಅಕ್ಕರೆಯಿಂದ ಅನಿಸಿಕೆ ಹೇಳಿದ ಎಲ್ಲರಿಗೂ,ಹಿಂಗಲ್ಲ ಹಿಂಗೆ ಎಂದು ತಿದ್ದಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ...
ಧನ್ಯವಾದಗಳು..
ನಮಸ್ತೆ...

Unknown said...

Hi anna mast ide kavana .tumba ista aytu nimma padagala balakeya shaili
ellinda sigatte nimage astondu kannada padagalu
artaisikondu odalu nanage bekaytu halavu nimishagalu
aadaru nanage sikkitu kela hosa padagalu
adakgi nimage dhanyavadagalu......