Sunday, March 17, 2013

ನಮನ

ಮೊದಲನೇ ಇಂಟರ್ನಲ್ಸು ಮುಗಿತು...ಹೆಂಗಾಯ್ತು ಅಂತೆಲ್ಲಾ ಕೇಳ್ಬೇಡಿ ಪ್ಲೀಸ್ ;)...
ಅದೇ ಖುಷಿಗೆ ಒಂದು ಕವನ ಬ್ಲಾಗಿಸ್ತಾ ಇದೀನಿ...
ಈಗ ಸುಮಾರು ಹದಿನೈದು ದಿನಗಳ ಹಿಂದೆ ವಿ.ಟಿ.ಯು ಫೆಸ್ಟ್ ಗೆ ಅಂತಾ ಅರ್ಜಂಟಿನಲ್ಲೊಂದು ದೇಶಭಕ್ತಿ ಗೀತೆಯನ್ನು ಬರೆಯಲು ಹೊರಟು ಹಿಂಗಾಯ್ತು...
ಜಾಸ್ತಿ ತೀರಾ ಯೋಚಿಸಿ ಬರೆದದ್ದೇನಲ್ಲಾ,ಹಂಗೆ ಸುಮ್ಮನೆ ಗೀಚಿದ್ದು...
ಫೆಸ್ಟ್ ನಾ ಸುದ್ದಿಯಂತೂ ಇಲ್ಲ,ಬರೆದದ್ದನ್ನಾ ನಿಮ್ಮೆದುರು ಇಟ್ಟಿದ್ದೇನೆ....
ಸಮಯವಿದ್ದಾಗ ಒಮ್ಮೆ ದಯವಿಟ್ಟು  ನೋಡಿ,ಹೆಂಗಿದೆ ಹೇಳಿ.....


ಮೂಡಣ ಪಡುವಣ,ಬಡಗಣ ತೆಂಕಣ
ಕೂಡಿದೆ ಜನಮನ ಹಾಡಲು ಜನಗಣ||

ಸಾಗರದಲೆಯಲು ಸರಿಗಮ ಸ್ವರವಿದೆ,
ಹಿಮಗಿರಿ ಜಾಲದಿ ವೇದದ ಅರಿವಿದೆ,
ಸಮತೆಯ ಬಯಲಲಿ ಹಸುರಿನ ಗರಿಯಿದೆ,
ನಲುಮೆಯ ನದಿಯಲಿ ಕಾಯಕ ಝರಿಯಿದೆ.

ಗಣಗಳ ಹಿರಿತನ,ಗಣಕದ ಹೊಸತನ,
ಚಿಗುರಿಗೆ ಬೇರಿನ ನೆರವಿನ ಸಿರಿತನ.
ಕಲೆಗಳ ನಂದನ,ಭಾಷೆಯ ಗೆಳೆತನ,
ವಿವಿಧತೆಯಲ್ಲೂ ಏಕತೆಯಾ ಗುಣ.

ಜ್ನಾನದ ಸ್ಪುರಣ,ಭಕುತಿಯ ಹೂರಣ,
ದೇಶಕೆ ದೇಹದ ಶಕ್ತಿಯೇ ಅರ್ಪಣ..
ವೈರಿಗೆ ಶೌರ್ಯದ ರಕುತದ ತರ್ಪಣ,
ನೀಡುವ ಸೈನ್ಯಕೆ ನಮ್ಮಯ ನಮನ..
ಹೆಮ್ಮೆಯ ನಮನ..

-ಚಿನ್ಮಯ ಭಟ್ಟ

(ಇದರಲ್ಲಿ ಅದೇಕೋ ಹೊಸ ಶಬ್ದಗಳು ಹೊಳೆಯಲಿಲ್ಲ....ಸುಮ್ಮನೆ ತುರುಕಲೂ ಮನಸಾಗಲಿಲ್ಲ... ಅದಕ್ಕಾಗಿ ಕ್ಷಮೆ ಇರಲಿ)
ಹಾಂ ಎಂದಿನಂತೆ ನಿಮ್ಮ ಸಲಹೆ-ಸೂಚನೆಗಾಗಿ ಕಾಯ್ತಿರ್ತಿನಿ..ನಿಮ್ಮ ಅನಿಸಿಕೆ ನಾ ದಯವಿಟ್ಟು ಬರಿರಿ...ನಂಗೆ ಅದೇ ಶಕ್ತಿ..
ತಪ್ಪುಗಳೇನಾದ್ರೂ ಕಂಡ್ರೆ ಮರೆಯದೇ ತಿಳಿಸಿ ನನ್ನನ್ನಾ ಬೆಳೆಸ್ತೀರಾ ಅಲ್ವಾ???


