Friday, February 22, 2013

ಮೈನಾ ..ತುಂಬಾ ತುಂಬಾ ವೈನ !




ತೇವವಾದ ನೋಡುಗರ ಕಣ್ಣುಗಳನ್ನು ಅತ್ತಿತ್ತ ಸರಿಯದಂತೆ ಹಿಡಿದಿಟ್ಟ ಸನ್ನಿವೇಶ,ಹಿನ್ನೆಲೆಯಲ್ಲಿ ತೇಲಿ ತೇಲಿ ಬಂದು ಎದೆಯಲಿ ಮಾರ್ದನಿಸುವ ಸೋನು ನಿಗಮರ ಹಿನ್ನೆಲೆ ಗಾಯನ,ಕರುಳು ಕಿತ್ತು ಬರುವಂತೆ ಇರುವ ಪಾತ್ರಗಳ ಅಭಿನಯ..ಅಭ್ಭಾ ವಾವ್..ಮೈನಾ ಚಿತ್ರದ ಕ್ಲೈಮ್ಯಾಕ್ಸ್ ಗೆ ಅದೇ ಸಾಟಿ…ಜೀವನದಲ್ಲಿ ಮೊದಲ ಬಾರಿಗೆ ಕಾಲೇಜು ಹುಡುಗರೆಲ್ಲಾ ಚಿತ್ರಮಂದಿರದಿಂದ ಅಳುತ್ತಾ ಹೊರಬರುವುದನ್ನು ನೋಡಿದೆ..ಇನ್ನೊಂದು ಸಲ ಅದೇ ಚಿತ್ರ ನೋಡಿದರೆ ನಾನೂ ಅಳುತ್ತೇನೋ ಏನೋ..ಅದೇನೋ ಗೊತ್ತಿಲ್ಲ ಇದೀಗ ೮:೩೦ರ ಷೋ ಮುಗಿಸಿ ರೂಮಿಗೆ ಬಂದವನನ್ನು ತಾನಾಗೇ ಬೆರಳುಗಳು ಕುಣಿಸುತ್ತಿವೆ…ಒಂದೊಳ್ಳೆ ಕನ್ನಡ ಚಿತ್ರ ನೋಡಿದ ಖುಷಿಯಲ್ಲಿ ಏನೇನೋ ಗೀಚುತ್ತಿವೆ…
ಕಳೆದೆರಡು ವಾರದಿಂದ ಪ್ರಾಜೆಕ್ಟಿನ ಗೊಂದಲದಲ್ಲಿ ಮುಳುಗಿದ್ದೆ….ಮಧ್ಯದಲ್ಲೊಂದಿಷ್ಟು ತೀವ್ರ ತರವಾದ ನಿರಾಸೆ,ಬಿಡದೇ ಕಾಡಿದ ಹತಾಶೆ….ಅದರಿಂದ ಸುಧಾರಿಸಿಕೊಳ್ಳುವುದೇ ಸ್ವಲ್ಪ ಕಷ್ಟವಾಯಿತು…ಸುಮ್ಮನೆ ಬೇಜಾರು ಕಳೆಯಲೆಂದು ಗೆಳೆಯ ಪ್ರಥ್ವಿಯ ಜೊತೆಗೂಡಿ “ಮೈನಾ” ಚಿತ್ರಕ್ಕೆ ಹೋಗಿದ್ದೆ…ತುಂಬಾ ವೈನಾದ ಚಿತ್ರವದು..ನನಗಂತೂ ಬಹಳ ಇಷ್ಟವಾಯ್ತು …ಈಗೇನೋ ಮನಸ್ಸು ಹಗುರವೆನಿಸಿದೆ …
ನಾಗಶೇಖರ್ ನಿರ್ದೇಶನದ,ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಆ ದಿನಗಳು ಚೇತನ್ ಹಾಗೂ ನಿತ್ಯಾ ಮೆನನ್ ನಾಯಕ- ನಾಯಕಿಯರು..ಉಳಿದಂದತೆ ತಾರಾಗಣದಲ್ಲಿ ಮಾಳವಿಕಾ,ತಬ್ಲಾನಾಣಿ.ಸುಮನಾ ರಂಗನಾಥ್,ಸುಹಾಸಿನಿ,ಅನಂತ್ ನಾಗ್ ಮುಂತಾದವರಿದ್ದಾರೆ… ಸಂಗೀತ ಜೆಸ್ಸಿಗಿಫ್ಟ್ ಹಾಗೂ ಹಿನ್ನೆಲೆ ಸಂಗೀತ, ಚಿತ್ರದಲ್ಲೂ ಬಂದು ನಗಿಸಿಹೋಗುವ ಸಾಧುಕೋಕಿಲ..ನನ್ನ ಮಟ್ಟಿಗೆ ಈ ಚಿತ್ರದ ಇನ್ನೊಂದು ಹೀರೋ ಚಿತ್ರದ ಛಾಯಾಗ್ರಾಹಕ ಸತ್ಯ ಹೆಗಡೆ..
