Saturday, April 20, 2013

ನಾಳೆಯಾ ಬೆಳಗನು.......

ಸಮಸ್ಯೆಗಳು ಎಲ್ಲರಲ್ಲೂ ಇದ್ದಿದ್ದೆ...ಒಬ್ಬೊಬ್ಬರಿಗೆ ಒಂದೊಂದು ತರಹದ್ದು...
ಚಾಕಲೇಟು ಸಿಕಲಿಲ್ಲವೆಂಬ ಬಾಲಕ,
ಹುಡುಗಿ ಸಿಗಲಿಲ್ಲವೆಂಬ ಯುವಕ,
ನಿನ್ನೆಯ ನೆನಪಲ್ಲಿ ಇಂದು ಪರಿತಪಿಸುವ ಮುದುಕ
ಹೀಗೆ ಪ್ರಾಯಶಃ ಅವರವರಿಗೆ ಅವರವರದೇ ಸಮಸ್ಯೆಗಳು....
ಆರಾಮಾಗಿ ಹಾರಾಡಿಕೊಂಡಿರುವ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡುವುದೇ ಬಹುಷಃ ಈ ಯೋಚನೆಗಳು...ಅವುಗಳನ್ನು ತಿಳಿಯಾಗಿಸಿವಾ ಎಂಬ ಆಶಯ ಹೊತ್ತ ಒಂದೆರಡು ಸಾಲುಗಳು ನಿಮ್ಮ ಮುಂದೆ....
ಎಂದಿನಂತೆ ಆತ್ಮೀಯತೆಯಿಂದ ದಯವಿಟ್ಟು   ಅನಿಸಿಕೆ,ತಪ್ಪು-ಒಪ್ಪುಗಳನ್ನು ಕಮೆಂಟಿಸಿ...ನನ್ನನ್ನು ಆಶೀರ್ವದಿಸಿ...




ನಾಳೆಯಾ ಬೆಳಗನು ಶಿಖರದೀ ನೋಡುವಾ,
ತೋಳಿನಾ ಬಲದಲೇ ಶರಧಿಯಾ ಈಜುವಾ

ಸವೆದಿಹ   ಹಾದಿಯ  ಋಣವದು    ಕಳೆದಿದೆ,
ಅವಿತಿಹ ಎದೆಯೊಳ  ದನಿಯದು ಮೊಳಗಿದೆ,
ನವಯುಗ ನಾಂದಿಗೆ  ಚಣವದು  ಮೊಳೆತಿದೆ,
ಸವಿಸವಿ   ಕನಸಿನ     ಸರಪಣಿ    ಸೆಳೆದಿದೆ.

ಜವರಾಯನ ಕರಿ ಮೊಸಳೆಯು  ಮುಳುಗಿದೆ,
ಬವಣೆಯ  ತೆರೆಗಳ  ನೆರೆಯದು    ಇಳಿದಿದೆ,
ಸಾವಿನ   ಸುಳಿಗಳ    ಭಯವದು   ಅಳಿದಿದೆ,
ಭವಿತವ್ಯದ  ಗೆರೆ    ಕೈಯ್ಯಲೆ    ಹೊಳೆದಿದೆ.

ಕವಿದಿಹ ಕರಿಮೆದೆ ಹನಿಯದು ಜೊಳಗಿದೆ,
ಭುವನದ ಹಾದಿಗೆ ಲಾಟೀನು    ಬೆಳಗಿದೆ.
ನಾವೆಯ ಮರೆತಿಹ ಪಯಣವು ಎಳೆದಿದೆ,
ಜವ್ವನದಾ   ಹಸಿ   ಹಂಪಲು    ಗಳತಿದೆ .

ನಾಳೆಯಾ ಬೆಳಗನು...............

(ಶಬ್ಧಾರ್ಥ : ಜವರಾಯ-ಯಮ ,ಭವಿತವ್ಯ-ಭವಿಷ್ಯ,ಮೆದೆ-ಗುಂಪು(ಸಾಮಾನ್ಯವಾಗಿ ಹುಲ್ಲಿನ ಕಟ್ಟನ್ನು ಮೆದೆ ಎಂದು ಬಳಸುತ್ತಾರೆ),ಭುವನ-ಭೂಮಿ,ಜಲ ,ಜವ್ವನ-ಯವ್ವನ )
-ಚಿನ್ಮಯ ಭಟ್ಟ




ಹಮ್...ನಿಜ ಹೇಳ್ಬೇಕು ಅಂದ್ರೆ  ನಾನೂ ಪ್ರಾಜೆಕ್ಟು,ಸೆಮಿನಾರು ಅವು ಇವು ಅಂತಾ ತಲೆ ಕೆಡಿಸಿಕೊಂಡು ಓಡಾಡುತ್ತಿದ್ದಾಗ,ನನಗೆ ಸ್ಪೂರ್ತಿಯಾಗಿದ್ದು ದಿನೇಶ ಮಾನೀರ್ ಅವರು ಕೊಟ್ಟ ಒಂದು ಛಾಯಾ ಚಿತ್ರ...ಅವರ ಒಂದು ಫೋಟೋ-ಬರಹಗಳ ಸರಣಿಯ ಒಂದು  ಭಾಗವಾಗಿ ನನಗೆ ಅವರ ಛಾಯಾ ಚಿತ್ರಕ್ಕೆ  ಒಂದೆರಡು ಸಾಲು ಬರೆಯುವ ಅವಕಾಶ ಸಿಕ್ಕಿತು....ಆ ಚಿತ್ರಕ್ಕೆ ಅವು ಸೂಕ್ತವಾದ ಸಾಲುಗಳು ಅವು ಹೌದೋ ಅಲ್ಲವೋ ಗೊತ್ತಿಲ್ಲ,ಆ ಕ್ಷಣದಲ್ಲಿ ನನ್ನ ಮನಸ್ಥಿತಿಯಲ್ಲಿ ಹೊಳೆದ ಸಾಲುಗಳು ಇವು...ಅದನ್ನು ಪ್ರೀತಿಯಿಂದ ಅವರ ವೆಬ್ ಸೈಟಿನಲ್ಲಿ ಪ್ರಕಟಿಸಿ,ನನ್ನನ್ನು ಪ್ರೋತ್ಸಾಹಿಸಿದ್ದಾರೆ... ದಯವಿಟ್ಟು ಒಮ್ಮೆ ಕಣ್ಣಾಡಿಸಿ..
(ಆ ಸುಂದರ  ಛಾಯಾ ಚಿತ್ರ ಎಲ್ಲಿ ನನ್ನ ಸಾಹಿತ್ಯವನ್ನು ನುಂಗಿ ಬಿಡುವುದೋ ಎಂಬ ಹೊಟ್ಟೆಕಿಚ್ಚಿನಿಂದ ಚಿತ್ರವನ್ನು ಇಲ್ಲಿ ಹಾಕಿಲ್ಲ...ಕ್ಷಮಿಸಿ) 

ಹಾಂ..ಹೇಳಕ್ ಮರ್ತಿದ್ದೆ ..ಇವತ್ತು ಎರಡನೇ ಇಂಟರ್ನಲ್ಸು ಮುಗೀತು...:D..
ಪರವಾಗಿಲ್ಲ,ಸಾಧಾರಣದಿಂದ ಮಧ್ಯಮ ....ಹಾ ಹಾ...

ಸರಿ.... ಕಾಯ್ತಿರ್ತೀನಿ,ನಿಮ್ ಕಮೆಂಟ್ ಗೆ..ಮರಿಬೇಡಿ...:)
ನಮಸ್ತೆ...

49 comments:

Badarinath Palavalli said...

ಬದುಕಲ್ಲಿ ಸಕಾರಾತ್ಮಕ ಧೋರಣೆಯನ್ನು ತುಂಬುವ ಇಂತಹ ಕವಿತೆಗೆ ನಮ್ಮ ಉಧೋ ಇದೇ.

ಲಯಕ್ಕೆ ಬಳಸಿದ ಪದ ಮತ್ತು ಅವು ಉಲ್ಲಸಿಸುವ ಪರಿ ಮೆಚ್ಚುಗೆಯಾಯಿತು.

MPPRUTHVIRAJ KASHYAP said...

ಭಟ್ರೆ ನಿಮ್ಮ ಕವಿತ್ವ ತುಂಬಾ ಚೆನ್ನಾಗಿದೆ. ಈ ಕವನದ ಆಶಯವು ಸಹ ತುಂಬಾ ಚೆನ್ನಾಗಿ ನಿಮ್ಮ ಕವನದಲ್ಲಿ ನಿರೂಪಿಸಿದ್ದೀರಿ. ಹೇಗಾದರೂ ಆಗಲಿ ಈ ಕವನದ ಮೂಲಕ ಒಂದು ಚಿಂತನೆಗೆ ಓದುಗನ್ನು ಪ್ರೇರೇಪಿಸಿದ್ದೀರಿ ಅದಕ್ಕೊಂದು ಸಲಾಮ್.

ಮತ್ತೇನಿಲ್ಲ ನಿಮ್ಮ ಹಿಂದಿನ ಕವನಗಳಲ್ಲೂ ನೋಡಿದ್ದೇನೆ ಓದುಗನಿಗೆ ನಿಮ್ಮ ಕವನದ ಸಿಹಿ ಇನ್ನೇನು ಸವಿಬೇಕು ಅನ್ನೋ ಹೊತ್ತಿಗೆ ಅದು ಮುಗಿದೇ ಹೊಗಿರುತ್ತೆ. ನನ್ನ ವಿಷ್ಲೇಷಣೆ ತಪ್ಪಿರಬಹುದು ಆದರೂ ಅನ್ನಿಸಿದ್ದು ಹೇಳಿರುವೆ. ನಿಮ್ಮ ಕವನಗಳನ್ನು ಇಷ್ಟಕ್ಕೆ ಅಂತ ನಿಮಗೆ ನೀವೆ ಕೋಟೆ ಕಟ್ಟಿಕೊಳ್ಳುವ ಬದಲು ಅದನ್ನು ಬೆಳೆಯಲು ಬಿಡಿ ಪರಿಪಕ್ವವಾಗಿ ಪರಿಪೂರ್ಣತೆ ಹೊಂದಿದ ಮೇಲೆ ಅದಕ್ಕೊಂದು ರೂಪ ಕೊಟ್ಟರೆ ನಿಮ್ಮಿಂದ ತುಂಬಾ ಚೆನ್ನಾಗಿರುವ ಕವಿತೆಗಳು ಬರಬಹುದು ಅನ್ನೋದು ನನ್ನ ಅಭಿಪ್ರಾಯ. ತಪ್ಪು ತಿಳಿಯ ಬೇಡಿ.ಗುರುಗಳಿಂದ ಶಿಷ್ಯರು ಬಯಸುವುದರಲ್ಲಿ ತಪ್ಪಿಲ್ಲ ಅಂದುಕೊಂಡಿರುವೆ.

ಸುಬ್ರಮಣ್ಯ said...

:-)

balasubramanya said...