38 comments:

Unknown said...

ಲಯಬದ್ಧವಾದ ಅತ್ಯುತ್ತಮ ದೇಶಭಕ್ತಿಗೀತೆ. ಚೆನ್ನಾಗಿದೆ.

Anushanth said...

wowww! super chinmay...

ಚಿನ್ಮಯ ಭಟ್ said...

ನಂಜುಂಡ ಭಟ್ರೇ,
ಹೌದು ಇದು ಏನೋ ಲಯ,ಧಾಟಿ ಎಲ್ಲಾ ಅಂದುಕೊಂಡೇ ಬರೆಯ ಹೊರಟ ಪದ್ಯ..
ಆ ಲಯದ ಹುಚ್ಚುನಲ್ಲಿ ಭಾವಕ್ಕೆ ತೂಕ ಕೊಟ್ಟೆನೋ ಇಲ್ವೋ ಗೊತ್ತಿಲ್ಲ..ನಾನೇ ಗೊಂದಲದಲ್ಲಿದ್ದೇನೆ..
ನಿಮ್ಮ ಮಾತು ಕೇಳಿ ಹೊಸ ಪ್ರಯೋಗಕ್ಕೆ ಒಂದು ಶಕ್ತಿ ಬಂತು..
ಏನೇ ಇರಲಿ..
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಬರ್ತಾ ಇರಿ..
ನಮಸ್ತೆ

ಚಿನ್ಮಯ ಭಟ್ said...

ಅನು ಮೇಡಮ್,
ಧನ್ಯವಾದ ನಿಮ್ಮ ಅಕ್ಕರೆಯ ಪ್ರೋತ್ಸಾಹಕ್ಕಾಗಿ...
ನಿಮ್ಮ ಆಶೀರ್ವಾದ ಸದಾ ಹಿಂಗೇ ಇರ್ಲಿ :) :)
ನಮಸ್ತೆ :)

Badarinath Palavalli said...

ಮಕ್ಕಳೂ ಹಿರಿಯರೂ ಸರಾಗವಾಗಿ ಅರಗಿಸಿಕೊಂಡು ಹಾಡಬಲ್ಲ ನಾಡ ಗೀತೆ.

MPPRUTHVIRAJ KASHYAP said...

Simple agi ondu namana
Chanagide,Dhati,laya ista aithu
Innond swalpa chinthanegalu vyakthavagabahudithhu nodi

ಚಿನ್ಮಯ ಭಟ್ said...

ವಂದನೆಗಳು ಬದರಿ ಸರ್ :)

ಚಿನ್ಮಯ ಭಟ್ said...

ಧನ್ಯವಾದ ಸುಬ್ರಹ್ಮಣ್ಯ ಸರ್...

ಚಿನ್ಮಯ ಭಟ್ said...

ಪ್ರಥ್ವಿರಾಜ ಮಹಾರಾಜರೇ,
ಧನ್ಯವಾದ ನಿಮ್ಮ ಆತ್ಮೀಯ ಸಲಹೆಗಾಗಿ...
ಖಂಡಿತ ಒಪ್ಕೋತೀನಿ ಚಿಂತನೆಗಳು ಇನ್ನೂ ಚೆನಾಗಿರಬಹುದಿತ್ತು ಅಂತಾ...
ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನ ಹರಿಸ್ತಿನಿ...
ಬರ್ತಾ ಇರಿ...
ನಿಮ್ಮ ಸಲಹೆಗಳೇ ನಮಗೆ ಶ್ರೀರಕ್ಷೆ,,,
ನಮಸ್ತೆ...

ಶ್ರೀವತ್ಸ ಕಂಚೀಮನೆ. said...

ಇಷ್ಟವಾಯಿತು...

ಗಿರೀಶ್.ಎಸ್ said...

