Thursday, May 23, 2013

ಗುಡುಗುಮ್ಮ ಬಂದೆನ್ನ…

ನಮಸ್ಕಾರ ಎಲ್ರಿಗೂ...
ಸುಮಾರ್ ದಿನಾ ಅಯ್ತಲ್ವಾ ಏನೂ ಬರೀದೆ???
ಮೂರನೇ ಇಂಟರ್ನಲ್ಸು ಮುಗ್ದು ನಾಲ್ಕೈದು ದಿನವಾದ್ರೂ ಏನು ಬರ್ದಿಲ್ಲಾ ಅಂದ್ರೆ ಹೆಂಗೆ ???
ಅದ್ನಾ ಒಂದೆರಡು ನಲುಮೆಯ ಗೆಳೆಯ ಗೆಳತಿಯರು ಕೇಳಿದ್ದೂ ಆಗಿದೆ ಬಿಡಿ...ಅದು ನನ್ನ ಪುಣ್ಯ ಅಂದ್ಕೋತೀನಿ :)..

ಇದು ಇನ್ನೊಂದು ಪ್ರಯತ್ನ....
ನೋಡಿ...ಬರೆದದ್ದು ನಿಮ್ಮ ಮುಂದಿದೆ...ನನ್ನ ಲೆಕ್ಕದಲ್ಲಿ ಬರೆದದ್ದು ಮುಗಿಯಿತು ಅಂದುಕೊಂಡಿದ್ದೇನೆ...ತಪ್ಪ್ಪು -ಒಪ್ಪು ತಿಳಿಸಿ ಇದನ್ನು  ತಿದ್ದುವುದು,ಇಷ್ಟವಾದರೆ ಮೆಚ್ಚಿ ಕಮೆಂಟಿಸುವುದು,ನಿಮ್ಮ ಅನಿಸಿಕೆಯನ್ನು ಬರೆದು ಪ್ರೋತ್ಸಾಹಿಸುವುದು ನಿಮ್ಮ ಕೈಲಿದೆ..ಮಾಡ್ತೀರಾ ಅಲ್ವಾ??

ಎಂದಿನಂತೆ ಅದರ ಕೆಳಗೆ ಕೆಲ ಶಬ್ದಾರ್ಥ..ಅದರ ಕೆಳಗೆ ನನ್ನ ಕಲ್ಪನೆಗಳ ಸಾರಾಂಶ...ಪ್ರಾಯಶಃ ಅದು ನನ್ನ ಕಲ್ಪನೆಗಳನ್ನು ನಿಮ್ಮ ಮೇಲೆ ಹೇರಿದಂತಾಗುತ್ತದೆ ಅನಿಸುತ್ತದೆ ..ಇರಲಿ..ಎಲ್ಲರಿಗೂ ಓದಿ ಅರ್ಥ ತಿಳಿದುಕೊಳ್ಳಲು ಸಹಾಯವಾಗಲಿ ಎಂಬುದೊಂದೇ ನನ್ನ ಆಶಯ...ಹಾಗಾಗಿ ಮೇಲೆ ಅರ್ಥವಾಗದಿದ್ದರೆ ಕೆಳಗೆ ಕಣ್ಣಾಡಿಸಿ..ನಿಮ್ಮ ಅನಿಸಿಕೆಯನ್ನೂ,ನಾ ಗೀಚಿದ್ದನ್ನೂ ಒಮ್ಮೆ ಹೋಲಿಸಿ,ಕಮೆಂಟಿಸಿ...
ಮರೆಯದೇ ಅನಿಸಿಕೆ ತಿಳಿಸಿ ಪ್ರೋತ್ಸಾಹಿಸಿ...





ಗುಡುಗುಮ್ಮ ಬಂದೆನ್ನ ಭೂಗಡಲ ನಡುಗಿಸಿರೆ
ಉಡುಗಿತು ಎನ್ನೆದೆಯ ಉಸಿರ ನಡಿಗೆ,
ಅಡಗಿಹೆನು ಹೆದರಿಕೆಯ ಕರಿ ಗೂಡಿನೊಳಗೆ…

ಕರಿಮೋಡದಾ ಝಳಕೆ ಕನಸುಗಳು ಸುಡುತಲಿರೆ
ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ
ಬರಸಿಡಿಲ ಘೀಳಿಗೆ ಮಾನಸವು ಮುಡುಗುತಿರೆ,
ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ

ದರಕೊಡೆವ ಗಾಳಿಯು ಮರಿಹೂವ ಬರಗುತಿರೆ
ಕಡಗಲದಳ ಮರೆಯಿತದುವೆ ಬಿದಿರ ಬಡಿಗೆ
ಮರಕೆಡುವೊ ಮಳೆಗೆ ಬರಿಗಾಲು ಜಾರುತಿರೆ
ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ

ಕೊರಗುಡುವ ಮಳೆಜಿರಲೆ ಮರವನು ಹೀರುತಿರೆ
ಅಡಿಕೆ ಶಿದ್ದಕ್ಕಿಯಿಲ್ಲ ಕೊಡಲು ಬೇಡುಪಡಿಗೆ
ಸುರಿಕೊಡೆಯ ಬೀಳಲಾ ಜವನಿಕೆಯು ಕರಗುತಿರೆ
ಹಿಡಿಕೆ ಇದ್ದಿಲ ಬಲವು ಸುಡುವ ಹಾದಿಕಡೆಗೆ


ಗುಡುಗುಮ್ಮ ಬಂದೆನ್ನ ಭೂಗಡಲ ನಡುಗಿಸಿರೆ…

-ಚಿನ್ಮಯ ಭಟ್ಟ.

