Tuesday, January 8, 2013

ಪ್ರಳ(ಣ)ಯ ಗೀತೆ


ಅಂತೂ ಇಂತೂ ಒಂದುವರೆ ತಿಂಗಳ ಬಳಿಕ ಏಳನೇ ಸೆಮಿಸ್ಟರ್ ಪರೀಕ್ಷೆಗೆ ತೆರೆ ಬಿತ್ತು..ಇನ್ನೊಂದೇ ಸೆಮಿಸ್ಟರು ಉಳಿದಿರುವುದು...ಪರೀಕ್ಷೆ ಮುಗಿಯಿತಲ್ಲಾ ಇನ್ನೇನು ಮಾಡಣಾ ಅಂದ್ಕೊಂಡು ಪಟ್ಟಿ ಹಾಳೆ ತೆಗೆದೆ...ಪ್ರಳಯ ಪ್ರಳಯ ಅಂತಾ ಎಲ್ರೂ ಮಾತಾಡ್ತಿರ್ಬೇಕಾದ್ರೆ ನಾನೂ ಅದ್ರ ಬಗ್ಗೆ ಏನಾದ್ರೂ ಬರೀಬೇಕು ಅನ್ಸಿ ಒಂದಿಷ್ಟು ಶಬ್ಧಗಳನ್ನಾ ಗುಡ್ಡೆ ಹಾಕಿ ಇಟ್ಟಿದ್ದು ಕಣ್ಣಿಗೆ ಬಿತ್ತು..ಸರಿ ಇನ್ನೇನು ಬರಿಯಣಾ ಅಂದ್ಕಂಡು ಗೀಚಲು ಕೂತೆ..ವಯಸ್ಸಿನ ಹುಡುಗನಿಗೆ  ಅವನ  ಹುಡುಗಿ ಮುತ್ತು ಕೊಟ್ಟಾಗ ಏನನ್ಸತ್ತೆ ಅನ್ನೊ ಕನಸು ಕಾಣ್ತಾ ಕೂತೆ...ಒಂದಿಷ್ಟು ಏನೇನೋ ತಲೆಗೆ ಹೊಳಿತು..ಅದನ್ನೆ ನಿಮ್ಮ ಮುಂದಿಟ್ಟಿದ್ದೇನೆ...ನೋಡಿ ....ಅಕ್ಕರೆಯ ಅನಿಸಿಕೆಯ ಜೊತೆ ತಪ್ಪು-ಒಪ್ಪನ್ನಾ ತಿಳ್ಸಿ, ನನ್ನನ್ನಾ ಬೆಳಸ್ತೀರಾ ಅಲ್ವಾ???
ಇಲ್ಲಿದೆ ನೋಡಿ  ಪ್ರಳಯ/ಪ್ರಣಯ ಗೀತೆಯ ಸಾಲುಗಳು... 


ಪ್ರಳಯವಾಯ್ತು ಗೆಣತಿ ನನ್ನೆದೆಯೊಳಗೆ,
ನೀ ಮುತ್ತಿಟ್ಟಾ ಅರೆಚಣದೊಳಗೆ…..

ಮುಂಗುರುಳ ಕಚಕುಳಿಯ ಕಂಪನವು ಕೊರಳಲ್ಲಿ,
ಅಪ್ಪುಗೆಯ ಬೆವರ್ಮಳೆಯ ಸಿಂಚನವು ತೋಳಲ್ಲಿ.
ನಟ್ಟಿರುಳ ಬಳುವಳಿಯ ಕುಂಚನವು ಬೆರಳಲ್ಲಿ,
ಹೆಂಗರುಳ ಕಳಕಳಿಯ ಬಂಧನವು ನೆರಳಲ್ಲಿ.

ಜುಮುಕಿಯಾ ವಜ್ಜೆಯಲೆ ,ಕುಳಿಯೀಗ ಭುಜದಲ್ಲಿ
ಬಿಸಿಯುಸಿರ ಸದ್ದಿನಾ ಸುಳಿಯೀಗ ಕಿವಿಯಲ್ಲಿ.
ಅಂದಲದ ಕನಸಿನಾ ಹೊಳೆಯೀಗ ಮನದಲ್ಲಿ,
ಗೊಂದಲದ ಬಿರುಗಾಳಿ ನೀ ಕೊಟ್ಟ ಮುತ್ತಲ್ಲಿ

ಸವಿಜೊಲ್ಲ ಹನಿಯೊಂದು ಮಿನುಗಿರಲು ಗಡ್ಡದಲಿ,
ರವಿಮೆಲ್ಲನೆ ನಾಚಿ  ಅಡಗಿಹನು ಗುಡ್ಡದಲಿ,
ಬೆರೆಯಿತು ಎನ್ನುಸಿರು ನಿನ್ನಯಾ ಹೆಸರಲ್ಲಿ,
ಬರೆದಿರಲು ಈ ಸಾಲ ನಿನ್ನೆಯಾ ನೆನಪಲ್ಲಿ

ಪ್ರಳಯವಾಯ್ತು ಗೆಣತಿ ನನ್ನೆದೆಯೊಳಗೆ,
ನೀ ಮುತ್ತಿಟ್ಟಾ ಅರೆಚಣದೊಳಗೆ.....