ಚಿನ್ಮಯ,ಲಯಬದ್ಧವಾಗಿದೆ ಮತ್ತು ಚೆನ್ನಾಗಿದೆ...ಪೃಥ್ವಿರಾಜರು ಹೇಳಿದ ಹಾಗೆ ಇನ್ನಷ್ಟು ಚಿಂತನೆಗಳನ್ನು ಸೇರಿಸಬಹುದಿತ್ತೇನೋ ಅನ್ನಿಸ್ತು.. ಮುಂದುವರೆಯಲಿ ಹೀಗೆ

ಚುಕ್ಕಿಚಿತ್ತಾರ said...

channaagide chinmay.. teeraa praasakke ottukottare bhaava neerasavaaguttadeyaa antaa.. ? praasakkaage tinukaadade manassinalli moodida bhaavavannu kaviteyaagisidare adu aaptavaaguttade allave..?

plleyadaagali..

ಚಿನ್ಮಯ ಭಟ್ said...

ಧನ್ಯವಾದಗಳು ಶ್ರೀವತ್ಸಜೀ....

ಸಂಧ್ಯಾ ಶ್ರೀಧರ್ ಭಟ್ said...

ದೇಶ ಭಕ್ತಿ ಗೀತೆಗಳನ್ನು ಬರೆದಿದ್ದನ್ನು ಇತ್ತೀಚಿಗೆ ಓದಿರಲಿಲ್ಲ ಚಿನ್ಮಯ್ ...
ತುಂಬಾ ಚೆನ್ನಾಗಿದೆ. ಇಷ್ಟವಾಯಿತು. ತುಂಬಾ ಹಿಂದೆ "ಭಾರತ ದರ್ಶನ " ಪುಸ್ತಕ ಓದುವಾಗ ಅದರ ಕೊನೆಯಲ್ಲಿದ್ದ ಅಜ್ಞಾತ ಕವಿಯ ಈ ಸಾಲುಗಳು ನೆನಪಿಗೆ ಬಂದವು ...

ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿ ಹಿಮಾಲಯವಿದ್ದರೆ ..
ವೇದವಿದ್ದರೆ ಭೂಮಿಯಿದ್ದರೆ ಘನ ಪರಂಪರೆಯಿದ್ದರೆ ..
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ...

ಚಿನ್ಮಯ ಭಟ್ said...

ಗಿರೀಶ ಜೀ,
ಖಂಡಿತ..ಅದೇನೋ ಈ ಪದ್ಯದಲ್ಲಿ ಲಯದ ಭರದಲ್ಲಿ ಚಿಂತನೆಗಲು ಕಡಿಮೆ ಆದ್ವಾ ಅಥವಾ ಸಮಯ ಕೊಟ್ಟಿದ್ದು ಕಡಿಮೆ ಆಯ್ತಾ ಗೊತ್ತಿಲ್ಲ....
ಧನ್ಯವಾದ ನಿಮ್ಮ ಸಲಹೆಗಾಗಿ...
ಖಂಡಿತ ಇನ್ನು ಮುಂದೆ ಈ ಕಡೆ ಯೋಚನೆ ಮಾಡ್ತೀನಿ...
ಬರ್ತಾ ಇರಿ...ತಪ್ಪಿದ್ದಾಗ ಇದೇ ಥರ ಕಿವಿ ಹಿಂಡತಾ ಇರಿ...
ನಮಸ್ತೆ ...

ಚಿನ್ಮಯ ಭಟ್ said...

