ನಮಸ್ಕಾರ ಎಲ್ರಿಗೂ,
ಅಹ್..ನನ್ನೊಳಗಿನ ಗೊಂದಲಗಳಿಗೆ ಒಂದಿಷ್ಟು ಅಕ್ಷರರೂಪು ಕೊಡುವ ಪ್ರಯತ್ನ ಇದು...
ಒಂದಿಷ್ಟು ಒಳನೋಟಗಳಿರುವ ಬರವಣಿಗೆಯ ಹಂಬಲಹೊತ್ತು ಬರೆಯಲು ಶುರುಮಾಡಿದ್ದು...
ಗೊತ್ತಿಲ್ಲ ಎಷ್ಟರಮಟ್ಟಿಗೆ ಅದನ್ನು ಅಳವಡಿಸಿಕೊಂಡೆ ಅಂತಾ..
ದಯವಿಟ್ಟು ಓದಿ, ಅನಿಸಿಕೆಗಳನ್ನು ತಿಳಿಸಿ, ಬೆಳೆಯಲು ಸಹಕರಿಸಿ :)
ಬರಿತೀರಾ ಅಲ್ವಾ??ವಂದನೆಗಳು :)
ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು
ಅರೆಬರೆಹನಿ ಕಾದಂಬಿನಿ ಮರೆಯೊಳು ಸೇರಿ
ತೇಲಿಹೋಗಲೇ ,ಊರುಕೇರಿಯ ದಾಟಿ ತೀರಮುಂದೆ.
ತೆರೆಮರೆಯಲೇ ಸರಿಯಲದೆಷ್ಟು ದಿನ ಗೆಳತಿ
ಪರದೆ ಏಳಲೇ ಬೇಕಲ್ಲ ಘಂಟೆಸದ್ದಿನ ಬೆನ್ನಹಿಂದೆ||ಬ||
ಧಪ್ಪನೆ ಮೇಲೆದ್ದು ಧೋ ಎಂದೆನ್ನುತ ಬಂದಪ್ಪಿಳಿಸಿಬಿಡಲೇ ,
ತಲೆಯೊಡೆದು ಚೂರಾಗಲಿ,ಆರಿದ್ರೆಯಲ್ಲಾರ್ತನಾದವೆಂದಾದರೂ ಕೇಳೀತೇ?
ತೊಪತೊಪನೆಬಿದ್ದ ಮಡಿಮೋರೆತುಣುಕುಗಳೇ
ಕಪ್ಪುಸೋಡದೊಳಗುಸಿರುಗಟ್ಟಿ ಕೆಮ್ಮುತಿಹವಲ್ಲ,
ಇನ್ನು ಹಳೆಹಳ್ಳಿಯಿಂದ ಬಂದ ಶುಧ್ಧಪೆದ್ದಾತ್ಮವುಳಿದೀತೆ ??||ಬ||
ಆದದ್ದಾಗಲೆಂದು ಪವನಸುತನನು ನೆನೆನೆನೆದು
ಉಡ್ಡಯನಕೆ ಸಜ್ಜಾಗಲೇ,ರಸರಾಗವ್ಯೋಮಧೀಂ ಅನುಭಾವ ರಜಸ್ಸಿನೆಡೆಗೆ.
ಹೋಗೇನು ಮಾಡಲಿ?ನಿಜ ಮನುಜತೆಯ ಕಾರ್ಯಭಾಗಕೊಟ್ಟು
ನೂಕಿಹನಲ್ಲವೇ ಅವನೆನ್ನ,ಎರಡು-ಒಂದರೀ ಅನಂತವರ್ತುಲದೊಳಗೆ
ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು
================================
*ಕಾದಂಬಿನಿ=ಮೋಡಗಳ ಸಾಲು,
ರಜಸ್ಸು=ಧೂಳು,ಕಣ (+ತಮ,ಸತ್ವ,ರಜಗಳೆಂಬ ಮೂರುಗುಣಗಳಲ್ಲಿ ಒಂದು)
ಅಹ್..ನನ್ನೊಳಗಿನ ಗೊಂದಲಗಳಿಗೆ ಒಂದಿಷ್ಟು ಅಕ್ಷರರೂಪು ಕೊಡುವ ಪ್ರಯತ್ನ ಇದು...
