Sunday, April 27, 2014

ಒಳಕಂಬಿ

ಬ್ಲಾಗಿಗರ ಖೋ ಖೋ ಆಟದಲ್ಲಿ ಕಥೆ ಬರೆಯುವ ಮುಂದಿನ ಪಾಳಿ ನನ್ನದು..ಒಂದು ಪುಟ್ಟ ಪ್ರಯತ್ನ..ನೋಡಿ ಹೆಂಗಿದೆ ಹೇಳಿ...
ಮೊದಲಿಗೆ  ಪ್ರಕಾಶಣ್ಣನ "ಬೇಲಿ" : http://ittigecement.blogspot.in/2014/04/blog-post.html
ನಂತರ ದಿನಕರಣ್ಣನ "ದಣಪೆ" : http://dinakarmoger.blogspot.in/2014/04/blog-post_14.html
ಅದಾದ ಮೇಲೆ ಬಾಲು ಸರ್ ಬರೆದ  "ಎಲ್ಲೆಯ ಮಿಂಚು" : http://nimmolagobba.blogspot.in/2014/04/blog-post_1912.html
ಆಮೇಲೆ ರೂಪಕ್ಕನ "ಮಿತಿ " :http://nimmolagobba.blogspot.in/2014/04/blog-post_1912.html
ಮುಂದುವರೆದು ಶಮ್ಮೀ ಅಕ್ಕಯ್ಯನ "ವ್ಯಾಪ್ತಿ-ಪ್ರಾಪ್ತಿ" : http://mandaaramallige.blogspot.in/2014/04/blog-post_24.html
ನನಗಿಂತ ಮುಂಚೆ ಸುಷ್ಮಾ ಬರೆದ ಕದಡಿದ ಕಡಲು :http://kanasukangalathumbaa.blogspot.in/2014/04/blog-post.html

ಈಗ ನನ್ನದು...ಕಥೆಯ ಬರವಣಿಗೆಯ ಹರವು ನನಗಿನ್ನು ತಿಳಿಯದು...ಹುಚ್ಚಿಗೆ ಬರೆದಿದ್ದೇನೆ... ನೋಡಿ ತಪ್ಪು-ಒಪ್ಪು ತಿಳಿಸಿ..

==============================================================
ಕಾಲಿಂಗ್ ಬೆಲ್ ಬಡಿದುಕೊಳ್ಳುತ್ತಿದೆ..ಕತ್ತಲಾಗಿದೆ ..ಗಡಿಯಾರ ಗಂಟೆ ಎಂಟು ಎಂದು ತೋರಿಸುತ್ತಿತ್ತು..
ಅರರೇ..ನಿದ್ದೆ ಬಂದುಬಿಟ್ಟಿತ್ತಾ ನನಗೆ..?
ಬಾಗಿಲು ತೆರೆದೆ...
ಪತಿರಾಯನೂ ಮೈತ್ರಿಯೂ ನಗುತ್ತಾ ಒಳಗೆ ಕಾಲಿಡುತ್ತಿದ್ದಾರೆ...ಅದೂ ರಾತ್ರಿಯ ಹೊತ್ತಲ್ಲಿ!!
ಮೈತ್ರಿಯ ಕೈ ನನ್ನ ಗಂಡನ ತೋಳೊಳಗೆ ಬಂಧಿಯಾಗಿತ್ತು.
ಕಾಲಡಿಯ ನೆಲ ಕುಸಿದಂತೆ ಭಾಸ..ಕುಸಿದು ಬಿದ್ದೆ...

ಕಣ್ಣೆಲ್ಲವೂ ಮಂಜುಮಂಜಾಗುತ್ತಿತ್ತು ..
ಕಣ್ಣೀರು ತುಂಬಿಬಂದುದರಿಂದಲೋ ಅಥವಾ ಆ ನೋಡಬಾರದ ದೃಶ್ಯವನ್ನು ನೋಡಿ ಅವಾಕ್ಕಾದುದರಿಂದಲೋ ತಿಳಿಯಲಿಲ್ಲ...
ನೋಡುನೋಡುತ್ತಿದ್ದಂತೆ ಮೇಲಿನ ಭಿತ್ತಿಪಟದ ಗುಲಾಬಿಗಳೆಲ್ಲ ಮರೆಯಾಗತೊಡಗಿತ್ತು .
ಹೂವು-ಬಳ್ಳಿ-ಮುಳ್ಳು  ಎಲ್ಲ ಒಂದೇ ಎನಿಸಹತ್ತಿತ್ತು.
ಕತ್ತಲೆ ಎನ್ನಿಸತೊಡಗಿತ್ತು...ಅದೇ ಕತ್ತಲೆ ನೀರಿಗೆ ಬಿಟ್ಟ ಉಜಾಲಾದಂತೆ ಕ್ಷಣಾರ್ಧದಲ್ಲಿ ನನ್ನ ಕಣ್ಣನ್ನೆಲ್ಲಾ ಪೂರ್ತಿಯಾಗಿ ಆವರಿಸಿಕೊಂಡಿತ್ತು,ರೆಪ್ಪೆ ಮುಚ್ಚಿತ್ತು...
ಆದೇನೋ ಪುನಃ ಕಣ್ಣುಬಿಡಬೇಕು ಅನ್ನಿಸಲಿಲ್ಲ..ನೋಡಬೇಕು ಅನ್ನಿಸಲಿಲ್ಲ..
ಯಾಕೋ ಎಲ್ಲವೂ ಬೇಡವಾಗಿತ್ತು,ರೆಪ್ಪೆ ಒಡೆಯುವುದೂ ಸಹಾ...
ನನ್ನೊಳಗೆ ನಾನಿದ್ದೆ..
ಹೌದು ಪೂರ್ತಿ ಒಳಗೇ ಹೋಗಿದ್ದೆ.....

ಸಂಬಂಧಗಳು ಎಂದರೆ ಏನು ???
ಸ್ನೇಹಕ್ಕೂ,ಪ್ರೀತಿಗೂ,ಬಯಸುವಿಕೆಗೂ ನಡುವೆ ಅಂತರವೇನು??
ಬೇಕು ಅನ್ನಿಸಿದರೆ ಅದು ಬಯಕೆಯಾ??
ಇಬ್ಬರ ಬಯಸುವಿಕೆಗೊಂದು ಅರ್ಥಕೊಡುವುದು ಸ್ನೇಹವಾ??
ಸ್ನೇಹದ ಉತ್ತುಂಗವೇ ಪ್ರೀತಿಯಾ?ಅಥವಾ ಅದೊಂದು ಹೊಸ ಥರಹದ ಉತ್ಕಟ ಬಯಕೆಯಾ ??

ನಾನು ನನ್ನ ಹುಡುಗನ ಸಾಂಗತ್ಯವನ್ನು ಬಯಸಿದ್ದೆ ನಿಜ ,ಆದರೆ ಅದು ಯಾವಗಲೂ ನನ್ನ ಜೊತೆಗೇ ಇರಬೇಕೆಂದು ಬಯಸಿದ್ದೆನಾ??ಇಲ್ಲ,ಅದೊಂದು ಕ್ಷಣಿಕದ ಭಾವನೆಯಷ್ಟೇ..ಏನೋ ಅಮಲೇರಿ ಹೊರಟಿದ್ದೆ,ಅದು ಬಯಕೆಯಷ್ಟೇ ಇರಬೇಕು ಹಾಗಾದರೆ....ಅಲ್ಲಾ ಅದು ಅದಕ್ಕಿಂತ ಚೂರು ಮುಂದಿನದಾ??