ಇನ್ನು  ನಾ ತಿಳಿದಂತೆ+ಬಳಸಿದಂತೆ ಶಬ್ಧಾರ್ಥ ..ತಪ್ಪಿದ್ದರೆ ದಯವಿಟ್ಟು ತಿಳಿಸಿ…ಕಲಿಯಲು ಸಹಕರಿಸಿ..
( ಶಬ್ದಾರ್ಥ :
ಮಾನಸ-ಹಿಮಾಲಯದ ಒಂದು ಸರೋವರದ ಹೆಸರೂ ಇದೆ..ನಾ ಬಳಸಿದ್ದು ಮನಸ್ಸು ಎಂಬರ್ಥದಲ್ಲಿ..
ಕುಡಿಕೆ-ನಮ್ಮ ಕಡೆ  ಒಂದು ಬಗೆಯ ಪಟಾಕಿಗೆ ಈ ರೀತಿಯ ಹೆಸರಿದೆ ಆ ಅರ್ಥದಲ್ಲಿ ಬಳಸಿರುವುದು.ಅದಕ್ಕೆ ಹೂವಿನ ಕುಂಡ                  flower pot ಅಂತಾನೂ ಕರಿತಾರಂತೆ ...
ಕಡಗೋಲು-ಮಜ್ಜಿಗೆ ಕಡೆಯಲು ಬಳಸುವ ಕೋಲು,ದರಕು-ಒಣಗಿದ ಎಲೆ,ಮರಿಹೂವು-ಮೊಗ್ಗು ಎನ್ನುವ ಅರ್ಥದಲ್ಲಿ,
ಕಡಗಲದಳ-ಕಡಗಲ ಹೂವಿನ ದಳ,ನಮ್ಮನೆಯಲ್ಲಿ ಈ  ಹೂವು ಸುಮಾರು ಒಂದೂವರೆ ಅಡಿ ಎತ್ತರದ ಮರದಲ್ಲಿ ಬಿಡುತ್ತಿತ್ತು.ಸ್ವಲ್ಪ ಗಟ್ಟಿ ಅದರ ದಳಗಳು.
ಕಡಿಕೆ ಮಣೆ-ಕೊನೆಗೌಡರು ಮರದಲ್ಲಿ ಕುಳಿತುಕೊಳ್ಳಲು ಮಾಡುಕೊಳ್ಳುವ ಒಂದು ಬಗೆ ಮಣೆ.
ಶಿದ್ದಕ್ಕಿ-ಶಿದ್ದೆಯಷ್ಟು ಅಕ್ಕಿ,
ಬೇಡುಪಡಿ-ಬೇಡುವವರಿಗೆ ಕೊಡುವ ಭಿಕ್ಷೆ,ಪಡಿಯನ್ನು ಅಕ್ಕಿ ಎನ್ನುವ ಅರ್ಥದಲ್ಲೂ ಬಳಸುತ್ತಾರೆ.
ಬೀಳಲು-ಆಲದ ಮರದ ಇಳಿಬೀಳುವ ಬೇರುಗಳು ಎನ್ನುವ ಅರ್ಥದಲ್ಲಿ,
ಜವನಿಕೆ-ಪರದೆ,ಹೊದಿಕೆ ಎನ್ನುವ ಅರ್ಥದಲ್ಲಿ,  )
---------------------------------------------------------------------------------------------
ಇದು ಹಿಂಗೆ ನನ್ ಲೆಕ್ಕದಲ್ಲಿ....

"ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ"
ಹುಡುಗು ಬುದ್ಧಿಯವರು ಅಂದ್ರೆ ಯುವಜನರು,ನಾವು...ಹೊಸದನ್ನೇನೋ ಮನಸ್ಸುಳ್ಳವರು... ಗುಡಿಸಲು ಎನ್ನುವುದು ಅವರ ಬದುಕಿನ ಸರಳತೆ ತೋರಿಸಲು..ಮೌನದಡುಗೆ ಎಂದರೆ ಕನಸುಗಳೇ ನಮಗೆ  ಬಲ..ಅದೇ ಮನಸ್ಸಿಗೆ ಊಟ... ಅವೇ ಇಲ್ಲದಿದ್ದರೆ ನಮಗೆ   ಚೈತನ್ಯವಿಲ್ಲ ಎನ್ನುವ ಅರ್ಥದಲ್ಲಿ...

"ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ"
ಕುಡಿಕೆ ಎನ್ನುವುದು ಒಂದು ಬಗೆಯ ಪಟಾಕಿ.. ಅದು ಸುರ್ರ್ ಎನ್ನುತ್ತಾ ಕತ್ತುತ್ತದೆ..ಆ ಶಬ್ಧ ಮಜ್ಜಿಗೆ ಕಡೆಯುವ ಶಬ್ಧದ ಥರ ಇರುತ್ತದೆ..ಅಂಥಹ ಮಜ್ಜಿಗೆ ಕಡೆಯುವ ಕಡಗೋಲಿಗೆ ಇಂದು ಕಡೆಯಲೂ ಏನೂ ಸಿಕ್ಕಿಲ್ಲ...ಅಂದರೆ ನಮ್ಮಲ್ಲಿ ಚಿಂತನ ಮಂಥನ ಕಡಿಮೆಯಾಗುತ್ತಿದೆ...ಯೋಚಿಸುವ ಶಕ್ತಿ ಖಾಲಿ ಆಗಿದೆ ಎನ್ನುವ ಅರ್ಥದಲ್ಲಿ...

"ಕಡಗಲದಳ ಮರೆಯಿತದುವೆ ಬಿದಿರ ಬಡಿಗೆ"
ಕಡಗಲ ಹೂವು ಆಗಲೇ ಹೇಳಿದಂತೆ ನಾ ನೋಡಿದ್ದು ಎತ್ತರದ ಮರದಲ್ಲಿ...ಅದನ್ನು ದೇವರಿಗೆ ಕೊಯ್ಯಲು ಅಜ್ಜಿ ಒಂದು ಬಿದಿರಿನ ಬಡಿಗೆಯನ್ನು  ಬಳಸುತ್ತಿದ್ದರು...ಹಾಗಾಗಿ ಬಿದಿರ ಕೋಲಿನ ಕೆಲಸ ಹೂವನ್ನು ಕೊಯ್ಯುವುದು..ಅದು ಅದನ್ನು ಮರೆತಿದೆ ಎಂದರೆ,ನಮ್ಮ ಕರ್ತವ್ಯವನ್ನು ಮರೆಯುತ್ತಿದ್ದೇವೆ ಎನ್ನುವ ಅರ್ಥದಲ್ಲಿ...

"ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ"
ಕಡಿಕೆ ಮಣೆ ಎಂದರೆ ಮರದಲ್ಲಿ ಕೊನೆಗೌಡರು ಕೂರಲು ಬಳಸುವುದು...ಆಂದರೆ ಮರ ಏರುವುದು ಎಂದರೆ ಪ್ರಗತಿಯ ಸಂಕೇತ..ಹೊಸ ಪ್ರಯೋಗಗಳ ಸಂಕೇತ... ಅಲ್ಲಿ ಕೂರುವುದು ಅಂದರೆ ಅಲ್ಲಿ ನೆಲೆನಿಂತು ಯಶಸ್ಸನ್ನು ಕಾಣುವುದು...ಹಂಗಾಗಿ ಆ ಕಡಿಕೆಮಣೆ ಹಳೆಮನೆಯ ಮಾಡಿನಡಿಗೆ ಅಂದರೆ ಆ ಹೊಸ ಪ್ರಯೋಗಗಳು ನಿಂತು,ಮತ್ತೆ ಹಳೆಯದಕ್ಕೇ ಜೋತುಬಿದ್ದಿದ್ದೇವೆ ಎನ್ನುವ ಆರ್ಥದಲ್ಲಿ... 