ಜೀವನದ ಅರ್ಥ ತಿಳಿಸುವ ಸುಂದರ ಕವಿತೆ, ಚಿನ್ಮೈ ನಿಮ್ಮ ಕವಿತೆ ಓದಿದರೆ ಹಲವು ಹೊಸ ಶಬ್ಧಗಳು ಸಿಕ್ಕುತ್ತವೆ, ನಿಮ್ಮ ಕವಿತೆಗಳ ಯಾನ ಮುಂದುವರೆಯಲಿ. ಕವಿದಿಹ ಕರಿಮೆದೆ ಹನಿಯದು ಜೊಳಗಿದೆ,

ಭುವನದ ಹಾದಿಗೆ ಲಾಟೀನು ಬೆಳಗಿದೆ.

ನಾವೆಯ ಮರೆತಿಹ ಪಯಣವು ಎಳೆದಿದೆ,

ಜವ್ವನದಾ ಹಸಿ ಹಂಪಲು ಗಳತಿದೆ . ನನಗೆ ಇಷ್ಟವಾದ ಸಾಲುಗಳು, ಆದರೆ ಇಲ್ಲಿ ಲಾಟೀನು ಬದಲಾಗಿ ಕಂದಿಲು ಎಂಬ ಪದ ಸೂಕ್ತವಾಗಿತ್ತೇನೋ ಆಲ್ವಾ ?? ಹಾಗೆ ನಿಮ್ಮ ಗೆಳೆಯ ಚಿತ್ರ ಚೆನ್ನಾಗಿದೆ ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ, ಮತ್ತು ಒಳ್ಳೆಯ ಕವಿತೆಗೆ ನಿಮಗೆ ನನ್ನ ಪ್ರೀತಿಯ ಶುಭ ಹಾರೈಕೆ.

shivu.k said...

ಚಿನ್ಮಯ್,
ಬದುಕಿನಲ್ಲಿ ಗುಣಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕೆನ್ನುವ ಕವನ ಅಲ್ಲ ಕವಿತೆ ಚೆನ್ನಾಗಿದೆ. ಕವಿತೆ ಅಂತ ಏಕೆ ಹೇಳಿದೆನೆಂದರೆ ಇದಕ್ಕೆ ರಾಗ ಸಂಯೋಜನ ಮಾಡಬಹುದೇನೋ ಅನ್ನಿಸಿತು..

ಚಿನ್ಮಯ ಭಟ್ said...

ಬದರಿ ಸರ್....
ನಿಮ್ಮ ಅಕ್ಕರೆಯ ಆಶೀರ್ವಾದಗಳೆ ನಮ್ಮ ಎಳೆಯ ಬರಹಗಳಿಗೆ ಶ್ರೀರಕ್ಷೆ....
ಉಲ್ಲಸಿಸುವ ಎಂಬ ಪದ ಗೊತ್ತಿರಲಿಲ್ಲ....
ಧನ್ಯವಾದಗಳು ಅದಕ್ಕಾಗಿ ...
ಮತ್ತೆ ನನಗೆ ಪ್ರತಿಸಲ ಏನಾದರೂ ಬರೆದಾಗಲೂ ಏನೋ ಒಂದು ಅಳಕು...ಎಲ್ಲಿ ತಪ್ಪಾಗಿದ್ಯೋ??? ಈ ಪ್ರಯೋಗ ಸರಿಯೋ ತಪ್ಪೋ..ಎಂಬಂಥಹ ವಿಚಾರಗಳು ಕೊರೆಯುತ್ತಿರುತ್ತವೆ...ನಿಮ್ಮ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಏನೋ ಒಂದು ಸಮಾಧಾನ...
ವಂದನೆಗಳು ಸಾರ್....
ನಮಸ್ತೆ :) :)

ಚಿನ್ಮಯ ಭಟ್ said...

ಪ್ರಥ್ವಿರಾಜರೇ,
ಧನ್ಯವಾದಗಳು ಮೊದಲನೇಯದಾಗಿ ನಿಮ್ಮ ಮುಕ್ತ ಮನಸ್ಸಿನ ಪ್ರತಿಕ್ರಿಯೆಗಾಗಿ....
ಹಮ್...ನಿಜ ಅದು ನನ್ನ ಚಿಂತನೆಗಳಷ್ಟೇ..ಅದು ಯಾರಾದರೂ ಕಷ್ಟದಲ್ಲಿರುವವರಿಗೆ ಸ್ಪೂರ್ತಿಯಾದರೆ ನಾ ಬರೆದದ್ದೂ ಸಾರ್ಥಕ...
ಇನ್ನು ಅಂತ್ಯದ ಬಗ್ಗೆ...
ಖಂಡಿತ ನೀವು ಹೇಳಿದ್ದು ನಿಜ...ನನಗೆ ಕವನಗಳ ಅಂತ್ಯದ ಬಗ್ಗೆ ನಿಜವಾಗಿಯೂ ಸರಿಯಾಗಿ ಅರ್ಥವಾಗಿಲ್ಲ...ಮೊದಲಿನ ಎರಡು ಸಾಲುಗಳು,ಅದಕ್ಕೊಂದು ಭಾವದ ಎಳೆ ಸಿಕ್ಕ ತಕ್ಷಣ ಎಲ್ಲಾದರೂ ಒಂದೆಡೆ ಬರೆದಿಟ್ಟುಕೊಂಡು ಬಿಡುತ್ತೇನೆ...ಆಮೇಲೆ ಇನ್ನೊಂದು ದಿನ ಮನಸ್ಸು ಬಂದಾಗ,ಅದನ್ನು ಬರೆಯುವುದು...
ಆದರೆ ಬರೆಯುತ್ತಾ ಬರೆಯುತ್ತಾ ಕೆಲವೊಮ್ಮೆ ಎಲ್ಲಿಂದ ಎಲ್ಲಿಗೋ ಹೋಗಿಬಿಡುತ್ತೇನೆ ಅಂತಾ ಅನಿಸಿಕ್ಕೆ ಶುರುವಾಯ್ತು..ಹಾಗಾಗಿ ಪ್ರತಿ ಕವನಕ್ಕೂ ಒಂದಿಷ್ಟು ಯೋಚಿಸಿ ಒಂದು ಭಾವ ಸಂಚಯದ ಚೌಕಟ್ಟನ್ನು ಹಾಕಿಕೊಂಡಿರುತ್ತೇನೆ..ಅಷ್ಟರ ಒಳಗೇ ಓಡಾಡುತ್ತಾ,ಅದಕ್ಕೊಂದಿಷ್ಟು ಪದಗಳನ್ನು ಹುಡುಕುತ್ತಾ ಆಟವಾಡುತ್ತಿರುತ್ತೇನೆ..
ಪ್ರಾಯಶಃ ನನ್ನ ಈ ರೀತಿಯೇ ತಪ್ಪಿರಬಹುದೇನೋ...ಗೊತ್ತಿಲ್ಲ...ಸಧ್ಯಕ್ಕೆ ಕಂಡುಕೊಂಡ ಮಾರ್ಗ ಇದು ಅಷ್ಟೇ ...ನೋಡ್ತೀನಿ ..ನೀವು ಹೇಳಿದನ್ನೂ ಯೋಚನೆ ಮಾಡ್ತೀನಿ...
ಮತ್ತೆ ಆ ಗುರುಗಳು ಅಂತೆಲ್ಲಾ ಹೇಳ್ಬೇಡಿ ದಯವಿಟ್ಟು....
ನಾವೆಲ್ಲರೂ ಸಾಹಿತ್ಯದವನ್ನು ಆಸ್ವಾದಿಸುವೆಡೆಗೆ ಹೊರಟಿರುವ ಸಹಪ್ರಯಾಣಿಕರು ಆಷ್ಟೇ...

ಧನ್ಯವಾದ ನಿಮ್ಮ ಅಕ್ಕರೆಯ ಪ್ರತಿಕ್ರಿಯೆಗೆ...ಸದಾ ನಿಮ್ಮ ಸಲಹೆಗಳಿಗೆ ಸುಸ್ವಾಗತ...
ನಮಸ್ತೆ :)

ಚಿನ್ಮಯ ಭಟ್ said...

ಧನ್ಯವಾದ ಸುಬ್ರಹ್ಮಣ್ಯ ಮಾಚಿಕೊಪ್ಪಜೀ :) :)

ಚಿನ್ಮಯ ಭಟ್ said...

ಬಾಲು ಸರ್.....
ಧನ್ಯವಾದ ನಿಮ್ಮ ಅಕ್ಕರೆಯ ಅನಿಸಿಕೆಗೆ....
ಅಲ್ಲಿ ಕರಿಮೆದೆ ಅನ್ನುವ ಪದ ನನಗೆ ತುಂಬಾ ಇಷ್ಟವಾಯ್ತು...
ನಮ್ಮ ಕಡೆ ಹುಲ್ಲಿನ ಕಟ್ಟುಗಳಿಗೆ ಮೆದೆ ಎಂದು ಬಳಸುತ್ತಾರೆ...ಅವು ಒತ್ತೊಟ್ಟಿಗಿರುತ್ತವೆ...
ಮಳೆಯ ಹನಿಗಳು ಮೋಡದಲ್ಲಿ ಇರುವುದೂ ಅದೇ ಥರ ಅಲ್ವಾ???ಹಂಗಾಗಿ ಬಳಸಿದೆ......
ಇನ್ನು ಲಾಟೀನಿನ ವಿಚಾರ...
ಹಮ್...ಕಂದಿಲು ಎನ್ನುವುದರ ಬಳಕೆ ಸ್ವಲ್ಪ ಕಡಿಮೆ ಇರಬೇಕು ನಮ್ಮಲ್ಲಿ..ನಾ ಜಾಸ್ತಿ ಕೇಳಿಲ್ಲ...
ದೀಪ ತೋರಿಸಲು,ಸಂಜೆ ಹೊತ್ತಿಗೆ ಲಾಟೀನು ತೋರಿಸು ಎಂದು ಬಳಸುತ್ತಿದ್ದರು ಅಜ್ಜ....
ಅದು ನೆನಪಾಗಿ,ಆ ಸಾಲುಗಳನ್ನ್ನು ಬರೆದದ್ದು....ಮಾರ್ಗದರ್ಶನಕ್ಕೆ ಉಪಮೆಯಾಗಿ...
ನೋಡುವೆ..ಕಂದಿಲು ಎನ್ನುವುದೂ ಸಹ ಚೆನ್ನಾಗಿ ಹೊಂದಿಕೆ ಆಗತ್ತೆ ಅಲ್ಲಿಗೆ...ಮೇಲಿಂದ ಅದು ಕನ್ನಡ ಶಬ್ಧವೇ ಇರಬೇಕೇನೋ....ಯೋಚನೆ ಮಾಡುತ್ತೇನೆ ಸರ್...
ಖುಷಿ ಆಯ್ತು ನಿಮ್ಮ ಆ ಸಲಹೆ ಓದಿ....ಧನ್ಯನಾದೆ....
ಬರ್ತಾ ಇರಿ ಸರ್...
ವಂದನೆಗಳು..
ನಮಸ್ತೆ :)...

Digwas Bellemane said...

ಚಿನ್ಮಯ್...ಕದ್ದಿದ್ದಲ್ಲ..... ಕಾಪಿ ಹೊಡೆದು ಬರೆದಿದ್ದಲ್ಲ ... ಗೆಳೆಯರಿಂದ ಎರವಲು ಪಡೆದು ಕೊನೆಯಲ್ಲಿ ನನ್ನದೆಂಬಂತೆ ಹೆಸರು ಹಾಕಿಕೊಂಡಿದ್ದಲ್ಲ....ಸುಂದರ... ಕವನ ಅಲ್ಲ ಕವಿತೆ ...

