ನಮಸ್ಕಾರಾ...
ಚೆನಾಗಿದೀರಾ ಅಲ್ವಾ???.
ಹಮ್..ಅದೇನೋ ಗೊತ್ತಿಲ್ಲಾರೀ ಚಿತ್ರಗೀತೆಗಳು ಅಂದ್ರೆ ಒಂಥರಾ ಇಷ್ಟ..ಚಂದದ ಗೀತೆಗಳಲ್ಲಿನ ಸಾಹಿತ್ಯ ಇಷ್ಟ,ಅದಕ್ಕೆ ಪೋಣಿಸಿದ ಸಂಗೀತ ಇಷ್ಟ..ಅದರ ದನಿಯಾದ ಗಾಯಕರ ಅಭಿವ್ಯಕ್ತಿಗಳು ಇಷ್ಟ..ಚಿತ್ರಗೀತೆಗಳ ಥರದ್ದು ಎನಾದ್ರೂ ಬರಿಬೇಕು ಅನ್ನೋ ಕನಸು ಕನವರಿಕೆ ನನ್ನನ್ನು ಚಿಕ್ಕಂದಿನಿಂದಲೂ ಕಾಡ್ತಾನೇ ಇದೆ...ಇಂತಹ ಹುಚ್ಚುತನಗಳ ಒಂದು ರೂಪ ನಿಮ್ಮ ಮುಂದಿದೆ..
ಸುಮ್ಮನೆ ಬರೆದಿದ್ದ ಒಂದು ಪ್ಯಾರಾಕ್ಕೆ ದಾಟಿ ಹಾಕಿ,ಪಲ್ಲವಿ-ಚರಣ ಎಲ್ಲಾ ಹೇಳಿಕೊಟ್ಟು ಅದಕ್ಕೆ ಪದ ಹೆಕ್ಕಿಸಿದ್ದು ಗೆಳೆಯ ರಾಘವೇಂದ್ರ.. ಒಂದು ಪುಟ್ಟ ಪ್ರಯತ್ನ ನಮ್ಮಿಬ್ಬರದು..ಓದಿ,ಕೇಳಿ,ತಪ್ಪು ಒಪ್ಪು ಹೇಳಿ ಪ್ರೋತ್ಸಾಹಿಸಿ..
ಹೇಳ್ತೀರಾ ಅಲ್ಲಾ ???
ಭಾವದಾ ಬರ ಬಂದಿದೆ ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ ಬೇಸರಾ ತಾಳದೇ
ಸಾವಿರಾ ಸಾಲು ಕೋಶದಲೂ
ಸಿಗದ ದೇಸಿ ಪದ ನೀನು,
ಕಳೆದು ಹೋದರೆ ಕನಸಿಂದ ಹೇಗೇ ಹುಡುಕಲಿ?
ಹಿಡಿದು ಖಾಲಿ ಕೈಪಿಡಿ.
ಹಾಳು ಸುರಿದಿದೆ ಎನ್ನ ಪ್ರೀತಿ ಜೋಪಡಿ.
ಮುದ್ದಿನಾ ಮೂರು ಮಾತಿಂದಾ
ಮೂಡುತಿದ್ದಾ ನಗೆಬಿಂಬ,
ವಲಸೆ ಹೋದರೆ ಮುನಿಸಿಂದ ಹೇಗೇ ಸಹಿಸಲಿ ?
ಮನಸು ಒಡೆದಾ ಕನ್ನಡಿ.
ಬರಿದು ಎನಿಸಿದೆ ತಲೆ ಹರಟೆಯಂಗಡಿ.
ಭಾವದಾ ಬರ ಬಂದಿದೆ ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ ಬೇಸರಾ ತಾಳದೇ
ಈಗ ಹಾಡು ಕೇಳಣ್ವಾ ?? :)...
ಹೆಂಗಿದೆ ಹೇಳಿ...ದಯವಿಟ್ಟು.. ಕಾಯ್ತಿದೀನಿ...
ಧನ್ಯವಾದಗಳು...
ನಮಸ್ತೆ :)
ಚೆನಾಗಿದೀರಾ ಅಲ್ವಾ???.
ಹಮ್..ಅದೇನೋ ಗೊತ್ತಿಲ್ಲಾರೀ ಚಿತ್ರಗೀತೆಗಳು ಅಂದ್ರೆ ಒಂಥರಾ ಇಷ್ಟ..ಚಂದದ ಗೀತೆಗಳಲ್ಲಿನ ಸಾಹಿತ್ಯ ಇಷ್ಟ,ಅದಕ್ಕೆ ಪೋಣಿಸಿದ ಸಂಗೀತ ಇಷ್ಟ..ಅದರ ದನಿಯಾದ ಗಾಯಕರ ಅಭಿವ್ಯಕ್ತಿಗಳು ಇಷ್ಟ..ಚಿತ್ರಗೀತೆಗಳ ಥರದ್ದು ಎನಾದ್ರೂ ಬರಿಬೇಕು ಅನ್ನೋ ಕನಸು ಕನವರಿಕೆ ನನ್ನನ್ನು ಚಿಕ್ಕಂದಿನಿಂದಲೂ ಕಾಡ್ತಾನೇ ಇದೆ...ಇಂತಹ ಹುಚ್ಚುತನಗಳ ಒಂದು ರೂಪ ನಿಮ್ಮ ಮುಂದಿದೆ..