ಒಂದಾನೊಂದು ಕಾಲದಲ್ಲಿ ತೀರಪರಿಚಿತರಾಗಿದುದರಿಂದ ಒಂದಿಷ್ಟು ಸಲಿಗೆಯಿಂದ ಮಾತನಾಡಿದುದು....
ಅಷ್ಟೇ ವಾಸ್ತವ...ಆದರೆ ನನ್ನದೆಲ್ಲವನ್ನು ಅವನಿಗೆ ಹೇಳಿದ್ದೆನಾ ಅಥವಾ ಅವನ ಬದುಕಿನ ನಡೆಗಳನ್ನು ಕೇಳಿದ್ದೆನಾ ?ಅವನ ಹೆಂಡತಿ-ಮಕ್ಕಳು ಸಂಸಾರದ ಬಗ್ಗೆ ತೀರಾ ಕೆದಕಿದ್ದೆನಾ ??
ಉಹೂಂ..ಅವನೇ ಯಾವಗಲೋ ಹೇಳಿದ ನೆನಪಲ್ಲವಾ ,"ಸ್ನೇಹಿತರಲ್ಲಿ ಎಲ್ಲವನ್ನು ಹೇಳಿಕೊಳ್ಳುತ್ತೇವೇಯೋ ಇಲ್ಲವೋ ಗೊತ್ತಿಲ್ಲ ಆದರೆ ಹಂಚಿಕೊಳ್ಳುತ್ತಿರುವ ವಿಚಾರಗಳೆಲ್ಲ ಸತ್ಯವಾಗಿರಬೇಕು" ಎಂದು!
ಹಾಗಾದರೆ ಅದೊಂದು ಪರಿಶುಧ್ಧ ಸ್ನೇಹವಾ ?

ಹಾಗಾದರೆ ಇಷ್ಟು ವರ್ಷದ ಮೇಲೆ ಅವನು ಸಿಕ್ಕಾಗ ನಾನೇಗೆ ಅಷ್ಟು ಗಲಿಬಿಲಿಯಾದೆ??
ನನಗೆ ತಿಳಿಯದಂತೆ ಅದೇಕೆ ಹಾಗೆ  ತೀವ್ರವಾಗಿ ಸ್ಪಂದಿಸಿದೆ?
 ನಾನು,ನನ್ನವರು, ಮಕ್ಕಳುಮರಿ,ಅಡಿಗೆ,ನೆಂಟರು,ಮನೆ,ಕಂಪನಿ,ನರ್ಸರಿ,ಸ್ಕೂಲು, ಕಾರು,ಸೈಟು,ಟೀ.ವಿ,ಸೀರಿಯಲ್ಲುಗಳಲ್ಲಿ ಮುಳುಗಿದ್ದವಳಿಗೆ ಅದೇಕೆ ಆ ಹುಡುಗ ಬೇಕೆನ್ನಿಸಿತು???ಅದೇ ಪ್ರೀತಿಯಾ??
ನನ್ನೆಲ್ಲ ಜವಾಬ್ದಾರಿ,ಸ್ಥಾನಮಾನಗಳನ್ನು ಮರೆಸಿ ಸೆಳೆಯುತ್ತಿರುವ ಬಂಧವಾ ??

ಊಹೂಂ..ಯಾಕೋ ಪೂರ್ತಿಯಾಗಿ ಒಪ್ಪಲಾಗುತ್ತಿಲ್ಲ..ಇರಲಿಕ್ಕಿಲ್ಲ..ಅದೊಂದು ಆಸೆಯಿರಬಹುದಷ್ಟೇ..ಚಿಕ್ಕಂದಿನಿಂದಲೂ  ಮಳೆ ಬಂದಾಗ ನೀರಿಗಿಳಿದು ನೆನೆದು ಬಿಡುವ ನನ್ನ ಹುಚ್ಚಿನಂತೆ!...

ಛೇ..ಇದಕ್ಕೆ ಹೆಸರೇ ಬೇಡ ..ಹೋಗಲಿ...
ನಾನು ಅವನೊಡನೆ ಮಾಡಹೊರಟಿರುವುದಾದರೂ ಏನು??
ನನ್ನ ಕಥೆ ಒತ್ತಟ್ಟಿಗಿರಲಿ ಅವನೂ ಸಂಸಾರಸ್ಥ.ಅದೇನು ಸ್ವೇಚ್ಛಾಚಾರವಾ ?
ನನಗನ್ನಿಸಿದ್ದನ್ನು ನಾನು ಮಾಡಿದೆ ಅದರಲ್ಲೇನು ತಪ್ಪು ಅನ್ನಬಹುದಾ??

ಹಾಗಾದರೆ ನನ್ನವರು ಮಾಡುತ್ತಿರುವುದು ಏನು ಈಗ?? ಹೇಸಿಗೆ ಅನ್ನುತ್ತೇನೆ ನಾನು...ಅದನ್ನೂ ಸ್ವೇಚ್ಛಾಚರವೇ ಎನ್ನಬಹುದಾ?? ಅವಳಿಗೂ ನನ್ನವರಿಗೂ ಇಷ್ಟವಿದ್ದಿರಬಹುದು..ಒಟ್ಟಿಗೆ ಓಡಾಡುತ್ತಿದ್ದಾರೆ,ಹಾಯಾಗಿದ್ದಾರೆ..ಅದರಲ್ಲೇನು ತಪ್ಪು?ನಾನೇಕೆ ಇವರಿಬ್ಬರನ್ನೂ ನೋಡಿ ಇಷ್ಟು ದಿಗಿಲಾಗಿದ್ದೇನೆ,ನನ್ನವರ ಮೇಲೆ ಕೋಪಿಸಿಕೊಂಡಿದ್ದೇನೆ??

ಅಥವಾ ಇದೇ ನನ್ನವರ ಮೇಲೆ ಇನ್ನೂ ಎಲ್ಲೋ ನನ್ನಲ್ಲಿ  ಆಗಾಧವಾಗಿರುವ  ಸಹಜ ಪ್ರೀತಿಯಾ??
ಎಲ್ಲೋ ಕೇಳಿದ ನೆನಪು ...ಎಲ್ಲಿ ಪ್ರೀತಿ ಜಾಸ್ತಿ ಇರುತ್ತದೆಯೋ ಅಲ್ಲಿ ಕೋಪವೂ ಜಾಸ್ತಿ ಎಂದು,ನಿಜವೇ ತಾನೆ??ಅದೇ ಕಾರಣವಾ?

ಹಾಗಾದರೆ ಈಗೇನು ಮಾಡಲಿ..ನಾನೇನೋ ನನ್ನ ಹುಚ್ಚು ಬಯಕೆಗಳನ್ನು ಬಚ್ಚಿಟ್ಟು ತೆಪ್ಪಗಿರಬಹುದು..ಏನೇನೋ ಕಾರಣಕೊಟ್ಟು ಅವನನ್ನು ನೋಡದೆಯೇ ಇರಬಹುದು..ತೀರಾ ತಡೆಯಲಾಗದಿದ್ದರೆ "ಇವರಿಗೆ" ದುಂಬಾಲು ಬಿದ್ದು ಊರನ್ನೇ ಬಿಡಲೂ ಬಹುದು..ಆದರೆ ಇವರು ??
ಈ ಪತಿರಾಯನಿಗೆ ಅವಳನ್ನು ಬಿಡುವುದು ಸಾಧ್ಯವಾ?? ಮನೆಯ ತನಕ ಕೈಕೈಹಿಡಿದು ಎದುರೇ ನಿಂತವರು ನಾಳೆ ನೀನು ಬೇಕಾದರೆ ಎಲ್ಲಿಗಾದರೂ ಹೋಗು ಅಂದಾರು....