ಒಂದಿಷ್ಟು ಒಳನೋಟಗಳಿರುವ ಬರವಣಿಗೆಯ ಹಂಬಲಹೊತ್ತು ಬರೆಯಲು ಶುರುಮಾಡಿದ್ದು...
ಗೊತ್ತಿಲ್ಲ ಎಷ್ಟರಮಟ್ಟಿಗೆ ಅದನ್ನು ಅಳವಡಿಸಿಕೊಂಡೆ ಅಂತಾ..
ದಯವಿಟ್ಟು ಓದಿ, ಅನಿಸಿಕೆಗಳನ್ನು ತಿಳಿಸಿ, ಬೆಳೆಯಲು ಸಹಕರಿಸಿ :)
ಬರಿತೀರಾ ಅಲ್ವಾ??ವಂದನೆಗಳು :)
ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು
ಅರೆಬರೆಹನಿ ಕಾದಂಬಿನಿ ಮರೆಯೊಳು ಸೇರಿ
ತೇಲಿಹೋಗಲೇ ,ಊರುಕೇರಿಯ ದಾಟಿ ತೀರಮುಂದೆ.
ತೆರೆಮರೆಯಲೇ ಸರಿಯಲದೆಷ್ಟು ದಿನ ಗೆಳತಿ
ಪರದೆ ಏಳಲೇ ಬೇಕಲ್ಲ ಘಂಟೆಸದ್ದಿನ ಬೆನ್ನಹಿಂದೆ||ಬ||
ಧಪ್ಪನೆ ಮೇಲೆದ್ದು ಧೋ ಎಂದೆನ್ನುತ ಬಂದಪ್ಪಿಳಿಸಿಬಿಡಲೇ ,
ತಲೆಯೊಡೆದು ಚೂರಾಗಲಿ,ಆರಿದ್ರೆಯಲ್ಲಾರ್ತನಾದವೆಂದಾದರೂ ಕೇಳೀತೇ?
ತೊಪತೊಪನೆಬಿದ್ದ ಮಡಿಮೋರೆತುಣುಕುಗಳೇ
ಕಪ್ಪುಸೋಡದೊಳಗುಸಿರುಗಟ್ಟಿ ಕೆಮ್ಮುತಿಹವಲ್ಲ,
ಇನ್ನು ಹಳೆಹಳ್ಳಿಯಿಂದ ಬಂದ ಶುಧ್ಧಪೆದ್ದಾತ್ಮವುಳಿದೀತೆ ??||ಬ||
ಆದದ್ದಾಗಲೆಂದು ಪವನಸುತನನು ನೆನೆನೆನೆದು
ಉಡ್ಡಯನಕೆ ಸಜ್ಜಾಗಲೇ,ರಸರಾಗವ್ಯೋಮಧೀಂ ಅನುಭಾವ ರಜಸ್ಸಿನೆಡೆಗೆ.
ಹೋಗೇನು ಮಾಡಲಿ?ನಿಜ ಮನುಜತೆಯ ಕಾರ್ಯಭಾಗಕೊಟ್ಟು
ನೂಕಿಹನಲ್ಲವೇ ಅವನೆನ್ನ,ಎರಡು-ಒಂದರೀ ಅನಂತವರ್ತುಲದೊಳಗೆ
ಬರೆಯಲಾರೆ ಕಣೆ ಹುಡುಗಿ ಕವಿತೆಯನು ನಾನಿಂದು
ಬರಿಮೌನದಲೆ ಮುಳುಗಿಹುದು ತೇಲ್ಗಡಲ ದನಿಯಿಂದು
================================
*ಕಾದಂಬಿನಿ=ಮೋಡಗಳ ಸಾಲು,
ರಜಸ್ಸು=ಧೂಳು,ಕಣ (+ತಮ,ಸತ್ವ,ರಜಗಳೆಂಬ ಮೂರುಗುಣಗಳಲ್ಲಿ ಒಂದು)
25 comments:
ಚಂದದ ಭಾವ ಪ್ರಸ್ತುತಿ....... ಸರಾಗವಾಗಿ ಪ್ರತಿ ಸಾಲುಗಳು ಕಲ್ಪನೆಯ ಓಟಕ್ಕೆ ಮೈತಳೆದು ನಿಂತಿವೆ.