ಚುಕ್ಕಿ ಅಕ್ಕಾ,
ಮೊದಲಿಗೆ ವಂದನೆಗಳು ನಿಮ್ಮ ಅನಿಸಿಕೆಯನ್ನು ಹೇಳಿದ್ದಕ್ಕೆ...
ಹಮ್...ಭಾವ ಮತ್ತು ಪ್ರಾಸಗಳ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ ನಂಗೆ..
ಭಾವ ಒಂಥರಾ ಆಭರಣ ಮಾಡುವ ಲೋಹ ಇದ್ದ ಹಂಗೆ..ಪ್ರಾಸಗಳು ಅದರ ಮೇಲಿನ ಕುಸುರಿ ಇದ್ದಂತೆ ಅಂದ್ಕೊಂಡವನು ನಾನು..
ಹಮ್..ಇಲ್ಲಿ ಬಹುಷಃ ಭಾವವನ್ನು ಸ್ಪಷ್ಟವಾಗಿ ನಿರೂಪಿಸುವಲ್ಲಿ ಸೋತೆ ಅನ್ಸತ್ತೆ...
ಇರ್ಲಿ ಮುಂದೆ ತಿದ್ಕೋತೀನಿ...
ಖುಷಿ ಆಯ್ತು ನಿಮ್ಮ ಸಲಹೆ ಓದಿ...
ಪ್ರಾಸಕ್ಕೆ ಕಟ್ಟು ಬಿದ್ದು ಬರೆದದ್ದೇನಲ್ಲಾ,ಆದರೆ ಭಾವದ ಬಗ್ಗೆ ಜಾಸ್ತಿ ಯೋಚಿಸಿರಲಿಲ್ಲ ಅನ್ಸತ್ತೆ...
ಗೊತ್ತಿಲ್ಲ...
ಬರ್ತಾ ಇರಿ...
ನಿಮ್ಮ ಅಮೂಲ್ಯವಾದ ಮಾರ್ಗದರ್ಶನ ಕೊಟ್ಟು ತಿದ್ತಾ ಇರಿ ಅಷ್ಟೇ...
ನಮಸ್ತೆ...

ಚಿನ್ಮಯ ಭಟ್ said...

ಸಂಧ್ಯಕ್ಕಾ,
ಸ್ವಾಗತ ನಮ್ಮನೆಗೆ..
ಹಮ್...ದೇಶಭಕ್ತಿ ಗೀತೆಗಳನ್ನಾ ನಾನೂ ಜಾಸ್ತಿ ಓದಿಲ್ಲ...
ಮೊದಲ ಪ್ರಯತ್ನವಿದು...
ಧನ್ಯವಾದ ಅಂದದ ಕಮೆಂಟು ಹಾಕಿ ಉತ್ತೇಜಿಸಿದ್ದಕ್ಕೆ...
ಆ ಕವಿಗೂ ಸಹ ಒಂದು ನಮನ..
ನಮಸ್ತೆ..

ಮನಸು said...

tumba chennagide.. desha bhakti geete keLida haage aytu. music compose madidre chennagirutte ..:)

Shruthi B S said...

ಚಿನ್ಮಯ್... ಬಹಳ ಚನ್ನಾಗಿದ್ದು ದೇಶಭಕ್ತಿ ಕವನ... ನಮ್ಮ ದೇಶ ಸ೦ಸ್ಕೃತಿ ಹಾಗೂ ಆಧುನಿಕತೆ ಎರಡನ್ನೂ ಸಮನಾಗಿ ತೆಗೆದುಕೊ೦ಡು ಹೋಗುತ್ತಿರುವ ಪರಿಯನ್ನು ವಿವರಿಸಿದ್ದು ಇಷ್ಟವಾಯಿತು....:)

Srikanth Manjunath said...

ಮಾಂಗಲ್ಯಂ ತಂತು ನಾನೇನಾ ಚಿತ್ರದಲ್ಲಿ ಒಂದು ಹಾಡಿದೆ "ಪದ ಪದ ಸೇರಿ ಒಂದು ಪಲ್ಲವಿ".
ಹಾಗೆಯೇ ಸುಮಧುರ ಪದಗಳು ಅಕ್ಷರಗಳ ಜೊತೆ ಕಲೆತಾಗ ಭಾವ ಬರುತ್ತದೆ. ಭಾವದಿಂದ ಐಕ್ಯತೆ ಸಿಗುತ್ತದೆ. ಐಕ್ಯತೆ ಇದ್ದಾಗ ದೇಶ ಪ್ರೇಮ ಸುರುಳಿಯಾಗಿ ಮುಂದೆ ಬರುತ್ತದೆ. ಅಂಥಹ ಒಂದು ಭಾವ ಈ ಪದಗಳಲ್ಲಿ ಕಾಡಿತ್ತು. ಸೊಗಸಾಗಿದೆ

balasubramanya said...

ಚಿನ್ಮೈ ನಿಮ್ಮ ಕವಿತೆ ಸರಾಗವಾಗಿ ಓಡಿಸಿಕೊಂಡು ಹೃದಯ ಸೇರುತ್ತದೆ.ಸರಳವಾದ ಪದಗಳ ಮೆರವಣಿಗೆ , ಸುಂದರ ಭಾವಗಳ ನರ್ತನ ಮನಸಿಗೆ ಹಿತ ಕೊಡುತ್ತದೆ. ಒಳ್ಳೆ

Swarna said...

