ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಅಹಂಮಿನ ಪೊರೆಯನು
ಸುಗ್ಗಿಹುಗ್ಗಿಯ ಮಾಡಿ,ಶಾರದೆಯು ಕರೆಯುತಿರೆ
ಬರುತಿಹನು ರವಿ,ಪಥಪಲ್ಲಟಗೈದು ಹಬ್ಬದೂಟಕೆಂದು
ಕಾಲಧೂಳನು ನೆಕ್ಕಿ,ಸ್ವರ್ಗಪುಣ್ಯವ ಪಡೆದು
ಸಾಗಿಹುದು ನದಿಮೀನು ಮಕರಗಂಬದ ಚೆಲುವನೋಟಕೆಂದು|ನೋ|
ಅಂದದೆಲೆಗಳನೆಲ್ಲ ಬಿಟ್ಟು,ಕನಸಕಸ್ತ್ರವನು ಹೊತ್ತು
ನಿಂತಿಹುದು ಮಾಮರವು ಫಲಬಲ ಸಾರ್ಥಕ್ಯದಾ ಗುರಿತೊಟ್ಟು
ಕಿಚ್ಚು ಹಾಯುವ ಕೆಚ್ಚು,ಜೆಲ್ಲಿಕಟ್ಟಿನ ಕಸುವರಸಿ
ಕೋಡೆತ್ತಿಹುದು ಜೋಡೆತ್ತು,ಡೊಣಕಲಿಗೊಂದು ಗುದ್ದುಕೊಟ್ಟು|ನೋ|
ಬೇರಿನಾಲವ ಮರೆತು ಬಲುದೂರ ನೆರೆದಿರುವ
ದಿವಾಚರಕೆ ತಿರುಗಿಂದು ತವರಿನೆಡೆ ನಡೆತೃಷೆಯು
ಬೆಳೆದಪೈರನು ಕೊಯ್ದು,ಗೋಣಿಚೀಲದಿ ಒಯ್ದ
ಗೆದ್ದೆಬಯಲಲಿ ನಾಳೆ,ಮಗೆಬಳ್ಳಿ ಹಸಿರ್ಹಸೆಯು |ನೋ|
ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಬೇಡದಹಂಮಿನ ಪೊರೆಯನು
ಏಕೆಂದರಿದು ಸಂಕ್ರಮಣ ಕಾಲ,ಇದು ಸಂಕ್ರಮಣಕಾಲ
--------------------------------------------------------------------
*ಶಬ್ದಾರ್ಥ:(ನನಗೆ ತಿಳಿದಂತೆ ,ತಪ್ಪಿದ್ದರೆ ತಿಳಿಸಿ)
ಮಕರಗಂಬ=ಮಕರರಾಶಿಯ ಪ್ರತೀಕವಾದ ಕಂಬ(ಪ್ರತಿರಾಶಿಗೂ ಒಂದೊಂದು ಕಂಬ ಶಾರದೆಯ ಮಡಿಲಲ್ಲಿ)ಜೆಲ್ಲಿಕಟ್ಟು=ಒಂದು ಬಗೆಯ ಎತ್ತುಗಳ ಪಂದ್ಯ,ಡೊಣಕಲು=ಕೊಟ್ಟಿಗೆಯಲ್ಲಿ ದನಕರುಗಳನ್ನು ಕಟ್ಟುವ ಜಾಗ(ಬೇಲಿಯ ಗೇಟು ಎಂದೂ ಬಳಕೆಯಲ್ಲಿದೆಯಂತೆ),ಮಗೆಬಳ್ಳಿ=ಒಂದು ಬಗೆಯ ತರಕಾರಿ,ಮಗೆಕಾಯಿಯ ಬಳ್ಳಿ,ಗೆದ್ದೆ=ಗದ್ದೆ,ಹಸಿರ್ಹಸೆ=ಹಸಿರುಹಸೆ,ದಿವಾಚರ=ಆಕಾಶದಲ್ಲಿ ಚಲಿಸುವುದು,ಪಕ್ಷಿಗಳು ಎಂಬ ಅರ್ಥದಲ್ಲಿ (ಬೆಳಕಿನಲ್ಲಿ ಓಡಾಡುವ ಜೀವಿಗಳು ಎಂಬ ಅರ್ಥವೂ ಇದೆ)
24 comments:
"ಸಾಗಬೇಕಿದೆ ಬಿಟ್ಟು ಅಹಂಮಿನ ಪೊರೆಯನು" ಎನ್ನುವ ತಮ್ಮ ಘೋಷವಾಕ್ಯ ನಮ್ಮ ಮನಸ್ಸುಗಳನ್ನು ತೊಳೆದು ಸಾಗಲಿ ಬದುಕು ನವ ಮನೋ ನಿರ್ಮಾಣದತ್ತ.