-ಚಿನ್ಮಯ
(ಶಬ್ಧಾರ್ಥ(ನನಗೆ ತಿಳಿದಂತೆ):ಗೆಣತಿ=ಗೆಳತಿ,ಅರೆಚಣ=ಅರೆಕ್ಷಣ,ಮುಂಗುರುಳು=ಮುಂದಲೆಯ ಕೂದಲು,ನಟ್ಟಿರುಳು=ಮಧ್ಯರಾತ್ರಿ,ಅಂದಲ=ಪಲ್ಲಕ್ಕಿ...
ಜೊತೆಗೆ ನಮ್ಮ ಕಡೆ "ವಜ್ಜೆ" ಎಂದರೆ ಭಾರಕ್ಕೆ ಬಳಸುವ ಪದ..
ಮತ್ತೆ ಬೆವರಿನ ಮಳೆ ಎನ್ನುವ ಬದಲು ಬೆವರ್ಮಳೆ ಎಂದು ಬಳಸಿದ್ದೇನೆ...ಅದು ತಪ್ಪಾಗಿದ್ದರೆ ತಿಳಿಸಿ ದಯವಿಟ್ಟು)
  
ಹಾಂ ಅದೇನೋ ಹೇಳ್ತಾರಲ್ಲಾ ಕಲ್ಪನೆ ಅದು ಇದು ಅಂತಾ ಅದನ್ನೇ ಮಾಡ್ಕೊಂಡು ಬರೆದ ಸಾಲುಗಳಿವು..ಆ ಥರದ ಹುಡುಗಿ ಇನ್ನೂ ತಾನಾಗೇ  ಸಿಕ್ಕಿಲ್ಲ,ನಾನಾಗೇ ಹುಡ್ಕಕೂ ಹೋಗಿಲ್ಲಾ..ಬರೆದಿದ್ದೆಲ್ಲಾ ಕಾಲ್ಪನಿಕ..ನನ್ನ ನಂಬಿ ಪ್ಲೀಸ್ ಪ್ಲೀಸ್...
ಅಂದದ ಪ್ರತಿಕ್ರಿಯೆಗಾಗಿ ಕಾಯ್ತಿರ್ತೀನಿ...ಬರಿತೀರಲ್ವಾ?
44 comments:

ಸತೀಶ್ ನಾಯ್ಕ್ said...

ಒಳ್ಳೆಯ ಲಯ ಮತ್ತು ಉತ್ತಮ ಪ್ರಾಸ ಗಳಿಂದ ಕೂಡಿದ ಶಾಸ್ತ್ರೋಕ್ತ ಕವನ ಚಿನ್ಮಯ್.

ಓದ್ತಾ ಓದ್ತಾ ನಿಜಕ್ಕೂ ಉಲ್ಲಾಸವಾಯ್ತು. ಬಹಳ ಒಳ್ಳೆಯ ಪ್ರೇಮ ಕವನ.

ಒಂದು ಅನುಮಾನ ಇದು ಭಾವಿಸಿ ಬರೆದದ್ದೋ ಇಲ್ಲ ಅನುಭವಿಸಿ ಬರೆದದ್ದೋ..?? ;) ;)

ಪ್ರತಿ ಎಗ್ಸಾಮ್ ಮುಗಿದ ಮಾರನೆ ದಿನಕ್ಕೆ ಸರಿಯಾಗಿ ಇಂಥ ಒಂದು ಕವನ ಹಾಕ್ತೀರಲ್ಲ ನಿಮ್ಮ ರಹಸ್ಯಗಳೇನು ಅನ್ನೋದೇ ಅರ್ಥ ಆಗ್ತಿಲ್ಲ.. ;) ;)

ಒಳ್ಳೆಯ ಕವನ ಇಷ್ಟ ಆಯಿತು.

Swarna said...

ಝುಮುಕಿಯ ವಜ್ಜಕ್ಕೆ, ಭುಜದಲ್ಲಿ ಕುಳಿ ..ಸೂಪರ್
ಕವನ ಓದಿದಮೇಲೆ ನಿಮ್ಮನ್ನ ನಂಬೋದು ಕಷ್ಟ ಕಷ್ಟ :)

ಗಿರೀಶ್.ಎಸ್ said...

ಕಳ್ಳ ಯಾವತ್ತೂ ಕದ್ದಿದ್ದಿನಿ ಅಂತ ಒಪ್ಪಿಕೊಳ್ಳೋದು ಕಷ್ಟ..ನಿಮ್ಮದು ಅದೇ ಸ್ಥಿತಿ... ನೀವಾಗೆ ಹೇಳಿ ಯಾರು ಆ ಹುಡುಗಿ ಅಂತ... ಒಟ್ಟಿನಲ್ಲಿ ನಿಮ್ಮ ಕವಿತೆ ಚೆನ್ನಾಗಿದೆ....

ಮನಸು said...

kalpane anta heLidre nambokke aguttaa... haha en samachara?? chennagide oLLe pada prayoga praNayada praLayakke haha

Subrahmanya said...