ಕೆಲವೊಮ್ಮೆ ಪ್ರಾಸಬಧ್ಧ ರಚೆನಗಳು ಓದಲು ತುಂಬಾ ಖುಷಿ ಕೊಡುತ್ತವೆ , ಅದರದ್ದೇ ಆದ ಒಂದು ಲೋಕವನ್ನು ಕಟ್ಟಿ ಕೊಡುತ್ತವೆ. ಎರಡನೇ ಚರಣ ತುಂಬಾ ಇಷ್ಟವಾಯಿತು , ಬರೆಯುತ್ತಿರಿ

Unknown said...

ವಾರಕ್ಕೆರಡು ಇಂಟರ್ನಲ್ಸ್ ಇರ್ಲಿ {ನಿಮ್ಗೆ ಮಾತ್ರ :):)}
ಅದ್ಹೇಗೆ ಪರೀಕ್ಷೆ ಮುಗಿದ ತಕ್ಷಣ ಬ್ಲಾಗಿಸುತ್ತೀರೋ ನಾ ಕಾಣೆ !!
ಇಷ್ಟವಾಯ್ತು ಅಂತಷ್ಟೇ ಹೇಳಬಲ್ಲೆ :)
ಬರಿತಾ ಇರಿ

ಚಿನ್ಮಯ ಭಟ್ said...

ಧನ್ಯವಾದಗಳು ಮೇಡಮ್...
ಖಂಡಿತ ಸಂಗೀತ ಬೇಕು ಅನ್ಸ್ತಿದೆ ನಂಗೂ ಸಹ ಇದ್ಕೆ...
ನಾನೂ ಕಾಯ್ತಾ ಇದೀನಿ,ಸಂಗೀತ ಸಂಯೋಜಿಸಿದ ಮೇಲೆ ಇದರಲ್ಲಾಗುವ ಬದಲಾವಣೆಯನ್ನಾ ನೋಡ್ಲಿಕ್ಕೆ..
.ವಂದನೆಗಲು ನಿಮ್ಮ ಪ್ರೋತ್ಸಾಹಕ್ಕಾಗಿ..
ನಮಸ್ತೆ :)

ಚಿನ್ಮಯ ಭಟ್ said...

ಶೃತಿ,
ಧನ್ಯವಾದನೆ ಇಷ್ಟಪಟ್ಟಿದ್ದಕ್ಕೆ :) :)...
ಹಮ್..ಅದೊಂಥರ ನಂಗೆ ಅನ್ಸಿದ್ದು ಬರ್ದೆ...
ನಮ್ಮ ಭಾರತದ ಶಕ್ತಿ ಅದರ ಸಂಸ್ಕೃತಿಯೇ..
ಆದರೆ ಅದೊಂದೇ ಅಲ್ಲ ಅಷ್ಟೇ...
ಹಳೆತು-ಹೊಸತನ್ನು ಸೇರಿಸುವ ಪ್ರಯತ್ನದಲ್ಲಿ ಸಿಕ್ಕ ಸಾಲುಗಳವು...
ವಂದನೆಗಳು ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ :)..
ನಮಸ್ತೆ :)

ಚಿನ್ಮಯ ಭಟ್ said...

ಶ್ರೀ,
ಅದು ಹೇಗೋ ನೀವು ಹಳೆಯ ಸಿನೆಮಾಗಳತ್ತ ಕರೆದುಕೊಂಡು ಹೋಗ್ಬಿಡ್ತೀರಾ ನೋಡಿ...ಗೊತ್ತಾಗೋದೇ ಇಲ್ಲ...ಭಾವ->ಐಕ್ಯತೆ->ದೇಶಪ್ರೇಮದ ಸರಪಣಿಯ ವಿಶ್ಲೇಷಣೆ ನನಗಂತೂ ಹೊಸದು...
ವಂದನೆಗಳು...
ನಿಮ್ಮ ಕಮೆಂಟುಗಳು ಸ್ಪೂರ್ತಿ ಪುಂಜಗಳು ಅಷ್ಟೇ...
ಭಾಳ ಖುಷಿ ಆಯ್ತು,ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ಬಾಲು ಸರ್,
ವಂದನೆಗಳು ನಿಮ್ಮ ಪ್ರೀತಿಪೂರ್ವಕ ಆಶೀರ್ವಾದಕ್ಕೆ...
ನಿಮ್ಮೆಲ್ಲರ ಮೆಚ್ಚುಗೆಯೇ ಏನೋ ನಮ್ಮಂಥವರ ಬರಹಕ್ಕೆ ನೈಜಬಲ ...
ಬರ್ತಾ ಇರಿ :).."ಭಾವದ ನರ್ತನ" ಇಷ್ಟವಾಯ್ತು...
ನಮಸ್ತೆ :)