ಚಿನ್ಮಯ ಭಟ್ said...

ಶಿವು ಸರ್....
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕಾಗಿ...
ಕವನಕ್ಕೂ ಕವಿತೆಗೂ ಇರುವ ವ್ಯತ್ಯಾಸವನ್ನೂ ಹೇಳಿಕೊಟ್ಟಿರಿ,ವಂದನೆಗಳು...
ನಾನು ಕಾಯ್ತಾ ಇದೀನಿ ಇವಿಗಳಿಗೆ ಸಂಗೀತದ ಜೀವ ಬರುವುದನ್ನು...ಯಾವತ್ತು ಬರುವುದೋ ಏನೋ...
ಇರ್ಲಿ...
ಖುಷಿ ಆಯ್ತು....
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ಆಹಾ...ದಿಗ್ವಾಸಣ್ಣಾ...
ಕವನ ಬರೀಲಿಕ್ಕೆ ಕವನನೇ ಸ್ಪೂರ್ತಿ ಆಯ್ತಾ???
ಹಾ ಹಾ....ಧನ್ಯವಾದ :) :)...
ಖುಷಿ ಆಯ್ತು...ಬರ್ತಾ ಇರಿ,,,
ನಮಸ್ತೆ :) :)

ಮನಸು said...

ಹೊಸ ಹೊಸ ಪದಗಳನ್ನ ಹುಡುಕಿ ತುಂಬಾ ಚೆನ್ನಾಗಿ ಬರಿತೀರಿ.. ತುಂಬಾ ಚೆನ್ನಾಗಿ ಬರೆದಿದ್ದೀರಿ ಜೀವನಕ್ಕೆ ಒಂದು ಸಕಾರಾತ್ಮಕ ಕವಿತೆ. ಹೀಗೆ ಬರೆಯುತ್ತಲಿರಿ ಶುಭವಾಗಲಿ.

Imran said...

ಚಿನ್ಮಯ್ ನಿಮ್ಮ ಕವಿತೆಗಳನ್ನ ಓದುವುದೇ ಒಂದು ಖುಷಿ ನಮಗೆಲ್ಲ :d

ವೈಯಕ್ತಿಕವಾಗಿ ನಾ ಕಲಿತದ್ದು ತುಂಬಾನೇ ಇದೆ ನಿಮ್ಮಿಂದ :)

ನನಗೆ ಮಾತ್ರ ಅಲ್ಲ, ತುಂಬಾ ಜನರಿಗೆ ನೀವು ಕನ್ನಡದ ಭಿನ್ನ ಭಿನ್ನ ಪದಗಳನ್ನ ಅರ್ಥ ಸಮೇತ ಪರಿಚಿಯಿಸಿ, ಅವುಗಳನ್ನ ಕವಿತೆಗಳಲ್ಲಿ ಹೇಗೆ ಹೊಸೆಯಬಹುದೆಂದು ಕೂಡ ತೋರಿಸುತ್ತಲೇ ಬಂದಿದ್ದೀರಿ. personally ನನ್ನ ೧ ಥ್ಯಾಂಕ್ಸ್ ನಿಮಗೆ.

ಮತ್ತೆ ಹೇಳುತ್ತಿದ್ದೇನೆ ..... "ನಿಮ್ಮಿಂದ ನನ್ನ ಕನ್ನಡ ತುಂಬಾ ಸುಧಾರಿಸುತ್ತಿದೆ"



ಇನ್ನು ಕವಿತೆಯ ಬಗ್ಗೆ ಹೇಳುವುದಾದರೆ, ಹೋಗಪ್ಪಾ ನೀವು ನನಗೆ ಒಂದೇ ಸಲಕ್ಕೆ ಅರ್ಥ ಆಗೋ ಥರ ಬರೆಯೋದೇ ಇಲ್ಲಾ :-/

೩ ಸಲಾ ಓದಿದೆ {ಚಿನ್ಮಯ ಭಟ್ ಶಬ್ಧಕೋಶ ದ ಸಹಾಯದೊಂದಿಗೆ }

ಕವಿತೆಯ ಹರಿವು ಸೊಗಸಾಗಿದೆ.

ತುಂಬಾ ಇಷ್ಟವಾಯಿತು ನಿಮ್ಮ ಕವಿತೆ ಸಾರಾಂಶ. :) ಹೀಗೇ ಇನ್ನೂ ಬರೆಯುತ್ತಲೇ ಇರೀ ನಮಗೋಸ್ಕರ :)

between "ಗಳತಿದೆ" ಪದದ ಸ್ಪಷ್ಟ ಅರ್ಥ ಸಿಕ್ಕಿಲ್ಲ ನನಗೆ :o

Dr.D.T.Krishna Murthy. said...

ಚಿನ್ಮಯ್;ಕವಿತೆ ಹೀಗೇ ಇರಬೇಕು ಎನ್ನುವ ಯಾವ ಚೌಕಟ್ಟೂ ಇಲ್ಲ.ಇದನ್ನುಕೆ.ಎಸ್.ನರಸಿಂಹ ಸ್ವಾಮಿಯವರು ತಮ್ಮ ಖ್ಯಾತ ಕವನಸಂಕಲನದ ಮುನ್ನುಡಿ ಯೊಂದರಲ್ಲಿ ಹೇಳಿದ್ದಾರೆ.ನಿಮ್ಮ ಛಾಪು ಮೂಡಿಸಿ.ಸ್ವಂತಿಕೆ ಇರಲಿ.ಜೀವನದಲ್ಲಿ ಸಮಸ್ಯೆಗಳು ಹಾಸು ಹೊಕ್ಕಾಗಿವೆ.ಇದು ನನ್ನ ಅರವತ್ತು ವರ್ಷದ ಅನುಭವ.ನೀವು ಹೇಳಿದಂತೆ ಯಾವ ಒಂದು ಹಂತದಲ್ಲೂ, ಅದರದ್ದೇ ಸಮಸ್ಯೆ ಗಳಿವೆ.ಆದರೆ ಬಾಳು ಬಾಳದೆ ಬಿಡದು.ಆಶಾವಾದದ ಹಗ್ಗವನ್ನು ಹಿಡಿದು ಸಮಸ್ಯೆಯ ಸೇತುವೆಯನ್ನು ದಾಟಬೇಕು.ಬೇರೆ ದಾರಿ ಇಲ್ಲ.ಚಂದದ ಕವಿತೆ.ಪ್ರಯತ್ನ ಮುಂದುವರೆಯಲಿ.ನಿಮ್ಮಿಂದ ಇನ್ನೂ ಉತ್ತಮ ಕವಿತೆಗಳು ಬರಲಿ.ನಿಮ್ಮ ಕವಿತೆ ಓದಿ ಮಂಕು ತಿಮ್ಮನ ಕಗ್ಗದ "ಸತ್ತೆನೆಂದೆನಬೇಡ,ಸೋತೆನೆಂದೆನಬೇಡ"ಎಂದು ಶುರುವಾಗುವ ಕಗ್ಗದ ಸಾಲುಗಳು ನೆನಪಾದವು.ಶುಭಮಸ್ತು.ನಮಸ್ಕಾರ.

Shruthi B S said...

ಚಿನ್ಮಯ್ ಕವನದ ಅದ್ಭುತವಾಗಿದೆ... ನನಗೆ ಈ ರೀತಿಯ ಕವನಗಳು ಬಹಳ ಇಷ್ಟ.. ಹೊಸ ಭರವಸೆ, ಹೊಸ ಕನಸುಗಳನ್ನು ಹುಟ್ಟುಹಾಕುವ೦ತಹ, ಆತ್ಮವಿಶ್ವಾಸ ಹೆಚ್ಚಿಸುವ ಕವನಗಳು ನನಗೆ ಬಹಳ ಇಷ್ಟ.... ನಾನು ಆಗಾಗ "ಕಾಯ್ ಪೊ ಚೆ" ಚಿತ್ರದ ರೂಟೆ ಕ್ವಾಬೊ೦ ಕೊ ಮನಾ ಲೇ೦ಗೆ ಹಾಡನ್ನು ಕೇಳುತ್ತಿರುತ್ತೇನೆ... ಇನ್ನೊ೦ದು ಹಾಡಿದೆ, ’ಬಾವರಾ ಮನ್ ದೇಕ್ನೆ ಲಗಾ ಎಕ್ ಸಪ್ನಾ’ ಅ೦ತ ಅದೂ ಕೂಡ ನನಗೆ ಬಹಳ ಇಷ್ಟ....:) ನಿನಗೆ ಬೇಕಾದ್ರೆ ಅದನ್ನ ಕಳಿಸ್ತೀನಿ... ಕೇಳು...:)
ಆ ಚಿತ್ರವನ್ನು ನೋದಿದೆ ಚಿನ್ಮಯ್... ಅದ್ಭುತವಾಗಿದೆ.. ಸುಮ್ಮನೆ ನೋಡುತ್ತಿದ್ದರೆ ಸಾಕು ಮನಸ್ಸಿನಲ್ಲಿ ಭರವಸೆಗಳ ಸಾಗರವೇ ಪ್ರವಹಿಸುತ್ತದೆ. ನೀ ಹೇಳಿದ೦ತೆ ಚಿತ್ರ ಸಾಹಿತ್ಯವನ್ನು ನು೦ಗಿ ಹಾಕುತ್ತದೆ..

Unknown said...



ಚಿನ್ಮಯಣ್ಣ ಆ ನಿರಾಸೆಯ ಮೇರು ಹಂತದ ಫೊಟೋ ದಲ್ಲಿ ಪ್ರಾಮಾಣಿಕವಾಗಿ ನಂಗೆ ಕಂಡಿದ್ದು ಇದು ....
ಮೋಡಗಟ್ಟಿದ ಆಗಸದೊಟ್ಟಿಗೆ ಪೈಪೋಟಿಗೆ ಬರುತ್ತಿರೋ ಜಡಗಟ್ಟಿದ ಮನಸ್ಸು .ಬೇಸರವಾಗ್ತಿರೋ ಏಕಾಂತ .....ಸಹ್ಯವಾಗದ ಮೌನ ...ಕಣ್ಣು ಹಾಯಿಸಿದಷ್ಟೂ ದೂರ ಬರಿಯ ಕತ್ತಲು ಬೆಳಕನ್ನ ಹುಡುಕ ಹೊರಟರೆ ಸಿಗೋ ಹತಾಶೆಯ ಭಾವ..ಈಜಿ ಆ ತೀರ ಸೇರಲಾಗದ ಅಸಹಾಯಕ ನೋಟ ..ದ್ರುಷ್ಟಿ ಮಾತ್ರ ದಿಗಂತದೆಡೆಗೆ ...
ಪಯಣ ಸಾಗರದಾಚೆಗೆ
ಆದರೂ ಅದಕ್ಕೊಂದು ಚೈತನ್ಯ ಕೊಟ್ಟು ನಾಳೆಗೆ ಇನ್ನೂ ಬದುಕಿದೆ ಅನ್ನೋ ತರ ಬಿಂಬಿಸಿರೋ ನಿಮ್ಮ ಧನಾತ್ಮಕ ಪ್ರೇರಣೆಗೊಂದು ಶರಣು :)
ಹಮ್ !! ಎರಡನೆ ಇಂಟರ್ನಲ್ ಯಾವಾಗ್ ಮುಗ್ಯುತ್ತೋ ಅಂತ ಕಾಯ್ತಾ ಇದ್ವಿ ಚಿನ್ಮಯಣ್ಣನ ಕವನ ಓದೋಕೆ ;)
ಬರೀತಾ ಇರಿ ...ನಮಸ್ತೆ

dinesh maneer said...

really nice, wish to see more and more in the coming years
rgds

ಜಲನಯನ said...