ಎಲ್ಲಿಗೋ ಹೋಗುವುದು ಕಷ್ಟವಲ್ಲ...ಜಿದ್ದಿಗೆ ಬಿದ್ದು ಯಾರ ಮುಂದೆಯೂ ಕೈಯ್ಯೊಡ್ಡದೇ ತಲೆಯೆತ್ತಿಯೇ ಮಕ್ಕಳನ್ನು ಸಾಕಿಯೇನು..ಆಡಿಕೊಳ್ಳುವವರ ಮುಸಡಿ ಕೆಂಪಾಗುವಂತೆ ಮಕ್ಕಳ ಮದುವೆ-ಮಂಗಲವನ್ನೂ ಮಾಡಿಸಿಯೇನು..ನನ್ನ ಬದುಕು ಇರುವವರೆಗೂ ಮಕ್ಕಳಿಗೊಂದು ದಿಕ್ಕಾದೇನು .. 

ಆದರೆ ಅಷ್ಟೇ ಸಾಕಾ??
ಗಂಡ-ಹೆಂಡತಿ-ಮಕ್ಕಳೆಲ್ಲಾ ಒಟ್ಟಿದ್ದರೆ ಚೆನ್ನವಲ್ಲವಾ?ನನ್ನ  ಅಪ್ಪ-ಅಮ್ಮನಿಗೂ ಇನ್ನೇನು ಬೇಕು??
ಎನು ಮಾಡಲಿ ಈಗ ಹಾಗಾದರೆ...

ಆ ಮೈತ್ರಿಯ ಜುಟ್ಟು ಹಿಡಿದು ಹೊರದಬ್ಬಲಾ??ನನ್ನವರ ಕಾಲು ಹಿಡಿದು ಬೇಡಿಕೊಳ್ಳಲಾ ??
ಅಥವಾ ಇಬ್ಬರನ್ನೂ ಕೂಡ್ರಿಸಿ  ಮಾತುಕಥೆಯಾಡಲಾ ?? ಇಲ್ಲಾ ನೇರವಾಗು ಅದದ್ದಾಯಿತು ಇನ್ನುಮುಂದಾದರೂ ನೆಟ್ಟಗಿರಿ,ಇದನ್ನು ಹೀಗೆ ಮುಂದುವರೆಸಿದರೆ ನನ್ನ ದಾರಿ ನನಗೆಂದು ಗಟ್ಟಿಯಾಗಿ ಕೂಗಿಹೇಳಲಾ??? ಅಂದುಕೊಳ್ಳುತ್ತಿರುವಾಗಲೇ ನನ್ನನ್ನು ದೂರದಿಂದ ಯಾರೋ ಕರೆದಂತಾಯಿತು...
ಮತ್ತೆ ಮತ್ತೆ ಕರೆದಂತಾಯಿತು...
ಹೌದು ಯಜಮಾನರ ಧ್ವನಿಯೇ ಅದು...

ಇನ್ನೊಂದು ಸಲ ಕರೆದಾಗ ಕಣ್ಣು ತಂಪುತಂಪಾಯಿತು...ಕೈಯ್ಯನ್ನು ಯಾರೋ ತಿಕ್ಕುತ್ತಿದ್ದಂತೆ ಅನ್ನಿಸಿತು..ಮುಖಕ್ಕೆ ತಂಪಾದ ಗಾಳಿಗೂ ಹೊಡದಂತೆ ಭಾಸವಾಯಿತು..ಕಣ್ಣು ಬಿಡುವ ಪ್ರಯತ್ನ ಮಾಡಿದೆ....ಉಹೂಂ ಎಲ್ಲ ಮಂಜು ಮಂಜು...ತಲೆ ಸುತ್ತುತ್ತಿತ್ತು...ಬರುಬರುತ್ತಾ ಮಸುಕು ಕಡಿಮೆಯಾಗುತ್ತಿತ್ತು..ಮೆಲ್ಲನೆ ಮಣ್ಣಮುದ್ದೆಯಲ್ಲೊಂದು ಕಪ್ಪು ಕಂಬಳಿಹುಳು ಕಂಡಂತಾಯಿತು..ಒಂದೆರಡು ಗಳಿಗೆಯಲ್ಲೇ ನನ್ನವರ ಮುಖ ಕಾಣತೊಡಗಿತ್ತು..ಅವರ ದಪ್ಪ ಮೀಸೆ,ಗಾಬರಿಯಾದ ಮುಖ ಎಲ್ಲವೂ ಕಾಣುತ್ತಿತ್ತು..ಮೈತ್ರಿ ಕೈ ತಿಕ್ಕುತ್ತಾ ಕುಳಿತ್ತಿದ್ದಳು.ಅವಳ ಮುಖದಲ್ಲೂ ಸ್ತ್ರೀ ಸಹಜ ವಾತ್ಸಲ್ಯವಿತ್ತು.. .ನಾನು ಹಾಲ್ ನ ಸೋಫಾದ ಮೇಲೆ ಮಲಗಿದ್ದೆ...ಇನ್ನೇನು ಎಳಬೇಕು ಅನ್ನಿಸುವಷ್ಟರಲ್ಲಿ ಮುಖದ ಮೇಲೆ ಏನೋ ಅಲುಗಾಡುವಂತೆ ಅನ್ನಿಸುತ್ತಿದ್ದು.ತಂಪಾದ ಗಾಳಿಯೂ ಬರುತ್ತಿತ್ತು...ಕತ್ತೆತ್ತಿದ್ದರೆ ಆ ಹುಡುಗ ಕಾಣುವುದಾ????
ಹೌದು ಅವನೇ ??? ಇರಲಾರದು..ಕಣ್ಣುಜ್ಜಿಕೊಂಡೆ...ಅವನೇ..
ಕೈ ಚಿವುಟಿಕೊಂಡೆ ಚುರ್ರ್  ಅಂದಿತು...ನಿಜವೇ..ಅವನೇ ಕೂತಿದ್ದಾನೆ..ಅರೇ ಇಸ್ಕಾ!!