ತುಂಬಾ ಚೆನ್ನಾಗಿದೆ. ಭಾವಕ್ಕೂ ಪದ ಪ್ರಯೋಗಕ್ಕೂ ನಿಮಗೆ ನೂರಕ್ಕೆ ನೂರು... ಬರೆಯಲಾರೆ ಅಂತ ಶುರು ಮಾಡಿ ಎಷ್ಟು ಸುಂದರವಾಗಿ ಬರೆದಿದ್ದೀರ ಮತ್ತೆ ಬರೆಯುತ್ತೇನೆ ಅಂತ ಶುರುಮಾಡಿ ನೀವೇನಾದರೂ ಕವನ ಬರೆದರೆ ಹೇಗಿರಬಹುದು ಎಂದು ಕುತೂಹಲವಾಗುತ್ತಿದೆ!!
ಇಷ್ಟವಾದ ಸಾಲುಗಳು -
ತೊಪತೊಪನೆಬಿದ್ದ ಮಡಿಮೋರೆತುಣುಕುಗಳೇ
ಕಪ್ಪುಸೋಡದೊಳಗುಸಿರುಗಟ್ಟಿ ಕೆಮ್ಮುತಿಹವಲ್ಲ,
ಇನ್ನು ಹಳೆಹಳ್ಳಿಯಿಂದ ಬಂದ ಶುಧ್ಧಪೆದ್ದಾತ್ಮವುಳಿದೀತೆ ?
ಚೆನ್ನಬಸವರಾಜ ಸರ್,
ಸ್ವಾಗತ ಮತ್ತೊಮ್ಮೆ :)....
ಧನ್ಯವಾದಗಳು ನಿಮ್ಮ ಅಕ್ಕರೆಯ ಅನಿಸಿಕೆಗೆ...
ಮೊದಲನೆ ಪ್ರತಿಕ್ರಿಯೆ...
ಖುಷಿ ಆಯ್ತು :)...
ಕಲ್ಪನೆಯ ಓಟ...ಅದೊಂಥರಾ ವಿಚಿತ್ರ ಅಲ್ವಾ ಸಾರ್??
ಒಂದೊಂದ್ ಸಲಾ ಹೊರ್ಡದೇ ಇಲ್ಲಾ ಅನ್ನತ್ತೆ,ಇನ್ನೊಂದ್ ಸಲ ನಮಗೇ ಗೊತ್ತಿಲ್ದೇ ಇದ್ದಂಗೆ ಎಲ್ಲಿಗೋ ಕರ್ಕೊಂಡ್ ಹೋಗ್ಬಿಡತ್ತೆ....ಏನೋ ಸಾಧ್ಯವಾದಷ್ಟರ ಮಟ್ಟಿಗೆ ಅದನ್ನ ಹಿಡಿದಿರಿಸುವ ಪ್ರಯತ್ನ :)..
ವಂದನೆಗಳು ಸರ್....
ಬರ್ತಾ ಇರಿ..
ನಮಸ್ತೆ :)
ಪ್ರದೀಪಣ್ಣಾ....
ಹಾ ಹಾ...ಅಹ್ ಇದರ ಮೊದಲ ಸಾಲು ಈ ಮೂರು ಆಯ್ಕೆಗಳ ಭಾವಕ್ಕೆ ಒಂದು ಆಕಾರಕೊಡಕ್ ಆಗ್ತಾ ಇಲ್ವಲ್ಲಾ ಅನ್ನೋ ಗುಂಗಿನಲ್ಲಿದ್ದಾಗ ಹೊಳಿತು.......ಹಾಗಾಗಿ ಬರ್ದೆ ಅದ್ರಿಂದಾನೆ ಶುರುಮಾಡಿದೆ....