ನಿಜ ….ದೂದ್ ಸಾಗರ ಜಲಪಾತವನ್ನು ಕ್ಯಾಮರಾ ಕಣ್ಣುಗಳಲ್ಲಿ ತೋರಿಸಿದ ಪರಿ ಮನಮೋಹಕ…ಅದನ್ನು ನೋಡಿದ ಕೂಡಲೇ ಒಮ್ಮೆ ಅಲ್ಲಿಗೆ ಹೋಗಲೇಬೇಕು ಅನ್ನಿಸದೇ ಇರಲಾರದು…ಹಸಿರು ಕಾನನದ ಮಧ್ಯ ಚೆಲ್ಲಿದ ಹಾಲಿನಂತೆ ಇಳಿಯುವ ಜಲಧಾರೆಯನ್ನು ತೋರಿಸಿರುವ ರೀತಿಯೇ ಮೊದಲಾರ್ಧದಲ್ಲಿ ನಿಮ್ಮನ್ನು ಸೆರೆಹಿಡಿಯುತ್ತದೆ…ಅದೇ ಸುಂದರ ಪರಿಸರದಲ್ಲಿ ಬಹುತೇಕ ಮೊದಲಾರ್ಧದ ಕಥೆ ಸಾಗುತ್ತದೆ…
ಮುಂದೆ ಅನೇಕ ತಿರುವುಗಳಲ್ಲಿ ಸಾಗುವ ಕಥೆಯಲ್ಲಿ ನಾಯಕ ಚೇತನ್ ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ್ದಾರೆ…ಪ್ರೀತಿಗಾಗಿ ತಹತಹಿಸುವ ಹುಡುಗನಾಗಿ,ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಗಂಡನಾಗಿ ,ಕೊನೆಗೆ ಹೊಡೆದಾಟದ ಸನ್ನಿವೇಶದಲ್ಲೂ  ಸಹ ಅವರ ಅಭಿನಯ ಇಷ್ಟವಾಗುತ್ತದೆ…ಇನ್ನು ವಿಶೇಷ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕಿ ನಿತ್ಯಾ ಮೆನನ್ ತಮ್ಮ ಮುದ್ದು ನಗೆಯಿಂದ ಮೊದಲಾರ್ಧದಲ್ಲಿ ಇಷ್ಟವಾದರೆ,ನಂತರ ಕಥೆ ಸಾಗಿದಂತೆ ಕರುಳು ಕಿವಿಚುವಂತೆ ಅಭಿನಯಿಸಿದ್ದಾರೆ…ಇದರ ಜೊತೆಗೆ ಚಿತ್ರದಲ್ಲಿ ಪೋಲಿಸರ ಮಾನವೀಯ ಭಾವನೆಗಳಿಗೆ ಮಹತ್ವದ ಸ್ಥಾನ ನೀಡದ್ದು ಇಷ್ಟವಾಯಿತು.…
ಇನ್ನೂ ಬರೆದರೆ ಉತ್ಪ್ರೇಕ್ಷೆ ಎನ್ನಿಸಬಹುದೇನೋ…ಗೊತ್ತಿಲ್ಲ…ಆದರೇಕೋ ಮುಂಗಾರುಮಳೆ ಬಿಟ್ಟರೆ ಮನಸ್ಸಿಗೆ  ತುಂಬಾ ಕ್ಲೈಮಾಕ್ಸ್ ಈ ಚಿತ್ರದ್ದು… ಸುಂದರವಾದ ಹಾಡುಗಳು,ಅಂದದ ಲೊಕೇಶನ್ ಗಳಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ನನ್ನ ಅಭಿಪ್ರಾಯ…ಸಮಯವಿದ್ದರೆ ಖಂಡಿತ ಹೋಗಿ ನೋಡಿ…ನೋಡಿ ಖುಷಿ ಪಡಿ…
ಓದಿ,ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು..
ನಮಸ್ತೆ 