"ಅಡಿಕೆ ಶಿದ್ದಕ್ಕಿಯಿಲ್ಲ ಕೊಡಲು ಬೇಡುಪಡಿಗೆ"
ಇಲ್ಲಿ ಮಳೆಜಿರಲೆ ಎಂದರೆ ಬ್ರಷ್ಟಾಚಾರ....ಅವರು ಬೇಡುವವರು...ನಮ್ಮ ಕಡೆ ಬೇಡುವವರಿಗೆ ಅಡಿಕೆ ಅಥವಾ ಒಂದು ಶಿದ್ದೆ ಅಕ್ಕಿಯನ್ನು ಕೊಡುವುದನ್ನು ನೋಡಿದ್ದೇನೆ.. ಅವರಿಗೆ ಕೊಡಲು ನಮ್ಮಲ್ಲಿ ಅಕ್ಕಿ-ಅಡಿಕೆ ಏನೂ ಇಲ್ಲ,ಸಂಪತ್ತಿಲ್ಲ ...ಅವರ ಬಕಾಸುರ ಹೊಟ್ಟೆಯನ್ನು ತುಂಬಲು ಸಾಧ್ಯವಾಗುತ್ತಿಲ್ಲ ಎನ್ನುವ ಅರ್ಥದಲ್ಲಿ...

"ಹಿಡಿಕೆ ಇದ್ದಿಲ ಬಲವು ಸುಡುವ ಹಾದಿಕಡೆಗೆ"
ಇಲ್ಲಿ ಕೊಡೆ ಎಂದರೆ ನಮ್ಮ ಸಂಸ್ಕೃತಿ.ಬೀಳಲು ಅಂದರೆ ಅಂದರ ವಿವಿಧ ವಿಭಾಗಗಳು... ಅದರ ಅಂಗಾಂಗಳನ್ನೇ,  ನಮ್ಮೆಲ್ಲರನ್ನು ಒಂದು ಮಾಡಿದ್ದ ಆ  ಹೊದಿಕೆಯನ್ನೇ ನಾವಿಂದು ಕಳೆದುಕೊಳ್ಳುತ್ತಿದ್ದೇವೆ..ಹಿಡಿಕೆ ಇದ್ದಿಲು ಬಲ ಎಂದರೆ ಹಳೆಯ ತತ್ವ,ಆದರ್ಶಗಳ ಬಲ..ಅದರಿಂದಲೇ ಮುಂದಿನ ದಿನಗಳಿಗೆ ಪರಿಹಾರ ಎಂಬ ಅರ್ಥದಲ್ಲಿ...

ಹಮ್...ನಂದ್ ಮುಗಿತು.. ಈಗ ನಿಮ್ಮ ಸರದಿ :)..
ಕಾಯ್ತಿರ್ತೀನಿ.. 


34 comments:

Unknown said...

ಎಂದಿನಂತೆ ಚಂದದ ಬರಹ ...ಅಲ್ಲಲ್ಲಾ ಅರ್ಥ ಸಹಿತ ಪದ್ಯ :)
ಇಷ್ಟವಾಯಿತು ಅನ್ನೋದು ನಿಮ್ಮೆಲ್ಲಾ ಬ್ಲಾಗಿಗೂ ಹೇಳಲೇ ಬೇಕೇನೋ ಅನ್ನಿಸ್ತಿದೆ ..
ಪದಗಳ ಅರ್ಥ ಕೊಟ್ಟು ಜೊತೆಗೆ ಈ ಸಲದಿಂದ ಸಾಲುಗಳ ಅರ್ಥವನ್ನೂ ಹೇಳಿ ನನ್ನಂತವರಿಗೂ ಅರ್ಥ ಆಗೋ ತರ ಮಾಡಿದ್ದಕ್ಕೆ ಧನ್ಯವಾದ ಜಿ .
ಹುಡುಗು ಬುದ್ದಿಯ ಹುಡುಗರೇ ಸಂಪತ್ತು ಅನ್ನೋದನ್ನ ಚೆನ್ನಾಗಿ ತಿಳಿಸಿದ್ರಿ
"ಕಡಗಲದಳ ಮರೆಯಿತದುವೆ ಬಿದಿರ ಬಡಿಗೆ"
ಮರೆವ (ತ) ಕರ್ತವ್ಯದ ಬಗೆಗಿನ ಈ ಸಾಲು ಮನ ಮುಟ್ಟಿತು ...
(ಚಿನ್ಮಯಣ್ಣಾ ಇಂಟರ್ನಲ್ ಮುಗೀತು ಅನ್ನೋಕೆ ನಿಮಗೆ ಇನ್ಯಾವ ಇಂಟರ್ನಲ್ಲೂ ಇಲ್ಲ ....ಡಿಗ್ರಿಯ ಓದನ್ನ ಮುಗಿಸಿರೋ ನಿಮ್ಮ ಮೇಲೇ ಸಣ್ಣದೊಂದು ಹೊಟ್ಟೆಕಿಚ್ಚಾಗ್ತಿದೆ :ಫ್)
ಮುಂದಿನ ಬರಹವ ನಿರೀಕ್ಷಿಸುತ್ತಾ .....

Srikanth Manjunath said...

ಮಳೆಗಾಲದಲ್ಲಿ ಸುರಿಯುತ್ತಿರುವ ಮಳೆ ಮೇಲಿನಿಂದ ಆದರೆ.. ಚೂರುಗುಟ್ಟುವ ಹೊಟ್ಟೆಯಲ್ಲಿ ಏಳುವ ಅಲೆಗಳ ಮೊರೆತ ಹೊರಗಿನ ಗುಡುಗು ಸಿಡಿಲಿಗಿಂತಲೂ ಜೋರು. ಮಳೆಬಂದಾಗ ಆರ್ಭಟಕ್ಕೆ ನಡುಗುವ ಇಳೆಯಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾ ಹೋಗುವ ಪರಿ ಸುಂದರವಾಗಿದೆ. ಕಷ್ಟ ಕೋಟಲೆ ತರುವ ಮಳೆ... ಬಂದಾಗ ಸ್ವಾಗತಿಸುವ ಮನ ಇರದ ಮನುಜ.. ಅದು ಬಾರದಿದ್ದಾಗ ಜರಿಯುವ ಮನಸ್ಸು ಕೊಡಬಾರದು. ಸುಂದರ ಲಹರಿ ಒಂದು ಸೋನೆ ಮಳೆಯ ಹಾಗೆ ನಿಮ್ಮ ಬರಹ ಇಷ್ಟವಾಯಿತು.

ಚುಕ್ಕಿಚಿತ್ತಾರ said...

