ಕಾಡು ಮಲ್ಲಿಗೆ ಹೂವೇ, ಎಲ್ಲರಿಷ್ಟದ ತಾವೇ
ಬಿಳಿಯ ಬಣ್ಣದೀ ತಣಿಸಿ ಕಂಗಳ
ದೃಷ್ಟಿಯಾಚೆಗೂ ಸೂಸಿ ಪರಿಮಳ
ದಾರಿಗುಂಟ ಕೊಡುವೆ ನೀನು ಖುಷಿಯ ಬಾಗಿನ
ಮಂದಹಾಸ ಮೂಡಲಿಕ್ಕೆ ನೀನೇ ಕಾರಣ
ಬಿಳಿಯ ಬಣ್ಣದೀ ತಣಿಸಿ ಕಂಗಳ
ದೃಷ್ಟಿಯಾಚೆಗೂ ಸೂಸಿ ಪರಿಮಳ
ದಾರಿಗುಂಟ ಕೊಡುವೆ ನೀನು ಖುಷಿಯ ಬಾಗಿನ
ಮಂದಹಾಸ ಮೂಡಲಿಕ್ಕೆ ನೀನೇ ಕಾರಣ
ಜೋಲು ಮೋರೆ ಹಾಕಿ ನಡೆದು
ಹೆಗಲ ಭಾರ ಮರಳಿ ನೆನೆದು
ಊರು ಬಿಟ್ಟು ಹೊರಡುತಿರುವ ನೊಂದ ಜೀವಕೆ
ಹಾದಿಯಲ್ಲಿ ಕೊಡುವೆ ನೀನು ನಗೆಯ ಕಾಣಿಕೆ
ಹುಟ್ಟಿದೂರ ಅರಸಿ ಬಂದು
ನಿದ್ದೆಗೆಟ್ಟು ಸಾಗಿ ನಿಂದು
ಕಣ್ಣ ಮುಂದೆ ಬಿಚ್ಚುತಿರಲು ನೆನಪಿನಂಗಣ
ಊರು ಬಂತು ಎನ್ನುತಿಹುದು ನಿನ್ನ ತೋರಣ
ಸಾಲೆಗೆಂದು ಸೇರಿ ಬರುವ
ಕೇಕೆ ಹಾಕಿ ನಗುತಲಿರುವ
ಗೊಣ್ಣೆ ಸುರಿವ ಮಕ್ಕಳಿಗೆ ನೀನೆ ಆಟಿಕೆ
ಕಾಣದಂತೆ ಸೇರಿಬಿಡುವೆ ಅವರ ಬಳಗಕೆ
ವೇಲು ಸುತ್ತಿ ನಡೆಯುತಿರುವ
ನಿನ್ನ ನೋಡಿ ನಿಂತು ಬಿಡುವ
ಕಾಲೇಜಿನ ಜವ್ವನೆಗೆ ನಿತ್ಯ ಅಚ್ಚರಿ
ನಿಮ್ಮ ಹೀಗೆ ನೋಡುವುದೇ ಅವನ ದಿನಚರಿ
ಪೂಜೆ ಮಲ್ಲಿಗೆಯ ಸೂಡಿ
ಸಂಜೆ ಭಜನೆ ಮೆಲ್ಲ ಹಾಡಿ
ಕಾಲಾಡಲು ಬರುವ ಹಿರೀಯತ್ತೆಯು
ನಿನ್ನಂಥಾ ಸೊಸೆಯೇ ಎನಗೆ ಬೇಕೆಂದಳು
ಪೇಟೆಗೆಲಸ ಮುಗಿಸಿಕೊಂಡು
ಬೆಳದಿಂಗಳ ನೆಚ್ಚಿಕೊಂಡು
ರಾತ್ರಿಗಾಡಿಯಲ್ಲಿ ಬರುವ ಮಾರಾಯನು
ನಿನ್ನ ನೋಡಿ ನೆನೆವನೊಮ್ಮೆ ತನ್ನತಾಯನು
ಕಾಡು ಮಲ್ಲಿಗೆ ಹೂವೇ, ಎಲ್ಲರಿಷ್ಟದ ತಾವೇ
ಬಿಳಿಯ ಬಣ್ಣದೀ ತಣಿಸಿ ಕಂಗಳ
ದೃಷ್ಟಿಯಾಚೆಗೂ ಸೂಸಿ ಪರಿಮಳ
ದಾರಿಗುಂಟ ಕೊಡುವೆ ನೀನು ಖುಷಿಯ ಬಾಗಿನ
ಮಂದಹಾಸ ಮೂಡಲಿಕ್ಕೆ ನೀನೇ ಕಾರಣ