ಮತ್ತೆ ತಲೆ ಗಿರ್ರೆಂದಿತು...ಅಥವಾ ಮೊದಲಿನಂದಲೂ ತಿರುಗುತ್ತಲೇ ಇತ್ತೋ ಎನೋ,ಸ್ವಲ್ಪ ಜೋರಾಯಿತು ...ಏಳಲು ಹವಣಿಸಿದಾಗ ಪತಿರಾಯರು ಭುಜ,ಬೆನ್ನು ಹಿಡಿದು ಮೇಲೆತ್ತಿದರು.ನೀರು ಕೊಟ್ಟರು..ಸ್ವಲ್ಪ ಸುಧಾರಿಸಿದ ಹಂಗೆ ಕಂಡ ಮೇಲೆ "ಏನಾಯ್ತೇ...ನಡಿ ಆಸ್ಪತ್ರೆಗೆ ಹೋಗಣಾ...ಸ್ಲ್ಜ್ ಸ್ಜ್ಫ಼್ಲ್ಕ್ಸ್ದ್ಜ್ ಫ಼್ಲ್ಸ್ದ್ಜ್ಫ಼್ಸ್ದ್ಕ್ಲ್ಫ಼್ಜ್ಸ್ಲ್ ಲ್ಕ್ಸ್ದ್ಜ್ಫ಼್ಸ್ಲ್ಕ್ದ್ಫ಼್ಜ್ಸ್ಲ್ದ್ಕ್ಫ಼್ಜೊಇವೆಫ಼್ವೆಜ್ಫ಼್ಲ್ಸ್ದ್ಜ್ಫ಼್ಲ್ಕ್ಸ್ದ್ಜ್ಫ಼್ಕ್ಲ್ಸ್ದ್ಜ್ಫ಼್ಸ್ಲ್ದ್ಕ್ಫ಼್ಜ್ ಅ;ದ್ಫ಼’ಸ್ವೊಇಫ಼್ಪೆಫ಼ಿಪೊಎವಿಫ಼್ಪ್ವಿಫ಼್ ಫ಼್ಕ್ವ್ಚ್ನ್ವ್ಸ್ಲ್ಕ್ದ್ಜ್ಫ಼್ಸ್ಲ್ಕ್ಫ಼್ಸ್" ಇನ್ನೂ ಏನೇನೋ ಹೇಳುತ್ತಿದ್ದಂತಿತ್ತು...
ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ... ಸಣ್ಣಗಿನ ಧ್ವನಿಯನ್ನ ಸ್ವಲ್ಪ ಗಟ್ಟಿ ಮಾಡಿಕೊಳ್ಳುತ್ತಾ "ಏನಿಲ್ಲ,ಸಂಕಷ್ಟಿಯೆಂದು ಊಟಮಾಡಿರಲಿಲ್ಲ ...ಅದ್ಕೇ ಸುಸ್ತು... ಚೂರು ಮಲಗುತ್ತೇನೆ...ಸರಿಯಾಗುತ್ತದೆ " ಎಂದು ರೂಮಿಗೆ ಹೊರಡಲು ಅನುವಾದೆ..ಎದ್ದವಳಿಗೆ ಕಾಲೆಡವಿ ಮತ್ತೆ ರೂಮು ತಲುಪಿಸಲು ನನ್ನವರೇ  ಬರಬೇಕಾಯಿತು..ಕಾಲೆಡವಿದಾಗ ಆ ಹುಡಗ "ನಿಧಾನ ನಿಧಾನ" ಎಂದಿದ್ದು ಈಗಲೂ ಕಿವಿಯಲ್ಲಿ ಗುಯ್ಯ್ಂ ಗುಡುತ್ತಿತ್ತು... ನಾನು ರೂಮಿನಲ್ಲಿ ಮಲಗಿದ್ದೆ...ಮನಸ್ಸು ಕೂಡಾ ರೂಮಿನ ಕದದಂತೆ ಆರ್ಧ ಒಳಗೆ-ಅರ್ಧ ಹಾಲಿನಡೆಗೆ ತೆರೆದಿತ್ತು...

ವಾಪಸ್ಸು ಹೋದ ಪತಿರಾಯರು ಆಗಂತುಕರೊಂದಿಗೆ ನನ್ನ ಕುರಿತು "ಉಪವಾಸ ಗಿಪವಾಸ ಎಲ್ಲಾ ಬೇಕು ಇವಳಿಗೆ..ಎಷ್ಟ್ ಹೇಳಿದ್ರೂ ಕೇಳಲ್ಲಾ ಸಾರ್ " ಎಂದೆಲ್ಲಾ ಒಂದಿಷ್ಟು ಸಾಂದರ್ಭಿಕವಾಗಿ  ಬೈದು ಕೊನೆಗೆ 
"ಎನ್ ಸಾರ್, ಮೈತ್ರಿ ಮೇಡಮ್ ಅವ್ರು ನಿಮ್ ಮಿಸೆಸ್ ಅಂತಾ  ಇಷ್ಟ್ ದಿನಾ ಅದ್ರೂ ಹೇಳ್ಳೇ ಇಲ್ವಲ್ಲಾ ಸಾರ್? ಇದೇನ್ ಹಿಂಗೆ.” ಎಂದರು..
.ನನ್ನ ಕಿವಿ ಚುರುಕಾಯಿತು...
ಧಡಕ್ಕನೆ ಎದ್ದು ಕೂತೆ ಮಂಚದಿಂದ...

ಇವರು ಹಾಗೇ ಮುಂದುವರೆದು..".ಇವತ್ತು ನಿಮ್ ಮನೆಗೆ ಬರ್ತೀನಿ  ತೊಂದ್ರೆ ಇಲ್ಲಾ ಅಲ್ವಾ?? ನನ್ನ ಹಸ್ಬಂಡ್ ನಿಮ್ಮನೆ ದಾರಿಲೇ ಬರ್ತಿದಾರಂತೆ..ಅಲ್ಲಿಗೇ ಬಂದು ಪಿಕ್ ಮಾಡ್ತಾರೆ ಅಂದಾಗಲೇ ಗೊತ್ತಾಗಿದ್ದು ನಿಮ್ಮ ಬಗ್ಗೆ..ಏನಾ ಸಾರ್ ನೀವು,,ಮೊದ್ಲೇ ಹೇಳದಲ್ವಾ?? ನೀವಾದ್ರೂ ಮೇಡಮ್..ನಾನು ಅವಾಗಾವಾಗ ಸಾರ್ ಬಗ್ಗೆ ಹೇಳ್ತಾ ಇದ್ರೂ ಏನೂ ರೆಸ್ಪಾನ್ಸೆ ಮಾಡ್ತಿರ್ಲಿಲ್ವಲ್ಲಾ ಮೇಡಮ್.."ಎಂದರು...
ಆ ಹುಡುಗ.ಛೀ ಹುಡುಗನಲ್ಲ ಅವನು ವಯಸ್ಸಾಗಿದೆ...ಆದರೂ "ಹುಡುಗನೇ ಅವನು" ಇರಲಿ...ಆತ ಕರ್ತವ್ಯ ನಿಷ್ಠೆ,ವೈಯಕ್ತಿಕ ಬದುಕು ಇವುಗಳ ಬಗ್ಗೆ ತನ್ನ ಎಂದಿನ ಶೈಲಿಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಲು ಹೊರಟಾಗ ಮೈತ್ರಿ ಅವನನ್ನು ಅರ್ಧಕ್ಕೆ ತಡೆದು,
"ಗೊತ್ತಿದ್ರೆ ನೀವು ನನ್ ಹತ್ರಾ ಇಷ್ಟು ಕ್ಲೋಸಾಗಿ ಇರ್ತಿದ್ರಾ" ಎಂದು   ಕಣ್ಣು ಮಿಟುಕಿಸಿದ್ದಳು..ಮೂವರೂ ಜೋರಾಗಿ ಗಹಗಹಿಸಿ ನಕ್ಕರು...

ಮತ್ತೆ ಇನ್ನೇನೋ ಮಾತು..ಮತ್ತೆ ನಗು...ನಗು ನಗು...ನನಗೆ ಮಂಗಳೂರು ಟ್ರಿಪ್ಪಿನಲ್ಲಿ ನಾವು ಬಸ್ಸಿನಲ್ಲಿ ಹರಟೆಕೊಚ್ಚುತ್ತಿದ್ದ ನೆನಪು ತಂತು.ಆ ಹುಡುಗ ಚೂರೂ ಬದಲಾಗಿರಲಿಲ್ಲ...ಅದೇ ಮಾತುಗಳು..ಯಾರನ್ನೂ ಆಡಿಕೊಳ್ಳದ ತಿಳಿಹಾಸ್ಯ..ಮುಗ್ಧ ನಗು...ಮೈತ್ರಿಯೂ ಅಷ್ಟೇ...ಅದೇ ಧಾಟಿ...ಚೂರು ಘಾಟು,ಪೋಲಿಯೆನ್ನಿಸುವ ಡೈಲಾಗುಗಳು..ನಗು ನಗು...ಅದೇ ಥರ ಒಂದಿಷ್ಟು ಮಾತುಕಥೆ ಆದಮೇಲೆ ಮೈತ್ರಿ ತಾನು ನನ್ನ ಯಜಮಾನರೊಡನೆ ಕಂಪನಿ ಕೆಲಸದ ಮೇಲೆ ದೆಲ್ಲಿಗೆ ಹೋದಾಗಿನ ,ಅಲ್ಲಿಯ ಒಂದಿಷ್ಟು ನಗುಬರಿಸುವ ಸಂಗತಿಗಳನ್ನೂ ಹೇಳಿದಳು..ಆದನ್ನು ಆ ಹುಡುಗ ತೀರಾ ಸಾಮಾನ್ಯ ಎಂಬಂತೆ ಸ್ವೀಕರಿಸುತ್ತಿದ್ದ...ಅಲ್ಲಲ್ಲಿ ತನ್ನದೂ ಒಂದೆರಡು "ಅಲ್ಲಿ  ಹಾಗೆ ಹೀಗೆ"  ಎಂದು ಸಲ್ಲು ಸೇರಿಸುತ್ತಿದ್ದ...ನಗುತ್ತಿದ್ದ..
ನಾನು ಮಂಚದ ತುದಿಗೆ ಬಂದು ಕೂತಿದ್ದೆ...ಕಾಲು ನೆಲಕ್ಕಿರಿಸಿ ಕೈಯ್ಯಿಂದ ಮುಖಮುಚ್ಚಿಕೊಂಡಿದ್ದೆ..ತೀರಾ ಗೊಂದಲದಲ್ಲಿದ್ದೆ...ಅವರ ಮೂವರ ನಗು ನನ್ನ ಮೌನಕ್ಕೆ ಸಮನಾಗಿತ್ತು...