ಧನ್ಯವಾದ ಬದರಿ ಸರ್ :)
ತುಂಬಾ ಚೆನ್ನಾಗಿದೆ ಕವನ.ನಮ್ಮ ಮನಸ್ಸುಗಳ ಸ್ವಚ್ಚ ಮಾಡಿ ಸಾಗಬೇಕಿದೆ ಮುಂದೆ. ಸಂಕ್ರಾಂತಿ ಹಬ್ಬದ ಶುಭಾಶಯಗಳು
ಇಷ್ಟವಾಯಿತು ಸಾಲುಗಳು... ಸಂಕ್ರಮಣದ ಶುಭಾಶಯಗಳು ಚಿನ್ಮಯ್...:)
`ಇದು ಸಂಕ್ರಮಣ ಕಾಲ’. ನಾವೂ ಸಹ ಉತ್ತರಮುಖಿಯಾಗಬೇಕು. ಉತ್ತಮ ಕವನ.
ಕವನ ಓಘದ ಜೊತೆ ಜೊತೆಗೆ ನೀವು ಸಾದಿಸುವ ಛಂದಸ್ಸಿನ ಓಟ
ನನಗೆ ತುಂಬಾ ಇಷ್ಟ. ಇದನ್ನು ಸಾಧಿಸುವುದು ಎಲ್ಲರಿಗೂ ಸುಲಭವಲ್ಲ.
ಉತ್ತಮ ಕವಿತೆ , ಅಭಿನಂದನೆಗಳು
ನಿಮ್ಮ ರೀತಿಯಂತೆ ಕೆಲ ಪದಗಳ ಅರ್ಥ ಕೊಟ್ಟಿದ್ದಾರೆ ನನ್ನಂಥವರಿಗೆ ಸಹಾಯವಾಗುತ್ತಿತ್ತು
Chandada kavite.. kushi aaytu.
ಸುಗುಣಕ್ಕಾ....
ಈ ಮನಸ್ಸಿನ ಬಗ್ಗೆ ನಾವು ಯಾವತ್ತೂ ಯೋಚಿಸೋದೆ ಇಲ್ಲಾ ಅಲ್ವಾ??? ನಾನು ನನ್ನದುಗಳ ನಡುವೆ ಮಾಡಬೇಕೆಂದುಕೊಂಡಿದ್ದೇ ಎಲ್ಲೋ ಕಳೆದು ಹೋಗಿರುತ್ತದೆ....ಈ ಗುಂಗಿನಿಂದ ಹೊರಬರಲು ಪ್ರಯತ್ಸಾ ಇದ್ದೆ....ಹಮ್ ನನ್ನಮಟ್ಟಿಗೆ ಮನುಷ್ಯನೇ ನಿಸರ್ಗದ ಕೂಸು...ನಮ್ಮ ಸಮಸ್ಯೆಗಳಿಗೆ ನಿಸರ್ಗದಲ್ಲೇ ಪರಿಹಾರ ಇದೆ ಎಂದು ಹೇಳುವ ಪುಟ್ಟಪ್ರಯತ್ನ ಇದು ....
ಧನ್ಯವಾದ :)
ನಿಮಗೂ ಸಹ ಹಬ್ಬದ ಶುಭಾಷಯ...
ಬರ್ತಿರಿ...
ನಮಸ್ತೆ
ವತ್ಸಾ,
ಧನ್ಯವಾದನೋ :)....
ಅಹ್ ನಿಂಗೂ ಹಬ್ಬದ ಶುಭಾಷಯ:)...
ಎಳ್ಳು ಬೆಲ್ಲ ತಗಂಡು ತಿಂದು ಒಳ್ಳೊಳ್ಳೆ ಮಾತಾಡಿ ;)
ಕಾಕಾ,
ಧನ್ಯವಾದಗಳು ನಿಮ್ಮ ಆಶೀರ್ವಾದಕ್ಕಾಗಿ :)...
ಮನದ ಅಂಗಣ...