ಇಂತಹ ಪ್ರಳಯ ಆದ್ರೆ ಒಳ್ಳೇದೇ ಅಲ್ವಾ? ನನಗೇಕೋ ಹಾಗೆನಿಸಿತು ;) ಕುಂಚನ ಅಂದ್ರೆ ಏನು? ಪ್ರಾಸಕ್ಕೆ ತೊಂದರೆಯಿಲ್ಲದಂತೆ ಭಾವಕ್ಕೆ ಚ್ಯುತಿ ಮಾಡದೆ ಬರೆದಿದ್ದೀಯಾ, ಖುಷಿ ಆಯ್ತು :)

vaishu said...

Chinam nivu nambi andmele doubt bartide...prasabaddavaada kavana,chennagide.examgalu nimna ontara hosa tara inspire madtave,interesting...exams classnalle kuthu baritiro entha?:-)

MPPRUTHVIRAJ KASHYAP said...

Thumba channagide bhatre bhavanegala bharate,nimma shabdhagala prayoga ellavu hidsthu aadru vayakthikavagi nanndondu abhipraya.
Nimma kavanagala moolaka hosa padagalu janarige tiliyali kannadakke neevu maduvanthaha sanna seve antha nimma yochane irabahudu adakke nanna salam.Yavaga obba oduga bandu ondu kavyavanna odthano avaga aa kavyadinda nimma adbhutha kalpaneya lokakke avanu bandu adarinda aatha kela gantegala relief sikkidahage aguthhe.Aa nittinalli yavaga ondu kavanada flow alli aatha irthano aaga aathanige nimma hosa shabdagalu "Interrupt" madi innondu "ISR" :) call mado reethi maduthhe avaga aa kavana kodo kick miss agabahudalva,matte ade moodinalli aatha kaavyavanna odthane anno gurantee illa alva.So nodi yochisi idu nanna swantha abhipraya aste. Kavanavanna simple words inda dodda arthadalli poorthi bhavanegalannu thumbidaga odugana mana muttabahudalva? nodi
But nimma kalpane chanagide matte nanu nimage 1 varshadinda kelikondu bandanthaha prashnene mathhond sala kelthidini.
"idu bari kalpanena? Athva nimma bhujadallu yavudadru jumukiya guli biddidya"? :)

ಚಿನ್ಮಯ ಭಟ್ said...

ಸತೀಶ್,
ಧನ್ಯವಾದ ಮೊದಲ ಅನಿಸಿಕೆಗೆ...
ಹಮ್... ಕವನದ ಶಾಸ್ತ್ರ ಗೊತ್ತಿಲ್ಲದವ ನಾನು...ಏನೋ ಬರ್ದಿದ್ದೇನೆ ಅಷ್ಟೇ..ವಂದನೆ ಶಾಸ್ತ್ರೋಕ್ತ ಎಂದಿದ್ದಕ್ಕೆ :)...ಖುಷಿಯಾಯ್ತು ನಿಮ್ಮ ಅನಿಸಿಕೆ ಓದಿ :)...
ಮತ್ತೆ ಅನುಮಾನವೇ ಇಲ್ಲ ಕಣ್ರೀ..ಇದು ಭಾವಿಸಿ ಬರೆದದ್ದೆ ಇದು!!!!!
ಹಾಂ ಅದು ಪರೀಕ್ಷೆಯ ಹೊತ್ತಲ್ಲಿ ಓದುವುದೊಂದು ಬಿಟ್ಟು ಉಳಿದೆಲ್ಲಾ ಕೆಲಸ ಇಷ್ಟವಾಗತ್ತೆ ನೋಡಿ..ಅದರ ಪರಿಣಾಮ ಇದು :)D...
ವಂದನೆಗಳು ಸತೀಶ್ ಇಷ್ಟಪಟ್ಟಿದ್ದಕ್ಕೆ...
ಅಂದದ ಅನಿಸಿಕೆಯಿಂದ ನನ್ನನ್ನುಹುರಿದುಂಬಿಸಿದ್ದಕ್ಕೆ...
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ಸ್ವರ್ಣಾ,
ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ :)..
ಅದು ಕುಳಿ ಅನ್ನುವ ಪದವನ್ನಾ ಬಳಸಬೇಕು ಅನ್ನೋದು ತುಂಬಾ ದಿನದಿಂದ ಇತ್ತು...ಜೊತೆಗೆ ಬರೆಯುತ್ತಾ ಝುಮುಕಿ ಎನ್ನುವ ಪದವೂ ನೆನಪಾಯ್ತು..ಮೊದಲಿಗೆ ಝುಮುಕಿಯಾ ಸದ್ದಿಗೆ ಎಂದು ಬಳಸುವಾ ಎಂದುಕೊಂಡಿದ್ದೆ,ಆಮೇಲೇಕೋ ಅದರ ಭಾರ ಚಿಕ್ಕದಾದರೂ ಆ ಜವಾಬ್ದಾರಿ ದೊಡ್ಡದು,ಆ ಕ್ಷಣವು ಮಹತ್ವದ್ದು ಎನಿಸಿತು ಹಾಗಾಗಿ ವಜ್ಜೆ ಬಂತು...ಒಟ್ಟಿನಲ್ಲಿ ಆ ಭಾರದಿಂದಲೇ ಭುಜದಲ್ಲಿ ಒಂದು ನೆನಪು ಎನ್ನುವ ಅರ್ಥದಲ್ಲಿ ಅದನ್ನು ಬರೆದೆ...
ಧನ್ಯವಾದ ಮೇಡಮ್.. ನಿಮ್ಮ ಚಂದದ ಅನಿಸಿಕೆಗೆ...
ಬರುತ್ತಿರಿ..ಚಂದದ ಅನಿಸಿಕೆಯಿಂದ ಉತ್ತೇಜನ ನೀಡುತ್ತಿರಿ..:)
ನಮಸ್ತೆ :)

Srikanth Manjunath said...