ಚಂದದ ಕವಿತೆ. ವಿವರಣೆ ಸಹಿತ ಇದ್ದದರಿಂದ ಗೊಂದಲಕ್ಕೆ ಕಾರಣವಿಲ್ಲ ..:)

ಇನ್ನಷ್ಟು ಮತ್ತಷ್ಟು ಬರಹಗಳು ಬರುತ್ತಿರಲಿ ..:)

ವಂದನೆಗಳು..

ಸುಬ್ರಮಣ್ಯ said...

ನಿಮ್ಮದು ಅಪರೂಪದ ಸಮ್ಮಿಲನ. ಇಂಜೀನಿಯರ್ ಮತ್ತು ಸ್ಥಳೀಯ ಭಾಷೆಯಲ್ಲಿ ಕವಿತೆಗಳು.

Dileep Hegde said...

ಇಲ್ಲಿ ಗುಡುಗಿ ನಡುಗಿಸ್ತಿರೋದು ಸರ್ವ ಸುಖದ ಸೋಗಿನಲ್ಲಿರೋ ಆಧುನಿಕತೆ ಎಂಬ ಗುಡುಗುಮ್ಮ.. ಗೆಲುವ ಚೈತನ್ಯ ತುಂಬುತ್ತಿದ್ದ ನಮ್ಮತನಗಳನ್ನ ಮರೆತು, ನಮ್ಮ ಜುಟ್ಟನ್ನು ಅದ್ಯಾರೋ ನುಂಗಪ್ಪಗಳ ಕೈಗೆ ಕೊಟ್ಟು, ಶಕ್ತಿವಂತರಾಗುತ್ತಿದ್ದೇವೆ ಎಂಬ ಭ್ರಮೆಯಲ್ಲಿ ತೇಲ್ತಿರೋ ಅಶಕ್ತರ ನೈಜ ಚಿತ್ರಣ.. ಈಗಾದರೂ ಮನಸು ಮಾಡಿ ನಮ್ಮ ಹಿರೀಕರು ನಡೆದು ಬಂದ ಹಾದಿಯತ್ತ ಮುಖ ಮಾಡಿದರೆ ದಿವಾಳಿತನದ ದವಡೆಯಿಂದ ಹೊರಬರಬಹುದು ಎಂಬ ಆಶಯ.. ಇದಿಷ್ಟು ನಾನು ಅರ್ಥೈಸಿಕೊಂಡಿದ್ದು... ನಿಮ್ಮ ಅರ್ಥಗಳಿಗೆ ಹೊರತಾಗಿ....

ಪದಗಳ ಜೋಡಣೆ ಮನ ಮುಟ್ಟುವಂತಿದೆ.. ಯೋಚನೆಗಳಿಗೆ ಕದ ತಟ್ಟುವಂತಿದೆ.. ಇಂತಹ ರಚನೆಗಳು ಇನ್ನಷ್ಟು ಬರಲಿ...

Badarinath Palavalli said...

ಚರಣ 1 : ನಮಗೇ ಅನ್ವಯಿಸಿಕೊಂಡರೇ ಮಾಹಾನ್ ಎನಿಸಿಕೊಳ್ಳುವ ನಾವೂ ಯಾವುದೋ ಗುಡುಗಿಗೆ "ಅಡಗಿಹೆನು ಹೆದರಿಕೆಯ ಕರಿ ಗೂಡಿನೊಳಗೆ" ಅಷ್ಟೇ.

ಚರಣ 2: "ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ" ಒಳ್ಳೆಯ ಸಾಲು. ಅಂತೆಯೇ ಮುಡುಗುತಿರೆ ಅಂದರೇ?

ಚರಣ 3: ಇಲ್ಲಿ ನನಗೆ ಅನಿಸಿದ್ದು ನಿಮ್ಮ ಮೇಲೆ ಇದ್ದಿರಬಹುದಾದ ಬೇಂದ್ರೇ ಅಜ್ಜನ ಪವಾಡ. ಪದ ಲಾಲಿತ್ಯ ಮನಸ್ಸಿಗೆ ನಾಟಿತು. ಆದರೂ, ಸಮಗ್ರತೆಯ ದೃಷ್ಟಿಯಲ್ಲಿ "ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ" ಭಿನ್ನವಾಗಿ ಕಂಡರೂ ಒಗ್ಗಲಿಲ್ಲ ಅನಿಸಿತು ಗೆಳೆಯ.

ಚರಣ 4: ಗ್ರಾಮೀಣದ ಪದ್ದತಿಗಳ ಮತ್ತು ಭಿಕ್ಷೆಯ ನೈಜತೆ ಬಂದಿದೆ. ಕಡೆಯ ಸಾಲು "ಹಿಡಿಕೆ ಇದ್ದಿಲ ಬಲವು ಸುಡುವ ಹಾದಿಕಡೆಗೆ " ನಿಜ ಬದುಕಿನ ಸಾರ.
ಒಟ್ಟಾರೆ ನನಗೆ ಬಳಿ ಇಷ್ಟವಾಯಿತು.

ಚಿನ್ಮಯ ಭಟ್ said...

ಭಾಗ್ಯಮ್ಮಾ :)..
ಧನ್ಯವಾದ ಬೋಣಿಗೆ ಕಮೆಂಟಿಗೆ....
ನಾ ಈ ಕವನವನ್ನು ಬರೆಯಲು ಒಂಥರಾ ಕಾರಣ ಆಗಿದ್ದು ನೀನೇನೆ...
ಸುಮ್ಮನೆ ಮನಸ್ಸಿನಲ್ಲೊಂದಿಷ್ಟು ವಿಚಾರ,ಅಲ್ಲಲ್ಲಿ ಚೂರು ಚೂರು ಬರೆದ ಸಾಲುಗಳಿದ್ದವು ಅಷ್ಟೇ...
ಬರೆಯಲು ಏನೋ ಆಲಸಿತನ....ಮೂಡ್ ಇಲ್ಲ ಅದು ಇದು...
ಅವತ್ತು ಇಂಟರ್ನಲ್ಸ್ ಮುಗಿತು ಚಿನ್ಮಯಣ್ಣಾ ಇನ್ನೂ ಯಾವ್ದೂ ಬ್ಲಾಗ್ ಬರ್ದಿಲ್ವಾ ಅಂದಾಗ,ಛೇ ಬರೀಲೇ ಬೇಕು ಅಂತಾ ಕೂತು ಇದಕ್ಕೊಂದು ಆಕಾರ ಕೊಟ್ಟಿದ್ದು...
ಹಾಗಾಗಿ ಇದರಲ್ಲಿ ಭಾಗ್ಯನಿಗೂ ಭಾಗವಿದೆ :)D...
ಧನ್ಯವಾದ ಚಂದದ ಕಮೆಂಟಿನಿಂದ ಪ್ರೋತ್ಸಾಹಿಸಿದ್ದಕ್ಕಾಗಿ :)..
ಬರ್ತಾ ಇರಿ..
ನಮಸ್ತೆ ...

