"ಹೆಣ್‍ಮಕ್ಳು ಸಂನ್ಯಾಸಿ ಆಗದ್ ಕಷ್ಟಾ.....ಸುತ್ತಾ ಮುತ್ತ ಇರೋರು ಮನಸನ್ನಾ ಡೈವರ್ಟ್ ಮಾಡ್‍ಬಿಡ್ತಾರೆ...." ಸ್ಥಿರೆ ತರಕಾರಿ ಹೆಚ್ಚುತ್ತಾ ತೀರ್ಪುಕೊಡುತ್ತಿದ್ದಳು....
"ಹಂಗೇನಿಲ್ಲ...ಅವಳೇನ್ ಸಂನ್ಯಾಸಿ ಅಂತಾ ಹೇಳ್ಕೊಂಡಿಲ್ಲ...ಅವರವರ ನಂಬಿಕೆ ಅವರವರಿಗೆ..." ಶತಭಿಷ ಚಲನಾಳನ್ನು ಬಿಟ್ಟುಕೊಡಲು ತಯಾರಿರಲಿಲ್ಲ...
"ಶಾಂತಿ ನೆಮ್ಮದಿ ಸತ್ಯ ಎಲ್ಲಾ ಪ್ರವಚನ ಮಾಡಕ್ ಓ.ಕೆ....ಆದ್ರೆ ರಿಯಲ್ ಲೈಫಲ್ಲಿ ತುಂಬಾನೇ ಕಷ್ಟ..ಏನೋಪಾ....ನಂಗ್ಯಾಕೋ ಅವರಿಬ್ರ ಮಧ್ಯ ಏನೋ ಸ್ಪಾರ್ಕ್ ಕಂಡಂಗಾಯ್ತು...." ಸ್ಥಿರೆ ಗ್ಯಾಸ್ ಉರಿಸಿದಳು...
"ಏನೋ ನಡೀತಾ ಇದ್ರೆ ನಡೀಲಿ ಬಿಡು.. ಒಳ್ಳೇದೇ...." ಶತಭಿಷ ಹಳೆಯ ಸೂಟ್‍ಕೇಸನ್ನು ಲಿವಿಂಗ್ ರೂಮ್‍ನಲ್ಲೇ ಹರಡಿಕೊಂಡಿದ್ದ... ಮಗು ಆತನ ಜೊತೆಗೇ ಹಳೆಯ ಡೈರಿಗಳನ್ನು ತೆರೆದು ಆ ಪುಟ ಈ ಪುಟ ನೋಡುತ್ತಿತ್ತು...ಒಂದೆರಡು ಹಳೇಕಾಲದ ದಿನಪತ್ರಿಕೆಯ ತುಣುಕುಗಳೂ ಅಲ್ಲಿ ಹರಡಿದ್ದವು....ಕೆಲವು ಇನ್ನೇನು ಹರಿಯಲು ಬಂದಿದ್ದವು...ಧೂಳು ಹಿಡಿದಿದ್ದವು...
"ಅದ್ರಲ್ಲ್ ಬೇಕಾಗಿದ್ದ್ ಇಟ್ಕೊಂಡು, ಉಳಿದಿರೋದನ್ನ ರದ್ದಿಗ್ ಹಾಕ್‍ಬಾರ್ದಾ? ಸುಮ್ನೆ ಧೂಳ್ ಹೊಡ್ಕೊಂಡ್ ಇರತ್ತೆ...." ಸ್ಥಿರೆ ಮತ್ತೊಂದು ಬಾರಿ ಪ್ರಯತ್ನಿಸಿದ್ದಳು...
"ಬೇಕು ಅವಲ್ಲಾ....ಯಾವದನ್ನೂ ರದ್ದಿಗ್ ಹಾಕ್ಬೇಡಾ...." ಆತ ಮತ್ತೆ ಅದೇ ಉತ್ತರ ಕೊಟ್ಟಿದ್ದ...
ಈಗಾಗಲೇ ಈ ವಿಚಾರವಾಗಿ ಮನೆಯಲ್ಲಿ ಬಹಳ ಬಾರಿ ಚರ್ಚೆಯಾಗಿತ್ತು....ಸ್ಥಿರೆಗೆ ಕ್ಲೀನ್ ಮಾಡುವ ಚಿಂತೆ...ಸದಾ ಧೂಳು ಹೊಡೆಯುವ ಆ ಸೂಟ್‍ಕೇಸ್‍ನಲ್ಲಿ ಅದೇನಿದೆ ಎನ್ನುವುದು ಆಕೆಗೆ ಅರ್ಥವಾಗಿರಲಿಲ್ಲ....ಮದುವೆಯಾದ ಹೊಸತರಲ್ಲಿ ಓಪನ್ ಮಾಡಿ ನೋಡಿದ್ದಳಾದರೂ ಒಂದಿಷ್ಟು ಡೈರಿ, ಅದರೊಳಗೊಂದಿಷ್ಟು ಕವನ, ಜೊತೆಗೊಂದಿಷ್ಟು ಚಿತ್ರ ಅಷ್ಟೇ ಸಿಕ್ಕಿದ್ದುದು....ಶತಭಿಷ ಹಳೆಯ ಚಿತ್ರ-ಕವನ ನೋಡುತ್ತಾ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದ....ಆತ ತುಸು ಗಂಭೀರವಾಗಿದ್ದುದನ್ನು ನೋಡಿ ಸ್ಥಿರೆಯೂ ಡಿಸ್ಟರ್ಬ್ ಮಾಡಲಿಲ್ಲ...