ಸ್ವಾಗತ ನಮ್ಮನೆಗೆ :)...ಬಹುಷಃ ಇದೇ ಮೊದಲ ಭೇಟಿ..ಜೊತೆಗೆ ಮಾನಸ ಸರೋವರ,ಜೋಗಿತಿಗಳ ಪರಿಚಯವೂ ಆಯಿತು....
ಧನ್ಯವಾದಗಳು ನಮ್ಮನೆಗೆ ಬಂದಿದ್ದಕ್ಕಾಗಿ :)...
ಕವನವನ್ನು ಇಷ್ಟಪಟ್ಟಿದ್ದಕ್ಕಾಗಿ :)...
ನನ್ನ ಅರೆಬೆಂದ ಬರಹಗಳಲ್ಲಿ ತಪ್ಪು ಅನ್ನಿಸಿದ್ದು,ಹೀಗಿದ್ದರೆ ಚೆನ್ನ ಅನ್ನಿಸದ್ದನ್ನು ದಯವಿಟ್ಟು ಮರೆಯದೇ ಹೇಳಿ...ನನ್ನನ್ನು ಬೆಳೆಸಿ...
ನಿಮ್ಮ ಅನಿಸಿಕೆಗೆ ಮುಕ್ತ ಸ್ವಾಗತ....
ಬರ್ತಾ ಇರಿ...
ನಮಸ್ತೆ :)
ಸ್ವರ್ಣಾ ಅಕ್ಕಾ...
ಧನ್ಯವಾದಗಳು :) :)
ಛಂದಸ್ಸು ಅವು ಇವು ಎಲ್ಲಾ ಗೊತ್ತಿಲ್ಲಪ್ಪಾ..ನಮ್ದೇ ಸೊಳೆರಾಗ ಹಾಕೊಂಡು ಬರ್ಯೋದು....ಎಲ್ಲೋ ಒಂದು ಕಡೆ ಎದ್ದು ನಿಲ್ಲುವ ಸಿನಿಮಾ ಸಾಹಿತ್ಯದ ಸೆಳೆತ ಅದ್ಕೆ ಕಾರಣನೋ ಎನೋ ಗೊತ್ತಿಲ್ಲ...ಇರ್ಲಿ...
ಹಮ್ ಪದಗಳ ಅರ್ಥ..ಹಾಕಿದೀನಿ ನೋಡಿ :) :)
ನಿಮ್ಮಂಥಹ ಹಿರಿಯರ ಪ್ರೋತ್ಸಾಹ ಖಂಡಿತ ನಮ್ಮಂಥಹ ಎಳಸುಗಳಿಗೆ ಅತ್ಯಗತ್ಯ...ಖುಷಿ ಆಯ್ತು ನಂಗೆ ನಿಜ್ವಾಗ್ಲೂ ನಿಮ್ಮ ಕಮೆಂಟು ನೋಡಿ...ಬರ್ತಾ ಇರಿ...
ನಮಸ್ತೆ
chanda baradde... olle padya ... ninagoo sankraatiya shubha harakegalu..:) nam kade donakalu andre belige ippa gate .. danaklu..:)
ವಿಜಯಕ್ಕಾ.
ಧನ್ಯವಾದನೆ :).....
ಬರ್ತಾ ಇರು :)
Nice one
ಸೂಪರ್ ಚಿನ್ಮಯ್.. ಸಂಕ್ರಾಂತಿ ಶುಭಾಶಯ :-)
ಎರಡನೆ ಚರಣದ ಶಬ್ದಸಂಪತ್ತು, ಅರ್ಥ ಸಖತ್ ಇಷ್ಟ ಆತು :-)
>>
ಅಂದದೆಲೆಗಳನೆಲ್ಲ ಬಿಟ್ಟು,ಕನಸಕಸ್ತ್ರವನು ಹೊತ್ತು
ನಿಂತಿಹುದು ಮಾಮರವು ಫಲಬಲ ಸಾರ್ಥಕ್ಯದಾ ಗುರಿತೊಟ್ಟು
ಕಿಚ್ಚು ಹಾಯುವ ಕೆಚ್ಚು,ಜೆಲ್ಲಿಕಟ್ಟಿನ ಕಸುವರಸಿ
ಕೋಡೆತ್ತಿಹುದು ಜೋಡೆತ್ತು,ಡೊಣಕಲಿಗೊಂದು ಗುದ್ದುಕೊಟ್ಟು
<<
ನಂದಿನಿ ಅವ್ರೆ..ಸ್ವಾಗತ ನಮ್ಮನೆಗೆ...ವಂದನೆಗಳು ನಿಮ್ಮ ಅನಿಸಿಕೆಗೆ..