ಸೆಮಿಸ್ಟರ್ ಗಲಾಟೆಯಲ್ಲಿ ಪ್ರಳಯದಾಟಕ್ಕೆ ಪದಗಳ ಕೊರತೆಯಿಲ್ಲದೆ ಪರೀಕ್ಷೆಯ ಪರಿವೀಕ್ಷಣೆಯಲ್ಲಿ ಪರಿ ಪರಿಯ ಬೇಡಿಕೆಯನ್ನು ಹೊರಗೆ ತಂದ ನಿಮ್ಮ ಔಟಿನಲ್ಲಿ ಪುಟ್ಟದಾಗಿ ಬಂದ ಸಾಲುಗಳು ಸುಂದರ......

ಈಶ್ವರ said...

ಒಳ್ಳೆಯ ಸಾಲುಗಳು. ಸ್ವಲ್ಪ ಮಾತ್ರೆಗಳನ್ನು, ಪ್ರಾಸಗಳನ್ನು ಗಮದಲ್ಲಿಟ್ಟುಕೊಂಡು ಕೃಷಿ ಮಾಡಿ.. ಫಸಲು ಚೆನ್ನಾಗಿರತ್ತೆ, ನೋಡೋಕೂ ಚೆನ್ನಾಗಿರತ್ತೆ.

ಚಿನ್ಮಯ ಭಟ್ said...

ಗಿರೀಶ್..
ಯಪ್ಪಾ...ಆಥರಾ ಏನೂ ಇಲ್ಲ ಗುರುಗಳೇ ಸಧ್ಯಕ್ಕೆ....
ಧನ್ಯವಾದಗಳು ನಿಮ್ಮ ತುಂಟ ಅನಿಸಿಕೆಗೆ...
ಬರ್ತಾ ಇರಿ :)ಕಾಲ್ ಎಳಿತಾ ಇರಿ :)D...
ಬಹಳ ಖುಷಿಯಾಯ್ತು....
ನಮಸ್ತೆ :)

ಚಿನ್ಮಯ ಭಟ್ said...

ಸುಗುಣಾ ಮೇಡಮ್,
ಸಮಾಚಾರ ಏನಿಲ್ಲಪಾ...ಪರೀಕ್ಷೆ ಮುಗೀತು...ಕ್ಯಾಂಪಸ್ ಆಗಿದೆ, ಇನ್ನೊಂದೆ ಸೆಮ್ಮು ಉಳ್ದಿರದು ಅಷ್ಟೇ.. ;)..
ನಂಗೆ ನೀವು ಹೇಳಿದ ಎರಡರ ಅನುಭವನೂ ಇಲ್ಲ..ಏನೋ ಕಲ್ಪನೆಯ ಹುಚ್ಚಿನಲ್ಲಿ ಬರ್ದಿದ್ದು ಅಷ್ಟೇ!!!!!..
ಧನ್ಯವಾದ ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗೆ :)..
ಬರ್ತಾ ಇರಿ...
ನನ್ನನ್ನಾ ಹರಸ್ತಾ ಇರಿ :)...
ನಮಸ್ತೆ :)

Sudeepa ಸುದೀಪ said...

ಚಿನ್ಮಯ್ ಚೆನ್ನಾಗಿದೆ ನಿಮ್ಮ ಕಲ್ಪನೆಯ ಗೆಳತಿಯ ಮುತ್ತಿನ ಸಾಲುಗಳು .... ಪ್ರತಿಬಾರಿ ಹೊಸ ಶಬ್ದಗಳೊಂದಿಗೆ ನಿಮ್ಮ ಪ್ರಯತ್ನ ಶ್ಲಾಘನಿಯ... keep it up... :)

MPPRUTHVIRAJ KASHYAP said...

bhatre ello eno odtidde hange kuvempu avare onderadu saalugalu sikkidavu ivu ninagu pata agabahudu nanna abhiprayavanna spastagolisabahudu nodu
ನಮಗಿಂದಿಗೆ ಬೇಕಾದುದು ಉದ್ಧಾರದ ಆಸಕ್ತಿ ಮತಿವಂತನೆ, ಓ ಮಾನವ, ಕಟಿ ಬಂಧನಗೈ ನಿಲ್ಲು!/
ಯುಗದೊಳ್ಪಿಗೆ ಜಗದೊಳ್ಪಿಗೆ ನಿನ್ನೊಳ್ಪನೆ ನೀಂ ಗೆಲ್ಲು!

ಚಿನ್ಮಯ ಭಟ್ said...