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :) :)...
ಹಾಂ ಅದು ಎರಡನೇ ಚರಣದಲ್ಲಿ ಒಂದು ಸಾಲು ಇದ್ಯಲ್ಲಾ ಅದು "ಚಿಗುರಿಗೆ ಬೇರಿನ ನೆರವಿನ ಸಿರಿತನ." ಅದು ನನಗೆ ಇಷ್ಟವಾಯ್ತು...ಅದು ವಂಶ ಪಾರಂಪರ್ಯವಾಗಿ ಬೆಳೆದುಬಂದ ಕಲೆಗಳನ್ನು ಹೇಳುತ್ತದೆ..
ಮುಂದಿನವರಿಗೂ ತಾವು ಕಲಿತಿದ್ದನ್ನು ಅವರಿಗರಿವಿಲ್ಲದಂತೆ ಕಲಿಸಿಕೊಡುವದು ನಮ್ಮ ವಿಶೇಷತೆಗಳಲ್ಲೊಂದು ಅನಿಸ್ತು ...
ಹಮ್...ಸರಿ..ವಂದನೆಗಳು ಮೇಡಮ್..
ಬರ್ತಿರಿ..
ನಮಸ್ತೆ

ಚಿನ್ಮಯ ಭಟ್ said...

ಭಾಗ್ಯಮ್ಮಾ...
ಧನ್ಯವಾದ :)...
ಜಾಣೆ ಬಿಡು ನೀನು...ಕಂಸದಲ್ಲಿ ನಿಮ್ಗೆ ಮಾತ್ರ ಬೇರೆ!!!!!!..ಹಾ ಹಾ...
ಬರ್ತಿರಪ್ಪಾ...
ಮುಂದಿನ ದೊಡ್ಡ ಬರಹಗಾರ್ತಿ ನೀನು...
ನಮಸ್ತೆ :)

ಸತೀಶ್ ನಾಯ್ಕ್ said...

ಲಯಬದ್ಧವಾದ ರಚನೆ ಚಿನ್ಮಯ್.. ಒಂದು ಕಾಲಕ್ಕೆ ದೇಶ ಭಕ್ತಿ ಗೀತೆ ಬರೆದು ಅದನ್ನ ನನ್ನಿಷ್ಟಕ್ಕೆ ಕಂಪೋಸ್ ಮಾಡಿ ಹಾಡೋದರಲ್ಲಿ.. ನಮ್ ಶಾಲೆಯ ಮಕ್ಕಳ ಬಳಿ ಹಾಡಿಸೋದರಲ್ಲಿ ಅಷ್ಟೊಂದು ತನ್ಮಯನಾಗಿರುತ್ತಿದ್ದೆ ನಾನು. ಆಗಲೇ ಆರು ವರ್ಷಗಳ ಹಿಂದಿನ ಕಥೆಯದು.. ಆ ದಿನಗಳನ್ನ ಮತ್ತೆ ಮೆಲುಕಿಸಿತು ನಿಮ್ಮ ಈ ಕವನ. ಇಷ್ಟವಾಯ್ತು.

ಒಂದು ಸಲಹೆ.. ದೇಶಭಕ್ತಿ ಗೀತೆಗಳು ಅಂದ್ರೆ ಅದರೊಳಗೆ ಒಂದಷ್ಟು ವೀರ ರಸ ಇದ್ದರೇನೆ ಮೆರುಗು. ಯಾಕಂದ್ರೆ ದೇಶ ಭಕ್ತಿ ಗೀತೆಗಳನ್ನ ಹಾಡುವಾಗ ನಮ್ಮ ಮೈ ರೋಮಗಳನ್ನ ನವಿರೇಳಿಸುವ ಶಕ್ತಿ ಆ ವೀರ ರಸಕ್ಕಿರುತ್ತದೆ. ಇನ್ಮುಂದಿನ ಬರಹಗಳಲ್ಲಿ ಪ್ರಯತ್ನ ಮಾಡಿ.. ಖಂಡಿತ ಒಂದೊಳ್ಳೆ ಗೀತೆ ನಿಮ್ಮಿಂದ ಉದಿಸಬಲ್ಲದು. :)

Anonymous said...