ಇನ್ನೊಂದೆರಡು ನಿಮಿಷವಾದ ಮೇಲೆ ಅವರಿಬ್ಬರೂ ಹೊರಡಲು ತಯಾರಾದರು.ಮೈತ್ರಿ ನನಗೆ ಬಾಯ್ ಹೇಳಲೋ ಏನೋ ರೂಮಿನ ಹತ್ತಿರ ಬರುವಂತೆ ತೋರಿದಳು ಅಷ್ಟರಲ್ಲೇ ಆ ಹುಡುಗ ಅವಳನ್ನು ತಡೆದು "ಏಯ್ ಅವರನ್ನಾ ಯಾಕೆ ಎಬ್ಬಿಸ್ತೀಯಾ,ಮಲ್ಕೊಳ್ಳಿ ಬಿಡು" ಎನ್ನುತ್ತಾ
,"ನಿಮ್ ಮಿಸಸ್ ಗೂ ಹೇಳ್ಬಿಡಿ" ಎಂದು ಮೆಟ್ಟಿಲಿಳಿದು ಹೊರಟು ಹೋದ....

ನನಗೆ ಅದೇನೋ ಹಾಯೆನಿಸಿತು...ನನ್ನವರ ಬರುವಿಕೆಗಾಗಿ ಕಾದೆ..ಎಲ್ಲವನ್ನೂ ಹೇಳಬೇಕೆಂದುಕೊಂಡೆ..ಅಷ್ಟರಲ್ಲಿ ಅದೇನೋ ಟೇಬಲ್ಲಿನ ವರೆಗೆ ಬಂದವರು  ಬಂದವರು ಮತ್ತೆ ತಿರುಗಿ ತಿರುಗಿ ನೋಡಿದರು...ಮೈತ್ರಿಯಲ್ಲೇ ನೋಡುತ್ತಿದ್ದರಾ ???ಮತ್ತೆ ವಾಪಸ್ಸು ಗೇಟಿನೆಡೆಗೆ ಓಡಿದರು..ನನಗೆ ಸಿಟ್ಟು ಮತ್ತೆ ಬುಸ್ಸೆಂದಿತು...ಎದ್ದು ಹಾಲಿನ ಪಕ್ಕದ ರೂಮಿನ ಕಿಟಕಿಯ ಬಳಿ ನಿಂತೆ...ಇವರು  ಎಲ್ಲಿ ಮತ್ತೆ ಮೈತ್ರಿಗೆ ಬಾಯ್ ಹೇಳಲು ಚಪ್ಪರಿಸಿದರೋ ಅಂದುಕೊಂಡೆ...

ಇವರು ಹೊರಗೋಗಿ ,ಹೊರಟವರ ಕಾರಿನ ಬಳಿ ನಿಂತು,
"ಸಾರ್ ನಿಮ್ಮ ಮಿಸೆಸ್ ಮೊಬೈಲು ಸಾರ್...ಅವತ್ತು ಡೆಲ್ಲಿಇಂದ ಹೊರಡ್ಬೇಕಾದ್ರೆ..  ಏನೋ ತೀರಾ ತೀರಾ ಅರ್ಜಂಟ್ ಕಾಲ್ ಮಾಡ್ಬೇಕಿತ್ತು..ನನ್ ಮೊಬೈಲ್ ಹ್ಯಾಂಗ್ ಆಗ್ತಾ ಇತ್ತು...ಅದ್ಕೆ  ಮೇಡಮ್ ಅವ್ರ  ಹತ್ರಾ ಮೊಬೈಲ್ ಇಸ್ಕೊಂಡು ಕಾಲ್ ಮಾಡ್ದವ್ನು ಹಂಗೆ ಟೆನ್ಶಲ್ ಅಲ್ಲಿ ನಾನೆ ಬ್ಯಾಗಿಗೆ ಹಾಕ್ಕೊಂಡ್ ಬಿಟ್ಟಿದ್ದೆ ಅನ್ಸತ್ತೆ...ಬಂದವನು ನೆನಪಾಗ್ಲಿ ಆಂತಾನೆ ಟೇಬಲ್ಲಿನ ಮೇಲಿಟ್ಟಿದ್ದೆ...ಈಗ ನೆನಪಾಯ್ತು. ತಗೊಳಿ ಸಾರ್  " ಎಂದು ಮೊಬೈಲೊಂದನ್ನು ಕೊಟ್ಟರು...
ಹೌದು..ಅದೇ ಮೊಬೈಲು..ನಾನು ಮೈತ್ರಿಯ ಪ್ರೇಮಸಂದೇಶಗಳನ್ನೆಲ್ಲಾ ಓದಿದ ಮೊಬೈಲು...ನೂರೆಂಟು ಮೆಸ್ಸೇಜುಗಳಿದ್ದ ಮೊಬೈಲು... ಇದೇನಿದು ಅಂದುಕೊಳ್ಳುವಾಗಲೇ,ಆ ಹುಡುಗ ನಗುತ್ತಾ ಮೈತ್ರಿಯ ಮುಖ ನೋಡಿ
"ಥ್ಯಾಂಕ್ಯು ಸಾರ್...ಇದು ನನ್ನ ಹಳೆಯ ಮೊಬೈಲು.. ಅವಳಿಗೆ ಅದೇನೋ ಹುಚ್ಚು ಇವಳಿಗೆ...ಊರುಬಿಟ್ಟೂ ಹೋಗ್ಬೇಕಾದ್ರಲ್ಲಾ ಅದನ್ನಾ ತಗೊಂಡ್ ಹೋಗ್ತಾಳೆ...ನನ್ನ ನೆನಪಿಗಂತೆ... ಇರ್ಲಿ ಇಷ್ಟ ದಿನ ಸುಮ್ನೆ ತಗೊಂಡು ಹೋಗಿ ಬರ್ತಿದ್ಲು ಈ ಸರಿ ನಿಮ್ಗಾದ್ರು ಪ್ರಯೋಜನಕ್ಕೆ ಬಂತು" ಎಂದು ಕಾರು ಸ್ಟಾರ್ಟು ಮಾಡಿದ..