-ಚಿನ್ಮಯ
10/11/2016
ಹೆಗಲ ಭಾರ ಮರಳಿ ನೆನೆದು
ಊರು ಬಿಟ್ಟು ಹೊರಡುತಿರುವ ನೊಂದ ಜೀವಕೆ
ಹಾದಿಯಲ್ಲಿ ಕೊಡುವೆ ನೀನು ನಗೆಯ ಕಾಣಿಕೆ
ಹುಟ್ಟಿದೂರ ಅರಸಿ ಬಂದು
ನಿದ್ದೆಗೆಟ್ಟು ಸಾಗಿ ನಿಂದು
ಕಣ್ಣ ಮುಂದೆ ಬಿಚ್ಚುತಿರಲು ನೆನಪಿನಂಗಣ
ಊರು ಬಂತು ಎನ್ನುತಿಹುದು ನಿನ್ನ ತೋರಣ
ಸಾಲೆಗೆಂದು ಸೇರಿ ಬರುವ
ಕೇಕೆ ಹಾಕಿ ನಗುತಲಿರುವ
ಗೊಣ್ಣೆ ಸುರಿವ ಮಕ್ಕಳಿಗೆ ನೀನೆ ಆಟಿಕೆ
ಕಾಣದಂತೆ ಸೇರಿಬಿಡುವೆ ಅವರ ಬಳಗಕೆ
ವೇಲು ಸುತ್ತಿ ನಡೆಯುತಿರುವ
ನಿನ್ನ ನೋಡಿ ನಿಂತು ಬಿಡುವ
ಕಾಲೇಜಿನ ಜವ್ವನೆಗೆ ನಿತ್ಯ ಅಚ್ಚರಿ
ನಿಮ್ಮ ಹೀಗೆ ನೋಡುವುದೇ ಅವನ ದಿನಚರಿ
ಪೂಜೆ ಮಲ್ಲಿಗೆಯ ಸೂಡಿ
ಸಂಜೆ ಭಜನೆ ಮೆಲ್ಲ ಹಾಡಿ
ಕಾಲಾಡಲು ಬರುವ ಹಿರೀಯತ್ತೆಯು
ನಿನ್ನಂಥಾ ಸೊಸೆಯೇ ಎನಗೆ ಬೇಕೆಂದಳು
ಪೇಟೆಗೆಲಸ ಮುಗಿಸಿಕೊಂಡು
ಬೆಳದಿಂಗಳ ನೆಚ್ಚಿಕೊಂಡು
ರಾತ್ರಿಗಾಡಿಯಲ್ಲಿ ಬರುವ ಮಾರಾಯನು
ನಿನ್ನ ನೋಡಿ ನೆನೆವನೊಮ್ಮೆ ತನ್ನತಾಯನು
ಕಾಡು ಮಲ್ಲಿಗೆ ಹೂವೇ, ಎಲ್ಲರಿಷ್ಟದ ತಾವೇ
ಬಿಳಿಯ ಬಣ್ಣದೀ ತಣಿಸಿ ಕಂಗಳ
ದೃಷ್ಟಿಯಾಚೆಗೂ ಸೂಸಿ ಪರಿಮಳ
ದಾರಿಗುಂಟ ಕೊಡುವೆ ನೀನು ಖುಷಿಯ ಬಾಗಿನ
ಮಂದಹಾಸ ಮೂಡಲಿಕ್ಕೆ ನೀನೇ ಕಾರಣ
-ಚಿನ್ಮಯ
10/11/2016
4 comments:
ಪ್ರಾಸಬದ್ಧವಾಗಿದೆ ನಿಮ್ಮ ಕವನ.
ಚಿನ್ಮಯ,
ನಿಮ್ಮ ಕವನದಲ್ಲಿ ಮಲ್ಲಿಗೆಯ ಘಮಘಮವಿದೆ. ಒಂದೇ ಸಂಶಯ ಉಳಿದಿದೆ: ಕಾಲೇಜು ಜವ್ವನೆಯರನ್ನು ನೋಡುವುದನ್ನೇ ದಿನಚರಿಯನ್ನಾಗಿ ಮಾಡಿಕೊಂಡ ತುಂಟ ಯಾರು? ಕವಿಯೇ ಇರಬೇಕಲ್ಲವೆ?
ಧನ್ಯವಾದ ಕಾಕಾರೇ ☺
ಧನ್ಯವಾದ ಮೇಡಂ
Post a Comment