ಲಯಬದ್ದ, ಪ್ರಾಸಬದ್ದ ಕವಿತೆ ...ನಾಲಿಗೆಯಲಿ ನುಲಿದಾಡುವ ಪದಪುಂಜ :) ಚೆನ್ನಿದೆ ಚಿನ್ಮಯ್ :)

akshaya kanthabailu said...

ಪದಗಳಲ್ಲಿ ಚೈತನ್ಯ ಇದೆ ಶಕ್ತಿ ಇದೆ

ಚಿನ್ಮಯ ಭಟ್ said...

ಸತೀಶ್,
ತುಂಬಾ ಖುಷಿ ಆಯ್ತು ಕಣ್ರೀ ನಿಮ್ಮ ಕಮೆಂಟ್ ಓದಿ...
ಹಾಂ..ಅದೊಂದು ಮರೆತೇ ಹೋಗಿತ್ತು ಕಣ್ರಿ..
ದೇಶಭಕ್ತಿ ಗೀತೆ ಅಂದ್ಮೇಲೆ ಕೇಳಿದವನ ಮೈ ರೋಮಾಂಚಿತವಾಗದಿದ್ದರೆ ಅದೇನು ಛಂದ ಅಲ್ವಾ???
ಖಂಡಿತ ಈ ಬಗ್ಗೆ ಗಮನ ಹರಿಸ್ತೀನಿ...
ಧನ್ಯವಾದ ನಿಮ್ಮ ಅಮೂಲ್ಯ ಸಲಹೆಗೆ..
ಬರ್ತಾ ಇರಿ..
ನಮಸ್ತೆ :) :)

ಚಿನ್ಮಯ ಭಟ್ said...

ಹುಸೇನ್ ಜೀ,
ಸ್ವಾಗತ ನಮ್ಮನೆಗೆ ...
ಧನ್ಯವಾದ ನಿಮ್ಮ ಅಂದದ ಪ್ರತಿಕ್ರಿಯೆಗೆ...
ಬರ್ತಾ ಇರಿ..
ನಮಸ್ತೆ :)

ಚಿನ್ಮಯ ಭಟ್ said...

ಅಕ್ಷಯ,
ಸ್ವಾಗತ ಕಣೋ ನಮ್ಮನೆಗೆ...
ಬಹುಷಃ ಮೊದಲನೇ ಬಾರಿ ನಿನ್ನ ಪ್ರತಿಕ್ರಿಯೆ ಓದ್ತಾ ಇದೀನಿ...
ಖುಷಿ ಆಯ್ತೋ...
ಬರ್ತಾ ಇರು...
ನಿಮಗೆ ನನ್ನ ಪದಗಳಲ್ಲಿ ಚೈತನ್ಯ ಕಂಡರೆ ನನಗೆ ನಿಮ್ಮ ಅನಿಸಿಕೆಗಳಿಂದ ಚೈತನ್ಯ ಜಾಸ್ತಿಯಾಗುತ್ತದೆ :)..
ಧನ್ಯವಾದಗಳು...
ನಮಸ್ತೆ :)

ಮೌನರಾಗ said...

ಪ್ರೀತಿ ಪ್ರೇಮ ವಿರಹಗಳಲ್ಲಿ ಕಳೆದು ಹೋಗುತ್ತಿರುವ ಸಂದರ್ಭದಲ್ಲಿ ಚಂದದ್ದೊಂದು ಕವಿತೆ ಕಟ್ಟಿ ಕೊಟ್ಟಿದ್ಯೋ...
ಇಷ್ಟವಾಯಿತು... ಮುಂದುವರಿಸು..

ಚಿನ್ಮಯ ಭಟ್ said...

ಧನ್ಯವಾದ ಕಣೇ ಸುಷ್ಮಾ... :) :)

Bhavya Bollur said...

ivattu nimma blog oduva bhagya odagi bantu.. Deshabhaktigite tumba chennagide.. padagala balake spastavagide.. ottinalli udayonmuka kavi...