ಆನಿವರ್ಸರಿಗಳಿಗೆ ಲೆಕ್ಕವಿರಬಹುದು ಕಣೆ ಹುಡುಗಿ
ದಿನಕೊಂದು ರಂಗು ತೋರುವ ಗರಿ ಗರಿ ಪ್ರೀತಿಗಿದ್ದೀತೆ?
ಹುಣ್ಣಿಮೆಯ ಮುನಿಸು; ಅಮಾವಾಸ್ಯೆಯ ಸವಿಗನಸು
ಮಾತು ಎರಡಿದ್ದಿರಬಹುದು; ಒಂದಾಗಿ ಬದುಕಿದ್ದು ಸುಳ್ಳಾದೀತೆ?
ಕಾಲಮೇಲೆ ನಿಂತುಕೊಂಡದ್ದಾಯ್ತು; ವೀಕೆಂಡು ತಿರುಗಾಟವಾಯ್ತು
ದೂರ ಹಿಮಾಲಯದಲ್ಲಿ ಟೆಂಟು ಹೂಡಿದರೂ ಏಕಾಂತ ದಕ್ಕದಾಯ್ತು
ಕಾರ್ಪರೇಟ್ ಕಾನನದಿ ಅಲೆಯುತಾ ವಾತ್ಸಲ್ಯದ ಗುಡಿಸಿಲೊಂದ ಕಂಡೆ
ಸ್ನೇಹದ ಆಮಂತ್ರಣ, ಅಹಂ ಇಲ್ಲದ ಔತಣ; ಸಾಂಗತ್ಯದ ಅವಶ್ಯ ಮನಗಂಡೆ
ರಾತ್ರಿಯೆಲ್ಲ ಹರಟುವುದು ಏನಿರಬಹುದು? ಸ್ಲೀಪರ್ ಬಸ್ಸಿನ ಹಳೇ ಪ್ರಶ್ನೆ
ಮಾತು ಮುಖ್ಯವೇ ಅಲ್ಲ, ಮಾತಾಡುವಿಕೆಯೆ ಸುಖ; ನಡುಯೌವ್ವನದ ಪ್ರಜ್ಞೆ
ಎಲ್ಲ ಸರಿಯಾದಾಗ ಕರೆಯುವುದಕಿಂತ; ಒಟ್ಟಾಗಿ ತಪ್ಪು ಮಾಡಿವುದೆ ಅಸಲಿಯೆನಿಸಿದೆ
ಸುಳ್ಳುಗಳ ಜೊತೆ ಸೆಲ್ಫೀಗಿಂತ; ಸತ್ಯ ಹೇಳಿ ಉಗಿಸಿಕೊಳ್ಳುವುದೇ ಸರಿಯೆನಿಸಿದೆ
ಬಕೇಟ್ ಲೀಸ್ಟು ಖಾಲಿಯಾದರೆ ಖುಷಿ; ಪ್ರಿಯಾರಿಟಿ ಲಾಸ್ಟ್ ಎಂದರೆ ಬೇಸರ
ಸಮಪಾಲು ಕಾರ್ಯರೂಪವಾಗದಿರೆ ಅಸಮತೆಗೆ ಸಮ್ಮತಿ; ಎಂದಿಗೂ ಸಮ್ಮಿಶ್ರ ಸರಕಾರ
ಅದೇಕೋ ತಮಾಷೆ ಮಾಡಿ ನಗಿಸುವುದಕಿಂತ, ನಿರಾಸೆಯ ಕೇಳಿಸಿಕೊಳ್ಳುವುದು ಇಷ್ಟವಾಗಿದೆ
ಎಲ್ಲರೆದುರು ಎದ್ದು ಕಾಣುವುದಕಿಂತ, ಎಲ್ಲರೊಳಗೊಂದಾವುದು ಆಪ್ತವಾಗುತ್ತಿದೆ

-ಚಿನ್ಮಯ
17/08/2019

3 comments:
ನಿಮ್ಮ ಇ ಕವನ ನನಗೆ ತುಂಬ ಇಷ್ಟವಾಯಿತು.
ನಿಲ್ಲಿಸದಿರಿ.. ಇಂತಹ ಇನ್ನಷ್ಟು ಔಟ್ಪುಟ್ಟುಗಳು ಬರಲಿ
ಚಿನ್ಮಯ್ ಸರ್ ಚೆನ್ನಾಗಿ ಇದೆ ನಿಮ್ಮ ಕವನ...
Post a Comment