(ನನ್ನೆಲ್ಲಾ ಗೆಳೆಯ/ಗೆಳತಿಯರಿಗೆ ಈ ಕವನ ಸಮರ್ಪಿತ)
ನನ್ನ ಎಮ್ಮೆಗಳೆ ಬನ್ನಿ ಇಲ್ಲಿ,
ಕಣ್ಣ ಮುಚ್ಚಿ ಹತ್ ಎಣಿಸುವೆ
ನನ್ನ ಎದುರು ಬಂದು ನಿಲ್ಲಿ.
ಕಲ್ಲು ಮುಳ್ಳುಗಳಿದೆ ಎಲ್ಲೆಡೆ
ಆದಿರೇಕೆ ಒಬ್ಬಂಟಿ ?
ಬನ್ನಿ ಎಲ್ಲರೂ ,ಕೂಡಿ ತಿನ್ನುವ
ಈಗ ಒಂದು ಬನ್-ಟೀ
ಥೂ ,ಎಲ್ಲಿರುವಿರಿ??
ಹ್ಯಾಪಿ ಬರ್ತಡೇಯ ದಿನ ಜಾಡಿಸಿ
ಒದೆಯುವ ನನ್ನ ಎಮ್ಮೆಗಳೇ ಬನ್ನಿ
ಹ್ಯಾಪುಮೋರೆ ಹಾಕಿಕೊಂಡ ದಿನವು
ಗುದ್ದಿ ಎಬ್ಬಿಸಿದ ಎಮ್ಮೆಗಳೇ ಬನ್ನಿ
ಖಾಲಿ ಥೈಲಿಗೆ ಸಾಲವ ನೀಡಿ,
ಜೋಲಿ ಹೊಡೆದ ಮನವ ತಿದ್ದಿ ತೀಡಿ,
ಹೋದಿರೆಷ್ಟು ದೂರ ಸಾಗಿ??
ಕೇಳದೇಕೆ ನಿಮಗಿಂದು,ನಾ ಕರೆದರೂ ಕೂಗಿ!
10 comments:
ತಮ್ಮಯ್ಯ.. ಚೊಲೊ ಕರದ್ದೆ ಎಮ್ಮೆಗಳನ್ನ.. ಆದ್ರೆ ಒ೦ದು ರಾಗ ಬಿಟ್ಟಿಗಿದೆ.. ವಾ೦ಯ್ ಅ೦ತ ಕರಿ ಲಗೂನೆ ಬತ್ತ...:))
ಧನ್ಯವಾದ ಅಕ್ಕಾ....ಎಮ್ಮೆ ವದರಿದ ಹಂಗೆ ಕರ್ಯನಾ ಅಂದ್ಕಂಡಿ,ಆದ್ರೆ ಎನ್ ಮಾಡ್ಲಿ ಆಮೇಲೆ ಯಾರಾರ್ದ್ರು ಬಂದು "ಮತ್ ಎಂತಕ್ ಹಾಡ್ ಹೇಳಲೆ ಶುರು ಮಾಡಿದ್ದೆ,ಬಿಟ್ಟಿದಿದ್ಯಲಾ" ಹೇಳ್ದ್ರೆ ಕಷ್ಟಾ ಹೇಳಿ ಬಿಟ್ಟಿ!!!!!ಹಾ ಹಾ..
ಧನ್ಯವಾದ ಅಕ್ಕಾ..ಬರ್ತಾ ಇರು,ಖುಷಿ ಆತು.
ಚೆನ್ನಾಗಿದೆ ಎಮ್ಮೆ ಕರೆಯೋ ರೀತಿ :)
ಸ್ವರ್ಣಾ
ಸ್ವಾಗತ ನಮ್ಮನೆಗೆ...ಧನ್ಯವಾದಗಳು,ಬರುತ್ತಿರಿ ಖುಷಿಯಾಯ್ತು.
ಚಂದ ಇದೆ ಚಿನ್ಮಯ್..
ಇಷ್ಟ ಆಯ್ತು...ಎಮ್ಮೆಗಳು ತಿರುಗಿ ಬರಲಿ....:D
ಧನ್ಯವಾದಗಳು ಸುಷ್ಮಾ...ಬರುತ್ತಿರಿ
Hoy .. emma banta ....
ಊಹು....ಆದ್ರೆ ನೀವ್ ಬಂದಿದ್ ಖುಷಿ ಆಯ್ತು ಶ್ರೀಧರಣ್ಣಾ...ಧನ್ಯವಾದ ಬರುತ್ತಿರಿ.
ಕಲ್ಲು ಮುಳ್ಳುಗಳಿದೆ ಎಲ್ಲೆಡೆ
ಆದಿರೇಕೆ ಒಬ್ಬಂಟಿ ?
ಬನ್ನಿ ಎಲ್ಲರೂ ,ಕೂಡಿ ತಿನ್ನುವ
ಈಗ ಒಂದು ಬನ್-ಟೀ
ಚಿನ್ಮಯ ಈ ಸಾಲುಗಳು ಮಿಂಚಿನಲ್ಲಿ ಮಿಂಚುಬಳ್ಳಿಯಂತೆ ಕೋರೈಸಿವೆ.... ಚನ್ನಾಗಿವೆ ಸಾಲುಗಳು...
ಧನ್ಯವಾದಗಳು ಜಲನಯನ...ಬರುತ್ತಿರಿ.
Post a Comment