ಚಿನ್ನು, ಬಲು ಚೆನ್ನು..ಈ ಪೆನ್ನು ಬರೆದರೆ ಪದಗಳೇ ಹೊನ್ನು.....
ಜವರಾಯನ ಕರಿ ಮೊಸಳೆಯು ಮುಳುಗಿದೆ,

ಬವಣೆಯ ತೆರೆಗಳ ನೆರೆಯದು ಇಳಿದಿದೆ,

ಸಾವಿನ ಸುಳಿಗಳ ಭಯವದು ಅಳಿದಿದೆ,

ಭವಿತವ್ಯದ ಗೆರೆ ಕೈಯ್ಯಲೆ ಹೊಳೆದಿದೆ
ಜೀವನದ ಕೊನೆಯಾಟದ ಫಲಿತಾಂಶ ಏನೆಲ್ಲಾ ಎಂಬುದನ್ನು ಈ ಸಾಲುಗಳು ಬಿಚ್ಚಿಡುತ್ತವೆ. ಚನ್ನಾಗಿದೆ.
(ತಮಾಶೆಗೆ: ಕೊನೆಯಲ್ಲಿ ಪದ ಅರ್ಥ ದ ನಂತರ -ಚಿನ್ಮಯ -ಭಟ್ಟ ಅಂತ ಓದ್ಕೊಂಡು ನಕ್ಕೆ.....)

ಚಿನ್ಮಯ ಭಟ್ said...

ಸುಗುಣಾ ಮೇಡಮ್....
ಧನ್ಯವಾದಗಳು ಮೇಡಮ್...
ನಿಮ್ಮ ಹಾರೈಕೆಗಳೇ ನಮ್ಮ ಬರವಣಿಗೆಗೆ ಬಲ...
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ರಾಘವ್,
ಧನ್ಯವಾದಗಳು ನಿಮ್ಮ ಚೆಂದದ ಪ್ರತಿಕ್ರಿಯೆಗೆ....
ನನಗೂ ಸಹಾ ನಿಮ್ಮ ಕಮೆಂಟುಗಳನ್ನು ಓದುವುದೆಂದರೆ ಅದೇನೋ ಒಂದು ಹೊಸತನ ಇದ್ದೇ ಇರುತ್ತದೆ ಎಂಬ ವಿಶ್ವಾಸ....
ಹಮ್...ಧನ್ಯವಾದ ನಾನು ನಿಮಗೆ ಹೇಳ್ಬೇಕು ಯಾಕಂದ್ರೆ ಸಾಮಾನ್ಯವಾಗಿ ಎಲ್ಲ ಕಡೆ ಬಳಕೆಯಿಲ್ಲದ ಪದಗಳನ್ನು ಬಳಸಿ ಏನೇನೋ ಗೀಚಿದರೂ ಸಹ ಪ್ರೀತಿಯಿಂದ ಅದನ್ನು ಆ ಪ್ರಯೋಗವನ್ನು ಪ್ರಶಂಸಿದ್ದೀರಿ...ನನಗೆ ಇನ್ನೂ ಹೊಸ ಪದಗಳನ್ನು ಬಳಸುವಂತೆ ಆ ಮೂಲಕ ನನ್ನನ್ನು ನಾನು ಇನ್ನುಷ್ಟು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದೀರಿ...ನಾನೇನೂ ಜಾಸ್ತಿ ಸಂಶೋಧಿಸಿ ಎಲ್ಲಾ ತರುವುದಲ್ಲಾ,ನಮ್ಮ ಮನೆಯ ಕಡೆ ಬಳಸುವುದನ್ನೇ ಉಪಯೋಗಿಸುತ್ತೇನೆ ಅಷ್ಟೇ....

ಇನ್ನು ಕವಿತೆಯ ಬಗ್ಗೆ...
ಏನೋ ನನಗನಿಸಿದ ಕೆಲವನ್ನು ನಿಮ್ಮ ಮುಂದಿಟ್ಟಿದ್ದೇನೆ...ಅದು ಇಷ್ಟವಾದರೆ ಅದು ನನ್ನ ಪುಣ್ಯ :)..
ಮತ್ತೆ ಗಳತಿದೆ ಅಂದರೆ (ಕಳತಿದೆ ಅಂತಾ ಕೆಲಕಡೆ ಬಳಸ್ತಾರಂತೆ,ಸ್ನೇಹಿತೆಯೊಬ್ಬಳು ಹೇಳಿದ್ದು)ಪಕ್ಕಾ ಶಬ್ಧ ಗೊತ್ತಿಲ್ಲ..ಅದನ್ನು ಬಳಸೋದು ಹೆಂಗೆ ಅಂದ್ರೆ,"ಕಾಯಿ ಹಣ್ಣಾಯಿತಾ" ಅನ್ನೊದನ್ನಾ ಕೇಳಕ್ಕೆ ,"ಹಣ್ಣು ಗಳತಿದ್ಯಾ" ಅಂತಾ ಕೇಳ್ತಾರೆ...ಅರ್ಥನಾ ನೀವೆ ಅರ್ಥ ಮಾಡ್ಕಳಿ ;)..ಇಲ್ಲಿ ಯೌವ್ವನದ ಚಂಚಲತೆ ಹೋಗಿ ಮನಸ್ಸು ಪಕ್ವವಾಗಿದೆ ಎಂಬುದನ್ನು ಹೇಳಲು ಅದನ್ನು ಬಳಸಿದೆ...


ಎಯ್ ಥೋ ಇದು ಸಖತ್ ಪದ್ದತಿ ಪ್ರಕಾರ ಮಾತಾಡಿದ ಹಂಗ್ ಆಯ್ತಪಾ...ಈಗ ನೋಡಿ...
ಗುರುಗಳೆ ನೀವು ಈ ಥರ ಚಿಕ್ಕ ಚಿಕ್ಕ ಅನಿಸಿಕೆ ಬರ್ದು ನನ್ನ ಬ್ಲಾಗನ್ನಾ ತುಂಬಾ ಚೆನಾಗ್ ಕಾಣ್ಸೋ ಥರ ಮಾಡಿಡ್ತೀರಾ....ದೃಷ್ಟಿ ತೆಗ್ಸೋಕೆ ಯಾರ್ನಾದ್ರೂ ಕಳ್ಸಿ ಕೊಡಿ ಪ್ಲೀಸ್..ಹಾ ಹಾ....
ಬರ್ತಾ ಇರಿ ,ಬೆಳಗಾವಿ ಇಂದಾ ಅವಾಗಾವಾಗ :)D...
ಟಾಟಾ :)

ಚಿನ್ಮಯ ಭಟ್ said...

ಡಾಕ್ಟ್ರೇ...
ಖಂಡಿತವಾಗಿಯೂ ಕವಿತೆಗೆ ಚೌಕಟ್ಟು ಇಲ್ಲ ಎನ್ನುವ ಸಂಪ್ರದಾಯ ನಮ್ಮ ಹೊಸಗನ್ನಡ ಸಾಹಿತ್ಯದಲ್ಲಿದೆ...
ನನ್ನ ವಿಚಾರ ಇಷ್ಟೇ..ಇದನ್ನು ನಾನೇನೂ ಎಲ್ಲರಿಗೂ ಹೇಳುತ್ತಿಲ್ಲ,ನಮ್ಮಂಥಹ ಏಳಸುಗಳಲ್ಲಿ ನಾ ಕಂಡ ಒಂದು ತೊಂದರೆ ಎಂದರೆ ಕವನದಲ್ಲಿ ವಿಚಾರಧಾರೆಯ ಸ್ಥಳಾಂತರ...ನಾವು ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ಹೋಗಿ ಇನ್ನೆಲ್ಲಿಗೋ ಹೋಗಿ ನಿಂತುಬಿಡುತ್ತೇವೆ ಅನಿಸಿತು...ಹಾಗಾಗಿ ಅದನ್ನು ತಡೆಯಲು ಒಂದಿಷ್ಟು ವಿಷಯ ವರ್ತುಲಕ್ಕೆ ನನ್ನನ್ನು ನಾನು ಸೀಮಿತಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ...
ಗೊತ್ತಿಲ್ಲ ಸರ್ ಅದು ಎಷ್ಟರ ಮಟ್ಟಿಗೆ ಸರಿ ಅಂತಾ...
ನನಗೆ ತಿಳಿದಂತೆ ಮಾಡುತ್ತಿರುವ ಒಂದಿಷ್ಟು ಪ್ರಯತ್ನಗಳು ಅಷ್ಟೇ...
ನೋಡುತ್ತೇನೆ ಸರ್ ,ಇನ್ನು ಮುಂದೆ ಮುಕ್ತವಾಗಿ ಬರೆಯುವ ಕಡೆಗೂ ಸಹ...
ಮತ್ತೆ ,ನಿಮ್ಮ ಅನುಭವವನ್ನು ತಾಳೆ ಮಾಡುವ ಮೂಲಕ ಈ ಕವನಕ್ಕೊಂದು ಅಧಿಕೃತ ಮುದ್ರೆ ಒತ್ತಿದ್ದೀರಿ...ಖುಷಿಯಾಯ್ತು ಸಾರ್....

ಹೊಸದನ್ನೇನೋ ಮಾಡುವ ಭರದಲ್ಲಿ,ಏನೇನೋ ಮಾಡಲು ಹೊರಟಿರುತ್ತೇವೆ ಸಾರ್...
ತಪ್ಪಿದ್ದರೆ ಕಿವಿ ಹಿಂಡಿ,ಸರಿ ಇದ್ದರೆ ಬೆನ್ನು ತಟ್ಟುವಿರೆಂದು ನಂಬಿದ್ದೇನೆ...
ಬರ್ತಾ ಇರಿ...
ನಮಸ್ತೆ :)

Subrahmanya said...


ಕವನ ಚೆನ್ನಾಗಿ ಮೂಡಿಬಂದಿದೆ, ಕವನದ ಆಶಯ, ಹರಿವು ಎರಡೂ ತುಂಬಾ ಚೆನ್ನಾಗಿದೆ. ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಈ ಕವನ ತುಂಬಾ ಸರಳ ಸುಂದರ ಅನಿಸಿತು. 'simple is beautiful' ಅಂತಾರಲ್ಲಾ ಹಾಂಗೆ. ನಿನ್ನ ಹಿಂದಿನ ಕವನಗಳಲ್ಲಿದ್ದ ಹೈ ಫೈ ಕನ್ನಡ ನಮಗೆ ಸಹಾ ಅರ್ಥ ಆಗೋ ಕನ್ನಡ ಆಗಿ ಖುಷಿ ಕೊಡ್ತು. ಬರೀತಾ ಇರು :) ಜೈ ತಾಯಿ ಭುವನೇಶ್ವರಿ . :)

ಚಿನ್ಮಯ ಭಟ್ said...

