ಮಳೆಗಾಲದ ಒಂದು ದಿನ; ವಿಶೇಷವೇನಿರಲಿಲ್ಲ
ಹಂಚಿನ ಮಾಡು ಸೋರುತ್ತಿತ್ತು; ಹೊಳೆ ತುಂಬಿ ಹರಿಯುತ್ತಿತ್ತು
"ಇಟ್ಸ್ ರೇನಿಂಗ್ ಔಟ್ಸೈಡ್"; ಎಲ್ಲ ಅಸ್ತವ್ಯಸ್ತ
ಕ್ಯಾಬು ಬುಕ್ ಆಗಲಿಲ್ಲ; ಫುಡ್ಡು ಡಿಲಿವರ್ ಆಗಲಿಲ್ಲ
ಮಾನ್ಸೂನು ಕೇರಳ ಮುಟ್ಟಿತಂತೆ; ಇನ್ನು ನಾಲ್ಕಾರೇ ದಿನ
ಹಪ್ಪಳ ಸಂಡಿಗೆ ಒಳಗಿಡಬೇಕು,ಕಂಬಳಿ ಕೊಪ್ಪೆ ತೆಗೆದಿಡಬೇಕು
ಬಾಕಿ ಉಳಿದಿದೆ ಕೊಡೆಯ ರಿಪೇರಿ
ನೂಕೂವರೆ ತಿಂಗಳ ಮಳೆಗೆ ತಯಾರಿ
ಥಂಡ್ ಸ್ಟೋರ್ಮು ಆಂಡ್ ರೇನಿಂಗು, ನೈಂಟಿ ಪರಸೆಂಟ್ ಛಾನ್ಸು
ಬೈಕ್ ಬಿಟ್ಟು ಕಾರಲ್ಲೇ ಓಡಾಡಬೇಕು; ಅಂಡರ್ಪಾಸು ಅವಾಯ್ಡ್ ಮಾಡಬೇಕು
ಮೀಟಿಂಗ್ ಇಟ್ಟ ಫಾರೆನ್ ಬಾಸು; ಆಫೀಸಿನಲ್ಲಿ ಅಧಿಕೃತ ಟೈಂ ಪಾಸು
ಒಂಭತ್ತೂವರೆಗೆ ಮುಗಿಯುವ ಆಗುವ ಸಂಭವ; ಲೇಟಾದ್ರೂ ಮ್ಯಾಚ್ ನಡೆಯೋ ಆಶಾಭಾವ
ಹೊಳೆನೀರ ಹರಿವಿನ ಮೇಲೆ ಬಿದ್ದ ಮಳೆಯ ಲೆಕ್ಕಾಚಾರ
ಪವನ ಪೌರುಷಕ್ಕೆ ತಲೆ ಬಾರಿ ಅಡಿಕೆ ಮರ ಬಿದ್ದ ಸಮಾಚಾರ
ಹರಿವ ನೀರಿನ ಎದುರು ಕಾಲಿಟ್ಟು ಪುಟ್ಟದೊಂದು ಕಟ್ಟೆ ಕಟ್ಟಬೇಕು
ತಿಳಿನೀರು ಕಟ್ಟೆ ದಾಟಿ ಕಾಲ ಸೋಂಕಿದಾಗ ಸರ್ವಾಂಗ ಪುಳಕವಾಗಬೇಕು
ಕರೆಂಟ್ ಹೋದರೆ ಇನ್ವರ್ಟರ್ ಉಂಟು; ಇಂಟರ್ನೆಟ್ಟಿಗೆ ಪರ್ಯಾಯವಿಲ್ಲ
ವರ್ಕಫ್ರಾಂ ಹೋಮ್ ಎಂಬ ಸಾಫ್ಟ್ವೇರ್ ಸುಖ ಅಂದಿಗೆ ದಕ್ಕುವುದಿಲ್ಲ
ಮನೆ ಮುಂದೆ ಬೇರೆ ಕಸ ಕಟ್ಟಿ ಡ್ರೈನೇಜು ಬ್ಲಾಕು; ರಸ್ತೆಯ ಮೇಲಿದ್ದ ನೀರೆಲ್ಲ ಕಪ್ಪು ತಪ್ಪು
ಕಟ್ಟಿದವರೋ ಅಗೆದವರೋ ಎಸೆದವರೋ, ಸೂಟು ಹಾಕಿದಾಗ ಕಾಣುವುದಿಲ್ಲ ಯಾರದೂ ತಪ್ಪು
ಬೀಜ ಮೊಳೆತು ಕುಡಿಯೊಡೆವ ಸಂಭ್ರಮ; ತೊಂದರೆಗಳ ಗಡಿ ಮೀರಿದ ಸಹನೆ
ಅಪರೂಪಕ್ಕೆ ಬಂದ ಎಳೆ ಬಿಸಿಲ ಬೆಂಕಿಪೆಟ್ಟಿಗೆಯಲ್ಲಿ ತುಂಬಿಡುವ ಕಲ್ಪನೆ
ಇತ್ತ ಗಿಜಿಗುಡುವ ಬಜಾರಕ್ಕೆ ಮಳೆಯ ಸಿಂಚನ; ಬಾಯ್ತೆರೆದ ಇಳೆಗೆ ಕೊಂಚ ಸಾಂತ್ವನ
ಸೂಟುಧಾರಿಗಳ ಶಾಪ, ಟ್ರಾಫಿಕ್ಕೆಂಬ ಶಕ್ತಿಕೂಪ, ಸರ್ಚಾರ್ಚುಗಳ ಅಟಾಟೋಪ
ಮನುಷ್ಯ ಒಬ್ಬನೇ, ಭೂಮಿಯೊಂದೇ
ಷಹರಕ್ಕೂ ಹಳ್ಳಿಗೂ ಅದೆಷ್ಟು ನೋಟಿನ ಅಂತರ
ಅದೆಂಥಾ ನೋಟದ ಅಂತರ

-ಚಿನ್ಮಯ
27/5/2019

2 comments:
‘ಇಟ್ಸ್ ರೇನಿಂಗ ಔಟ್ಸೈಡ್’..... ಒಂದು ಉತ್ತಮ ಕವನ ಹುಟ್ಟಿತಲ್ಲ,ಅಷ್ಟೇ ಸಾಕು!
ಧನ್ಯವಾದ ಕಾಕಾ
Post a Comment