ಚಿನ್ಮಯ ಭಟ್ said...

ಶ್ರೀ....
ಧನ್ಯವಾದಗಳು ಮೊದಲಿಗೆ ನಿಮ್ಮ ಚಂದದ ಅನಿಸಿಕೆಗಾಗಿ...
ಈ ಕವನವನ್ನು ಬರೆಯುವ ಮೊದಲು ನನ್ನಲ್ಲಿ ಇದ್ದಿದ್ದು ಇಷ್ಟು...
ಸಾಮಾನ್ಯವಾಗಿ ಎಲ್ಲರೂ ಮಳೆಯನ್ನು ಹೊಸತನದ ಪ್ರತಿಮೆಯನ್ನಾಗಿಯೇ ಬಳಸುತ್ತಾರೆ...ಅದರ ಇನ್ನೊಂದು ಮುಖದ ಬಗ್ಗೆ ಬಳಸುವುದು ವಿರಳ ..ಹಾಗಾಗಿ ಅದರ ಬಗ್ಗೆ ಬರೆಯಬೇಕು ಅಂದುಕೊಂಡಿದ್ದೆ....
ಆಮೇಲೆ ಬೀಕರತೆಯ ವಾತಾವರಣವನ್ನು ಹೊತ್ತ ಒಂದು ಕವನ ಬರೆಯಬೇಕು ಎನ್ನುವುದು ತುಂಬಾ ದಿನದಿಂದ ಮನಸ್ಸಿನಲ್ಲಿತ್ತು...ಹಾಗಾಗಿ ಅದೆರಡನ್ನು ಸೇರಿಸಿ ಅದನ್ನು ತಳಹದಿಯಾಗಿಟ್ಟುಕೊಂಡು ಅದಕ್ಕೆ ಯುವಜನತೆಯನ್ನು ಸಮೀಕರಿಸಿ ಬರೆಯುವ ಪ್ರಯತ್ನ ಮಾಡಿದೆ...
ಬರೆದದ್ದು ನಿಮ್ಮ ಮುಂದಿದೆ...
ವಂದನೆಗಳು..
ನಮಸ್ತೆ..

ಚಿನ್ಮಯ ಭಟ್ said...

ಚುಕ್ಕಿ ಅಕ್ಕಾ..
ಮತ್ತೊಮ್ಮೆ ಸ್ವಾಗತ ನಮ್ಮನೆಗೆ :)...
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಖಂಡಿತ ಮತ್ತಷ್ಟು ಬರೆಯುವ ಪ್ರಯತ್ನ ಮಾಡುತ್ತೇನೆ...
ಬರ್ತಾ ಇರಿ..
ನಮಸ್ತೆ :)

ಚಿನ್ಮಯ ಭಟ್ said...

ಸುಬ್ರಹ್ಮಣ್ಯ ಸರ್...
ಧನ್ಯವಾದ :)...ಖುಷಿ ಆಯ್ತು ನಿಮ್ಮ ಮಾತು ಕೇಳಿ..
ಅಹ್ ಸ್ಥಳೀಯ ಭಾಷೆಯನ್ನು ಬಳಸೋದ್ರಲ್ಲೇ ಏನೋ ಖುಷಿ ಸಾರ್...
ಚಿಕ್ಕಂದಿನಲ್ಲಿ ಕೇಳಿದ,ಆಡಿದ ಶಬ್ಧಗಳು ಯಾಕೋ ಬರೆಯುವಾಗ ಕಣ್ಣಮುಂದೆ ಬರುತ್ತದೆ..ಅದನ್ನು ಬಳಸಿದರೆ ಮನೆಗೆ ಹೋದ ಅನುಭವ...
ವಂದನೆಗಳು...
ಬರುತ್ತಿರಿ.
ನಮಸ್ತೆ :)

ಚಿನ್ಮಯ ಭಟ್ said...

ದಿಲೀಪ್ ಜೀ...
ಸ್ವಾಗತ ಮತ್ತೊಮ್ಮೆ ನಮ್ಮನೆಗೆ:)..
ಅಬ್ಬಾ...ತುಂಬಾ ಚೆಂದದ ಆಶಯ ಸರ್ ನಿಮ್ದು...
ಗೊತ್ತಿಲ್ಲ..ನಾನು ಒಂದಿಷ್ಟು ವಿಚಾರವನ್ನು ತಲೆಯಲ್ಲಿಟ್ಟುಕೊಂಡು ಬರೆದದ್ದು...
ಜೊತೆಗೆ ಸುಮಾರಾಗಿ ಇವೆಲ್ಲವು ತುಂಡು ಸಾಲುಗಳು...ಒಂದು ಇವತ್ತು ಬರೆದದ್ದಾರೆ ಇನ್ನು ನಾಲ್ಕೈದು ದಿನ ಬಿಟ್ಟೂ ಯಾವಗಲೋ ಇನ್ನೆರಡು ಸಾಲು..ಹಾಗಾಗಿ ಅವುಗಳ ಮಧ್ಯ ಓಟ ಜಾಸ್ತಿ ಅಯ್ತೇನೋ ಅಂದುಕೊಂಡಿದ್ದೆ...ಗೊತ್ತಿಲ್ಲ..ನಿಮ್ಮ ಅನಿಸಿಕೆ ನೋಡೀ ಖುಷಿ ಆಯ್ತು...
ಒಟ್ಟಾರೆ ಸಾರಾಂಶವನ್ನು ಸುಂದರವಾಗಿ ಹೇಳಿ ಈ ಪುಟಕ್ಕೆ ಇನ್ನಷ್ಟು ಕಳೆ ತುಂಬಿದ್ದೀರಿ....
ಅದಕ್ಕಾಗಿ ನಾ ನಿಮಗೆ ಆಭಾರಿ...
ಧನ್ಯವಾದ...
ಬರ್ತಾ ಇರಿ..
ನಮಸ್ತೆ :)

ಗಿರೀಶ್.ಎಸ್ said...

ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ.. .. ಚೆಂದದ ಸಾಲು ಚಿನ್ಮಯ್ ..

ಪ್ರತಿ ಸಾರಿ ಪದಗಳ ಅರ್ಥ ಕೊಡುತ್ತಿದ್ದವರು ಈ ಬಾರಿ ಕೆಲವು ಸಾಲುಗಳಿಗೂ ಅರ್ಥ ನೀಡಿದ್ದೀರಿ.. ಮೊದಲ ಮೂರು ಸಾಲು ತುಂಬ ಹಿಡಿಸಿತು .. ಈ ಬಾರಿ ಶಬ್ದ ಜೋದನೆಯಲ್ಲೂ ಬಹಳ ಪ್ರಭುದ್ದತೆಯನ್ನು ಮೆರೆದಿದ್ದಿರಿ .. ಮುಂದುವರೆಸಿ ಹೀಗೆ ..