ಶೃತಿ,
"ಕಾಯ್ ಪೋ ಚೆ" ನೋಡಿಲ್ಲಾ ಇನ್ನೂನು....ನೋಡ್ಬೇಕು....
ಧನ್ಯವಾದ ಒಂದೊಳ್ಳೆ ಚಿತ್ರದ ಬಗ್ಗೆ ತಿಳಿಸಿದ್ದಕ್ಕಾ....
ಹಮ್...ಮತ್ತೆ ಬ್ಲಾಗಿಗೆ ಬಂದು ,ನಾ ಬರೆದ ಸಾಲುಗಳನ್ನು ಮೆಚ್ಚಿಕೊಂಡಿದ್ದಕ್ಕಾಗಿಯೂ ಸಹ ನಿಮಗೆ ವಂದನೆಗಳು.....
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ಭಾಗ್ಯಮ್ಮಾ,
ಧನ್ಯವಾದ ಮೊದಲಿಗೆ ಮತ್ತೊಂದು ಮುಕ್ತವಾದ ಪ್ರತಿಕ್ರಿಯೆಗಾಗಿ...
ಖಂಡಿತ ನನಗೂ ಸಹ ಮೊದಲ ಬಾರಿಗೆ ಆ ಚಿತ್ರವನ್ನು ನೋಡಿದಾಗ ಹಾಗೇ ಅನಿಸಿತ್ತು....
ಜೀವನದಲ್ಲಿ ಎಲ್ಲಾ ಮುಗಿದು ,ಒಂದು ಅಂತ್ಯಕ್ಕೆ ಬಂದು ನಿಂತಿರುವ ಯುವಕನ ಥರಹ...
ಆದನ್ನೇ ಇಟ್ಟುಕೊಂಡು,

ಕುಕ್ಕಿ ತಿನ್ನುತಿವೆ ಎನ್ನ ಸುತ್ತಲಿನ ಜೇಡಗಳು,
ಸಿಕ್ಕಿಹಾಕಿಸಿವೆ ಎನ್ನ ಬೆಂಬಿಡದ ಬಲೆಗಳು...

ಎನ್ನುವಂಥಹ ಸಾಲುಗಳಲ್ಲಿ ಅದನ್ನು ವ್ಯಕ್ತಪಡಿಸಲು ಹೊರಟಿದ್ದೆ...ಆದರೇಕೋ ಆ ಸಾಲುಗಳಿಂದ ನಾವು ಕಲಿಯುವುದು ಕಡಿಮೆ ಅನಿಸಿತು...
ಹಾಗಾಗಿ ಅದು ಕಪ್ಪು-ಬಿಳುಪು ಚಿತ್ರವಾದುದರಿಂದ ,ಅದರಲ್ಲಿ ಬಣ್ಣವನ್ನು ಬಳಸಲು ಯತ್ನಿಸಿದೆ..ಜೀವನದಲ್ಲಿ ಹೊಸ ಚೈತನ್ಯದ ಸಂಕೇತವಾಗಿ..ಅದರ್ಅಲ್ಲೂ ಹಸಿರನ್ನು ಆಯ್ದುಕೊಂಡೆ ಸಮೃದ್ಧಿಯ ಪ್ರತೀಕವಾಗಿ....

ಹಸಿರದು ಬರವುದು,ನಾಳೆಯು ಮರೆಯದೇ,
ಉಸಿರನು ತರುವುದು ಗಾಳಿಯು ಕರೆಯದೇ..

ಎಂದು ಬರೆಯಲು ಹೋದೆ...ಯಾಕೋ ಅದು ಸಹ ಸರಿ ಅನ್ನಿಸಲಿಲ್ಲ...ಅದು ಎಲ್ಲ ಕಪ್ಪು-ಬಿಳುಪು ಚಿತ್ರಗಳಗೂ ಅನ್ವಯಿಸಿಬಿಡುತ್ತದೆ ಅನ್ನಿಸಿತು...
ಹಂಗಾಗಿ ಕೊನೆಗೊಮ್ಮೆ ಹೊಳೆದಿದ್ದು,ಈ ಚಿತ್ರದಲ್ಲಿರುವವನಿಗೆ ಸ್ಫೂರ್ತಿ ತುಂಬುವಂತಹ ನಾಲ್ಕು ಸಾಲುಗಳನ್ನು ನಾಳೆಯ ಬಗ್ಗೆ ಬರೆಯುವಾ ಎಂದು..ಅವನ ಎದುರಿಗಿರುವುದನ್ನು ಸಮಸ್ಯೆಯ ಸಾಗರವನ್ನಾಗಿಸಿ,ಆ ಗುಡ್ಡಗಳನ್ನು ಯಶಸ್ಸನ್ನಾಗಿ ಕಲ್ಪಿಸಿ

ನಾಳೆಯ ಬೆಳಗನು ಶಿಖರದಿ ನೋಡುವಾ,
ತೋಳಿನಾ ಬಲದಲೇ ಶರಧಿಯಾ ಈಜುವಾ

ಎಂದು ಬರೆದೆ...
ಮುಂದಿನದ್ದು ನಿಮ್ಮ ಕಣ್ಣ ಮುಂದಿದೆ.....

ಹಮ್..ಇವಷ್ಟು ನನ್ನ ಕಥೆಗೆಳು!!!!!! ಇರ್ಲಿ...

ಮತ್ತೆ ಇಂಟರ್ನಲ್ಸು ಇದ್ದರೂ,ಬೇಡಾ ಬೇಡಾ ಅಂದರೂ ಅವತ್ತೇ ಓದುತ್ತೇನೆ ಎಂದು ಹಟ ಹಿಡಿದು ಓದಿ,ನನ್ನನ್ನು ಪ್ರೋತ್ಸಾಹಿಸಿದ ನಿಮ್ಮಂಥವರಿಗೆ ಏನೆನ್ನಲಿ ನಾ....
ನಿಮ್ಮ ಅಭಿಮಾನಕ್ಕೆ ಚಿರಋಣಿ ಅಷ್ಟೇ.....
ಧನ್ಯವಾದಗಳು...
ನಮಸ್ತೆ :)

ಚಿನ್ಮಯ ಭಟ್ said...

ದಿನೇಶಣ್ಣಾ,
ಧನ್ಯವಾದ ನನ್ನಿಂದ ಈ ಕವನವನ್ನು ಬರೆಸಿದ್ದಕ್ಕಾಗಿ.....
ಅದನ್ನು ಪ್ರೀತಿಯಿಂದ ಪ್ರಕಟಿಸಿ ನನ್ನನ್ನು ಉತ್ತೇಜಿಸಿದ್ದೀರಿ,ವಂದನೆಗಳು ಅದಕ್ಕಾಗಿ....
ಅಹ್..ಬರ್ತಾ ಇರಿ ಬ್ಲಾಗ್ ಗೆ...
ನನಗೆ ತಿಳಿದಷ್ಟು ಏನೇನೋ ಬರೀತಿನಿ...
ನಮಸ್ತೆ :)

ಚಿನ್ಮಯ ಭಟ್ said...

ಅಜಾದ್ ಸಾ.....
ಧನ್ಯವಾದ ಸಾರ್...
ಅದು ಎಲ್ಲೊ ಮೇಲೆ ಕೆಳಗೆ ಆಗೋಗಿದೆ ಸಾರ್ ಹೆಸ್ರು...
ದೇವ್ರಾಣೆ ನಾ ಬರ್ದಿದ್ ಶಬ್ದಾರ್ಥಗಳಲ್ಲಾ ಅದು...
ಹಮ್...ಈಗ ಬದ್ಲು ಮಾಡಲ್ಲಾ...ಮಾಡಿದ್ರೆ ನೀವು ಪ್ರೀತಿಯಿಂದ ಕಾಲೆಳೆದಿದ್ದು ಉಳ್ದವ್ರಿಗೆ ಅರ್ಥ ಆಗಲ್ಲಾ...ಅವ್ರೂ ನೋಡ್ಲಿ ಖುಷಿ ಪಡ್ಲಿ :)=D
ಮುಂದಿನ ಆ ಥರ ಆಗ್ದೇ ಇರೋ ಥರ ನೋಡ್ಕೋತಿನಿ...
ನೀವು ಬರ್ತಾ ಇರ್ರಿ...
ಇದೇ ಥರ ಬೆನ್ನು ತಟ್ಟಿ,ಕಾಲು ಎಳಿತಾ ಇರ್ರಿ.. ;)

ಚಿನ್ಮಯ ಭಟ್ said...

ಅಣ್ಣಯ್ಯಾ,
ಧನ್ಯವಾದಗಳು ನಿಮ್ಮ ಅನಿಸಿಕೆಯನ್ನು ನಮೂದಿಸಿದ್ದಕ್ಕಾಗಿ.....
ಛೇ..ಮೊದಲೇ ಹೇಳದಲ್ವಾ ??ಕವನದ ಶೀರ್ಷಿಕೆನೇ ಬದಲಾಯಿಸಬಹುದಿತ್ತೇನೋ..
"ಸಿಂಪಲ್ ಆಗ್ ಒಂದ್ ಕವನಾರೀ "ಅಂಥಾ!!!!ಹಾ ಹಾ....
ಏನೋ ಅನಿಸಿದ್ದನ್ನ್ನು ಬರೆದೆ ಅಷ್ಟೇ....ಆ ಕವನ ಬೇಡಿದ್ದು ಅಷ್ಟು ಶಬ್ಧಗಳನ್ನು ಅನ್ಸತ್ತೆ...ಸುಮ್ಮನೆ ತುರುಕಕ್ಕೆ ಹೋಗ್ಲಿಲ್ಲ...ಬಂದವನ್ನು ಬೇಡ ಅನ್ನಲಿಲ್ಲ ...
ಅದನ್ನು ಆತ್ಮೀಯತೆಯಿಂದ ಮೆಚ್ಚಿಕೊಂಡಿದ್ದೀರಿ...
ವಂದನೆಗಳು....
ಬರ್ತಾ ಇರಿ...
ನಮಸ್ತೆ :)

ಗಿರೀಶ್.ಎಸ್ said...