ಸುಮ್ಮನೆ ಬರೆದಿದ್ದ ಒಂದು ಪ್ಯಾರಾಕ್ಕೆ ದಾಟಿ ಹಾಕಿ,ಪಲ್ಲವಿ-ಚರಣ ಎಲ್ಲಾ ಹೇಳಿಕೊಟ್ಟು ಅದಕ್ಕೆ ಪದ ಹೆಕ್ಕಿಸಿದ್ದು ಗೆಳೆಯ ರಾಘವೇಂದ್ರ.. ಒಂದು ಪುಟ್ಟ ಪ್ರಯತ್ನ ನಮ್ಮಿಬ್ಬರದು..ಓದಿ,ಕೇಳಿ,ತಪ್ಪು ಒಪ್ಪು ಹೇಳಿ ಪ್ರೋತ್ಸಾಹಿಸಿ..
ಹೇಳ್ತೀರಾ ಅಲ್ಲಾ ???
ಭಾವದಾ ಬರ ಬಂದಿದೆ ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ ಬೇಸರಾ ತಾಳದೇ
ಸಾವಿರಾ ಸಾಲು ಕೋಶದಲೂ
ಸಿಗದ ದೇಸಿ ಪದ ನೀನು,
ಕಳೆದು ಹೋದರೆ ಕನಸಿಂದ ಹೇಗೇ ಹುಡುಕಲಿ?
ಹಿಡಿದು ಖಾಲಿ ಕೈಪಿಡಿ.
ಹಾಳು ಸುರಿದಿದೆ ಎನ್ನ ಪ್ರೀತಿ ಜೋಪಡಿ.
ಮುದ್ದಿನಾ ಮೂರು ಮಾತಿಂದಾ
ಮೂಡುತಿದ್ದಾ ನಗೆಬಿಂಬ,
ವಲಸೆ ಹೋದರೆ ಮುನಿಸಿಂದ ಹೇಗೇ ಸಹಿಸಲಿ ?
ಮನಸು ಒಡೆದಾ ಕನ್ನಡಿ.
ಬರಿದು ಎನಿಸಿದೆ ತಲೆ ಹರಟೆಯಂಗಡಿ.
ಭಾವದಾ ಬರ ಬಂದಿದೆ ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ ಬೇಸರಾ ತಾಳದೇ
ಈಗ ಹಾಡು ಕೇಳಣ್ವಾ ?? :)...
ಹೆಂಗಿದೆ ಹೇಳಿ...ದಯವಿಟ್ಟು.. ಕಾಯ್ತಿದೀನಿ...
ಧನ್ಯವಾದಗಳು...
ನಮಸ್ತೆ :)
23 comments:
raashi cholo iddu...ningo ibru henge mundvaridu nangokke chand chandi haadu kelsi.. :)
ಮಗುವಿಗೆ ಬಣ್ಣ ಬಣ್ಣದ ಪೋಷಾಕು ತೊಡಿಸಿದಾಗ ಅದರ ನಲಿವು ಸೊಗಸು.. ಮಗುವಿಗೂ ಆನಂದ ಪೋಷಾಕು ತೊಡಿಸಿದವರಿಗೂ..
ಅಂಥಹ ಒಂದು ಸುಂದರ ಸಾಧನೆ ನಿಮ್ಮದು ಚಿನ್ಮಯ್..
ಭಾವಕ್ಕೆ ಬರಬಂದಿದೆ ಎಂದು ಬರೆದು ಸಂಗೀತ ಹಾಕಿ ಬರೆದಿದ್ದರು ಇದರ ತುಂಬಾ ತುಂಬಿರುವುದು ಸಾಧನೆಯ ಭಾವ, ಆಶಾ ಭಾವ, ಒಲವಿನ ಭಾವ..
ಹಾಟ್ಸ್ ಆಫ್.. ನಿಮಗೂ ಮತ್ತು ನಿಮ್ಮ ಗೆಳೆಯರಿಗೂ..
ಸೂಪರ್ ಚಿನ್ಮಯ್
ಶ್ರೀ ರಾಘವೇಂದ್ರ ಅವರಿಗೆ ನಮ್ಮ ಧನ್ಯವಾದ ತಿಳಿಸಿರಿ. ಒಳ್ಳೆಯ ಪ್ರಯತ್ನ, ಇದನ್ನು ಮುಂದುವರೆಸಿರಿ.
ಕೋಶ - ಕೈಪಿಡಿ, ವಲಸೆ ಹೋದರೆ ಮುನಿಸಿಂದ ಸರಿಯಾಗಿ ಬಳಕೆಯಾಗಿದೆ.