ಇದ್ದಕ್ಕಿಂದಂತೇ ಚಿತ್ರವೊಂದನ್ನು ನೋಡಿ ಮಗು ನಗಹತ್ತಿತು...
"ಏನ್ ಅರ್ಥ ಆಯ್ತು ಅವನಿಗೆ?" ಆಕೆ ಆಶ್ಚರ್ಯದಿಂದ ಕೇಳಿದ್ದಳು....
"ಏನಿಲ್ಲ...ಮಂಗ ಇದ್ಯಲ್ಲಾ...ಅದ್ಕೇ ಇಷ್ಟ ಆಗಿರ್ಬೇಕು...." ಆತ ತಲೆಗೊಂದು ಮೆದುವಾಗಿ ಮೊಟಕಿ, ಆ ಡೈರಿಯನ್ನು ಮಗುವಿನ ಕೈಯ್ಯಿಂದ ಜೋಪಾನವಾಗಿ ಎಳೆದುಕೊಂಡ......ಮಗು ಕೊಸರಾಡಿತು...ಮತ್ತೊಂದು ಡೈರಿ ಕೈಗೆ ಹಿಡಿಸಿದ...
"ಹಮ್ಮ್...ಏನಿದೆ ಅದ್ರಲ್ಲಿ ಅಂಥದ್ದು?" ಸ್ಥಿರೆ ಹುಬ್ಬು ಹಾರಿಸಿದ್ದಳು... ಕುಕ್ಕರ್ ಇಟ್ಟು ಲಿವಿಂಗ್ ರೂಮಿಗೇ ಬಂದಿದ್ದಳು.. ಫೋಟೋದಲ್ಲಿ ಹುಡುಗ ಹುಡುಗಿಗೆ ಸೇಬೊಂದನ್ನು ಕೊಡಹೊರಟಿದ್ದ...ಆತನ ಹೆಗಲಮೇಲೆ ಕೂತ ಮಂಗ ಅದನ್ನು ಕದಿಯಹೊರಟಿತ್ತು.....
"ಏನೋ ಇರತ್ತಪ್ಪಾ...ನಿಂಗ್ಯಾಕ್ ಅದೆಲ್ಲಾ?" ಶತಭಿಷ ಕೆಕ್ಕರಿಸಿ ನೋಡಿದ್ದ...
"ಮದ್ವೆ ಆಗಿ ಮಗು ಆಯ್ತು...ಇನ್ನೂ ಸೀಕ್ರೆಟಾ?" ಸ್ಥಿರೆಯ ಮಾತಿನಲ್ಲಿ ತುಂಟನಗೆಯಿತ್ತು...
"ಮೆಂಟೇನ್ ಮಾಡ್ಬೇಕಾಗತ್ತೆ ಕೆಲವೊಂದು...." ಆತ ತಲೆ ತುರಿಸಿಕೊಂಡ....
"ಹೇಳ್ಳೇ ಬಾರ್ದು ಅಂತಿದ್ರೆ ನಮ್ದೇನ್ ಒತ್ತಾಯ ಇಲ್ಲಪ್ಪಾ...." ಆಕೆ ಕಿಚನ್ ಕಡೆ ಹೊರಟಿದ್ದಳು...
"ಹಮ್....ಸರಿ ಕೇಳು....ಅದು..ಅವತ್ತು ನಾವೆಲ್ಲಾ ಫ್ರೆಂಡ್ಸು ಮುಳ್ಳಯ್ಯನಗಿರಿಗ್ ಹೋಗಿದ್ವಿ...ಚಲನಾನೂ ಬಂದಿದ್ಲು" ಆತ ಚಲನಾಳ ಹೆಸರು ಹೇಳಿದ ಕೂಡಲೇ ಸ್ಥಿರೆ ತಿರುಗಿದಳು...ಶತಭಿಷ ಮುಂದುವರೆಸಿದ...
"ಸುಹಾಸ್‍ಗೆ ಚಲನಾ ಅಂದ್ರೆ ತುಂಬಾ ಇಷ್ಟ...ಆದ್ರೆ ಹೇಳ್ಕೊಳಕ್ಕ್ ಆಗ್ದೇ ಒದ್ದಾಡ್ತಾ ಇದ್ದ...ನಾವ್ ಮೂರ್ ಜನ ಸಖತ್ ಕ್ಲೋಸ್ ಆಗಿದ್ವಿ...ಅವತ್ತ್ ಛಳಿ ಅಂದ್ರೆ ಛಳಿ...ಬೆಳ್ ಬೆಳಿಗ್ಗೆ ಸನ್ ರೈಸ್ ನೋಡಕ್ಕೆ ಅಂತಾನೇ ಹೋಗಿದ್ವಿ...ಅದೇನಾಯ್ತು...ಚಲನಾಗೆ ಫುಲ್ ಛಳಿ ಆಗಿ, ಅವಳು ನಡಗ್ತಾ ಇದ್ಲು...ನಾನ್ ನನ್ ಜಾಕೇಟ್ ಕೊಟ್ಟೆ...ಪಾಪ ಸುಹಾಸ್ ಫುಲ್ ಉರ್ಕೋಂಡ....ಏನೋ ಸಿಲ್ಲಿ ಮ್ಯಾಟರ್‍ಗೆ ನಾನೂ ಅವನೂ ಫುಲ್ ಕಿತ್ತಾಡಿದ್ವಿ...." ಆತ ಮಾತು ಮುಗಿಸುವಷ್ಟರಲ್ಲೇ ಆಕೆ ಜೋರಾಗಿ ನಗಹತ್ತಿದ್ದಳು...