ಸುಬ್ರಹ್ಮಣ್ಯಜೀ,
ಸ್ವಾಗತ ಮತ್ತೊಮ್ಮೆ...
ಹಮ್..ಕುಂಚನ ಅಂದ್ರೆ "ಕುಂಚ"ದಿಂದ ಮಾಡಿದ ಪ್ರಕ್ರಿಯೆ ಅಂತಾ ಅಂದ್ಕೊಂಡಿದೀನಿ...
ಅಲ್ಲಿಗೆ ಚಿತ್ರ ಬಿಡಿಸುವುದು ಅಂತಾ ಆಗತ್ತೆ..
ಆ ಅರ್ಥದಲ್ಲಿ ಬಳಸಿದ್ದು ಕುಂಚನ ಅಂತಾ...
ಸರಿನೋ ತಪ್ಪೋ ಗೊತ್ತಿಲ್ಲ...
ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ಇದೇ ಥರದ ಪ್ರಳಯ ಆದ್ರೆ ನಿಜ್ವಾಗ್ಲೂ ಒಳ್ಳೆದಾ???ಗೊತ್ತಿಲ್ಲಪ್ಪಾ ಅನುಭವಿಕರೇ ಹೇಳ್ಬೇಕು!!!...
ನಿಮ್ಮ ಪ್ರ್ತೀತಿಯ ಅನಿಸಿಕೆಗಳಿಗೆ ನಾನು ಆಭಾರಿ...
ಬರ್ತಾ ಇರಿ :)..
ನಮಸ್ತೆ

ಚಿನ್ಮಯ ಭಟ್ said...

ವೈಶಾಲಿಯವರೆ,
ಹಾ ಹಾ..ಏನ್ರೀ ಬಹಿರಂಗ ಹೇಳಿಕೆಗಳನ್ನೂ ಜನ ನಂಬಲ್ಲಾ ಅಂದ್ರೆ ಕಷ್ಟನಪ್ಪಾ!!!!..ಇರ್ಲಿ ಇರ್ಲಿ ;) :D..
ಧನ್ಯವಾದನ್ರೀ ಚೆನಾಗಿದೆ ಎಂದಿದ್ದಕ್ಕೆ :)..
ಹಮ್..ಪರೀಕ್ಷೆಗಳು ಮತ್ತು ಬರಹಗಳು...
ಗೊತ್ತಿಲ್ಲ..ಎಲ್ಲೋ ಮುಳುಗಿರ್ತೀವಿ....
ಎದ್ದಾಗ ಒಂದ್ಸಲಾ ಕಲ್ಪನಾ ಲೋಕಕ್ಕೆ ಒಂದ್ ಸಣ್ಣ ಟ್ರಿಪ್ಪು ಅಷ್ಟೇ!!!...
ಇನ್ನೆನಿಲ್ಲಾ..
ಹಾಂ ಇನ್ನೂ ಅದೊಂದು ಪ್ರಯೋಗ ಮಾಡಿಲ್ಲ ನೋಡ್ರಿ..ಪರೀಕ್ಷೆ ಪೇಪರಿನಲ್ಲಿ ಸುಳ್-ಸುಳ್ಳು ಕಥೆ ಬರ್ದಿದೀವಿ,ಆದ್ರೆ ಕವನ ಬರ್ದಿಲ್ಲಾ.. ಹಾ ಹಾ....
ಖುಷಿಯಾಯ್ತ್ರೀ..ಬರ್ತಾ ಇರ್ರಿ...
ನಮಸ್ತೆ

ಚಿನ್ಮಯ ಭಟ್ said...

ಶ್ರೀ...
ಅಯ್ಯಪ್ಪಾ ಅದೇನ್ರೀ ಅದು ಉಪೇಂದ್ರ ಡೈಲಾಗ್ ಥರ ಅಲ್ಪವಿರಾಮ,ಪೂರ್ಣವಿರಾಮ ಯಾವ್ದೂ ಇಲ್ದೆ ಓಡ್ತಾ ಇದೆ...ಹಾ ಹಾ..
ಧನ್ಯವಾದ ಶ್ರೀ...
ಪರಿವೀಕ್ಷಣೆ ಪದ ಇಷ್ಟವಾಯ್ತು :)...
ಏನೋ ಗೊತ್ತಿಲ್ಲಾ..ಬರ್ದಿದಿನಿ...
ಅದನ್ನು ಮೆಚ್ಚಿದಕ್ಕಾಗಿ ವಂದನೆಗಳು ಶ್ರೀ..
ಎಂದಿನಂತೆ ಬಂದು ಬೆನ್ನು ತಟ್ಟುತ್ತಿರಿ :)..
ನಮಸ್ತೆ

ಚಿನ್ಮಯ ಭಟ್ said...

ಈಶ್ವರ ಭಟ್ರೇ..
ಸ್ವಾಗತ ಮತ್ತೊಮ್ಮೆ :)..
ನಿಮ್ಮ ಸಲಹೆಗಳು ನನಗೆ ಮಾರ್ಗದರ್ಶಿ...
ವಂದನೆಗಳು ಅಣ್ಣಾ, ನಿಮ್ಮ ಆ ಸಲಹೆಗಳಿಗೆ..
ಇದೇ ಥರ ನನ್ನನ್ನು ತಿದ್ದುತ್ತಿರಿ...
ಹಾಂ ಮಾತ್ರೆಗಳನ್ನು ಗಮನಿಸ್ತೇನೆ ಇನ್ ಮುಂದೆ...
ಬರ್ತಿರಿ..ಫಸಲು ಬಂದ್ರೆ,ಕೊಯ್ಲಿಗೆ ಖಂಡಿತಾ ನಿಮ್ಮನ್ನಾ ಕರಿತೀನಿ...
ದಯವಿಟ್ಟು ಬಂದು ಆಶೀರ್ವದಿಸ್ತೀರಾ ಅಲ್ಲಾ??...
ನಮಸ್ತೆ

ಚಿನ್ಮಯ ಭಟ್ said...