ಚಿನ್ಮಯ್ ಕವಿತೆ ಈ ಬಾರಿ ಬಹಳ ಪ್ರಭುದ್ಧವಾಗಿದೆ ... ಚಿತ್ರಕ್ಕೆ ತಕ್ಕ ಸಾಲುಗಳು ಅನ್ನಿಸಿತು ... ಇನ್ನಷ್ಟು ಕವಿತೆಗಳು ನಿಮ್ಮಿಂದ ಮೂಡಿ ಬರಲಿ... ಚಿತ್ರಕ್ಕೆ ಸಾಲುಗಳನ್ನು ಪೋಣಿಸುವುದು ಸ್ವಲ್ಪ ಕಷ್ಟವೇ ಸರಿ.. ಆದರೂ ಚೆನ್ನಾಗಿ ನಿಭಾಯಿಸಿದ್ದೀರ .. ಸಾಧ್ಯವಾದರೆ ನಾನು ಕೆಲವು ಚಿತ್ರಗಳನ್ನು ಕೊಡುತ್ತೇನೆ .. ಬರೆಯಿರಿ... ಆಗಬಹುದೇ ?"ಸಾವಿನ ಸುಳಿಗಳ ಭಯವದು ಅಳಿದಿದೆ,ಭವಿತವ್ಯದ ಗೆರೆ ಕೈಯ್ಯಲೆ ಹೊಳೆದಿದೆ."ಈ ಸಾಲು ತುಂಬ ಇಷ್ಟವಾಯಿತು .. ಸಾವಿನ ಭಯ ಅಳಿದರೆ ಜೀವನ ಸುಗಮವಾಗಬಹುದು ಅನ್ನುವುದು ನನ್ನ ಅನಿಸಿಕೆ ಕೂಡ ..

Srikanth Manjunath said...

ಯೋಚನೆಗಳು ಯೋಜನೆಗಳ ತರಹ ಅಲ್ಲಾ ಪಟ್ಟಿ ಇಲ್ಲದೆ, ರಿಪೋರ್ಟ್ ಇಲ್ಲದೆ ಸಿದ್ಧವಾಗುವ ಒಂದು ನಕಾಷೆಯೇ ಈ ಯೋಚನೆಗಳು. ಕಣ್ಣಿಗೆ ಕಂಡರೂ, ಕಾಣದಿದ್ದರೂ ಅದು ಸಿದ್ಧಪಡಿಸುವ ಚಿತ್ತಾರ ಸೊಗಸಾಗಿರುತ್ತೆ. ನೀವು ಹೆಣೆದಿರುವ ಪದಗಳ ವಿನ್ಯಾಸ, ಅದಕ್ಕೆ ನಿಗಧಿಪಡಿಸಿದ ಸ್ಥಳಗಳು ಎಲ್ಲವೂ ನಿಮ್ಮ ಭಾವವೇಷವನ್ನು ಸುಲಭವಾಗಿ ಓದುಗರಿಗೆ ತಲುಪಿಸಿ ಬಿಡುತ್ತದೆ. ಸುಂದರವಾಗಿದೆ ಚಿನ್ಮಯ್!

ಪದ್ಮಾ ಭಟ್ said...

ಸವಿ ಸವಿ ಕನಸಿನ ಸರಪಣಿ ಸೆಳೆದಿದೆ- ಅದ್ಭುತ ಸಾಲು...ಕವನ ತುಂಬಾ ಇಷ್ಟ ಆತು..ಕವನದ ಮೊದಲಿನ ಸಾಲಿನಲ್ಲಿ ಏನೋ ವಿಶೇಷ ಇದ್ದು..ನಾಳೆಯಾ ಬೆಳಗನು ಶಿಖರದಿ ನೋಡುವಾ ಎಂಬಲ್ಲಿ ಭವಿಷ್ಯದ ಕನಸುಗಳು, ಆಲೋಚನೆಗಳು, ಮುಂದಿನ ಜೀವನದ ಒಂದಷ್ಟು ಭರವಸೆಗಳು ಎಲ್ಲವನ್ನೂ ನಿರೀಕ್ಷಿಸುತ್ತಾ ಬದುಕು ಸಾಗ್ತಾ ಇದ್ದು..

Suresh said...

ಕವನದ ಪದ ಜೋಡಣೆ ಸೊಗಸಾಗಿ ಮೂಡಿಬಂದಿದೆ... ಮತ್ತಷ್ಟು ಸುಂದರ ಕವನಗಳ ನಿರೀಕ್ಷೆಯಲ್ಲಿದ್ದೇವೆ! :)
ಗೆಳತಿಯಿಂದ ತಿಳಿದ ಗಳತಿ... ಕಳತಿ ಎಂದು ಬರೆದಿದ್ದರೇ ಮತ್ತಷ್ಟು "ಪಕ್ವ" ವಾಗುತಿತ್ತು! :)
ಹಾಗೆಯೇ ಜೊಳಗು ಅಥವ ಜೊಳಗಿದೆ ಎಂಬುದಕ್ಕೆ ಅರ್ಥ ಬೇಕಿತ್ತು.. :)

ಮೌನರಾಗ said...

ಚಿನ್ಮಯ್..
ಬ್ಲಾಗ್ ಪೋಸ್ಟ್ ಮೊನ್ನೆಯೇ ಓದಿದೆ.. ನಿನ್ನ ಕವನ ಎಂದಿನಂತೆ ಸೊಗಸಾಗಿಯೇ ಇದೆ.. ಎರಡೆರಡು ಬಾರಿ ಓದದೆ ದಕ್ಕವುದಿಲ್ಲ ನಿನ್ನ ಕವನಗಳು.. :) ನಿನ್ನ ಪ್ಲಸ್ ಪಾಯಿಂಟ್ ಅದು.. ನನ್ನ ಮೈನಸ್ ಪಾಯಿಂಟ್ ಕೂಡ :)

ಇಷ್ಟಾಗಿಯೂ ನನಗೆ ಅರ್ಥವಾಗದ ಪದಗಳೆಂದರೆ,
ಕರಿಮೆದೆ ಹನಿ..?
ಬವಣೆಯ ತೆರೆಗಳ ನೆರೆ..?
ಗಳತಿದೆ ..?

ಇದಿಷ್ಟನ್ನು ನೀನು ಹೇಳಿಕೊಟ್ಟರೆ.. ಒಂದಿಷ್ಟು ಕನ್ನಡದ ನನಗೆ ಗೊತ್ತಿಲ್ಲದ ಪದಗಳನ್ನು ಕಲಿತ ಖುಷಿ ನನ್ನದು..

ಬರಿತಾ ಇರು..

ಸಂಧ್ಯಾ ಶ್ರೀಧರ್ ಭಟ್ said...

Superb..!! chinmay... And Aweeesome photo by Dinesh Maneer..

ಚಿನ್ಮಯ ಭಟ್ said...

ಗಿರೀಶ್....
ಖಂಡಿತವಾಗಿಯೂ ಕೊಡಿ...ನನ್ನ ಕೈಲಾದ್ದನ್ನು ಗೀಚುತ್ತೇನೆ...ಅದರಲ್ಲಿ ಯಾವದನ್ನು ನೋಡಿದರೆ ಯಾವಾಗ ಸ್ಪೂರ್ತಿ ಬಂದು ಬರೆಯಬೇಕೆನಿಸುತ್ತೋ ಗೊತ್ತಿಲ್ಲ....ಕೊಟ್ಟಿರಿ :) :)...
ನಾನೂ ಸಹ ಮೊದಲಿಗೆ ಹಂಗೆ ಅಂದುಕೊಂಡೊದ್ದೆ...
ಚಿತ್ರವೇ ಎಲ್ಲಾನೂ ಹೇಳತ್ತೇ ಇನ್ನು ನಾನೇನು ಬರ್ಯದು ಅಂತಾ....ಆಮೇಲೇನೋ ಚಿತ್ರದಲ್ಲಿ ಕಾಣದ್ದನ್ನು ಬರೆಯಬೇಕು ಅನಿಸಿತು...ಅದನ್ನು ತಳಹದಿಯಾಗಿಟ್ಟುಕೊಂಡು ನನ್ನ ವಿಚಾರವನ್ನು ಮಂಡಿಸಬಹುದೆನಿಸಿತು..ಆ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನ ಇದು ಅಷ್ಟೇ....

ಇನ್ನು "ಸಾವಿನ ಸುಳಿಗಳ ಭಯವದು ಇಳಿದಿದೆ,
ಭವಿತವ್ಯದ ಗೆರೆ ಕೈಯ್ಯಲೆ ಹೊಳೆದಿದೆ "
ಎಂಬ ಸಾಲುಗಳು....
ಮೊದಲಿಗೆ ಅಲ್ಲಿ ಹಣೆಯನ್ನು ಸೇರಿಸಲು ಬಯಸಿದ್ದೆ ಗಿರೀಶ್..ಹಣೆಬರಹವನ್ನೇ ಬದಲಾಯಿಸಲು ಹೊರಟಿದ್ದೇವೆ ಅಂತಾ...ಆದರೆ ಇಲ್ಲಿ ಎಲ್ಲವನ್ನೂ ಸ್ವಪ್ರಯತ್ನದಿಂದಲೇ ಮಾಡಿತ್ತೇನೆ ಎನ್ನುವಾಗ ಹಣೆಗಿಂದ ಕೈಯ್ಯ ಬಳಕೆ ಸೂಕ್ತ ಎನಿಸಿತು..ಹಾಗಾಗಿ ಬಂದದ್ದು ಆ ಸಾಲುಗಳು...

ವಂದನೆಗಳು ನಿಮಗೆ ಮೆಚ್ಚಿದ್ದಕ್ಕೆ...ಪ್ರೋತ್ಸಾಹಿಸಿದ್ದಕ್ಕೆ...
ಬರ್ತಾ ಇರಿ...ನಿಮ್ಮೆಲ್ಲ ಈ ಅನಿಸಿಕೆಗಳನ್ನಾ ಓದುತ್ತಾ ಹೋದರೆ ಇನ್ನೂ ಬರೀಬೇಕು..ಬರೆದು ಬರೆದು ಬೆಳಿಬೇಕು ಅನ್ಸತ್ತೆ...
ಧನ್ಯವಾದ ಅಷ್ಟೇ ಹೇಳಬಲ್ಲೆ...
ನಮಸ್ತೆ :)

ಚಿನ್ಮಯ ಭಟ್ said...

ಶ್ರೀ ,
ಬ್ಲಾಗುಗಳ ಕಮೆಂಟುಗಳಲ್ಲಿ ನಾ ತಿಳಿದ ಮಟ್ಟಿಗೆ ಯಾರೂ ಊಹಿಸಲಾರದಷ್ಟು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವವರು ನೀವು....ಒಮ್ಮೆ ಹಳೆಯ ಚಿತ್ರಗಳನ್ನು ತರುತ್ತೀರಿ ಇನ್ನೊಮ್ಮೆ ಅಲ್ಲಿರುವ ಪದಗಳೊಂದಿಗೆ ಆಟವಾಡತೊಡಗುತ್ತೀರಿ....ಅಯ್ಯಪ್ಪಾ...
ಧನ್ಯವಾದಗಳು ಇವತ್ತಿನ ಯೋಜನೆ-ಯೋಚನೆಗಳ ಸರಪಣಿಗೆ...
ಬರುತ್ತಿರಿ ಎಂದಿನಂತೆ...
ಉತ್ತೇಜಿಸುತ್ತಿರಿ ಗಿಡವ ಹಸಿರಾಗಿಸುವ ಮಳೆಯ ಹನಿಯಂತೆ...
ನಮಸ್ತೆ :)

ಚಿನ್ಮಯ ಭಟ್ said...