"ಏನಾಯ್ತು?" ಆತ ನಗುತ್ತಲೇ ಕೇಳಿದ್ದ...
"ಏನಿಲ್ಲ..." ಆಕೆ ಬಾಯಿಗೆ ಕೈ ಅಡ್ಡಮಾಡಿ ನಗುತ್ತಿದ್ದಳು...
"ಹೇಳು...." ಆತ ಒತ್ತಾಯಿಸಿದ್ದ....
"ಅವಳ್ ಬೇಕಂತನಾ ಸ್ವೇಟರ್ ಹಾಕೊಂಡ್ ಹೋಗಿರಲ್ಲ....ಛಳಿ ಛಳಿ ಅಂದಿರ್ತಾಳೆ.....ಬಿಡು...ನೀವ್ ಗುಗ್ಗುಗಳು....ಮುಂದೇ?" ಆಕೆ ಕುತೂಹಲದಿಂದ ಕೇಳಿದ್ದಳು...
"ಮುಂದೇನಿಲ್ಲ...ಆ ಟ್ರಿಪ್ ಅಲ್ಲಿ ನಾನು ಸುಹಾಸ್ ಜೊತೆ ಸರಿಯಾಗ್ ಮಾತಾಡಿಲ್ಲ....ಅವಳೂ ಅವನನ್ನ್ ಸ್ವಲ್ಪ್ ಅವಾಯ್ಡ್ ಮಾಡಿದ್ಲು ಅನ್ಸತ್ತೆ....ಅದ್ಕೇ ಅವನು ಅವತ್ತ್ ರಾತ್ರಿ ಫುಲ್ ಚಿತ್ತಾಗಿ ಎಲ್ಲರನ್ನೂ ವೀಲಿಂಗ್ ಮಾಡಣಾ ಅಂತಾ ಕರ್ಕೊಂಡ್ ಹೋದ.... ಬ್ಯಾಲೆನ್ಸ್ ತಪ್ಪಿ ಬಿದ್ದು, ಕೈ ಮುರ್ಕೊಂಡಿದ್ದ...ನಂಗೂ ಏಟಾಗಿತ್ತು...." ಶತಭಿಷ ಹಳೆಯ ಗಾಯದ ಕಲೆಯನ್ನು ನೋಡಿಕೊಳ್ಳಹತ್ತಿದ್ದ...
"ಅವಳು ಅವನ್ ಜೊತೆ ರಾತ್ರಿ ಪೂರ್ತಿ ಹಾಸ್ಪಿಟಲ್ ಅಲ್ಲ್ ಇದ್ಲಾ?" ಸ್ಥಿರೆ ಥಟ್ ಅಂತಾ ಕೇಳಿದಳು...
"ಹೂಂ...ಅವತ್ತ್ ರಾತ್ರಿ ಚಲನಾ ಬಿಡ್ಸಿದ್ ಚಿತ್ರ ಇದು..." ಶತಭಿಷ ಆ ಚಿತ್ರದ ಹಿನ್ನೆಲೆ ಹೇಳಿದ್ದ...
"ಇಕ್ವಲ್ ಆಯ್ತು ಬಿಡು...ಅಲ್ಲಿಂದ ಅವರದ್ದ್ ಪ್ಯಾಚ್‍ಅಪ್ ಆಯ್ತಾ?" ಆಕೆಗೆ ಚಿತ್ರಕ್ಕಿಂತ ಮುಂದಿನ ಕತೆಯ ಬಗ್ಗೆ ಆಸಕ್ತಿ ಮೂಡಿತ್ತು....
"ಹಾಂ...ಅವಳು ಅವನ ಹತ್ರ ಏನೋ ಸ್ವಲ್ಪ್ ಮಾತಾಡ್ತಿದ್ಲು...ಬಟ್ ನಾನೂ ಚಲನಾ...." ಆತ ಮಾತು ಮುಂದುವರೆಸಲು ತಿಣುಕಾಡುತ್ತಿದ್ದ...
ಅಷ್ಟರಲ್ಲೇನೋ ಪರ್ರ್ ಎಂಬ ಸದ್ದು...
ಮಗು ತಾಯಿಯ ಮಡಿಲಿಂದ ಡೈರಿಯನ್ನು ಎತ್ತಿಕೊಂಡು ಆ ಪುಟವನ್ನು ಹರಿದಿತ್ತು....ಶತಭಿಷ ಕೋಪದಿಂದ ಮಗುವನ್ನು ಬೈದ...ಅದು ಅಳಹತ್ತಿತ್ತು....ಸ್ಥಿರೆ ಮಗುವನ್ನು ಸುಮ್ಮನಾಗಿಸಲು ಕಷ್ಟಪಟ್ಟಳು...ಶತಭಿಷ ಡೈರಿಗಳ ಲೋಕದಲ್ಲಿ ಮುಳುಗಿಹೋದ...ಮುಳ್ಳಯ್ಯನಗಿರಿಯ ವಿಷಯ ಅಲ್ಲಿಗೇ ನಿಂತಿತು....ಕುಕ್ಕರ್ ಸೀಟಿ ಹೊಡೆಯಿತು...