ಚಿನ್ಮಯ ಭಟ್ said...

ಬದರಿ ಸರ್....
ನಿಮ್ಮ ಕಮೆಂಟಿಗೆ ಉತ್ತರಿಸುವುದಕ್ಕಿಂತ ಮೊದಲು ,ನಿಮಗೆ ಧನ್ಯವಾದಗಳು ಈ ಥರಹ ಅನಿಸಿಕೆಯನ್ನು ಹೇಳಿದ್ದಕ್ಕಾಗಿ...ನಿಮ್ಮ ಕವನಗಳ ಮುಂದೆ ಇವೆಲ್ಲಾ ಏನೂ ಅಲ್ಲಾ,ಆದರೂ ನಮ್ಮಂಥರ ಎಳಸುಗಳ ಕವನವನ್ನು ಪೂರ್ತಿ ಓದಿ,ನಿಮ್ಮ ದೃಷ್ಟಿಯಲ್ಲಿ ಅದನ್ನು ಆಲೋಚಿಸಿ ಅನಿಸಿಕೆ ವ್ಯಕ್ತಪಡಿಸಿದ್ದೀರಿ...
ಮೊದಲಿಗೆ ವಂದನೆಗಳು ನಿಮಗೆ ಅದಕ್ಕಾಗಿ..
ಇನ್ನು,
ಮುಡುಗುತಿರೆ ಅಂದರೆ ಸಂಕುಚಿತಗೊಳ್ಳೋದು,ಚಿಕ್ಕದಾಗೋದು ಅನ್ನೋ ಅರ್ಥದಲ್ಲೂ ಬಳಸ್ತಾರೆ...ಸಾಮಾನ್ಯವಾಗಿ ಹೆಡ್ ಮಾಸ್ತರ ಮುಂದೆ ಮೈ ಕೈಯನ್ನು ಚಿಕ್ಕದು ಮಾಡಿಕೊಂಡು ರಜಾ ಕೇಳಲು ಹೋಗ್ತಿದ್ವಲ್ಲಾ ಅವಾಗ, ಛಳಿಗೆ ಶರೀರವನ್ನು ಕಂಬಳಿಯೊಳಗೆ ತೂರಿಸ್ಕೊಳ್ತಿವಲ್ಲಾ ಅವಾಗ, ಅದ್ಯಾಕೆ ಹಂಗೆ ಮುಡುಗ್ತೀಯಾ ಅಂತಾ ಕೇಳೋದನ್ನಾ ನೋಡಿದ್ದೆ,ಕೇಳಿದ್ದೆ...ಜೊತೆಗೆ ಸೀರೆಯ ಇಸ್ತ್ರಿ ಹೋಗಿದೆ ಅನ್ಬೇಕಾದ್ರೂ ಮುಡುಗುವುದು ಅಂತಾ ಬಳಸ್ತಾರೆ.. ಹಾಗಾಗಿ ಸಂಕುಚಿತಗೊಳ್ಳೋದು ಅನ್ನೋ ಅರ್ಥದಲ್ಲಿ "ಮಾನಸವು ಮುಡುಗುತಿರೆ "ಅನ್ನೊದನ್ನಾ ಬಳಸಿದೆ...ಅಲ್ಲಿ ಮನಸ್ಸು ಸಂಕುಚಿತವಾಗ್ತಾ ಇದೆ ಅನ್ನೊದನ್ನಾ ಹೇಳಕ್ಕೆ ಹಂಗೆ ಬರೆದೆ...

ಮತ್ತೆ "ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ" ...ಹಮ್ ಗೊತ್ತಿಲ್ಲ ಸರ್...ಹೊಸ ಪ್ರಯೋಗಗಳು ನಡಿತಾ ಇಲ್ಲ...ಬರೀ ಪ್ರಯೋಗ ಮಾಡೋದಷ್ಟೇ ಅಲ್ಲಾ,ಅದರಲ್ಲಿ ನಾನು ನೆಲೆ ನಿಲ್ತಾ ಇಲ್ಲಾ ,ಆ ಅವಕಾಶ ಮರೆಯಾಗಿ ಮತ್ತೆ ಹಳೆಯ ಸಿದ್ಧ ಸೂತ್ರಗಳಿಗೆ ಜೋತು ಬೀಳ್ತಾ ಇದೀವಿ ಅಂತಾ ಹೇಳೋಕ್ ಹೊರ್ಟಿದ್ದೆ...ಗೊತ್ತಿಲ್ಲಾ... ಇನ್ನೊಂದ್ ಸಲಾ ನೋಡ್ತೀನಿ...ಧನ್ಯವಾದ ಈ ಅಮೂಲ್ಯ ಸಲಹೆಗೆ...

ಖುಷಿ ಆಯ್ತು ಸರ್...
ಬರ್ತಾ ಇರಿ..
ನಿಮ್ಮ ಮಾರ್ಗದರ್ಶನ ನಮಗೆ ಸದಾ ಅಗತ್ಯ...
ನಮಸ್ತೆ :)

ಚಿನ್ಮಯ ಭಟ್ said...

ಗಿರೀಶ್...
ಹಾಂ ಹಂಗೆ ಒಂದು ಪ್ರಯೋಗ ಮಾಡಣಾ ಅನಿಸ್ತು...
ನಾ ಏನೋ ಒಂದು ಯೋಚನೆ ಇಟ್ಕೊಂಡು ಬರ್ದಿರ್ತೀನಿ..
ಓದುವವರಿಗೆ ಇನ್ನೂ ಒಳ್ಳೊಳ್ಳೆ ಥರದ ಯೋಚನೆಗಳು,ಕಲ್ಪನೆಗಳು ಆ ಸಾಲುಗಳಿಂದ ಹೊಳೆಯಬಹುದು..
ಹಂಗಾಗಿ ಅದೆರಡನ್ನು ಮುಂದಿನ ಓದುಗರಿಗೆ ತೆರೆದಿಟ್ಟರೆ ಚೆನಾಗಿರತ್ತೆ ಅನಿಸ್ತು...
ನನ್ನ ತಪ್ಪುಗಳನ್ನೂ ತಿದ್ಕೋಳೊಕೆ ಇದೊಂದು ಮಾಧ್ಯಮ ಆಗತ್ತೆ ಅನಿಸ್ತು...
ಹಾಗಾಗಿ ಅರ್ಥವನ್ನೂ ಕೊಟ್ಟೆ...ಗೊತ್ತಿಲ್ಲ ಸರೀನೋ ತಪ್ಪೋ ಅಂತಾ..