ಸುಮತಿ ಅಕ್ಕಾ,
ಧನ್ಯವಾದಗಳು ...
ಏನೋ ಹೊಸ ಹೊಸ ಶಬ್ಧಗಳನ್ನು ಕಲಿಯುವ ಹುಚ್ಚು ಹಾಗಾಗಿ ಒಂದು ಪ್ರಯತ್ನ ಅಷ್ಟೇ...
ಹಾಂ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಈ ಥರದ ಗೆಳೆಯ/ಗೆಳತಿ ಇದ್ದೇ ಇರ್ತಾರಲ್ವಾ..ನನಗೆ ತಿಳಿದಂಗೆ ಎಲ್ರೂ ಕನಸು ಕಂಡೇ ಕಾಣ್ತಾರೆ..ನಾನು ಬಿದ್ದ ಕನಸನ್ನು ಅಕ್ಷರದಲ್ಲಿ ಗೀಚಿದೆ ಅಷ್ಟೇ..
ಸಂತೋಷ ಆಯ್ತಕ್ಕಾ...
ಬರ್ತಿರಿ...
ನಮಸ್ತೆ :)

ಚಿನ್ಮಯ ಭಟ್ said...

ಪ್ರೀತಿಯ ಪ್ರಥ್ವಿ,
ಧನ್ಯವಾದ ಕಣೋ ನಿನ್ನ ಸಹಕಾರಕ್ಕೆ...
ಪ್ರತಿ ಹೆಜ್ಜೆಯಲ್ಲೂ ಬಲವಾಗಿರುವ ನಿನಗೆ ನಾನು ಋಣಿ...
ಅಹ್ಹೋ ತಾವು ಕುವೆಂಪುಅವರ ಸಾಹಿತ್ಯವನ್ನೂ ಓದಕ್ಕೆ ಶುರು ಮಾಡಿದ್ರಾ??ಒಳ್ಳೆದಾಗ್ಲಿ..
ವಂದನೆಗಳು ಆ ಸಾಲುಗಳನ್ನ ಹಾಕಿ ಈ ಪುಟವನ್ನಾ ಪಾವನಗೊಳಿಸಿದ್ದಕ್ಕೆ..
ನೋಡಣಾ ಏನಾಗತ್ತೆ ಅಂತಾ..
ಬರ್ತಿರು..
ನಮಸ್ತೆ :)

Badarinath Palavalli said...

ಪ್ರಳಯಕ್ಕೂ ಪ್ರಣಯಕ್ಕೂ ತಳುಕು ವಾರೇವ್ಹಾ ಕವಿ!

ನೆಚ್ಚಿಗೆಯಾದ ಪದಗಳು:
ಬೆವರ್ಮಳೆ
ಕುಂಚನ
ಹೆಂಗರುಳ
ವಜ್ಜೆಯಲೆ
ಕುಳಿ
ಅರೆಚಣ

ಹೀಗೆ ಬರೆಯಪ್ಪೀ, ಖುಷೀ ಪಡತೀವೀ...

Ittigecement said...

ಚಿನ್ಮಯ...

ಶಬ್ಧಗಳ ಜೋಡಣೆ... ಮುತ್ತಿನ ಸರದಂತಿದೆ....!
ಅಭಿನಂದನೆಗಳು ಚಂದದ ಕವನಕ್ಕೆ...

ಶ್ರೀವತ್ಸ ಕಂಚೀಮನೆ. said...

ಮುತ್ತಿನ ಮತ್ತು...:)
ಇಷ್ಟವಾಯ್ತು ಭಾವಲಹರಿ...

ಪದ್ಮಾ ಭಟ್ said...

ಚೆನ್ನಾಗಿದ್ದು...

samanvaya bhat said...

cholo iddu brother,,,,

ಚಿನ್ಮಯ ಭಟ್ said...

ಬದರಿ ಸರ್,
ಧನ್ಯವಾದ ಸಾರ್..
ನಿಮ್ಮ ಅಕ್ಕರೆಯ ಪ್ರೋತ್ಸಾಹವೇ ನಮ್ಮಂತಹ ಎಳೆಯರ ಬರಹಗಳಿಗೆ ಬೆನ್ನೆಲುಬು..
ಬರುತ್ತಿರಿ..
ಬಂದು ಹರಸುತ್ತಿರಿ...
ಹಾಂ ಆ ಪ್ರಳಯವು ಪ್ರಣಯ ಹೆಂಗಾಯ್ತೋ ನನಗಂತೂ ಗೊತ್ತಿಲ್ಲ...
ವಯಸ್ಸಿನ ಮಹಿಮೆ ಅಂತೀರಾ??? ಹಾ ಹಾ...
ಖುಷಿಯಾಯ್ತು ಸಾರ್...
ನಮಸ್ತೆ :)...