**
"ಲೇಡೀಸ್ ನೈಟ್...." ಸ್ಥಿರೆ ಶತಭಿಷನಿಗೆ ಮಗುವಿಗೆ ಊಟ ಮಾಡಿಸಿ ಮಲಗಿಸುವ ಜವಾಬ್ದಾರಿಯನ್ನು ವಹಿಸಿದ್ದಳು...ಶನಿವಾರ ಸಂಜೆ ಶಾಪಿಂಗ್‍ಗೆಂದು ಹೋದ ಸ್ಥಿರೆ ಮತ್ತು ಸಂಗಡಿಗರು ಮೆಕ್-ಡಿಯಲ್ಲಿ ಮೆನ್ಯು ಹಿಡಿದು ಕ್ಯಾಲರಿ ಲೆಕ್ಕ ಹಾಕುತ್ತಿದ್ದರು... ಸುಮ್ಮನೇ ಅದು-ಇದು ಮಾತಾಡುತ್ತಾ ಕಾಲೇಜು ದಿನಗಳಲ್ಲಿ ಮಾಡುತ್ತಿದ್ದ ಲೇಟ್ ನೈಟ್ ಪಾರ್ಟಿಗಳ ಬಗ್ಗೆ ನೆನಪಿಸಿಕೊಳ್ಳುತ್ತಿದ್ದರು. ಅಲ್ಲಿಂದ ಮಾತಿಗೆ ಮಾತು ಬೆಳೆದು, ನಾಲ್ಕೈದು ಮಂದಿ ಅನ್‍ಪ್ಲಾನ್ಡ್ ಆಗಿ ಅಂದು ರಾತ್ರಿ ಪಬ್ಬೊಂದಕ್ಕೆ ಎಂಟ್ರಿ ಕೊಟ್ಟಿದ್ದರು. ಸುಮ್ಮನೇ ಒಂದೆರಡು ತಾಸು ಇದ್ದು, ಹೊರಟುಬಿಡುವ ಆಲೋಚನೆ ಅವರದ್ದಾಗಿತ್ತು....ಶತಭಿಷನೂ ಕೂಡಾ "ಓ.ಕೆ...ಎಂಜಾಯ್" ಎಂದು ರಿಪ್ಲೈ ಮಾಡಿದ್ದ...ಆದರೆ ಸ್ಥಿರೆಗೆ ಮಾತ್ರ ಎಂಜಾಯ್ ಮಾಡಲು ಸಾಧ್ಯವೇ ಆಗಲಿಲ್ಲ...
"ಏನ್ ಫುಲ್ ಪಾರ್ಟಿನಾ?" ಅನಿರೀಕ್ಷಿತವಾಗಿ ವಿನಯ್ ಕಾಣಿಸಿಕೊಂಡಿದ್ದ....ಆತನಿಗೆ ಬಹುತೇಕ ಮಾತಿನ ಮೇಲಿನ ಹಿಡಿತ ತಪ್ಪಿದಂತಿತ್ತು...
"ಹಾಯ್....ಇಲ್ಲಾ ಹಂಗೇ ಸುಮ್ನೆ..." ಸ್ಥಿರೆ ವಾಡಿಕೆಯ ಮಾತುಗಳನ್ನಾಡಿದಳು....
"ಓ.ಕೇ ಮಾಡಿ ಮಾಡಿ....ಏಂಜಾಯ್...." ಎಂದು ಆತ ಹೊರಟುಹೋಗಿದ್ದ....ಆಕೆ ಫಾರ್ಮಾಲಿಟಿಗೆ ನಕ್ಕಿದ್ದಳು...ಆತ ಹತ್ತೇ ನಿಮಿಷಕ್ಕೆ ವಾಪಸ್ ಬಂದಿದ್ದ....
"ಎಕ್ಸ್ ಕ್ಯೂಸ್ ಮಿ....ಚೂರ್ ಮಾತಾಡಕ್ಕಿದೆ ನಿಮ್ ಹತ್ರ...ನಿಮ್ಮ್ ಹಸ್ಬಂಡ್ ಬ್ಯುಸಿನೆಸ್ ವಿಷ್ಯ...ಇಫ್ ಯು ಡೋಂಟ್ ಮೈಂಡ್..." ಆಕೆಯ ಸ್ನೇಹಿತೆಯರೆದು ತುಂಬಾ ಡಿಗ್ನಿಫೈಡ್ ಆಗಿಯೇ ಮಾತಾಡಿದ್ದ...
"ಬಂದೆ" ಎಂದವಳೇ, ಕಾರ್ನರ್‍ಗೆ ಹೊರಟಳು....
"ಡೋಂಟ್ ವರಿ...ನಿನ್ ಜೊತೆ ಮಾತಾಡ್ಬೇಕು ಅಂತೇನ್ ಕರಿದ್ದಲ್ಲ...ನಿನ್ ಹಸ್ಬಂಡ್‍ಗೆ ಸ್ವಲ್ಪ ಬುದ್ಧಿ ಹೇಳು ಅಂತಾ ಹೇಳಕ್ಕ್ ಕರ್ದಿದ್ದು....." ನೇರವಾಗಿ ಮಾತಾಡುವವರು ಆಕೆಗೆ ಇಷ್ಟವೆಂದು ಆತನಿಗೆ ಗೊತ್ತಿತ್ತು....