ಪದ್ಮಾ,
ಖಂಡಿತಾ ...
ನಮ್ಮ ವಯಸ್ಸಿನಲ್ಲಿರುವವರಿಗೆ,ಆ ನಾಳೆಯಾ ಬೆಳಗನು ಶಿಖರದಿ ನೋಡುವಾ ಎನ್ನುವುದು ತುಂಬಾ ಚೆನ್ನಾಗಿ ಹೊಂದಿಕೆ ಆಗತ್ತೆ...ಒಂದು ಹಂತವನ್ನು ದಾಟಿ ಇನ್ನೊಂದಕ್ಕೆ ಹೋಗುವಾಗ ಒಂದಿಷ್ಟು ಕನಸುಗಳನ್ನು ಹೊತ್ತು ,ಹೊಸ ಪರ್ವದೆಡೆಗೆ ಹೆಜ್ಜೆ ಹಾಕ್ತಾ ಇದೀವಿ...ಅಲ್ವಾ???
ಧನ್ಯವಾದ ಕಣೆ....ಬಂದಿದ್ದಕ್ಕೆ+ಮೆಚ್ಚಿದ್ದಕ್ಕೆ+ಅನಿಸಿಕೆಯನ್ನು ಬರಳಚ್ಚಿಸಿ,ಉತ್ತೇಜಿಸಿದ್ದಕ್ಕೆ :)....
ಬರ್ತಾ ಇರು...
ನಮಸ್ತೆ :)

ಚಿನ್ಮಯ ಭಟ್ said...

ಸುರೇಶ್ ಜೀ...
ಸ್ವಾಗತ ನಮ್ಮನೆಗೆ :)....
ಧನ್ಯವಾದ ನಿಮ್ಮ ಪ್ರೀತಿಯ ಸಲಹೆಗಳಿಗಾಗಿ...ಇವುಗಳೇ ನಮಗೆ ದಾರಿದೀಪ...
ಗಳತಿದೆ ಅನ್ನೋದು ಬಹುಷಃ ಎಲ್ಲ ಕಡೆ ಬಳಕೆಯಲ್ಲಿದೆ ಅಂದುಕೊಂಡಿದ್ದೆ...
ಅದಕ್ಕೆ ಕಳತಿದೆ ಎನ್ನುವ ಪದಗವೂ ಸಹ ನನಗೆ ಸ್ನೇಹಿತೆಯೊಬ್ಬಳು ಹೇಳಿದಾಗ ಗೊತ್ತಾದದ್ದು....
ಮತ್ತೆ ಜೊಳಗು ಅನ್ನುವುದರ ಅರ್ಥ ಕೊಡಬೇಕಿತ್ತೇನೋ..ಅಲ್ವಾ??
ಸರಿ ಈ ಸಲ ಅಂತೂ ಆಯ್ತು...ಮುಂದಿನ ಸಲದಿಂದ ಈ ಥರ ಆಗ್ದೇ ಇರೋ ಥರಾ ನೋಡ್ಕೋತೀನಿ ಸಾರ್...'
ವಂದನೆಗಳು :)..
ಬರ್ತಾ ಇರಿ...ನನ್ನನ್ನಾ ತಿದ್ತಾ ಇರಿ :)..
ನಮಸ್ತೆ :)

ಚಿನ್ಮಯ ಭಟ್ said...

ಸುಷ್ಮಾ....
ಧನ್ಯವಾದಗಳು ಎರಡೆರಡು ಬಾರಿ ಓದುವ ಕಾಳಜಿಯನ್ನು ತೋರಿ,ಓದಿ ಇಷ್ಟಪಟ್ಟಿದ್ದಕ್ಕೆ :)...
ಅದು + ಅಥವಾ - ಅನ್ನೋದು ನಂಗಂತೂ ಗೊತ್ತಿಲ್ಲ...ಏನೋ ಬರೆಯುವುದು ಅಷ್ಟೆ...ಪ್ರತಿಯೊಬ್ಬರ ಇನ್ನೊಬ್ಬರಿಗೆ ಹೋಲಿಸಿದರೆ ಒಂದಿಷ್ಟು + ಗಳು,ಇನ್ನೊಂದಿಷ್ಟು - ಗಳು..ಅಲ್ವಾ???
ನೋಡುವ ದೃಷ್ಟಿಕೋನ = ಆಗಿರಬೇಕು ಅಷ್ಟೇ ;)...
ಇರ್ಲಿ...
ನಮ್ಮನೆ ಕಡೆ ಹುಲ್ಲಿನ ಕಂತೆಗೆ ಮೆದೆ ಅಂತಾ ಬಳಸ್ತಾರೆ..ಅಲ್ಲಿ ಹುಲ್ಲಿ ಒತ್ತಟ್ಟಿಗಿರುತ್ತೇ..ಮೋಡದಲ್ಲಿ ಹನಿಗಳೂ ಸಹ ಅದೇ ಥರ ಅಲ್ವಾ???ಒಂದಕ್ಕೊಂದು ಅಂಟಿಕೊಂಡಿರದು?? ಅದ್ಕೇ ಕಪ್ಪಾಗಿ ಕಾಣದು...ಅಲ್ಲಿಯ ಕಾರ್ಮೋಡವನು ನೀರಾದದನ್ನು ಹೇಳಲು ಅದ್ಕೇ ಕರಿಮೆದೆ ಹನಿಯನು ಜೊಳಗಿದೆ ಅಂದೆ...ಅಲ್ಲಿ ಚಿಂತೆಯ ಭಾರ ,ಹರಿದು ಈಗ ಮನಸ್ಸು ತಿಳಿಯಾಗಿದೆ ಎಂಬುದನ್ನು ಹೇಳಲು ಹೊರಟಿದ್ದೆ ..
ಇನ್ನು ಬವಣೆಯ ತೆರೆಗಳ ನೆರೆ....ಕಷ್ಟಗಳು ಬರುತ್ತವೆ,ಹೋಗುತ್ತವೆ.....ಪ್ರವಾಹದಂತೆ.. ಅದಕ್ಕಾಗಿ ತೆರೆಗಳ ನೆರೆ ಅನ್ನುವ ಪದಗಳು...ನಂತರ ಗಳತಿದೆ ಅಂದ್ರೆ ಕಳತಿದೆ ಅನ್ನುವ ಬಳಕೆ ಉಂಟಂತೆ ಕೆಲವೆಡೆ...ಪಕ್ವವಾಗುವಿಕೆ ಅನ್ನಬಹುದೇನೋ...ಕಾಯಿ ಹಣ್ಣಾಗಿದ್ಯೋ ಇಲ್ವೋ ನೋಡ್ಬೇಕಾದ್ರೆ ಬಳಸೋ ಪದ...ಅಲ್ಲಿ ಹೊಸ ಪ್ರಯಾಣಕ್ಕೆ ಮನಸ್ಸು ಸಿಧ್ಧವಾಗಿದೆ,ಜೊತೆಗೆ ಕಾಲವೂ ಪಕ್ವವಾಗಿದೆ ಎನ್ನೊದನ್ನಾ ಹೇಳಕ್ಕೆ ಅಂತಾ ಆ ಶಬ್ಧಗಳು....
ಇವಿಷ್ಟು ನನ್ನ ಆಲೋಚನೆಗಳು...
ಧನ್ಯವಾದ...
ಪ್ರಶ್ನೆ ಕೇಳಿದ್ದಕ್ಕೆ....ಏನೋ ಬರ್ದಿದ್ದಾನೆ ಅರ್ಥ ಆಗಲ್ಲಾ ಅನ್ನೋ ಅಸಡ್ಡೆ ತೋರದೆ ತಿಳಿಯದ್ದನ್ನು ಕೇಳುವ ಸೌಜನ್ಯ ತೋರಿದ್ದಕ್ಕೆ...ಖುಷಿ ಆಯ್ತು...ಬರ್ತಾ ಇರಿ...
ಅಲ್ಲಲ್ಲಾ,ಬರ್ತಾ ಇರು...;)
ನಮಸ್ತೆ :)

ಚಿನ್ಮಯ ಭಟ್ said...

ಸಂಧ್ಯಕ್ಕಾ,
ಧನ್ಯವಾದ ನಿಂಗೆ :) :)...
ಬರ್ತಾ ಇರು....
ಹಾಂ ಫೋಟೊನೂ ತುಂಬಾ ಚೆನಾಗಿದೆ :):)...
ಅದೇ ಏನೋ ಒಂದಿಷ್ಟು ಸಾಲುಗಳನ್ನಾ ಹೇಳ್ಬಿಡತ್ತೆ ಅಲ್ವಾ???
ಸರಿ...ಟಾಟಾ
ನಮಸ್ತೆ :)

Jayalaxmi said...

ಚೆನ್ನಾಗಿದೆ ಕವನ. ಭಾಷೆ ಕನ್ನಡವೇ ಆದರೂ ಪ್ರಾಂತೀಯವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದಾಗಿ ಕೆಲವು ಪದಗಳು ಗೊಂದಲಕ್ಕೀಡು ಮಾಡಬಹುದು ಎಂದು ನೀನು ಕಂಸಿನಲ್ಲಿ ಅರ್ಥ ಬರೆದುದರ ಹಿಂದಿನ ಕಾಳಜಿ ಮೆಚ್ಚುಗೆಯಾಯ್ತು. :) ಆದರೆ ಅವ್ಯಾವೂ ಪ್ರಾಂತೀಯ ಪದಗಳಾಗಿರದೇ ಸಾಮಾನ್ಯವಾಗಿ ಎಲ್ಲರೂ ಬಳಸುವ ಪದಗಳೇ ಆಗಿವೆ ‘‘ಗಳತಿದೆ’ದರ ಹೊರತಾಗಿ. ಅದೂ ಸಹ ಸ್ವಲ್ಪ ಯೋಚಿಸಿದರೂ ಸಾಕು, ‘ಕಳೆತಿದೆ’ ಎನ್ನುವುದನ್ನು ಹೇಳುತ್ತಿದೆ ಎನ್ನುವುದು ಅರಿವಾಗುತ್ತದೆ.ಚಿತ್ರ ನೋಡಿ ಕವನ ಬರೆವ ನಿನ್ನ ಪ್ರಯತ್ನ ಮತ್ತು ಪದಗಳ ಕುರಿತ ಕಾಳಜಿ ಇಷ್ಟವಾಯಿತು.
ಇಂಟರ್ನಲ್ಸ್ ಫಲಿತಾಂಶ ಅತ್ಯುತ್ತಮವಾಗಿರಲಿ ಎಂಬ ಹಾರೈಕೆ. :)

Swarna said...

ಚಿನ್ಮಯ್ ನಿಮ್ಮ ಕವಿತೆ ಮತ್ತು ಇಲ್ಲಿನ ಪ್ರತಿಕ್ರಿಯೆಗಳು ಸೊಗಸಾಗಿವೆ.
ಪ್ರಾಸ ಭರಿತ ಭರವಸೆಯ ಬೆಳ್ಳಿ ಕಿರಣ
ಚೆನ್ನಾಗಿದೆ

ಚಿನ್ಮಯ ಭಟ್ said...