ಕವನ ಬರೆದರೆ ಹೇಗಿರಬಹುದು ????
ಗೊತ್ತಿಲ್ಲಪ್ಪಾ.."ಕವನಾ"ನೆ ಕೇಳ್ಬೇಕು :P..
ಅಹ್ ಅದು ತೊಪತೊಪನೆ ಬಿದ್ದ.....
ಖಂಡಿತ ನಗರ ಜೀವನದ ಸುಳಿಗೆ ಬಂದ ಛಾಯೆ ಇದೆ...ಅದರ ಹಿಂದೊಂದು ವ್ಯರ್ಥವಾಗಿ ಹೋಗುವ ತ್ಯಾಗದ ಕಲ್ಪನೆಯೂ ಇತ್ತು...ಗೊತ್ತಿಲ್ಲ...ನೋಡುವವರ ದೃಷ್ಟಿಗೆ....ಧನ್ಯವಾದ ಅದನ್ನ ಮೆಚ್ಚಿದ್ದಕ್ಕೆ...
ಅಂದದ ಕಮೆಂಟುಗಳಿಂದ ಉತ್ತೇಜಿಸಿದ್ದಕ್ಕೆ...
ಬರ್ತಾ ಇರಿ :)
ನಮಸ್ತೆ :)
ಅರೆಬರೆಹನಿ ಕಾದಂಬಿನಿ ಮರೆಯೊಳು ಸೇರಿ
ತೇಲಿಹೋಗಲೇ ,ಊರುಕೇರಿಯ ದಾಟಿ ತೀರಮುಂದೆ......
(Y) (Y) (Y)
ಮೊದಲು ಓದಿದಾಗ ಭಿನ್ನ ಕವನ ಅನಿಸಿತು ಮತ್ತೊಮ್ಮೆ ಓದಿದಾಗ ಸರಳ ಎನಿಸಿತು ತುಂಬ ಚಂದ ಇದೆ ಚಿನ್ಮಯ್
ನಿಮ್ಮ ಪದಜೋಡಣೆ ಅರ್ಥ ಆಗ್ತಿಲ್ಲೆ ನಂಗೆ ಎಲ್ಲದೂ... ತಪ್ಪಿದ್ರೆ ignore ಮಾಡಿ..ಇದು ನಿಮ್ಮದೇ ಜೀವನದ ಭಾವವಾದರೆ!!!.. ನಾನು ಅರ್ಥೈಸಿಕೊಂಡತೆ ಆದರೆ ಒಂದು ಸಿಂಪಲ್ ಸಲಹೆ .... ಹ್ಮ್ ನೀವ್ ಹೆಲ್ದಂಗೆ ಎನೆ ಆದ್ರೂ Dontuu worry ಯಾರೆ ಸಿಕ್ರೂ ಹಲ್ಲು ಕಿರಿ.. ಎಸ್ಟೆ ದೂರ ತೇಲಿದರೂ ಅವನೆಸೆದಂತೆ ಮಳೆ ಸುರಿಸಲೆಬೇಕು.. ತಡೆವುದೇಕೆ ಕಾಲ ಬಂದಂಗೆ ತೆಲುವುದಸ್ಟೆ ಅದು ಮೌನವೊ ಮಳೆಯೊ ಗಾಳಿಯೊ...ಒಟ್ನಲ್ಲಿ ಕವನ ಮಸ್ತ್ ಇದ್ದು... ನಿಮ್ಮ ಕವನಗಳನ್ನ judge ಮಾಡ ಯೊಗ್ಯತೆ ಇಲ್ಲೆ ಅನ್ನಸ್ತು ನಂಗೆ ಅಸ್ಟ್ superr ಇದ್ದು.. ನಿಮ್ಮ ಕವನದ ಒಳ ಅರ್ಥ ನಂಗೆ ಅರ್ಥ ಆಗ್ತಿಲ್ಲೆ sorry
ತುಂಬಾ ಸುಂದರವಾದ ಪದಜೋಡಣೆ, ಪರೀಕ್ಶೆಯ ಬಿಸಿಯಲ್ಲಿ ಬರೆಯಲಾಗುತ್ತಿಲ್ಲ ಗೆಳತಿ ಅಂತಾನು ಸೇರಿಸಿ ಹಹಹ.