"ಏನ್ ಹೇಳಕ್ಕಿದೆ? ನೀನ್ ಏನ್ ಮಾತಾಡದೇ ಅವತ್ತು?" ಆಕೆಗೆ ಶತಭಿಷನ ವ್ಯವಹಾರಗಳ ಕುರಿತು ಅಷ್ಟಾಗಿ ಗೊತ್ತಿರಲಿಲ್ಲ...
"ಕೈ ಬಿಸಿ ಮಾಡದೇ, ಹುಲ್ಲ್ ಕಡ್ಡಿನೂ ಅಲ್ಲಾಡಲ್ಲಾ ನಮ್ಮ್ ಆಫೀಸಲ್ಲಿ...ಅಂಥದ್ರಲ್ಲಿ ಪರ್ಮಿಷನ್ನ್ ಅಪ್ರೂವ್ ಆಗ್ಬೇಕು ಅಂದ್ರೆ ಮೇಲ್ನೋರಿಗೆಲ್ಲಾ ವ್ಯವಸ್ಥೆ ಮಾಡಬೇಕು.....ನಾನ್ ಸತ್ಯಹರಿಶ್ವಂದ್ರ ಅಂದ್ರೆ ಹಂಗೇ ಕೂತಿರ್ಬೇಕ್ ಅಷ್ಟೇ..." ವಿನಯ್ ಸೂಕ್ಷ್ಮವಾಗಿ ಹೇಳಿದ್ದ....
"ಅದ್ ಅವನ್ ಬ್ಯುಸಿನೆಸ್ ವಿಷಯ.....ಅವನ್ ಡಿಸಿಷನ್...ನಾವು ಇನ್ನೊಬ್ಬರ ಪ್ರೊಫೆಷನ್ ವಿಷಯದಲ್ಲಿ ತಲೆ ಹಾಕಲ್ಲ..." ಆಕೆ ಖಡಕ್ಕಾಗಿಯೇ ಹೇಳಿದ್ದಳು..
"ಸರಿಯಾಗಿದೀರಾ ಗಂಡ-ಹೆಂಡತಿ..." ಆತನ ಮಾತಿನಲ್ಲಿ ವ್ಯಂಗ್ಯವಿತ್ತು....ನಿರಾಸೆಯೂ ಇತ್ತು...
"...ಬಟ್ ಥ್ಯಾಂಕ್ಸ್ ದ ಅಡ್ವೈಸ್ " ಆಕೆ ಮಾತು ಮುಗಿಸಲು ಹೊರಟಿದ್ದಳು...
"ಅಲ್ವೇ ಅವನು ನೋಡಿದ್ರೆ ಆ ಥರ ಆಟ ಆಡ್ತಾನೆ...ಚಲನಾ ನಂಗ್ ಎಲ್ಲಾ ಹೇಳಿದಾಳೆ..ನೀನ್ ನೋಡಿದ್ರೆ ಅವನ್ನೇ ನಂಬ್ತೀನಿ ಅಂತೀಯಾ...." ಆತ ಮಾತು ನಿಲ್ಲಿಸಿದ.
"ಆಂ?" ಆಕೆಯ ಮುಖದಲ್ಲಿ ಅಲವರಿಕೆಯಿತ್ತು.....
"ಏನೋ....ಒಂದ್ ಕಾಲದಲ್ಲಿ ...ನಾನು ನೀನು ಕ್ಲೋಸಾಗಿದ್ವಲ್ಲಾ ಅಂತಾ ಹೇಳದೇ....ಇಟ್ಸ್ ಓ.ಕೆ...ಹ್ಯಾವ್ ಫನ್...." ಆತ ಅಲ್ಲಿಂದ ಜಾಗ ಖಾಲಿ ಮಾಡಿದ್ದ...
ಸ್ಥಿರೆಯ ತಲೆಯಲ್ಲಿ ನೂರಾರು ಕ್ಯಾಸೆಟ್ಟುಗಳು ಓಡಾಡುತ್ತಿದ್ದವು....ಅವತ್ತು ತನ್ನ ಲಿಮಿಟ್ಟಿಗಿಂತ ಜಾಸ್ತಿಯೇ ಕುಡಿದಳು...ಅಲರ್ಜಿಯೆಂದು ಗೊತ್ತಿದ್ದೂ ಮಶ್ರೂಮ್ ತಿಂದಳು...ಏನೇನೋ ಮಾತಾಡಹತ್ತಿದ್ದಳು...ಎರಡೋ ಮೂರೋ ಬಾರಿ ಅತ್ತಿದ್ದಳು.....
**
ಅವತ್ತೊಂದು ದಿನ ಸಂಜೆ ಸ್ಥಿರೆ ಮನೆಗೆ ಬರುವಷ್ಟರಲ್ಲಿ ಶತಭಿಷ ಯಾರ ಬಳಿಯೋ ಮಾತಾಡುತ್ತಿದ್ದ....ಶತಭಿಷನ ಕಾಲೇಜಿನಲ್ಲಿ ಪಾಠ ಹೇಳುತ್ತಿದ್ದಾಗ ಆತನ ವಿದ್ಯಾರ್ಥಿಯಾಗಿದ್ದನಂತೆ...ಇದೀಗ ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತನಂತೆ...
"ನಿಮ್ಮ್ ಟ್ಯಾಲೆಂಟ್‍ಗೆ ಪಾಲಿಟಿಕ್ಸ್‍ಅಲ್ಲಿ ಏನ್ ಬೇಕಾದ್ರೂ ಮಾಡ್‍ಬೋದು ಸಾರ್...." ಎಂದು ಹೊಗಳಿ ಅಟ್ಟಕ್ಕೇರಿಸಿದ್ದ...