ನಮ್ಮ ಯಜಮಾನರಿಗೆ ಅದೇನನ್ನಿಸಿತೋ "ಸಾರ್..ಸ್ಸಾರಿ..ಇಷ್ಟೇಲ್ಳಾ ಪರ್ಸನೆಲ್ ಅಂತಾ ಗೊತ್ತಿರ್ಲಿಲ್ಲ...ಅದೂ ನಂದು ಒಂದು ಇದೇ ಮಾಡೆಲ್ ನಾ ಮೊಬೈಲ್ ಇದೆ...ಇದೇ ಮಾಡೇಲ್ದು..ಆಶ್ವರ್ಯ ಅಂದ್ರೆ ಅದೇ ಗುರು ರಾಘವೇಂದ್ರರ  ವಾಲ್ಪೇಪರ್ ಕೂಡಾ.. ಅದ್ಕೇ ಗೊತ್ತಾಗ್ಲಿಲ್ಲ..ಸ್ಸಾರಿ" ಎಂದು ಗಲ್ಲುಗಿಂಜಿದರು...
ಅದಕ್ಕೆ ಆತ "ಅಯ್ಯೋ ಪರವಾಗಿಲ್ಲ ಬಿಡಿ" ಎಂದು ನಕ್ಕುಕಾರನ್ನು   ರಿವರ್ಸು ಗೇರಿಗೆ ಹಾಕುತ್ತಾ ಮೈತ್ರಿಯ ಮುಖ ನೋಡಿದ...ಆಕೆ ಸರಿಯಿದ್ದ ತನ್ನ ವೇಲನ್ನು ಮತ್ತೆ ಸರಿಮಾಡಿಕೊಂಡಳು...
ಕಾರು ಮನೆದಾಟಿ ಮೂತಿ ತಿರುಗಿಸಿಕೊಂಡು ಹೊರಟಿತ್ತು.....
ನನ್ನವರು ಗೇಟು ಹಾಕಿ ವಾಪಸ್ಸು ಬರುತ್ತಿದ್ದರು...
ಆಗ ಯಾಕೋ ಆ ಹುಡುಗ ಕಾಲೇಜಿನಲ್ಲಿ  ಹೇಳಿದ ಮಾತು ನೆನಪಾಯಿತು...ಮತ್ತೆ ಮತ್ತೆ ಕೇಳಬೇಕು ಅನ್ನಿಸಿತು..

"ನಮ್ಮ 
ಮನೆಯ ಹಿರಿಯರು ನಮಗೆ  ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದಾರೆ..

ಹಿರಿಯರ 

ಆ ಸಂಸ್ಕಾರದ ಬೇಲಿ ನಮಗಾಗಿ..
ನಮ್ಮ ಒಳಿತಿಗಾಗಿ.. 

ಅವರು ಕೊಟ್ಟ 

ಸ್ವಾಂತಂತ್ರ್ಯ... 
ಬೇಲಿಯನ್ನು  ಹಾರುವದಕ್ಕಲ್ಲ...

ಒಪ್ಪುವ ಮನಸ್ಸಿಗಿಂತ..


ಬಯಸುವ  ದೇಹಕ್ಕಿಂತ ... 


ನಮಗೆ ನಾವೆ ಹಾಕಿಕೊಂಡ .. 

ನೀತಿ..
ನಿಯತ್ತು .. ಬಲು ದೊಡ್ಡದು..

ನಿನ್ನ 

ಚಂದದ ಸ್ನೇಹವನ್ನು  ಯಾವಾಗಲೂ ಮರೆಯುವದಿಲ್ಲ.."




ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು..
============================================================
(ಮುಂದೇನಾಯಿತು ?  ನಿಮಗೇ ಗೊತ್ತಿದೆ....)

28 comments:

ದಿನಕರ ಮೊಗೇರ said...

Chinmay..
tumbaa sogasaagide.... kathegondu oLLeya twist ide.... munduvarikegu avakaasha ide.... super...

Badarinath Palavalli said...

ಕಥನಕ್ಕಿಲ್ಲಿ ಕವನದ ಶೈಲಿ ಕೊಟ್ಟಿದ್ದಾರೆ ನಮ್ಮ ಚಿನ್ಮಯೀ.
ಈ ಸಾಲುಗಳನ್ನೇ ನೋಡಿರಿ:
’ಸಂಬಂಧಗಳು ಎಂದರೆ ಏನು ???
ಸ್ನೇಹಕ್ಕೂ,ಪ್ರೀತಿಗೂ,ಬಯಸುವಿಕೆಗೂ ನಡುವೆ ಅಂತರವೇನು??
ಬೇಕು ಅನ್ನಿಸಿದರೆ ಅದು ಬಯಕೆಯಾ??
ಇಬ್ಬರ ಬಯಸುವಿಕೆಗೊಂದು ಅರ್ಥಕೊಡುವುದು ಸ್ನೇಹವಾ??
ಸ್ನೇಹದ ಉತ್ತುಂಗವೇ ಪ್ರೀತಿಯಾ?ಅಥವಾ ಅದೊಂದು ಹೊಸ ಥರಹದ ಉತ್ಕಟ ಬಯಕೆಯಾ ??’

absolute statement:
"ನಮಗೆ ನಾವೆ ಹಾಕಿಕೊಂಡ ..
ನೀತಿ..
ನಿಯತ್ತು .. ಬಲು ದೊಡ್ಡದು.."

ನಿಮಗೇ ಗೊತ್ತಿದೆ, ಅಂತ ನಿಲ್ಲಿಸಿಬಿಟ್ರೇ ಹೇಗಪ್ಪಾ? ಮುಂದ್ವರಿಸು!!! ;-)

ಚಿನ್ಮಯ ಭಟ್ said...

ದಿನಕರಣ್ಣಾ....
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)....
ನಿಮ್ಮಂಥಹ ಹಿರಿಯರ ಕಥೆಗೆ ಅದೆಷ್ಟು ನ್ಯಾಯ ಒದಗಿಸಿದೆ ಗೊತ್ತಿಲ್ಲ..ನನಗೆ ಸರಿ ಅನ್ನಿಸಿದಂತೆ ತಿರುಗಿಸಿದೆ :)...ವಂದನೆಗಳು ಮೆಚ್ಚಿ ಬೆನ್ನು ತಟ್ತಾ ಇರೋದಕ್ಕೆ :)..

ಚಿನ್ಮಯ ಭಟ್ said...

ಬದರಿ ಸರ್....
"’ಸಂಬಂಧಗಳು ಎಂದರೆ xxxxxxxxxxx" ಎನ್ ಮಾಡ್ಲಿ ಚಟ ಅನ್ಸತ್ತೆ!!!..
ಮತ್ತೆ ಆ ನಿಯತ್ತಿನ ಸಾಲು...ಪ್ರಕಾಶಣ್ಣನ ಬರಹದಲ್ಲಿ ತೀರಾ ಇಷ್ಟವಾದ ಸಾಲು ಅದು :)..

ನಿಮಗೇ ಗೊತ್ತಿದೆ ಮುಂದಿನ ಭಾಗ..
ಹಮ್...ಅದ್ರ್ ಬಗ್ಗೆ ಹೇಳಕ್ಕೆ ನಾ ಇನ್ನೂ ಚಿಕ್ಕವ್ನು..ಮುಂದಿನ ಖೋ ಗೆ :D...

ಸರ್ ಹೃದಯಪೂರ್ವಕ ಧನ್ಯವಾದಗಳು ಬರೆಯಲು ಆನೆಬಲ ನೀಡುವ ನಿಮ್ಮ ಪ್ರತಿಕ್ರಿಯೆಗಳಿಗೆ. :)

ಪದ್ಮಾ ಭಟ್ said...

ಚಂದಿದ್ದು..ಓದುತ್ತಾ ಓದುತ್ತಾ ಆಸಕ್ತಿಯನ್ನು ಹೆಚ್ಚಿಸುವಂಗೆ ಇದ್ದು...ಇನ್ನೂ ಓದಬೇಕು ಅನ್ನೋ ಹೊತ್ತಿಗೆ ಮುಗಿದೇ ಹೋತು.. ಮುಂದುವರೆಸಿದರೆ ಇನ್ನೂ ಓದಬಹುದು.. :)

Shruthi B S said...