ನಿಮ್ಮ ಭಾವನೆಗಳು ಕಡಲಾವಿಯಂತೆ ಮೇಲೆದ್ದು, ಮೇಘವಾಗಿ
ನನ್ನ ಬಳಿ ಬಂದು, ಮಳೆ ಸುರಿಸಿ ನನ್ನನ್ನು ಕಾವ್ಯಧಾರೆಯಲಿ ಮೀಯಿಸಿವೆ. ಅದಷ್ಟೆ ನನ್ನ ಸಂತೋಷ. ನಿಮ್ಮ ಪ್ರಶ್ನೆಗಳಿಗೆ ಉತ್ತರ ನಿಮ್ಮಲ್ಲಿಯೇ ಸಿಗಬೇಕು!
channaagiddu kano... ishta aatu
ನಿನ್ನ ಕನ್ನಡ ಪದಗಳ ಹುಡುಕಾಟ ಅದೆಷ್ಟು ಗಾಢವಾಗಿ ನಡೆದಿದೆ ಎನ್ನುವುದರ ಕಲ್ಪನೆ ಕಣ್ಣಿಗೆ ಕಟ್ಟುತ್ತಿದೆ :)
ನಿನ್ನ ಶೈಲಿಯ ಪದ ಜೋಡಣೆ ನನಗೆ ತು೦ಬಾ ಇಷ್ಟ ಕಣೋ ಪುಟ್ಟ ತಮ್ಮ :)
ಒಳ್ಳೇದಾಗ್ಲೀ ನಿ೦ಗೆ..
ನಿನ್ನ ಕನ್ನಡ ಪದಗಳ ಹುಡುಕಾಟ ಅದೆಷ್ಟು ಗಾಢವಾಗಿ ನಡೆದಿದೆ ಎನ್ನುವುದರ ಕಲ್ಪನೆ ಕಣ್ಣಿಗೆ ಕಟ್ಟುತ್ತಿದೆ :)
ನಿನ್ನ ಶೈಲಿಯ ಪದ ಜೋಡಣೆ ನನಗೆ ತು೦ಬಾ ಇಷ್ಟ ಕಣೋ ಪುಟ್ಟ ತಮ್ಮ :)
ಒಳ್ಳೇದಾಗ್ಲೀ ನಿ೦ಗೆ..
ಸತೀಶಣ್ಣಾ...
ಧನ್ಯವಾದ :) :)...
ಅರೆಬರೆಹನಿ ಕಾದಂಬಿನಿ...ನನಗೂ ಸಹ ಇಷ್ಟವಾದ ಜೋಡಣೆ ...
ಬರ್ತಿರಿ :)
ರಘು....
ಹಾ ಹಾ...ಧನ್ಯವಾದ ನಿಮ್ಮ ಹಿತವಚನಕ್ಕಾಗಿ :P..
ಒಳಾರ್ಥ ಹುಡ್ಕಲ್ ಹೋಗಡಾ...ತಾನಾಗೆ ಆಗವು ಅದು...
ಧನ್ಯವಾದನೋ...ಬರ್ತಾ ಇರು.. :)
ಸುಗುಣಕ್ಕಾ :),
ಅಯ್ಯೋ ಪರೀಕ್ಷೆ ಕಥೆ ಎನ್ ಕೇಳ್ತೀರಿ...
ಇದ್ದಿದ್ದೇ ಹಿಂದಿನ ದಿನದ ಜಾಗರಣೆ :D....
ಧನ್ಯವಾದ :) :)
ಬರ್ತಿರಿ :)
ನಮಸ್ತೆ :)
ಸುನಾಥ ಕಾಕಾ...