ಶತಭಿಷನಿಗೆ ಪಾರ್ಟಿಯ ಮೆನಿಫೆಸ್ಟೋ ಬಹಳ ದಿನಗಳಿಂದ ಇಷ್ಟವಾಗಿತ್ತು...ಅದನ್ನಾತ ಆಗಾಗ ಫೇಸ್‍ಬುಕ್ಕಿನಲ್ಲಿ ವ್ಯಕ್ತಪಡಿಸುತ್ತಲೂ ಇದ್ದ....ಈತನ ಮಾತುಕತೆ-ಬರವಣಿಗೆಯ ವರಸೆ ನೋಡಿದ ಅವರು ಈತನಿಗೆ ಎಲೆಕ್ಷನ್ ಸ್ಟ್ರಾಟರ್ಜಿ ಟೀಂನ ಭಾಗವಾಗಲು ಆಹ್ವಾನ ಕೊಟ್ಟಿದ್ದರು...ಅದಾಗಲೇ ಆ ಟೀಂನಲ್ಲಿ ಶತಭಿಷನ ಕಲೀಗ್ ಒಬ್ಬರು ಕೆಲಸಕ್ಕಿದ್ದರು...ಶತಭಿಷ ಆ ಆಫರ್‍ಅನ್ನು ವಿನಯದಿಂದಲೇ ನಿರಾಕರಿಸಿದ್ದ...ಆದರೀಗ ಅವನನ್ನು ಕರೆತರಲೆಂದೇ ಶಿಷ್ಯನೊಬ್ಬ ಬಂದಿದ್ದ....ಶತಭಿಷನಿಗೆ ನೇರವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ....ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿ ಅವನನ್ನು ಕಳುಹಿಸಿಕೊಟ್ಟ....
ಆ ದಿನ ರಾತ್ರಿ ಸ್ಥಿರೆಯ ಜೊತೆ ಅದನ್ನು ಚರ್ಚಿಸಿದ...ಆಕೆಗೆ ರಾಜಕೀಯವೆಂದರೆ ಆಗುತ್ತಿರಲಿಲ್ಲ...
"ಇಲೆಕ್ಷನ್‍ಗೆ ನಿಲ್ತಿಯಾ? ಅದೊಂದ್ ಬಿಟ್ಟು ಬೇರೆ ಏನ್ ಬೇಕಾದ್ರು ಮಾಡು" ಎಂದಳು...
ಆತ ಅವಳಿಗೆ ಕನ್ವಿನ್ಸ್ ಮಾಡಲು ಹೊರಟ...ತಾನು ನೇರವಾಗಿ ನಿಲ್ಲುವುದಿಲ್ಲವೆಂದೂ...ನಿಲ್ಲುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಬೇಕಾದ ರಣತಂತ್ರ ಹೂಡುವುದು ತನ್ನ ಕೆಲಸವೆಂದೂ ಹೇಳಲು ಪ್ರಯತ್ನಿಸಿದ....
ಆಕೆಯ ಉತ್ತರ ಸರಳವಾಗಿತ್ತು...."ಆ ಕೆಲ್ಸಾ ಮಾಡ್ಲೇ ಬೇಕು ಅಂತಿದ್ರೆ ನನ್ ಕೇಳ್ಬೇಡಾ...ನನ್ ಮಾತ್ ಕೇಳದಾದ್ರೆ ಪಾಲಿಟಿಕ್ಸ್ ಎಲ್ಲಾ ಬೇಡಾ..."
ಅವನಿಗೇನೋ ಅವತ್ತು ನಿದ್ದೆ ಬರಲಿಲ್ಲ...
ಮಧ್ಯರಾತ್ರಿಯಲ್ಲಿ ಚಲನಾಳಿಗೆ ಮೆಸ್ಸೇಜು ಹಾಕಿದ್ದ.... "ವಿ ನೀಡ್ ಟು ಟಾಕ್"
**
ಶತಭಿಷನ ಕೆಲಸದ ವಿಷಯದಲ್ಲಿ ಸ್ಥಿರೆ ದಿನೇ ದಿನೇ ಸಹನೆ ಕಳೆದುಕೊಳ್ಳುತ್ತಿದ್ದಳು....ಶತಭಿಷ ಕೂಡಾ ಫರ್ಮ್ ಲಾಕೌಟ್ ಆಗಿರುವುದರಿಂದ ತೀರಾ ಹತಾಶನಾಗಿದ್ದ....ಅವರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಒಂದೆರೆಡು ಬಾರಿ ಮಾತಿನ ಚಕಮಕಿಯೂ ನಡೆಯಿತು....ಶಟ್‍ಡೌನ್ ನಡೆಯುತ್ತಿದ್ದುದರಿಂದ ಸ್ಥಿರೆ ಮಗುವನ್ನು ಕರೆದುಕೊಂಡು ಊರಿಗೆ ಹೋದಳು...ಶತಭಿಷ ಬ್ಯುಸಿನೆಸ್ ನೆಪ ಹೇಳಿ ಊರಿಗೆ ಹೋಗಿರಲಿಲ್ಲ....