ಚಿನ್ಮಯ್ ಕಥೆ ಚನ್ನಾಗಿದೆ. ನೀ ಕೇಳಿದೆ ಪ್ರಶ್ನೆಗಳು ತಲೆಯಲ್ಲಿ ಇನ್ನೂ ಹಾಗೆ ಉಳಿದಿವೆ. ಸ೦ಬ೦ಧಗಳು ಅ೦ದರೆ ಏನು..? ಈ ಪ್ರಶ್ನೆಯನ್ನು ನಾನು ಹಲವಾರು ಬಾರಿ ಕೇಳಿಕೊ೦ಡಿದ್ದೇನೆ. ಕೆಲವೂಮ್ಮೆ ತು೦ಬಾ ಸರಳ ಅನ್ನಿಸಿದರೂ ಕೆಲವೊಮ್ಮೆ ಬಹಳ ಕ್ಲಿಷ್ಟ ಎನಿಸಿದ್ದಿದೆ. ಆದರೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.. :( ಕಥೆ ಇಷ್ಟವಾಯಿತು. ಹೀಗೆ ಬರೀತಾ ಇರು.

ಚಿನ್ಮಯ ಭಟ್ said...

ಪದ್ಮಾ ಅವ್ರೇ,
ಧನ್ಯವಾದಗಳು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ...ಗೊತ್ತಾದಷ್ಟು ಕಥೆ ಬರ್ದೆ,ಇಲ್ಲಿಗ್ ನನ್ ಖೋಟಾ ಮುಗಿತು...:D.
ಬರ್ತಾ ಇರಿ...ನಮಸ್ತೆ

ಚಿನ್ಮಯ ಭಟ್ said...

ಶೃತಿ,
ನಿಜ ಅಲ್ವಾ??ಕೆಲವೊಮ್ಮೆ ಅವುಗಳಿಗೆ ಹೆಸರನ್ನಿಡುವುದೇ ತಪ್ಪು ಅನ್ನಿಸಿಬಿಡುತ್ತದೆ...ಹಮ್..ಗೊತ್ತಿಲ್ಲ...ಆ ಮನಸ್ಥಿತಿಯ ಅರಿವು ಜಾಸ್ತಿಯಾಗಿ ಇಲ್ಲ ನನಗೆ...ನಾ ಓದಿದ್ದು,ಕೇಳಿದ್ದು...ಅವರ ಬಲದ ಮೇಲೆ ಬರೆದದ್ದು ಇದು...
ವಂದನೆಗಳು..ಬರ್ತಾ ಇರು..
ನಮಸ್ತೆ

sunaath said...

ಚಿನ್ಮಯ,
ಖೋಖೋ ಆಟವನ್ನು ತುಂಬ ಸೊಗಸಾಗಿ ಆಡಿದ್ದೀರಿ. ಕಥೆಯ ಕೊನೆ ಇಷ್ಟವಾಯಿತು.

ಚಿನ್ಮಯ ಭಟ್ said...

ಸುನಾಥ ಕಾಕಾ...ಧನ್ಯವಾದ :) :)

Srikanth Manjunath said...

ನಾನು ಹಾಡಿದರೆ ಸಂಗೀತ.. ನೀವು ಹಾಡಿದರೆ ಸಮ್ ಗೀತ... ಎನ್ನುವ ಕಥಾನಾಯಕಿಯ ಧೋರಣೆಯ ಒಳತೋಟಿಯನ್ನು ಚೆನ್ನಾಗಿ ವಿವರಿಸಿದ್ದೀರಿ.. ತಾನು ತಪ್ಪು ಹೆಜ್ಜೆ ಇಟ್ಟಾಗ ಅದು ಒಂದು ಆಕಸ್ಮಿಕ.. ಬೇರೆಯವರು ಮಾಡಿದರೆ ಅದು ಅಪರಾಧ ಎನ್ನುವ ಮನಸ್ಥಿಯಲ್ಲಿನ ನಾಯಕಿಯ ತಳಮಳ ಚೆನ್ನಾಗಿ ಮೂಡಿ ಬಂದಿದೆ.

ಕಥೆ ಇನ್ನೊಂದು ತಿರುವು.. ಇರುವ ಪಾತ್ರಗಳ ಸಂಬಂಧವನ್ನು ಇನ್ನೊಂದು ರೀತಿಯಲ್ಲಿ ಬೆಸೆದು.. ಮತ್ತೊಂದು ಕೊನೆಗೆ ತೆಗೆದು ಕೊಂಡು ಹೋಗಿರುವುದು ನಿಮಲ್ಲಿನ ಕಥೆ ಹೇಳುವ ನಿರ್ದೇಶಕನ ತಾಕತ್..


ಸೂಪರ್ ಚಿನ್ಮಯ್ ಲೇಖನದ ಕೊನೆಯ ಕೆಲವು ಸಾಲುಗಳು ಮನಸ್ಸನ್ನು ಬಹಳ ಕಾಡುತ್ತವೆ.. ಸೂಪರ್

ಚಿನ್ಮಯ ಭಟ್ said...

ಶ್ರೀಕಾಂತಣ್ಣಾ....ಧನ್ಯೋಸ್ಮಿ...
ನಿಮ್ಮ ಕಮೆಂಟುಗಾರಿಕೆಗೆ ಹೆಮ್ಮೆ ಪಡಬೇಕು ನಾವೆಲ್ಲಾ...
ಧನ್ಯವಾದ ಇಡೀ ಕಥೆಯ ಅನಿಸಿಕೆಯನ್ನು ಮುದ್ದಾಗಿ ಹೇಳಿದ್ದಕ್ಕೆ..
"ಒಳತೋಟಿ" ಮೊದಲಬಾರಿಗೆ ಕೇಳ್ದೆ...
ವಂದನೆಗಳು ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ...
ಖುಷಿ ಆಯ್ತು :)..
ನಮಸ್ತೆ :)

Pradeep Rao said...

Wah! Ello hogutida katheyannu sukshmavagi matte beli olage tandu nillisidira.. ishta aitu.. kaleda kelavu bhagagalannu odi kasivisigondida mana ega niralavaytu! One of the best parts of the story..

ಚಿನ್ಮಯ ಭಟ್ said...

ಪ್ರದೀಪಣ್ಣಾ...
ಧನ್ಯವಾದ :) :)...
ಒಳಗೆ ತಿರುಗಿಸುವ ಪ್ರಯತ್ನ..ಎಲ್ಲಿಗೋ ತಿರುಗಿಸ್ದೆ ಒಳಗೊ ಹೊರಗೋ ಗೊತ್ತಿಲ್ಲಾ ;)...ಆಕೆಯ ಮನಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಲು ಹೊರಟದ್ದು ಅಷ್ಟೇ..

ವಂದನೆಗಳು ...
ಖುಷಿ ಆಯ್ತು ನಿಮ್ಮ ಅನಿಸಿಕೆ ಓದಿ...
ಬರ್ತಾ ಇರಿ..
ನಮಸ್ತೆ :)

Swarna said...

ಕವಿ, ಬರಹಗಾರರು, ಕಥೆಗಾರರು... ಸೂಪರ್ ಚಿನ್ಮಯ್.
ಬೇಲಿಯನ್ನು ಚೆನ್ನಾಗಿ ಅರ್ಥೈಸಿದ್ದಿರಿ.

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) :)

Ittigecement said...

ಚಿನ್ಮಯ್....

