ಜಗದಲ್ಲಿ ಖುಷಿಯೆಲ್ಲ ಸಿಕ್ಕು
ಕುಣಿಯುವಾಗ ಜೊತೆಗೆ ನೀನಿದ್ದೆ ,
ಮೊಗವೆಲ್ಲ ಸೊರಗಿದ್ದು ,ಜಗಕೆ ನಾ
ಮಣಿಯುವಾಗ ನೀ ನಿದ್ದೆ!
ಹೇಳು ನೀನೇಕೆ ಹೀಗೆ ,
ಎಂದಿಗೂ ನನ್ನ ಕೈಬಿಡುತಲೇ ಇರುವೆ
ಆದರೆ ಜಯದಿ ಮತ್ತೆ ಕೂಡುವೆ ,
ಬೆಲ್ಲವಿದ್ದಾಗ ಬಂದಂತೆ ಇರುವೆ ...
ಬಿಡಬೇಡ ಸಂತಸವೇ ನೀ ನನ್ನ
ಸೋಲಲಿ ,ಇದ್ದು ಸಮಾಧಾನ ಮಾಡು
ಬಿಸುಲಲಿ ನೆರಳಿತ್ತು ಸಾಕೆನಗೆಎಂದು
ಮಳೆಗಾಲಕೆ ಹೋಗದಲ್ಲವೇ ಮನೆ ಮಾಡು ?
2 comments:
ಬಿಸುಲಲಿ ನೆರಳಿತ್ತು ಸಾಕೆನಗೆಎಂದು
ಮಳೆಗಾಲಕೆ ಹೋಗದಲ್ಲವೇ ಮನೆ ಮಾಡು ?
ee vakya tumba ishta aytu..channagi barediddiri..:)
ಧನ್ಯವಾದಗಳು ಸುಚೇತಾ..ಬ್ಲಾಗ ಬರಹದ ಆರಂಭದ ದಿನಗಳವು...
ನೆನಪಿಸಿದಿರಿ ಮತ್ತೆ...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)
ಮುಂದಿನ ಬರಹಗಳಗಳನ್ನು ದಯಮಾಡಿ ಓದಿ..
ನಮಸ್ತೆ :).
Post a Comment