ಹೀಗೇ ಒಂದು ದಿನ ಶತಭಿಷ ಕಾಫಿ ಡೇನಲ್ಲಿ ಕೂತಿದ್ದ...ಚಲನಾ ಬಂದೇ ಬರುತ್ತಾಳೆಂದು ಯಾವ ಗ್ಯಾರೆಂಟಿಯೂ ಆತನಿಗಿರಲಿಲ್ಲ..ಏಕೆಂದರೆ ಅದಾಗಲೇ ಆತ ಹಲವಾರು ಬಾರಿ ಆಕೆಗೆ "ವೀ ನೀಡ್ ಟು ಟಾಕ್" ಎಂದಿದ್ದ....ಆಕೆಗೆ ಮೆಸ್ಸೇಜ್ ಡಿಲಿವರ್ ಆಗಿರಲಿಲ್ಲ....ಸಿಮ್ ಬದಲಾಯಿಸಿದಳಾ? ಉತ್ತರ ಸ್ಪಷ್ಟವಿರಲಿಲ್ಲ....ಹತ್ತು ದಿನಗಳ ಹಿಂದೆ ಮಧ್ಯಾನ್ಹದ ಹೊತ್ತಿನಲ್ಲೆಲ್ಲೋ ರಿಪ್ಪೈ ಮಾಡಿದ್ದಳು....
"ಡಿಸೆಂಬರ್ 27...ನಮ್ಮನೆ ಮುಂದಿನ ಕಾಫಿ ಡೇ...." ಅಷ್ಟೇ...ಅದಾದ ಮೇಲೆ ಮತ್ತೆ ಮಾತುಕತೆ ನಡೆದಿರಲಿಲ್ಲ...ಮೆಸ್ಸೇಜು ಎಕ್ಸ್‍ಚೇಂಜ್ ಆಗಿರಲಿಲ್ಲ....
ಶತಭಿಷ ಬೆಳಿಗ್ಗೆ ಹನ್ನೊಂದರಿಂದಲೇ ಕಾಯುತ್ತಿದ್ದ....ಒಂದೂವರೆಯ ಸುಮಾರಿಗೆ ಚಲನಾ ಬಂದಿದ್ದಳು...ಬಿಸಿಲಿನಲ್ಲಿ ಓಡಾಡಿದಂತೆ ಕಾಣುತ್ತಿದ್ದು ಚರ್ಮ ಟ್ಯಾನ್ ಆಗಿತ್ತು....
"ಏನೇ ಇದು? ಮತ್ತೆ ಮೊದ್ಲಿನ್ ಹಂಗೇ ಆದ್ಯಲ್ಲಾ..." ಶತಭಿಷ ಖುಷಿಯಿಂದ ಹೇಳಿದ್ದ...
ಅಚ್ಚುಕಟ್ಟಾಗಿ ಬಿಳಿ ಸೀರೆ ಉಟ್ಟು ಕೂದಲು ಬಾಚಿಕೊಂಡು ಮೆಲುವಾಗಿ ಮಾತನಾಡುವುದನ್ನು ರೂಢಿಸಿಕೊಂಡಿದ್ದ ಚಲನಾ ಮತ್ತೆ ಕುರ್ತಾ-ಜೀನ್ಸ್ ಧರಿಸಿದ್ದಳು...ಕೂದಲನ್ನು ಹಾಗೆಯೇ ಹರಡಿಕೊಂಡಿದ್ದಳು...ಸ್ಪೋಟ್ರ್ಸ್ ಷೂ ಹಾಕಿದ್ದಳು....ಫ್ರೀಯಾಗಿ ಮಾತಾಡುತ್ತಿದ್ದಳು...ಬಟ್ಟೆಗೆ ಐರನ್ ಮಾಡಿರಲಿಲ್ಲ...ಮೇಕಪ್ ದೂರವೇ ದೂರ...ಅವಳು ಹೀಗಿರುವುದು ಶತಭಿಷನಿಗೆ ಮೊದಲಿನಿಂದಲೂ ಬಹಳೇ ಇಷ್ಟವಾಗಿತ್ತು....
"ಹೂಂ ಕಣೋ..ಏನೋ...ಚೇಂಜ್ ಬೇಕು ಅನಸ್ತು...." ಆಕೆ ಚಾಕಲೇಟ್ ಮಿಲ್ಕ್ ಶೇಕ್ ಆರ್ಡರ್ ಮಾಡಿದಳು...
"ಎಲ್ಲಿದ್ಯೇ? ಹೆಂಗಿದಿಯಾ?" ಆತ ಕುಶಲ ವಿಚಾರಿಸಿದ...
"ಆಫ್ರಿಕಾ ಟ್ರಿಪ್ ಹೋಗಿದ್ದೆ ಕಣೋ...ಸಖತ್ ಆಗ್ ಇತ್ತು...." ಆಕೆಯ ಮುಖದಲ್ಲಿ ಮಿಂಚಿತ್ತು....ಅದನ್ನು ಗಮನಿಸಿದ ಆತ "ನೈಸ್" ಎಂದ...
"ಏನ್ ಮೆಸ್ಸೇಜ್ ಹಾಕಿದ್ಯಲ್ಲಾ? ಸ್ಥಿರಾ ಏನ್ ಮನೆ ಬಿಟ್ ಓಡ್ಸಿದ್ಲಾ?" ಎಂದಿನ ಸಲುಗೆಯಲ್ಲಿ ಚಲನಾಳ ಮಾತುಕತೆ ಓಡತೊಡಗಿತ್ತು...