ಚಿನ್ಮಯ ಭಟ್ said...

ಪ್ರಕಾಶಣ್ಣಾ,
ಮತ್ತೊಮ್ಮೆ ಸ್ವಾಗತ ನಮ್ಮನೆಗೆ :)...
ಧನ್ಯವಾದ ಮುತ್ತಿನಂಥ ಪ್ರತಿಕ್ರಿಯೆಗೆ :)..
ನೀವು ಬರೆಯುವುದು ಒಂದೆರಡು ಶಬ್ಧವಾದರೂ ಅದರಲ್ಲಿನ ಭಾವ ಮಾತ್ರ ಅಪರಿಮಿತ...
ಧನ್ಯವಾದ ಅಣ್ಣಾ...
ತಪ್ಪಾದ್ರೆ ಹೇಳಿ ...ದಯವಿಟ್ಟು ತಿದ್ದಿ ಬೆಳೆಸಿ...
ಸಖತ್ ಖುಷಿಯಾಯ್ತು...
ಬರ್ತಿರಿ...
ನಮಸ್ತೆ ..

ಚಿನ್ಮಯ ಭಟ್ said...

ಶ್ರೀವತ್ಸ,
ಸ್ವಾಗತ ...
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ..
ಬರ್ತಿರಿ..
ನಮಸ್ತೆ :)

ಚಿನ್ಮಯ ಭಟ್ said...

ಪದ್ಮಾ ಭಟ್,
ಧನ್ಯವಾದನೇ...
ಬರ್ತಾ ಇರು..
ನಮಸ್ತೆ..

ಚಿನ್ಮಯ ಭಟ್ said...

ಧನ್ಯವಾದ ಸಮನ್ವಯಕ್ಕಾ..ಬರ್ತಾ ಇರಿ...

ಚುಕ್ಕಿಚಿತ್ತಾರ said...

pranaya kaaladalle pralaya...:) chennaagide.. kavite..

ಚಿನ್ಮಯ ಭಟ್ said...

ಧನ್ಯವಾದ ವಿಜಯಕ್ಕಾ....

Imran said...

Hii Chinnu.... Swalpa late aayto naa barodu..
ee comment nalli enu illa.
helodella naadidd heltene.
swalpa time kodu maaraaya {ಜೊಲ್ಲು ಒರೆಸಿಕೊಳ್ಳುತ್ತಾ } ;-)

balasubramanya said...

"ಪ್ರಳಯವಾಯ್ತು ಗೆಣತಿ ನನ್ನೆದೆಯೊಳಗೆ,
ನೀ ಮುತ್ತಿಟ್ಟಾ ಅರೆಚಣದೊಳಗೆ" ಎಂಬ ಮೊದಲ ಸಾಲಿಗೆ ಓದುಗನಾದ ನನ್ನ ಮನದೊಳಗೆ ನಿಜವಾಗಿಯೂ ಪ್ರಣಯದ ಪ್ರಳಯವಾಯಿತು. ಕವಿತೆಯಲ್ಲಿನ ಪ್ರತೀ ಪದಗಳಿಗೂ ರಸಿಕತೆಯ ಸುಂದರ ಆಭರಣಗಳ ಅಲಂಕಾರ , ಸುಂದರ ಭಾವನೆಯ ಚಿತ್ತಾರಬಿಡಿಸಿ ನಮ್ಮಲ್ಲೂ ರಸಿಕತೆಯ ಕಿಚ್ಚನ್ನು ಹತ್ತಿಸುವ ನಿಮ್ಮ ಕವಿತ್ವಕ್ಕೆ ಜೈ ಹೊ ಚಿನ್ಮಯ್ .

ಚಿನ್ಮಯ ಭಟ್ said...

ಪ್ರಥ್ವಿರಾಜ ಮಹಾರಾಜರೇ,
ವಂದನೆಗಳು ನಿಮ್ಮ ಸಲಹೆಗೆ..
ಇದನ್ನು ನೀವು ವ್ಯಕ್ತಪಡಿಸಿದ ಬಗೆಯೂ ಇಷ್ಟವಾಯ್ತು..
ಖಂಡಿತ ನಿಮ್ಮ ಮಾತು ಒಪ್ಪುವಂಥದ್ದೇ...
ಸಾಮಾನ್ಯ ಓದುಗರನ್ನು ಕ್ಲಿಷ್ಟಕರವಾದ ಶಬ್ಧಗಳಿಂದ ಸತಾಯಿಸುವುದು ತೆರವಲ್ಲ..
ಅದೇ ಥರಹ ಎಲ್ಲ ಭಾವಗಳಿಗೂ ಸರಳ ಶಬ್ಧವನ್ನೇ ಬಳಸಿ,ಕಾವ್ಯವನ್ನು ಜೊಳ್ಳು ಮಾಡುವುದೂ ನನಗೆ ಇಷ್ಟವಾಗಲಿಲ್ಲ...ಹಾಗಾಗಿ ಆ ಭಾವಕ್ಕೆ ಬೇಕೆನಿಸಿದ ಶಬ್ದಗಳನ್ನು ಹಾಕಿದ್ದೇನೆ ಅಷ್ಟೆ..
ಜೊತೆಗೆ ನಾವು ಚೆನ್ನಾಗಿ ಬಲ್ಲ ಶಬ್ಧಗಳನ್ನು ಬಳಸಿದರೆ ಬರಹಕ್ಕೊಂದು ತೂಕ ಎಂದು ತಿಳಿದವ ನಾನು..ಇನ್ನೂ ಶಬ್ಧ-ಭಾವದ ನಡುವಿನ ಸಂಬಂಧದ ಹುಡುಕಾಟದಲ್ಲೇ ಇದ್ದೇನೆ..
ನಿಮ್ಮ ಸಲಹೆ ಒಂದು ಅಂಚಿಗೆ ನನಗೆ ಖಂಡಿತ ಮಾರ್ಗದರ್ಶಿ..
ಇದೇ ಥರ ಬರುತ್ತಿರಿ..
ನನ್ನನ್ನು ತಿದ್ದುತ್ತಿರಿ..
ನಮಸ್ತೆ :)