17 comments:

Srikanth Manjunath said...

ಚಿತ್ರದ ಪ್ರೋಮೊಗಳಲ್ಲಿ ದೂದ್ ಸಾಗರವನ್ನು ತೋರಿಸಿದಾಗ ಚಿತ್ರ ನೋಡಬೇಕೆಂಬ ಬಯಕೆ ಇತ್ತು. ದೂದಸಾಗರ ಒಳ್ಳೆಯ ತಾಣ., ಅದನ್ನು ನೋಡುವ ಸಲುವಾಗಿ ಈ ಚಿತ್ರವನ್ನು ಒಮ್ಮೆ ನೋಡುವೆ. ನಿಮ್ಮ ವಿಮರ್ಶೆ ಚೆನ್ನಾಗಿದೆ.

Unknown said...

ತುಂಬಾ ಚೆನ್ನಾಗಿದೆ ನಿಮ್ಮ ೨ನೆ ಚಿತ್ರ ವಿಮರ್ಶೆ ....

ಕಾಲೇಜ್ ಹುಡುಗ್ರೂ ಅತ್ಗೊಂಡು ಬರ್ತಾರೆ ಅಂದ್ರೆ ನೋಡಲೇ ಬೇಕಾದ ಚಿತ್ರ ಬಿಡಿ :)

ಬರೀತಾ ಇರಿ ...ಪೆಪರ್ನಲ್ಲಿ ಬರೋ "ಚಿತ್ರ ವಿಮರ್ಶೆ"ತರಾ :)

ಧನ್ಯವಾದ

ಪದ್ಮಾ ಭಟ್ said...

ನನಗೂ ಮೈನಾ ಚಿತ್ರವನ್ನು ಆದಷ್ಟು ಬೇಗ ನೋಡ್ಬೇಕು ಅನಿಸ್ತಾ ಇದೆ ......

shivu.k said...

ಚಿನ್ಮಯ್: ನಾನು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಚಿತ್ರವಿದು. ಕಳೆದ ವಾರ ಚಾರ್‌ಮಿನಾರ್ ಅನ್ನು ನೋಡಿದ್ದೆ. ತುಂಬಾ ಒಳ್ಳೆಯ ಅಭಿಪ್ರಾಯ ಬರುತ್ತಿರುವ ಚಿತ್ರವಿದು ಖಂಡಿತ ನೋಡುತ್ತೇನೆ. ವಿಮರ್ಶೆಗೆ ಥ್ಯಾಂಕ್ಸ್.

Shruthi B S said...
This comment has been removed by the author.
Shruthi B S said...

ಉತ್ತಮ ಚಿತ್ರ ವಿಮರ್ಶೆ ಚಿನ್ಮಯ್... ನಾನೂ ಕೂಡ ಮೈನಾ ಚಿತ್ರ ನೋಡಕ್ಕು ಅ೦ತ ಅ೦ದುಕೊ೦ಡಿದ್ದಿದ್ದಿ... ಸ್ಪೆಷಲಿ ನಿತ್ಯಾ ಮೆನನ್ ಗಾಗಿ... ಈಗ ನಿನ್ನ ಚಿತ್ರ ವಿಮರ್ಶೆ ಓದಿದ ಮೇಲೆ ಆ ಹ೦ಬಲ ಇನ್ನೂ ಜಾಸ್ತಿಯಾಯ್ದು...

ಸುಬ್ರಮಣ್ಯ said...

ನಾನಂತೂ ನಿಮ್ಮ ಬ್ಲಾಗ್ ಓದಿದಮೇಲೆ ಗ್ಯಾರಂಟಿ ನೋಡ್ತೀನಿ. ಸಂತೋಷದ ವಿಷಯವೇನೆಂದರೆ ಹೊಸ ಸಿನೆಮಾಗಳನ್ನ ನೋಡಲು ನಮ್ಮೂರು ಕೊಪ್ಪಾದಲ್ಲಿ ಈಗ ವರ್ಷಗಟ್ಲೆ ಕಾಯುವುದು ಬೇಡ. ರೀಲ್ ಡಬ್ಬಾ ಬದಲು ಸ್ಯಾಟಲೈಟ್ ಪ್ರಸಾರ ಕಾರಣ.

ಚಿನ್ಮಯ ಭಟ್ said...

ಶ್ರೀ...
ಖಂಡಿತವಾಗಿಯೂ ಸಹ ದೂದಸಾಗರ ಜಲಪಾತವನ್ನು ಅದ್ಭುತವಾಗಿ ತೋರಿಸಿದ್ದಾರೆ...:)
ಧನ್ಯವಾದ ಪ್ರೀತಿಯ ಕಮೆಂಟಿಗಾಗಿ :)

ಚಿನ್ಮಯ ಭಟ್ said...