"ಹಂಗೇನಿಲ್ವೇ....ಚೆನಾಗೇ ಇದೀವಿ...ಚೂರ್ ಮಾತಾಡಕಿತ್ತು ನಿನ್ ಹತ್ರ...." ಆತ ಪೀಠಿಕೆ ಹಾಕತೊಡಗಿದ್ದ...
"ಹೂಂ ಹೇಳು...ಏನಾಯ್ತ್ ನಿನ್ ಕಂಪನಿ ಕತೆ? ಓಪನ್ ಆಯ್ತಾ?" ಆಕೆ ಸಮಸ್ಯೆಯನ್ನು ಬಹುತೇಕ ಗುರುತಿಸಿದ್ದಳು....
"ಇಲ್ಲಾ...ಅದೇ ಸ್ವಲ್ಪ್ ಪ್ರಾಬ್ಲಂ ಅಲ್ ಇದೆ....ಅದನ್ನಾ ಮೂವ್ ಮಾಡ್ತಿಲ್ಲ...ತುಂಬಾ ದುಡ್ಡ್ ಎಕ್ಸ್‍ಪೆಕ್ಟ್ ಮಾಡ್ತಿದಾರೆ...." ಆತ ಬೇಸರದಿಂದಲೇ ಹೇಳಿದ್ದ...
"ಸೋ?" ಆಕೆ ಆತನ ಪಕ್ಕಕ್ಕೇ ಬಂದು ಕೂತಳು...
"ಏನಿಲ್ಲ...ಪಾಲಿಟಿಕ್ಸ್ ಅಲ್ಲಿ ಸ್ವಲ್ಪ ಲಿಂಕ್ ಸಿಕ್ತು.....ಅದಕ್ಕ್ ಎಂಟರ್ ಆದ್ರೆ ಏನೋ ಇನ್‍ಫ್ಲ್ಯುಯೆನ್ಸ್ ಮಾಡಸ್ಬೋದೇನೋ ಅಂತಾ...." ಆತ ರಾಜಕೀಯದ ವಿಷಯವನ್ನು ಆಕೆಗೆ ವಿವರಿಸಿದ...
"ನಿಂಗ್ ಪಾಲಿಟಿಕ್ಸ್ ಎಲ್ಲಾ ಮಾಡಕ್ ಬರಲ್ಲಾ ಕಣೋ...." ಆಕೆ ಸ್ಪಷ್ಟವಾಗಿಯೇ ಹೇಳಿದ್ದಳು....
"ಯಾಕೇ? ನಮ್ಮಲ್ಲ್ ಏನೂ ಸರಿ ಇಲ್ಲ...ಇಷ್ಟ್ ವರ್ಷದಿಂದ ನೋಡ್ತಿದೀನಿ..." ಆತ ರಾಜಕೀಯದ ದುಸ್ಥಿತಿಯ ಬಗ್ಗೆ ಭಾಷಣ ಆರಂಭಿಸಿದ್ದ...ಆಕೆ ಎಲ್ಲವನ್ನೂ ಕೇಳಿಸಿಕೊಂಡಳು...
"ಮುಗೀತಾ ಎಲ್ಲಾ?" ಆತನ ಮಾತು ಹತ್ತು ನಿಮಿಷ ಮೀರುತ್ತಲೇ ಭುಜ ಚಿವುಟಿದ್ದಳು..
"ಹಾ" ಎಂದ...ಚಿವುಟಿದ ಉರಿಗೋ, ಮಾತು ಮುಗಿಸಿದ್ದಕ್ಕೋ ಸ್ಪಷ್ಟವಿರಲಿಲ್ಲ....
"ನಾನ್ ಜಿಂಬಾಬ್ವೆಗ್ ಹೋಗಿದ್ನೋ....ಅಲ್ಲಿ ಪರಿಸ್ಥಿತಿ ಎಲ್ಲಾ ನೋಡ್ಕೊಂಡ್ ಬಂದ್ಮೇಲೆ ನಾವ್ ಎಷ್ಟ್ ಚೆನಾಗ್ ಇದೀವಿ ಅನಸ್ತಿದೆ...." ಆಕೆ ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದಳು...ಆಕೆ ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಾ ಹೋದಂತೆ ಶತಭಿಷನಿಗೆ ರಾಜಕೀಯ ತನ್ನ ಕ್ಷೇತ್ರ ಅಲ್ಲ ಎಂಬುದು ಅರಿವಾಗತೊಡಗಿತು...ಆತ ಸಮಾಧಾನದಿಂದ ಮನೆಯ ಕಡೆ ಹೆಜ್ಜೆ ಹಾಕಿದ...ಆದರೆ ಆ ಸಮಾಧಾನ ಬಹಳ ಹೊತ್ತು ಬಾಳಲಿಲ್ಲ..
**
"ನೋಡು ನಿನ್ ಶ್ರೀರಾಮಚಂದ್ರ..." ವಿನಯ್ ಸ್ಥಿರೆಗೆ ಕೆಲವು ಫೋಟೋಗಳನ್ನು ವಾಟ್ಸಪ್ ಮಾಡಿದ್ದ... ಕಾಫಿ ಡೇನಲ್ಲಿ ಶತಭಿಷ-ಚಲನಾ ತೀರಾ ಸಮೀಪದಲ್ಲಿ ಕೂತಿದ್ದರು...ಕೊನೆಯ ಫೋಟೋದಲ್ಲಿ ಅಪ್ಪಿಕೊಂಡಿದ್ದರು..
-ಚಿನ್ಮಯ
13/02/2019

No comments:
Post a Comment