ನಮಸ್ಕಾರ ಸ್ನೇಹಿತರೇ..
ಟ್ರಾಫಿಕ್ಕಿನ ಜಂಜಾಟ ಎಲ್ಲರಿಗೂ ಗೊತ್ತಿರುವಂಥದ್ದೇ..ಅದನ್ನೇ ನನ್ನೊಳಗಿನ ಒಂದಿಷ್ಟು ಗೊಂದಲದೊಂದಿಗೆ ,ಹೆದರಿಕೆಯೊಂದಿಗೆ ಸಮೀಕರಿಸಿ ಬರೆಯುವ ಪುಟ್ಟ ಪ್ರಯತ್ನವಿದು..ದಯಮಾಡಿ ಓದಿ,ವಾಚನ ಕೇಳಿ,ಅನಿಸಿಕೆ ಹೇಳಿ ಪ್ರೋತ್ಸಾಹಿಸಿ..ತಪ್ಪು-ಒಪ್ಪು ಹೇಳಿ ಬೆಳೆಯಲು ಸಹಕರಿಸಿ....ಹೇಳ್ತಿರಾ ಅಲ್ವಾ ?? ಇಲ್ಲಿದೆ ನೋಡಿ ಕವನ ..
ಸವಾರಿ
ಗಕ್ಕನೆ ನಿಲ್ಲುವುದೋ ನುಗ್ಗಿ ಸಾಗುವುದೋ ತಿಳಿಯದಾಗಿದೆ
ಅತ್ತಿತ್ತ ನೋಡದೇ ಬಂದಹಾಗೇ ಗುಡುಗುಡು ಓಡುತ್ತಲೇ ಇದ್ದರೆ
ಬರ್ರನೆ ತೂರಿ ಬಂದವನ ಅಡಿಗೆ ಸೇರಿ ಅಪ್ಪಚ್ಚಿಯಾಗುವ ಭೀತಿ.
ಎಡಬಲ ನೋಡಿ, ನೋಡಿಕೊಂಡು ಮೆಲ್ಲಗೆ ನುಸಿಯಹೋದರೆ,
ಹಾ!ಪಶೆ ಬಿದ್ದೆ ಎಂದು ಅಣಕಿಸುತಿದೆ ಆ ಮಾವನ ನೋಟದ ರೀತಿ.
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ

ಈ ಉರಿಉಚ್ಚೆಯರ್ಜಂಟು ಸಲ್ಲದು ನಿಂತು ಹೋಗುವಾ ಎಂದೆಣಿಸಿ
ಬಂದುಮಾಡಿದರೆ ಗಾಡಿ ,ನಿಂತದ್ದು ನಿಂತೇ ಹೋಗುತ್ತದೆ ಆತ್ಮಲಿಂಗದಂತೆ.
ಹಿಂದಿನವರ ಹಾರನ್ನುಗಳೆಲ್ಲಾ ಯಥಾಶಕ್ತಿ ಕಿರುಚಿಕೊಳ್ಳತೊಡಗುತ್ತವೆ
ವೈರಿಯ ನಡುಮುರಿಯಲು ಹಪಹಪಿಸುತಿಹ ಸೈನಿಕರ ಯುದ್ಧಘೋಷದಂತೆ.

ಕದ್ದುಮುಚ್ಚಿ ನುಸುಳಿದರೆ ಗಳಿಗೆ ಗಳಿಗೆಗೂ ಅದೇನೋ ಹೆದರಿಕೆಯಾಗುತ್ತದೆ
ತಣ್ಣಗೆ ಬಿಳಿಗೆರೆಯ ಮೇಲೆ ನಿಶ್ಚಿಂತೆಯಿಂದ ನಿಲ್ಲಬಾರದಿತ್ತೇ? ಅನ್ನಿಸುತ್ತದೆ
ನಿಂತಲ್ಲಿ,ರೊಯ್ಯ್ಯ ಎಂದು ಹೋಗುವವರ ನೋಡಿ ಥೋ ಹೊಟ್ಟೆಉರಿಯುತ್ತದೆ
ಉಲ್ಟಾಬರುವ ಕೆಂಪುನಂಬರು,ವ್ಯರ್ಥವಾಯಿತೀಕ್ಷಣವೆಂಬುದ ನೆನಪಿಸುತ್ತದೆ .