ಕಥೆಯಲ್ಲಿ ವಿಷಯವನ್ನು ಕಡೆದು... ಕಡೆದು.. ಕುತೂಹಲ ಘಟ್ಟದಲ್ಲಿರುವ ಕೊನೆ ತುಂಬಾ ಇಷ್ಟವಾಯ್ತು...

ಸೂಪರ್ !

bilimugilu said...

Hi Chinmay,
Aa mobileannu avarige hindurigisi, katheyanna bEliyoLage irisiddu bahaLa ishtavaayithu :) Brilliant turn :) Liked it, Liked it....

ಶ್ರೀವತ್ಸ ಕಂಚೀಮನೆ. said...

ಸದಾ ಪ್ರಶ್ನೆಗಳೇ ಆಗಿರುವಂಥ ಪ್ರಶ್ನೆಗಳು...
ಕಥೆ ಇಷ್ಟವಾಯಿತು ಚಿನ್ಮಯ್...

ಚಿನ್ಮಯ ಭಟ್ said...

ಪ್ರಕಾಶಣ್ಣ ಧನ್ಯವಾದಗಳು..
ಕಥೆಯ ಮೂಲವಾರಸುದಾರರಿಂದ ಸುಪರ್ ಅನಿಸಿಕೊಂಡರೆ ನಂಗೂ ಒಂಥರಾ ಸಿಕ್ಕಾಪಟ್ಟೆ ಖುಷಿ :D...
ವಂದನೆಗಳು..ನಮಸ್ತೆ :)

ಚಿನ್ಮಯ ಭಟ್ said...

ರೂಪಕ್ಕಾ,
ಧನ್ಯವಾದ...ಮೊಬೈಲಿನಲ್ಲಿ ಅದು ಬೇರೆ ಮೊಬೈಲು ಅಂಥಾ ಮುಂದುವರೆದಿತ್ತಲ್ಲಾ ಹಂಗಾಗಿ ತಿರುಗಿಸಲು ಸುಲಭವಾಯಿತು :)...
ವಂದನೆಗಳು ಅಕಾ ನಿಮ್ಮ ಪ್ರೋತ್ಸಾಹಕ್ಕೆ..
ಬರ್ತಾ ಇರಿ.. ನಮಸ್ತೆ :)

ಚಿನ್ಮಯ ಭಟ್ said...

ವತ್ಸಾ,
"ಸದಾ ಪ್ರಶ್ನೆಗಳೇ ಆಗಿರುವಂಥ ಪ್ರಶ್ನೆಗಳು..."
ಅದೆಷ್ಟು ಮಸ್ತಾಗಿ ಹೇಳ್ಬಿಟ್ಯೋ ಮಾರಾಯಾ...ನಿಜ ಅಲಾ ??
ವಂದನೆಗಳು ಕಥೆಯನ್ನು ನೆಚ್ಚಿ ಛಂದದ ಅನಿಸಿಕೆ ಬರೆದದ್ದಕ್ಕೆ :)..
ಬರ್ತಾ ಇರು..ನೀನೂ ಬರೀತಾ ಇರು..
ವಂದನೆಗಳು..
ನಮಸ್ತೆ :)

balasubramanya said...

ವಾಹ್ ವಾಹ್ ಚಿನ್ಮೈ ಇಲ್ಲೊಂದಿ ಸಿಕ್ಸರ್ ಭಾರಿಸಿದ್ದೀರಿ . ಬಹಳ ಖುಷಿಯಾಯಿತು ಆರು ಭಾಗಗಳಲ್ಲಿ ಬಂದ ಕಥೆಯನ್ನು ಆಲನೆ ಭಾಗದಲ್ಲೂ ಎಲ್ಲೇ ದಾಟದಂತೆ ಸುಂದರ ತಿರುವು ನೀಡಿ, ಕೆಲವು ಮೂಲ ಬೂತ ಪ್ರಶ್ನೆಗಳನ್ನು ತಂದಿದೆ, "ನಮ್ಮ
ಮನೆಯ ಹಿರಿಯರು ನಮಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದಾರೆ..

ಹಿರಿಯರ
ಆ ಸಂಸ್ಕಾರದ ಬೇಲಿ ನಮಗಾಗಿ..
ನಮ್ಮ ಒಳಿತಿಗಾಗಿ..

ಅವರು ಕೊಟ್ಟ
ಸ್ವಾಂತಂತ್ರ್ಯ...
ಬೇಲಿಯನ್ನು ಹಾರುವದಕ್ಕಲ್ಲ...

ಒಪ್ಪುವ ಮನಸ್ಸಿಗಿಂತ..

ಬಯಸುವ ದೇಹಕ್ಕಿಂತ ...

ನಮಗೆ ನಾವೆ ಹಾಕಿಕೊಂಡ ..
ನೀತಿ..
ನಿಯತ್ತು .. ಬಲು ದೊಡ್ಡದು..



ಈ ಮಾತುಗಳು ಕಥೆಗೆ ಪುಷ್ಠಿ ನೀಡಿವೆ,

ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು........ ಮುಂದಿನ ಭಾಗ ಬರೆಯಲು ಆಹ್ವಾನ ನೀಡುತ್ತಿದೆ ನೋಡೋಣ ಯಾರು ಬರೆಯುತ್ತಾರೆ ಎಂದು

ಚಿನ್ಮಯ ಭಟ್ said...

ಧನ್ಯವಾದಗಳು ಬಾಲು ಸರ್ ಈ ಕಥೆಯ ಬರವಣಿಗೆಯ ಹಿಂದಿನ +ಮುಂದಿನ ನಿಮ್ಮ ಪ್ರೋತ್ಸಾಹಕ್ಕೆ...ಕಥೆ ನನ್ನ ಮಾಧ್ಯಮವಲ್ಲ ..ಅದೇ ಅಳುಕಿನಲ್ಲಿ ಬರೆಯಲು ಹೊರಟಿದ್ದು ಇಲ್ಲಿಗೆ ಬಂದು ನಿಂತಿದೆ..ಮುಂದೇನು ಗೊತ್ತಿಲ್ಲ..
ನನ್ನದೇ ಆದ ಒಂದಿಷ್ಟು ದೃಷ್ಠಿಕೋನ, ಮಾನದಂಡವನ್ನಿಟ್ಟುಕೊಂಡು ಈ ಕಥಾಭಾಗವನ್ನು ಮೂಲಕಥೆಯತ್ತ ತಿರುಗಿಸಿ ಬರುವ ಪ್ರಯತ್ನ ಮಾಡಿದ್ದೇನೆ..ಗೊತ್ತಿಲ್ಲ ಎಷ್ಟರ ಮಟ್ಟಿಗೆ ಅದನ್ನು ಸಮಂಜಸವಾಗಿ ನಿರ್ವಹಿಸಿದ್ದೇನೆ ಎಂದು..ಈ ಪ್ರಯತ್ನದಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ..
ವಂದನೆಗಳು :)
ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗಳಿಂದ ಒಂದಿಷ್ಟು ಕಥೆ ಬರೆಯುವ ಹುಚ್ಚುಹೆಚ್ಚಿದ್ದಂತೂ ನಿಜ ;)
ಬರ್ತಾ ಇರಿ :)..ನಮಸ್ತೆ :)..

SUDHIENDRA VIJAYEENDRA said...

ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ. ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. http://sudhieblog.blogspot.in/2014/05/blog-post.html

ಚಿನ್ಮಯ ಭಟ್ said...

ಸುಧೇಂದ್ರಜೀ..ಖಂಡಿತಾ ಓದ್ತೀನಿ...ವಂದನೆಗಳು :)

ಚಿನ್ಮಯ ಭಟ್ said...

ವಂದನೆಗಳು ಶಿವು :)

Unknown said...

Hi Chinmay,

I had some confusion. Is Maitri's husband a frnd of the main protagonist?