ಧನ್ಯವಾದಗಳು :)...
ಖುಷಿ ಆಯ್ತು ..
ನಿಮ್ಮ ಆಶೀರ್ವಾದ ಹಿಂಗೆ ಇರ್ಲಿ :)
ಗೆಳೆಯ,
ನನ್ನಂತಹ "ಹಳೆಹಳ್ಳಿಯಿಂದ ಬಂದ ಶುಧ್ಧಪೆದ್ದಾತ್ಮ'ರಿಗಾಗಿಯೇ ಬರೆದುಕೊಟ್ಟಿದ್ದೀರಾ ಈ ಮನದಾಳದ ಯಾಮಿನಿಯಂತಹ ಕವನ.
ದೊಪ್ಪನೆ ಬೀಳುವ ನಮ್ಮ ಅಂತರಂಗಕ್ಕೂ ಇದು ಕನ್ನಡಿಯೇ.
ಪದ್ಮಾ...
ಧನ್ಯವಾದನೆ :)
ಅನಿಲಣ್ಣಾ....ಧನ್ಯವಾದಗಳು ಹರಸಿ ಹಾರೈಸಿದ್ದಕ್ಕೆ :)
ಬದರಿ ಸರ್,,,
ಧನ್ಯವಾದಗಳು :) )
ಅಂತರಂಗ.....
ಅದರಿಂದ ಹೊರಟರೇ ಕವಿತೆಗ ಘಮಲು ಅಲ್ವಾ????
ಧನ್ಯೋಸ್ಮಿ...ಬರ್ತಿರಿ..
ಚಿನ್ಮಯ್..
ಚಂದದ ಕವನ..
ಮಾತ್ತೊಮ್ಮೆ ಕವನ ಬರೆಯಿರಿ... ;)
ನಮಸ್ತೆ ಚಿನ್ಮಯಣ್ಣಾ...
ಎಂದಿನಂತೆ ಚಂದದ ಸಾಲುಗಳು.
ಇಷ್ಟ ಆಯ್ತು...ಬೇಗ ಓದಿಸಿಕೊಂಡು ಅರ್ಥ ಮಾಡಿಸಿಕೊಂಡು ಹೋಯ್ತು.
ಚಂದದ ಕವನ ಚಿನ್ಮಯ...ಬರೆಯಲಾರೆ ಅನ್ನುತ್ತಲೇ ಬರೋಬ್ಬರಿ ತೂಕದ ಕವನವೊಂದ ಬರೆದುಬಿಟ್ಟಿದ್ದೀರಿ..ಮತ್ತಷ್ಟು ಇಂತಹ ರಚನೆಗಳ ನಿರೀಕ್ಷೆಯಲ್ಲಿ...ದಿಲೀಪ ಹೆಗಡೆ
ಸುಷ್ಮಾ,
ಧನ್ಯವಾದಗಳು :) :)....
ಮತ್ತೊಮ್ಮೆ ಕವನ ಬರೆಯುವುದು..ನೋಡನಾ..ಕಾಮಗಾರಿ ಪ್ರಗತಿಯಲ್ಲಿದೆ :D...
ಬರ್ತಿರೇ...
ಟಾಟಾ...
ಭಾಗ್ಯಾ,
ಧನ್ಯವಾದನೇ :)...
ಓದಿಸಿಕೊಂಡು ಹೋಯ್ತು ಅಂದ್ಯಲ್ಲಾ,ಧನ್ಯೋಸ್ಮಿ :P....
ಬರ್ತಾ ಇರು :)..ನೀನು ಬರೀತಾ ಇರು :)..
ನಮಸ್ತೆ :)
ದಿಲೀಪಣ್ಣಾ...
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕಾಗಿ :) :)...
ಖಂಡಿತ ಬರೆಯುವ ಪ್ರಯತ್ನ ಮಾಡ್ತೀನಿ :),..
ಬರ್ತಾ ಇರಿ ಹಾಂ ???
ನಮಸ್ತೆ :)
Post a Comment