ಹಮ್...ಆ ಸಾಲು "ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ" ಈ ಥರದ ಕವನವನ್ನು ಗೀಚಬೇಕು ಅಂದ್ಕೋಡಾಗಲೇ ಹೊಳೆದ ಸಾಲು..ನಂಗೂ ಭಾಳ ಇಷ್ಟ ಆಯ್ತು :D..

ಧನ್ಯವಾದ ಗಿರೀಶ್..ನಿಮ್ಮ ಚಂದದ ಅನಿಸಿಕೆಗಾಗಿ...
ಅಕ್ಕರೆಯ ಪ್ರೋತ್ಸಾಹಕ್ಕಾಗಿ...
ಬರ್ತಾ ಇರಿ..
ನಮಸ್ತೆ :)

ಸಂಧ್ಯಾ ಶ್ರೀಧರ್ ಭಟ್ said...

chennaagiddu chinmy... hosa prayoga hidisitu..:)

ಈಶ್ವರ said...

ಕವನ ಚೆನ್ನಾಗಿದೆ. ಕವನವನ್ನು ಅರ್ಥದ ಸಮೇತವಾಗಿ ವಿವರಿಸುವುದು ನನಗೆ ಗುಲಾಬಿ ಹೂವಿನ ಪಕಳೆಗಳನ್ನು ಬಿಡಿಸಿಟ್ಟಂತೆ ಆಯಿತು. ಅದು ಓದುಗನ ಮೂಲಕ ಅರ್ಥವನ್ನು ಪಡೆಯಬೇಕೇ ಹೊರತು, ನಿಮ್ಮ ಅರ್ಥಗಳನ್ನಲ್ಲ.

Shruthi B S said...

ಚಿನ್ಮಯ್. ನನಗೆ ಏನು ಹೇಳಬೇಕು ಅ೦ತಾನೆ ಗೊತ್ತಾಗ್ತ ಇಲ್ಲೆ..ಕವನ ನ೦ಗೆ ಬಹಳ ಇಷ್ಟ ಆತು.. ಮಳೆಯ ಈ ರೂಪವನ್ನ ಯುವ ಜನರಿಗೆ ಹೋಲಿಸಿ ಬರೆದಿದ್ದು ಬಹಳ ಚನ್ನಾಗಿದ್ದು..ಪ್ರತಿ ಸಾಲು ಕೂಡ ಇಷ್ಟ ಆತು.. ನಿಜ ಕನಸುಗಳು ಸುಡತ್ತಲೇ ಇರ್ತು, ಆದ್ರೆ ಆ ಕನಸನ್ನು ಮತ್ತೆ ಚಿಗುರಿಸೋ ಶಕ್ತಿ ನಾವು ಕಳಕೊ೦ಡಿದ್ಯ ಅಲ್ದಾ.. ಭಯ ಅನ್ನೋದು ನಮ್ಮೆಲ್ಲ ಶಕ್ತಿಯನ್ನ ಉಡುಗಿಸಿಬಿಟ್ಟಿದ್ದೇನೋ ಅನ್ನೋ ರೀತಿ... ಆದರೂ ಇದೆಲ್ಲವನ್ನೂ ಮೀರಿ ನಿಲ್ಲಬಹುದು ನಾವು..
ಸಾಮಾನ್ಯವಾಗಿ ಗುಡುಗು, ಸಿಡಿಲಿನ ನ೦ತರದ ವಾತಾವರಣ ಇರ್ತಲ ಅದು ಬಹಳ ಆಹ್ಲಾದಕರವಾಗಿರ್ತು.. ಯಾಕ೦ದ್ರೆ ಗುಡುಗು-ಸಿಡಿಲಿನಿ೦ದ ಉತ್ಪತ್ತಿಯಾದ ನೆಗೆಟಿವ್ ಅಯಾನ್ ಗಳು ನಮ್ಮಲ್ಲಿ ಪಾಸಿಟಿವಿಟಿಯನ್ನ ಉ೦ಟು ಮಾಡ್ತು ಅ೦ತ ಹೇಳ್ತ...
ನೀ ಹೇಳಿದ ಹ೦ಗೆ ಯುವ ಜನರಾದ ನಾವು ಈ ಎಲ್ಲಾ ನೆಗೆಟಿವಿಟಿಯನ್ನು ಮೀರಿ ಪಾಸಿಟಿವಿಟಿಯನ್ನ ಬೆಳೆಸಿಕೊಳ್ಳೋಣ ಅಲ್ದಾ...?

ಚಿನ್ಮಯ ಭಟ್ said...

ಸಂಧ್ಯಕ್ಕಾ...
ಧನ್ಯವಾದನೇ...

ಚಿನ್ಮಯ ಭಟ್ said...

ಅಣ್ಣಾ,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಹಮ್...ನಿಮ್ಮ ಅನಿಸಿಕೆ ಸರಿನೇ..
ನನ್ನದೊಂದು ಚಟ ಹಾಕಿದೆ ...
ಧನ್ಯವಾದ ಕಿವಿಹಿಂಡಿದ್ದಕ್ಕೆ...:)
ನಮಸ್ತೆ :)

ಚಿನ್ಮಯ ಭಟ್ said...

ಶೃತಿ,
ಧನ್ಯವಾದನೇ...
ಅದೆಷ್ಟು ಮುದ್ದಾದ ಅನಿಸಿಕೆ!!!...ಧನ್ಯೋಸ್ಮಿ..
ಮತ್ತೆ ಗುಡುಗು ಅಯಾನು ಅವೆಲ್ಲಾ ಗೊತ್ತಿತ್ತಿಲ್ಲೆ ನಂಗೆ...
ಹೇಳಿಕೊಟ್ಟಿದ್ದಕ್ಕೆ ವಂದನೆಗಳು...
ನಿಂಗಳ ಈ ಅನಿಸಿಕೆಯಿಂದ ನಾ ಇನ್ನಷ್ಟು ಬರಯವು ಅನ್ನೋ ಅಯಾನು ಉತ್ಪತ್ತಿ ಆಗ್ತು ಅನ್ಸ್ತು....
ಬರ್ತಾ ಇರು..
ನಮಸ್ತೆ :)

Imran said...

Hii Chinmay..! Mind blowing raa ^-^
nanagantuu "hale hindi ghazal" kelidanthaha anubhavavaaytu :-)
neevu balasiruva padagalu-upamegalu ellavu tumbaa ishtavaaytu .
nimma vivaraneyantuu "Ice Cream mele Cherry Hannannu" itta haagide...
.
Nannadonde prashne............
"Hottege Enappaa tintiya neenu....?" :-O :D {Hotte-Kichhina Nagu}

bilimugilu said...

Chinmay....
tumbaa chennaagide....holike.... jothege vivaraneyoo saha ati sooktha....
ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ....
ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ
ee eradu saalugaLu tumbaa ishtavaaytu... jothege... yuva peeLigeya ee pari aalochane!! nijakkoo aascharya!