-
ಚಿನ್ಮಯ ಭಟ್ಟ
೦೯/೧೨/೧೪
ಪಶೆ ಬೀಳು-ವ್ಯೂಹಕ್ಕೆ ಸಿಲುಕು,ಮೋಸ ಹೋಗು
ಉರಿಯುಚ್ಚೆಯರ್ಜಂಟು-ತೀರಾ ಅರ್ಜಂಟು ಎನ್ನುವ ಅರ್ಥದಲ್ಲಿ..
ವಾಚನದ ಪ್ರಯೋಗ ಇಲ್ಲಿದೆ :
ಹುಂ....ಏನ್ ಅನ್ನಿಸ್ತು ?? ದಯಮಾಡಿ ಹೇಳಿ ಕಾಯ್ತಿದೀನಿ ::)...

==========================
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆಗಕ್ಕನೆ ನಿಲ್ಲುವುದೋ ನುಗ್ಗಿ ಸಾಗುವುದೋ ತಿಳಿಯದಾಗಿದೆ
ಅತ್ತಿತ್ತ ನೋಡದೇ ಬಂದಹಾಗೇ ಗುಡುಗುಡು ಓಡುತ್ತಲೇ ಇದ್ದರೆ
ಬರ್ರನೆ ತೂರಿ ಬಂದವನ ಅಡಿಗೆ ಸೇರಿ ಅಪ್ಪಚ್ಚಿಯಾಗುವ ಭೀತಿ.
ಎಡಬಲ ನೋಡಿ, ನೋಡಿಕೊಂಡು ಮೆಲ್ಲಗೆ ನುಸಿಯಹೋದರೆ,
ಹಾ!ಪಶೆ ಬಿದ್ದೆ ಎಂದು ಅಣಕಿಸುತಿದೆ ಆ ಮಾವನ ನೋಟದ ರೀತಿ.
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ ನುಗ್ಗಿ ಸಾಗುವುದೋ ತಿಳಿಯದಾಗಿದೆ
ಈ ಉರಿಉಚ್ಚೆಯರ್ಜಂಟು ಸಲ್ಲದು ನಿಂತು ಹೋಗುವಾ ಎಂದೆಣಿಸಿ
ಬಂದುಮಾಡಿದರೆ ಗಾಡಿ ,ನಿಂತದ್ದು ನಿಂತೇ ಹೋಗುತ್ತದೆ ಆತ್ಮಲಿಂಗದಂತೆ.
ಹಿಂದಿನವರ ಹಾರನ್ನುಗಳೆಲ್ಲಾ ಯಥಾಶಕ್ತಿ ಕಿರುಚಿಕೊಳ್ಳತೊಡಗುತ್ತವೆ
ವೈರಿಯ ನಡುಮುರಿಯಲು ಹಪಹಪಿಸುತಿಹ ಸೈನಿಕರ ಯುದ್ಧಘೋಷದಂತೆ.
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ ನುಗ್ಗಿ ಸಾಗುವುದೋ ತಿಳಿಯದಾಗಿದೆ
ಕದ್ದುಮುಚ್ಚಿ ನುಸುಳಿದರೆ ಗಳಿಗೆ ಗಳಿಗೆಗೂ ಅದೇನೋ ಹೆದರಿಕೆಯಾಗುತ್ತದೆ
ತಣ್ಣಗೆ ಬಿಳಿಗೆರೆಯ ಮೇಲೆ ನಿಶ್ಚಿಂತೆಯಿಂದ ನಿಲ್ಲಬಾರದಿತ್ತೇ? ಅನ್ನಿಸುತ್ತದೆ
ನಿಂತಲ್ಲಿ,ರೊಯ್ಯ್ಯ ಎಂದು ಹೋಗುವವರ ನೋಡಿ ಥೋ ಹೊಟ್ಟೆಉರಿಯುತ್ತದೆ
ಉಲ್ಟಾಬರುವ ಕೆಂಪುನಂಬರು,ವ್ಯರ್ಥವಾಯಿತೀಕ್ಷಣವೆಂಬುದ ನೆನಪಿಸುತ್ತದೆ .
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ ನುಗ್ಗಿ ಸಾಗುವುದೋ ತಿಳಿಯದಾಗಿದೆ
-
ಚಿನ್ಮಯ ಭಟ್ಟ
೦೯/೧೨/೧೪
ಪಶೆ ಬೀಳು-ವ್ಯೂಹಕ್ಕೆ ಸಿಲುಕು,ಮೋಸ ಹೋಗು
ಉರಿಯುಚ್ಚೆಯರ್ಜಂಟು-ತೀರಾ ಅರ್ಜಂಟು ಎನ್ನುವ ಅರ್ಥದಲ್ಲಿ..