ಪದ್ಮಾ ಭಟ್...
ಧನ್ಯವಾದನೇ :) :)
ನೋಡು ಚೆನಾಗಿದೆ :)

ಚಿನ್ಮಯ ಭಟ್ said...

ಶಿವು ಸರ್...
ಧನ್ಯವಾದ...
ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ಓದಿ...
ಬರ್ತಾ ಇರಿ ..
ಛಂದದ ಸಿನಿಮಾ..
ನೋಡಿ ಒಮ್ಮೆ :)

ಚಿನ್ಮಯ ಭಟ್ said...

ಶೃತಿ,
ಮಸ್ತಿದ್ದೆ ಮಾರಾಯ್ತಿ ಚಿತ್ರ :)...
ನಿತ್ಯಾ ಮೆನನ್ ನಗೆ ಸೂಪರ್ :)..
ನೋಡು ನೋಡು :)

ಚಿನ್ಮಯ ಭಟ್ said...

ಸುಬ್ರಹ್ಮಣ್ಯಜೀ,
ನಮ್ಮ ಶಿರಸಿಯಲ್ಲೂ ಸ್ಯಾಟಲೈಟ್ ಪ್ರಸಾರ ಶುರುವಾಗಿದೆ :)...
ಎಲ್ಲರ ಜೊತೆಗೆ ನಾವೂ ಸಿನಿಮಾ ನೋಡಬಹುದು ಎಂಬುದೇ ಖುಷಿ...
ಧನ್ಯವಾದ ಅಂದದ ಅನಿಸಿಕೆಗಾಗಿ..
ಸಮಯವಾದಾಗ ಒಮ್ಮೆ ನೋಡಿ :)

Ashok.V.Shetty, Kodlady said...

ವಿಮರ್ಶೆ ಚೆನ್ನಾಗಿದೆ ಚಿನ್ಮಯ್ .... ನಮಗೆ ಬೇಗ ನೋಡೋಕೆ ಆಗೋಲ್ಲ ಮುಂಬೈ ನಲ್ಲಿರೋದ್ರಿಂದ .... ಸಿಕ್ಕಿದ್ರೆ ನೊಡ್ತೀನಿ....

ಸತೀಶ್ ನಾಯ್ಕ್ said...

ಚೆಂದದ ವಿಮರ್ಶೆ ಚಿನ್ಮಯ್.. :) :)

ಅನಿವಾರ್ಯ ಕಾರಣಗಳಿಂದ ಇತ್ತೀಚಿನ ಯಾವ ಕನ್ನಡ ಚಿತ್ರಗಳನ್ನೂ ನೋಡಲಾಗಿಲ್ಲ. ಚಾರ್ ಮಿನಾರ್, ಗೊಂಬೆಗಳ ಲವ್ ಮತ್ತು ಮೈನಾ ಈಗ ಸಧ್ಯದ ಮಟ್ಟಿಗೆ ನೋಡಲೇ ಬೇಕು ಅನ್ನಿಸಿರೋ ಚಿತ್ರಗಳು. ನೋಡುವ ಮುಂದಿನ ಭಾನುವಾರ ಪ್ಲಾನ್ ಹಾಕ್ತೇನೆ.

ಚಿನ್ಮಯ ಭಟ್ said...

ಅಶೋಕ್ ಸರ್,
ನೋಡಿ ಸಾಧ್ಯ ಆದಾಗ...
ಧನ್ಯವಾದ ನಿಮ್ಮ ಚೆಂದದ ಕಮೆಂಟಿಗೆ :)
ನಮಸ್ತೆ :)

ಚಿನ್ಮಯ ಭಟ್ said...

ಧನ್ಯವಾದಗಳು ಸತೀಶ್,
ನಾನೂ ಚಾರ್ ಮಿನಾರ್,ಗೊಂಬೆಗಳ ಲವ್ ನೋಡ್ಬೇಕು..
ಒಟ್ಟೊಟ್ಟಿಗೆ ಸುಮಾರು ಒಳ್ಳೆಯ ಚಿತ್ರಗಳು ಬಂದ್ವು...
ಒಳ್ಳೆಯ ಸುದ್ದಿಯೇ ಕನ್ನಡಕ್ಕೆ ಅಲ್ವಾ...

ಚಿನ್ಮಯ ಭಟ್ said...

ಅಂದದ ಕಮೆಂಟಿಗಾಗಿ ಧನ್ಯವಾದಗಳು ಭಾಗ್ಯಾ :)