ಚಿನ್ಮಯ ಭಟ್ said...

ರಾಘವರೇ...
ಸ್ವಾಗತ,ಸುಸ್ವಾಗತ,ಶುಭ ಸ್ವಾಗತ......
ಧನ್ಯವಾದಗಳು ಹಳೇ ಹಿಂದಿ ಗಝಲ್ ಗಳಿಗೆ ಹೋಲಿಸಿದ್ದಕ್ಕೆ....
ಐಸ್-ಕ್ರೀಮು ಚೆರ್ರಿ...
ಅದ್ಕೂ ಒಂದ್ ಧನ್ಯವಾದಾ....
ನಿಮ್ಮ ಪ್ರಶ್ನೆಗೆ ಉತ್ತರ.............

































ಕೊಡ್ಲೇಬೇಕಾ????
























ಏನೋ ತಿನ್ತೀನ್ರೀ ಮಾಡಿ ಹಾಕಿದ್ದು ..ಅನಾ ಸಾರು ಥರದ್ದೆಲ್ಲಾ ;)...


ಧನ್ಯವಾದ ಸರ್...
ಬರ್ತಾ ಇರಿ...
ನಮಸ್ತೆ :)

ಚಿನ್ಮಯ ಭಟ್ said...

ರೂಪಾ ಮೇಡಮ್....
ಧನ್ಯವಾದ :)...
ಖುಷಿ ಆಯ್ತು ನಿಮ್ಮ ಅನಿಸಿಕೆ ನೋಡಿ...
ಬರ್ತಾ ಇರಿ...
ನಿಮ್ಮೆಲ್ಲ ರ ಪ್ರೋತ್ಸಾಹವೇ ನಮಗೆ ದಾರಿದೀಪ..
ವಂದನೆಗಳು...
ನಮಸ್ತೆ :)

ಮನಸು said...

ಗುಡುಗು ಒಂದು ರೀತಿ ಭಯ ಹುಟ್ಟಿಸುತ್ತದೆ... ನಿಮ್ಮ ಕವನ ತುಂಬಾ ಚೆನ್ನಾಗಿದೆ ಭಯದಲ್ಲಿ ಬೇಯ್ವ ಜೀವನದ ಸಾಲುಗಳು... ಅದ್ಭುತ ಪದಗಳ ಹುಡುಕಾಟ ನಮಗೂ ಹೊಸ ಪದಗಳ ಪರಿಚಯ ಧನ್ಯವಾದಗಳು ಚಿನ್ಮಯ್

ಚಿನ್ಮಯ ಭಟ್ said...

ಸುಗುಣಾ ಮೇಡಮ್....
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕಾಗಿ..
ಖುಷಿ ಆಯ್ತು...
ಬರ್ತಾ ಇರಿ...
ನಮಸ್ತೆ :)

ಸತೀಶ್ ನಾಯ್ಕ್ said...

ನಮಸ್ಕಾರ ಚಿನ್ಮಯ್..

ಈ ನಡುವೆ ನಿಮ್ಮ ಬ್ಲಾಗ್ ಕಡೆ ಬಂದು ಬಹಳ ದಿನ ಆಯ್ತು. ಅಷ್ಟು ಕೆಲಸದೊತ್ತಡ ಕಂಪ್ಯೂಟರ್ ನ ಅಲಭ್ಯತೆ ಕ್ಷಮೆ ಇರಲಿ..

ನೀವು ಕೆಳಗೆ ಕವನದ ತಾತ್ಪಾರ್ಯವನ್ನ ಕೊಡದೆ ಹೋಗಿದ್ದರೆ ನಾನಾಗೆ ಈ ಕವನವನ್ನ ಅರ್ಥ ಮಾಡಿ ಕೊಳ್ಳಬೇಕಾದ ಪರಿಸ್ತಿತಿ ಬಹಳವೇ ತ್ರಾಸ ಆಗ್ತಿತ್ತು.. ತುಂಬಾ ಗೊಂದಲ ಅನ್ನಿಸ್ತಿತ್ತು. ನೀವಾಗೆ ವಿವರಣೆ ಕೊಟ್ಟು ನಮ್ಮ ಕಷ್ಟ ಸ್ವಲ್ಪ ಕಮ್ಮಿ ಮಾಡಿದ್ರಿ ನೋಡಿ. ಹಾಗೆ ಇಲ್ಲಿನ ಹಲವರ ಹಲ ಕಾಮೆಂಟು ಗಳಿಂದ ಕವನವನ್ನ ಒಂದು ಮಟ್ಟಕ್ಕೆ ಅರ್ಥ ಮಾಡಿಕೊಳ್ಳೋ ಹಾಗಾಯ್ತು..

ಮತ್ತೊಂದು ವಿಭಿನ್ನ ರಚನೆ ಚಿನ್ಮಯ್.. ಇಷ್ಟ ಆಯಿತು.. :)

ಚಿನ್ಮಯ ಭಟ್ said...

ಸತೀಶ್...
ಧನ್ಯವಾದ ನಿಮ್ಮ ಚಂದದ ಅನಿಸಿಕೆಗೆ...
ಅದಕ್ಕಿಂತ ಮುಖ್ಯವಾಗಿ ನಿಮ್ಮ ಅಕ್ಕರೆಯ ಪ್ರೋತ್ಸಾಹಕ್ಕೆ...
ಬರ್ತಾ ಇರಿ..
ನಮಸ್ತೆ :)

ದೀಪಸ್ಮಿತಾ said...

ಕವನ ಚೆನ್ನಾಗಿದೆ. ಜೊತೆಗೆ ಬರುವ ಅರ್ಥವನ್ನು ಸರಳವಾಗಿ ವಿವರಿಸಿದ್ದೀರಿ. ಹೀಗೆ ಮುಂದುವರೆಯಲಿ

ಶ್ರೀವತ್ಸ ಕಂಚೀಮನೆ. said...

ಇಷ್ಟವಾಯಿತು...ಹೊಸತನದ ಭಾವ ಲಹರಿ...

ಚಿನ್ಮಯ ಭಟ್ said...

dhanyavada deepasmitha avre :-):-)

ಚಿನ್ಮಯ ಭಟ್ said...

shree vatsa ji....dhanyavada :-):-)

Unknown said...

ಕವನದ ಜೊತೆಗೆ ಅರ್ಥವನ್ನು ಕೊಟ್ಟು ಒಂದು ವಿಶಿಷ್ಟ ರೀತಿಯಲ್ಲಿ ಬರೆದಿದ್ದೀರಿ.ಚೆನ್ನಾಗಿದೆ.

ಚಿನ್ಮಯ ಭಟ್ said...

vandanegalu chandra naik avre