ಜಯಲಕ್ಷ್ಮಿ ಮೇಡಮ್...
ಸ್ವಾಗತ ನಮ್ಮನೆಗೆ :)...
ಖುಷಿ ಆಯ್ತು ನಿಮ್ಮ ಕಮೆಂಟು ನೋಡಿ...
ಖಂಡಿತವಾಗಿಯೂ ನಾನೂ ಅದೇ ಪ್ರಯತ್ನದಲ್ಲಿದ್ದೇನೆ...ಕನ್ನಡವೇ ಆದರೂ ಅದರಲ್ಲೂ ಎಷ್ಟು ವೈವಿಧ್ಯತೆಗಳು ಅಲ್ವಾ???ಇದರಿಂದ ನನಗೂ ತುಂಬಾ ಸಹಾಯ ಆಗ್ತಿದೆ ಮೇಡಮ್...ನಮ್ಮ ಕಡೆ ಒಂದು ಪದ ಬಳಸಿದರೆ,ಇನ್ನೊಂದು ಕಡೆ ಮತ್ತೊಂದು ಸೊಗಸಾದ ಪದ ಬಳಸುತ್ತಾರೆ..(ಉದಾಹರಣೆಗೆ ಗಳತಿದೆ ಗೆ ಕಳತಿದೆ ಅಂತಾರೆ ಅಂತಾ ನಂಗೆ ಈ ಕವನಕ್ಕೆ ಬಂದ ಪ್ರತಿಕ್ರಿಯೆ ನೋಡಿದಾಗಲೇ ಗೊತ್ತಾದದ್ದು)..ಹಿಂಗಾಗಿ ನಂಗೆ ಎರಡೂ ಪದ ತಿಳಿದುಕೊಂಡ ಖುಷಿ :)...
ಧನ್ಯವಾದಗಳು ನಿಮ್ಮ ಆಶೀರ್ವಾದಪೂರ್ವಕ ಶುಭಾಹಾರೈಕೆಗಾಗಿ....
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್....
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ....
ಹಾಂ ಪ್ರತಿಕ್ರಿಯೆಗಳ ಬಗ್ಗೆ ಏನೆಂದು ಹೇಳಲಿ ನಾ??? ಹಿರಿಯರು,ಸಹಬ್ಲಾಗಿಗರು,ಮಿತ್ರರು ಎಲ್ರೂ ಖುಷಿಪಟ್ಟು ಪ್ರೀತಿಯಿಂದ ತಮ್ಮ ಅನಿಸಿಕೆಗಳನ್ನಾ ನಮೂದಿಸಿದ್ದಾರೆ...ಕಾಳಜಿಯಿಂದ ಸಲಹೆಗಳನ್ನಾ ಇತ್ತಿದ್ದಾರೆ... ಅವರೆಲ್ಲರಿಗೆ ನಾ ಋಣಿ ಅಷ್ಟೇ..
ಏನೋ ಗೊತ್ತಿಲ್ಲ ಮೇಡಮ್..ಆ ಪ್ರತಿಕ್ರಿಯೆಗಳನ್ನು ಓದಿದರೆ ಒಂಥರಾ ಖುಷಿ...ಅವರ ಅಭಿಪ್ರಾಯವನ್ನು ಕೇಳಿ ತಿಳಿಯುವ ಕುತೂಹಲ..ತಪ್ಪನ್ನು ತಿದ್ದಿಕೊಳ್ಳುವ ಹಂಬಲ..ಅದಕ್ಕೆ ನಿಮ್ಮಂಥಹ ಸಹೃದಯಿಗಳ ಬೆಂಬಲ.ಅಷ್ಟೇ....
ವಂದನೆಗಳು ಮೇಡಮ್...
ಬರ್ತಾ ಇರಿ...ನನಗನಿಸಿದ್ದನ್ನು ಬರೆದು ನಿಮ್ಮೆಲರ ಮುಂದಿಡುತ್ತೇನೆ..ಮುಂದಿನದು ನಿಮ್ಮ ಜವಾಬ್ದಾರಿ..
ನಮಸ್ತೆ :)

VENU VINOD said...

ಭಾವಗಾನದ ತೆರದ ಈ ಕವನ ಮೊದಲೆರಡು ಸಾಲುಗಳಲ್ಲೇ ಗಮನ ಸೆಳೆಯುತ್ತದೆ....

ಚಿನ್ಮಯ ಭಟ್ said...

ವೇಣುಜೀ,
ಸ್ವಾಗತ ನಮ್ಮನೆಗೆ :):)...
ದಿನದಿನವೂ ಇನ್ನಷ್ಟು ಸಹಬ್ಲಾಗಿಗರ ಪರಿಚಯವಾಗುತ್ತಿರುವುದು ತುಂಬಾ ಖುಷಿಯ ಸಂಗತಿ....
ಧನ್ಯವಾದಗಳು ನಿಮ್ಮ ಅಕ್ಕರೆಯ ಪ್ರೋತ್ಸಾಹಕ್ಕಾಗಿ :) :)....
ಬರ್ತಾ ಇರಿ...ನಿಮ್ಮ ಸಲಹೆಗಳನ್ನಾ ಕೊಟ್ಟು ಉತ್ತೇಜಿಸ್ತಾ ಇರಿ....
ನಮಸ್ತೆ :)

Digwas Bellemane said...

ಚಿನ್ಮಯ್...ಕದ್ದಿದ್ದಲ್ಲ..... ಕಾಪಿ ಹೊಡೆದು ಬರೆದಿದ್ದಲ್ಲ ... ಗೆಳೆಯರಿಂದ ಎರವಲು ಪಡೆದು ಕೊನೆಯಲ್ಲಿ ನನ್ನದೆಂಬಂತೆ ಹೆಸರು ಹಾಕಿಕೊಂಡಿದ್ದಲ್ಲ....ಸುಂದರ... ಕವನ ಅಲ್ಲ ಕವಿತೆ ...

ಎನ್ನುವ ಕಾಮೆಂಟ್ ಶಿವು ಅವರಿಗೆ ಅನ್ವಯಸುವಂತೆ ಇದ್ದು ಅವರು ಈ ರೀತಿ ಕಾಮೆಂಟ್ ಹಾಕಿದ್ದಕ್ಕಾಗಿ ತುಂಬ ಮನ ನೊಂದಿದ್ದಾರೆ.... ಅವರು ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ತಮ ಛಾಯಾಗ್ರಾಹಕರಾಗಿದ್ದು ನಾನು ಬರೆದ ಕಾಮೆಂಟ್ ಗೆ ಅವ್ಯಯಿಸುವ೦ತಿಲ್ಲ.. ಆ ಕಾಮೆಂಟ್ ಹಾಕಿದ್ದಕ್ಕಾಗಿ ಕ್ಷಮೆ ಇರಲಿ.

ಸತೀಶ್ ನಾಯ್ಕ್ said...

ತುಂಬಾ ಒಳ್ಳೆಯ ಕವನ ಚಿನ್ಮಯ್..

ಓದೋಕೆ ಸ್ವಲ್ಪ ತಡವಾಯ್ತು ಕ್ಷಮೆ ಇರಲಿ..

ಮಕ್ಕಳ ಪದ್ಯದ ಹಾಗೆ ಸುಲಭವಾಗಿ ಗಟ್ಟು ಹೊಡೆಯಬಹುದು ಅಷ್ಟು ಸುಲಲಿತ ಪದ ಬಳಕೆಯಿಂದ ಕವನ ಹೆಚ್ಚು ಇಷ್ಟುವಾಗ್ತಾ ಹೋಗ್ತದೆ.. ಲಯ ಪ್ರಾಸ ಅಷ್ಟು ಉತ್ತಮವಾಗಿ ಕೂಡಿ ಬಂದಿದೆ ಚಿನ್ಮಯ್.. ಕವನದ ಮೂಲಕ ನಮ್ಮೆಲ್ಲರ ಬದುಕಿನಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕಾದ ಅಶಾಭಾವನೆಯ ಆಶಯವನ್ನ ಸಶಕ್ತವಾಗಿ ಮನಸ್ಸಿಗೆ ಮುಟ್ಟಿಸುತ್ತೀರಿ.

ಚಿಕ್ಕದೊಂದು ಸಲಹೆ..
ತೋಳಿನಾ ಬದಲು ತೋಳಿನ..

ಭುವನದ ಹಾದಿಗೆ ಲಾಟೀನು ಬೆಳಗಿದೆ.

ಅನ್ನುವುದರಲ್ಲಿ ಲಾಟೀನು ಅನ್ನುವುದರ ಬದಲು ಲಾಂದ್ರ ಅಂತ ಬಳಸಿದರೆ ಆ ಜಾಗದಲ್ಲಿ ಪದ್ಯದ ಓಟ ಇನ್ನು ಸರಾಗ ಆಗಬಹುದೇನೋ ಅನ್ನೋದು ನನ್ನ ಅನಿಸಿಕೆ.. :)

ಚಿನ್ಮಯ ಭಟ್ said...

ಸತೀಶ್ ಜೀ....
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕಾಗಿ...
ತಡವಾಗಿ ಬಂದದ್ದಕ್ಕೆ ಕ್ಷಮೆ ಎಲ್ಲ ಬೇಡಪ್ಪಾ,ನನಗೆ ನನ್ನ ಬರಹವನ್ನು ಬೇರೆಯರಿಗೆ ತೋರಿಸುವ ಕೆಟ್ಟ ಕುತೂಹಲ..ಹಂಗಾಗಿ ನೋಡಿ ಸತೀಶ್ ಅಂತಾ ಸಂದೇಶಿಸಿದೆ ಅಷ್ಟೇ...
ಮತ್ತೆ ಲಯ ತಾಳಗಳು..ಗೊತ್ತಿಲ್ಲ ಏನೋ ಒಂದು ಪ್ಯಾಟರ್ನ್ ಅಂತೀವಲ್ವಾ ಆಥರಾ ಇಟ್ಕೊಂಡು ಬರ್ಯದು ಅಷ್ಟೇ...ಸಂಗೀತದ ಬಗ್ಗೆ ಎಂತದೂ ಗೊತ್ತಿಲ್ಲ...
ಮತ್ತೆ ತೋಳಿನಾ ->ತೋಳಿನ..ಹಮ್..ಎರಡೂ ಒಂದೇನೆ...ಓಟಕ್ಕೆ ತಕ್ಕಂತೆ..ಅದೇನು ದೊಡ್ಡದಲ್ಲ ಅಂದ್ಕೋತೀನಿ...
ಮತ್ತೆ ಲಾಟೀನು..
ಹೇಳಕ್ಕೇ ಖುಷಿ ಆಗತ್ತೆ ಸತೀಶ್...ಆ ಒಂದು ಶಬ್ಧದ ಬಗ್ಗೆ ಇಷ್ಟೆಲ್ಲಾ ಚರ್ಚೆ ಆಗತ್ತೆ ಅಂದ್ಕಂಡೆ ಇರ್ಲಿಲ್ಲ...ಸುಮಾರ್ ಜನ ಹೇಳಿದ್ರು...
ನೋಡ್ತೀನಿ...ಕಂದಿಲು ಅಂತಾ ಒಂದ್ ಶಬ್ಧ ಬಳ್ಸಬೋದು ಅಂದ್ರು,ಲಾಂದ್ರನು ಸೇರ್ತು...
ನೋಡುವಾ...:)..
ಸರಿ...
ಪದ್ದತಿ ಪ್ರಕಾರ...ವಂದನೆಗಳು ನಿಮ್ಮ ಆತ್ಮೀಯ ಪ್ರೋತ್ಸಾಹಕ್ಕಾಗಿ...
ಬರ್ತಾ ಇರಿ..
ನಮಸ್ತೆ :)