ವಾಚನದ ಪ್ರಯೋಗ ಇಲ್ಲಿದೆ :
ಹುಂ....ಏನ್ ಅನ್ನಿಸ್ತು ?? ದಯಮಾಡಿ ಹೇಳಿ ಕಾಯ್ತಿದೀನಿ ::)...
13 comments:
ಈ ಕವನ ಅರ್ಧ ವಿನೋದ ಹಾಗು ಅರ್ಧ ಗಂಭೀರ ಭಾವನೆಯಿಂದ ಕೂಡಿದ್ದು, ಸ್ವಾರಸ್ಯಪೂರ್ಣವಾಗಿದೆ. ನಿಮ್ಮ ಕವನಗಳಿಗೆ ಹಸಿರು ಸಿಗ್ನಲ್ ಸಿಕ್ಕಿ ಬಿಟ್ಟಿದೆ; ನೀವು ನಿಲ್ಲಬೇಕಿಲ್ಲ!
ಧನ್ಯವಾದ ಸುನಾಥ ಕಾಕಾ...
ನೀವ್ ಗ್ರೀನ್ ಸಿಗ್ನಲ್ಲು ಕೊಟ್ಮೇಲೆ ಬಿಡಿ..ಇನ್ನೇನು ಹೊರಡೋದೇ...:):)..
ಹಾ ಹಾ..ಧನ್ಯವಾದ ಕಾಕಾ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ :)
Chennagide Chinmay Ji:-)
ಉರಿಉಚ್ಚೆಯರ್ಜಂಟು ಸಲ್ಲದು ಎನ್ನುತ್ತ ತಿಳಿ ಹಾಸ್ಯದ ಮೂಲ್ಕ ಘನ ಗಂಭೀರ ವಿಚಾರವನ್ನು ತೆರೆದಿಟ್ಟ ತಮಗೆ ಶರಣು.
ವಿನಾಯಕ ಭಟ್ಟರೇ..ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :)
ಬದರಿ ಸರ್...ನಿಮ್ಮ ಪ್ರೀತಿಗೆ ಶರಣು :).. ಬರವಣಿಗೆಗೆ ಸದಾ ಹೆಗಲು ಕೊಡುವ ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು :)
ಅಮ್ಮಯ್ಯಾ... ಅಂತು ನಿನ್ ಕವನದ ಪದಗಳನ್ನು ಸರಳಗೊಳಿಸಿದ್ದಕ್ಕೆ thanxx... ಒಳ್ಳೆಯ ಕಚಗುಳಿಯ ಕವನ
ರಾಘು...ಧನ್ಯವಾದನೋ .. ಪ್ರೀತಿಯಿಂದ ಓದಿ ಅನಿಸಿಕೆ ಹೇಳಿ ಪ್ರೋತ್ಸಾಹಿಸಿದ್ದಕ್ಕೆ :)
Hi,
Nice one, I am new to our blog. But liked the simple language & style.
Pls visit:aakshanagalu.blogspot. in
Your valuable suggestions helps me to improve my writing
Regards,
Kushi
ನಮಸ್ಕಾರ ಖುಷಿ ಅವರೇ :) ...ನಮ್ಮನೆಗೆ ಸ್ವಾಗತ :) ...ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) ..ಖ಼ಂಡಿತ ನಿಮ್ಮ ಬ್ಲಾಗಿಗೂ ಭೇಟಿ ಕೊಡ್ತೀನಿ :)...
ಧನ್ಯವಾದಗಳು :)
ತುಂಬಾ ಅದ್ಭುತ ಕವನ. ನಿಮ್ಮ ಅಭಿಮಾನಿ ಬಳಗಕ್ಕೆ ನಾನು ಹೊಸ entry :)
ನಾನು ಬ್ಲೋಗ್ ಲೋಕಕ್ಕೆ ಹೊಸಬ, ನಿಮ್ಮ ಸಲಹೆ ಸೂಚನೆ ಆಗತ್ತೆ ವಿದೆ ನನಗೆ.
ಧನ್ಯವಾದ ಲೋಕೇಶ್ ಸರ್...ಸ್ವಾಗತ ಬ್ಲಾಗ್ ಲೋಕಕ್ಕೆ :)
Super sir.
Post a Comment