ಬರ್ತಾ ಇರಿ..
ನಮಸ್ತೆ :)
ಪ್ರಶಸ್ತೀ...
ಧನ್ಯವಾದನೋ....
ಬರ್ತಾ ಇರು :) :)
ಸ೦ಕ್ರಾ೦ತಿಯ ಶುಭಾಶಯಗಳು ಚಿನ್ಮಯ್ :) ಸ೦ಕ್ರಾ೦ತಿಯ ಕುರಿತು ಬರೆದ ಈ ಕವನ ಬಹಳ ಇಷ್ಟವಾಯಿತು. ಅದರಲ್ಲೂ ಮೊದಲ ಸಾಲುಗಳು ಬಹು ಹಿಡಿಸಿತು. ನಾವು ನಡೆದು ಬ೦ದ ದಾರಿ ನೋಡಿಕೊಳ್ಳುತ್ತಾ, ಅಹ೦ ನಿ೦ದ ದೂರವಿದ್ದುಕೊ೦ಡು ಸಾಗಿದರೆ ಬದುಕು ಎಷ್ಟು ಸರಳ ಹಾಗೂ ಸು೦ದರ ಅಲ್ಲವಾ...
ಹೀಗೆ ಬರೆಯುತ್ತಿರು :)
ವಾಹ್! ತುಂಬಾ ಚೆನ್ನಾಗಿದೆ ಚಿನ್ಮಯ್... ಸಣ್ಣವಯಸ್ಸಿನಲ್ಲೆ ನೀವು ಎಷ್ಟು ಪ್ರಬುಧ್ಧವಾಗಿ ಬರೆಯುವುದು ಕಲಿತಿದ್ದೀರಿ! ಸಂಕ್ರಾಂತಿಯ ಸಂದರ್ಭದಲ್ಲಿ ಜನರ ಮನಸ್ಸು ಪ್ರಕೃತಿಯಂತೆ ಬದಲಾಗಲಿ ಎಂದು ಹಾರೈಸುವ ಕವನ ತುಂಬಾ ಹಿಡಿಸ್ತು.
ಶೃತಿ ,
ಧನ್ಯವಾದನೇ :)...
ಖಂಡಿತ,ಈ ಅಹಂ ತುಂಬಾ ದಾರಿ ತಪ್ಪುಸ್ತು ನೋಡು...ಅದೊಂಥರ "ಬಿಟ್ಟರೂ ಬಿಡದೀ ಮಾಯೆ".....
ಪ್ರಯತ್ನ ನಮ್ಮದು..ನೋಡುವಾ :)
ನಿಂಗೂ ಸಂಕ್ರಾಂತಿಯ ಶುಭಾಷಯ :)..
ಬರ್ತಾ ಇರು...ಮತ್ತೆ ನಿನ್ನ ಬ್ಲಾಗಲ್ಲೂ ಬರೀತಾ ಇರು :)...
ಟಾಟಾ :)
ಪ್ರದೀಪಣ್ಣಾ,
ಧನ್ಯೋಸ್ಮಿ...ಅದನ್ನೇ ನಾನು ಹೇಳಕ್ ಹೊರ್ಟಿದ್ದು....ಎಲ್ಲದಕ್ಕೂ ಉತ್ತರ ನಮ್ಮೆದರೇ ಇರತ್ತೆ ಹುಡ್ಕ್ ಬೇಕು ಅಂತಾರಪ್ಪಾ ತಿಳಿದವರು....
ಹಮ್..ಧನ್ಯವಾದ ಚಂದದ ಅನಿಸಿಕೆಗೆ...ನನ್ನ ಕವನದ ಸಾರವನ್ನು ಚೊಕ್ಕದಾಗಿ ಕಟ್ಟಿಕೊಟ್ಟಿದ್ದಕ್ಕೆ :)..
ಬರ್ತಾ ಇರಿ..ನಮಸ್ತೆ :)
thumbaa channagiddu chinmay....sakath ishta aatu
ಪದ್ಮಾ....
ಧನ್ಯವಾದನೇ :)
Post a Comment