ನಿಜ ಹೇಳಬೇಕೆಂದರೆ ಗೆಳೆಯ, ಈ ನಿಮ್ಮ ಸಾಲುಗಳು ನಮಗೂ ಅನ್ವಯ!
"ಭಾವದಾ ಬರ ಬಂದಿದೆ ಬಳಿಗೆನೀ ಬಾರದೇ
ಬಾರದಾ ಪದ ಗೀಚಿದೆ ಬೇಸರಾ ತಾಳದೇ"
ವಂದನೆಗಳು ಅನಾಮಿಕರಿಗೆ :)
ಶ್ರೀಕಾಂತಣ್ಣಾ...ಧನ್ಯವಾದ :) :)..
ಬದರಿ ಸರ್..
ಖಂಡಿತ ಹೇಳ್ತೀನಿ :) :)..
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)
ಸುಂದರ ಭಾವ ಬಿಂದುಗಳ ಗಾನ ಲಹರಿ, ಮತ್ತಷ್ಟು ನಿಮ್ಮಿಂದ ಹೊಸ ಹೊಸ ಬರಹಗಳು ಬರುತ್ತಿರಲಿ. :-)
ಧನ್ಯವಾದ ಚೆನ್ನಬಸವರಾಜ್ ಸರ್ :) :)
ಈ ‘ಹುಚ್ಚುತನವೇ’ ಸುಂದರ ಗೀತೆಗಳಿಗೆ ಹುಟ್ಟು ನೀಡುತ್ತದೆ. ನಿಮಗೆ ಹಾಗು ರಾಘವೇಂದ್ರರಿಗೆ ಅಭಿನಂದನೆಗಳು.
ಧನ್ಯವಾದ ಸುನಾಥ ಕಾಕಾ :)
ತುಂಬಾ ತುಂಬಾ ಚನ್ನಾಗಿದೆ. ಮುಂದುವರಿಸಿ.
ಧನ್ಯವಾದ ಶ್ರೀಧರರೇ :)
Padagala jodane tumba chennagide, Anna.
Heege Munduvaresi..
ಧನ್ಯವಾದ ಶಶಿ ಕುಮಾರ್ ಅವರೇ :) :)..ಬರ್ತಾ ಇರಿ :)
Hi Chinmay.. it's really nice...
"ಸಾವಿರಾ ಸಾಲು ಕೋಶದಲೂ
ಸಿಗದ ದೇಸಿ ಪದ ನೀನು,
ಕಳೆದು ಹೋದರೆ ಕನಸಿಂದ ಹೇಗೇ ಹುಡುಕಲಿ?
ಹಿಡಿದು ಖಾಲಿ ಕೈಪಿಡಿ"
Arthapoorna saalugalu Chinmay ji..
Abhinandanegalu :-)
ಧನ್ಯವಾದಪಾಚಿ ಅವರೆ :)
ವಿನಾಯಕ ಭಟ್ಟರೇ,
ಸ್ವಾಗತ ನಮ್ಮನೆಗೆ...ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)
namaskara,
na e blogna santhe ge hosabalu achank agi na nimma song kelide thumba changide.
thumba istavada padagalu andre
"ಸಾವಿರಾ ಸಾಲು ಕೋಶದಲೂ
ಸಿಗದ ದೇಸಿ ಪದ ನೀನು,
ಕಳೆದು ಹೋದರೆ ಕನಸಿಂದ ಹೇಗೇ ಹುಡುಕಲಿ?
ಹಿಡಿದು ಖಾಲಿ ಕೈಪಿಡಿ"
chinmay bhat nivu spoorhiya sele yadiri.
nanna kannada dalli enadaru thappiddare dayavittu kshamisi.
ತುಂಬಾ ಚನ್ನಾಗಿದ್ದು ಚಿನ್ಮಯ್...ಆ ನಿಮ್ಮ ಶಬ್ದಗಳ ಪೋಣಿಸುವಿಕೆಯೇ ತುಂಬಾ ಇಷ್ಟ ಆತು..
ಕ್ಷಮೆ ಇರಲಿ..ತಡವಾಗಿ ಓದಿದ್ದಕ್ಕೆ....
ಸುಚಿತ್ರಾ ಮೇಡಮ್,
ಸ್ವಾಗತ ನಮ್ಮನೆಗೆ...ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) ಖುಷಿ ಆಯ್ತು ನಿಮ್ಮ ಅನಿಸಿಕೆ ನೋಡಿ...
ಬರ್ತಾ ಇರಿ,ನಿಮ್ಮ ಅನಿಸಿಕೆಗಳನ್ನ ಮುಕ್ತವಾಗಿ ಹಂಚಿಕೊಳ್ಳುತ್ತಿರಿ :) :)
ನಮಸ್ತೆ :)
ಪದ್ಮಾ,
ಧನ್ಯವಾದನೇ :) :)
ಬರ್ತಾ ಇರು :)
waw mast iddu i liked a lot all the best keep it up
Post a Comment