ಚಿನ್ಮಯ ಭಟ್ said...

ರಾಘವಜೀ,
ಧನ್ಯವಾದ ಬಂದಿದ್ದಕ್ಕೆ :)..
ಬರ್ತಾ ಇರಿ :)
ನಮಸ್ತೆ :)

ಚಿನ್ಮಯ ಭಟ್ said...

ಬಾಲು ಸರ್,
ಸ್ವಾಗತ ನಮ್ಮನೆಗೆ.....
ಅಬ್ಬಾ ನಿಮ್ಮ ಕಮೆಂಟು ಓದಿದ ಮೇಲೆ ಬರೆದದ್ದೂ ಸಾರ್ಥಕ ಎನಿಸಿತು...
ಧನ್ಯವಾದ ಸಾರ್..
ಬರ್ತಾ ಇರಿ :)..
ನಮಸ್ತೆ:)

ಜಲನಯನ said...

ಔಟ್ಪುಟ್ಟು ಸೂಪರು ಚಿನ್ಮಯ...-.ನಟ್ಟಿರುಳು -ತಪ್ಪಿ ನೆಟ್ಟಿರುಳು ಆಗಿದೆ ಕೊನೆಯಲ್ಲಿ ಪದಾರ್ಥ ಕೊಟ್ಟ ಕಡೆ (ಕವನದಲ್ಲಿ ಸರಿಯಿದೆ)...
ಪದ ಬಳಕೆ ಬಹಳ ಇಷ್ಟವಾಯಿತು...
ಶುಭಸಂಕ್ರಾಂತಿಯ ಹರಿವು ರಭಸಹಿಡಿದಿದೆ...ಜೈ ಹೋ...

Anonymous said...

ಪದ ಪದಗಳನೂ ಭಾವ-ಲಯದಲಿ ಅದ್ದಿ ಚಿತ್ತಾರ ಮೂಡಿಸುವ ನಿಮ್ಮ ಕಲಾ ಕುಸುರಿಯನ್ನು ಮೆಚ್ಚುತ್ತೇನೆ ಗೆಳಯಾ... ಉತ್ಕೃಷ್ಟ ಪ್ರೇಮ ಕವನ ...

ಹುಸೇನ್

ಚಿನ್ಮಯ ಭಟ್ said...

ಆಜಾದ್ ಸಾ....
ಧನ್ಯವಾದ ಸಾ...ಬಂದಿದ್ದಕ್ಕೆ...
ಹಾಂ ಅದು ಮೊದಲು ಕವನದಲ್ಲೂ ನೆಟ್ಟಿರುಳು ಅಂತಾನೆ ಬರೆದುಬಿಟ್ಟಿದ್ದೆ..ಹಿರಯರೊಬ್ಬರು ಅದನ್ನು ತಿದ್ದಿದರು..ಇದೊಂದು ಉಳಿದುಹೋಗಿತ್ತು ನೋಡಿ..
ಧನ್ಯವಾದಗಳು..ತಿದ್ದಿದ್ದಕ್ಕೆ..
ನಿಮ್ಮ ಮಾರ್ಗದರ್ಶನ ಸದಾ ಹೀಗೆಯೇ ಇರಲಿ..
ನಮಸ್ತೆ

ಚಿನ್ಮಯ ಭಟ್ said...

ಹುಸೇನಜೀ,
ಧನ್ಯವಾದ ಕಣ್ರೀ ನಿಮ್ಮ ಅಂದದ ಅನಿಸಿಕೆಗೆ...ತುಂಬು ಹೃದಯದ ಪ್ರೋತ್ಸಾಹಕ್ಕೆ..
ಬಹಳ ಖುಷಿಯಾಯ್ತು...
ಬರ್ತಿರಿ..
ನಮಸ್ತೆ :)

Shruthi B S said...

ಚಿನ್ಮಯ್ ಬಹಳ ಸು೦ದರವಾಗಿ ಬರದ್ದೆ... ಈ ಪ್ರೇಮಕವನ ಓದಿದರೆ ಹುಡುಗಿಯ ಹೃದಯದಲ್ಲೂ ಪ್ರಳಯ ಆಗ್ತು ಬಿಡು...:)

ಚಿನ್ಮಯ ಭಟ್ said...

ಹಾ ಹಾ...
ಧನ್ಯವಾದ ಶೃತಿ :)